878. ತಾಯಿ ಇಲ್ಲದ ತವರು (೧೯೯೫)


ತಾಯಿ ಇಲ್ಲದ ತವರು ಚಲನಚಿತ್ರದ ಹಾಡುಗಳು 
  1. ತಾಯಿ ಇಲ್ಲ ತವರು ಇಲ್ಲ
  2. ಅರಿಶಿನ ಕುಂಕುಮ ಭಾಗ್ಯದ ಸಂಗಮ
  3. ಪ್ರೇಮಗಂಗಾ ಅಂತರಂಗ
  4. ಕೂಕೂಕೂಕೂ ಕೋಗಿಲೇ 
  5. ಮಂದಾರ ಮಂದಾರ 
ತಾಯಿ ಇಲ್ಲದ ತವರು (೧೯೯೫) - ತಾಯಿ ಇಲ್ಲ ತವರು ಇಲ್ಲ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,  ಗಾಯನ : ಎಸ.ಜಾನಕಿ

ತಾಯಿ ಇಲ್ಲ ತವರು ಇಲ್ಲ ತಂದೆ ಇಲ್ಲ ಬಳಗ ಇಲ್ಲ
ತಾಯಿ ಇಲ್ಲದ ತಬ್ಬಲಿ ನಾ ತಂದೆ ಇಲ್ಲ ತಬ್ಬಲಿ ನಾ
ತಬ್ಬಲಿ ತಾಪವ ನಾ ಹೇಗೆ ತಾಳಲಿ ನನ್ನೊರಂತ ಯಾರು ಇಲ್ಲ 
ತಾಯಿ ಇಲ್ಲ ತವರು ಇಲ್ಲ ತಂದೆ ಇಲ್ಲ ಬಳಗ ಇಲ್ಲ
ನನ್ನೊರಂತ ಯಾರು ಇಲ್ಲ 

ಕೊರಳಲಿ ತಾಳಿಯ ಬಂಧ ಹೆಣ್ಣಿಗಾನಂದ ನೋಡು ಚೆಂದ
ತಾಳಿ ಒಲವೇ ತುಂಬಾ ಬಾಳು ತಾಳಿ ಒಲುವೆ ಬಾಳಿಗೊಂದು
ಹಣೆ ಮೇಲಿನ ಈ ಕುಂಕುಮ ಅದೃಷ್ಟವ ಆಳಿಸಿದರೆ ಗತಿ ಏನು  ಗತಿ ಏನು
ಗತಿ ಕಾಣದೆ ಮಂಕಾದಳು ಸೀತೆ
ತಾಯಿ ಇಲ್ಲ ತವರು ಇಲ್ಲ ತಂದೆ ಇಲ್ಲ ಬಳಗ ಇಲ್ಲ
ನನ್ನೊರಂತ ಯಾರು ಇಲ್ಲ

ಯಾರಿಗೂ ಬೇಡಾದ ಜೀವ ಭೂಮಿಗೇಕೆ ಬಾಳಿಗೇಕೆ
ಅನ್ನ ನೀರು ಗಂಡ ಬೇಕೇ ಭಾವವಿರದ ಗಂಡನೇಕೆ
ಕಣ್ಣಿರಲಿ ಕೈತೊಳೆಯುವಾ ಸೌಭಾಗ್ಯವೂ ಬೇಕೇ
ಕೊನೆಯಲೀ... ಕೊನೆಯಲೀ... ಕಣ್ಣೀರಿಗೆ ಕಂಡೋರೆಯೇ ಮುಕ್ತಿ..
ತಾಯಿ ಇಲ್ಲ ತವರು ಇಲ್ಲ ತಂದೆ ಇಲ್ಲ ಬಳಗ ಇಲ್ಲ
ತಾಯಿ ಇಲ್ಲದ ತಬ್ಬಲಿ ನಾ ತಂದೆ ಇಲ್ಲ ತಬ್ಬಲಿ ನಾ
ತಬ್ಬಲಿ ತಾಪವ ನಾ ಹೇಗೆ ತಾಳಲಿ ನನ್ನೊರಂತ ಯಾರು ಇಲ್ಲ
ತಾಯಿ ಇಲ್ಲ ತವರು ಇಲ್ಲ ತಂದೆ ಇಲ್ಲ ಬಳಗ ಇಲ್ಲ
ನನ್ನೊರಂತ ಯಾರು ಇಲ್ಲ
--------------------------------------------------------------------------------------------------------------------------

ತಾಯಿ ಇಲ್ಲದ ತವರು (೧೯೯೫) - ಅರಿಶಿನ ಕುಂಕುಮ ಭಾಗ್ಯದ ಸಂಗಮ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಡಾ।। ರಾಜಕುಮಾರ

ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯ ನಾರಿ ತಾನು ಬಯಸುವ ಮಹಾ ಸಂಭ್ರಮ

ಹಣೆಯ ಕುಂಕುಮವು ಹರಣ ಹಣೆಗಣ್ಣು
ಅರಿಶಿನ ದಾರ ನಮ್ಮ ಆಚಾರ
ಧರಿಸಿ ಬಳೆಯಲಿ ಬಾಳ ನಗಿಸಿ
ವರಿಸಿ ಹೂವಲಿ ಮನವ ಸುಖಿಸಿ
ಜೀವ ಸವೆಸುವಳು ಸಾವಿನಾಚೆಯ ನಾರಿ ತಾನು
ಬಯಸುವ ಮಹಾ ಸಂಭ್ರಮ
ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯ ನಾರಿ ತಾನು ಬಯಸುವ ಮಹಾ ಸಂಭ್ರಮ

ಹಣೆಯ ಅಳಿಸಿದರೆ ಅಚಲವಾಗುವಳು 
ತಾಳಿ ತೆಗೆಸಿದರೆ ತಾಳಿ ಬಾಳುವಳು 
ಹಣೆಯ ಬರಹವ ಅಳಿಸಬಲ್ಲ 
ಶಕುತಿ ಇಲ್ಲದ ಜಗವನೆಲ್ಲ ನಗುತ ನೋಡುವಳು 
ಸಾವಿನಾಚೆಯ ನಾರಿ ತಾನು ಬಯಸುವ ಮಹಾ ಸಂಭ್ರಮ 
ಅರಿಶಿನ ಕುಂಕುಮ ಭಾಗ್ಯದ ಸಂಗಮ
ಅರಿಶಿನ ಕುಂಕುಮ ಪುಣ್ಯದ ಸಂಗಮ
ಸಾವಿನಾಚೆಯ ನಾರಿ ತಾನು ಬಯಸುವ ಮಹಾ ಸಂಭ್ರಮ 
------------------------------------------------------------------------------------------------------------------------

ತಾಯಿ ಇಲ್ಲದ ತವರು (೧೯೯೫) - ಪ್ರೇಮಗಂಗಾ ಅಂತರಂಗ
ಸಂಗೀತ ಮತ್ತು ಸಾಹಿತ್ಯ  : ಹಂಸಲೇಖ,  ಗಾಯನ : ರಾಜೇಶ,  ಚಿತ್ರಾ 

ಪ್ರೇಮಗಂಗಾ ಅಂತರಂಗ
ಪ್ರೇಮಗಂಗಾ ಅಂತರಂಗ ಭಾವ ಸಂಧಾನ ಸಂಪೂರ್ಣ ಈಗ
ಚಂದನ ಚಂದನ ಚೆಂದ ಚೆಂದಾದ ಬಾಳೆಲ್ಲ ನಂದನ

ತಂದನ ತಂದ ತಂದನ ತಂದ ತಂದನ ತಂದ
ಹಗಲು ಇರುಳು ನನ್ನ ನೆರಳು ನೀನಾಗಿರೆ ನಿನ್ನ ನೆನಪಾಗಿರೇ
ವಿರಹ ವಿರಹ ಎನುವ ಹೃದಯ ಮೀನಾಗಿದೆ ಮೀನು ದೂರಾಗಿದೆ
ಓ.. ಜೀವನ ಬಂಧು ನಿನ್ನಾ ಬಿಡೆನಾ
ಓ.. ಪ್ರೇಮದ ಸಿಂಧು ನಿನ್ನ ಜೊತೆನಾ
ಪ್ರೇಮಗಂಗಾ ಅಂತರಂಗ 
ಪ್ರೇಮಗಂಗಾ ಅಂತರಂಗ
ಭಾವ ಸಂಧಾನ ಸಂಪೂರ್ಣ ಈಗ
ಚಂದನ ಚಂದನ ಚೆಂದ ಚೆಂದಾದ ಬಾಳೆಲ್ಲ ನಂದನ 

ಮುರಳಿಗಾನ ವೀಣಾ ತಾನ 
ನೀನಾಗಿರೆ ನಿನ್ನ ಮಾತಾಗಿರೆ 
ಗಂಗಾ ತುಂಗಾ ಭದ್ರಾ ಕಪಿಲ 
ನೀನಾಗಿರೆ ನಿನ್ನ ಹಾಡಾಗಿರೆ 
ಓ.. ಸಾಗರ ಮನದೇ ನಿನ್ನ ನವೀನ 
ಓ.. ಭೂಮಿಯ ಮೊಗವೆ ನಿನ್ನ ರವೀನಾ 
ಪ್ರೇಮಗಂಗಾ ಅಂತರಂಗ
ಪ್ರೇಮಗಂಗಾ ಅಂತರಂಗ
ಭಾವ ಸಂಧಾನ ಸಂಪೂರ್ಣ ಈಗ
ಚಂದನ ಚಂದನ ಚೆಂದ ಚೆಂದಾದ ಬಾಳೆಲ್ಲ ನಂದನ 
-------------------------------------------------------------------------------------------------

ತಾಯಿ ಇಲ್ಲದ ತವರು (೧೯೯೫) - ಕೂಕೂಕೂಕೂ ಕೋಗಿಲೇ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,  ಗಾಯನ : ಚಿತ್ರಾ 

-------------------------------------------------------------------------------------------------

ತಾಯಿ ಇಲ್ಲದ ತವರು (೧೯೯೫) - ಮಂದಾರ ಮಂದಾರ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ,  ಗಾಯನ : ರಾಜೇಶ, ಲತಾ ಹಂಸಲೇಖ  

-------------------------------------------------------------------------------------------------

No comments:

Post a Comment