882. ನಿರೀಕ್ಷೆ (೧೯೭೫)

ನಿರೀಕ್ಷೆ ಚಿತ್ರದ ಹಾಡುಗಳು 
  1. ಹಾರೈಕೆಯ ಪೂರೈಸೆಯಾ ಕಳವಳ 
  2. ಅರಿಷಿಣ ಯೋಗ ಕುಂಕುಮ ಯೋಗ 
  3. ಬಾಳಿನ ಗುರಿಯ ಸೇರುವ ಪರಿಯ ವರಬಲ ಕೌಶಲ ನನಗಿಲ್ಲ 
  4. ಮಾಣಿಕ್ಯದ ಮಣಿ ಮಾಲೆಯೊಳು 
  5. ಹಾರೈಕೆಯ ಪೂರೈಸೆಯಾ ಕಳವಳ 
 ನಿರೀಕ್ಷೆ (೧೯೭೫) - ಹಾರೈಕೆಯ ಪೂರೈಸೆಯಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಮತ್ತು ಕು.ರಾ.ಸಿ ಗಾಯನ : ಜಿ.ಕೆ.ವೆಂಕಟೇಶ 

ಹಾರೈಕೆಯಾ... ಪೂರೈಸೆಯಾ..  ಕಳವಳ ಕಣ್ಣೀರೊಂದಡೆ
ಒಲವಿನ ಸೊಗಸೀನ್ನೊಂದೆಡೆ ನಡುವೆ ಬೇಲಿ ಏಕೆ...  ಓ ದೇವರೇ....
ಧರೆ ಸಾವಿರ ಹೂಗಳ ತೋಟ ಹಿರಿಯಾಸೆಯ ಹಲಬಗೆ ಕೂಟ
ಧರೆ ಸಾವಿರ ಹೂಗಳ ತೋಟ ಹಿರಿಯಾಸೆಯ ಹಲಬಗೆ ಕೂಟ
ಪ್ರತಿ ದಿನವೂ ಸುಖದ ನಿರೀಕ್ಷೆ ಫಲ ದೊರೆವುದು ಸತ್ವ ಪರೀಕ್ಷೆ
ಹಾರೈಕೆಯ....  ಪೂರೈಸೆಯಾ...

ಮಾತು : ನಾಟ್ಯವಾಡದ ನವಿಲು ಇಂಪಿಲ್ಲದ ಗಾನ ಅರಳಲಾರದ ಮೊಗ್ಗು
           ಮಳೆ ತರಲಾರದ ಮೋಡ ವೀಣೆಯುಂಟು ತಂತಿಯಿಲ್ಲ
           ಗುಡಿಯುಂಟು ದೇವರಿಲ್ಲ ಯಾರಿಟ್ಟ ಶಾಪ ಯಾರಿಗೆ ಲಾಭ

ಕಮಲವ ಕವಿಯುವ ಭ್ರಮರದ ಚೆಲುವು ಅರಳಿಗೆ ಕೆರಳಿದ ಒಲವು
ಅಂಗನೆಯರ ಮುಖ ಅರಳುವ ಯೋಗ ಕಾಲದ ಕಣ್ಣ ತೆರೆದಾಗ
 ಸಮಯ ಸಂದು ಋತು ಸರಿದು ಬರುವುದಕೆ
ದೈವದ  ದಯೆ ಬೇಕು ಕರುಣೆಯ ವರ ಬೇಕು
ತೆಂಗಿನ ಮರಕೆ ತಂಬೆಲರೆದರೆ ಕಾಲದ ಬಲಬೇಕು ಯೋಗದ ಫಲಬೇಕು
ಹಾರೈಕೆಯಾ ....  ಪೂರೈಸೆಯಾ...
ಧರೆ ಸಾವಿರ ಹೂಗಳ ತೋಟ ಹಿರಿಯಾಸೆಯ ಹಲಬಗೆ ಕೂಟ

ಮಾತು : ಯೌವ್ವನವೆಂಬುದು ಅಡಗದ ಮೋಹ ಅರಿವಿಗೆ ಅಂಟಿದ ರೋಗ
              ಆನಂದದ ಮೃತ್ಯು ಶೈಯ್ಯೇ..    (ಭವತಿ ಭಿಕ್ಷಾಂದೇಹಿ )
 
ಯೌವ್ವನದಲಿ ಸನ್ಯಾಸದ ಯೋಗ ದೊರೆವುದು ಪೊರೆವನ ಕುಹಕ
ಹರೆಯದ ಹೆಣ್ಣು ಅರುಳುವ ತನಕ ಅಳಿಯದು ತಾಳಿಯ ತವಕ
ತಾಯ್ ಹೃದಯ ಅತಿ ಚಂಚಲವಾಗಿದೆ ನೊಂದಿದೆ ಮುಖ ಕಾಂತಿ...
ನಂದಿದೆ ಸುಖ ಶಾಂತಿ
ಮಗಳ ಮದುವೇಯ ಮಂಗಳ ಕಾಣದೆ ತಾಯ್ತನ ಬರಲಿಲ್ಲ...
ತಳಮಳ ಹರಿದಿಲ್ಲ
ಹಾರೈಕೆಯ....  ಪೂರೈಸೆಯಾ...
ಧರೆ ಸಾವಿರ ಹೂಗಳ ತೋಟ ಹಿರಿಯಾಸೆಯ ಹಲಬಗೆ ಕೂಟ
ಪ್ರತಿ ದಿನವೂ ಸುಖದ ನಿರೀಕ್ಷೆ ಫಲ ದೊರೆವುದು ಸತ್ವ ಪರೀಕ್ಷೆ
ಹಾರೈಕೆಯ....  ಪೂರೈಸೆಯಾ...
----------------------------------------------------------------------------------------------------------------------

ನಿರೀಕ್ಷೆ (೧೯೭೫)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಮತ್ತು ಕು.ರಾ.ಸಿ ಗಾಯನ : ಎಸ.ಜಾನಕಿ 

ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ ಈ ಮುಗುಳೊಮ್ಮೆ ಬೀರಿದಾಗ
ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ ಈ ಮುಗುಳೊಮ್ಮೆ ಬೀರಿದಾಗ
ಅರಿಶಿನ ಯೋಗ ಕುಂಕುಮ ಯೋಗ 

ಹೃದೆಯೇಶ್ವನಿಗೆ ಮಲ್ಲಿಗೆ ಮಾಲೆ ನಿರ್ಮಲ ಮನದಿ ಸಲ್ಲಿಪೆ ನಿಲ್ಲೆ
ಹೃದೆಯೇಶ್ವನಿಗೆ ಮಲ್ಲಿಗೆ ಮಾಲೆ ನಿರ್ಮಲ ಮನದಿ ಸಲ್ಲಿಪೆ ನಿಲ್ಲೆ
ಬೇರೆಡೆ ನಿಂತ ಚೆಲುವಿನ ರಂಭೆ... ...
ಬೇರೆಡೆ ನಿಂತ ಚೆಲುವಿನ ರಂಭೆ... ... ಆದಳೇ ವಿಧಿಯ ಆಟದ ಬೋಂಬೆ
ಅರಿಶಿನ ಯೋಗ ಕುಂಕುಮ ಯೋಗ

ಆ ಮುಖ ಈ ಮುಖ ಉತ್ತರ ದಕ್ಷಿಣ ಹಾರೈಸಿದ ಸುಖ ಬರಿಯ ನಿರೀಕ್ಷಣ
ಆ ಮುಖ ಈ ಮುಖ ಉತ್ತರ ದಕ್ಷಿಣ ಹಾರೈಸಿದ ಸುಖ ಬರಿಯ ನಿರೀಕ್ಷಣ
ಕಂಗಳ ತೆರೆಯೇ ಕಂಬನಿ ಕೋಡಿ..... ಮನಗಳು ಅರಳೆ ಕಂಪನ ಕೋಟಿ
ಅರಿಶಿನ ಯೋಗ ಕುಂಕುಮ ಯೋಗ 

ದುಂಬಿಯು ಸೋಂಕದ ಮೊಲ್ಲೆಗಳೆರಡು ಅರಳಿದ ಒಂದು ಅರಳದ ಒಂದು
ದುಂಬಿಯು ಸೋಂಕದ ಮೊಲ್ಲೆಗಳೆರಡು ಅರಳಿದ ಒಂದು ಅರಳದ ಒಂದು
ಇಲ್ಲಿಯ ತುಂಬಿ ಇರಲೇ .... ಇಲ್ಲ...
ಇಲ್ಲಿಯ ತುಂಬಿ ಇರಲೇ ಇಲ್ಲ... ಅಲ್ಲಿಯ ತುಂಬಿ ಇದ್ದೂ ಇಲ್ಲ
ಅರಿಶಿನ ಯೋಗ ಕುಂಕುಮ ಯೋಗ
ಪತಿಯನುರಾಗ ಪ್ರೇಮ ಪರಾಗ ಈ ಮುಗುಳೊಮ್ಮೆ ಬೀರಿದಾಗ
ಅರಿಶಿನ ಯೋಗ ಕುಂಕುಮ ಯೋಗ 
--------------------------------------------------------------------------------------------------------------------------

ನಿರೀಕ್ಷೆ (೧೯೭೫) - ಬಾಳಿನ ಗುರಿಯ ಸೇರುವ ಪರಿಯ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಮತ್ತು ಕು.ರಾ.ಸಿ ಗಾಯನ : ಕೆ.ಜೆ.ಏಸುದಾಸ್

ಬಾಳಿನ ಗುರಿಯ ಸೇರುವ ಪರಿಯ ವರಬಲ ಕೌಶಲ ನನಗಿಲ್ಲ 
ಆಸೆಗಳೆಲ್ಲ ಈಡೇರಿದರೇ ಈಶನ ಗೋಜೇ ಬೇಕಿಲ್ಲ
ಬಾಳಿನ ಗುರಿಯ ಸೇರುವ ಪರಿಯ ವರಬಲ ಕೌಶಲ ನನಗಿಲ್ಲ 
ಆಸೆಗಳೆಲ್ಲ ಈಡೇರಿದರೇ ಈಶನ ಗೋಜೇ ಬೇಕಿಲ್ಲ 
ಬಾಳಿನ ಗುರಿಯ ಸೇರುವ ಪರಿಯ 

ಮೇಳ ಹೂಡಿದೆ ಹಾಡಿದೆ ಶೃತಿಯೇ ಸೇರಿಲ್ಲ 
ಮಾಲೆ ಹಾಕಿಯೂ ಮದುವೆಯಾಗಿಯೂ ಇನಿಸೇ ಕಂಡಿಲ್ಲ 
ಮೇಳ ಹೂಡಿದೆ ಹಾಡಿದೆ ಶೃತಿಯೇ ಸೇರಿಲ್ಲ 
ಮಾಲೆ ಹಾಕಿಯೂ ಮದುವೆಯಾಗಿಯೂ ಇನಿಸೇ ಕಂಡಿಲ್ಲ 
ಹೂವಾಗಿ ನೀ ಮಧುವನು ಬೀರು ಬೀರು 
ಮುಗುಳಾಗಿರೆ ಜೀವನ ಏರು ಪೇರು ಈ ವಿಧ ಬಾಳು ತೀರದ ಗೋಳು 
ಬಾಳಿನ ಗುರಿಯ ಸೇರುವ ಪರಿಯ ವರಬಲ ಕೌಶಲ ನನಗಿಲ್ಲ 
ಆಸೆಗಳೆಲ್ಲ ಈಡೇರಿದರೇ ಈಶನ ಗೋಜೇ ಬೇಕಿಲ್ಲ 
ಬಾಳಿನ ಗುರಿಯ ಸೇರುವ ಪರಿಯ 

ಮಣಿದು ಬೇಡಿದೆ ಕಾಡಿದೆ ದೈವ ಕೃಪೆಗಾಗಿ 
ವಿಧಿಯ ಬರಹವ ಅಳಿಸ ಬಲ್ಲವ ಎಂದೂ ನಾನಲ್ಲ 
ಮಣಿದು ಬೇಡಿದೆ ಕಾಡಿದೆ ದೈವ ಕೃಪೆಗಾಗಿ 
ವಿಧಿಯ ಬರಹವ ಅಳಿಸ ಬಲ್ಲವ ಎಂದೂ ನಾನಲ್ಲ 
ನಿಟ್ಟುಸಿರ ನಾ ಕರೆಯುತ ನೊಂದೇ ನೊಂದೇ 
ವಿರಹಾನಲ ಕವಿದಿದೆ ಬೆಂದೆ ಬೆಂದೆ 
ಕಳದೀ ಬೇಗೆ ನಲಿವುದು ಹೇಗೆ 
ಬಾಳಿನ ಗುರಿಯ ಸೇರುವ ಪರಿಯ ವರಬಲ ಕೌಶಲ ನನಗಿಲ್ಲ 
ಆಸೆಗಳೆಲ್ಲ ಈಡೇರಿದರೇ ಈಶನ ಗೋಜೇ ಬೇಕಿಲ್ಲ 
ಬಾಳಿನ ಗುರಿಯ ಸೇರುವ ಪರಿಯ 
--------------------------------------------------------------------------------------------------------------------------

ನಿರೀಕ್ಷೆ (೧೯೭೫) - ಮಾಣಿಕ್ಯದಾ ಮಣಿ ಮಾಲೆಯೊಳು
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಮತ್ತು ಕು.ರಾ.ಸಿ ಗಾಯನ : ಎಸ.ಪಿ.ಬಿ.ಎಸ್.ಜಾನಕೀ 

ಗಂಡು : ಮಾಣಿಕ್ಯದ ಮಣಿ ಮಾಲೆಯೊಳು ಬಂಗಾರದ ಸಿಂಗಾರಿಯಾ ನಾ ಕಂಡೆನು
            ಮಾಣಿಕ್ಯದ ಮಣಿ ಮಾಲೆಯೊಳು ಬಂಗಾರದ ಸಿಂಗಾರಿಯಾ ನಾ ಕಂಡೆನು
            ಮಾಣಿಕ್ಯದ ಮಣಿ ಮಾಲೆಯೊಳು

ಗಂಡು : ಆ... ಚೆಲುವೇ ನಗುವಾಗ ನೂರು ಕನಸು ನಡೆವಾಗ ಏನೂ ಸೊಗಸು
           ನುಡಿದಾಗ ಸೋತು ಮನಸು ಸೊಗಸೋ... ಕನಸೋ... ನನಸೋ
            ಮಾಣಿಕ್ಯದ ಮಣಿ ಮಾಲೆಯೊಳು ಬಂಗಾರದ ಸಿಂಗಾರಿಯಾ ನಾ ಕಂಡೆನು
            ಮಾಣಿಕ್ಯದ ಮಣಿ ಮಾಲೆಯೊಳು

ಹೆಣ್ಣು : ಆ...  ಮೊಗದಿ ನಾ ನೂರು ಜ್ಯೋತಿ ಕಂಡೆ ಪಾಪ ಲೋಕವಲ್ಲ
          ಇದು ಪ್ರೇಮಲೋಕ ತಾನೇ ದೇವ... ನೀನೇ ... ಹೇಳು 
          ಮಾಣಿಕ್ಯದ ಮಣಿ ಮಾಲೆಯೊಳು ನನ್ನಾಸೆಯ ಸಂಗಾತಿಯ ನಾ ಕಂಡೆನು
          ಮಾಣಿಕ್ಯದ ಮಣಿ ಮಾಲೆಯೊಳು

ಗಂಡು :  ನಾ ದಿನವೂ ಈ ಸಂಜೆಯಲ್ಲಿ ಬರುವೆ 
ಹೆಣ್ಣು :   ನಾ ನಿನಗೆ ಜೊತೆಯಾಗಿ ಸೇರಿಕೊಳ್ಳುವೇ 
ಗಂಡು :  ತಂಗಾಳಿಯಂತೇ ಬರುವೆ ಹೀತವಾಗಿ ನಿನ್ನ ಬೆರೆವೆ 
ಹೆಣ್ಣು :  ನನ್ನನ್ನೇ ನಿನಗೆ ಕೊಡುವೇ ನೀನಾಗ ಎಲ್ಲ ಮೆರೆವೆ 
ಗಂಡು :  ಮುಂದೆ  (ಎಂದೂ) ... ಸುಖವೇ 
--------------------------------------------------------------------------------------------------------------------------

 ನಿರೀಕ್ಷೆ (೧೯೭೫) - ಹಾರೈಕೆಯ ಪೂರೈಸೆಯಾ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಚಿ.ಉದಯಶಂಕರ ಮತ್ತು ಕು.ರಾ.ಸಿ ಗಾಯನ : ಜಿ.ಕೆ.ವೆಂಕಟೇಶ 

ಹಾರೈಕೆಯಾ... ಪೂರೈಸೆಯಾ..  ಕಳವಳ ಕಣ್ಣೀರೊಂದಡೆ
ಒಲವಿನ ಸೊಗಸೀನ್ನೊಂದೆಡೆ ನಡುವೆ ಬೇಲಿ ಏಕೆ...  ಓ ದೇವರೇ....
ಧರೆ ಸಾವಿರ ಹೂಗಳ ತೋಟ ಹಿರಿಯಾಸೆಯ ಹಲಬಗೆ ಕೂಟ
ಧರೆ ಸಾವಿರ ಹೂಗಳ ತೋಟ ಹಿರಿಯಾಸೆಯ ಹಲಬಗೆ ಕೂಟ
ಪ್ರತಿ ದಿನವೂ ಸುಖದ ನಿರೀಕ್ಷೆ ಫಲ ದೊರೆವುದು ಸತ್ವ ಪರೀಕ್ಷೆ
ಹಾರೈಕೆಯ....  ಪೂರೈಸೆಯಾ...

ಮಾತು : ನಾಟ್ಯವಾಡದ ನವಿಲು ಇಂಪಿಲ್ಲದ ಗಾನ ಅರಳಲಾರದ ಮೊಗ್ಗು
           ಮಳೆ ತರಲಾರದ ಮೋಡ ವೀಣೆಯುಂಟು ತಂತಿಯಿಲ್ಲ
           ಗುಡಿಯುಂಟು ದೇವರಿಲ್ಲ ಯಾರಿಟ್ಟ ಶಾಪ ಯಾರಿಗೆ ಲಾಭ

ಕಮಲವ ಕವಿಯುವ ಭ್ರಮರದ ಚೆಲುವು ಅರಳಿಗೆ ಕೆರಳಿದ ಒಲವು
ಅಂಗನೆಯರ ಮುಖ ಅರಳುವ ಯೋಗ ಕಾಲದ ಕಣ್ಣ ತೆರೆದಾಗ
 ಸಮಯ ಸಂದು ಋತು ಸರಿದು ಬರುವುದಕೆ
ದೈವದ  ದಯೆ ಬೇಕು ಕರುಣೆಯ ವರ ಬೇಕು
ತೆಂಗಿನ ಮರಕೆ ತಂಬೆಲರೆದರೆ ಕಾಲದ ಬಲಬೇಕು ಯೋಗದ ಫಲಬೇಕು
ಹಾರೈಕೆಯಾ ....  ಪೂರೈಸೆಯಾ...
ಧರೆ ಸಾವಿರ ಹೂಗಳ ತೋಟ ಹಿರಿಯಾಸೆಯ ಹಲಬಗೆ ಕೂಟ

ಮಾತು : ಯೌವ್ವನವೆಂಬುದು ಅಡಗದ ಮೋಹ ಅರಿವಿಗೆ ಅಂಟಿದ ರೋಗ
              ಆನಂದದ ಮೃತ್ಯು ಶೈಯ್ಯೇ..

ಯೌವ್ವನದಲಿ ಸನ್ಯಾಸದ ಯೋಗ ದೊರೆವುದು ಪೊರೆವನ ಕುಹಕ
ಹರೆಯದ ಹೆಣ್ಣು ಅರುಳುವ ತನಕ ಅಳಿಯದು ತಾಳಿಯ ತವಕ
ತಾಯ್ ಹೃದಯ ಅತಿ ಚಂಚಲವಾಗಿದೆ ನೊಂದಿದೆ ಮುಖ ಕಾಂತಿ...
ನಂದಿದೆ ಸುಖ ಶಾಂತಿ
ಮಗಳ ಮದುವೇಯ ಮಂಗಳ ಕಾಣದೆ ತಾಯ್ತನ ಬರಲಿಲ್ಲ...
ತಳಮಳ ಹರಿದಿಲ್ಲ
ಹಾರೈಕೆಯ....  ಪೂರೈಸೆಯಾ...
ಧರೆ ಸಾವಿರ ಹೂಗಳ ತೋಟ ಹಿರಿಯಾಸೆಯ ಹಲಬಗೆ ಕೂಟ
ಪ್ರತಿ ದಿನವೂ ಸುಖದ ನಿರೀಕ್ಷೆ ಫಲ ದೊರೆವುದು ಸತ್ವ ಪರೀಕ್ಷೆ
ಹಾರೈಕೆಯ....  ಪೂರೈಸೆಯಾ...
----------------------------------------------------------------------------------------------------------------------

No comments:

Post a Comment