887. ಬೇಟೆ (೧೯೮೬)

ಬೇಟೆ ಚಲಚಿತ್ರದ ಹಾಡುಗಳು 
  1. ಬೇಟೆ ಬೇಟೆ ಬೇಟೆ....  ಬೇಟೆ ಬೇಟೆ ಬೇಟೆ .
  2. ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
  3. ಅಬ್ಬಬ್ಬಾ ಎಂಥ ಯುವಕ 
  4. ಆನಂದ ಚಂದದಲ್ಲಿ 
  5. ಚಿಂತಿಸು ನೀ ಮನವೇ 
  6. ಛಳಿಯ ನಡುಕ ಮೊದಲ ಒಳಗೆ 
ಬೇಟೆ (೧೯೮೬) - ಬೇಟೆ ಬೇಟೆ ಬೇಟೆ....  ಬೇಟೆ ಬೇಟೆ ಬೇಟೆ .
ಸಂಗೀತ : ಎಸ್ಪಿ.ಬಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್ಪಿ.ಬಿ.

ಬೇಟೆ ಬೇಟೆ ಬೇಟೆ....  ಬೇಟೆ ಬೇಟೆ ಬೇಟೆ .
ಹೇಳು ಇನ್ನೇತಕೆ ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ ಈ ವಾಣಿಯ ಸಂದೇಶ
ಹೇಳು ಇನ್ನೇತಕೆ ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ ಈ ವಾಣಿಯ ಸಂದೇಶ
ಸಹನೆಯು ಸಾಕು ಸಾಕು ಬೇಕೇ  ಬೇಕು ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ ಕಣ ಕಣದಿ ಬೇಟೆ ಆಡೆಂದು
ಬೇಟೆ ಬೇಟೆ ಬೇಟೆ....  ಬೇಟೆ ಬೇಟೆ ಬೇಟೆ .
ಹೇಳು ಇನ್ನೇತಕೆ ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ ಈ ವಾಣಿಯ ಸಂದೇಶ
ಸಹನೆಯು ಸಾಕು ಸಾಕು ಬೇಕೇ  ಬೇಕು ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ ಕಣ ಕಣದಿ ಬೇಟೆ ಆಡೆಂದು ಹಾಂ...

ಹೇ.. ಹೇ.. ಹೇ... ಹೇ.. ಕಾಮ ಕ್ರೋಧ ಲೋಭ ಮೋಹ ಮೇಲೆದ್ದು ಆಡಲಿ 
ಹೇ.. ಹೇ.. ಹೇ... ಹೇ.. ಪ್ರೇಮ ಸತ್ತು ಸುಳ್ಳು ಮೋಸ ಎಲ್ಲೆಲ್ಲೂ ಆಳಲಿ   
ಹೇ.. ಹೇ.. ಹೇ... ಹೇ.. ಕಾಮ ಕ್ರೋಧ ಲೋಭ ಮೋಹ ಮೇಲೆದ್ದು ಆಡಲಿ 
ಹೇ.. ಹೇ.. ಹೇ... ಹೇ.. ಪ್ರೇಮ ಸತ್ತು ಸುಳ್ಳು ಮೋಸ ಎಲ್ಲೆಲ್ಲೂ ಆಳಲಿ   
ಮಾತ್ಸರ್ಯದ ಬೆಂಕಿ ದ್ವೇಷಾಗ್ನಿ ತಾನಾಗಿ ಕೆಂಡ ಕಾರಡಲಿ ಹ್ಹಾ... 
ಶಾಂತಿಯ ಹೂವು ಕ್ರಾಂತಿಯ ಹಾವಾಗೋ ವೇಳೆ ಇಂದಾಗಲಿ 
ಮನಸು ಕಲ್ಲಾಗಲಿ ಬೇಟೆ ಆಡಿಂದು 
ಹುರುಳಿರದ ಮುಡಿಗಳಲಿ ಹೃದಯವೇ ನೀಗು ನೀಗೆಂದು 
ಹೇಳು ಇನ್ನೇತಕೆ ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ ಈ ವಾಣಿಯ ಸಂದೇಶ
ಹೇಳು ಇನ್ನೇತಕೆ ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ ಈ ವಾಣಿಯ ಸಂದೇಶ ಆಹ್ಹ್..

ಹೇ.. ಹೇ.. ಹೇ... ಹೇ..ಹೇ  ನ್ಯಾಯ ನೀತಿ ಸ್ನೇಹ ಪ್ರೀತಿ ಈ ಲೋಕ ಕೇಳದು
ಹೇ.. ಹೇ.. ಹೇ... ಹೇ.. ಹೇ ತಂದೆ ತಾಯಿ ಬಂಧು ಬಳಗ ಈ ಕಾಲ ಕಾಣದು
ಹೇ.. ಹೇ.. ಹೇ... ಹೇ..ಹೇ  ನ್ಯಾಯ ನೀತಿ ಸ್ನೇಹ ಪ್ರೀತಿ ಈ ಲೋಕ ಕೇಳದು
ಹೇ.. ಹೇ.. ಹೇ... ಹೇ.. ಹೇ ತಂದೆ ತಾಯಿ ಬಂಧು ಬಳಗ ಈ ಕಾಲ ಕಾಣದು
ಸ್ವಾರ್ಥಕೆ ಕಾಲ ದ್ರೋಹಕ್ಕೆ ಮರ್ಯಾದೆ ಸತ್ಯ ಈ ಮಾತಲಿ
ಮುಳ್ಳಿಗೆ ಮುಳ್ಳೇ ಮದ್ದೆಂಬ ಮಾತಿಂದು ನಿನ್ನಾ ಗುರಿಯಾಗಿರಲಿ
ಜೀವ ಹಾರೈಸಿದೆ ರಕ್ತ ಹೋಮಕ್ಕೆ
ಕರುಣೆಯೇನೋ ಪದವನು ಮರೆಯುತ ಮುಂದೆ ಸಾಗೆಂದು
ಹೇಳು ಇನ್ನೇತಕೆ ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ ಈ ವಾಣಿಯ ಸಂದೇಶ
ಹೇಳು ಇನ್ನೇತಕೆ ಆಲೋಚನೆ ಸಂದೇಹ
ಕೇಳು ನಿನ್ನಾತ್ಮದ ಈ ವಾಣಿಯ ಸಂದೇಶ
ಸಹನೆಯು ಸಾಕು ಸಾಕು ಬೇಕೇ  ಬೇಕು ಸೇಡು ಸೇಡೆಂದು
ಒಡಲಿನಲಿ ಕುದಿಯುತಿದೆ ಕಣ ಕಣದಿ ಬೇಟೆ ಆಡೆಂದು
-------------------------------------------------------------------------------------------------------------------------

ಬೇಟೆ (೧೯೮೬) - ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
ಸಂಗೀತ : ಎಸ್ಪಿ.ಬಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್ಪಿ.ಶೈಲಜಾ, ಉಮಾ ರಮಣನ 

ಕೋರಸ್ :  ಜುಬಿಯಾ... ಜುಬಿ ಜುಬಿ ಜುಬಿ ಜುಬಿ ಜುಬಿಯಾ..ಜುಬಿಯಾ..ಜುಬಿಯಾ..
ಶೈಲಜಾ : ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
              ತುಂಟ ಕಣ್ಣ ನೋಟವೆಲ್ಲ ನಾಟಿ ನಾಟಿ
             ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
            ತುಂಟ ಕಣ್ಣ ನೋಟವೆಲ್ಲ ನಾಟಿ ನಾಟಿ
           ಟೀನು ಏಜಿನ ರಾಣಿ ನಾನು ರೂಪದಲಿ ನಾ ಗ್ಯಾರಂಟಿ.. ಕ್ವಾಲಿಟಿ ... ಶೂರಿಟಿ
ಉಮಾ : ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
             ತುಂಟ ಕಣ್ಣ ನೋಟವೆಲ್ಲ ನಾಟಿ ನಾಟಿ
            ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
           ತುಂಟ ಕಣ್ಣ ನೋಟವೆಲ್ಲ ನಾಟಿ ನಾಟಿ
          ಟೀನು ಏಜಿನ ರಾಣಿ ನಾನು ರೂಪದಲಿ ನಾ ಗ್ಯಾರಂಟಿ.. ಕ್ವಾಲಿಟಿ ... ಶೂರಿಟಿ
ಇಬ್ಬರು : ಲಾಲ ಲಲಲ ಲಾಲ ಲಾಲ ಲಲಲ ಲಾಲಲ 

ಶೈಲಜಾ : ನಿಂತಾಗ ಮೈಯಲ್ಲಿ ಆಸೆ ತುಂಬಿ ಬಂದಾಗ
               ನಿನ್ನಲ್ಲಿ ಜೋಡಿಬೇಡಿ ನೂರು ಮಿಂಚು ನೋಟ ನನ್ನ ಕಣ್ಣಲ್ಲಿ
               ಇಂಥ ಸಂಚು ನೋಡು ಕಣ್ಣ ಮಾತಲ್ಲಿ
              ಕೊಂಕು ಮಾಡಿ ನಾನು ನಿಂತ ಹೊತ್ತಲ್ಲಿ ತೇಲಿ ಹೋಗಬೇಕು ನೀನು ಮತ್ತಲ್ಲಿ 
ಉಮಾ : ರೂಪ ಶಿಲ್ಪನ  ಪ್ರೇಮ ಕಾವ್ಯನಾ ಯಾವ ಸಾಟಿ ಇಲ್ಲಿ ನಂಗೆ ನಲ್ಲ ಅಂದ ಚಂದವೇ . 
             ಕ್ವಾಲಿಟಿ.. (ರುರುರುರೂ ) ಶೂರಿಟಿ (ರುರುರುರೂ )
             ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
             ತುಂಟ ಕಣ್ಣ ನೋಟವೆಲ್ಲ ನಾಟಿ ನಾಟಿ
            ಟೀನು ಏಜಿನ ರಾಣಿ ನಾನು ರೂಪದಲಿ ನಾ ಗ್ಯಾರಂಟಿ.. ಕ್ವಾಲಿಟಿ ... ಶೂರಿಟಿ

ಉಮಾ : ಸಂತೋಷ ಹೆಚ್ಚಾಗಿ ಬಂದ ವೇಳೆ ಸಂದೇಶ ಹೆಣ್ಣಿಂದು ತಂದ ವೇಳೆ
             ಅತ್ತ ಇತ್ತ ನೋಡಬೇಡ ಬಾ ಇಲ್ಲಿ ಸ್ವರ್ಗ ನೋಡು ಇಲ್ಲೇ ನನ್ನ ಅಂಗೈಲಿ
            ರಾಗ ತಾಳದಂತೆ ನಾವು ಸೇರೋಣ ಯಾರು ಕಾಣದಂತ ಆಟ ಆಡೋಣ
ಶೈಲಜಾ : ನಾನೇ ಊರ್ವಶಿ ನಾನೇ ರೂಪಸಿ ಇನ್ನೂ ಶಂಕೆ ಬೇಡ
              ನಾನೇ ನೋಡು ನಿನ್ನ ಜೋಡಿಯು.....   ಕ್ವಾಲಿಟಿ... ಶೂರಿಟಿ
             ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
           ತುಂಟ ಕಣ್ಣ ನೋಟವೆಲ್ಲ ನಾಟಿ ನಾಟಿ
           ಹತ್ತು ಎಂಟು ತುಂಬಿದಂಥ ಬ್ಯೂಟಿ ಬ್ಯೂಟಿ
           ತುಂಟ ಕಣ್ಣ ನೋಟವೆಲ್ಲ ನಾಟಿ ನಾಟಿ
          ಟೀನು ಏಜಿನ ರಾಣಿ ನಾನು ರೂಪದಲಿ ನಾ ಗ್ಯಾರಂಟಿ.. ಕ್ವಾಲಿಟಿ ... ಶೂರಿಟಿ
          ತುಟಿ..  ತುಟಿ..  ತುಟಿ..  ತುಟಿ..  ತುಟಿ..  ತುಟಿ..  ತುಟಿ..  
--------------------------------------------------------------------------------------------------------------------------

ಬೇಟೆ (೧೯೮೬) - ಅಬ್ಬಬ್ಬಾ ಎಂಥ ಯುವಕ
ಸಂಗೀತ : ಎಸ್ಪಿ.ಬಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ

ಅಬ್ಬಬ್ಬಾ ಎಂಥ ಯುವುಕ.. ನನ್ನ ಪ್ರೀತಿ ರಸಿಕ 
ನನಗೂ ನಿನಗೂ ಈಡೂ ಜೋಡಿ ಎಂಥಾ ಹೊಂದಿಕೆ 
ಮೈಮಾಟದಲ್ಲಿ ನೋಟದಲ್ಲಿ ತುಂಟನಗೆ ಆಟದಲ್ಲಿ ಏನೇನೋ ಮಾಡುವೇ ನಾಚಿಕೇ ... ಅಂಜಿಕೇ .. ಏತಕೇ ...    
ಅಬ್ಬಬ್ಬಾ ಎಂಥ ಯುವುಕ.. ನನ್ನ ಪ್ರೀತಿ ರಸಿಕ 

ಸಂಗಾತಿ ಕಳಿಯೋ ವೇಳೆ ಸಂದೇಹ ಏತಕೆ.. 
ಚಪ್ಪಾಳೆ ತಟ್ಟಿ ತಾಳಕೇ.. ತೂಗುತಾ... ನೀನು ಒಂದಾಗಿ ಆಡೋಕೆ ಬಾ... ಆ ಆ ಆ    
ಸನ್ಯಾಸಿಯಾಗೋ ಬಯಕೇ ಸಂಸಾರ ಬೇಡವೇ.. 
ಸಂತೋಷದಿಂದ ಈ ಚಳಿ ನೀಗುತ ನನ್ನ ಸ್ನೇಹಕ್ಕೆ ಕೈ ಚಾಚುತ.. 
ಕಾಲದ ಓಟವೂ ನಿಲ್ಲದು ಆಸೆಗೆ ಅಂಕುಶ ಸಲ್ಲದು ಬೇಗ ಬಾರಾ... 
ಅಬ್ಬಬ್ಬಾ ಎಂಥ ಯುವುಕ.. ನನ್ನ ಪ್ರೀತಿ ರಸಿಕ 
ನನಗೂ ನಿನಗೂ ಈಡೂ ಜೋಡಿ ಎಂಥಾ ಹೊಂದಿಕೆ 
ಮೈಮಾಟದಲ್ಲಿ ನೋಟದಲ್ಲಿ ತುಂಟನಗೆ ಆಟದಲ್ಲಿ ಏನೇನೋ ಮಾಡುವೇ ನಾಚಿಕೇ ... ಅಂಜಿಕೇ .. ಏತಕೇ ...    
ಅಬ್ಬಬ್ಬಾ ಎಂಥ ಯುವುಕ.. ನನ್ನ ಪ್ರೀತಿ ರಸಿಕ 

ಕಸರತ್ತು ಕಂಡಾ ಮೈಯ್ಯಿಲೀ  ಕಬ್ಬಿಣವೇ ಆದರೂ ಕಲ್ಲಾಯಿತೇನೋ 
ಈ ಮನ ಹೆಣ್ಣಿನ ಆಸೇ ಏನೆಂದೂ ಗೊತ್ತಾಗದೇ .. ಹೇ..ಹೇ..ಹೇ..ಹೇ 
ಲಾಠಿಯನು ಹಿಡಿದ ಕೈಯಲೀ ಲಾವಣ್ಯ ಕಾಣದೇ 
ಓ ಪ್ರೇಮಿ ನಿನ್ನ ರಸಿಕತೆ ಬಾಡಿತೇ ... ಕಣ್ಣು ಅಂದಕ್ಕೆ ಕುರುಡಾಯಿತೇ .. 
ಮೀಸೆಗೆ ಚೇತನ ಹೋಯಿತೇ.. ಆಟದ ಗಾಳವು ಮೀರಿತೇ ಸ್ನೇಹ ತಾರ ... 
ಅಬ್ಬಬ್ಬಾ ಎಂಥ ಯುವುಕ.. ನನ್ನ ಪ್ರೀತಿ ರಸಿಕ 
ನನಗೂ ನಿನಗೂ ಈಡೂ ಜೋಡಿ ಎಂಥಾ ಹೊಂದಿಕೆ 
ಮೈಮಾಟದಲ್ಲಿ ನೋಟದಲ್ಲಿ ತುಂಟನಗೆ ಆಟದಲ್ಲಿ ಏನೇನೋ ಮಾಡುವೇ ನಾಚಿಕೇ ... ಅಂಜಿಕೇ .. ಏತಕೇ ...    
--------------------------------------------------------------------------------------------------------------------------

ಬೇಟೆ (೧೯೮೬) - ಅಂದ ಚಂದದಲ್ಲಿ
ಸಂಗೀತ : ಎಸ್ಪಿ.ಬಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ

ಅಂದಚಂದದಲಿ ಬಿಂಕ ಬೆಡಗಿನಲಿ ನನ್ನ ಸಾಟಿ ಇಲ್ಲ 
ಎಲ್ಲಿ ನನ್ನ ಹೆಸರು ರೋಷ ನನ್ನುಸಿರೂ ಚೆಲುವು ಊರಿಗೆಲ್ಲಾ 
ಚುರು ಚುರು ಮಾತು ಹರಿತದ ನೋಟ ಹರೆಯದ ಮಾಟ ಏನೀನಿಲ್ಲ... 
ಬೆರಗಾಗಿ ಬಂತೂ ಊರೆಲ್ಲ.. ಛಲಗಾರದಂತ ಗಂಡಿಲ್ಲಾ... ಆ 
ಅಂದಚಂದದಲಿ ಬಿಂಕ ಬೆಡಗಿನಲಿ ನನ್ನ ಸಾಟಿ ಇಲ್ಲ 
ಎಲ್ಲಿ ನನ್ನ ಹೆಸರು ರೋಷ ನನ್ನುಸಿರೂ ಚೆಲುವು ಊರಿಗೆಲ್ಲಾ 
ಚುರು ಚುರು ಮಾತು ಹರಿತದ ನೋಟ ಹರೆಯದ ಮಾಟ ಏನೀನಿಲ್ಲ... 
ಬೆರಗಾಗಿ ಬಂತೂ ಊರೆಲ್ಲ.. ಛಲಗಾರದಂತ ಗಂಡಿಲ್ಲಾ...  

ಜನರ ಇಗೋ ನಾ ಕುಣಿಸುವೆ ಥೈತಕ ಎನ್ನುತಾ .. ಸೆಳೆದು ಮನ ನನ್ನ ಕಣ್ಣೋಟವೇ... 
ಹೊಸದು ಕಥೆ ನಾ ಬರೆಯುವೇ ಸೊಂಟವ ತೂಗುತಾ ಹರೆಯ ಇದೂ... ತಂದ ವಯ್ಯಾರವೇ... 
ಹೋಯ್ .. ಯಾರವರೂ ನನ್ನವರು ಜರಿಯ ಯಾತರ ಹೀಗೆ ಗೆಲ್ಲವರು ನನ್ನ 
ಯಾತಕೀ ನಾ ತರವು ಇನ್ನ ನನ್ನಾಣೆ ನಾ ಕಾಣೇನೂ 
ಅಂದಚಂದದಲಿ ಬಿಂಕ ಬೆಡಗಿನಲಿ ನನ್ನ ಸಾಟಿ ಇಲ್ಲ 
ಎಲ್ಲಿ ನನ್ನ ಹೆಸರು ರೋಷ ನನ್ನುಸಿರೂ ಚೆಲುವು ಊರಿಗೆಲ್ಲಾ 
ಚುರು ಚುರು ಮಾತು ಹರಿತದ ನೋಟ ಹರೆಯದ ಮಾಟ ಏನೀನಿಲ್ಲ... 
ಬೆರಗಾಗಿ ಬಂತೂ ಊರೆಲ್ಲ.. ಛಲಗಾರದಂತ ಗಂಡಿಲ್ಲಾ... ಆ 

ವಯಸ್ಸೂ ಇದೋ ಈ ಮನದಲಿ ಆಸೆಯ ತಂದಿದೆ ಹೊಸದು ಬಿಸಿ ಹ್ಹಾ .. ಏಕೋ ಈ ಮೈಯ್ಯಲೀ..   
ಜೊತೆಯ ಸುಖ ತಾ ಬಯಸಿದೆ ಬೇಗೆಯ ತಾಳದೇ.. ವಿರಹ ಇದ..  ಯಾರಿಗೆ ಹೇಳಲೀ..     
ಪ್ರೀತಿಸಲು ಹೂವಿನನ ನಾನೂ ದ್ವೇಷಿಸಲು ಮುಳ್ಳಿನನ ನಾನು 
ಬೆಂಕಿಯಲಿ ಈಜುತಿಹ ನೀನು ಈ ವೇಳೆ ಒಂದಾಗಲೂ  
ಅಂದಚಂದದಲಿ ಬಿಂಕ ಬೆಡಗಿನಲಿ ನನ್ನ ಸಾಟಿ ಇಲ್ಲ 
ಎಲ್ಲಿ ನನ್ನ ಹೆಸರು ರೋಷ ನನ್ನುಸಿರೂ ಚೆಲುವು ಊರಿಗೆಲ್ಲಾ 
ಹೇ.. ಚುರು ಚುರು ಮಾತು ಹರಿತದ ನೋಟ ಹರೆಯದ ಮಾಟ ಏನೀನಿಲ್ಲ... 
ಬೆರಗಾಗಿ ಬಂತೂ ಊರೆಲ್ಲ.. ಛಲಗಾರದಂತ ಗಂಡಿಲ್ಲಾ...  
-------------------------------------------------------------------------------------------------------------------------

ಬೇಟೆ (೧೯೮೬) - ಚಿಂತಿಸು ನೀ ಮನವೇ
ಸಂಗೀತ : ಎಸ್ಪಿ.ಬಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ

ಕಾಮ ಕ್ರೋಧ ಲೋಭ ಮದ ಮಾತ್ಸರ್ಯವೇ.. ಮಾನವನ ಅಳಿವಿಗೆ ಕಾರಣ 
ಇದ ಗೆದ್ದ ಗಾಂಧೀ ಏಸು ಬುದ್ಧ ವಿವೇಕಾನಂದರೇ ಜಗದ ಉಳಿವಿಗೇ ಕಾರಣ 
ಚಿಂತಿಸು ನೀ ಮನವೇ ಕ್ಷಣಕಾಲಕೆ ಪ್ರೇಮವೇ ಬಾಳಿನ ದೀಪ ದ್ವೇಷವೇ ದಹಿಸುವ ಶಾಪ 
ಚಿಂತಿಸು ನೀ ಮನವೇ ಕ್ಷಣಕಾಲಕೆ ಪ್ರೇಮವೇ ಬಾಳಿನ ದೀಪ ದ್ವೇಷವೇ ದಹಿಸುವ ಶಾಪ 

ಕಾಮಕೆ ಬಲಿಯಾಗಿ ರಾವಣ ಹಾಳಾದ ಮೋಹಕೆ ಇಂದ್ರನೂ ಬಲಿಯಾದ 
ಕ್ರೋಧದ ಉರಿಯಲ್ಲಿ ದುರ್ಯೋಧನ ಹಾಳಾದ ಮದದಲಿ ಅಸುರನು ಅಸು ನೀಗಿದ 
ದಾನವರನ್ನೂ ಒಲವಲಿ ಗೆಲಿಸು ಮಾನವರಾಗಿ ನೀ ಮಾಡು 
ಜೀವನ ಶಾಲೇ  ಅನುಭವ ಪಾಠ ಬಾಳುವ ದಾರೀ ನೀ ತೋರು 
ಮಾತು ಪ್ರೀತಿಯ ಪಂಚಮವೇದ  ಪ್ರೇಮವೇ ಬಾಳಿನ ದೀಪ ದ್ವೇಷವೇ ದಹಿಸುವ ಶಾಪ 

ಜಾತಿಯ ಆವೇಶ ಮತಗಳ ಆಕ್ರೋಶ ಮನುಜರ ಕೊಲ್ಲುವ ವಿಷ ಜ್ವಾಲೇ .. 
ಸಾಗರ ತಾನೊಂದು ನದಿಗಳು ಹಲವಾರು ಮುಕ್ತಿಯ ಮಾರ್ಗದ ಗುರಿ ಒಂದೇ... 
ಬೇಧಗಳನೂ ಕೂಡ ಗಲ್ಲೇ ಕೊಂದು ಸೋದರ ಭಾವ ನೀ ಬೆಳೆಸು 
ರಕ್ತದ ದಾಹ ಇರುವಡೆಯಲ್ಲಿ ಪ್ರೀತಿಯ ಅಮೃತ ನೀ ಹರಿಸು 
ಕೇಳಲೀ ಎಲ್ಲಡೇ ಶಾಂತಿಯ ರಾಗ  ಪ್ರೇಮವೇ ಬಾಳಿನ ದೀಪ ದ್ವೇಷವೇ ದಹಿಸುವ ಶಾಪ  
ಚಿಂತಿಸು ನೀ ಮನವೇ ಕ್ಷಣಕಾಲಕೆ ಪ್ರೇಮವೇ ಬಾಳಿನ ದೀಪ ದ್ವೇಷವೇ ದಹಿಸುವ ಶಾಪ 
--------------------------------------------------------------------------------------------------------------------------

ಬೇಟೆ (೧೯೮೬) - ಛಳಿಯ ನಡುಕ ಒಡಲ ಒಳಗೆ
ಸಂಗೀತ : ಎಸ್ಪಿ.ಬಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ

ಗಂಡು : ಛಳಿಯ ನಡುಕ ಒಡಲ ಒಳಗೆ ಬಿಸಿಯ ಸುಖವ ಅರಸಿ ಹೊರಗೆ 
            ಮನಸು ಬಯಸಿದೆ ಬೆರೆಯಲು ನಿನ್ನಲ್ಲಿ.. 
            ಅರಿತೇ ನಾ... ಹೊಸದು ಸುಖವ ಮಧುರ ಮಿಲನ ಕ್ಷಣದಲ್ಲಿ 
ಹೆಣ್ಣು : ಛಳಿಯ ನಡುಕ ಒಡಲ ಒಳಗೆ ಬಿಸಿಯ ಸುಖವ ಅರಸಿ ಹೊರಗೆ 
          ಮನಸು ಬಯಸಿದೆ ಬೆರೆಯಲು ನಿನ್ನಲ್ಲಿ.. 
          ಅರಿತೇ ನಾ... ಹೊಸದು ಸುಖವ ಮಧುರ ಮಿಲನ ಕ್ಷಣದಲ್ಲಿ 

ಹೆಣ್ಣು : ಬಿಗಿದಾಗ ತೋಳು ಚೆನ್ನ   ಗಂಡು : ಪಡಿದಾಗ ಕೆನ್ನೇ ಚೆನ್ನ 
ಹೆಣ್ಣು : ಮಂಜಿನಂತೆ ತಂಪಂತೇ ನೀರು ತಂದ ಮುತ್ತಂತೇ  
ಗಂಡು : ಆಹಾಹಾಹಾ.. ಜೇನಿನಂತೇ ಇಂಪಂತೇ ನೀನು ಆಡೋ ಮಾತಂತೇ .. 
ಹೆಣ್ಣು : ಪ್ರೇಮರಾಗ ಮೀಟಿದಾಗ ಬಾಳೇ ಸಂಗೀತವೂ ... 
ಗಂಡು : ಸುಖದ ಸಂಕೇತವೂ ..  
ಹೆಣ್ಣು : ಛಳಿಯ ನಡುಕ ಒಡಲ ಒಳಗೆ ಬಿಸಿಯ ಸುಖವ ಅರಸಿ ಹೊರಗೆ 
          ಮನಸು ಬಯಸಿದೆ ಬೆರೆಯಲು ನಿನ್ನಲ್ಲಿ.. 
ಗಂಡು : ಅರಿತೇ ನಾ... ಹೊಸದು ಸುಖವ ಮಧುರ ಮಿಲನ ಕ್ಷಣದಲ್ಲಿ 

ಗಂಡು : ಮನೆಯಾಗಿ ನಗೆಯ ಹೊನಲು           ಹೆಣ್ಣು : ಮನವಾಗಿ ನಲಿವಗಡಲೂ   
ಗಂಡು : ಬಾಳನೌಕೆ ಹಾಯಾಗಿ ತೀರ ಸೇರೋ ಒಂದಾಗಿ 
ಹೆಣ್ಣು : ಓಹೋಹೊಹೋ ಪ್ರೀತಿ ನಮ್ಮ ಆಧಾರ ದೈವ ಇಲ್ಲಿ ಸಾಕಾರ 
ಗಂಡು : ನಿತ್ಯ ಇಲ್ಲಿ ಭವ್ಯವಾದ ಪ್ರೇಮ ಆರಾಧನಾ... 
ಹೆಣ್ಣು : ಒಲವ ಸಮ್ಮೇಳನ... 
ಗಂಡು : ಛಳಿಯ ನಡುಕ ಒಡಲ ಒಳಗೆ ಬಿಸಿಯ ಸುಖವ ಅರಸಿ ಹೊರಗೆ 
          ಮನಸು ಬಯಸಿದೆ ಬೆರೆಯಲು ನಿನ್ನಲ್ಲಿ.. 
ಹೆಣ್ಣು : ಅರಿತೇ ನಾ... ಹೊಸದು ಸುಖವ ಮಧುರ ಮಿಲನ ಕ್ಷಣದಲ್ಲಿ 
--------------------------------------------------------------------------------------------------------------------------

No comments:

Post a Comment