862. ತವರಿನ ಸಿರಿ (೨೦೦೬)

ತವರಿನ ಸಿರಿ ಚಲನಚಿತ್ರದ ಹಾಡುಗಳು
  1. ಹಸಿದಾಗ ಅನ್ನ ದಣಿದಾಗ ನೀರು
  2. ಮಾತಾಡ್ ಮಾತಾಡು ಮಲ್ಲಿಗೆ
  3. ಬಾಳಿನ ಬೀದಿ ಏರುಪೇರು
  4. ಜಗ್ಗಿತ್ತಯ್ಯಾ 
  5. ಪ್ರೀತಿ ನಮ್ಮ ತವರಿನ ಸಿರಿ 
  6. ಆಕಾಶದಿಂದಳಿದ ಅಪ್ಸರೆ
ತವರಿನ ಸಿರಿ (೨೦೦೬) - ಹಸಿದಾಗ ಅನ್ನ ದಣಿದಾಗ ನೀರು
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ. 
 
ಗಂಡು : ಹೂಂ... ಹೂಂಹೂಂಹೂಂಹೂಂ ಹೂಂ... ಹೂಂಹೂಂಹೂಂಹೂಂ
ಕೋರಸ್ : ಓಓಓಓಓಓಓ ಓಓಓಓಓ  
ಗಂಡು : ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
            ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
            ಭೂಮಿ ತಾಯಿ ತಂದ ಬೆವರಿನ ಸಿರಿ ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ
            ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
            ಭೂಮಿ ತಾಯಿ ತಂದ ಬೆವರಿನ ಸಿರಿ ಹಂಚಿಕೊಂಡು ತಿನ್ನದೇ ಇದ್ರೆ ಏನ್ ಚಂದವೋ
            ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ

ಕೋರಸ್ : ಓಓ.. ಓ... 
ಗಂಡು : ಮೋಡ ಮುನಿದು ಚದುರಿದರೇ ಪೈರು ತೆನೆ ಇಲ್ಲಣ್ಣ
             ಹೂವು ಮುನಿದು ಮುಚ್ಚಿದರೇ ಜೇನು ಗೂಡೇ ಇಲ್ಲಣ್ಣ
             ತನ್ನೆಲ್ಲ ಕೆಚ್ಚಲು ಕರುವಿಗೆ ಅಂದರೆ ಹಸುವಿನ ಹಾಲೇ ನಮಗಿಲ್ಲ 
             ಹಸುವಿನ ಹಾಲೇ ನಮಗಿಲ್ಲ
            ನೀಡೋ ಈ ನಿಯಮ ಪಾಲಿಸದಿದ್ದರೆ ಏನ್ ಚಂದವೋ ಏನ್ ಚಂದವೋ
            ಶಿವನು ಕೊಟ್ಟ ಆಸ್ತಿ ಭೂಮಿಯಾ ಸಿರಿ ಅವನಾಸ್ತಿ ನನದೆನ್ನೋದು ಏನ್ ಚಂದವೋ 
ಕೋರಸ್ : ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ

ಗಂಡು : ದೇವರಿಗೆ ಕಾಯಾಗಿ ಗಂಟಲಿಗೆ ನೀರಾಗಿ ಗುಡಿಸಲಿಗೆ ಸೂರಾಗಿ ಸೇತುವೆಗೆ ಹಾಸಾಗಿ
            ಬದುಕೆಲ್ಲಾ ನೀಡುತ್ತಾ ಬಾನೆತ್ತರ ಬಾಳುತ್ತಾ ಇರಬೇಕು ತೆಂಗಿನ ಮರದಂತೆ 
            ಇರಬೇಕು ತೆಂಗಿನ ಮರದಂತೆ
            ನರನಾಗಿ ಮರೆತು ಕೀಳಾಗಿ ಹೋದರೆ ಏನ್ ಚಂದವೋ ಏನ್ ಚಂದವೋ
ಕೋರಸ್ :  ಮನಸಿದ್ದು ಪ್ರೀತಿ ಕೈ ಇದ್ದು ದಾನ ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
                 ನಮ್ಮ ಅಣ್ಣನೇ ನಮ್ಮ ತವರಿನ ಸಿರಿ ಈ ದೈವ ಇಲ್ಲದ ಊರು ಏನ್ ಚಂದವೋ
ಗಂಡು : ಹಸಿದಾಗ ಅನ್ನ ದಣಿದಾಗ ನೀರು ಕೊಡದಿದ್ದ ಮೇಲೆ ಏನ್ ಚಂದವೋ ಏನ್ ಚಂದವೋ
----------------------------------------------------------------------------------------------------

ತವರಿನ ಸಿರಿ (2006) - ಮಾತಾಡ್ ಮಾತಾಡು ಮಲ್ಲಿಗೆ
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ, ಗಾಯನ: ವಿಜಯ್ ಯೇಸುದಾಸ್ ಮತ್ತು ನಂದಿತಾ

ಗಂಡು : ಮಾತಾಡ್ ಮಾತಾಡು (ಮಲ್ಲಿಗೆ) ಮುದ್ದಾಡ್ ಮುದ್ದಾಡು (ಮಲ್ಲಿಗೆ)
            ಪ್ರೀತಿಯ ಗಂಧ (ಮೆಲ್ಲಗೇ) ಚೆಲ್ಲಾ ಚೆಲ್ಲಾಡು (ಮಲ್ಲಿಗೆ)
            ಮನಸಿನ (ಮಾತಿಗೂ) ಕಣ್ಣಿನ (ಆಸೆಯಿದು)
            ಹೃದಯದ (ಮನ್ನಣೆನೆಯಿದು)  ಕಾಯುವ (ಕನಸುಯಿದು)
            ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ
            ಮಾತಾಡ್ ಮಾತಾಡು (ಮಲ್ಲಿಗೆ) ಮುದ್ದಾಡ್ ಮುದ್ದಾಡು (ಮಲ್ಲಿಗೆ)
            ಪ್ರೀತಿಯ ಗಂಧ (ಮೆಲ್ಲಗೇ) ಚೆಲ್ಲಾ ಚೆಲ್ಲಾಡು (ಮಲ್ಲಿಗೆ)

ಗಂಡು : ಕೋಗಿಲೆ ನನ್ನ ಮಾತ ಹಾಡಿ ಹೇಳು ಏಕೆ ನನ್ನಾಕೆ ನಾ ಮೆಚ್ಚಿದ್ಯಾಕೆ
ಕೋರಸ್ :  ಏಕೆ ನನ್ನಾಕೆ ನಾ ಮೆಚ್ಚಿದ್ಯಾಕೆ
ಗಂಡು : ತಂಪು ಗಾಳಿ ಮೆಲ್ಲನೀಕೆ ಹೃದಯ ಸೇರಿಕೊ ಕೇಳು ಹೋಗೋಕೆ ನಿಧಾನವ್ಯಾಕೆ
ಕೋರಸ್ :  ಕೇಳು ಹೋಗೋಕೆ ನಿಧಾನವ್ಯಾಕೆ
ಗಂಡು : ಸಾವಿರ ಕಣ್ಣಿನ ಗರಿಗಳೇ ತೆರೆಸಿರಿ ಈಕೆಯ ಕಣ್ಗಳ
            ವಾರೆ ನೋಟ (ಮೆಚ್ಚಿಗೆ ) ಕಿಲಕಿಲ ವಾಣಿ (ಒಪ್ಪಿಗೇ )
ಹೆಣ್ಣು : ಲಾಲಲ ಲಾಲ (ಮೆಚ್ಚಿಗೆ) ಲಾಲಲ ಲಾಲ (ಒಪ್ಪಿಗೆ) ಲಾಲಲಾ ಲಾಲಲಾ
ಗಂಡು : ಮಾತಾಡ್ ಮಾತಾಡು (ಮಲ್ಲಿಗೆ) ಮುದ್ದಾಡ್ ಮುದ್ದಾಡು (ಮಲ್ಲಿಗೆ)
            ಪ್ರೀತಿಯ ಗಂಧ (ಮೆಲ್ಲಗೇ) ಚೆಲ್ಲಾ ಚೆಲ್ಲಾಡು (ಮಲ್ಲಿಗೆ)
            ಮನಸಿನ (ರಾಗವಿದೂ) ಕಣ್ಣಿನ (ತವಕವಿದೂ)
            ಹೃದಯದ (ಆಸೆಯಿದೂ)  ಕಾಯುವ (ಲೋಕವಿದೂ)
            ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ

ಗಂಡು : ನನ್ನ ಪ್ರೀತಿಯಲ್ಲಿ ನೂರು ಪಾಲು ನಿನಗೆ ಆಣೆ ನಿನ್ನಾಣೆ ನಿನ್ನಂದದಾಣೆ
ಕೋರಸ್ :  ಆಣೆ ನಿನ್ನಾಣೆ ನಿನ್ನಂದದಾಣೆ 
ಗಂಡು : ಜೀವನ ಸಂಗಾತಿ ಇನ್ನು ನೀನೆ ನನಗೆ ಕಾಣೆ ನಾ ಕಾಣೆ ಇನ್ನಾರ ಕಾಣೆ 
ಕೋರಸ್ :  ಕಾಣೆ ನಾ ಕಾಣೆ ಇನ್ನಾರ ಕಾಣೆ 
ಗಂಡು : ತನಗೆ ತಾನ್ ಅರಳುವ ಪ್ರೀತಿಯ ನನಗೆ ತಾ ಅಂದರೆ ತರುವೆಯ 
            ಮಲ್ಲಿಗೆ ಮೌನ (ಸಮ್ಮತಿಯೇ)  ಮಲ್ಲಿಗೆ ಸನ್ನೆ (ಸ್ವಾಗತವೇ)
ಹೆಣ್ಣು : ಲಾಲಲ ಲಾಲ (ಸಮ್ಮತಿಯೇ ) ಲಾಲಲ ಲಾಲ (ಸ್ವಾಗತವೇ) ಲಾಲಲಾ ಲಾಲಲಾ
ಗಂಡು : ಮಾತಾಡ್ ಮಾತಾಡು (ಮಲ್ಲಿಗೆ) ಮುದ್ದಾಡ್ ಮುದ್ದಾಡು (ಮಲ್ಲಿಗೆ)
            ಪ್ರೀತಿಯ ಗಂಧ (ಮೆಲ್ಲಗೇ) ಚೆಲ್ಲಾ ಚೆಲ್ಲಾಡು (ಮಲ್ಲಿಗೆ)
            ಮನಸಿನ (ನಾಳೆಗೇ) ಕಣ್ಣಿನ (ಚಿತ್ರವಿದೇ)
            ಹೃದಯದ (ಬಯಕೆಯಿದೆ)  ಕಾಯುವ (ಚೆಲುವವಿದೆ)
            ಒಲವಿನ ಮಲ್ಲಿಗೆಯೆ ದುಂಡು ಮಲ್ಲಿಗೆಯೆ ನನ್ನ ಬಾಳ ತೋಟದಲಿ ಸೊಂಪಾಗಿ ಕಂಪಾಗಿ ಬಾ
            ಹೇಹೇಹೇಹೇಹೇ .... ಹೇಹೇಹೇಹೇಹೇ .... 
------------------------------------------------------------------------------------------------------

ತವರಿನ ಸಿರಿ (2006) - ಬಾಳಿನ ಬೀದಿ ಏರುಪೇರೂ ಇಲ್ಲೀ ಸಾಗಲೇ ಬೇಕೂ 
ಸಂಗೀತ: ಹಂಸಲೇಖ, ಸಾಹಿತ್ಯ: ಹಂಸಲೇಖ, ಗಾಯನ: ವಿಜಯ್ ಯೇಸುದಾಸ್ ಮತ್ತು ನಂದಿತಾ

ಗಂಡು : ಬಾಳಿನ ಬೀದಿ ಏರುಪೇರೂ ಇಲ್ಲೀ ಸಾಗಲೇ ಬೇಕೂ ನಮ್ಮ ತೇರು 
           ಬಾಳಿನ ಬೀದಿ ಏರುಪೇರೂ ಇಲ್ಲೀ ಸಾಗಲೇ ಬೇಕೂ ನಮ್ಮ ತೇರು 
           ಬಯಸಿದ್ದೆಲ್ಲಾ ಎಂದೂ ನಮ್ಮ ಕೈಗೇ ಸಿಕ್ಕದು 
           ನಾವು ತಂದ ಪುಣ್ಯ ಎಷ್ಟೋ ಅಷ್ಟೇ ನಮ್ಮದೂ ಚಿಂತಿಸ ಬೇಡ ಮನವೇ ದಾರಿ ಸಾಗಿಸು 
           ಬಾಳಿನ ಬೀದಿ ಏರುಪೇರೂ ಇಲ್ಲೀ ಸಾಗಲೇ ಬೇಕೂ ನಮ್ಮ ತೇರು.. 
           ಬಾಳಿನ ಬೀದಿ ಏರುಪೇರೂ
 
ಗಂಡು : ಸಿರಿತನ ಸುರಿದಾಗ ದೇವರು ದೊಡ್ಡನ್ ಎನ್ನೋದೇ  
           ಬಡತನ ಬಡಿದಾಗ ತುಂಬಾ ಕ್ರೂರಿ ಎನ್ನೋದೇ 
           ಅಮೃತ ದೊರೆತಾಗ ಅಹ್ ಹಾ ಪುಣ್ಯ ಎನ್ನೋದೇ 
           ಅಂಬಲಿ ಉಣ್ಣುವಾಗ ಅಯ್ಯೋ ಕರ್ಮ ಎನ್ನೋದೇ 
           ನಮ್ಮ ಕಷ್ಟ ಬಂದಾಗ ಪರರ ಕಷ್ಟ ತಿಳಿಯೋಣ 
           ಅವರ ಕಣ್ಣ ಒರೆಸುತ ನಮ್ಮ ಕಷ್ಟ ಮರೆಯೋಣ 
           ಬಯಸಿದ್ದೆಲ್ಲಾ ನಡೆದರೇ ನಮ್ಮ ಮಿತಿಯೇ ತಿಳಿಯದೂ 
           ಬಿದ್ದೂ ಎದ್ದೂ ಗೆದ್ದರೇ ತಾನೇ ಬಾಳು ಎನ್ನುವುದೂ 
          ಸೋಲಲೇ ಬೇಡ ಮನವೇ ಆಟ ಸಾಗಿಸು 
          ಬಾಳಿನ ಬೀದಿ ಏರುಪೇರೂ ಇಲ್ಲೀ ಸಾಗಲೇ ಬೇಕೂ ನಮ್ಮ ತೇರು 
         ಬಾಳಿನ ಬೀದಿ ಏರುಪೇರೂ

ಗಂಡು : ಬಾಳಿನ ತೇರಲಿ ದುಡಿಮೆ ಒಂದೇ ದೇವರೂ 
           ದೇವರ ಬೆಳಗೋದೇ ಬೆವರಿನ ಎಣ್ಣೆ ದೀಪಗಳೂ 
           ಸಹನೇ ಸಂಯಮವೇ ತೇರಿನ ಎರಡು ಗಾಲಿಗಳೂ  
           ಕರುಣೆ ಮಮತೆನೇ ಗಾಲಿಯ ಹಿಡಿದ ಕೀಲಿಗಳೂ 
           ದಿಬ್ಬ ಎದುರೂ ಬಂದಾಗ ಎಳೆಯಲಂಜಬಾರದೂ 
           ಇಳಿಯುವಾಗ ಜೋಪಾನ ಕಾಲು ಜಾರಬಾರದು 
           ಸವಿಸಿದೆಲ್ಲಾ ಬೇಕು ಎಂದರೇ ಎಂದೂ ದೊರಕದೂ 
           ಆಡಿಸುವಾತ ಕೇಳುವುದೇನೋ ನಮಗೆ ತುಳಿಯದೂ 
           ಮರುಗಲೇ ಬೇಡ ಮನವೇ ಬಾಳ ಪ್ರಿತಿಸೂ 
  
ಕೋರಸ್ :  ಓಓಓ ಓಓಓ ಓಓಓ ಓಓಓ ಓಓಓ ಓಓಓ 
ಗಂಡು : ಭೂಮಿಯ ಬಾಳೂ ಬರೀ ಮೂರೇ ದಿವಸ ಅಂತಾರೇ 
           ಮೂರೇ ದಿನದಲ್ಲಿ ಎಷ್ಟೂ ಸಾಧ್ಯ ಕಲಿಯೋದು 
           ಅನುಭವಿಗಳ ಮಾತೂ ಕೇಳು ಒಳ್ಳೆದಂತಾರೇ  
           ಕೇಳಿದರೇ ತಿಳಿಯೋದಲ್ಲ ಬಾಳು ಅನ್ನೋದು 
           ಒಂದೂ ದಿನ ಕಲಿಯೋಕೆ ಒಂದು ದಿನ ನಲಿಯೋಕೆ 
           ಎಲ್ಲ ಮೆಲಕು ಹಾಕುತ ಒಂದು ದಿನ ಅಹ್ಹಹ್ಹ .. ಹೋಗೋಕೇ 
           ಬಯಸಿದ್ದೆಲ್ಲಾ ಎಂದೂ ನಮ್ಮ ಕೈಗೇ ಸಿಕ್ಕದು 
           ನಾವೂ ತಂದ ಪುಣ್ಯ ಎಷ್ಟೋ ಅಷ್ಟೇ ನಮ್ಮದೂ 
           ಚಿಂತಿಸಬೇಡವೇ ಮನವೇ ದಾರೀ ಸಾಗಿಸು 
           ಬಾಳಿನ ಬೀದಿ ಏರುಪೇರೂ ಇಲ್ಲೀ ಸಾಗಲೇ ಬೇಕೂ ನಮ್ಮ ತೇರು 
           ಬಾಳಿನ ಬೀದಿ ಏರುಪೇರೂ
-----------------------------------------------------------------------------------

ತವರಿನ ಸಿರಿ (೨೦೦೬) - ಜಗ್ಗಿತ್ತಯ್ಯಾ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ.

---------------------------------------------------------------------------------

ತವರಿನ ಸಿರಿ (೨೦೦೬) - ಪ್ರೀತಿ ನಮ್ಮ ತವರಿನ ಸಿರಿ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ.

ಗಂಡು : ಓ..ಓಓಓಓಓ .. ಓಓಓಓಓ 
            ಪ್ರೀತಿ ನಮ್ಮ ತವರಿನ ಸಿರಿ..  ಪ್ರೀತಿ ನಮ್ಮ ತವರಿನ ಸಿರಿ 
ಇಬ್ಬರು : ಪ್ರೀತಿ ನಮ್ಮ ತವರಿನ ಸಿರಿ... ಪ್ರೀತಿ ನಮ್ಮ ತವರಿನ ಸಿರಿ 
ಹೆಣ್ಣು : ತವರಿನ ಬಾಗಿನ ನವಕೋಟಿಗೇ ಸರೀ .. 
           ತವರಿನ ಹಂಬಲ ಉಸಿರಾಟಕೇ ಸರೀ ... ಅಣ್ಣ ನಮ್ಮ ತವರಿನ ಸಿರಿ 
ಇಬ್ಬರು : ಪ್ರೀತಿ ನಮ್ಮ ತವರಿನ ಸಿರಿ... ಪ್ರೀತಿ ನಮ್ಮ ತವರಿನ ಸಿರಿ 
ಹೆಣ್ಣು : ಓ..ಓಓಓಓಓ .. ಓಓಓಓಓ 

ಕೋರಸ್ : ಓ..ಓಓಓಓಓ .. ಓಓಓಓಓ 
ಹೆಣ್ಣು : ಆಡಿದ ಪಾಡಿದ ಆಟದ ಅಂಗಣ ತೊದಲುವಾ ಬಾಯಿಗೇ ಹಾಲುಣಿಸಿದ ಗೋಕುಲ 
          ಲಾಲಿಸಿ ಪಾಲಿಸಿ ಓದಿಸಿ ಮುದ್ದಿಸಿ ಒಪ್ಪುವಾ ಗಂಡಿನ ಮನೇ ಸೇರಿಸೋ ದೇಗುಲ 
ಗಂಡು : ನೀನೂ ತವರಿನ ಸಿರಿ ನಾಳೇ ಮದುವೆಯಾದರೇ ತಾಳಿಯ ಸಿರಿ 
ಹೆಣ್ಣು : ಅಣ್ಣಾ ನನ್ನಾ ಜೀವದ ಸಿರಿ 
ಗಂಡು : ಪ್ರೀತಿ ನಮ್ಮ ತವರಿನ ಸಿರಿ..  ಪ್ರೀತಿ ನಮ್ಮ ತವರಿನ ಸಿರಿ 
ಹೆಣ್ಣು : ತವರಿನ ಆದರ ಅಭಿಮಾನವೇ ಸರೀ 
          ತವರಿನ ಸಂಭ್ರಮ ಸನ್ಮಾನವೇ ಸರೀ ಅಣ್ಣ ನಮ್ಮಾ ಬಾಳಿನ ಸಿರಿ 
ಇಬ್ಬರು : ಪ್ರೀತಿ ನಮ್ಮ ತವರಿನ ಸಿರಿ... ಪ್ರೀತಿ ನಮ್ಮ ತವರಿನ ಸಿರಿ 

ಕೋರಸ್ : ಡವ್ ಡವರೇ ಡವ್ ಡವರೇ ಡವ್ ಡವರೇ 
                ಡವ್ ಡವರೇ ಡವ್ ಡವರೇ ಭವದರೆಸಮ  
ಹೆಣ್ಣು : ಅಣ್ಣನಾ ತೋಳಲೀ ಅಮ್ಮನ ಸುಖವಿದೇ ಅಣ್ಣನ ಕಣ್ಣಲೀ ಅಪ್ಪನ ಕನಸಿದೆ 
           ಹತ್ತಿರ ಇದ್ದರೂ ದೂರವೇ ಹೋದರೂ ತವರಿನ ಕೂಗಲೀ ಒಂದೂ ಮೂಕ ನಾಲಿಗೆ ಇದೇ  ..   
ಗಂಡು : ಒಂದೇ ಬಳ್ಳಿ ಹೂವೂಗಳ ತೋಟವಾದ ಈ ಮನೆ ಸ್ವರ್ಗವೇ ಸರೀ 
ಹೆಣ್ಣು : ಅಣ್ಣಾ ನಮ್ಮ ಪುಣ್ಯದ ಸಿರಿ 
ಗಂಡು : ಪ್ರೀತಿ ನಮ್ಮ ತವರಿನ ಸಿರಿ..  ಪ್ರೀತಿ ನಮ್ಮ ತವರಿನ ಸಿರಿ 
ಹೆಣ್ಣು : ತವರಿನ ಬಾಗಿನ ನವಕೋಟಿಗೇ ಸರೀ .. 
           ತವರಿನ ಹಂಬಲ ಉಸಿರಾಟಕೇ ಸರೀ ... ಅಣ್ಣ ನಮ್ಮ ಜನುಮದಾ ಸಿರಿ 
ಇಬ್ಬರು : ಪ್ರೀತಿ ನಮ್ಮ ತವರಿನ ಸಿರಿ... ಪ್ರೀತಿ ನಮ್ಮ ತವರಿನ ಸಿರಿ 
ಹೆಣ್ಣು : ಓ..ಓಓಓಓಓ .. ಓಓಓಓಓ 
---------------------------------------------------------------------------------------------------------------------

ತವರಿನ ಸಿರಿ (೨೦೦೬) - ಆಕಾಶದಿಂದಳಿದ ಅಪ್ಸರೆ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿ.ಬಿ.

---------------------------------------------------------------------------------------------------------------------

No comments:

Post a Comment