863. ಅಣ್ಣ ತಂಗಿ (೨೦೦೫)





ಅಣ್ಣ ತಂಗಿ ಚಲನಚಿತ್ರದ ಹಾಡುಗಳು 
  1. ಅಣ್ಣ ತಂಗಿಯರ ಈ ಬಂಧ  ಜನುಮ ಜನುಮಗಳ ಅನುಬಂಧ 
  2. ಹುಬ್ಬಳಿಯ ಶೆಹರದಾಗ ಕಾಣೆ ಕಾಣೇನಿಂಥ ಬುಗುಡಿ 
  3. ತವರಲ್ಲಿ ತಂಗ್ಯಮ್ಮಾ ನಗುತ್ತಾಳೇ  
  4. ತವರುಮನೆ ಈಗ ಬೀಗರ ಮನೇ 
  5. ಗಂಡಸು ಹೊರಗಡೆ 
  6. ಅಣ್ಣ ನಮ್ಮವನಾದರೂ 
ಅಣ್ಣ ತಂಗಿ (೨೦೦೫) - ಅಣ್ಣ ತಂಗಿಯರ ಈ ಬಂಧ  ಜನುಮ ಜನುಮಗಳ ಅನುಬಂಧ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಎಸ್ಪಿಬಿ. ಚಿತ್ರಾ 

ಹೆಣ್ಣು : ಅಣ್ಣ ತಂಗಿಯರ ಈ ಬಂಧ  ಜನುಮ ಜನುಮಗಳ ಅನುಬಂಧ 
          ಅಣ್ಣ ತಂಗಿಯರ ಈ ಬಂಧ  ಜನುಮ ಜನುಮಗಳ ಅನುಬಂಧ 
          ಜೀವಕ್ಕೆ ಕೊರಳು ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ... ಈ ರಕ್ಷಾ... ಬಂಧನಾ... 
ಗಂಡು : ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ 
            ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ 
            ಜೀವಕ್ಕೆ ಕೊರಳು ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ...  ಈ ರಕ್ಷಾ... ಬಂಧನಾ... 

ಗಂಡು : ನೀ ಹುಟ್ಟಿಬಂದ ಶುಭದಿನವೇ ಈ ರಾಖಿ ಹಬ್ಬ ಬಂದಿತು 
            ಸೋದರಿಕೆಯೊಂದು ವರವೆಂದು ಈ ರಾಖಿ ಸಾಕ್ಷಿ ಹೇಳಿತ್ತು 
            ತಂಗಿಯು ಹುಟ್ಟಿದಾಕ್ಷಣ  ಅಣ್ಣನ ಪದವಿ ಹುಟ್ಟಿತು 
            ತಂಗಿಯು ಹುಟ್ಟಿದಾಕ್ಷಣ  ಅಣ್ಣನ ಪದವಿ ಹುಟ್ಟಿತು 
            ಗಂಡಿಗೆ ಗೌರವದ ಗರೆ ಏರಿತ್ತು 
            ಮುದ್ದಾಗಿ ನೀನು ಅಣ್ಣಾ ಅಣ್ಣಾ ಅನ್ನೋದೇ ನನಗೆ ಓಂಕಾರ 
            ನನ್ನ ಆಯು ಎಲ್ಲಾ ನಿನಗಾಗಿ ತಾನೇ ಧೀರ್ಘಾಯುಷ್ಮಾನ ಭವಾ... 
            ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ 
            ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ 
            ಜೀವಕ್ಕೆ ಕೊರಳು ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ.. ಈ ರಕ್ಷಾ... ಬಂಧನಾ... 

ಹೆಣ್ಣು : ದೇವರುಗಳೆಲ್ಲಾ ಧರೆಗಳಿದು ಉಡಿ ತುಂಬಾ ವರವ ತುಂಬಿದರೂ 
           ಈ ಅಣ್ಣಾನೆಂಬ ವರ ಸಾಕು... ನಾನಲ್ಲೇ ಇರುವೇ ಕೈ ಮುಗಿದು .. 
           ಅಣ್ಣಾ ಅನ್ನೋ ಕೂಗಲಿ ಎಲ್ಲಾ ದೇವರಿರುವರು...   
           ಅಣ್ಣಾ ಅನ್ನೋ ಕೂಗಲಿ ಎಲ್ಲಾ ದೇವರಿರುವರು...   
           ಜನುಮಕ್ಕೆ ಒಬ್ಬಣ್ಣ ಸಾಕೆನುವರು.. 
           ತವರಾಗಿ ನೀನು ತಂಗಿ ತಂಗಿ ಆನ್ನೋದೆ ನನಗೆ ಶ್ರೀರಕ್ಷೆ 
           ಎದೆಯಾಗೀ ನೀನು ಹೇಗಾಲಾಗೀ ನೀನು ಬ್ರಾತೃದೇವೋಭವ... 
           ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ 
ಗಂಡು : ಅಣ್ಣ ತಂಗಿಯರ ಈ ಬಂಧ ಜನುಮ ಜನುಮಗಳ ಅನುಬಂಧ 
ಹೆಣ್ಣು : ಜೀವಕ್ಕೆ ಕೊರಳು ದೇಹಕ್ಕೆ ನೆರಳು ನಾವಾಗಲೆಂದು ಹರಸುತಿದೆ
ಗಂಡು : ಈ ರಕ್ಷಾ... ಬಂಧನಾ...   ಹೆಣ್ಣು : ಈ ರಕ್ಷಾ... ಬಂಧನಾ... 
--------------------------------------------------------------------------------------------------------

ಅಣ್ಣ ತಂಗಿ (೨೦೦೫) - ಅಣ್ಣ ತಂಗಿಯರ ಈ ಬಂಧ  ಜನುಮ ಜನುಮಗಳ ಅನುಬಂಧ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಅನುರಾಧಾಶ್ರೀರಾಮ್, ಕೆ.ಕೆ. 

ಹೆಣ್ಣು : ಹ.... ಹಹಹಹ್ ...  ಹಹಹಹಹ್ ... 
ಗಂಡು : ಹುಬ್ಬಳಿಯ ಶೆಹರದಾಗ ಕಾಣೆ ಕಾಣೆನಿಂಥಾ ಬುಗುಡಿ 
           ಶಾಸ್ತ್ರ ಸಾದಾ ಹೈವೇದಾಗ ಧಡಕ ಧಡಕ್ ಕುಲಕೋ ಚಕ್ಕಡಿ 
           ಪಾರ್ಸಲ್ಲಾ ಭೀಗಿ ಐತೀ ಐಟಂ ರಡದೈತಿ... 
          ರಗಡ ರಗಡ ರಗಡ ರಗಡ ರಗಡಣಿ ಬಾ  
          ರಗಡ ರಗಡ ರಗಡ ರಗಡ ರಗಡಣಿ ಬಾ  
          ರಗಡ ರಗಡ ರಗಡ ರಗಡ ರಗಡಣಿ ಬಾ  
ಹೆಣ್ಣು : ಖನವಾಡಿ ಟೇಷನದಿಂದ ಬಂತು ನಂಗ ಭಾರಿ ರಕಮು 
         ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ ಆತೂ ನನ್ನ ಜಗದೀಕ ಜಕಮು 
         ಪಾರ್ಸಲ್ ಮಸ್ತ ಐತೀ ಐಟಂ ರಗಡದೈತಿ... 
         ರಗಡ ರಗಡ ರಗಡ ರಗಡ ರಗಡಣಿ ಬಾ  
         ರಗಡ ರಗಡ ರಗಡ ರಗಡ ರಗಡಣಿ ಬಾ  
        ರಗಡ ರಗಡ ರಗಡ ರಗಡ ರಗಡಣಿ ಬಾ  
 
ಗಂಡು : ಮೊದಲ ಏನ್ ಬಡಿಸೈತಿ ಬಳಿಕ ಏನ್ ತಿನಿಸೈತಿ ಕಡಿಗ ಏನ್ ಕುಡಿಸೈತಿ...  
           ನಿಮ್ಮ ಕಡಿ ಸೋಬಾನ ರಾತ್ರಿಗಳೂ ಹೆಂಗ್ ನಡೆಸತಾರ ಕೆಡಸತರ ತಿಳಿಸಿ ಕೊಡ ನಂಗ್ 
ಹೆಣ್ಣು : ಅಲ್ಲೀ ಮತ್ತ ಕಾಯೋದ ಇಂದ ಟೆಸ್ಟ ಮಾಡೋದ 
ಗಂಡು : ಅಯ್ಯೋ ಬಿಡ ನೀ ಹೈಬ್ರಿಡ್ .. ಅಯ್ಯೋ ಬಿಡ ನೀ ಹೈಬ್ರಿಡ್ .. 
           ನೀ ಕಾದೂ ಕುಂತ ಕಾದ ಹಂಚ ಆಗಿಬಿಡ 
ಹೆಣ್ಣು : ಕಾದ ಹಂಚಿಗೆ ನೀರೇಸದ ಚೂರು ಚೂರು ಚೂರು ಮಾಡಬ್ಯಾಡ 
ಗಂಡು : ಹೇ.. ಹುಬ್ಬಳಿಯ ಶೆಹರದಾಗ ಕಾಣೆ ಕಾಣೆನಿಂಥ ಬುಗುಡಿ 
            ಶಾಸ್ತ್ರ ಸಾದಾ ಹೈವೇದಾಗ ಧಡಕ ಧಡಕ್ ಕುಲಕೋ ಚಕ್ಕಡಿ 
ಹೆಣ್ಣು : ಪಾರ್ಸಲ್ಲ ಮಸ್ತ ಐತಿ ಐಟಂ ರಗಡದೈತಿ... 
ಗಂಡು : ರಗಡ ರಗಡ ರಗಡ ರಗಡ ರಗಡಣಿ ಬಾ  
           ರಗಡ ರಗಡ ರಗಡ ರಗಡ ರಗಡಣಿ ಬಾ  
ಹೆಣ್ಣು : ರಗಡ ರಗಡ ರಗಡ ರಗಡ ರಗಡಣಿ ಬಾ  
           ರಗಡ ರಗಡ ರಗಡ ರಗಡ ರಗಡಣಿ ಬಾ  

ಹೆಣ್ಣು : ಚೇಳಿನಂತ ಬೆರಳಿದ ಹಾವಿನಾಗ ಹೊರಳಲಾ ಗೂಳಿಹ್ಯಾಗ್ ಗುಡೂರುತ   
          ನಡಕ ನಡ ತಾಕಿದ್ದ ಬಾರಗಡಿಯಾತು ಸ್ಯಾಂಪಲಿಗೇ ಹೊತ್ತಿಟ್ಟ ಜೀವ ಎಗರಿ ಹೋತು 
ಗಂಡು : ಇಲ್ಲೇ ಹಿಂಗ್ ಅಲ್ಲೇನ್ ಹೆಂಗ್ ಹುಣ್ಣವೀ ತುಂಡ್ ಬಾ ನನ ಸಂಗ 
ಹೆಣ್ಣು : ಹತ್ತ ಹತ್ತ ಬೇಗ ಹತ್ತ ಬೆಳ್ಳಿ ಚುಕ್ಕಿ ಊರಿಗೇ ಹೋಗೋ ಬಂಡಿ ಹತ್ತ 
ಗಂಡು : ಇನ್ನೂ ಮದುವೀ ಮುಗಿದಿಲ್ಲ ನೀ ಗಡಬಡ ಮಾಡಬ್ಯಾಡ 
ಹೆಣ್ಣು : ಓಯ್ ..  ಖನವಾಡಿ ಟೇಷನದಿಂದ ಬಂತು ನಂಗ ಭಾರಿ ರಕಮು 
          ಸಿಗ್ನಲ್ ಕೊಟ್ಟ ಹಳಿಯ ಬಿಟ್ಟ ಆತೂ ನನ್ನ ಜಗದೀಕ ಜಕಮು 
ಗಂಡು :  ಪಾರ್ಸಲ್ ಬೀಗೈತಿ ಐಟಂ ರಗಡೈತಿ... 
ಹೆಣ್ಣು : ರಗಡ ರಗಡ ರಗಡ ರಗಡ ರಗಡಣಿ ಬಾ  
          ರಗಡ ರಗಡ ರಗಡ ರಗಡ ರಗಡಣಿ ಬಾ  
ಗಂಡು : ರಗಡ ರಗಡ ರಗಡ ರಗಡ ರಗಡಣಿ ಬಾ  
          ರಗಡ ರಗಡ ರಗಡ ರಗಡ ರಗಡಣಿ ಬಾ  
----------------------------------------------------------------------------------------------------------------

ಅಣ್ಣ ತಂಗಿ (೨೦೦೫) - ತವರಲ್ಲಿ ತಂಗ್ಯಿಮ್ಮಾ ನಗುತ್ತಾಳೇ  
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಉದಿತ್ ನಾರಾಯಣ, ಚಿತ್ರಾ  

----------------------------------------------------------------------------------------------------------------

ಅಣ್ಣ ತಂಗಿ (೨೦೦೫) - ಗಂಡಸು ಹೊರಗಡೆ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಸುನಿಧೀ ಚವ್ವಾಣ 

----------------------------------------------------------------------------------------------------------------

ಅಣ್ಣ ತಂಗಿ (೨೦೦೫) - ತವರುಮನೆ ಈಗ ಬೀಗರ ಮನೇ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಚಿತ್ರಾ, ಅನುರಾಧಾಶ್ರೀರಾಮ್ಮಧು ಬಾಲಕೃಷ್ಣ , 

----------------------------------------------------------------------------------------------------------------

ಅಣ್ಣ ತಂಗಿ (೨೦೦೫) - ಅಣ್ಣ ನಮ್ಮವನಾದರೂ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ ಗಾಯನ : ಚಿತ್ರಾ 

----------------------------------------------------------------------------------------------------------------

No comments:

Post a Comment