ಮಲ್ಲಿಗೆ ಸಂಪಿಗೆ ಚಿತ್ರದ ಹಾಡುಗಳು
- ಬೇಡವೇ ಬೇಡವೇ
- ಈ ನಿಮ್ಮ ರೂಪ ಆರದ ದೀಪ ನನ್ನ ಬಾಳಿಗೆ
- ಬಪ್ಪರೆ ಬಪ್ಪ ಬಪ್ಪರೆ ಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
- ತೆರೆ ತೆರೆ ಕಣ್ಣ ತೆರೆ
- ಚಂದ್ರನ ಅಮ್ಮ ಯಾರು ಗೊತ್ತೇ
ಮಲ್ಲಿಗೆ ಸಂಪಿಗೆ (೧೯೭೯) - ಬೇಡವೇ ಬೇಡವೇ ದೂರ ಓಡಬೇಡವೇ
ಸಂಗೀತ : ವಿಜಯ ಬಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ.
ಸಂಗೀತ : ವಿಜಯ ಬಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಪಿ.ಬಿ.
ಬೇಡವೇ... ಬೇಡವೇ...
ಬೇಡವೇ ಬೇಡವೇ ದೂರ ಓಡಬೇಡವೇ
ಹೀಗೇ ನೋಡಬೇಡವೇ ನನ್ನಾ ಕಾಡಬೇಡವೇ
ಬೇಡವೇ ಬೇಡವೇ ದೂರ ಓಡಬೇಡವೇ
ಈ ವಯಸ್ಸಲ್ಲಿ ಸ್ವಲ್ಪವಾದರೂ ಆಸೇ ಇರಬೇಡವೇ
ಆ ಮನಸಲ್ಲಿ ನನ್ನನ್ನೂ ಕಂಡು ಚಪಲ ಬರಬೇಡವೇ
ಯಾರು ಇಲ್ಲದೇ ಇಬ್ಬರೇ ಅಲ್ಲವೇ ಸುಮ್ಮನೇ ಏಕೆ ಕೊಲ್ಲುವೇ
ಯಾರು ಇಲ್ಲದೇ ಇಬ್ಬರೇ ಅಲ್ಲವೇ ಸುಮ್ಮನೇ ಏಕೆ ಕೊಲ್ಲುವೇ
ಬೇಡವೇ ಬೇಡವೇ ದೂರ ಓಡಬೇಡವೇ
ಮಡಿಲನು ತುಂಬಿ ನಗುವಾ ಒಂದೂ ಮಗುವೂ ಇರಬೇಡವೇ.. ಆಹ್ಹ್ .. ಹೂಂ
ಹೆಣ್ಣಾಗಿ ನೀ ತಾಯಿಯ ಬಯಕೆ ಇನ್ನೂ ಬರಬೇಡವೇ
ಪ್ರೀತಿ ಇಲ್ಲದೇ ಪ್ರೇಮ ಇಲ್ಲವೇ ನೀನೂ ಹೆಣ್ಣೇ ಅಲ್ಲವೇ
ಪ್ರೀತಿ ಇಲ್ಲದೇ ಪ್ರೇಮ ಇಲ್ಲವೇ ನೀನೂ ಹೆಣ್ಣೇ ಅಲ್ಲವೇ
ಬೇಡವೇ ಆಹ್ಹ್ ಬೇಡವೇ ಹೀಗೇ ನೋಡಬೇಡವೇ
ಮೋಹವೂ ಬೇಡ ವಿರಹವೂ ಬೇಡ ತ್ಯಾಗ ಇರಬೇಡವೇ
ಗಂಡಿಗೆ ಬೆಲೆಯಾ ಕೊಡದಿರೇ ಬೇಡಾ ಕರುಣೆ ಬರಬೇಡವೇ
ಹಾಸಿಗೇ ಮಂಚಕೇ ಕೆಟ್ಟ ಹಣವ ವ್ಯರ್ಥವೇತಕೇ ಮಾಡುವೇ
ಹಾಸಿಗೇ ಮಂಚಕೇ ಕೆಟ್ಟ ಹಣವ ವ್ಯರ್ಥವೇತಕೇ ಮಾಡುವೇ
ಬೇಡವೇ ಆಹ್ಹ್ ಬೇಡವೇ ದೂರ ಓಡಬೇಡವೇ
ಹೀಗೇ ನೋಡಬೇಡವೇ ನನ್ನಾ ಕಾಡಬೇಡವೇ ಹ್ಹೋ... ಹ್ಹೋ.. ಹ್ಹೋ..
--------------------------------------------------------------------------------------------------------------------------
ಮಲ್ಲಿಗೆ ಸಂಪಿಗೆ (೧೯೭೯) - ಈ ನಿಮ್ಮ ರೂಪ ಆರದ ದೀಪ ನನ್ನ ಬಾಳಿಗೆ
ಸಂಗೀತ : ವಿಜಯ ಬಾಸ್ಕರ, ಸಾಹಿತ್ಯ : ಗೀತಪ್ರಿಯ, ಗಾಯನ : ಎಸ್.ಜಾನಕೀ ಈ ನಿಮ್ಮ ರೂಪ ಆರದ ದೀಪ ನನ್ನ ಬಾಳಿಗೆ
ಈ ಅನುಬಂಧ ಪರಮಾನಂದ ನನ್ನ ಜೀವನಕೆ
ಈ ಹೂವಲಿರುವ ಗಂಧದಂತೆ ಎಳೆಯಲಿರುವ ಹಸುರಿನಂತೆ
ಶಶಿಯಲಿರುವ ತಂಪಿನಂತೆ ನನ್ನ ನಿಮ್ಮ ಸ್ನೇಹವಂತೆ
ಈ ನಿಮ್ಮ ರೂಪ ಆರದ ದೀಪ ನನ್ನ ಬಾಳಿಗೆ
ನಿಮ್ಮ ಮನಸೇ ನನ್ನ ಮನಸು ನಿಮ್ಮ ಕನಸೇ ನನ್ನ ಕನಸು
ಎರಡು ದೇಹ ಒಂದೇ ಜೀವ ನಮ್ಮ ಬಾಳು ಎಂಥಾ ಸೊಗಸು
ಈ ನಿಮ್ಮ ರೂಪ ಆರದ ದೀಪ ನನ್ನ ಬಾಳಿಗೆ
ನೀರು ಬಿಟ್ಟು ಕಮಲವಿರದು ಬಾನ ಬಿಟ್ಟು ತಾರೆ ಇರದು
ಕಡಲ ಬಿಟ್ಟು ನದಿಯು ಇರದು ನಿಮ್ಮ ಬಿಟ್ಟು ಜೀವ ಇರದು
ಈ ನಿಮ್ಮ ರೂಪ ಆರದ ದೀಪ ನನ್ನ ಬಾಳಿಗೆ
ಈ ಅನುಬಂಧ ಪರಮಾನಂದ ನನ್ನ ಜೀವನಕೆ
--------------------------------------------------------------------------------------------------------------------------
ಮಲ್ಲಿಗೆ ಸಂಪಿಗೆ (೧೯೭೯) - ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ಗೀತಪ್ರೀಯ ಗಾಯನ : ಎಸ.ಪಿ.ಬಿ.
ಬಪ್ಪರೆಬಪ್ಪ.... ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಕಾದು ಕಾದು ಸಾಕಾದಾಗ ತಿಪ್ಪರ ಲಾಗ ಹಾಕಪ್ಪಾ...
ಕಾದು ಕಾದು ಸಾಕಾದಾಗ ತಿಪ್ಪರ ಲಾಗ ಹಾಕಪ್ಪಾ...
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಸಿಗೋದರೆಲ್ಲಾ ನಂಬಿಸಿ ಅವನು ಕೈಯಾ ಕೊಟ್ಟಿದ್ದ
ಅಂತ ಕೈನ್ ಇವನ್ಯಾರೊ ಮೊದಲೇ ಕೊಟ್ಟಿದ್ದ
ಬೇರೆಯೊರ್ ಮನೆ ಕೆಡವಿ ಅವನು ಮನೆ ಕಟ್ಟಿದ್ದ
ಮುಹೂರ್ತ ನೋಡಿ ಹೋಗೋಕ್ಮುಂಚೆ ಮಸಣ ಸೇರಿದ್ದ..
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಕಾದು ಕಾದು ಸಾಕಾದಾಗ ತಿಪ್ಪರ ಲಾಗ ಹಾಕಪ್ಪಾ...
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಒಬ್ಬ ಬರ್ತಾನ ಸ್ಕೂಟರಲ್ಲಿ ಒಬ್ಬ ಬರ್ತಾನ ಮೋಟರಲ್ಲಿ
ಒಬ್ಬ ಬಂದರೇ ಮೈಲಲಲ್ಲಿ ಒಬ್ಬ ಬರ್ತಾನ ಪ್ಲೇನಲ್ಲಿ
ಬದಕಿದ್ದಾಗ ಮೇಲೂ ಕೀಳು ಬೇಧ ತೋರುತಾರಿಲ್ಲಿ
ಸತ್ತುಹೋದಮೇಲೆ ಸೇರತಾರೆಲ್ಲಾ ಒಂದೇ ಸುಡುಗಾಡನಲ್ಲಿ
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಕಾದು ಕಾದು ಸಾಕಾದಾಗ ತಿಪ್ಪರ ಲಾಗ ಹಾಕಪ್ಪಾ...
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಅರ್ಧ ಹೊಟ್ಟೆ ತುಂಬಸೋಕು ಬಡವ ಕಾಯ್ತಾ ಇರತ್ತಾನೆ
ಎಷ್ಟೇ ಇದ್ರೂ ಇನ್ನೂ ಗಳಿಸೋಕ ಧನಿಕ ಕಾಯ್ತಾ ಇರುತ್ತಾನೆ
ಸಂಬಳಕ್ಕಾಗಿ ತಿಂಗಳು ತಿಂಗಳು ಒಬ್ಬ ಕಾಯ್ತಾ ಇರುತ್ತಾನೇ
ಸಂಬಳ ತುಂಬಿದ ಜೋಬನ್ ಹೊಡ್ಯಾಕ್ ಒಬ್ಬ ಕಾಯ್ತಾ ಇರುತ್ತಾನೆ
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಕಾದು ಕಾದು ಸಾಕಾದಾಗ ತಿಪ್ಪರ ಲಾಗ ಹಾಕಪ್ಪಾ...
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಬರೋರನ್ನ ಕರಕೊಂಡ ಹೋಗೋಕ್ಕ ಬಂದು ಕಾಯ್ತಾ ಇರ್ತಾರೆ
ಬರೋ ಜನರ ಗಂಟಿಗಾಗಿ ಕೆಲವರ ಕಾಯ್ತಾ ಇರ್ತಾರೇ
ಒಬ್ಬನ ಹಿಡಿಯೋಕ ಒಬ್ಬ ಬಂದು ಇಲ್ಲಿ ಕಾಯ್ತಾ ಇರ್ತಾನೆ
ಎಲ್ಲೇ ಹೋದ್ರು ಇಲ್ಲೇ ಬರುತಾನೇ ಅಂತ ಯಮ ಕಾಯ್ತಾನೆ
ಅಹ್ಹಹ್ಹ ... ಎಲ್ಲೇ ಹೋದ್ರು ಇಲ್ಲೇ ಬರುತಾನೇ ಅಂತ ಯಮ ಕಾಯ್ತಾನೆ
ಬಪ್ಪರೆಬಪ್ಪ ಏನಣ್ಣಾ... ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
ಕಾದು ಕಾದು ಸಾಕಾದಾಗ ತಿಪ್ಪರ ಲಾಗ ಹಾಕಪ್ಪಾ...
ಬಪ್ಪರೆಬಪ್ಪ ಬಪ್ಪರೆಬಪ್ಪ ಕಾಯೋ ಕೆಲ್ಸ್ ಸಾಕಪ್ಪಾ
--------------------------------------------------------------------------------------------------------------------------
ಮಲ್ಲಿಗೆ ಸಂಪಿಗೆ (೧೯೭೯) - ತೇರೆ ತೇರೆ ಕಣ್ಣ ತೇರೆ ತೇರೆ
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ಗೀತಪ್ರಿಯ ಗಾಯನ : ಎಸ.ಜಾನಕೀ
ಲೈಫ್ ಇಸ್ ಕಟಿಂಗ್ ಓಪನ್ ಏಂಡ್ ಸೀ ಹ್ಹಾಂ
ತೇರೆ ತೇರೆ ಕಣ್ಣ ತೇರೆ ತೇರೆ ಮರೇ ಮರೇ ಚಿಂತೆಯಾ ಮರೇ ಮರೇ
ತೇರೆ ತೇರೆ ಕಣ್ಣ ತೇರೆ ತೇರೆ ಮರೆ ಮರೆ ಚಿಂತೆಯಾ ಮರೆ ಮರೆ
ಮುಖದಲಿ ಒಂದು ತೆರೆ ಮನದಲಿ ಒಂದು ತೆರೆ ಆತ ತೇರೇ.. ನೀ ತೇರೇ
ತೇರೆ ತೇರೆ ಕಣ್ಣ ತೇರೆ ತೇರೆ ಮರೆ ಮರೆ ಚಿಂತೆಯಾ ಮರೆ ಮರೆ
ತೆರೆಯ ಸರಿಸದಿ ನಿಜವೂ ತಿಳಿಯದು ಎಲ್ಲೋ ಇರುವುದೂ ಇಲ್ಲಿ ಕಾಣದು
ತೆರೆಯ ಸರಿಸದಿ ನಿಜವೂ ತಿಳಿಯದು ಎಲ್ಲೋ ಇರುವುದೂ ಇಲ್ಲಿ ಕಾಣದು
ನಾಳೆ ಯಾರದೋ ಇಂದು ನಿನ್ನದೂ ಹೋದ ಕಾಲವೂ ಮತ್ತೇ ಬಾರದು
ಅದಕೇ ಈಗಲೇ ನೀನು ಮೈಯ್ ಮರೆ
ತೇರೆ ತೇರೆ ಕಣ್ಣ ತೇರೆ ತೇರೆ ಮರೆ ಮರೆ ಚಿಂತೆಯಾ ಮರೆ ಮರೆ
ಹೂವಿನಿಂದಲೇ ಗಾಯವಾಗಲೂ ಮುಳ್ಳು ಏತಕೋ ನಗುತಲಿರುವುದೂ
ಹೂಂಹೂಂಹೂಂ.. ಫೆಂಟಾಸ್ಟಿಕ್ ಅಹ್ಹಹ್ಹಹ್ಹ.. ಅಹ್ಹಹ್ಹ
ಹೂವಿನಿಂದಲೇ ಗಾಯವಾಗಲೂ ಮುಳ್ಳು ಏತಕೋ ನಗುತಲಿರುವುದೂ
ಮುಖದ ಗಾಯವೂ ಹೊರಗೇ ತಿಳಿವುದೂ ಮನದ ಗಾಯವು ಜಗಕೆ ತಿಳಿಯದು
ಅದಕೆ ನಿಜವಾ ನೀನು ತೇರೇ ತೇರೇ
ತೇರೆ ತೇರೆ ಕಣ್ಣ ತೇರೆ ತೇರೆ ಮರೆ ಮರೆ ಚಿಂತೆಯಾ ಮರೆ ಮರೆ
ಲೈಫ್ ಇಸ್ ಪ್ಲೇ ಆಫ್ ಲೈಕ್ ಯಾಂಡ್ ಈಚ್ ಅದರ್.. ಅಹ್ಹಹ್ಹ.. ಅಹ್ಹಹ್ಹ..
ನೆರಳು ಬೆಳಕಿನ ಆಟ ಜೀವನ ಭ್ರಾಂತಿ ತುಂಬಿದ ನೋಟ ಜೀವನ
ನೆರಳು ಬೆಳಕಿನ ಆಟ ಜೀವನ ಭ್ರಾಂತಿ ತುಂಬಿದ ನೋಟ ಜೀವನ
ಕೆಲವರಾಡುವ ಬೇಕೇ ಜೀವನ ಬೂದಿ ಮುಚ್ಚಿದ ಕೆಂಡ ಜೀವನ
ಎಷ್ಟು ಹೊತ್ತರೂ ಮೀರದ ಹೊರೆ
ತೇರೆ ತೇರೆ ಕಣ್ಣ ತೇರೆ ತೇರೆ ಮರೆ ಮರೆ ಚಿಂತೆಯಾ ಮರೆ ಮರೆ
ಮುಖದಲಿ ಒಂದು ತೆರೆ ಮನದಲಿ ಒಂದು ತೆರೆ ಆತ ತೇರೇ.. ನೀ ತೇರೇ
--------------------------------------------------------------------------------------------------------------------------
ಮಲ್ಲಿಗೆ ಸಂಪಿಗೆ (೧೯೭೯) - ಚಂದ್ರನ ಅಮ್ಮಾ ಯಾರು ಗೊತ್ತೇ
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ವಿಜಯ ನಾರಸಿಂಹ ಗಾಯನ : ವಾಣಿಜಯರಾಂ , ಎಸ್.ಪಿ.ಬಿ
ಸಂಗೀತ : ವಿಜಯ ಬಾಸ್ಕರ ಸಾಹಿತ್ಯ : ವಿಜಯ ನಾರಸಿಂಹ ಗಾಯನ : ವಾಣಿಜಯರಾಂ , ಎಸ್.ಪಿ.ಬಿ
ಹೆಣ್ಣು : ಚಂದ್ರನ ಅಮ್ಮ ಯಾರು ಗೊತ್ತೇ ಸೂರ್ಯನ ಅಮ್ಮ ಯಾರು ಗೊತ್ತೇ
ಎಲ್ಲರ ತಾಯಿ ಒಲವಂತೆ ಎಲ್ಲರ ತಂದೆ ಒಲವಂತೆ
ಬಲ್ಲವ ಬಲ್ಲ ಸವಿಯಂತೇ ಎಲ್ಲಾ ಒಗಟಂತೇ
ಚಂದ್ರನ ಅಮ್ಮ ಯಾರು ಗೊತ್ತೇ ಸೂರ್ಯನ ಅಮ್ಮ ಯಾರು ಗೊತ್ತೇ
ಹೆಣ್ಣು : ಈ ಬಾಳ ಆಕಾಶದಲ್ಲಿ ನಾವೇಲ್ಲ ಬಾನಾಡಿಯಂತೇ ..
ಗಂಡು : ಈ ಬಾಳ ಆಕಾಶದಲ್ಲಿ ನಾವೇಲ್ಲ ಬಾನಾಡಿಯಂತೇ ..
ಹೆಣ್ಣು : ಒಂದೇಡೆ ಸೇರಿ ಚಿಲಿಪಿಲಿಯನ್ನು ಚೆಂದದಿ ಹಾಡಿ ನಲಿನಲಿದಾಡಿ
ಜನರಲ್ಲಿ ಸರಿಸಮವಾಗಿ ಏನೀ ಆನಂದ...
ಚಂದ್ರನ ಅಮ್ಮ ಯಾರು ಗೊತ್ತೇ ಸೂರ್ಯನ ಅಮ್ಮ ಯಾರು ಗೊತ್ತೇ
ಹೆಣ್ಣು : ಈ ಬಾಳು ಕಾವೇರಿಯಂತೇ ತವರಲ್ಲಿ ತಾನಿಲ್ಲದಂತೇ ..
ಈ ಬಾಳು ಕಾವೇರಿಯಂತೇ ತವರಲ್ಲಿ ತಾನಿಲ್ಲದಂತೇ ..
ಎಲ್ಲಿಗೂ ಸಾಗಿ ಝುಣುಝುಣು ಎಂದೂ ರೋಷವ ತೋರಿ ಧಮಧಮ ಎಂದೂ
ಸಂಗಮದಲ್ಲಿ ಅಲೆಅಲೆ ಹಾರಿ ಏನೀ ಆನಂದ..
ಇಬ್ಬರು : ಚಂದ್ರನ ಅಮ್ಮ ಯಾರು ಗೊತ್ತೇ ಸೂರ್ಯನ ಅಮ್ಮ ಯಾರು ಗೊತ್ತೇ
ಎಲ್ಲರ ತಾಯಿ ಒಲವಂತೆ ಎಲ್ಲರ ತಂದೆ ಒಲವಂತೆ
ಬಲ್ಲವ ಬಲ್ಲ ಸವಿಯಂತೇ ಎಲ್ಲಾ ಒಗಟಂತೇ
ಎಲ್ಲಾ ಒಗಟಂತೇ ಎಲ್ಲಾ ಒಗಟಂತೇ
ಹೆಣ್ಣು : ಚಂದ್ರನ ಅಮ್ಮ ಯಾರು ಗೊತ್ತೇ ಸೂರ್ಯನ ಅಮ್ಮ ಯಾರು ಗೊತ್ತೇ
-------------------------------------------------------------------------------------------------------------------------
No comments:
Post a Comment