895. ಚಿರಂಜೀವಿ ಸುಧಾಕರ (೧೯೮೮)

ಚಿರಂಜೀವಿ ಸುಧಾಕರ ಚಿತ್ರದ ಹಾಡುಗಳು 
  1. ಗೆಲುವೇ ಗೆಲುವೇ ನಮಗೆಂದೆಂದಿಗೂ ಗೆಲುವೇ
  2. ವಸಂತ ಮಾಸ ಶೃಂಗಾರ ಮಾಸ ಬಂದಿದೇ 
  3. ಮೋಡದ ತೇರೇ 
  4. ಬೆರೆತ ಮನಸೇ ಒಲವೆಂಬ ಹೂಮಾಲೆ 
ಚಿರಂಜೀವಿ ಸುಧಾಕರ (೧೯೮೮) - ಗೆಲುವೇ ಗೆಲುವೇ ನಮಗೆಂದೆಂದಿಗೂ ಗೆಲುವೇ
ಸಂಗೀತ : ಉಪೇಂದ್ರಕುಮಾರ, ಗಾಯನ : ರಾಘವೇಂದ್ರ ರಾಜಕುಮಾರ

ಗಂಡು : ಒಹೋ..ಓಹೋಹೋ..ಓಹೋಹೋ ಲಾ ಲಾ ಲಾ ಲಾ ...
           ಗೆಲುವೇ ಗೆಲುವೇ ಗೆಲುವೇ ನಮಗೆಂದೆಂದಿಗೂ ಗೆಲುವೇ
           ದಿನವೂ ದುಡಿವಾ ಛಲವೇ ಮನಗೆಂದೆಂದೂ ಆನಂದವೇ
ಗಂಡು : ಗೆಲುವೇ ಗೆಲುವೇ ಗೆಲುವೇ                ಎಲ್ಲರು : ನಮಗೆಂದೆಂದಿಗೂ ಗೆಲುವೇ
ಗಂಡು : ದಿನವೂ ದುಡಿವಾ ಛಲವೇ      ಎಲ್ಲರು : ಮನಗೆಂದೆಂದೂ ಆನಂದವೇ
ಗಂಡು : ಒಣ ವೇದಾಂತ ಬೇಕಿಲ್ಲಾ.. ಶ್ರಮ ಒಂದೇನೆ ನಮಗೆಲ್ಲಾ..
ಎಲ್ಲರು : ಒಣ ವೇದಾಂತ ಬೇಕಿಲ್ಲಾ.. ಶ್ರಮ ಒಂದೇನೆ ನಮಗಿಲ್ಲಾ..ಓಹೋಹೊಹೋ ..
ಗಂಡು : ಗೆಲುವೇ ಗೆಲುವೇ ಗೆಲುವೇ ನಮಗೆಂದೆಂದಿಗೂ ಗೆಲುವೇ (ಓಹೋಹೋ)
ಎಲ್ಲರು :  ದಿನವೂ ದುಡಿವಾ ಛಲವೇ ಮನಗೆಂದೆಂದೂ ಆನಂದವೇ ಓಹೋಹೋ 
ಗಂಡು : ಒಣ ವೇದಾಂತ ಬೇಕಿಲ್ಲಾ.. (ಓಹೋಹೋ)  ಶ್ರಮ ಒಂದೇನೆ ನಮಗೆಲ್ಲಾ..(ಓಹೋಹೋ)
ಎಲ್ಲರು : ಒಣ ವೇದಾಂತ ಬೇಕಿಲ್ಲಾ..(ಓಹೋಹೋ)  ಶ್ರಮ ಒಂದೇನೆ ನಮಗಿಲ್ಲಾ..(ಓಹೋಹೋ)

ಗಂಡು : ಬದುಕಲಿ ಸುಖವನೆ ಬಯಸುವ ತರುಣರು ನಾವಲ್ಲಾ.. (ಓಹೋಹೋ)
ಎಲ್ಲರು : ಬದುಕಲಿ ಸುಖವನೆ ಬಯಸುವ ತರುಣರು ನಾವಲ್ಲಾ.. (ಓಹೋಹೋ)
ಗಂಡು : ಸುಲಭದಿ ಹಣವನು ಗಳಿಸುವ ಚಪಲವು ನಮಗಿಲ್ಲಾ.. 
ಗಂಡು : ಬರಿ ಸುಳ್ಳಿನ ಮಾತನು ಆಡೆವು, ಕೊಡೊ ಲಂಚಕೆ ಕೈಗಳ ಚಾಚೇವು  
ಎಲ್ಲರು :  ಬರಿ ಸುಳ್ಳಿನ ಮಾತನು ಆಡೆವು, ಕೊಡೊ ಲಂಚಕೆ ಕೈಗಳ ಚಾಚೇವು  
ಗಂಡು : ನಾವು ಪ್ರೇಮಕೆ ಸೋಲುವೆವು (ಆಆಆ... )
ಗಂಡು : ಗೆಲುವೇ ಗೆಲುವೇ ಗೆಲುವೇ ನಮಗೆಂದೆಂದಿಗೂ ಗೆಲುವೇ (ಓಹೋಹೋ)
ಎಲ್ಲರು :  ದಿನವೂ ದುಡಿವಾ ಛಲವೇ ಮನಗೆಂದೆಂದೂ ಆನಂದವೇ ಓಹೋಹೋ 
ಗಂಡು : ಒಣ ವೇದಾಂತ ಬೇಕಿಲ್ಲಾ.. (ಓಹೋಹೋ)  ಶ್ರಮ ಒಂದೇನೆ ನಮಗೆಲ್ಲಾ..(ಓಹೋಹೋ)
ಎಲ್ಲರು : ಒಣ ವೇದಾಂತ ಬೇಕಿಲ್ಲಾ..(ಓಹೋಹೋ)  ಶ್ರಮ ಒಂದೇನೆ ನಮಗಿಲ್ಲಾ..(ಓಹೋಹೋ)

ಗಂಡು : ಚಂದ್ರನ ಲೋಕಕೆ ಕರೆಯಲಿ ಹರುಷದಿ ಹಾರುವೆವು .(ಓಹೋಹೋ)
ಎಲ್ಲರು : ಚಂದ್ರನ ಲೋಕಕೆ ಕರೆಯಲಿ ಹರುಷದಿ ಹಾರುವೆವು .(ಓಹೋಹೋ)
ಗಂಡು :  ಕಡಲಿನ ಆಳಕೆ ಕೂಗಲಿ ಕ್ಷಣದಲಿ ಜಾರುವೆವು .
ಗಂಡು : ಹೊಸ ರೀತಿಯ ಕ್ರಾಂತಿಯ ಮಾಡುತ ಸುಖ ನೆಮ್ಮದಿ ನಾಡಲಿ ತುಂಬುತಾ 
ಎಲ್ಲರು : ಹೊಸ ರೀತಿಯ ಕ್ರಾಂತಿಯ ಮಾಡುತ ಸುಖ ನೆಮ್ಮದಿ ನಾಡಲಿ ತುಂಬುತಾ
ಗಂಡು :  ಕಡುಬಡತನ ಅಟ್ಟುವೆವು (ಓಹೋಹೋ)
ಗಂಡು : ಗೆಲುವೇ ಗೆಲುವೇ ಗೆಲುವೇ ನಮಗೆಂದೆಂದಿಗೂ ಗೆಲುವೇ
           ದಿನವೂ ದುಡಿವಾ ಛಲವೇ ಮನಗೆಂದೆಂದೂ ಆನಂದವೇ
ಗಂಡು : ಗೆಲುವೇ ಗೆಲುವೇ ಗೆಲುವೇ     ಎಲ್ಲರು : ನಮಗೆಂದೆಂದಿಗೂ ಗೆಲುವೇ
ಗಂಡು : ದಿನವೂ ದುಡಿವಾ ಛಲವೇ      ಎಲ್ಲರು : ಮನಗೆಂದೆಂದೂ ಆನಂದವೇ
ಗಂಡು : ಒಣ ವೇದಾಂತ ಬೇಕಿಲ್ಲಾ.. (ಓಹೋಹೋ)  ಶ್ರಮ ಒಂದೇನೆ ನಮಗೆಲ್ಲಾ..(ಓಹೋಹೋ)
ಎಲ್ಲರು : ಒಣ ವೇದಾಂತ ಬೇಕಿಲ್ಲಾ.. ಶ್ರಮ ಒಂದೇನೆ ನಮಗಿಲ್ಲಾ..ಓಹೋಹೊಹೋ ..
            ಒಣ ವೇದಾಂತ ಬೇಕಿಲ್ಲಾ.. ಶ್ರಮ ಒಂದೇನೆ ನಮಗಿಲ್ಲಾ..ಓಹೋಹೊಹೋ ..
            ಒಣ ವೇದಾಂತ ಬೇಕಿಲ್ಲಾ.. ಶ್ರಮ ಒಂದೇನೆ ನಮಗಿಲ್ಲಾ..ಓಹೋಹೊಹೋ ..
            ಲಾಲಾಲಾಲಾಲಾ   ಲಾಲಾಲಾಲಾಲಾ   ಲಾಲಾಲಾಲಾಲಾ
            ಲಾಲಾಲಾಲಾಲಾ   ಲಾಲಾಲಾಲಾಲಾ   ಲಾಲಾಲಾಲಾಲಾ 
-------------------------------------------------------------------------------------------------------------------------

ಚಿರಂಜೀವಿ ಸುಧಾಕರ (೧೯೮೮) - ವಸಂತ ಮಾಸ ಶೃಂಗಾರ ಮಾಸ
ಸಂಗೀತ : ಉಪೇಂದ್ರಕುಮಾರ, ಗಾಯನ : ರಾಘವೇಂದ್ರ ರಾಜಕುಮಾರ, ಮಂಜುಳಾ ಗುರುರಾಜ 

ಗಂಡು : ವಸಂತ ಮಾಸ ಶೃಂಗಾರ ಮಾಸ ಬಂದಿದೇ ಒಂಟಿ ಬಾಳು ಸಾಕು ಸಾಕು
           ಜೋಡಿ ಒಂದು ಬೇಕೇ ಬೇಕು ಎಂದಿದೆ ಈ ಯೌವ್ವನ ನೀನೇನು ಹೇಳುವೇ
ಹೆಣ್ಣು  : ವಸಂತ ಮಾಸ ಶೃಂಗಾರ ಮಾಸ ಬಂದಿದೇ ಜೋಡಿ ಈಗ ಏಕೆ ಬೇಕೂ
           ಕಣ್ಣ ತುಂಬಾ ಕನಸೇ ಸಾಕೂ ಎಂದಿದೇ ಈ ಯೌವ್ವನ ನೀನೇನೂ ಮಾಡುವೇ
ಗಂಡು : ವಸಂತ ಮಾಸ                 ಹೆಣ್ಣು : ಶೃಂಗಾರ ಮಾಸ
ಇಬ್ಬರು : ಬಂದಿದೇ...

ಗಂಡು : ಜೋಡಿ ಬೇಡವೆಂದರೇನೂ ಬಾಲೆ ನೀ ಕಣ್ಣು ಬೇಕೆಂದಿದೆ
ಹೆಣ್ಣು : ಮೋಡಿ  ಹಾಕಬೇಡ ಬರಿಯ ಮಾತಲಿ ನನಗೆ ಸಾಕಾಗಿದೆ
ಗಂಡು : ಇಂಥ ಸಮಯ ಸಿಗದು ನಮಗೆ  ಇಂಥ ತರುಣ ಸಿಗನು ನಿನಗೆ
ಹೆಣ್ಣು : ಇನ್ನು ಚಪಲವೇಕೆ ನಿನಗೆ ಇದು ನಿನಗೆ ಮುಗಿಲ ಮಲ್ಲಿಗೆ
ಗಂಡು : ಆ.. ಮುಗಿಲೆಗೆ ಈ ಕ್ಷಣ ಕೈ ಚಾಚುವೇ
ಹೆಣ್ಣು  : ವಸಂತ ಮಾಸ (ಒಹೋ) ಶೃಂಗಾರ ಮಾಸ (ಒಹೋ) ಬಂದಿದೆ...
ಗಂಡು : ಒಂಟಿ ಬಾಳು ಸಾಕು ಸಾಕು ಜೋಡಿ ಒಂದು ಬೇಕೇ ಬೇಕು
            ಎಂದಿದೆ ಈ ಯೌವ್ವನ ನೀನೇನು ಹೇಳುವೇ
ಹೆಣ್ಣು : ವಸಂತ ಮಾಸ                 ಗಂಡು : ಶೃಂಗಾರ ಮಾಸ

ಇಬ್ಬರು : ಬಂದಿದೇ...  

ಹೆಣ್ಣು : ಅಯ್ಯೋ...  ಆಸೆಯೊಂದೇ ಮೂಲ ದುಃಖಕ್ಕೆ ಅರಿಯೋ ಓ.. ಬಾಲಕ
ಗಂಡು : ಏಕೆ...  ಕಾವಿಯನ್ನು ತೊಡುವ ಹಂಚಿಕೆ ಬೇಡಾ ಬೂಟಾಟಿಕೆ
ಹೆಣ್ಣು : ನಿನ್ನ ಪ್ರೇಮ ನೋಡಿ ನನಗೆ ನಗುವ ಬರುವ ಹಾಗೆ ಆಯ್ತೆ
ಗಂಡು : ನಿನ್ನ ಮಾತು ಕೇಳಿ ನನಗೆ ಮನದಾಸೆ ಇಂಗಿಹೋಯ್ತೆ
ಹೆಣ್ಣು : ಅದು ಇಂಗಲಿ ಒಣಗಲಿ ನಾನು ಇಲ್ಲವೇ
ಗಂಡು : ವಸಂತ ಮಾಸ (ಆಹಾ ) ಶೃಂಗಾರ ಮಾಸ (ಒಹೋ)  ಬಂದಿದೇ
            ಒಂಟಿ ಬಾಳು ಸಾಕು ಸಾಕು  ಜೋಡಿ ಒಂದು ಬೇಕೇ ಬೇಕು ಎಂದಿದೆ
          ಈ ಯೌವ್ವನ ನೀನೇನೂ ಹೇಳುವೇ
ಹೆಣ್ಣು  : ವಸಂತ ಮಾಸ (ಒಹೋ)  ಶೃಂಗಾರ ಮಾಸ (ಒಹೋ)  ಬಂದಿದೇ
           ಜೋಡಿ ಈಗ ಏಕೆ ಬೇಕೂ  ಕಣ್ಣ ತುಂಬಾ ಕನಸೇ ಸಾಕೂ
           ಎಂದಿದೇ ಈ ಯೌವ್ವನ ನೀನೇನೂ ಮಾಡುವೇ
ಇಬ್ಬರು : ವಸಂತ ಮಾಸ ಶೃಂಗಾರ ಮಾಸ ಬಂದಿದೇ
--------------------------------------------------------------------------------------------------------------------------

ಚಿರಂಜೀವಿ ಸುಧಾಕರ (೧೯೮೮) - ಮೋಡದ ತೆರೆ ಜಾರುತಲಿರೇ ವಿ ಚಂದ್ರನ ನಗು ಕಾಣುತಲಿರೆ 
ಸಂಗೀತ : ಉಪೇಂದ್ರಕುಮಾರ, ಗಾಯನ : ರಾಘವೇಂದ್ರ ರಾಜಕುಮಾರ

ಆಆಆ... ಮೋಡದ ತೆರೆ ಜಾರುತಲಿರೇ ಚಂದ್ರನ ನಗು ಕಾಣುತಲಿರೆ
ಆನಂದ ನೀನಾಗಾನಂದ ಆನಂದ ನನಾಗಾನಂದ
ಮೋಡದ ತೆರೆ ಜಾರುತಲಿರೇ ವಿ ಚಂದ್ರನ ನಗು ಕಾಣುತಲಿರೆ
ಆನಂದ ನೀನಾಗಾನಂದ ಆನಂದ ನನಾಗಾನಂದ ಲಲ್ಲಲ್ಲಲ ಲಲ್ಲಲ್ಲಲ ಹೂಂಹೂಂಹೂಂ

ಚೆಲುವೇ ನೀನು ಹೆದರಿದಾಗ ಹೃದಯ ನೊಂದು ಮಿಡಿವುದೂ
ಚೆಲುವೇ ನೀನು ಹೆದರಿದಾಗ ಹೃದಯ ನೊಂದು ಮಿಡಿವುದೂ
ನೀನೂ ನಗಲು ನನ್ನ ಮನಸ್ಸೂ ಹೂವಿನಂತೇ ನಗುವುದೂ 
ಸಂತೋಷವಾ ಉಲ್ಲಾಸವಾ ಈ ನಿನ್ನ ನೋಟ ತರುವುದೂ 
ಆನಂದ ನೀನಾಗಾನಂದ ಆನಂದ ನನಾಗಾನಂದ 
ಮೋಡದ ತೆರೆ ಜಾರುತಲಿರೇ ವಿ ಚಂದ್ರನ ನಗು ಕಾಣುತಲಿರೆ 
ಆನಂದ ನೀನಾಗಾನಂದ ಆನಂದ ನನಾಗಾನಂದ

ಬಾನಿನಲ್ಲೂ ಬಾಳಿನಲ್ಲೂ ಸಿಡಿಲೂ ಗುಡುಗೂ ಬರುವುದೂ
ಬಾನಿನಲ್ಲೂ ಬಾಳಿನಲ್ಲೂ ಸಿಡಿಲೂ ಗುಡುಗೂ ಬರುವುದೂ 
ಎಂದೂ ಹೀಗೇ ಭಯದಲಿರುಳೂ ಬದುಕಿನಲ್ಲಿ ನಿಲ್ಲದೂ 
ತಂಗಾಳಿಯ ಸಂಗೀತವೂ ಮತ್ತೊಮ್ಮೆ ಕೇಳಿ ಬರುವುದೂ 
ಆನಂದ ನೀನಾಗಾನಂದ ಆನಂದ ನನಾಗಾನಂದ 
ಮೋಡದ ತೆರೆ ಜಾರುತಲಿರೇ ವಿ ಚಂದ್ರನ ನಗು ಕಾಣುತಲಿರೆ 
ಆನಂದ ನೀನಾಗಾನಂದ ಆನಂದ ನನಾಗಾನಂದ 
--------------------------------------------------------------------------------------------------------------------------

ಚಿರಂಜೀವಿ ಸುಧಾಕರ (೧೯೮೮) - ಬೆರೆತ ಮನಸೇ ಒಲವೆಂಬ ಹೂಮಾಲೆ
ಸಂಗೀತ : ಉಪೇಂದ್ರಕುಮಾರ, ಗಾಯನ : ರಾಘವೇಂದ್ರ ರಾಜಕುಮಾರ, ಮಂಜುಳಾ ಗುರುರಾಜ 

ಗಂಡು : ಆಆಆಅಅಅ ... (ಲಾಲಾಲಾ ಲ ಲ ಓಹೋಹೋ )
           ಬೆರೆತ ಮನಸೇ ಒಲವೆಂಬ ಹೂಮಾಲೆ ದಿನವೂ ನಲಿವಾ ನಮ್ಮ ಬಾಳೇ ಉಯ್ಯಾಲೇ
ಹೆಣ್ಣು : ಬೆರೆತ ಮನಸೇ ಒಲವೆಂಬ ಹೂಮಾಲೆ ದಿನವೂ ನಲಿವಾ ನಮ್ಮ ಬಾಳೇ ಉಯ್ಯಾಲೇ
ಗಂಡು : ಬೆಸೆದಿರುವಾ ಹೃದಯಗಳೂ
ಹೆಣ್ಣು : ಬೆಸೆದಿರುವಾ ಹೃದಯಗಳೂ ಆಗ..
ಗಂಡು : ಸರಸದ ಮಾತು ಕೇಳಿ ಕುಣಿದಿರಲೂ
           ಬೆರೆತ ಮನಸೇ ಒಲವೆಂಬ ಹೂಮಾಲೆ
ಹೆಣ್ಣು : ದಿನವೂ ನಲಿವಾ ನಮ್ಮ ಬಾಳೇ ಉಯ್ಯಾಲೇ
ಇಬ್ಬರು :  ಬೆರೆತ ಮನಸೇ ಒಲವೆಂಬ ಹೂಮಾಲೆ

ಗಂಡು : ನಿನ್ನ ಹಾಗೇ ಯಾರೂ ಇಲ್ಲಾ ಹೆಣ್ಣೇ ...ಇಂಥಾ ಅಂದಾ ನಾ ಕಾಣೇನೇ 
            ನನ್ನಾ ರಂಭೆ ಬೆಳ್ಳಿಬೊಂಬೆ ನೀನೇ.. ಕಂಡಾ ದಿನವೇ ನಾ ಸೋತೆನೇ  
ಹೆಣ್ಣು :  ಪ್ರೀತಿಯಾ ಸಂಚಿಗೇ ಮೋಹದಾ ಮಿಂಚಿಗೇ 
           ಪ್ರೀತಿಯಾ ಸಂಚಿಗೇ ಮೋಹದಾ ಮಿಂಚಿಗೇ ಜೀವ ನಸುನಾಚಿದಾಗ ಎಂಥ ಸಂಭ್ರಮವೋ 
           ಬೆರೆತ ಮನಸೇ              ಗಂಡು : ಒಲವೆಂಬ ಹೂಮಾಲೆ
ಗಂಡು : ದಿನವೂ ನಲಿವಾ           ಗಂಡು : ನಮ್ಮ ಬಾಳೇ ಉಯ್ಯಾಲೇ
ಇಬ್ಬರು : ಓ... ಬೆರೆತ ಮನಸೇ ಒಲವೆಂಬ ಹೂಮಾಲೆ 

ಹೆಣ್ಣು : ಲಾಲಾಲಲಾಲಾಲ ಓಹೋಹೋ    ಗಂಡು : ಆಹಾಹಾಹಾ  ಆಹಾಹಾಹಾ  ಓಹೋಹೊಹೋ 
ಹೆಣ್ಣು : ಅಂದ ಅನ್ನೋ ಮಾತಿಗಿಂತ ಅಂದ ಚೆನ್ನ ನಿನ್ನ ಈ ನೋಟವೂ 
          ಚಂದ ಅನ್ನೋ ಮಾತಿಗಿಂತ ಚಂದ ಮುದ್ದು ನಲ್ಲ ಈ ಆಟವೂ 
ಗಂಡು : ಜೇನಿನ ಹನಿಗಳ ಪ್ರೇಮದ ನುಡಿಗಳ 
           ಜೇನಿನ ಹನಿಗಳ ಪ್ರೇಮದ ನುಡಿಗಳ ಈಕೆ ಹಿತ ತುಂಬಿದಾಗ ಎಂಥಾ ಆನಂದವೋ 
           ಬೆರೆತ ಮನಸೇ              ಹೆಣ್ಣು : ಒಲವೆಂಬ ಹೂಮಾಲೆ
ಹೆಣ್ಣು : ದಿನವೂ ನಲಿವಾ             ಗಂಡು : ನಮ್ಮ ಬಾಳೇ ಉಯ್ಯಲೇ
ಹೆಣ್ಣು : ಬೆಸೆದಿರುವಾ ಹೃದಯಗಳೂ .
ಗಂಡು : ಬೆಸೆದಿರುವಾ ಹೃದಯಗಳೂ ಆಗ..
ಇಬ್ಬರು : ಸರಸದ ಮಾತು ಕೇಳಿ ಕುಣಿದಿರಲೂ
           ಬೆರೆತ ಮನಸೇ ಒಲವೆಂಬ ಹೂಮಾಲೆ  ದಿನವೂ ನಲಿವಾ ನಮ್ಮ ಬಾಳೇ ಉಯ್ಯಾಲೇ
--------------------------------------------------------------------------------------------------------------------------

No comments:

Post a Comment