872. ವಾಲ್ಮೀಕಿ ( ೧೯೬೩)



ವಾಲ್ಮೀಕಿ ಚಿತ್ರದ ಹಾಡುಗಳು 
  1. ಜಲಲ ಜಲಲ ಜಲಧಾರೆ 
  2. ಮನದೇ ಮಹಾ ಬಯಕೆ 
  3. ಅನುರಾಗದಲೇ ಆನಂದದಲೇ 
  4. ತಾಳಲಾರೆ ನಾ ತಾಳಲಾರೆ 
  5. ನಮೋ ನಾರಾಯಣ ಪವನ 
  6. ಜಯ ಜಯ ಜಯ ನಟರಾಜ 
  7. ಭಗವಾನ ಅವತಾರಿಪ 
  8. ಶ್ರೀ ರಾಮಾಯಣ ಕಾವ್ಯ ಸುಧೆ 

ವಾಲ್ಮೀಕಿ ( ೧೯೬೩)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲಾಪ್ರಭಾಕರಶಾಸ್ತ್ರಿ  ಗಾಯನ : ಪಿ.ಸುಶೀಲಾ

ಜಲಲ ಜಲಲ ಜಲಧಾರೆ .ಓ..ಹೊ..ಹೊ..ಹೊಯ್ 
ಜಲಲ ಜಲಲ ಜಲಧಾರೆ ..ಓ..ಹೊ..ಹೊ..ಹೊಯ್ 
ಜಲಲ ಜಲಲ ಜಲಧಾರೆ 
ಸುವ್ವಿ ಸುವ್ವಾಲೆ ಸೋಲೇ ದೋಣಿ ದುವ್ವಾಲೆ ಮೇಲೆ 
ಜಾಣೆ ಜಮ್ಮೆಲ್ಲಾ ಜೊಲೇ  
ಅಹಾಹ್ಹ ಹಾಹ್ಹ ಹಾಹ್ಹ ಹಾಹ್ಹ ಹಾಹ್ಹ ಆಹ್ಹಾ  ಆಹ್ಹಾ 
ಒಹೋ.. ಹೊ.. ಹೊ ಒಹೋ.. ಹೊ.. ಹೊ
ಜಲಲ ಜಲಲ ಜಲಧಾರೆ ಜಲಲ ಜಲಲ ಜಲಧಾರೆ

ನನ್ನ ಜತೆಯಾಗಿ ಹಾಡು ಹಾಯಾಗಿ ಕೋಗಿಲೆ (ಮಾಗಿ...  ಕೋಗಿಲೆ ) 
ತಾಳ ಹಿಮ್ಮೇಳ ಮೇಳ ಮುಮ್ಮೇಳಾ ನೇರಳೆ  (ನವಿಲೇ... ಆಡಲೇ )
ಬಿಂಕ ಬಿನ್ನಾಣ ಬೆಡಗು ಬಿಗುಮಾನ  ಬಲ್ಲೆ ಅಂಬಾಲೆ ಬಾಲೆ  
ಬಿಂಕ ಬಿನ್ನಾಣ ಬೆಡಗು ಬಿಗುಮಾನ ಬಲ್ಲೆ ಅಂಬಾಲೆ ಬಾಲೆ  
ಒಹೋ... ಓ .... ಹೊಯ್... ಒಹೋ.. ಹೊಯ್ 
ಸುವ್ವಿ ಸುವ್ವಾಲೆ ಸೋಲೇ ದೋಣಿ ದುವ್ವಾಲೆ ಮೇಲೆ 
ಜಾಣೆ ಜಮ್ಮೆಲ್ಲಾ ಜೊಲೇ  
ಅಹಾಹ್ಹ ಹಾಹ್ಹ ಹಾಹ್ಹ ಹಾಹ್ಹ ಹಾಹ್ಹ ಆಹ್ಹಾ  ಆಹ್ಹಾ 
ಒಹೋ.. ಹೊ.. ಹೊ ಒಹೋ.. ಹೊ.. ಹೊ
ಜಲಲ ಜಲಲ ಜಲಧಾರೆ ಜಲಲ ಜಲಲ ಜಲಧಾರೆ

ಅಂಬು ಕಣ್ಣೋಟ ತುಂಬು ಮೈಮಾಟ ಮಂಚಲೆ (ಚೆಲುವೆ ಚಂಚಲೆ )
ಬೃಂಗ ಸಾರಂಗ ಸಿಂಗ ಮಾತಂಗ ನಾಗಲೇ (ಲಲನೆ  ನೀನೆಲೆ )
ಹಂಸ ನಡೆದಂತೆ ಹೊನಲು ಹರಿದಂತೆ ಹಾಯಿ ಹರಿಗೋಲ ಲೀಲೆ 
ಹಂಸ ನಡೆದಂತೆ ಹೊನಲು ಹರಿದಂತೆ ಹಾಯಿ ಹರಿಗೋಲ ಲೀಲೆ 
ಒಹೋ... ಓ .... ಹೊಯ್... ಒಹೋ.. ಹೊಯ್ 
ಸುವ್ವಿ ಸುವ್ವಾಲೆ ಸೋಲೇ ದೋಣಿ ದುವ್ವಾಲೆ ಮೇಲೆ 
ಜಾಣೆ ಜಮ್ಮೆಲ್ಲಾ ಜೊಲೇ  
ಜಲಲ ಜಲಲ ಜಲಧಾರೆ ಜಲಲ ಜಲಲ ಜಲಧಾರೆ
ಜಲಲ ಜಲಲ ಜಲಧಾರೆ ಜಲಲ ಜಲಲ ಜಲಧಾರೆ 
ಒಹೋ.. ಹೊ.. ಹೊ ಒಹೋ.. ಹೊ.. ಹೊ
ಜಲಲ ಜಲಲ ಜಲಧಾರೆ ಜಲಲ ಜಲಲ ಜಲಧಾರೆ
ಒಹೋ... ಓ .... ಹೊಯ್... ಒಹೋ.. ಹೊಯ್ 

ತುಂಬಿ ತುಂಬಾಲೆ ಜೊಲ್ಲೆ ದೋಣಿ ದುವ್ವಾಲೆ ಮೇಲೆ 
ಜಾಣೆ ಜಮ್ಮೆಲ್ಲಾ ಜೊಲ್ಲೆ  
ನನ್ನಾ ಜತೆಯಾಗಿ ಹಾಡು ಹಾಯಾಗಿ ಕೋಗಿಲೆ  (ಮಾಗಿ ಕೋಗಿಲೆ )
ತಾಳ ಹಿಮ್ಮೇಳ ಮೇಳ ಮುಮ್ಮೇಳಾ ನೀಡಲೇ (ನವಿಲೇ ಹಾಡಲೇ )
ಬಿಂಕ ಬಿನ್ನಾಣ ಬೆಡಗು ಬಿಗುಮಾನ 
ಬಲ್ಲೆ ಅಂಬಾಲೆ  ಬಲ್ಲೆ 
ತಂಪು ಕಣ್ಣೋಟ ತುಂಬು ಮೈಮಾಟ ಮಮಕಾಲೆ (ಚೆಲುವೆ ಚಂಚಲೆ )
ಬೃಂಗ ಸಾರಂಗ ಸಿಂಗ ಮಾತಂಗ ನಾಗಲೇ (ಲಲನೆ ನೀನೆಲೆ )
ಹಂಸ ನಡೆದಂತೆ ಹೊನಲು ಹರಿದಂತೆ ಹಾಯಿ ಹರಿಗೋಲ ಲೀಲೆ 
ಆ..ಆ...ಆ..ಆ..
--------------------------------------------------------------------------------------------------------------------------

ವಾಲ್ಮೀಕಿ ( ೧೯೬೩)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲಾಪ್ರಭಾಕರಶಾಸ್ತ್ರಿ  ಗಾಯನ : ಎಸ.ಜಾನಕಿ, ಪಿ.ಲೀಲಾ


ಹೂಂ... ಆಆಆ...  ಮನದೇ ಮಹಾಬಯಕೆ
ಮನದೇ ಮಹಾಬಯಕೆ ಏನೇನೋ ರೂಪ ರೇಖೆ ..
ಮನದೇ ಮಹಾಬಯಕೆ

ನೀ ಬಂದಂತೆ ನಾ ಮೈಮರೆತೆ ಆ ನೆಪವೊಂದೇ ನೂತನ ಕವಿತೆ
ನೀ ಬಂದಂತೆ ನಾ ಮೈಮರೆತೆ ಆ ನೆಪವೊಂದೇ ನೂತನ ಕವಿತೆ
ನಿನ್ನೊಲವೇ ಮನೋರಮ್ಯ ಚರಿತೆ
ನಿನ್ನೊಲವೇ ಮನೋರಮ್ಯ ಚರಿತೆ ಮರೆಯದ ಮೋಹನ ಗೀತೆ
ಮನದೇ ಮಹಾಬಯಕೆ ಏನೇನೋ ರೂಪ ರೇಖೆ
ಮನದೇ ಮಹಾಬಯಕೆ

ಯಾರೋದೋ ಕಾಣೆ ಚಂದದ ಬೋಂಬೆ ಸರಿಯೋ ಬೆಸವೋ ನಾನಯ್ಯ ತಂದೆ
ಯಾರೋದೋ ಕಾಣೆ ಚಂದದ ಬೋಂಬೆ ಸರಿಯೋ ಬೆಸವೋ ನಾನಯ್ಯ ತಂದೆ
ದೈವವೇ ನೀಡಿದ ಸೌಭಾಗ್ಯವೆಂದೇ ಆ..ಆ...ಆ
ದೈವವೇ ನೀಡಿದ ಸೌಭಾಗ್ಯವೆಂದೇ ನಂಬಲೊ ಬಿಡಲೋ ನಾ ಮುಂದೆ
ಮನದೇ ಮಹಾಬಯಕೆ ಏನೇನೋ ರೂಪ ರೇಖೆ
ಮನದೇ ಮಹಾಬಯಕೆ

ಚಿತ್ತದ ನೆನೆದೆ ಚಿತ್ರವ ಬರೆದೆ ಚಿತ್ತ ಜಾಣೆ ಪರವಶಳಾದೆ
ಚಿತ್ತದ ನೆನೆದೆ ಚಿತ್ರವ ಬರೆದೆ ಚಿತ್ತ ಜಾಣೆ ನಾ ಪರವಶಳಾದೆ
ನಾ ಮಣಿವೆ ಮನೋ ದೈವವೆಂದೇ
ಪ್ರೇಮಿಸು ಅನುರಾಗದೆ ...
ಮನದೇ ಮಹಾಬಯಕೆ ಏನೇನೋ ರೂಪ ರೇಖೆ
ಮನದೇ ಮಹಾಬಯಕೆ

ಆಸೆಯ ದೀಪ ಆರಂದಂತೆ ಅರಳಿದ ಜಾಜಿ ಬಾಡದಂತೆ
ಆಸೆಯ ದೀಪ ಆರಂದಂತೆ ಅರಳಿದ ಜಾಜಿ ಬಾಡದಂತೆ
ಕಣ್ಣಿನ ಕಾಡಿಗೆ ನೀರಾಗದಂತೆ ಕಣ್ಣಿಡು ಕಾಪಾಡು ಮಾತೇ ...
ಮನದೇ ಮಹಾಬಯಕೆ ಏನೇನೋ ರೂಪ ರೇಖೆ
ಮನದೇ ಮಹಾಬಯಕೆ ಏನೇನೋ ರೂಪ ರೇಖೆ
--------------------------------------------------------------------------------------------------------------------------

ವಾಲ್ಮೀಕಿ ( ೧೯೬೩)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲಾಪ್ರಭಾಕರಶಾಸ್ತ್ರಿ  ಗಾಯನ :ಘಂಟಸಾಲ, ಪಿ.ಸುಶೀಲಾ 


ಗಂಡು : ಅನುರಾಗದಲೇ ಆನಂದನೆಲೆ  ಜೋಲೇ ಹೊಯ್
             ಇದು ಮಾನಸಾರೆ ತಿಳಿದು ಹಾಡು ಹಾಡು
ಹೆಣ್ಣು : ಒಹೋಹೋ ...  ಅನುರಾಗದಲೇ ಆನಂದನೆಲೆ ಜೋಲೇ ಹೊಯ್
             ಇದು ರಸವೇಳೆ ತಿಳಿದು ಹಾಡು ಹಾಡು (ಒಹೋಹೋ ...)
ಇಬ್ಬರು : ಅನುರಾಗದಲೇ.... ಹೊಯ್

ಹೆಣ್ಣು : ಹೊನಲ ಅಲೆಯ ಹೋಲುವಂತ  ಮನದ ಮರೆಯದ ಕೋರಿಕೆ
ಗಂಡು : ದೂರಿಯಾರೋ ದೋಣಿಯಂತೇ ಹರೆಯದಾಸೆ ಕೋರಿಕೆ
ಹೆಣ್ಣು : ಹೊನಲ ಅಲೆಯ ಹೋಲುವಂತ  ಮನದ ಮರೆಯದ ಕೋರಿಕೆ
ಗಂಡು : ದೂರಿಯಾರೋ ದೋಣಿಯಂತೇ ಹರೆಯದಾಸೆ ಕೋರಿಕೆ
ಹೆಣ್ಣು : ಓಹೋಹೋ...   ಗಂಡು: ಒಹೋ.. ಇಬ್ಬರೂ : ಓಹೋಹೋಹೊಹೋ 
ಹೆಣ್ಣು : ಒಹೋಹೋ ... ಅನುರಾಗದಲೇ ಆನಂದನೆಲೆ ಜೋಲೇ ಹೊಯ್
             ಇದು ರಸವೇಳೆ ತಿಳಿದು ಹಾಡು ಹಾಡು (ಒಹೋಹೋ ...)
ಇಬ್ಬರು : ಅನುರಾಗದಲೇ.... ಹೊಯ್ 
ಹೆಣ್ಣು : ಓಹೋಹೋ...   ಗಂಡು: ಒಹೋ.. ಇಬ್ಬರೂ : ಓಹೋಹೋಹೊಹೋ 


ಗಂಡು : ಆಸೆಯ ಕಣ್ಣಿನ ಕರೆಯೋಲೆ
ಹೆಣ್ಣು : ಅದುವೇ ಒಲವಿನ ಸಂಕೋಲೆ
ಗಂಡು : ಆಸೆಯ ಕಣ್ಣಿನ ಕರೆಯೋಲೆ
ಹೆಣ್ಣು : ಅದುವೇ ಒಲವಿನ ಸಂಕೋಲೆ   
ಗಂಡು : ಆ.. ಪಾಠಿ   ಹೆಣ್ಣು : ಸುವ್ವಾಲೆ 
ಗಂಡು : ಮೈಮರೆಸೋ ಮೋಹ ಲೀಲೆ 
ಗಂಡು : ಅನುರಾಗದಲೇ ಆನಂದನೆಲೆ  ಜೋಲೇ ಜೋಲೇ
             ಇದು ಮಾನಸಾರೆ ತಿಳಿದು ಹಾಡು ಹಾಡು
ಇಬ್ಬರು :  ಒಹೋಹೋ ...ಒಹೋಹೋ ..   ಅನುರಾಗದಲೇ.... ಹೊಯ್ 
--------------------------------------------------------------------------------------------------------------------------

ವಾಲ್ಮೀಕಿ ( ೧೯೬೩)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲಾಪ್ರಭಾಕರಶಾಸ್ತ್ರಿ  ಗಾಯನ :ಘಂಟಸಾಲ, ಪಿ.ಸುಶೀಲಾ 


ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ
           ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ
ಹೆಣ್ಣು : ಬಲ್ಲೆ ಬಲ್ಲೆ ನಿನ್ನ ಮಾತು ಮಂಕು ಸಾಂಬ್ರಾಣಿ
          ಬಲ್ಲೆ ಬಲ್ಲೆ ನಿನ್ನ ಮಾತು ಮಂಕು ಸಾಂಬ್ರಾಣಿ
ಗಂಡು : ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ

ಗಂಡು : ಚೆಂಡು ತಾನೇ ದಿಂಡು ಮಾಲೆ ಗೊಂಡೆ ಇದಿಗೊ ನವಿಲೇ 
ಹೆಣ್ಣು : ಹೂಂ ... (ಹ್ಹಾಂ ಹ್ಹ ಹ್ಹ ಹಾ )
ಗಂಡು : ಚೆಂಡು ತಾನೇ ದಿಂಡು ಮಾಲೆ ಗೊಂಡೆ ಇದಿಗೊ ನವಿಲೇ 
ಹೆಣ್ಣು : ಒಲವೇ ಮಾಲೆ ಒಲವೇ ಓಲೆ ಒಲ್ಲೇ ಹೂಮಾಲೆ 
ಗಂಡು : ಹ್ಹಾಂ.. (ಓಹೋ ಓಹೋ) 
ಹೆಣ್ಣು : ಒಲವೇ ಮಾಲೆ ಒಲವೇ ಓಲೆ ಒಲ್ಲೇ ಹೂಮಾಲೆ 
ಗಂಡು : ಒಲಿದು ಬಾಲೇ ಗೇಲಿಟು ಆಲೇ ಹೊಂಬಾಳೆ ಹೂಬಾಳೆ ಕೇಳೇ 
           ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ
ಗಂಡು : ನೀನೇ ಮೋಡಿ ನಾನೇ ಗಾರುಡಿ ಒಲ್ಮೆಯೇ ಒಡನಾಡಿ 
            ಬ್ರಹ್ಮಚಾರಿ ಬಾಳ್ವೆ ಸಾಕು ನೀನೇ ನನ್ನ ಜೋಡಿ 
ಹೆಣ್ಣು : ಜೋಡಿಯಾಗಿ ಕೂಡಿದ ಮೇಲೆ ಪೋಡಿ ಪೋಗುವೇ ನೀ 
         ಜೋಡಿಯಾಗಿ ಕೂಡಿದ ಮೇಲೆ ಪೋಡಿ ಪೋಗುವೇ
ಗಂಡು : ಓ.. ಕೊಟ್ಟ ಮಾತು ಮೀರಲಾರೆ ಕಟ್ಟಾಣೆ  ಪುಟ್ಟಾಣೆ  ಬಾರೇ 
           ತಾಳಲಾರೆ ನಾ ತಾಳಲಾರೆ ಬಾರೇ ಕಣ್ಮಣಿ
ಹೆಣ್ಣು : ನಾ ನಂಬೋಲ್ಲಾ .. (ಪೋ ಅಂತೀಯಾ... ನಾನ್ ಪೋಪೆ )

ಹೆಣ್ಣು : ಮಾವ... ಪೊಗಬೇಡವೋ ಪಾಂಡುರಂಗ ರಂಗಯ್ಯ ರಂಗಾ
          ಸಿಂಗಾರ ಸಂಗಾ ಹೊಯ್ ನಿನ್ನ ಅಗಲಿರಲಾರೆ
ಗಂಡು : ನಿನ್ನ ಮರೆತು ಇರಲಾರೆ..   ನಿನ್ನ ಮರೆತು ಇರಲಾರೆ..
           ಚಿನ್ನಾರೇ ಚೆಲುವೆ... (ಹಮ್ಮಿರ ಪಳ್ವೆ  ) ನನ್ನಾಣೆ ಆಳ್ವೆ
ಇಬ್ಬರು :ನಿನ್ನ ಮರೆತು ಇರಲಾರೆ..   ನಿನ್ನ ಮರೆತು ಇರಲಾರೆ..
-------------------------------------------------------------------------------------------------------------------------

ವಾಲ್ಮೀಕಿ ( ೧೯೬೩)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲಾಪ್ರಭಾಕರಶಾಸ್ತ್ರಿ ಗಾಯನ :

ನಮೋ ನಾರಾಯಣ ಪಾವನ
ನಾನಜೀವನ ನಾಟಕಕಾರಣ
ನಮೋ ನಾರಾಯಣ ಪಾವನ
ನಾನಜೀವನ ನಾಟಕಕಾರಣ
ನಮೋ ನಾರಾಯಣ...... ಆಆಆ... 

ಪಗಡೆಯ ಮಾಡಿತ್ಯರಾಸ್ತ್ಯರ ದೇವರ 
ಹಾಡುವೇ ವಿಧ ವಿಧದ ವಿನೋದ ಲೀಲೆ   
ಪಗಡೆಯ ಮಾಡಿತ್ಯರಾಸ್ತ್ಯರ ದೇವರ 
ಹಾಡುವೇ ವಿಧ ವಿಧದ ವಿನೋದ ಲೀಲೆ   
ಆ ಲೀಲೆಯ ಪರಮಾರ್ಥವವೇನೋ.... ಆಆಆ...ಆಆಆ... 
ಆ ಲೀಲೆಯ ಪರಮಾರ್ಥವವೇನೋ 
ಮಗಧಿತ ಶತನಾನ ವಿಧಾನ ಸನಾತನ 
ಮಗಧಿತ ಶತನಾನ ವಿಧಾನ ಸನಾತನ 
ನಮೋ ನಾರಾಯಣ ಪಾವನ
ನಾನಜೀವನ ನಾಟಕಕಾರಣ
ನಮೋ ನಾರಾಯಣ...... ಆಆಆ... 

ಪ್ರಾರಬ್ಧ ಕರ್ಮಂಧಾ ಕೃತಪಾಪ ಪರಿಹಾರ 
ಪತಿತಪಾತಕಜನ್ಮ ಪುನರೋಸ್ಥಾರ ಸಾರ 
ಪರಮಾರ್ಥ ಸಂಧಾನ ಸಾಧನ ಮಣಿಹಾರ....ಆಆಆ...  
ಜಪಿಸು ನಾರಾಯಣ ಮಂತ್ರ 
ಮಧುರ ಮಧುರಾಕ್ಷರಾ....ಆಆಆ...  
ಓ ನಮೋ ನಾರಾಯಣಾಯ..  
ಓ ನಮೋ ನಾರಾಯಣಾಯ..  ಓ ನಮೋ ನಾರಾಯಣಾಯ..  
ಓ ನಮೋ ನಾರಾಯಣಾಯ..  ಓ ನಮೋ ನಾರಾಯಣಾಯ..  
ಓ ನಮೋ ನಾರಾಯಣಾಯ..  ಓ ನಮೋ ನಾರಾಯಣಾಯ..  
ಓ ನಮೋ ನಾರಾಯಣಾಯ..  ಓ ನಮೋ ನಾರಾಯಣಾಯ..  
--------------------------------------------------------------------------------------------------------------------------

ವಾಲ್ಮೀಕಿ ( ೧೯೬೩)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲಾಪ್ರಭಾಕರಶಾಸ್ತ್ರಿ ಗಾಯನ : 

ಓಂ... ಓಂ.... ಓಂ... 
ಜಯ ಜಯ ಜಯ ನಟರಾಜ

--------------------------------------------------------------------------------------------------------------------------

ವಾಲ್ಮೀಕಿ ( ೧೯೬೩)
ಸಂಗೀತ : ಘಂಟಸಾಲ ಸಾಹಿತ್ಯ : ಕಣಗಾಲಾಪ್ರಭಾಕರಶಾಸ್ತ್ರಿ ಗಾಯನ : ಘಂಟಸಾಲ 


ನಾರದ : ಮಣಿಶಾದನ ಮೇಲೆ ಮುನಿದು ಆಡಿದ ಮಾತೇ
             ಮಣಿಶಾದನ ಮೇಲೆ ಮುನಿದು ಆಡಿದ ಮಾತೇ....
             ಮಹಾದಾನಿ ವಿಶ್ವದೊಳ್ ಮೊದಲಾದ  ವರಕವಿತೆ......
             ಮನಸಾರ ಬರೆದಿಡೈ ಗುರುದಕ್ಷಿಣೆಯನುತೇ
             ಮುನ್ನೆಡೆವ ಶ್ರೀರಾಯಣದ ಸತ್ಯ ಸತಚರಿತೇ...  ಏಏಏ.. ಆಅಅ...
ವಾಲ್ಮೀಕಿ : ಗುರುದೇವವಶ  ದೇವಾದಿದೇವ ಸಂದೇಶ
              ಶಾರದಾಂಬೆಯ ಕರುಣಾರಸದ ಆದೇಶ ಶಿರಸಾ ವಹಿಸುತ್ತೇನೆ     

ಶ್ರೀ ರಾಮಾಯಣ ಕಾವ್ಯಸುಧೆ ಶಿವನುತ ತಾರಕ ಮಂತ್ರವಿದೆ             
ಶ್ರೀ ರಾಮಾಯಣ ಕಾವ್ಯಸುಧೆ
ಧರ್ಮವಿಚಾರದ ದಶರಥ ರಾಜ ಮಕ್ಕಳಿಲ್ಲದ ಮಹಾರಾಜ
ಮಕ್ಕಳಿಗಾಗಿ ಮಾಡಿದ ಯಾಗವ, ಪಡೆದ ಪ್ರಸಾದ ಪಾಯಸವ
ಶ್ರೀ ರಾಮಾಯಣ ಕಾವ್ಯಸುಧೆ

ಕೌಸಲ್ಯಾ ಕೈಕೇಯಿ ಸುಮಿತ್ರಾ ಪಾಯಸ ಫಲದಿ
ಪಡೆದರು ತನಯರ ರಾಮ ಭರತ ಲಕ್ಷ್ಮಣ ಶತ್ರುಘ್ನರು
ರಾಮ ಭರತ ಲಕ್ಷ್ಮಣ ಶತ್ರುಘ್ನರು ಜನಪ್ರಿಯರಾದರು ಲೋಕದೇ
ಶ್ರೀ ರಾಮಾಯಣ ಕಾವ್ಯಸುಧೆ

ಯಜ್ಞವ ರಕ್ಷಿಸೇ ರಾಮಸದಾಯವ ಬಯಸಿದ ಮಕರ ಋಷಿ ವಿಶ್ವಾಮಿತ್ರ 
ತಂದೆಗೆ ವಂದಿಸಿ ತಮ್ಮನ ಜೊತೆಗೂಡಿ ರಾಮನು ಋಷಿಯ ಹಿಂದಗಡೆ ನಡೆದ 
ಶ್ರೀ ರಾಮಾಯಣ ಕಾವ್ಯಸುಧೆ

ತಾಟಕಿಯನು ಕೊಂದು ತಾ ಮುನ್ನಡೆದ 
ಮಾರೀಚ ಸುಭಾಹುವ ಸೆದೆಬಡೆದ 
ವೀರ ವೀರ ಶ್ರೀರಘುರಾಮನ ಪುರೋಷತ್ತಮ ನಿಂದನು ಸಕಲ ಜನ
ಶ್ರೀ ರಾಮಾಯಣ ಕಾವ್ಯಸುಧೆ

ಕಲ್ಲಾಗಿಯುತ ರಾಮನ ನೆನೆದ ಅಹಲೈಗೆ ರೂಪವ ಕರುಣಿಸಿದ
ಮಿಥಿಲೆ ಸೇರಿ ಶಿವಧನುವನೇ ಮುರಿದ
ಮಿಥಿಲೆ ಸೇರಿ ಶಿವಧನುವನೇ ಮುರಿದ ಸೀತೆಯ ವರಿಸಿದ ಶ್ರೀವರನೆನಿಸಿದ  
ಶ್ರೀ ರಾಮಾಯಣ ಕಾವ್ಯಸುಧೆ

ಸೀತಾಪತಿ ಧರಣಿಪತಿಯಾಗುವ ಮಧುರವ ಸಂತಸ ಶುಭಕಾಲ
ಭರತಗೆ ಪದವಿಯ  ರಾಮನಿಗೆ ಅಡವಿಯ ವರವ ಬೇಡಿದಳೂ ಕೈಕೇಯಿ
ಸೀತಾ ಲಕ್ಷ್ಮಣ ಸಮೇತ ರಾಮನೂ ತ್ಯಜಿಸನಾಗಲೇ ಅರಮನೆಯಾ
ಪುತ್ರ ಶೋಕದಿ ದಶರಥ ಭೂಪತೀ... ಆ ಕ್ಷಣವೇ ಸೇರಿದ ಅಮರಪುರಿ 

ರಾಮದೇವರನನೇ ನಂಬಿ ಪೂಜಿಸಿದ ಗುಹನೇ ಗಂಗೆಯ ದಾಟಿಸಿದ
ಚಿತ್ರಕೂಟದ ಪರ್ಣಶಾಲೆಯೇ ಸೀತಾರಾಮರ ಸುಖದನದೇ
ಭರತನ ವಾತ್ಸಲ್ಯ ರಾಮನ  ಕಾಡಿ ಕರೆಯಿತೋ ಅಯೋಧ್ಯೆಯ ಅರಮನೆಗೆ
ಹಾದಿ ತಪ್ಪುವುದು ಅಪಕೃತಿಯಂದು ರಾಮ ಪಾದುಕೆಯ ಒಲಿದಿತ್ತಾ
ಶ್ರೀ ರಾಮಾಯಣ ಕಾವ್ಯಸುಧೆ ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ

ರಘುರಾಮನ ಬಳಿ ಶೂರ್ಪಣಖಿ ಕಡು ಮೋಹದ ಮೋಡಿಯ ಹೂಡೇ
ಖಡ್ಗ ತೀಡಿ ಲಕ್ಷ್ಮಣನಾ ರಕ್ತತಿ ಮೂಗು ಕಿವಿಗಳ ಕೋಯ್ದ...
ಹೂಂಕರಾಕ್ಷ ಲಂಕಾಪತಿ ಅಂಕೆಗೆ ಜಿಂಕೆಯಾದ ಮಾರೀಚನು ಆಗಲೇ
ಆ ಜಿಂಕೆಯ ಹಿಂದೋಡಿತ ರಾಮನು ಜಾನಕೀ ಬೇಡಿಕೆ ಸಲ್ಲಿಪೇ
ಹ್ಹಾ... ಹ್ಹಾ.. ಲಕ್ಷ್ಮಣ ಹ್ಹಾ.. ಲಕ್ಷ್ಮಣ ಎಂಬ ಅಣ್ಣನ ಧ್ವನಿ ಕೇಳಿ ನೆರವಿಗೆ ತೆರಳಿದ ಲಕ್ಷ್ಮಣನು
ಭಿಕ್ಷೆ ಬೇಡೋ ವೈರಾಗಿಯ ವೇಷದಿ ಒಯ್ದನು ಸೀತೆಯ ರಾವಣನು
ಭಂಡಲಾದ ಆ ಭಕ್ಷ ಜಾಟಯು ರೆಕ್ಕೆಯುರಿತು ಗತನಾದ  
ಲಂಕಾಪುರವೇ ಅಶೋಕವನದೇ ಸೀತಾಂಬೆಯ  ಕಂಬನಿ ಕಡಲಾಯಿತು       
ಶ್ರೀ ರಾಮಾಯಣ ಕಾವ್ಯಸುಧೆ ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ

ಸೀತೆಯನರಸಲು ನಾನೆರೆಯಾಗುವೆ ವಾಲಿಯ ಕೊಲ್ಲೆಂದ ರವಿಸುತನು
ಕ್ರಿಷ್ಕಿಂದೆಗೆ ಇನ್ನೂ ರಾಜನೇ ನೀನೆಂದೂ ಬಾಷೆಯ ಮಾಡಿದ ರಘುಸುತನು  
ಸಮಬಲರಾಗಿಸು ಸುಗ್ರೀವನು ವಾಲಿಯು ಸಮರವಗೈದರು ಖಡಾಖಡಿ
ಮರದ ಮರೆಯಲಿ ನಿಂತು ರಾಮನು ವಾಲಿಯ ವಧಿಸಿದ ವರದಿಂದ
ವಾನರ ರಾಜ್ಯಕೆ ಸುಗ್ರೀವ ಆಜ್ಞೆಗೆ ಸರ್ವರೂ ಒಮ್ಮತ ಸಮ್ಮತ
ಸೀತೆಯ ನೆನೆಯಲು ಕಂಡೆ ಬರಲು ವಾತಾತ್ಮಜ ಶ್ರೀ ಹನುಮನೇ ಹೊರಟ
ಸಂಭ್ರಮದಿಂದ ಅಂಬರವೇರಿ..... ಆಆಆ.... 
ಸಂಭ್ರಮದಿಂದ ಅಂಬರವೇರಿ ಅಂಬುಧಿ ದಾಟಿದ ಹನುಮ
ಶ್ರೀ ರಾಮಾಯಣ ಕಾವ್ಯಸುಧೆ ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ

ರಾಮನ ನಾಮವ ಮರೆಯದೆ ಜಪಿಸುವ ಸೀತೆಯ ಕಂಡ ಹನುಮಂತ 
ಮುದ್ರಿಕೆ ಉಂಗುರ ಮಾತೆಗೆ ಅರ್ಪಿಸಿ ಚೂಡಾಮಣಿಯನು ತಾ ಪಡೆದಾ 
ಮಾರುತಿ ಇಂದ್ರಜಿತ ಬ್ರಹ್ಮಾಸ್ತ್ರ ಸಿಕ್ಕಿಗೆ ಶರಣು ಶರಣೆಂದ  
ರಾವಣನ ಸಂಮುಖಕೆ ಬಂದ ನೀತಿ ಬಾಹಿರ ದೈತ್ಯ 
ದೂತ ಬಾಲಕೆ ಬೆಂಕಿಯಿಡಿರೆಂದಾ   
ಆ ಬೆಂಕಿ ಲಂಕೇಯನೇ ಧಾಂಕೀ 
ಹೌಹಾರಿಹನುಮಂತ  ಶ್ರೀರಾಮ ಪದದೆ ನಿಂತ 

ಅದನಕೂಟದೊಡನೆ ಕೂಡಿ ಕೆರಳಿ ಬಂದ ಸಾಗರತೀ
ಕಡಲ ಒಡಲೇ ನಡುಗುವಂತೆ ಕಟ್ಟಿಸಿದ ವಾರಧೀ 
ಅಣ್ಣಾ.. ಬೀಡು ಸೀತೆಯನ್ನ ಎಂದಾ ವಿಭೀಷಣನೂ
ಕಣ್ಣುಕಿವಿಯ ಕಾರುತ ಅವನ ತಲೆಗೆ ಒದದ ರಾವಣನು 
ರಾಮ ನಾಮ ನಂಬಿ ನೆನೆದು ಶರಣು ಬಂದ ವಿಭೀಷಣನು
ಪ್ರೇಮದಿಂದ ಹರಿಸಿ ಕರೆದ ಹೃದಯಸಾಕ್ಷಿ ರಘುವರನು
ಶ್ರೀ ರಾಮಾಯಣ ಕಾವ್ಯಸುಧೆ ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ

ರಾಮರಾವಣ ಸಮರದೊಳಾದ ರಾವಣನ ಅಳಿಯೇ ಸಂಶಯವಾಯ್ತು
ಜೀವರಹಸ್ಯದ ಜಾಡನು ತಿಳಿದ ರೋಷದಿ ಹೊಡೆದ ರಾಮಬಾಣ
ಹೃದಯದಾಸುಧಾ ಕಲಶವೇ ಒಡೆದು ಆಯಿತು ರಾವಣ ಸಂಹಾರ

ಅತೀ ಪುನೀತೆ ಈ ಅವನಿಜಾತೆ ಎಂದು ಘೋಷಿಸಿತು ಅಗ್ನಿಸಾಕ್ಷಿ
ಪ್ರಜರನು ಅಜರನು ಪರಿಪಾಲಿಸಲು ಅಯೋಧ್ಯೆಗೆ ಬಂದ ಸತ್ಯಸಾಕ್ಷಿ
ಸೀತಾರಾಮನು ಸೋದರರ ಒಡನಾಡಿ ಸಾಮ್ರಾಜ್ಯವಾಳಿದ ಆತ್ಮಸಾಕ್ಷಿ
ಶ್ರೀ ರಾಮಾಯಣ ಕಾವ್ಯಸುಧೆ ಶಿವನುತ ತಾರಕ ಮಂತ್ರವಿದೆ           
ಶ್ರೀ ರಾಮಾಯಣ ಕಾವ್ಯಸುಧೆ
----------------------------------------------------------------------------------------------------------------------    







No comments:

Post a Comment