894. ಮಾತೃ ದೇವೋಭವ (೧೯೮೮)

ಮಾತೃದೇವೋಭವ ಚಲನಚಿತ್ರದ ಹಾಡುಗಳು 
  1. ಭಯಾಲಜಿ ನನ್ನನು ಕಾಡುತಿದೆ ಜೀವಾಲಾಜಿ ನಿನ್ನನ್ನು ಕೂಗುತಿದೆ
  2. ಡಬ್ಬಲ್ ಜಡೆಯ ಬಿಲ್ಲಿ ನಿನ್ನ ನಡವು ಗಿಡದ ಬಳ್ಳಿ 
  3. ಕೇಳು ಸಂಸಾರದಲ್ಲಿ ರಾಜಕೀಯ
  4.  ಕೇಳು ಸಂಸಾರದಲ್ಲಿ ರಾಜಕೀಯ (ದುಃಖ) 
  5. ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು 
  6. ವಯ್ಯಾರಿ ಎಂದು ನನ್ನ ಬಯ್ಯುತ್ತಾರಲ್ಲ 
ಮಾತೃ ದೇವೋಭವ (೧೯೮೮) - ಭಯಾಲಜಿ ನನ್ನನು ಕಾಡುತಿದೆ ಜೀವಾಲಾಜಿ ನಿನ್ನನ್ನು ಕೂಗುತಿದೆ
ಸಂಗೀತ : ಹಂಸಲೇಖ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ.ಪಿ.ಬಿ.  ಬಿ.ಆರ್.ಛಾಯ

ಹೆಣ್ಣು : ಭಯಾಲಜಿ ನನ್ನನು ಕಾಡುತಿದೆ   
ಗಂಡು : ಜೀವಾಲಾಜಿ ನಿನ್ನನ್ನು ಕೂಗುತಿದೆ
ಹೆಣ್ಣು : ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಗಂಡು : ಮೋಹಾಲಜಿ ಮನಸನು  ಮಿಡಿಯುತಿದೆ
         ಗೆಳತೀ....  ಓ.. ನಾನು ನೀನು ಕೂಡಿ ಕಲಿವಾ ಪ್ರೇಮಾಲಜಿ
ಹೆಣ್ಣು :   ಗೆಳೆಯಾ.. ನಿನ್ನಂತೇನೆ ನಂಗು ಮುತ್ತು ಬಲು ಕಾಳಜಿ
            ಭಯಾಲಜಿ ನನ್ನನು ಕಾಡುತಿದೆ
ಗಂಡು : ಜೀವಾಲಾಜಿ ನಿನ್ನನ್ನು ಕೂಗುತಿದೆ

ಗಂಡು : ಹಕ್ಕಿ ಹಾಗೆ ನಾವು ಎಲ್ಲೇ ಮೀರಿ ಹಾರಾಡಿ 
ಹೆಣ್ಣು : ಚುಕ್ಕಿ ಹಾಗೆ ಎಂದು ಬಾಳಿನಲ್ಲಿ ಮಿಂಚಾಗಿ 
ಗಂಡು : ಹರೆಯದ ಹೊಸ ರಾಗದ ಸವಿ ನೋಡುತ ಸಿರಿ ಕಾಣೋಣ 
ಹೆಣ್ಣು : ಒಲಿಯುತ ಒಡನಾಟದ ಸಿಹಿ ಹೀರುತ ನಗೆ ಬೀರೋಣ 
ಗಂಡು : ಪ್ರೀತಿಯಿಂದ ಪ್ರತಿ ದಿನ ಪ್ರತಿ ಕ್ಷಣವೂ 
ಹೆಣ್ಣು : ನಾನು ನೀನು ಅರಿತು ಬೆರೆಯಲು 
         ಭಯಾಲಜಿ ನನ್ನನು ಕಾಡುತಿದೆ
ಗಂಡು : ಜೀವಾಲಾಜಿ ನಿನ್ನನ್ನು ಕೂಗುತಿದೆ 
ಹೆಣ್ಣು : ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಗಂಡು : ಮೋಹಾಲಜಿ ಮನಸನು  ಮಿಡಿಯುತಿದೆ
           ಗೆಳತೀ....  ಓ.. ನಾನು ನೀನು ಕೂಡಿ ಕಲಿವಾ ಪ್ರೇಮಾಲಜಿ
ಹೆಣ್ಣು : ಗೆಳೆಯಾ.. ನಿನ್ನಂತೇನೆ ನಂಗು ಮುತ್ತು ಬಲು ಕಾಳಜಿ 

ಗಂಡು : ನೋವು ನಲಿವು ಮೀರಿ ಹೂವು ಗಂಧ ನಾವಾಗಿ
ಹೆಣ್ಣು : ಮಾತು ಮೌನ ದಾಟಿ ನಮ್ಮ ಬದುಕು ರಂಗಾಗಿ
ಗಂಡು : ಬಯಕೆಯ ಬಿಸಿ ಕಾಣುತ ಓಲಾಡುತ ಸುಖ ಪಡೆಯೋಣ
ಹೆಣ್ಣು : ಒಲುಮೆಯ ಹೊಸ ಲೋಕದಿ ತೇಲಾಡುತಾ ನೆಲೆ ಹುಡುಕೋಣ
ಗಂಡು : ಜೇನಿನಂಥ ಚುಂಬನ ಚಿಲುಮೆಯಲಿ
ಹೆಣ್ಣು : ನಾನು ನೀನು ಜಗವ ಮರೆಯಲು
          ಭಯಾಲಜಿ ನನ್ನನು ಕಾಡುತಿದೆ
ಗಂಡು : ಜೀವಾಲಾಜಿ ನಿನ್ನನ್ನು ಕೂಗುತಿದೆ
ಹೆಣ್ಣು : ಸ್ನೇಹಾಲಜಿ ಸಂಗವ ಸೆಳೆಯುತ್ತಿದೆ
ಗಂಡು : ಮೋಹಾಲಜಿ ಮನಸನು  ಮಿಡಿಯುತಿದೆ
            ಗೆಳತೀ..... ನಾನು ನೀನು ಕೂಡಿ ಕಲಿವಾ ಪ್ರೇಮಾಲಜಿ
ಹೆಣ್ಣು : ಗೆಳೆಯಾ.. ನಿನ್ನಂತೇನೆ ನಂಗು ಮುತ್ತು ಬಲು ಕಾಳಜಿ
-------------------------------------------------------------------------------------------------------------------------

ಮಾತೃ ದೇವೋಭವ (೧೯೮೮) - ಡಬ್ಬಲ್ ಜಡೆಯ ಬಿಲ್ಲಿ ನಿನ್ನ ನಡವು ಗಿಡದ ಬಳ್ಳಿ 
ಸಂಗೀತ : ಹಂಸಲೇಖ ಸಾಹಿತ್ಯ : ಮುಸುರಿ ಜಗನ್ನಾಥ ಗಾಯನ : ಎಸ.ಪಿ.ಬಿ.  ಮಂಜುಳ ಗುರುರಾಜ  

ಗಂಡು : ಡಬ್ಬಲ್ ಜಡೆಯ ಬಿಲ್ಲಿ ನಿನ್ನ ನಡವು ಗಿಡದ ಬಳ್ಳಿ 
           ಹೇ.. ಡಬ್ಬಲ್ ಜಡೆಯ ಬಿಲ್ಲಿ ನಿನ್ನ ನಡವು ಗಿಡದ ಬಳ್ಳಿ 
           ಮೀಟಿದೆ ಎದೆಯಲ್ಲಿ ಬಾರೆಲೇ ನನ್ನ ಬಿಲ್ಲಿ ನಿದ್ದಿ ಬಾರದಲ್ಲೇ...  ಬಳ್ಳಿ 
ಹೆಣ್ಣು : ಹೇಯ್... ಚಂಬಲ್ ಕಣಿವೆ ಕಳ್ಳ ನನ್ನ ಮನಸ ಕದ್ದೆಯಲ್ಲ 
          ಹೇಯ್... ಚಂಬಲ್ ಕಣಿವೆ ಕಳ್ಳ ನನ್ನ ಮನಸ ಕದ್ದೆಯಲ್ಲ 
          ಮೋಡಿಯ ಮಾಡಿದೆ ಗಾಳವ ಹಾಕಿದೆ ಲೂಟಿ ಹೊಡೆದೆಯಲ್ಲೋ...  ಮಳ್ಳ 

ಹೆಣ್ಣು : ಬಾರೋ ಸಂಜಿವಿನಿ ಈ ಜೀವ ಎಂದು ನಿನಗೆ
ಗಂಡು : ಸ್ವರ್ಗಾ ಕೈಯಲ್ಲಿದೆ  (ಆ) ಕಾಮಾಕ್ಷಿ ಇರಲು ಜೊತೆಗೆ (ಅಹ್ಹಹ್ಹ ) ಪೆದ್ದಿಯಕ್ಕನ ತಾಳಿ ಕಟ್ಟುವೆ 
ಹೆಣ್ಣು : ಹಾಂ! ಗುಂಡು ಹಾಕಿ ನೀ ಸುಳ್ಳು ಹೇಳುವೆ 
ಗಂಡು : ಓ.. ಗಜನಿಂಬೆ,  ನೀನು ನನ್ನ ರಂಭೆ ನನ್ನ ಕೊಸುಂಬೆ ಆ... ಜಿರುಜಿಂಬೆ 
ಹೆಣ್ಣು : ಹೌದೇನೋ ನಲ್ಲ, ಕೇಳೋ ರಸಗುಲ್ಲ,  ನಿನ್ ಬಿಟ್ಟರೇ ಏನ್ನಿಲ್ಲ  ಓ.. ಜಗಮಲ್ಲ 
ಗಂಡು : ಡಬ್ಬಲ್ ಜಡೆಯ ಬಿಲ್ಲಿ (ಆ) ನಿನ್ನ ನಡವು ಗಿಡದ ಬಳ್ಳಿ ಹೊಯ್...ಹೊಯ್
ಹೆಣ್ಣು :  ಚಂಬಲ್ ಕಣಿವೆ ಕಳ್ಳ ನನ್ನ ಮನಸ ಕದ್ದೆಯಲ್ಲ
ಗಂಡು : ಮೀಟಿದೆ ಎದೆಯಲ್ಲಿ ಬಾರೆಲೇ ನನ್ನ ಬಿಲ್ಲಿ ನಿದ್ದಿ ಬಾರದಲ್ಲೇ..  ಬಳ್ಳಿ 

ಗಂಡು : ಬೇಡಾ ಜಂಜಾಟವು ಈ ಪೇಟೆ ಜನರ ಜೊತೆಗೆ ಥೂ... 
ಹೆಣ್ಣು : ಇಂಥಾ ಕಿತ್ತಾಟವೂ ಬಾಳಲ್ಲಿ ಬೇಡ ನಮಗೆ ಛೀ.. 
ಗಂಡು : ಹೋಗುವಾ ಚಂದ್ರ  ಲೋಕಕೆ 
ಹೆಣ್ಣು : ಹ್ಹಾ.. ಆಗುವೇ ನಾ ನಿನ್ನ ಮೇನಕೆ 
ಗಂಡು : ಭಯವಿನ್ನೂ ಏಕೆ ಬಾರೆ ಬೆಳ್ಳಿ ಚುಕ್ಕೆ ಕೇಳೇ ನನ್ನ ಜಿಂಕೆ ನಿನಗೇನ್ ಬೇಕೇ 
ಹೆಣ್ಣು : ಹತ್ತು ಮಕ್ಕಳ ಹೆತ್ತು ಅಮ್ಮನಾಗಬೇಕು ಮೂರೂ ಲೋಕದಲ್ಲೂ   ನಾ ಮೇರಿಬೇಕು.. 
ಗಂಡು : ಡಬ್ಬಲ್ ಜಡೆಯ ಬಿಲ್ಲಿ (ಹ್ಹಾ ) ನಿನ್ನ ನಡವು ಗಿಡದ ಬಳ್ಳಿ 
           ಡಬ್ಬಲ್ ಜಡೆಯ ಬಿಲ್ಲಿ ನಿನ್ನ ನಡವು ಗಿಡದ ಬಳ್ಳಿ 
          ಮೀಟಿದೆ ಎದೆಯಲ್ಲಿ ಬಾರೆಲೇ ನನ್ನ ಬಿಲ್ಲಿ ನಿದ್ದಿ ಬಾರದಲ್ಲೇ ಬಳ್ಳಿ 
ಹೆಣ್ಣು : ಹೇಯ್... ಚಂಬಲ್ ಕಣಿವೆ ಕಳ್ಳ ನನ್ನ ಮನಸ ಕದ್ದೆಯಲ್ಲ 
          ಹ್ಹೂ .. ಚಂಬಲ್ ಕಣಿವೆ ಕಳ್ಳ ನನ್ನ ಮನಸ ಕದ್ದೆಯಲ್ಲ 
         ಮೋಡಿಯ  ಮಾಡಿದೆ ಗಾಳವ ಹಾಕಿದೆ ಲೂಟಿ ಹೊಡೆದೆಯಲ್ಲೋ..  ಮಳ್ಳ 
-------------------------------------------------------------------------------------------------------------------------

ಮಾತೃ ದೇವೋಭವ (೧೯೮೮) - ಕೇಳು ಸಂಸಾರದಲ್ಲಿ ರಾಜಕೀಯ
ಸಂಗೀತ : ಹಂಸಲೇಖ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಸಿ.ಅಶ್ವಥ 

ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲೇ ಪರಕೀಯ
ಬರಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ ಬರೀ ಹುಳುಕು ತುಂಬಿಹುದು ಕೇಳೋ ದೊರೆ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲೇ ಪರಕೀಯ

ಎಲ್ಲರೂ ಒಪ್ಪಿ ಓಟನು ನೀಡಿ ಕೊಡುವರು ನಾಯಕ ಪಟ್ಟ
ನಂತರ ಅವನನ ಕಿತ್ತು ತಿನ್ನುತಾ ಹಿಡಿವರು ಆತನ ಜುಟ್ಟ
ನಾನೊಂದು ಲೆಕ್ಕದ ಬುಕ್ಕ ನೂರೊಂದು ವೆಚ್ಚದ ಚೆಕ್ಕು
ಸೋಮಾರಿ ಮಕ್ಕಳ ಕುಕ್ಕು ನನಗೀಗ ದೇವರೇ ದಿಕ್ಕು
ಇಲ್ಲಿ  ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ ಬರಿ ಹುಳುಕು ತುಂಬಿಹುದು ಕೇಳೋ ದೊರೆ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲೇ ಪರಕೀಯ

ಹಾಸಿಗೆಯನ್ನು ಪಡೆದವರೆಲ್ಲರೂ  ಕೊಟ್ಟರು ಮುಳ್ಳಿನ ಚಾಪೆ
ಮಕ್ಕಳ ಪಡೆದ ಒಂದೇ ತಪ್ಪಿಗೆ ಜೀವನ ಚಿಂದಿಯ ತೇಪೆ
ಬಾಷಣವು  ಮಾಡುವರೆಲ್ಲ ನನಗಂತೂ ಬಾಯೇ ಇಲ್ಲ
ಆದರೂ ನಾ ಯಜಮಾನ ಹೇಗಿದೆ ನನ್ನಯ ಮಾನಾ
ಇಲ್ಲಿ  ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ ಬರಿ ಹುಳುಕು ತುಂಬಿಹುದು ಕೇಳೋ ದೊರೆ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲೇ ಪರಕೀಯ

ಮಮತೆಯ ತುಂಬಿದ ನೀರು ಉಣಿಸಿದ ಬೆಳೆಸಿದೆ ಹೂವಿನ ತೋಟ 
ಅರಳಿದ ಸುಂದರ ಹೂವುಗಳೆಲ್ಲಾ ಗಾಳಿಗೆ ತೂಗುವ ಆಟ 
ನೋಡುತ ಸಂತಸಗೊಂಡೆ ಜೀವನವು ಸ್ವಾರ್ಥಕವೆಂದೇ 
ಹೂವೂಗಳೇ ಮುಳ್ಳುಗಳಾಗಿ ಚುಚ್ಚಿದರೇ ನೋವನು ತಿಂದೇ 
ಇಲ್ಲಿ  ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ ಬರಿ ಹುಳುಕು ತುಂಬಿಹುದು ಕೇಳೋ ದೊರೆ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲೇ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ ಬರಿ ಹುಳುಕು ತುಂಬಿಹುದು ಕೇಳೋ ದೊರೆ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲೇ ಪರಕೀಯ
------------------------------------------------------------------------------------------------------------------------

ಮಾತೃ ದೇವೋಭವ (೧೯೮೮) - ಕೇಳು ಸಂಸಾರದಲ್ಲಿ ರಾಜಕೀಯ
ಸಂಗೀತ : ಹಂಸಲೇಖ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಸಿ.ಅಶ್ವಥ 

ಮಮತೆಯ ತುಂಬಿದ ನೀರು ಉಣಿಸಿದ ಬೆಳೆಸಿದೆ ಹೂವಿನ ತೋಟ
ಅರಳಿದ ಸುಂದರ ಹೂವುಗಳೆಲ್ಲಾ ಗಾಳಿಗೆ ತೂಗುವಾ ಆಟ 
ನೋಡುತ ಸಂತಸಗೊಂಡೆ ಜೀವನವು ಸ್ವಾರ್ಥಕವೆಂದೇ 
ಹೂವೂಗಳೇ ಮುಳ್ಳುಗಳಾಗಿ ಚುಚ್ಚಿದರೇ ನೋವನು ತಿಂದೇ 
ಇಲ್ಲಿ  ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ ... ಬಾಳು ಮೆತ್ತನೆ ಹುತ್ತದಂದೆ ಅಲ್ಲವೇನು
ಅಲ್ಲಿ ಮುಟ್ಟಲು ಹಾವು ಕಚ್ಚಿ ನೊಂದೆ ನೀನು
ಬರಿ ಹುಳುಕು ತುಂಬಿಹುದು ಕೇಳೋ ದೊರೆ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲಿ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ ಬರಿ ಹುಳುಕು ತುಂಬಿಹುದು ಕೇಳೋ ದೊರೆ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲಿ ಪರಕೀಯ

ಚಿನ್ನದ ಸೂಜಿಯು ಕಣ್ಣ ಕುಕ್ಕಿತು ಚಿಮ್ಮಿತು ನೆತ್ತರ ನೀರು
ಮೆತ್ತನೆ ಕತ್ತಿಯ ಎದೆಯ ಇರಿದರೆ ನೋವನು ಅಳೆಯವರಾರು
ಅಕ್ಕರೆಯ ಸಕ್ಕರೆ ತುಂಬಿ ಮಕ್ಕಳನು ಸಾಕಿದೆ ನಂಬಿ
ಸಿಹಿ ಎಲ್ಲ ಕಹಿಯಾಗಿ ಬಾಳೊಂದು ದುಃಖದ ರಾಗ
ಅಂದು ಮುತ್ತಿನ ಮಾತುಗಳ ಹೇಳಿದರೂ ಇಂದು ಮಾತಿನ ಈಟಿಯಿಂದ ಮೀಟಿದರೂ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲಿ ಪರಕೀಯ
ಇಲ್ಲಿ ಅತ್ತಿಯ ಹಣ್ಣು ಬಿಚ್ಚಿ ನೋಡಿದರೇ ಬರಿ ಹುಳುಕು ತುಂಬಿಹುದು ಕೇಳೋ ದೊರೆ
ಕೇಳು ಸಂಸಾರದಲ್ಲಿ ರಾಜಕೀಯ ತಾನು ತನ್ನ ಮನೆಯಲ್ಲಿ ಪರಕೀಯ
------------------------------------------------------------------------------------------------------------------------

ಮಾತೃ ದೇವೋಭವ (೧೯೮೮) - ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು
ಸಂಗೀತ : ಹಂಸಲೇಖ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಎಸ.ಪಿ.ಬಿ, ಮಂಜುಳಗುರುರಾಜ 

ಗಂಡು : ಹೊಯ್ ಅಮ್ಮಣ್ಣಿ ಹೊಯ್ .. ಹೊಯ್ ಹೊಯ್ ಅಮ್ಮಣ್ಣಿ ಹೊಯ್
           ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...ಹೊಯ್  ಹೊಯ್ ಅಪ್ಪಣ್ಣಿ ಹೊಯ್ ...
          ಕಿಲಾಡಿ ರಂಗನೇ ಕೈ ಜೋಡಿಸು ನನ್ನ ಪ್ರಾರ್ಥಿಸೂ ನನ್ನ ಮೆಚ್ಚಿಸು ಕುವರ
ಗಂಡು : ಕಣ್ಣೇಟಿಗೆ  ನಡುಗಿದೆ ಹೃದಯ    ಹೆಣ್ಣು : ಈಗಾದರೂ ತಿಳಿಯಿತೇ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
           ಹೊಯ್ ಅಮ್ಮಣ್ಣಿ ಹೊಯ್ .. ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...ಹೊಯ್  ಹೊಯ್ ಅಪ್ಪಣ್ಣಿ ಹೊಯ್ ...

ಗಂಡು : ತಂಗಾಳಿಗೂ ಕಾವೇರಿದೇ ಯಾಕೆ ಹುಡುಗಿ ಅಂಗಾಗವೂ ಪದ ಹಾಡಿದೆ ಕೇಳೇ ಬೆಡಗಿ
ಹೆಣ್ಣು : ಹದಿನಾರರ ಅವತಾರವು ನೂರಾರು ಬಗೆ ನೆಲಕಾಣದು ನಡೆ ನಿಲ್ಲದು ಸೇರೋವರೆಗೆ
ಗಂಡು : ಕಣ್ಣ ರೆಪ್ಪೆ ಸೆನ್ನೇ ಮಾಡಿದೆ... ಓಓಓ     ಹೆಣ್ಣು : ನಿನ್ನ ಬುದ್ದಿ ಸೊನ್ನೆಯಾಗಿದೇ ..ಆಆಆ
ಗಂಡು : ಕಣ್ಣೇಟಿಗೆ  ನಡುಗಿದೆ ಹೃದಯ             ಹೆಣ್ಣು : ಈಗಾದರೂ ತಿಳಿಯಿತೇ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
           ಹೊಯ್ ಅಮ್ಮಣ್ಣಿ ಹೊಯ್ .. ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಹೊಯ್ ಅಪ್ಪಣ್ಣಿ ಹೊಯ್ ...ಹೊಯ್  ಹೊಯ್ ಅಪ್ಪಣ್ಣಿ ಹೊಯ್ ...

ಗಂಡು : (ಅಹ್ಹಹ್ಹಹ ) ಬಂಗಾರಿಯೇ ನಿನ್ನಾ ನಗೆ ದೀಪಾವಳಿಯು ಈ ಭಂಗಿ ಸಿಂಗಾರದ ರಂಗಾವಳಿಯೋ
 ಹೆಣ್ಣು : ಸಾಕಾಗಿದೆ ಎಲ್ಲಾ ಬರಿ ಜಂಬಾ ಬೊಗಳೆ ಮಾತಾಡದೇ ನಾ ಹೇಳುವೆ ಕೇಳೋ ತರಲೆ
ಗಂಡು : ರೊಟ್ಟಿ ಜಾರಿ ಬಿತ್ತು ತುಪ್ಪಕೆ.. ಆಆಆ.. ಅಹ್ಹಹ್ಹಹ
ಹೆಣ್ಣು : ಮೀನು ಹಾರಿ ಬಿಟ್ಟು ಬುಟ್ಟಿಗೇ... ಆಆಆ..
ಗಂಡು : ಕಣ್ಣೇಟಿಗೆ  ನಡುಗಿದೆ ಹೃದಯ    ಹೆಣ್ಣು : ಈಗಾದರೂ ತಿಳಿಯಿತೇ ವಿಷಯ
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ
           ಹೊಯ್ ಅಮ್ಮಣ್ಣಿ ಹೊಯ್ .. ಹೊಯ್ ಹೊಯ್ ಅಮ್ಮಣ್ಣಿ ಹೊಯ್
ಹೆಣ್ಣು : ಕಿಲಾಡಿ ರಂಗನೇ ಕೈ ಜೋಡಿಸು ನನ್ನ ಪ್ರಾರ್ಥಿಸೂ ನನ್ನ ಮೆಚ್ಚಿಸು ಕುವರ
          ಹೊಯ್ ಅಪ್ಪಣ್ಣಿ ಹೊಯ್ ...ಹೊಯ್  ಹೊಯ್ ಅಪ್ಪಣ್ಣಿ ಹೊಯ್ ...
ಗಂಡು : ಚೆಂದುಳ್ಳಿ ಚೆಲುವೆಯ ಕಣ್ಣ ಮಿಟುಕಿಸು ನನ್ನ ಬದುಕಿಸು ಕುವರಿ.. ಅಹ್ಹಹ್ಹಹ್ಹಹ್ಹ.. 
------------------------------------------------------------------------------------------------------------------------

ಮಾತೃ ದೇವೋಭವ (೧೯೮೮) - ವಯ್ಯಾರಿ ಎಂದು ನನ್ನ ಬಯ್ಯುತ್ತಾರಲ್ಲ
ಸಂಗೀತ : ಹಂಸಲೇಖ ಸಾಹಿತ್ಯ : ದೊಡ್ಡರಂಗೇಗೌಡ ಗಾಯನ : ಲತಾಹಂಸಲೇಖಾ

ವಯ್ಯಾರಿ ಎಂದು ನನ್ನ ಬಯ್ಯುತ್ತಾರಲ್ಲ ಅಂದೋರೆಲ್ಲ ಬಂದು ನೋಡುತ್ತಾರಲ್ಲ
ಈ ಸಣ್ಣ ಹುಡುಗರು... ಈ ದೊಡ್ಡ ಕುಡಕರೂ ಈ ಜೂಜುಕೋರರೂ ಆ ಜೋಕುಮಾರನು
ಅಂಥೋರು ಇಂಥೋರು ಎಲ್ಲಾರು ಒಂದೇ ನನಗೇ ...
ಪ್ರಿಯ.. ಪ್ರಿಯ .. ಎಲ್ಲ ಪ್ರಿಯ .. ಪ್ರಿಯ.. ಪ್ರಿಯ .. ಎಲ್ಲ ಪ್ರಿಯ ..

ರೋಡಿನಲ್ಲಿರೋ ರೋಮಿಯೋಗಳು ನನ್ನ ನೋಡಲು ಅಲ್ಲಿ ನೂಕು ನುಗ್ಗಲೂ
ಆಫಿಸೂ ಮ್ಯಾನೇಜರೋ ಟಾಕೀಸು ಮಾಲೀಕರೋ ನನ್ನಲ್ಲಿ ಮನಸೋತರೂ
ರೋಡಿನಲ್ಲಿರೋ ರೋಮಿಯೋಗಳು ನನ್ನ ನೋಡಲು ಅಲ್ಲಿ ನೂಕು ನುಗ್ಗಲೂ
ಆಫಿಸೂ ಮ್ಯಾನೇಜರೋ ಟಾಕೀಸು ಮಾಲೀಕರೋ ನನ್ನಲ್ಲಿ ಮನಸೋತರೂ
ರಾಜಕೀಯ ಎದುರು ಗೆದ್ದೋರು ಸೋತು ಮುಗ್ಗುರಿಸಿ ಬಿದ್ದೋರು
ಅಂಥೋರು ಇಂಥೋರು ಎಲ್ಲಾರು ಒಂದೇ ನನಗೇ ...
ಪ್ರಿಯ.. ಪ್ರಿಯ . ಪ್ರಿಯ.. ಪ್ರಿಯ .. ಎಲ್ಲ ಪ್ರಿಯ .. ಪ್ರಿಯ.. ಪ್ರಿಯ ..
ಆ... ಆಹ್ಹಾ... ಆಹ್ಹಾ.. ಆ.. ಹೇ... ಹ್ಹಾ... ಒಹೋ... ಆಹ್ಹಾ..

ಹಾರಿಸಿರಿ ಪ್ರೇಮ ಬಾವುಟ ನಿಮ್ಮ ಹೃದಯವೇ ನನ್ನ ಗೋಳಗುಮ್ಮಟ
ಪುಗಸಟ್ಟೆ ಬಂದೋರಿಗೆಲ್ಲ ಇಲ್ಲೇನು ಗಿಟ್ಟೋದಿಲ್ಲ ಈ ಮಾತು ಸುಳ್ಳೇನಲ್ಲ
ಹಾರಿಸಿರಿ ಪ್ರೇಮ ಬಾವುಟ ನಿಮ್ಮ ಹೃದಯವೇ ನನ್ನ ಗೋಳಗುಮ್ಮಟ
ಪುಗಸಟ್ಟೆ ಬಂದೋರಿಗೆಲ್ಲ ಇಲ್ಲೇನು ಗಿಟ್ಟೋದಿಲ್ಲ ಈ ಮಾತು ಸುಳ್ಳೇನಲ್ಲ
ನನ್ನ ಮಾತುಗಳು ಗುಂಡೇಟು ನನ್ನ ಪ್ರೋಗ್ರಾಮ್ ಬೊಂಬಾಟು
ಓ ಎಲ್ಲಿ ಬಾ ಇಲ್ಲಿ ಒಂದಾಗು ನನ್ನ ಜೊತೆಗೇ ... ಪ್ರಿಯ .. ಪ್ರಿಯ .. ಪ್ರಿಯ
------------------------------------------------------------------------------------------------------------------------

No comments:

Post a Comment