891. ಬ್ರಹ್ಮ ವಿಷ್ಣು ಮಹೇಶ್ವರ (೧೯೮೮)


ಬ್ರಹ್ಮ ವಿಷ್ಣು ಮಹೇಶ್ವರ ಚಿತ್ರದ ಹಾಡುಗಳು 
  1. ಎಂದೆಂದಿಗೂ, ಒಂದಾಗಿ ಹೀಗೆ, ಆನಂದವಾ, ಉಯ್ಯಾಲೆ ಮೇಲೆ,
  2. ಚಿನ್ನ, ನಾಳೆ ನೀನು, ಅಮ್ಮ ಆಗುವೆ 
  3. ರಾತ್ರೀ ವೇಳೆ ...ಆ... ಗಾಳಿ ಮಳೆಯೂ...ಆ.. ಮಿಂಚು ಓಡಿ ಓಡಿ.. 
  4. ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ
  5. ಹುಡುಗಿಯು ಚೆನ್ನ ಹುಡುಗನು ಚೆನ್ನ
ಬ್ರಹ್ಮ ವಿಷ್ಣು ಮಹೇಶ್ವರ (೧೯೮೮) - ಎಂದೆಂದಿಗೂ, ಒಂದಾಗಿ ಹೀಗೆ, ಆನಂದವಾ, ಉಯ್ಯಾಲೆ ಮೇಲೆ,
ಸಂಗೀತ : ವಿಜಯಾನಂದ  ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ.ನಾಗೂರಬಾಬು,  ಮನೋಹರ

ಎಂದೆಂದಿಗೂ, ಒಂದಾಗಿ ಹೀಗೆ, ಆನಂದವಾ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ಎಹೇ... ಬಲ್ಲೇ ಏನು.. ಆಹಾ.. ಬಲ್ಲೇ ಏನು
ಎಹೇ... ಬಲ್ಲೇ ಏನು.. ಆಹಾ.. ಬಲ್ಲೇ ಏನು
ಎಂದೆಂದಿಗೂ, ಒಂದಾಗಿ ಹೀಗೆ, ಆನಂದವಾ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು 

ಸಂತೋಷ ಹೊಂದೊಕೆ, ಜೊತೆಯಾಗಿ ಸೇರೋಕೆ 
ಊರೆಲ್ಲಾ ಸುತ್ತೋಕೆ, ಮನಸಾರ ನಲಿಯೋಕೆ, 
ಹೇ...! ಬಂದೋರು ನಾವು ಇಲ್ಲಿಗೆ... ಆಹಾ... 
ಈ ಸ್ನೇಹ ಹೀಗೇನೆ, ನುಡಿಯಲ್ಲಿ ಸವಿಜೇನು 
ಬಾಳೆಲ್ಲ ಸುಖವೇನೆ, ಬದುಕೊಂದು  ಹಾಡೇನೇ 
ನೋವೆಂದರೇನು ನಾ ಕಾಣೆ 
ಬಾಳೊಂದು ಹೂವಂತೆ, ನಮಗೆ ಎಂದು ನಿಶ್ಚಿಂತೆ 
ನಿಜವನ್ನು ನೀನು ಹೇಳಿದೆ..  ಆಹಾ... 
ಎಂದೆಂದಿಗೂ, ಒಂದಾಗಿ ಹೀಗೆ, ಆನಂದವಾ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು

ಕಾಡೇನು ನಾಡೇನು, ಬಿಸಿಲೇನು ನೆರಳೇನು 
 ಒಂದಾಗಿ ನಿಂತಾಗ, ಸುಮವೇನು ಮುಳ್ಳೇನು 
ಹೇ.. ಹಿತವನೇ ಎಲ್ಲಾ ಹಾದಿಗೆ 
ಆ.. ಆಕಾಶ ಭೂಮಿ ಏನು, ಕಡಲೆಂಬ ಮಾತೇನು 
ಬೇಕಾಗಿ ಬಂದಾಗ, ಆ ಸ್ವರ್ಗ ತಂದೇನೂ 
ಹೊ... ನಿನಗಾಗಿ ನಾನು ಇಂದೇನೇ 
ನಮ್ಮನ್ನು ಹೋಲೋರು, ನಮ್ಮನು ಗೆಲ್ಲೋರು 
ಬಂದಿಲ್ಲ ಇನ್ನೂ ಭೂಮಿಗೇ 
ಎಂದೆಂದಿಗೂ, ಒಂದಾಗಿ ಹೀಗೆ, ಆನಂದವಾ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
ಸಂಗೀತ ಹಾಡೋರು ನಾವು..ನಾವು
ಎಹೇ... ಬಲ್ಲೇ ಏನು.. ಆಹಾ.. ಬಲ್ಲೇ ಏನು
ಎಹೇ... ಬಲ್ಲೇ ಏನು.. ಆಹಾ.. ಬಲ್ಲೇ ಏನು
ಎಂದೆಂದಿಗೂ, ಒಂದಾಗಿ ಹೀಗೆ, ಆನಂದವಾ, ಉಯ್ಯಾಲೆ ಮೇಲೆ,
ತೂಗಾಟವಾಡೋರು, ನಾವು.. ನಾವು..
-------------------------------------------------------------------------------------------------------------------------

ಬ್ರಹ್ಮ ವಿಷ್ಣು ಮಹೇಶ್ವರ (೧೯೮೮) - ಚಿನ್ನ, ನಾಳೆ ನೀನು, ಅಮ್ಮ ಆಗುವೆ 
ಸಂಗೀತ : ವಿಜಯಾನಂದ  ಸಾಹಿತ್ಯ : ಚಿ.ಉದಯಶಂಕರ ಗಾಯನ : ನಾಗೂರಬಾಬು(ಮನು),  ಚಿತ್ರಾ 

ಚಿನ್ನ, ನಾಳೆ ನೀನು, ಅಮ್ಮ ಆಗುವೆ 
ನಿನ್ನ, ಕರುಣೆ ಇಂದು ನಾ ಓಪ್ಪುವೇ 
ಚಿನ್ನ, ನಾಳೆ ನೀನು, ಅಮ್ಮ ಆಗುವೆ 
ನಿನ್ನ, ಕರುಣೆ ಇಂದು ನಾ ಓಪ್ಪುವೇ 
ಇನ್ನೂಚಿಕ್ಕ ವಯಸು, ನಂಗೆ ಅಪ್ಪ ಆದರೇ
ಬೇರೆ ಎಂಥ ಮಾತು ಏಕೆ ಏನು ತೊಂದರೇ
ಚಿನ್ನ, ನಾಳೆ ನೀನು, ಅಮ್ಮ ಆಗುವೆ 
ನಿನ್ನ, ಕರುಣೆ ಇಂದು ನಾ ಓಪ್ಪುವೇ 

ಅನುದಿನ ಹಗಲಲಿ ಕಂದ ಮಡಿಲಲ್ಲಿ
ನಿನ್ನ ಪ್ರೀತಿ ಮಗುವಲ್ಲಿ ಗಮನ ಶಿಸುವಲ್ಲಿ
ಅನುದಿನ ಇರುಳಲ್ಲಿ ಮಗುವೇ ಮೆತ್ತೆಲಿ
ನನ್ನ ಆಗ ಆಗಲಿ ನಿದ್ದೆ ಇನ್ನೆಲ್ಲಿ
ಕಂದನು ಮಡಿಲಲಿ ನಲ್ಲ ನನ್ನ ತೋಳಲ್ಲಿ
ಹೀಗೆಯೇ ಹರುಷದಿ ಇಡುವೇ ಸುಖದಲಿ
ಚಿನ್ನ, ನಾಳೆ ನೀನು, ಅಮ್ಮ ಆಗುವೆ 
ನಿನ್ನ, ಕರುಣೆ ಇಂದು ನಾ ಓಪ್ಪುವೇ

ಅಪ್ಪನ ನುಡಿಗಳೇ ಕೇಳಿ ನನ್ನ ಕಂದ
ತಾನಾಗಿ ಮುದದಿಂದ ನೋಡೋ ಛಲದಿಂದ 
ಅವಸರ ಪಡುತಿಹ ತುಂಟ ಆಡುತ್ತ 
ಕೈಕಾಲು ನೂಕುತ್ತಾ ನನ್ನ ಕಾಡುತ್ತಾ 
ಅಮ್ಮನ ಹಾಗೆಯೇ ಕೋಪ ನಿಂಗೆ ಕಂದಂಗೆ 
ಕಾಲಲಿ ನೂಕಿದ ತಳ್ಳಿ ನನ್ನ ದೂರಕ್ಕೆ 
ಕಾಲಲಿ ನೂಕಿದ ತಳ್ಳಿ ನನ್ನ ದೂರಕ್ಕೆ 
ಚಿನ್ನ, ನಾಳೆ ನೀನು, ಅಮ್ಮ ಆಗುವೆ 
ನಿನ್ನ, ಕರುಣೆ ಇಂದು ನಾ ಓಪ್ಪುವೇ 
ಚಿನ್ನ, ನಾಳೆ ನೀನು, ಅಮ್ಮ ಆಗುವೆ 
ನಿನ್ನ, ಕರುಣೆ ಇಂದು ನಾ ಓಪ್ಪುವೇ 
ಇನ್ನೂಚಿಕ್ಕ ವಯಸು, ನಂಗೆ ಅಪ್ಪ ಆದರೇ
ಬೇರೆ ಎಂಥ ಮಾತು ಏಕೆ ಏನು ತೊಂದರೇ
ಚಿನ್ನ, ನಾಳೆ ನೀನು, ಅಮ್ಮ ಆಗುವೆ 
ನಿನ್ನ, ಕರುಣೆ ಇಂದು ನಾ ಓಪ್ಪುವೇ 
--------------------------------------------------------------------------------------------------------------------------

ಬ್ರಹ್ಮ ವಿಷ್ಣು ಮಹೇಶ್ವರ (೧೯೮೮) - ರಾತ್ರೀ ವೇಳೆ ...ಆ... ಗಾಳಿ ಮಳೆಯೂ...
ಸಂಗೀತ : ವಿಜಯಾನಂದ  ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ. ಎಸ.ಜಾನಕಿ 

ರಾತ್ರೀ ವೇಳೆ ...
ಆ... ಗಾಳಿ ಮಳೆಯೂ...
ಆ.. ಮಿಂಚು ಓಡಿ ಓಡಿ.. ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ ನಾ ತಾಳೇ ಚಳಿ..ಚಳಿ

ಓ.. ಈ ಕಣ್ಣೋಟ ಕಂಡಾಗ ನೀ ಹೀಗೆ ನಿಂತಾಗ
ಈ ಏಕಾಂತ ಇರುವಾಗ ನನ್ನಲ್ಲೇನೋ ಆದಾಗ
ಸುಮ್ಮನೆ ನಿಲ್ಲದೆ ಸೇರು ಬಾ ಬಾ ಬೇಗ ಆನಂದ ಹೊಂದೋಣ
ರಾತ್ರೀ ವೇಳೆ ...
ಆ... ಗಾಳಿ ಮಳೆಯೂ...
ಆ.. ಮಿಂಚು ಓಡಿ ಓಡಿ.. ಆ ಬಾನಲ್ಲಿ ಗುಡುಗಿ

ಈ ಮೈಯೆಲ್ಲಾ ನಡುಗಿ ನಾ ತಾಳೇ ಚಳಿ..ಚಳಿ
ಯಾರೋ ಕಾಣೆ ನಮಗಾಗಿ ಮೆತ್ತೆಯ ಹಾಸಿ ಹೋದೋರು 
ಯಾರೋ ಕಾಣೆ ನಮಗಾಗಿ ಹೂವ ಚೆಲ್ಲಿ ಹೋದೋರು 
ವಂದನೆ ಅವರಿಗೆ ಬನ್ನಿರಿ ಬೇಗ ಆ ಸ್ವರ್ಗ ನೋಡೋಣ 
ರಾತ್ರೀ ವೇಳೆ ...
ಆ... ಗಾಳಿ ಮಳೆಯೂ...
ಆ.. ಮಿಂಚು ಓಡಿ ಓಡಿ.. ಆ ಬಾನಲ್ಲಿ ಗುಡುಗಿ
ಈ ಮೈಯೆಲ್ಲಾ ನಡುಗಿ ನಾ ತಾಳೇ ಚಳಿ..ಚಳಿ 
--------------------------------------------------------------------------------------------------------------------------

ಬ್ರಹ್ಮ ವಿಷ್ಣು ಮಹೇಶ್ವರ (೧೯೮೮) - ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ
ಸಂಗೀತ : ವಿಜಯಾನಂದ  ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ. 

ಆಹಾ ಎಂಥ ಸಂಭ್ರಮವು ಈ ದಿನದಾ ಆನಂದವು
ಹಾಂ!  ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ
ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ
ಅರವತ್ತು ಆದರೇನು ಹೊಸ ಆಸೆ ಬಾರದೇ
ಹಸೆಮಣೆ ಹೆಣ್ಣಾ ನೋಡು ನಸು ನಾಚಿ ಕೂಡಿದೆ
ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ

ತಂದೆ ತಾಳಿ ಕಟ್ಟೋದನ್ನು ನಾವಿಲ್ಲೆ ಕಂಡೆವು
ಅದಕ್ಕಾಗಿ ನಮಗಾಗಿ ಜೊತೆಯಾಗಿ ಕೂತರು
ಏಳು ಹೆಜ್ಜೆ ಓಡೋದನ್ನು ನಾವಿಲ್ಲಿ ಕಂಡೆವು
ನಮ್ಮಾಸೆ ತಿಳಿದಾಗ ಹಸೆಯನ್ನೆಲ್ಲಿ ಕೂತರು
ವಯಸಾದರೇನು ಈಗ ...
ವಯಸಾದರೇನು ಈಗ ಇದು ಜೋಡಿ ಅಂದವೇ
ಮನಸಂತೆ ಮಾರ್ಗ ಎಂಬ ನುಡಿ ಕೇಳೇ ಇಲ್ಲವೇ
ಬದುಕಲ್ಲಿ ಇಂಥಾ ಭಾಗ್ಯ ಇನ್ನು ಮುಂದೆ ಕಾಣುವೇ
ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ
ಅರವತ್ತು ಆದರೇನು ಹೊಸ ಆಸೆ ಬಾರದೇ
ಹಸೆಮಣೆ ಹೆಣ್ಣಾ ನೋಡು ನಸು ನಾಚಿ ಕೂಡಿದೆ
ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ 

ಸೀತಾರಾಮರಂತೆ ನೀವು ಹಾಯಾಗಿ ಬಾಳಿರಿ 
ಒಲವಿಂದ ಮುದದಿಂದ ಸುಖವನ್ನು ಹೊಂದಿರಿ 
ಬಿಸಿಗಾಲದಲ್ಲಿ ಏಸಿ ರೂಮಿನಲ್ಲಿ ಬಂದಿರಿ 
ಮಧುಚಂದ್ರ ಮಧು ಸೂರ್ಯ ಎಂದು ಯಾತ್ರೆ ಮಾಡಿರಿ 
ನೂರು ಮಕ್ಕಳನ್ನು ಬೇಡ ಆರತಿ ಕೀರ್ತಿ ಸಾರಿ 
ಮೂರೂ ಮಕ್ಕಳನ್ನು ಹೆತ್ತು ಮುದ್ದಾಗಿ ಸಾಕಿ 
ನೂರು ಬಾರಿ ಲಾಲಿ ಹಾಡು ಇಂಪಾಗಿ ಹಾಡಿರಿ 
ಅನುರಾಗ ಎಂಬ ನುಡಿಗೆ ಅರ್ಥವನ್ನು ಕಾಣಿರಿ 
ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ
ಅರವತ್ತು ಆದರೇನು ಹೊಸ ಆಸೆ ಬಾರದೇ
ಹಸೆಮಣೆ ಹೆಣ್ಣಾ ನೋಡು ನಸು ನಾಚಿ ಕೂಡಿದೆ
ಎಂಥಾ ಗಂಡು, ಎಂಥಾ ಹೆಣ್ಣು ಎಂಥಾ ಜೋಡಿ ನೋಡಿರಿ 
--------------------------------------------------------------------------------------------------------------------------

ಬ್ರಹ್ಮ ವಿಷ್ಣು ಮಹೇಶ್ವರ (೧೯೮೮) - ಹುಡುಗಿಯು ಚೆನ್ನ ಹುಡುಗನು ಚೆನ್ನ
ಸಂಗೀತ : ವಿಜಯಾನಂದ  ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್ಪಿ.ಬಿ.

ಹುಡುಗಿಯು ಚೆನ್ನ ಹುಡುಗನು ಚೆನ್ನ
ಸಮಯವೂ ಚೆನ್ನ ಸೇರಲು ಚೆನ್ನ
ಬಾ ಬೇಗ ಸೇರೋಣ ಆನಂದ ಹೊಂದೋಣ

ದಿನ ದಿನ ಹೀಗೆ ನೀನು ಬಳಿ ಕರೆವೆಯ
ಸುಖ ಸುಖ ಬೇಕು ಎಂದು ನಲ್ಲೆ ನುಡಿವೆಯಾ
ಬಿಡು ಬಿಡು ಮಾತು ಇನ್ನು ನನ್ನ
ಮನಸಿನಾ ಹೊಸ ಹೊಸ ಆಸೆ ಏನು ನನ್ನ ಅರಿತೆಯಾ
ಎಲ್ಲ ನಾ ಬಲ್ಲೆನು ಎಲ್ಲಿ ನೀ ಹೋಗಿರು
ಹುಡುಗಿಯು ಚೆನ್ನ ಹುಡುಗನು ಚೆನ್ನ
ಸಮಯವೂ ಚೆನ್ನ ಸೇರಲು ಚೆನ್ನ
ಬಾ ಬೇಗ ಸೇರೋಣ ಆನಂದ ಹೊಂದೋಣ

ಸುತ್ತ ಮುತ್ತ ಯಾರು ಇಲ್ಲಾ ನನ್ನ ನೀ ಮರೆತಿಯಾ
ಸಿಹಿ ಕಹಿ ಕೆನ್ನೆಗೊಂದು ಮುತ್ತು ಕೊಡುವೆಯಾ
ಅಯ್ಯೋ ಅಯ್ಯೋ ಇಂಥಾ ಮಾತು ಇಲ್ಲಿ ನುಡಿವುದೇ
ನಿನ್ನೆ ನುಡಿ ಕೇಳಿ ಈಗ ತಲೆ ತಿರುಗಿದೆ
ಮೆಲ್ಲಗೆ ಬಿದ್ದರೆ ಆಗುದು ತೊಂದರೆ
ಹುಡುಗಿಯು ಚೆನ್ನ ಹುಡುಗನು ಚೆನ್ನ
ಸಮಯವೂ ಚೆನ್ನ ಸೇರಲು ಚೆನ್ನ
ಬಾ ಬೇಗ ಸೇರೋಣ ಆನಂದ ಹೊಂದೋಣ
-------------------------------------------------------------------------------------------------------------------------

No comments:

Post a Comment