861. ಹೆಣ್ಣು ಸಂಸಾರದ ಕಣ್ಣು (೧೯೭೫)


ಹೆಣ್ಣು ಸಂಸಾರದ ಕಣ್ಣು ಚಿತ್ರದ ಹಾಡುಗಳು 
  1. ಚೆಲುವೆಗೇತಕೇ ಇನ್ನೂ ನಾಚಿಕೇ  
  2. ಬಾಳಿಗೊಂದು ನೀತಿಯುಂಟು ತಿಳಿದು ಬಾಳಬೇಕು 
  3. ಹೊಸದೇನು ಕಾಣೆ ಇದರಲ್ಲಿ 
  4. ಎರಡು ಕಂಗಳಾದರೇನು 
ಹೆಣ್ಣು ಸಂಸಾರದ ಕಣ್ಣು (೧೯೭೫)
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ. ವಾಣಿಜಯರಾಂ 

ಗಂಡು : ಆಹಾಹಾಹಾಹಾಹಾ   ಹೆಣ್ಣು : ಆಹಾಹಾಹಾಹಾಹಾ
ಗಂಡು : ಚೆಲುವೆಗೇತಕೆ ಇನ್ನೂ ನಾಚಿಕೆ ನಿಲ್ಲು ಓಡದೇ ಹೀಗೆ ದೂರಕೆ
           ಒಲಿಯುತ ಬಂದರೆ ಪ್ರೇಮದ ಕಾಣಿಕೆ ಬಾ ನೀಡುವೆ ಸನಿಹಕೆ
           ಈ ಕೋಪ ಇನ್ನೇತಕೆ ..
ಹೆಣ್ಣು : ಚೆನ್ನ ನಿನ್ನನು ನಾನು ಬಲ್ಲೆನು ಮನದ ಆಸೆಯ ಅಂದೇ ಅರಿತೆನು
          ಒಲವಿನ ಮಾತಿಗೆ ಎಂದೂ ಸೊಲೇನು ಈ ಕಣ್ಣಲ್ಲೇ ಸೆಳೆವೆನು
         ನಾ ನಿನ್ನನ್ನೇ ಗೆಲುವೆನು

ಗಂಡು : ನನ್ನ ಗೆಲ್ಲಬಲ್ಲ ಅಹ್ಹಹ್ಹ ಧೀರ ಹುಟ್ಟಿ ಇಲ್ಲ
            ಸೋಲು ಎಂಬ ಮಾತು ನನ್ನ ಬಾಳಲಿಲ್ಲ
ಹೆಣ್ಣು : ನಿನ್ನ ಗೆಲ್ಲಲೆಂದೇ ನಾನು ಬಂದೆನಲ್ಲ
           ನನ್ನ ಅಂದ ಕಂಡು ಸೋತು ಹೋದೆಯಲ್ಲ
ಗಂಡು : ಒಲವಲಿ ಪ್ರೇಮದ ವಿಜಯವ ತುಂಬಿದೆ ಗೆಲುವೇ ತಾನೇ ನಲ್ಲೆ
ಹೆಣ್ಣು : ಜಾಣರ ಜಾಣನ ಮಾತಿನ ವೀರನ ಮರ್ಮ ಎಂದೋ ಬಲ್ಲೇ
ಗಂಡು : ಚೆಲುವೆಗೇತಕೆ ಇನ್ನೂ ನಾಚಿಕೆ ನಿಲ್ಲು ಓಡದೇ ಹೀಗೆ ಏತಕೆ
           ಒಲಿಯುತ ಬಂದರೆ ಪ್ರೇಮದ ಕಾಣಿಕೆ ಬಾ ನೀಡುವೆ ಸನಿಹಕೆ
           ಈ ಕೋಪ ಇನ್ನೇತಕೆ ..

ಹೆಣ್ಣು : ಒಂಟಿ ಹೆಣ್ಣ ಕಂಡು ಸೊಂಟ ಬಳಸೋದೇನು 
          ತುಂಟ ದೂರ ನಿಲ್ಲು ತಾಳಲಾರೆ ನಾನು 
ಗಂಡು : ಯಾರು ಇಲ್ಲ ಎಂದೂ ಇಲ್ಲಿ ಬಂದೆ ನಲ್ಲೆ 
           ಬಿಂಕಾ ಬಿಟ್ಟೂ ಬಂದೂ ನನ್ನ ಸೇರು ಇಲ್ಲೇ 
ಹೆಣ್ಣು : ಮೈಯ್ಯಿಗೆ ಮೈಯ್ಯನು ಮಸೆದರೆ ಎದೆಯಲಿ ಏನೋ ಒಂದು ರೀತಿ 
ಗಂಡು : ತುಟಿಗಳು ಬೆಸೆಯಲು ಮೈಮನ ಮರೆಯಲು ಕೇಳೂ ಅದೇ ಪ್ರೀತಿ   
ಹೆಣ್ಣು : ಚೆನ್ನ ನಿನ್ನನು ನಾನು ಬಲ್ಲೆನು ಮನದ ಆಸೆಯ ಅಂದೇ ಅರಿತೆನು
          ಒಲವಿನ ಮಾತಿಗೆ ಎಂದೂ ಸೊಲೇನು ಈ ಕಣ್ಣಲ್ಲೇ ಸೆಳೆವೆನು
          ನಾ ನಿನ್ನನ್ನೇ ಗೆಲುವೆನು
ಗಂಡು : ಚೆಲುವೆಗೇತಕೆ ಇನ್ನೂ ನಾಚಿಕೆ ನಿಲ್ಲು ಓಡದೇ ಹೀಗೆ ಏತಕೆ
           ಒಲಿಯುತ ಬಂದರೆ ಪ್ರೇಮದ ಕಾಣಿಕೆ ಬಾ ನೀಡುವೆ ಸನಿಹಕೆ
           ಈ ಕೋಪ ಇನ್ನೇತಕೆ ..
-----------------------------------------------------------------------------------------------------------------------

ಹೆಣ್ಣು ಸಂಸಾರದ ಕಣ್ಣು (೧೯೭೫)
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ರವಿ 

ಹೂಂ..ಹೂಂ.ಹೂಂ.. ಲಾಲಾಲಾಲ್
ಬಾಳಿಗೊಂದು ನೀತಿಯುಂಟು ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು ಅರಿತು ಆಡಬೇಕು
ಬಾಳಿಗೊಂದು ನೀತಿಯುಂಟು ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು ಅರಿತು ಆಡಬೇಕು  

ಶಿವನ ಕೊರಳ ನಾಗ ಗರುಡನನ್ನು ನೋಡಿದ 
ಗೆಳೆಯ ನೀನು ಕ್ಷೇಮವೇ ಎಂದು ಕೇಳಿದ
ಶಿವನ ಕೊರಳ ನಾಗ ಗರುಡನನ್ನು ನೋಡಿದ 
ಗೆಳೆಯ ನೀನು ಕ್ಷೇಮವೇ ಎಂದು ಕೇಳಿದ
ಇರುವ ಜಾಗದಲ್ಲಿ ಇರಲು ಎಲ್ಲಾ ಕ್ಷೇಮವೇ 
ಇರುವ ಜಾಗದಲ್ಲಿ ಇರಲು ಎಲ್ಲಾ ಕ್ಷೇಮವೇ 
ಎಂದು ಗರುಡ ನಾಗನಿಗೆ ನಗುತ ಹೇಳಿದ 
ಬಾಳಿಗೊಂದು ನೀತಿಯುಂಟು ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು ಅರಿತು ಆಡಬೇಕು

ಪದವಿಯಲ್ಲಿ ಮೆರೆವ ತನಕ ಲೋಕ ಮಣಿವುದು 
ಜಾರಿದಾಗ ನೆರಳು ಕೂಡಾ ಅವನ ತುಳಿವುದು 
ಪದವಿಯಲ್ಲಿ ಮೆರೆವ ತನಕ ಲೋಕ ಮಣಿವುದು 
ಜಾರಿದಾಗ ನೆರಳು ಕೂಡಾ ಅವನ ತುಳಿವುದು 
ಮಾನಹಾನಿಯಾಗದಿರಲು ದಾರಿ ಎಂದರೆ 
ಮಾನಹಾನಿಯಾಗದಿರಲು ದಾರಿ ಎಂದರೆ 
ಆದರಿಸದ ಜನಗಳಿಂದ ದೂರ ಇರುವುದು 
ಬಾಳಿಗೊಂದು ನೀತಿಯುಂಟು ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು ಅರಿತು ಆಡಬೇಕು  

ಎರಡು ಗಾಲಿ ಬೇಕೇ ಬೇಕು ಬಂಡಿ ಓಡಲು
ಉರುಳದೆಂದು ಒಂದು ಗಾಲಿ ಚಿಕ್ಕದಾಗಲು 
ಎರಡು ಗಾಲಿ ಬೇಕೇ ಬೇಕು ಬಂಡಿ ಓಡಲು
ಉರುಳದೆಂದು ಒಂದು ಗಾಲಿ ಚಿಕ್ಕದಾಗಲು 
ಒಂದೇ ರೀತಿ ಇರಲು ತಾನೇ ಹೊಂದಿಕೊಳ್ಳುವುದು 
ಒಂದೇ ರೀತಿ ಇರಲು ತಾನೇ ಹೊಂದಿಕೊಳ್ಳುವುದು 
ಮಿತಿಯ ಅರಿತು ಬೆರೆತರೇನೇ ಸ್ನೇಹ ಉಳಿವುದು 
ಬಾಳಿಗೊಂದು ನೀತಿಯುಂಟು ತಿಳಿದು ಬಾಳಬೇಕು
ಮಾತಿನಲ್ಲಿ ರೀತಿಯುಂಟು ಅರಿತು ಆಡಬೇಕು  
 ಅರಿತು ಆಡಬೇಕು... ಅರಿತು ಆಡಬೇಕು    
-------------------------------------------------------------------------------------------------------------------------

ಹೆಣ್ಣು ಸಂಸಾರದ ಕಣ್ಣು (೧೯೭೫) - ಹೊಸದೇನೂ ಕಾಣೇ ಇದರಲ್ಲಿ
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಮನೋರಮ


ಹೊಸದೇನೂ ಕಾಣೇ ಇದರಲ್ಲಿ
ಹೊಸದೇನೂ ಕಾಣೇ ಇದರಲ್ಲಿ ಇದು ಯೌವ್ವನದ 
ಹುಚ್ಚಾಟ ನನ್ನಾಣೆ ಹೊಸದೇನೂ ನಾ ಕಾಣೇ
ಹೊಸದೇನೂ ಕಾಣೇ ಇದರಲ್ಲಿ ಇದು ಯೌವ್ವನದ 
ಹುಚ್ಚಾಟ ನನ್ನಾಣೆ ಹೊಸದೇನೂ ನಾ ಕಾಣೇ

ಒಲಿದ ಮೈ ಹೂವಿನಂತೇ ಬಿಚ್ಚಿ ನಿಂತಾಗ 
ಎದೆಯಾಸೆ ಕಣ್ಣಿನಲ್ಲಿ ಮೂಡಿ ಬಂದಾಗ 
ಒಲಿದ ಮೈ ಹೂವಿನಂತೇ ಬಿಚ್ಚಿ ನಿಂತಾಗ 
ಎದೆಯಾಸೆ ಕಣ್ಣಿನಲ್ಲಿ ಮೂಡಿ ಬಂದಾಗ 
ಏನೋ ಕಾಣುತಾ ಹಲ್ಲು ಕಿರಿವಳೂ 
ಏನೋ ನೆನೆಯುತಾ ತನ್ನ ಮೈಯ್ಯ ಮುರಿವಳೂ 
ಹೊಸದೇನೂ ನಾ ಕಾಣೇ

ದೇವಿ ಗುಡಿಗೆ ಪೂಜೆಗೆಂದೂ ಅವನೂ ಹೋಗುವಾ 
ಗುಂಪಿನಲ್ಲಿ ನಿಂತು ನಗುವಾ ಅವಳ ಕಾಣುವಾ 
ದೇವಿ ಗುಡಿಗೆ ಪೂಜೆಗೆಂದೂ ಅವನೂ ಹೋಗುವಾ 
ಗುಂಪಿನಲ್ಲಿ ನಿಂತು ನಗುವಾ ಅವಳ ಕಾಣುವಾ 
ಕೈಯ್ ಮುಗಿದನೇ ತೀರ್ಥ ಕುಡಿದನೇ 
ಮೂತಿ ಕಂಡನೇ ಅವಳ ಮೂತಿ ಕಂಡನೇ 
ಹೊಸದೇನೂ ನಾ ಕಾಣೇ
ಮನೆಗೇ ದೂರವಾಗಿ ನಡೆದೂ ಅವನ ಸೇರುತಾ 
ಸಿನಿಮಾ ತಾರೆಯಂತೇ ಕೂಗಿ ಡ್ಯೂಯೆಟ್ ಹಾಡುತಾ  
ಹಮ್ ತುಮ ಏಕ್ ಕಮರೇ ಮೇ ಬಂದ್ ಹೋ 
ಔರ್ ಚಾವೀ ಖೋ ಜಾಯೇ ಔರ್ ಚಾವೀ ಖೋ ಜಾಯೇ 
ಹಮ್ ತುಮ ಏಕ್ ಕಮರೇ ಮೇ ಬಂದ್ ಹೋ 
ಔರ್ ಚಾವೀ ಖೋ ಜಾಯೇ ಔರ್ ಚಾವೀ ಖೋ ಜಾಯೇ 
ಮರವ ಸೂತ್ತುತಾ ಆಡಿ ಓಡುತಾ 
ಅಪ್ಪಿ ನಲಿವರೋ ನೆಲದ ಮೇಲೆ ಉರುಳುತಾ 
ಹೊಸದೇನೂ ಕಾಣೇ ಇದರಲ್ಲಿ ಇದು ಯೌವ್ವನದ 
ಹುಚ್ಚಾಟ ನನ್ನಾಣೆ ಹೊಸದೇನೂ ನಾ ಕಾಣೇ
-------------------------------------------------------------------------------------------------------------------------

ಹೆಣ್ಣು ಸಂಸಾರದ ಕಣ್ಣು (೧೯೭೫) - ಎರಡು ಕಂಗಳಾದರೇನು
ಸಂಗೀತ : ವಿಜಯ ಭಾಸ್ಕರ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ, ಎಸ್.ಪಿ.ಬಿ. 


ಗಂಡು : ಎರಡು ಕಂಗಳಾದರೇನು ಕಾಣೋ ನೋಟ ಒಂದೂ 
            ಎರಡು ದೇಹವಾದರೇನೂ ನಾವೂ ಎಂದೂ ಒಂದೂ 
ಹೆಣ್ಣು  : ಎರಡು ಕಂಗಳಾದರೇನು ಕಾಣೋ ನೋಟ ಒಂದೂ 
            ಎರಡು ದೇಹವಾದರೇನೂ ನಾವೂ ಎಂದೂ ಒಂದೂ 
ಇಬ್ಬರೂ  : ಎರಡು ಕಂಗಳಾದರೇನು ಕಾಣೋ ನೋಟ ಒಂದೂ 
         
ಗಂಡು : ನನ್ನ ಮನವ ಅರಿತ ಮೇಲೇ ಮಾತನಾಡುವುದೆಂದೂ 
           ನನ್ನ ಮನವ ಅರಿತ ಮೇಲೇ ಮಾತನಾಡುವುದೆಂದೂ
           ಕನಸಿನಲ್ಲೂ ವಿರಸದಿಂದ ಬೇರೆಯಾಗಳು ಎಂದೂ 
ಹೆಣ್ಣು : ಕಡಲು ಬೆರೆತ ನದಿಯ ರೀತಿ ನಾನು ಅವರ ಬೇರತೇ  
          ನಾನೂ ಬೇರೇ ಎನ್ನೋ ಭಾವ ಎಂದೋ ನಾನು ಮರೆತೇ 
ಗಂಡು : ಎರಡು ಕಂಗಳಾದರೇನು ಕಾಣೋ ನೋಟ ಒಂದೂ 

ಹೆಣ್ಣು : ಗುಡಿಸಲೇನೂ ಮಹಡಿಯೇನೂ ನೀವೂ ಬೆಸೆದಿರುವಾಗ 
          ಗುಡಿಸಲೇನೂ ಮಹಡಿಯೇನೂ ನೀವೂ  ಬೆಸೆದಿರುವಾಗ 
          ನೋವು ನಲಿವೂ ಎಲ್ಲಾ ಒಂದೇ ಪ್ರೀತಿ ತುಂಬಿರುವಾಗ 
ಗಂಡು : ರಾಮನೊಡನೇ ವನಕೆ ಹೋದ ಸೀತೆಯಂತೇ ಇವಳೂ ಅಹ್ಹಹ್ಹ 
           ಎಲ್ಲೇ ಇರಲೀ ಹೇಗೆ ಇರಲೀ ಹಿಂದೇ ಬರುವ ನೆರಳೂ 
ಹೆಣ್ಣು  : ಎರಡು ಕಂಗಳಾದರೇನು ಕಾಣೋ ನೋಟ ಒಂದೂ 
ಗಂಡು:  ಎರಡು ದೇಹವಾದರೇನೂ ನಾವೂ ಒಂದೂ  ಎಂದೂ 
ಇಬ್ಬರೂ  : ಕಾಣೋ ನೋಟ ಒಂದೂ 
-------------------------------------------------------------------------------------------------------------------------

No comments:

Post a Comment