892. ಶಾಂತಿ ನಿವಾಸ (೧೯೮೮)

ಶಾಂತಿ ನಿವಾಸ ಚಲನಚಿತ್ರದ ಹಾಡುಗಳು 
  1. ಮಸಾಲ ಪಾನ ಮಸಾಲ,
  2. ಮೈಸೂರಿನಿಂದ ಕೈ ಹಿಡಿದು ಬಂದ
  3.  ಜ್ಯೂಬಿಲೀ ಸಿಲ್ವರ್ 
  4.  ಒಂದು ಹನಿ ನೀರು ಬರಲು ನಿನ್ನ ಕಣ್ಣಲ್ಲಿ
ಶಾಂತಿ ನಿವಾಸ (೧೯೮೮) - ಮಸಾಲ ಪಾನ ಮಸಾಲ,
ಸಂಗೀತ : ಎಂ.ರಂಗರಾವ  ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್ಪಿ.ಬಿ. ವಾಣಿಜಯರಾಂ, ಕೋರಸ್ 

ಮಸಾಲ ಪಾನ ಮಸಾಲ, ಸಾದಾ ಬೇಕೋ ಮೀಠಾ  ಬೇಕೋ
ಜರ್ದಾ ಬೇಕೋ ಕಿಲಕಿಲ ಬೇಕೋ ಅಯ್ಯೋ ಅಯ್ಯಯ್ಯಪ್ಪ
ತಲೆ ಘಮ್ಮೆನ್ನೋ ಬಾಯ್ ಘಮ್ಮೆನ್ನೋ  ಮೈ ಜುಮ್ಮೆನೋ
ಮಸಾಲ ಪಾನ ಮಸಾಲ, ಸಾದಾ ಬೇಕೋ ಮೀಠಾ  ಬೇಕೋ

ಲೈಲಾ ಅಯ್ಯೋ ಲೈಲಾ ಅಯ್ಯೋ (ಮಜನು )
ಲೈಲಾ ಮಜನು ಹಾಕಿಕೊಂಡ ಪಾನ ಮಸಾಲ 
ರೋಮಿಯೋ ಜೂಲಿಯೆಟ್ ಕಾಣದಂಥ ಪಾನ ಮಸಾಲ 
ಹೇಮಾ ರೇಖಾ ಬೇಕು ನಿಮ್ಮಿ ಪಮ್ಮಿ ಮೆಲ್ಲೋ ಮಸಾಲ 
ಸಂಜು ದೀಪ ರಾಜು ಶಮ್ಮಿ ಹಾಕೋ ಮಸಾಲ 
ಮಾವಂಗೆ ಮಸ್ಕಾ ಹಚ್ಚಬೇಕೆ 
ಅತ್ತೆ ಬಾಯಿ ಮುಚ್ಚ ಬೇಕೇ ಮೆಲ್ಲಗೆ ತಾಜಾ ಮಾಡಬೇಕೆ 
ಗೆಳೆಯನ ಹಾಡ ಕೇಳಬೇಕೆ 
ಎಲ್ಲರಿಗು ಎಲ್ಲದಕೂ ಒಂದೇ ಝುಮ್ಮನೆ ಪಾನ 
ಮಸಾಲ ಪಾನ ಮಸಾಲ, ಸಾದಾ ಬೇಕೋ ಮೀಠಾ  ಬೇಕೋ
ಜರ್ದಾ ಬೇಕೋ ಕಿಲಕಿಲ ಬೇಕೋ ಅಯ್ಯೋ ಅಯ್ಯಯ್ಯಪ್ಪ
ತಲೆ ಘಮ್ಮೆನ್ನೋ ಬಾಯ್ ಘಮ್ಮೆನ್ನೋ  ಮೈ ಜುಮ್ಮೆನೋ
ಮಸಾಲ ಪಾನ ಮಸಾಲ, ಸಾದಾ ಬೇಕೋ ಮೀಠಾ  ಬೇಕೋ 

ಮುಡಿದಿಹ ಮಲ್ಲಿಗೆ ಹೂವಿನ ಪರಿಮಳ 
ಮುತ್ತನು ನೋಡು ಕೆಂಪನೆ ತುಟಿಯ 
ಅಂಚಲಿ ತುಂಬಿಹ ನಿಶೆಯನು ನೋಡು 
ಹರೆಯದ ನಿಂಗು ಪ್ರೀತಿಯ ಗುಂಗು 
ಬೆರೆಸಿದೆ ನೋಡು ಬುದ್ದಿಗೆ ಟಾನಿಕ್ 
ಮೈಯಿಗೆ ಮ್ಯಾಜಿಕ ಅನುಭವ  ನೋಡು 
ತಿನ್ನಲು ಬುದ್ದಿ ಚಿಗುರಿರಬೇಕು 
ಬೆಳ್ಳಿ ಸುಣ್ಣ ಬಳಿದಿರಬೇಕು ನಾಜೂಕು ಕೈಗಳು ತುಡಿಸಿರಬೇಕು 
ಮೆಲ್ಲಗೆ ಬಾಯಿಗೆ ಅದನು ಇಡಬೇಕು 
ಆ ಘಳಿಗೆ ಆಗಸದ ತೇಲಿಸು ಝಂಮೆಂಥ
ಮಸಾಲ ಪಾನ ಮಸಾಲ, ಸಾದಾ ಬೇಕೋ ಮೀಠಾ  ಬೇಕೋ
ಜರ್ದಾ ಬೇಕೋ ಕಿಲಕಿಲ ಬೇಕೋ ಅಯ್ಯೋ ಅಯ್ಯಯ್ಯಪ್ಪ
ತಲೆ ಘಮ್ಮೆನ್ನೋ ಬಾಯ್ ಘಮ್ಮೆನ್ನೋ  ಮೈ ಜುಮ್ಮೆನೋ
ಮಸಾಲ ಪಾನ ಮಸಾಲ, ಸಾದಾ ಬೇಕೋ ಮೀಠಾ  ಬೇಕೋ 
--------------------------------------------------------------------------------------------------------------------------

ಶಾಂತಿ ನಿವಾಸ (೧೯೮೮) - ಮೈಸೂರಿನಿಂದ ಕೈ ಹಿಡಿದು ಬಂದ
ಸಂಗೀತ : ಎಂ.ರಂಗರಾವ  ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್ಪಿ.ಬಿ. ವಾಣಿಜಯರಾಂ

ಮೈಸೂರಿನಿಂದ ಕೈ ಹಿಡಿದು ಬಂದ ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ ನನ್ನಾಸೆ ಮಹಾರಾಣಿ
ಮೈಸೂರಿನಿಂದ ಕೈ ಹಿಡಿದು ಬಂದ ನನ್ನಾಸೆ ಮಹಾರಾಜ
ಮಗುವಂಥ ಮನಸು ಮಾತೆಲ್ಲ ಸೊಗಸು ಬಲು ಅಂದ ನೋಟ
ಮದ್ದೂರಿನಿಂದ ಮುದ್ದಾಗಿ ಬಂದ ನನ್ನಾಸೆ ಮಹಾರಾಣಿ
ಎಳೆಸಾದ ವಯಸು ಕಣ್ತುಂಬ ಕನಸು ಸೊಬಗಿನ ಯುವರಾಣಿ 
ಮೈಸೂರಿನಿಂದ ಕೈ ಹಿಡಿದು ಬಂದ ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ ನನ್ನಾಸೆ ಮಹಾರಾಣಿ

ನಮ್ಮೂರ ಜಾತ್ರೆಯಲಿ ತೇರು ಬಾರೋ ದಾರಿಯಲಿ 
ಕದ್ದು ಕದ್ದು ನೋಡಿದೋರು ನೀವಲ್ಲವೇ 
ಮಾರುದ್ದ ಜಡೆಯನ್ನು ಎಳೆದಾಗ ಪ್ರೀತಿಯಲ್ಲಿ 
ಲಜ್ಜೆಯಿಂದ ಓದಿದೊಳು ನೀನಲ್ಲವೇ 
ತಾಳಿ ಕಟ್ಟೋ ಹೊತ್ತಿನಲಿ ತುಂಟಾಟ 
ಸುಳ್ಳು ಕೋಪ ತೋರೋ ಹಾಗೆ ಹುಸಿ ನೋಟ
ಕೈ ಕೈಯಿ ಸೋಕಿದಾಗ  ಕಣ್ಣು ಕಣ್ಣು ಸೇರಿದಾಗ
ನನ್ನ ನಿನ್ನ ಮೈಯೊಳಗೆ ಮಿಂಚೋಟ
ಮೈಸೂರಿನಿಂದ ಕೈ ಹಿಡಿದು ಬಂದ ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ ನನ್ನಾಸೆ ಮಹಾರಾಣಿ

ಬಾಯ್ತುಂಬಾ ವಿಳ್ಯದಲೇ  ತುಂಬಿಕೊಂಡು
ಬಳ್ಳಿ ಹಾಗೆ ಬಾಗಿ ಬಳುಕಿ ಬಂದೊಳೊ ನೀನಲ್ಲವೇ
ಬಾವಿ ನೀರು ಸೇದೋ ಹೊತ್ತು ಕೇಳಿ ನನ್ನ ಒಂದು ಮುತ್ತು
ಆಸೆ ತೋರಿ ಓಡಿದೋರು ನೀವಲ್ಲವೇ
ಆಗ ತಪ್ಪಿದೆಲ್ಲಾ ಬೇಕಲ್ಲ
ಸುದ್ದಿ ಎನ್ನೋ ಮಾತೆ ನಿಂಗೆ ಗೊತ್ತಿಲ್ಲ
ನನ್ನಾ ಪ್ರಾಣ ಬಂಧಿ ನೀನು
ಅಲ್ಲಿ ಸುಖ ಕಂಡೆ ನಾನು
ನಮ್ಮ ಜೋಡಿಯಂತ ಜೋಡಿ ಇನ್ನಿಲ್ಲ
ಮೈಸೂರಿನಿಂದ ಕೈ ಹಿಡಿದು ಬಂದ ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ ನನ್ನಾಸೆ ಮಹಾರಾಣಿ
ಮೈಸೂರಿನಿಂದ ಕೈ ಹಿಡಿದು ಬಂದ ನನ್ನಾಸೆ ಮಹಾರಾಜ
ಮಗುವಂಥ ಮನಸು ಮಾತೆಲ್ಲ ಸೊಗಸು ಬಲು ಅಂದ ನೋಟ
ಮದ್ದೂರಿನಿಂದ ಮುದ್ದಾಗಿ ಬಂದ ನನ್ನಾಸೆ ಮಹಾರಾಣಿ
ಎಳೆಸಾದ ವಯಸು ಕಣ್ತುಂಬ ಕನಸು ಸೊಬಗಿನ ಯುವರಾಣಿ 
ಮೈಸೂರಿನಿಂದ ಕೈ ಹಿಡಿದು ಬಂದ ನನ್ನಾಸೆ ಮಹಾರಾಜ
ಮದ್ದೂರಿನಿಂದ ಮುದ್ದಾಗಿ ಬಂದ ನನ್ನಾಸೆ ಮಹಾರಾಣಿ
--------------------------------------------------------------------------------------------------------------------------

ಶಾಂತಿ ನಿವಾಸ (೧೯೮೮) - ಜ್ಯೂಬಿಲೀ ಸಿಲ್ವರ್ 
ಸಂಗೀತ : ಎಂ.ರಂಗರಾವ  ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್ಪಿ.ಬಿ. ವಾಣಿಜಯರಾಂ, ಕೋರಸ್ 

ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ  ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ
ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ
ಮಮ್ಮಿ ಡ್ಯಾಡಿ ಮದುವೇ ಆಗಿ ಸಿಲ್ವರ್ ಜ್ಯೂಬಿಲೀ
ಸಂಸಾರದ ಸಂಗೀತದ ಸಿಲ್ವರ್ ಜ್ಯೂಬಿಲೀ
ತುಂಬಿತಿಂದು ಇಪ್ಪತ್ತೈದು ವರ್ಷ
ಹೊಮ್ಮಿ ಬಂದು ಅಲೆಯಾಗಿ ಹರುಷ
ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ  ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ

ವಯಸು ಎಷ್ಟು ಆದರೇನು ಮನಸು ನೋಡಿರಿ
ಯುವಕರನ್ನು ಮೀರಿಸೋ ಉತ್ಸಾಹ ನೋಡಿರಿ
ನಾಚುತ ಬರುವ ಹೊಸ ಮದುಮಗಳ
ಮುಖದ ಕಾಂತಿ ಮನದಿ ಶಾಂತಿ ದೇವಿ ಇವಳು
ಲಕ್ಷ್ಮೀನಾರಾಯಣರ ಜೋಡಿ ನೋಡಿರಿ
ಆದರ್ಶ ದಂಪತಿ ಇದುವೇ ಎನ್ನಿರಿ
ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ  ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ

ನನ್ನ ಬಾಳ ಬೆಳಗ ಬಂದ ಭಾಗ್ಯ ಲಕ್ಷ್ಮಿ
ನೀ ಸುಖ ದುಃಖದೇ ಭಾಗಿಯಾಗಿ ಒಲವ ತಂದೆ ನೀ
ಯಾವ ಜನುಮದ ಫಲವಿದು
ನಿಮ್ಮಂತಹ ಪತಿಯ ಪಡೆದು ಧನ್ಯಳಾದೆ ನಾ
ನೀ ಚೆಲ್ಲಿದೆ ಈ ಗುಡಿಯ ಸುಖ ಸಂತೋಷ
ಎಂದೆಂದೂ ಈ ಮನೆಯೇ ಶಾಂತಿನಿವಾಸ
ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ   ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ
ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ
ಮಮ್ಮಿ ಡ್ಯಾಡಿ ಮದುವೇ ಆಗಿ ಸಿಲ್ವರ್ ಜ್ಯೂಬಿಲೀ
ಸಂಸಾರದ ಸಂಗೀತದ ಸಿಲ್ವರ್ ಜ್ಯೂಬಿಲೀ
ತುಂಬಿತಿಂದು ಇಪ್ಪತ್ತೈದು ವರ್ಷ
ಹೊಮ್ಮಿ ಬಂದು ಅಲೆಯಾಗಿ ಹರುಷ
ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ  ಜ್ಯೂಬಿಲೀ ಸಿಲ್ವರ್  ಜ್ಯೂಬಿಲೀ
-------------------------------------------------------------------------------------------------------------------------

ಶಾಂತಿ ನಿವಾಸ (೧೯೮೮) - ಒಂದು ಹನಿ ನೀರು ಬರಲು ನಿನ್ನ ಕಣ್ಣಲ್ಲಿ
ಸಂಗೀತ : ಎಂ.ರಂಗರಾವ  ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್ಪಿ.ಬಿ. ವಾಣಿಜಯರಾಂ

ಒಂದು ಹನಿ ನೀರು ಬರಲು ನಿನ್ನ ಕಣ್ಣಲ್ಲಿ
ರಕ್ತ ಸುರಿವುದಮ್ಮ ನನ್ನ ಮನೇಲಿ
ಉಸಿರಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಒಂದು ಕ್ಷಣ ನೊಂದರು ನೀ ತಾಳಲಾರೆ ನಾನು

ಹಣತೆಯಾಗಿ ಬಂದೆ ಮನೆಯ ಬೆಳಗಿನಿಂದೆ
ಎಲ್ಲ ಹೊಣೆಯ ಭರಿಸಿ  ನೆಮ್ಮದಿ ನನಗೆ ತಂದೆ
ನಿನ್ನ ಹಾಗೆ ನನ್ನ ಅರಿತ ಜೀವ ಎಲ್ಲಿದೆ
ನೋವ ಮರೆಸಿ ಧೈರ್ಯ ತುಂಬೊ
ದೈವ ಎಲ್ಲಿದೆ ನಿನಗೆ ತಿಳಿಸೆ ಧನ್ಯವಾದ ಮಾತು ಎಲ್ಲಿದೆ
ಒಂದು ಹನಿ ನೀರು ಬರಲು ನಿನ್ನ ಕಣ್ಣಲ್ಲಿ
ರಕ್ತ ಸುರಿವುದಮ್ಮ ನನ್ನ ಮನೇಲಿ
ಉಸಿರಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಒಂದು ಕ್ಷಣ ನೊಂದರು ನೀ ತಾಳಲಾರೆ ನಾನು 

ಮಕ್ಕಳನ್ನು ಹೆತ್ತರೆ ಫಲವು ಕಣ್ಣ ನೀರೇ
ಕಲ್ಲು ಮನಸು ಅರಿಯದು ಈ ಮಮತೆ ಪ್ರೀತಿ ತಾರೆ
ನಂಬಿದಂತ ಊರುಗೋಲು ಇಂದು ಕಣ್ಮರೆ
ನಿನ್ನ ಪ್ರೀತಿ ಒಂದೇ ಎಂದು ಅವನ ಆಸರೆ
ಬೇರೆ ಎಲ್ಲ ಬಂಧುಗಳು ನೀರ ಗುಳ್ಳೆಯಂತೆ
ಒಂದು ಹನಿ ನೀರು ಬರಲು ನಿನ್ನ ಕಣ್ಣಲ್ಲಿ
ರಕ್ತ ಸುರಿವುದಮ್ಮ ನನ್ನ ಮನೇಲಿ
ಉಸಿರಲ್ಲಿ ಉಸಿರಾಗಿ ಕಲೆತು ಹೋದೆ ನೀನು
ಒಂದು ಕ್ಷಣ ನೊಂದರು ನೀ ತಾಳಲಾರೆ ನಾನು 
-------------------------------------------------------------------------------------------------------------------------

No comments:

Post a Comment