884. ವಿಜಯ ವಿಕ್ರಮ (೧೯೭೯)


ವಿಜಯ ವಿಕ್ರಮ ಚಲನಚಿತ್ರದ ಹಾಡುಗಳು 
  1. ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು
  2. ಕಳ್ಳ ಕೃಷ್ಣ ಕುಳ್ಳ ಕುಳ್ಳ ಕೃಷ್ಣ ಮುದ್ದು ಕೃಷ್ಣನೇ
  3. ನೀ ಕುಣಿಯುತ ಓಡುವೇ .. 
  4. ಬೇಕೆನ್ನು ಬರುವೆನು 
  5. ಲತೆಯ ಬಾಡಿ ಬಾಡಿ 
ವಿಜಯ ವಿಕ್ರಮ (೧೯೭೯) - ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು
ಸಂಗೀತ : ಸತ್ಯಂ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಎಸ.ಪಿ.ಬಿ. ಎಸ.ಜಾನಕಿ

ಅಹಾ ಹಹಹ.. ಹೇಹೇ... ಆಹಾ ಆಹಾ.. ಆಹಾಹಾಹಾ...
ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು ಎದುರಲ್ಲೇ ಅಬ್ಬಬ್ಬಾ.. ನಿಲ್ಲದಿರು
ನೀ ಹೀಗೆ ನೋಡುತಿರೆ ಏನೇನೋ ನನಗಾಗುವುದು...
ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು ಎದುರಲ್ಲೇ ಅಬ್ಬಬ್ಬಾ.. ನಿಲ್ಲದಿರು
ನೀ ಹೀಗೆ ನೋಡುತಿರೆ ಏನೇನೋ ನನಗಾಗುವುದು...
ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು ಎದುರಲ್ಲೇ ಅಬ್ಬಬ್ಬಾ.. ನಿಲ್ಲದಿರು

ಗಂಡು : ಓ.. ನನ್ನ ಚಿನ್ನ ಈ ಹೊನ್ನ ಮೈ ಬಣ್ಣ ನಿನ್ನಾ ಈ ನವ ಯೌವ್ವನ... ಆಆಆ
            ಓ.. ನನ್ನ ಚಿನ್ನ ಈ ಹೊನ್ನ ಮೈ ಬಣ್ಣ ನಿನ್ನಾ ಈ ನವ ಯೌವ್ವನ
            ಮನಸ್ಸನ್ನು ಕೆಣಕದಿರಲು ಸುಮ್ಮನೇ ಹೇಗೆ ನಿಲ್ಲುವುದು.. 
           ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು  (ಅಹ್ ) ಎದುರಲ್ಲೇ ಅಬ್ಬಬ್ಬಾ.. ನಿಲ್ಲದಿರು (ಅಹ್ಹಹ )

ಹೆಣ್ಣು : ಸವಿ ಮಾತಿನಿಂದ ಈ ಅನುರಾಗದಿಂದ ನೀ ತಂದ ಆನಂದಕೆ
          ಸವಿ ಮಾತಿನಿಂದ ಈ ಅನುರಾಗದಿಂದ ನೀ ತಂದ ಆನಂದಕೆ
          ಆಸೆಗಳು ಮೂಡಿರಲು ದೂರಕೆ ಹೇಗೆ ಹೋಗುವುದು
          ಎಂದೆಂದೂ ಹೀಗೆ ಇರುವಾಸೆ ನನಗೆ ಬಿಡಬೇಡ ನೀ ನನ್ನನ್ನೂ
ಗಂಡು : ಇನ್ನೇನ್ನೂ ಹೇಳದಿರಿ ನನ್ನನ್ನು ಹೀಗೆ ನೋಡದಿರು 
          ಕಣ್ಣಲ್ಲೇ. (ಹಾಂ) . ಅಮ್ಮಮ್ಮ.. ಕೊಲ್ಲದಿರು ಎದುರಲ್ಲೇ ಅಬ್ಬಬ್ಬಾ.. ನಿಲ್ಲದಿರು
          ನೀ ಹೀಗೆ ನೋಡುತಿರೆ ಏನೇನೋ ನನಗಾಗುವುದು...
          ಕಣ್ಣಲ್ಲೇ.. ಅಮ್ಮಮ್ಮ.. ಕೊಲ್ಲದಿರು ಎದುರಲ್ಲೇ ಅಬ್ಬಬ್ಬಾ.. ನಿಲ್ಲದಿರು... ರು..ರು..
--------------------------------------------------------------------------------------------------------------------------

ವಿಜಯ ವಿಕ್ರಮ (೧೯೭೯) - ಕಳ್ಳ ಕೃಷ್ಣ ಕುಳ್ಳ ಕುಳ್ಳ ಕೃಷ್ಣ ಮುದ್ದು ಕೃಷ್ಣನೇ
ಸಂಗೀತ : ಸತ್ಯಂ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಎಸ.ಪಿ.ಬಿ. ಎಸ.ಜಾನಕಿ

ಹೆಣ್ಣು : ಕಳ್ಳ ಕೃಷ್ಣ ಕುಳ್ಳ ಕುಳ್ಳ ಕೃಷ್ಣ ಮುದ್ದು ಕೃಷ್ಣನೇ
          ರಾಧಾ ಕೃಷ್ಣ ರುಕ್ಮಿಣಿ ಕೃಷ್ಣ ಭಾಮಾ ಕೃಷ್ಣನೇ
          ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ
          ನಮ್ಮ ಉಡುಪಿ ಕೃಷ್ಣ ಕೊಳಲ ಕೃಷ್ಣ  ಗೋಪಾಲ ಕೃಷ್ಣ
         ಕಳ್ಳ ಕೃಷ್ಣ ಕುಳ್ಳ ಕುಳ್ಳ ಕೃಷ್ಣ ಮುದ್ದು ಕೃಷ್ಣನೇ
          ರಾಧಾ ಕೃಷ್ಣ ರುಕ್ಮಿಣಿ ಕೃಷ್ಣ ಭಾಮಾ ಕೃಷ್ಣನೇ
ಗಂಡು : ಬಾರೇ ಭಾಮಾ ಮುದ್ದು ಭಾಮ್ಮ ಬಾ ಅಮ್ಮ ಇಲ್ಲಿ
           ಭಾಗ ಮಡಕೆ ಮಾಡೋ ಮಾದಪ್ಪನ ಮಗಳೇ ಸತ್ಯಭಾಮ ಬಾ
           ನನಗಾಗೇ ಭೂಮಿಲಿ ಮತ್ತೆ ಹುಟ್ಟಿದಾ ನನ್ನ ಮಾವನ ಮಗಳೇ
          ಮಲ್ಲಿಗೆ ಅರಳೇಬೇಗ ಇಲ್ಲಿಗೇ

ಹೆಣ್ಣು : ಯುಮುನೆ ಇಲ್ಲಿ ಗೋಪಾಲ ತೋರಲಾರೆಯಾ
          ಗೋರ್ವಧನ ಗಿರಿಯಲ್ಲಿ ಹೇಳಲಾರೆಯಾ
ಗಂಡು : ಇಲ್ಲೇ ಹರಿವ ಯಮುನೆಯನ್ನು ಕಾಣಲಾರೆಯಾ
            ಈ ಗೋರ್ವಧನ ಗಿರಿಯನ್ನು ನೋಡಲಾರೆಯಾ
            ಗೋವುಗಳು ಇಲ್ಲೇ ಗೋಕುಲವು ಇಲ್ಲೇ
            ರಾಧೇ ನೀನು ಇರುವಾಗ ಸ್ವರ್ಗವೆಲ್ಲಾ ಇಲ್ಲೇ
ಹೆಣ್ಣು : ಕಳ್ಳ ಕೃಷ್ಣ ಕುಳ್ಳ ಕುಳ್ಳ ಕೃಷ್ಣ ಮುದ್ದು ಕೃಷ್ಣನೇ
          ರಾಧಾ ಕೃಷ್ಣ ರುಕ್ಮಿಣಿ ಕೃಷ್ಣ ಭಾಮಾ ಕೃಷ್ಣನೇ
ಗಂಡು : ಬಾರೇ ಭಾಮಾ ಮುದ್ದು ಭಾಮ್ಮ ಬಾ ಅಮ್ಮ ಇಲ್ಲಿ
           ಭಾಗ ಮಡಕೆ ಮಾಡೋ ಮಾದಪ್ಪನ ಮಗಳೇ ಸತ್ಯಭಾಮ ಬಾ 


ಹೆಣ್ಣು : ಮಧುರಾ ನಗರದಿ ಮೊಸರು ಮಾರಬೇಕು 
          ದಾರಿ ಬಿಡೋ ಓ.. ಕೃಷ್ಣಾ ಸಂಜೆಯ ವೇಳೆಗೆ ತಪ್ಪದೆ ಬರುವೇ 
          ರಾಜ ಮಾರ್ಗವಿದು ಕೃಷ್ಣ .. ಕೃಷ್ಣ 
          ಮಧುರಾ ನಗರದಿ ಮೊಸರು ಮಾರಬೇಕು 
          ದಾರಿ ಬಿಡೋ ಓ.. ಕೃಷ್ಣಾ ಸಂಜೆಯ ವೇಳೆಗೆ ತಪ್ಪದೆ ಬರುವೇ 
ಗಂಡು : ಭಾಮಾ ನೀ ಬೇಗನೆ ಬಾರೇ  ಸತ್ಯ ಭಾಮಾ ನೀ ಬೇಗನೆ ಬಾರೇ 
            ಬೇಗನೆ ಬಾರೆ ಮೊಗವನು ತೋರೇ ನಾ ತಂದು ಕೊಡುವೆ ಜಾರ್ಜೆತ್ತು ಸೀರೆ.. 
            ಭಾಮಾ ನೀ ಬೇಗನೆ ಬಾರೇ  ಸತ್ಯ ಭಾಮಾ ನೀ ಬೇಗನೆ ಬಾರೇ 
             ಬಾರೇ ಭಾಮಾ ಮುದ್ದು ಭಾಮ್ಮ ಬಾ ಅಮ್ಮ ಇಲ್ಲಿ
-------------------------------------------------------------------------------------------------------------------------

ವಿಜಯ ವಿಕ್ರಮ (೧೯೭೯) - ನೀ ಕುಣಿಯುತ ಓಡುವೇ
ಸಂಗೀತ : ಸತ್ಯಂ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ

ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ ಈ ಅವಸರವೇನಮ್ಮಾ
ನಾ ಬರುವೇ ತಾಳಮ್ಮ

ಗಿರಿಯಿಂದಿಳಿಯುತ ಜಾರಿ ಬಯಲಿಗೆ ಧುಮುಕುವೆಯಲ್ಲಾ
ಕಾನನವನ್ನು ಸೇರಿ ನೀ ಒಬ್ಬಳೇ ಓಡುವೆಯಲ್ಲಾ ನಿನ್ನಲ್ಲಿ ಎಂಥ ಧೈರ್ಯ
ಹೇಗೆ ಬಂತಮ್ಮಾ ಯಾರನೂ ನೋಡೋ ಆಸೇ
ಬಂತೂ ಹೇಳಮ್ಮಾ ಈ ಸಡಗರವೇನಮ್ಮಾ
ಈ ಓಟವೂ ಯಾಕಮ್ಮಾ..
ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ ಈ ಅವಸರವೇನಮ್ಮಾ
ನಾ ಬರುವೇ ತಾಳಮ್ಮ

ಕಲಕಲ ಹಾಡುವ ಗೀತೆ ರಂಗನು ಕೇಳಲು ತಾನೇ
ಬಳುಕುತ ಓಡುವ ಸೊಗಸೂ ಶ್ರೀ ರಂಗನ ನೋಡಲು ತಾನೇ
ದೇವನ ಸನ್ನಿಧಿ ಸೇರೋ ದಾರಿ ಹುಡುಕುವೇಯಾ
ರಂಗನ ಪಾದ ತೊಳೆವಾ ಆಸೆ ಬಂದಿದೆಯಾ
ನೀ ಓಡದೇ ನಿಲ್ಲಮ್ಮಾ ನಾ ಬರುವೆ ತಾಳಮ್ಮಾ
ನೀ ಕುಣಿಯುತ ಓಡುವೇ ಎಲ್ಲಿಗೆ ಕಾವೇರಿ
ನಾ ನಲಿಯುತ ಬರಲೇ ನಿನ್ನಾ ಜೊತೆ ಸೇರಿ ಈ ಅವಸರವೇನಮ್ಮಾ
ನಾ ಬರುವೇ ತಾಳಮ್ಮ
-------------------------------------------------------------------------------------------------------------------------

ವಿಜಯ ವಿಕ್ರಮ (೧೯೭೯) - ಬೇಕೇನು ಬರುವೇನು
ಸಂಗೀತ : ಸತ್ಯಂ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಎಸ.ಜಾನಕಿ

ಬೇಕೇನ್ನು ಬರುವೇನು ಬೇಕೆನ್ನು ತರುವೇನು
ಬೇಕೆನ್ನು ಇರುವೇನು ಬೇಕೆನ್ನು ಕೊಡುವೇನು
ಹೈ ಬೇಕು ಬೇಕು ಬೇಕು ನೀ ಬೇಕೇ  ಬೇಕು ಬೇಕು ಅಮ್ಮಾ
ಅಯ್ಯೋ ಇರು ಇರು ಮೆಲ್ಲಗೇ ಅಮ್ಮಾ ಇದು ಇದು ಮಲ್ಲಿಗೇ
ಒಹೋ ಬೇಕೆನ್ನು ಬರುವೇನು ಬೇಕೆನ್ನು ತರುವೇನು
ಬೇಕೆನ್ನು ಇರುವೇನು ಬೇಕೆನ್ನು ಕೊಡುವೇನು

ಚೆಲುವಿದೇ ನನ್ನಲ್ಲಿ ಒಲವಿದೆ ನಿನ್ನಲ್ಲಿ ಈ ರಾತ್ರಿ ನಮಗಾಗಿದೆ 
ಒಲವಿದೆ ನಿನ್ನಲ್ಲಿ ಛಲವಿದೆ ನನ್ನಲ್ಲಿ ಸಂತೋಷವೂ ಕಾದಿದೇ 
ವಯಸಿದೆ ನನ್ನಲ್ಲಿ ಮನಸಿದೇ ನಿನ್ನಲ್ಲೀ ಮೈಯ್ಯೆಲ್ಲಾ ಬಿಸಿಯಾಗಿದೇ 
ಹಸಿವಿದೆ ನಿನ್ನಲ್ಲೀ ರುಚಿಯಿದೆ ನನ್ನಲ್ಲಿ ಇನ್ನೇನೂ ಬೇಕಾಗಿದೆ 
ಒಹೋ ಬೇಕೆನ್ನು ಬರುವೇನು ಬೇಕೆನ್ನು ತರುವೇನು
ಬೇಕೆನ್ನು ಇರುವೇನು ಬೇಕೆನ್ನು ಕೊಡುವೇನು

ಬಳಸಲು ತೋಳಿಂದ ಅರಳಿದೆ ಮೈಯಿಂದ ಆನಂದ ನಿನಗಾಗಿದೆ 
ಕೆರಳಿಸಿ ಕಣ್ಣಿಂದ ಕುಣಿಸಲು ಮಾತಿಂದ ನನಗೀಗ ಹಿತವಾಗಿದೇ 
ಸಡಗರ ಬೇಕಿಲ್ಲ ಅವಸರ ಬೇಕಿಲ್ಲ ದಿನವೆಲ್ಲಾ ನಮಗಾಗಿದೇ 
ಬಯಕೆಯ ಪೂರೈಸೋ ನಿನ್ನನ್ನೂ ಸಂತೈಸೋ ದಿನವೀಗ ಬಂದಾಗಿದೆ 
ಒಹೋ ಬೇಕೆನ್ನು ಬರುವೇನು ಬೇಕೆನ್ನು ತರುವೇನು
ಬೇಕೆನ್ನು ಇರುವೇನು ಬೇಕೆನ್ನು ಕೊಡುವೇನು
ಹೈ ಬೇಕು ಬೇಕು ಬೇಕು ನೀ ಬೇಕೇ  ಬೇಕು ಬೇಕು ಅಮ್ಮಾ
ಅಯ್ಯೋ ಇರು ಇರು ಮೆಲ್ಲಗೇ ಅಮ್ಮಾ ಇದು ಇದು ಮಲ್ಲಿಗೇ
ಒಹೋ ಬೇಕೆನ್ನು ಬರುವೇನು ಬೇಕೆನ್ನು ತರುವೇನು
ಬೇಕೆನ್ನು ಇರುವೇನು ಬೇಕೆನ್ನು ಕೊಡುವೇನು
------------------------------------------------------------------------------------------------------------------------

ವಿಜಯ ವಿಕ್ರಮ (೧೯೭೯) - ಲತೆಯು ಬಾಡಿ ಬಾಡಿ
ಸಂಗೀತ : ಸತ್ಯಂ, ಸಾಹಿತ್ಯ :ಚಿ.ಉದಯಶಂಕರ, ಗಾಯನ : ಎಸ.ಪಿ.ಬಿ. ಎಸ.ಜಾನಕಿ

ಲತೆಯು ಬಾಡಿ ಬಾಡಿ ಒಣಗುತಲಿದೆ ಆಸರೆ ಕಾಣದಾಗಿದೇ

ನಡುಗಿದೆ ಬಾ ಉಳಿಯದು ಬಾ..
ಬೆಳದಿಂಗಳಿರುವಾಗ ಬೇಗೆ ಏಕೆ
ತಂಗಾಳಿ ಇರುವಾಗ ಚಿಂತೆ ಏಕೆ

ನಿನಗಾಗೇ ನಾನು ಇರುವಾಗ ಇನ್ನೂ ನೋವೆಂಬ ಮಾತೆಲ್ಲಿದೇ ..
ನೀ ಹೊನ್ನ ಲತೆಯೆಂದು ನಾನು ಬಲ್ಲೆ
ಬಂಗಾರ ಬಾಡೋದು ಉಂಟೇ ನಲ್ಲೆ
ನಿನಗಾಗೇ ನನ್ನ ಈ ಜೀವ ಚಿನ್ನ
ಸಾಕಿನ್ನು ಬಿಡು ಚಿಂತೆಯಾ
ಲತೆಯು ಬಾಡಿ ಬಾಡಿ ಒಣಗುತಲಿದೆ ಆಸರೆ ಕಾಣದಾಗಿದೇ
-------------------------------------------------------------------------------------------------------------------------

No comments:

Post a Comment