883. ಆಯ್ ಲವ್ ಯು (೧೯೭೯)

ಆಯ್ ಲವ್ ಯೂ ಚಲನಚಿತ್ರದ ಹಾಡುಗಳು 
  1. ಹಿತಕಾದಿದೆಯೇ ಸನಿಹದಲಿ ನಾನು ಇರುತಿರಲು ಈ ಮೌನವು ಇದೇನು
  2. ಡಬ್ ಡಬ್ ಡಬ್ ಅಂತೂ ಅಬ್ಬಾ ನಂಗೆ ಈಗ
  3. ಯಾರು ಹೇಳಿದರೂ ಯಾರು ಕೇಳಿದರೂ ಮನುಷ್ಯನೇ ಅಲ್ಲವೇ 
  4. ನಿನ್ನಂಥ ಗಂಡುಗಳೆಷ್ಟು ಬಂದರೂ 
ಆಯ್ ಲವ್ ಯು (೧೯೭೯) - ಹಿತಕಾದಿದೆಯೇ ಸನಿಹದಲಿ ನಾನು ಇರುತಿರಲು ಈ ಮೌನವು ಇದೇನು
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ.ಜಾನಕಿ

ಹಿತವಾಗಿದಿಯೇ ಸನಿಹದಲಿ ನಾನು ಇರುತಿರಲು
ಈ ಮೌನವು ಇದೇನು ಆಯ್ ಲವ್ ಯು
ನಾನು ಬೇಡವೇ ಹೇಳು ಬಯಕೆಯೇ ಇಲ್ಲವೇ
ಹಿತವಾಗಿದಿಯೇ ಸನಿಹದಲಿ ನಾನು ಇರುತಿರಲು
ಈ ಮೌನವು ಇದೇನು ಆಯ್ ಲವ್ ಯು
ನಾನು ಬೇಡವೇ ಹೇಳು ಬಯಕೆಯೇ ಇಲ್ಲವೇ

ನೆನಪಿದೆಯೇ ನೀನಂದು ಬಳಿಸಾರಿ ನನ್ನ ಬಳುಸುತಲಿ
ತೋಳಿಂದ ಒಲವಿಂದ ನಿನ್ನ ಮನದಾಸೆ ನೂರಾರು ನೀ ಹೇಳಿದೆ
ಆ ಸಂಜೆಯ ಆಗಲೇ ಮರೆತೆಯಾ ನೀ
ಹಿತವಾಗಿದಿಯೇ ಸನಿಹದಲಿ ನಾನು ಇರುತಿರಲು
ಈ ಮೌನವು ಇದೇನು ಆಯ್ ಲವ್ ಯು
ಲಲಲ್ಲಲ್ಲಲಾ .. ಲಲಲ್ಲಲ್ಲಲಾ .. 

ತನುವಿನಲಿ ಬಿಸಿ ಏರಿ ಮನಸಿನಲಿ ಮತ್ತೇರಿ
ಮಿಂಚೊಂದು ಮೈಯ್ಯೆಲ್ಲಾ ಹರಿದಾಡಿದೆ
ಈ ಅನುಭವ ಅನುದಿನ ನೂತನ
ಹಿತವಾಗಿದಿಯೇ ಸನಿಹದಲಿ ನಾನು ಇರುತಿರಲು
ಈ ಮೌನವು ಇದೇನು ಆಯ್ ಲವ್ ಯು
ನಾನು ಬೇಡವೇ ಹೇಳು ಬಯಕೆಯೇ ಇಲ್ಲವೇ
ಹಿತವಾಗಿದಿಯೇ ಸನಿಹದಲಿ ನಾನು ಇರುತಿರಲು 
ಈ ಮೌನವು ಇದೇನು ಆಯ್ ಲವ್ ಯು
ಆಯ್ ಲವ್ ಯು ಆಯ್ ಲವ್ ಯು
--------------------------------------------------------------------------------------------------------------------------

ಆಯ್ ಲವ್ ಯು (೧೯೭೯) - ಡಬ್ ಡಬ್ ಡಬ್ ಅಂತೂ ಅಬ್ಬಾ ನಂಗೆ ಈಗ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ.ಪಿ.ಬಿ. 

ಡಬ್ ಡಬ್ ಡಬ್ ಅಂತೂ ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ  ಅಬ್ಬಾ ನಂಗೆ ಈಗ ಡಬ್ ಡಬ್ ಡಬ್ ಅಂತೂ

ಕೋಟಿಯ ಮನೆಯೊಳೇ ಕೋಗಿಲೆ ದನಿಯೊಳೆ
ನಿಂಬೆಯ ಹಣ್ಣಂಗೆ ತುಂಬಿದ ಮೈಯವಳೇ
ಇಬ್ಬರೇ ಇರುವಾಗ ತಬ್ಬಿದರೆ ನಿನ್ನ ಚಿನ್ನ ತಬ್ಬಿದರೆ ನಿನ್ನ
ಡಬ್ ಡಬ್ ಡಬ್ ಅಂತೂ ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ  ಅಬ್ಬಾ ನಂಗೆ ಈಗ ಡಬ್ ಡಬ್ ಡಬ್ ಅಂತೂ

ಓ..ರಬ್ಬಾ.. ಗೌಡರ ತೋಟದಾಗ  ಓ..ರಬ್ಬಾ... ಓಡೋಡಿ ಬಂದಾಗ 
ಅರೆರೆ ಆಯಾಸ ಕಂಡಾಗ ಅಯ್ಯೋ ಏದುಸಿರು ಬಂದಾಗ 
ಹೊಂಗೆ ಮರದಡಿಯಾಗೆ ಮೈ ಮೈ ಮಾಸದಾಗ 
ಡಬ್ ಡಬ್ ಡಬ್ ಅಂತೂ ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ  ಅಬ್ಬಾ ನಂಗೆ ಈಗ ಡಬ್ ಡಬ್ ಡಬ್ ಅಂತೂ 

ಹುಯ್ಯ್.. ನಡೆಯುವಾಗ ನಡುವು ಸಣ್ಣ, ಪದ್ಮ ಜಾತಿ ಹೆಣ್ಣೇ ನಿನ್ನ 
ನೋಟ ಚೆನ್ನ ಆಟ ಚೆನ್ನ ಮೈಮಾಟ ಇನ್ನೂ ಚೆನ್ನಾ 
ಯಾರೊಬ್ಬರೂ ಕಾಣದಂತೆ ಮುತ್ತಿಡುವೆ ಚಿನ್ನಾ... 
ಡಬ್ ಡಬ್ ಡಬ್ ಅಂತೂ ಅಬ್ಬಾ ನಂಗೆ ಈಗ
ಸುಬ್ಬಿ ನಿನ ಕಂಡಾಗ  ಅಬ್ಬಾ ನಂಗೆ ಈಗ ಡಬ್ ಡಬ್ ಡಬ್ ಅಂತೂ 
------------------------------------------------------------------------------------------------------------------------

ಆಯ್ ಲವ್ ಯು (೧೯೭೯) - ಯಾರು ಹೇಳಿದರೂ ಯಾರು ಕೇಳಿದರೂ ಮನುಷ್ಯನೇ ಅಲ್ಲವೇ 
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ.ಪಿ.ಬಿ. 

ಯಾರು ಹೇಳಿದರೂ ಯಾರು ಕೇಳಿದರೂ ಮನುಷ್ಯನೇ ಅಲ್ಲವೇ 
ಆಸೇ ಇಲ್ಲವೇ ಅಭಿಲಾಷೆ ಇಲ್ಲವೇ ರೋಷಾ ಇಲ್ಲವೇ ಆಕ್ರೋಶ ಇಲ್ಲವೇ 
ಯಾರು ಹೇಳಿದರೂ ಯಾರು ಕೇಳಿದರೂ ಮನುಷ್ಯನೇ ಅಲ್ಲವೇ 

ನನ್ನ ಮನದೊಳಿದ್ದ ಆ ಮೃಗವನ್ನೇ ನಾ ಕೊಂದು ಕೊಂಡೇ
ನನ್ನೇ ಮೃಗವ ಮಾಡಿ ನೀ.. ಬೇಟೆಯಾ ಆಡಿದೇ ...
ನನ್ನ ಮನದೊಳಿದ್ದ ಆ ಮೃಗವನ್ನೇ ನಾ ಕೊಂದು ಕೊಂಡೇ
ನನ್ನೇ ಮೃಗವ ಮಾಡಿ ನೀ.. ಬೇಟೆಯಾ ಆಡಿದೇ ...
ಏತಕು  ಸೋಲೇನು ನಾನು ಓ.. ಹೆಣ್ಣೇ ಬಲ್ಲೆಯಾ...
ಹಠ ಮಾಡಿದರೇ ದಿಟವಾಗಿಯೂ ನಾ ಹುಲಿಯಂತೆ ಬಲ್ಲೆಯಾ..
ಯಾರು ಹೇಳಿದರೂ ಯಾರು ಕೇಳಿದರೂ ಮನುಷ್ಯನೇ ಅಲ್ಲವೇ 
ಆಸೇ ಇಲ್ಲವೇ ಅಭಿಲಾಷೆ ಇಲ್ಲವೇ ರೋಷಾ ಇಲ್ಲವೇ ಆಕ್ರೋಶ ಇಲ್ಲವೇ 
ಯಾರು ಹೇಳಿದರೂ ಯಾರು ಕೇಳಿದರೂ ಮನುಷ್ಯನೇ ಅಲ್ಲವೇ 

ಪಾಪ ಪುಣ್ಯವೆಲ್ಲಾ ಕಸದಂತೆ ನೀ ದೂರ ತಳ್ಳು 
ಪ್ರೀತಿ ಪ್ರೇಮವೆಲ್ಲಾ ಕಡು ಮೂರ್ಖರ ನುಡಿಗಳು 
ಪಾಪ ಪುಣ್ಯವೆಲ್ಲಾ ಕಸದಂತೆ ನೀ ದೂರ ತಳ್ಳು 
ಪ್ರೀತಿ ಪ್ರೇಮವೆಲ್ಲಾ ಕಡು ಮೂರ್ಖರ ನುಡಿಗಳು 
ಆಸೆಯ ಬರಿಸುವುದೆಲ್ಲಾ ಎಂದೆಂದೂ ನಿನ್ನದು 
ಬೇಕೆನ್ನುವುದೋ ನೀ ಹೊಂದುವುದು ಸುಖವನ್ನೇ ತರುವುದು 
ಯಾರು ಹೇಳಿದರೂ ಯಾರು ಕೇಳಿದರೂ ಮನುಷ್ಯನೇ ಅಲ್ಲವೇ 
ಆಸೇ ಇಲ್ಲವೇ ಅಭಿಲಾಷೆ ಇಲ್ಲವೇ ರೋಷಾ ಇಲ್ಲವೇ ಆಕ್ರೋಶ ಇಲ್ಲವೇ 
ಯಾರು ಹೇಳಿದರೂ ಯಾರು ಕೇಳಿದರೂ ಮನುಷ್ಯನೇ ಅಲ್ಲವೇ 
--------------------------------------------------------------------------------------------------------------------------

ಆಯ್ ಲವ್ ಯು (೧೯೭೯) - ನಿನ್ನಂಥ ಗಂಡುಗಳೆಷ್ಟು ಬಂಧರೂ
ಸಂಗೀತ : ಸತ್ಯಂ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ.ಜಾನಕಿ

ಸಾಹಿತ್ಯ ಲಭ್ಯವಿರುವುದಿಲ್ಲ , ಕ್ಷಮಿಸಿರೀ 
--------------------------------------------------------------------------------------------------------------------------

No comments:

Post a Comment