900. ಇನ್ನೂ ಬಿಡುಗಡೆ ಕಾಣದೇ ಇರುವ ಚಲಚಿತ್ರದ ಹಾಡುಗಳು

ಬಿಡುಗಡೆ ಕಾಣದೇ ಇರುವ ಚಲಚಿತ್ರದ ಹಾಡುಗಳು 
  1. ಚಂದಮಾಮ - ನನ್ನ ಹುಡುಗಿಯನ್ನ ಯಾರೂನೂ ನೋಡಲೇ ಬಾರದು 
  2. ಸಂಗಮ (೧೯೭೩) - ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
  3. ವನಸುಮ - ಚಂದ್ರಮಂಚಕೆ ಬಾ
  4. ವೀರ ಮಹಾದೇವ (೧೯೬೦) - ನೋಡು ಬಾ ಕನ್ನಡಿಗಾ... 
  5. ವೀರ ಮಹಾದೇವ (೧೯೬೦) - ಆರದಾ ನಂದಾದೀಪ ನಮ್ಮ ನೆನಪಲಿ ನಿನ್ನಾ ರೂಪ 
  6. ವೀರ ಮಹಾದೇವ (೧೯೬೦) ಬಾನಿನ ಕಡೆಗೆ ನೋಡುತಲಿದ್ದೆ 
  7. ವೀರ ಮಹಾದೇವ (೧೯೬೦) - ನೋಡಿ ಮಕ್ಕಳೇ ನಮ್ಮ ನಾಡಿದು 
  8. ವೀರ ಮಹಾದೇವ (೧೯೬೦) - ಇಂದು ಮಹಾನವಮಿ ನಾಳೆ ವಿಜಯದಶಮಿ 
  9. ಧರ್ಮ ಮಂದಿರ (1977) - ಧರ್ಮಮಂದಿರ 
  10. ಧರ್ಮಮಂದಿರ - ಸೃಷ್ಟಿಗೋಡೆಯ 
  11. ಇದು ಪ್ರಾಯದ ಮಾಯಾಜಾಲವೋ 
  12. ಗಂಡುಗಲಿ (೧೯೭೧) - ಮೈಸೂರು ಮಲ್ಲೆ ನಾ ಮೈ ಭಾರ ಯೌವ್ವನ
೦೧. ಚಂದಮಾಮ - ನನ್ನ ಹುಡುಗಿಯನ್ನ ಯಾ
ರೂನೂ ನೋಡಲೇ ಬಾರದು 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯಾನ : ಎಸ್ಪಿ.ಬಿ. ಎಸ.ಜಾನಕೀ 

ನನ್ನ ಹುಡುಗಿಯನ್ನ ಯಾರೂನೂ ನೋಡಲೇ ಬಾರದು
ನನ್ನ ಹುಡುಗನನ್ನು ಯಾರೂನೂ ಮೆಚ್ಚಲೇಬಾರದು
ನನ್ನವಳ ಬಿಟ್ಟು ಬೇರೆ ಯಾರನ್ನು ನಾನು ಕೂಡಾ ನೋಡಬಾರದು
ನನ್ನವನ ಬಿಟ್ಟು ನಾನು ಎಂದಿಗೂ  ನನ್ನ ಕೂಡಾ ಮೆಚ್ಚಬಾರದು
ನನ್ನ ಹುಡುಗಿಯನ್ನ ಯಾರೂನೂ ನೋಡಲೇ ಬಾರದು
ನನ್ನ ಹುಡುಗನನ್ನು ಯಾರೂನೂ ಮೆಚ್ಚಲೇಬಾರದು 

ಹೇಳದೇ ನನ್ನೆದೆ ಗುರುವಿನ ತರಹ ಸ್ವಾರ್ಥವೇ ಪ್ರೀತಿಯ ಹಣೆಯ ಬರಹ
ಈ ಹುಡುಗಿ ನನದು ನನ್ನ ಬಿಡದು ಬಿಟ್ಟು ಕೊಡದು ವಿರಹ ತರದು .....
ಹೇಳಿದೆ ನನ್ನೆದೆ ಸವತಿಯ ರೀತಿ ಏನಿದು ಅಳತೆಯ ಮೀರಿದ ಪ್ರೀತಿ
ಆನಂದ ನಿನದು ಅಂಕೆ ಇರದ ಆಸೆ ನಿನದು ಮಿಡಿತ ನನದೇ.... 
ನನ್ನವಳ ಬಿಟ್ಟು ಬೇರೆ ಯಾರನ್ನು ನಾನು ಕೂಡಾ ನೋಡಬಾರದು
ನನ್ನವನ ಬಿಟ್ಟು ನಾನು ಎಂದಿಗೂ  ನನ್ನ ಕೂಡಾ ಮೆಚ್ಚಬಾರದು 
ನನ್ನ ಹುಡುಗಿಯನ್ನ ಯಾರೂನೂ ನೋಡಲೇ ಬಾರದು
ನನ್ನ ಹುಡುಗನನ್ನ  ಯಾರೂನೂ ಮೆಚ್ಚಲೇಬಾರದು 

ಪ್ರೇಮದಾ ಹಕ್ಕಿಗೆ ಸೆರೆಯೆ ಇಷ್ಟ ಸ್ನೇಹದಾ...  ಆಸರೆ ಇನ್ನೂ  ಇಷ್ಟ 
ಬೇರಾಗಬಲ್ಲ ಭಯವನೆಲ್ಲಾ ತಡೆಯಬಲ್ಲ ಹೃದಯವಿಲ್ಲಾ 
ಪ್ರೇಮಿಯ ಬಯಕೆಯು  ಆಗಸದಗಲ  ಆಗದ ಆಸೆಗೆ ಅಳಲಾ ನಗಲಾ 
ಎಲ್ಲೆಲ್ಲೂ ನೀನೇ ನಿನ್ನ ಮೊಗವೆ ನಿನ್ನ ನಗುವೇ ನೀನೇ ಜಗವೇ.....  
ನನ್ನವನ ಬಿಟ್ಟು ನಾನು ಎಂದಿಗೂ  ನನ್ನ ಕೂಡಾ ಮೆಚ್ಚಬಾರದು.... 
ನನ್ನವಳ ಬಿಟ್ಟು ಬೇರೆ ಯಾರನ್ನು ನಾನು ಕೂಡಾ ನೋಡಬಾರದು.... 
ನನ್ನ ಹುಡುಗಿಯನ್ನ ಯಾರೂನೂ ನೋಡಲೇ ಬಾರದು
ನನ್ನ ಹುಡುಗನನ್ನ ಯಾರೂನೂ ಮೆಚ್ಚಲೇಬಾರದು
---------------------------------------------------------------------------------------------------------------------

೦೨. ಸಂಗಮ (೧೯೭೩) - ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
ಸಂಗೀತ : ಕೆ.ಪಿ.ಸುಖದೇವ್, ಸಾಹಿತ್ಯ : ಸಿ.ವಿ.ಶಿವಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ಸಿ.ಕೆ.ರಮಾ



ಹೂಂ ಹೂಂ ಹೂಂ ಹೂಂ ಆಹಾ.. ಓಹೋ
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
ಬಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
ಬಿಕ್ಷುಕನಾದರೂ ಕನ್ನಡ ನಾಡಲ್ಲೇ ಮಡಿವೆ
ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ
ಬಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ

ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ
ಸಂಗೀತ ಕಲೆ ಮೆಚ್ಚಿ ವೀಣೆಯ ಪಿಡಿದೊಡೆ
ಶೃಂಗೇರಿ ಶಾರದೆ ಮಡಿಲಲ್ಲಿ ನಲಿವೆ
ವೀರ ಖಡ್ಗವ ಝಳಪಿಸುವ ವೀರ ನಾನಾದೊಡೆ....
ಚಾಮುಂಡಾಂಬೆಯ ಕರದಲ್ಲಿ ಹೊಳೆವೆ
ಸಿರಿವಂತಳಾದರೂ ಕನ್ನಡ ನಾಡಲ್ಲೇ ಮೆರೆವೆ
ಬಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ

ಶರಣಗೆ ವಂದಿಪ ಶರಣೆ ನಾನಾದೊಡೆ 
ಶರಣಗೆ ವಂದಿಪ ಶರಣೆ ನಾನಾದೊಡೆ 
ವಚನವೇ ಬದುಕಿನ ಮಂತ್ರವೆನುವೆ
ವೀರಗೆ ವಂದಿಪ ಶೂರ ನಾನಾದೊಡೆ
ಕಲ್ಲಾಗಿ  ಹಂಪೆಯಲಿ ಬಹು ಕಾಲ ನಿಲುವೇ
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ
ಬಿಕ್ಷುಕಿಯಾದರೂ ಕನ್ನಡ ನಾಡಲ್ಲೇ ಮಡಿವೆ
ಸಿರಿವಂತನಾದರೂ ಕನ್ನಡ ನಾಡಲ್ಲೇ ಮೆರೆವೆ

ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ದಾಸರಿಗೆ ವಂದಿಪ ಅಭಿಮಾನಿಯಾದೊಡೆ
ಕನ್ನಡ ಸಾಹಿತ್ಯ ನನ್ನಾಸೆ ಎನುವೆ
ಪುಣ್ಯ ನದಿಯಲಿ ಮೀಯುವೆನಾದೊಡೆ
ಕಾವೇರಿ ತುಂಗೆಯರ ಮಡಿಲಲ್ಲಿ ಈಜುವೆ
ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
ಕನ್ನಡದ ಮಣ್ಣಲ್ಲಿ ಮಣ್ಣಾಗಿ ನಿಲುವೇ..
ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
ಇನ್ನೊಮ್ಮೆ ಮರುಜನ್ಮ ಪಡೆಯುವೆನಾದೊಡೆ
ಕನ್ನಡದ  ಮಣ್ಣಲ್ಲಿ ಮಣ್ಣಾಗಿ ನಿಲುವೇ.. 
ಮಣ್ಣಾಗಿ ನಿಲುವೇ.. ಮಣ್ಣಾಗಿ ನಿಲುವೇ..
-----------------------------------------------------------------------------------------------------------

೦೩. ವನಸುಮ - ಚಂದ್ರಮಂಚಕೆ ಬಾ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಕುವೆಂಪು ಗಾಯನ : ಪಿ.ಬಿ.ಶ್ರೀನಿವಾಸ  

ಚಂದ್ರಮಂಚಕೆ ಬಾ 
ಚಂದ್ರಮಂಚಕೆ ಬಾ ಚಕೋರಿ ಚಂದ್ರಮಂಚಕೆ ಬಾ 
ದೊನ್ನ ಜೇನಿಗೆ ಬಾಯಾರಿಕೆ ಚಕೋರ ಚುಂಬನ 
ಚಕೋರಿ ಚಂದ್ರಮಂಚಕೆ ಬಾ 

ಚಂದ್ರಿಕಾ ಮಧುಪಾನಮತ್ತ ಧೀನ ಕುಂಭ ಪ್ರಯೋಗವಿತ್ತ 
ಪಕ್ಷತದಿಗಂಬನಾ ನಿತ್ತ ನಿಗಾವಲಂಬನ... ಬಾ ಚಕೋರಿ ಬಾ  
ಚಾಕತ ತೋಲು ಬಾಯಾರಿದೇ ಚಕೋರ ಚುಂಬನ 
ಚಕೋರಿ ಚಂದ್ರಮಂಚಕೆ ಬಾ 

ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ ಕ್ಷೀರಸಾಗರದಲೀ ತೇಲುವಾ .. 
ತೆರೆಯ ಚಿಮ್ಮಿಸಿ ನೊರೆಯ ಹೊಮ್ಮಿಸಿ ಕ್ಷೀರಸಾಗರದಲೀ ತೇಲುವಾ .. 
ಬಾಗು ಚಂದ್ರನ ತೂಗುಮಂಚಕೇ ಬಾ ಚಕೋರಿ ಬಾ 
ಎದೆ ಹಾದಿಗೆ ಬಾಯಾರಿದೇ ಚಕೋರ ಚುಂಬನ.. ಚಕೋರ ಚುಂಬನ  
ಚಕೋರಿ ಚಂದ್ರಮಂಚಕೆ ಬಾ 
ದೊನ್ನ ಜೇನಿಗೆ ಬಾಯಾರಿಕೆ ಚಕೋರ ಚುಂಬನ 
ಚಕೋರಿ ಚಂದ್ರಮಂಚಕೆ ಬಾ 
---------------------------------------------------------------------------------------------------------------------

4. ವೀರ ಮಹಾದೇವ (೧೯೬೦) - ನೋಡು ಬಾ ಕನ್ನಡಿಗಾ... 
ಸಂಗೀತ : ಲಕ್ಷ್ಮಿ ನಾರಾಯಣ ಗುಚ್ಚಿ  ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಬಿ.ಶ್ರೀನಿವಾಸ

ನೋಡು ಬಾ ಕನ್ನಡಿಗಾ... ನೆನಪಿನಾ ಕೋಟೆಗಳ
ನೋಡು ಬಾ ಕನ್ನಡಿಗಾ... ನೆನಪಿನಾ ಕೋಟೆಗಳ 
ನೋಡುತಿರೆ ಅಭಿಮಾನ ಮೈತುಂಬಿ ಮೊರೆವುದು
ನೋಡು ಬಾ ಕನ್ನಡಿಗಾ... ನೆನಪಿನಾ ಕೋಟೆಗಳ
 
ಕರುನಾಡ ವೈಭವಕೆ ಮೆರುಗಿಟ್ಟ  ಕೋಟೆ ಇದು  ಇತಿಹಾಸ ನಿಲ್ಲಿಸಿದ ಸಾಹಸಕೆ ಸಾಕ್ಷಿ ಇದು
ಕಳೆದುದೆಲ್ಲ ನೆನಪಿಸುವ ಸೈನಿಕನ ಶರಧಿ ಕಂಡು ನಿಂತು ಕರಗುವ ದೊರೆತನವ ನೋಡು
ನೋಡು ಬಾ ಕನ್ನಡಿಗಾ... ನೆನಪಿನಾ ಕೋಟೆಗಳ

ಕಾಣುತಿಹ ಕೋಟೆಯಿದು ದೇಶ ಭಕ್ತಿ ನೆನಪಿಸುತಾ..  ಬಾಳುತಿಹ ಮಕ್ಕಳಿಗೆ ಪೌರುಷವ ಬೋಧಿಸಿದೆ 
ನಾಡಿಗಾಗಿ ಜೀವ ಕೊಟ್ಟ ಪೂಜಿತರು ಎಲ್ಲರೂ ಕನ್ನಡ ಚರಿತೆಯಲ್ಲಿ ಅಮರವಾಗಿ ನಿಂದಿಹರು 
ನೋಡು ಬಾ ಕನ್ನಡಿಗಾ... ನೆನಪಿನಾ ಕೋಟೆಗಳ

ಬಾಳಿಹೋದ ಧೀರರೆಲ್ಲಾ ಬಿಟ್ಟು ಹೋದ ತ್ಯಾಗ ಕೀರ್ತಿ...  
ರಕ್ಷಿಸುತ ಬಾಳುವದೆ ಭಾರತೀಯ ಜಾಗೃತಿ ... 
ವೀರ ಹನುಮ ಶೂರ ಭೀಮ ಹುಟ್ಟಿದಂತ ನಾಡಿದು ಸ್ವಾಭಿಮಾನಿ ಜನತೆಯ ಮಾತೃ ಭೂಮಿ ಗುಡಿಯಿದು 
ನೋಡು ಬಾ ಕನ್ನಡಿಗಾ... ನೆನಪಿನಾ ಕೋಟೆಗಳ ನೋಡುತಿರೆ ಅಭಿಮಾನ ಮೈತುಂಬಿ ಮೊರೆವುದು 
ನೋಡು ಬಾ ಕನ್ನಡಿಗಾ... ನೆನಪಿನಾ ಕೋಟೆಗಳ
-------------------------------------------------------------------------------------------------------------------------

5. ವೀರ ಮಹಾದೇವ (೧೯೬೦) - ಆರದಾ ನಂದಾದೀಪ ನಮ್ಮ ನೆನಪಲಿ ನಿನ್ನಾ ರೂಪ 
ಸಂಗೀತ : ಲಕ್ಷ್ಮಿ ನಾರಾಯಣ ಗೌಚಚಿ  ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ :ಡಾ||ರಾಜಕುಮಾರ 

ರಂಗ ಮಂದಿರದಲ್ಲಿ ತಿಂಗಳಾ ಬೆಳಕಾಗಿ ... ರಸಿಕರಾ ಮನದಲ್ಲಿ ಹರುಷದ ಹೊನಲಾಗಿ 
ಕರ್ನಾಟಕ ನಾಟಕಾಂಧ್ರ ಸಾರ್ವಭೌಮ ವಿನೋದ ರತ್ನಕಾರನೆಂಬ ಬಿರುದುಗಳ ಪಡೆದೇ 
ಮೈಸೂರು ವಿಶ್ವವಿದ್ಯಾಲಯ ನೀಡಿದ ಗೌರವಕೆ ಪಾತ್ರನಾದೆ 
ರಾಷ್ಟ್ರ ಪ್ರಶಸ್ತಿಯ ಪಡೆದೇ .. ಕಿರಿಯರಿಗೆ ದಾರಿಯ ತೋರಿ ನೀ ನಡೆದೇ.... ಏಏಏಏಏ 

ಆರದಾ ನಂದಾದೀಪ ನಮ್ಮ ನೆನಪಲಿ ನಿನ್ನ ರೂಪ 
ಆರದಾ ನಂದಾದೀಪ ನಮ್ಮ ನೆನಪಲಿ ನಿನ್ನ ರೂಪ..  ಆರದಾ ನಂದಾದೀಪ

ಕಲೆಯ  ಕಡಲು ತಂದ  ಬಲು ಬೆಲೆ ಬಾಳುವ ಮುತ್ತು 
ಕಲೆಯ  ಕಡಲು ತಂದ  ಬಲು ಬೆಲೆ ಬಾಳುವ ಮುತ್ತು 
ಕಿರಿಯರ ಬಾಳಿಗೆ ನಿನ್ನ ಸ್ನೇಹವೇ ಸಿರಿ ಸಂಪತ್ತು ಸ್ನೇಹವೇ ಸಿರಿ ಸಂಪತ್ತು 
ಆರದಾ ನಂದಾದೀಪ ನಮ್ಮ ನೆನಪಲಿ ನಿನ್ನಾ ರೂಪ..  ಆರದಾ ನಂದಾದೀಪ 

ಬಾಡದ ಹೂವು ನೀನಾದೆ ಕಲಾದೇವಿಯ ಅಡಿಗೆ 
ಬಾಡದ ಹೂವು ನೀನಾದೆ ಕಲಾದೇವಿಯ ಅಡಿಗೆ 
ಹೊನ್ನ ಕಳಶ ನೀನಾದೆ ನಾಟಕ ರಂಗದ ಗುಡಿಗೆ 
ಹೊನ್ನ ಕಳಶ ನೀನಾದೆ ನಾಟಕ ರಂಗದ ಗುಡಿಗೆ.... ನಾಟಕ ರಂಗದ ಗುಡಿಗೆ  
ಆರದಾ ನಂದಾದೀಪ ನಮ್ಮ ನೆನಪಲಿ ನಿನ್ನಾ ರೂಪ..  ಆರದಾ ನಂದಾದೀಪ 

ಹೊಗಳಲು ಕಿವಿಗೊಡಲಿಲ್ಲ ಬಿರುದಿಗೆ ಮರೆಯಲು ಇಲ್ಲ 
ಹೊಗಳಲು ಕಿವಿಗೊಡಲಿಲ್ಲ ಬಿರುದಿಗೆ ಮರೆಯಲು ಇಲ್ಲ 
ವಿನಯವೇ ನಿನ್ನುಸಿರು ಎಂದು ನಂಬಿ ಬಾಳಿದೆಯಲ್ಲಾ... ನಂಬಿ ಬಾಳಿದೆಯಲ್ಲಾ 
ಆರದಾ ನಂದಾದೀಪ ನಮ್ಮ ನೆನಪಲಿ ನಿನ್ನಾ ರೂಪ..  ಆರದಾ ನಂದಾದೀಪ 

ಹಾಸ್ಯದ ಹೊನಲನು ಹರಿಸಿ ಜನತೆಯ ಜಡತನ ಅಳಿಸಿ 
ಹಾಸ್ಯದ ಹೊನಲನು ಹರಿಸಿ ಜನತೆಯ ಜಡತನ ಅಳಿಸಿ 
ಬಾಳಿದೆ ಎಲ್ಲರ ನಗಿಸಿ ನಾಟಕ ರತ್ನ ಎನಿಸಿ 
ಬಾಳಿದೆ ಎಲ್ಲರ ನಗಿಸಿ ನಾಟಕ ರತ್ನ ಎನಿಸಿ...  ನಾಟಕ ರತ್ನ ಎನಿಸಿ 
ಆರದಾ ನಂದಾದೀಪ ನಮ್ಮ ನೆನಪಲಿ ನಿನ್ನಾ ರೂಪ..  ಆರದಾ ನಂದಾದೀಪ 
--------------------------------------------------------------------------------------------------------------------

6. ವೀರ ಮಹಾದೇವ (೧೯೬೦) - ಬಾನಿನ ಕಡೆಗೆ ನೋಡುತಲಿದ್ದೆ ರಾತ್ರಿಯಾಗಿತ್ತೂ .. 
ಸಂಗೀತ : ಲಕ್ಷ್ಮಿ ನಾರಾಯಣ ಗೌಚಚಿ ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ವಾಣಿಜಯರಾಂ 

ಬಾನಿನ ಕಡೆಗೆ ನೋಡುತಲಿದ್ದೆ ರಾತ್ರಿಯಾಗಿತ್ತೂ .. 
ತಾರೆಗಳೆಡೆಗೆ ನೋಡುತಲಿದ್ದೆ ಮೌನ ತುಂಬಿತ್ತೂ...  ಅನುರಾಗ ಹರಡಿತ್ತು 

ದೇವರ ಕರೆಗೆ ಓ ಗುಟ್ಟಂತೇ ಅವನೇ ಬಂದ ಭೂಮಿಗೆ... ಆಆಆ 
ಬಾಳಲಿ ಮುಸುಕಿದ ಕತ್ತಲೆಯೆಲ್ಲಾ ಕಣ್ಮರೆಯಾಗಿತ್ತೂ.. ಈ ಹುಣ್ಣಿಮೆ ಬೆಳೆದಿತ್ತು 
ಕೋಟೆಯ ದೇಗುಲ ಬೆಳಕಲಿ ಮಿಂದು ಶುಭ್ರವಾಗಿತ್ತು... ಆಆಆ 
ಕಲ್ಲಿನ ದೇವರ ಸನ್ನಿಧಿಯೆಲ್ಲಾ ಜೀವ ಬಂದಿತ್ತು... ಹೊಸ ರೂಪ ತಂದಿತ್ತು 
   
ತಂಪಿನ ಗಾಳಿ ಕೋಟೆಯ ಮೇಲೆ ರಾಗವ ನುಡಿಸಿತ್ತು... ಆಆಆ 
ಮೂರ್ತಿಗಳಿಲ್ಲದ ಮಂಟಪದಲ್ಲಿ ತೋರಣ ಕಟ್ಟಿತ್ತೂ ... ಈ ಭಕ್ತನ ಕರೆದಿತ್ತು 
ಮೋಹದ ವೀಣೆಯ ಮಿಡಿದ ಕೈಯ್ಯಗಳು ತೊಳ ಬಳಸಿತ್ತು... 
ಲಾಲಲಲಲ ಲಲಲಲಲ್ಲಲಲಲ್ಲಾ  ಲಲಲ್ಲಲಲಲ್ಲಾ 
ನಿರ್ಮಲ ಭಾವನೆ ತುಂಬಿದ ಹೃದಯವು ಸೇವೆಗೆ ಕಾದಿತ್ತು... ಪಿಸುಮಾತನಾಡಿತ್ತು  
ಬಾಳಿನ ಕಡೆಗೆ ಮುನ್ನಡೆದಿತ್ತೇ ಭಾಗ್ಯ ದೊರಕಿತ್ತು 
ಪ್ರಿಯತಮನೊಡನೆ ಮೈಮರೆಸಿತ್ತೇ ಮಾತು ಬಂದಿತ್ತು... ಈ ಲೋಕ ಮರೆಸಿತ್ತು 
ಆಆಹ್ಹಹ್ಹಹ್ಹಾ.. ಆಆಆ  ಆಆಹ್ಹಹ್ಹಹ್ಹಾ.. ಆಆಆ  ಓಹೋಹೋಹ್ಹೋ  ಓಹೋಹೋಹ್ಹೋ  
-------------------------------------------------------------------------------------------------------------------

೭. ವೀರ ಮಹಾದೇವ (೧೯೬೦) - ನೋಡಿ ಮಕ್ಕಳೇ ನಮ್ಮ ನಾಡಿದು 
ಸಂಗೀತ : ಲಕ್ಷ್ಮಿ ನಾರಾಯಣ ಗೌಚಚಿ ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಪಿ.ಬಿ.ಶ್ರೀನಿವಾಸ 

ನೋಡಿ ಮಕ್ಕಳೇ ನಮ್ಮ ನಾಡಿದು ಕೇಳಿ ಮಕ್ಕಳೇ ನಮ್ಮ ಕೂಗಿದು 
ನೋಡಿ ಮಕ್ಕಳೇ ನಮ್ಮ ನಾಡಿದು ಕೇಳಿ ಮಕ್ಕಳೇ ನಮ್ಮ ಕೂಗಿದು 

ವೀರ ಕಹಳೆ ಕೂಗಿದಾಗ ಕಲ್ಲು ತಾಳ ಹಾಕಿತು 
ವೀರರೇಲ್ಲಾ ಘರ್ಜಿಸಲೂ ಶತ್ರು ಪಡೆಯೂ ಸೋತಿತು 
ಕೋಟೆಯಿದು ಧರ್ಮರಕ್ಷಣೆಗೇ ನಿಂತೀತೂ... 
ಕೀರ್ತಿಯದೂ ಮಾರ್ಧನಿಸಿ ಬಾನಿನಲ್ಲಿ ಮೊರೆಯಿತು 
ನೋಡಿ ಮಕ್ಕಳೇ ನಮ್ಮ ನಾಡಿದು ಕೇಳಿ ಮಕ್ಕಳೇ ನಮ್ಮ ಕೂಗಿದು 
ನೋಡಿ ಮಕ್ಕಳೇ ನಮ್ಮ ನಾಡಿದು ಕೇಳಿ ಮಕ್ಕಳೇ ನಮ್ಮ ಕೂಗಿದು 

ಇದುವೇ ವೀರ ರಾಜರಿದ್ದ ಪುಣ್ಯಭೂಮಿ ಹೊನ್ನಾಡು 
ಇದುವೇ ಧರ್ಮ ನೆಲೆಸಿದ್ದ ರಾಮನ ತಾಯ್ನಾಡು 
ಗೆಲುವೇ ದೇವರೆನ್ನುವಾ ಶಾಂತಿಯ ಮಂತ್ರವೂ 
ಜಯಹೇ ಭಾರತ ಮಾತೇ ಎನ್ನುತ ನೀ ಹಾಡೂ ... 
ನೋಡಿ ಮಕ್ಕಳೇ ನಮ್ಮ ನಾಡಿದು ಕೇಳಿ ಮಕ್ಕಳೇ ನಮ್ಮ ಕೂಗಿದು 
ನೋಡಿ ಮಕ್ಕಳೇ ನಮ್ಮ ನಾಡಿದು ಕೇಳಿ ಮಕ್ಕಳೇ ನಮ್ಮ ಕೂಗಿದು 
ಆಆಆಹ್ಹಾಹ್ಹಾ ಆಆಆಹ್ಹಾಹ್ಹಾ ಆಆಆಹ್ಹಾಹ್ಹಾ ಓಹ್ಹೋಹೋಹೋ 
ಆಆಆಹ್ಹಾಹ್ಹಾ ಆಆಆಹ್ಹಾಹ್ಹಾ ಆಆಆಹ್ಹಾಹ್ಹಾ ಓಹ್ಹೋಹೋಹೋ 
------------------------------------------------------------------------------------------------------------------

೮. ವೀರ ಮಹಾದೇವ (೧೯೬೦) - ಇಂದು ಮಹಾನವಮಿ ನಾಳೆ ವಿಜಯದಶಮಿ 
ಸಂಗೀತ : ಲಕ್ಷ್ಮಿ ನಾರಾಯಣ ಗೌಚಚಿ ಸಾಹಿತ್ಯ : ಸಿ.ವಿ.ಶಿವಶಂಕರ ಗಾಯನ : ಎಸ್.ಪಿ.ಬಿ.

ಗಂಡು : ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
            ನಮಗೆ ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
ಕೋರಸ್ : ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
                ನಮಗೆ ನಾಳೆ ವಿಜಯ ದಶಮಿ 

ಗಂಡು : ಕನ್ನಡದ ದೊರೆಗಳು ಆಚರಿಸಿದ ಉತ್ಸವ ಮುನ್ನಡೆದ ಪ್ರಜೆಗಳ ದೇಶ ಪ್ರೇಮ ವೈಭವ.. 
ಎಲ್ಲರು : ಆಆಆಅ... ಆಆಆಅ ... ಓಓಓಓಓಓಓ ಓಓಓಓಓಓಓ ಆಆಆಅ ಓಹೋ ಓಹೋ ಓಹೋ 
ಗಂಡು : ಕನ್ನಡದ ದೊರೆಗಳು ಆಚರಿಸಿದ ಉತ್ಸವ ಮುನ್ನಡೆದ ಪ್ರಜೆಗಳ ದೇಶ ಪ್ರೇಮ ವೈಭವ.. 
            ಮೂಡಲಿಂದು ಹೊಸತನ...... ಆಆಆ 
           ಮೂಡಲಿಂದು ಹೊಸತನ ಕನ್ನಡಿಗರ ಎದೆಯಲ್ಲಿ... 
ಕೊರಸ : ಮೂಡಲಲ್ಲಿ ಹೊಳೆಯುವ ಸೂರ್ಯನಂತೇ ಬೆಳಗಲೀ .. 
ಗಂಡು :  ಮೋಡಲಲ್ಲಿ ಹೊಳೆಯುವ ಸೂರ್ಯನಂತೇ ಬೆಳಗಲೀ ..   
ಗಂಡು : ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
            ನಮಗೆ ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
ಕೋರಸ್ : ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
                ನಮಗೆ ನಾಳೆ ವಿಜಯ ದಶಮಿ 

ಗಂಡು : ಕನ್ನಡದ ಸಂಸ್ಕೃತಿ ಭಾರತೀಯ ಸಂಸ್ಕೃತಿ ಎಂದೆಂದಿಗೂ ಅಳಿಯದೇ ಬೆಳಗಲಿ ಜಾಗೃತಿ.... 
ಎಲ್ಲರು : ಆಆಆಅ... ಆಹಾಆಆಹಾಅ ... ಓಓಓಓಓಓಓ ಓಓಓಓಓಓಓ ಆಆಆಅ ಓಹೋ ಓಹೋ ಓಹೋ 
ಗಂಡು : ಕನ್ನಡದ ಸಂಸ್ಕೃತಿ ಭಾರತೀಯ ಸಂಸ್ಕೃತಿ ಎಂದೆಂದಿಗೂ ಅಳಿಯದೇ ಬೆಳಗಲಿ ಜಾಗೃತಿ.... 
           ಕಲ್ಲಿನಲ್ಲಿ ಜೀವ ಕೆತ್ತಿ.... 
           ಕಲ್ಲಿನಲ್ಲಿ ಜೀವ ಕೆತ್ತಿ ಕಲ್ಲಿನಲ್ಲಿ ಶೌಗತ್ತಿ 
ಕೊರಸ್ : ಕಟ್ಟಿ ಹಲವು ಕೋಟೆಗಳ ಚರಿತೆಗಳ ನೆನಪು ತುಂಬಿ 
ಗಂಡು : ಕಟ್ಟಿಹರು ಕೋಟೆಗಳ ಚರಿತೆಗಳ ನೆನಪು ತುಂಬಿ... 
            ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
            ನಮಗೆ ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
ಕೋರಸ್ : ಇಂದು ಮಹಾನವಮಿ ನಮಗೆ ನಾಳೆ ವಿಜಯ ದಶಮಿ 
                ನಮಗೆ ನಾಳೆ ವಿಜಯ ದಶಮಿ 
-----------------------------------------------------------------------------------------------------------------

೯. ಧರ್ಮ ಮಂದಿರ - ಧರ್ಮಮಂದಿರ 
ಸಂಗೀತ : ನಾದಪ್ರಿಯ. ಸಾಹಿತ್ಯ : ವೆಂಕಟೇಶ ಮೂರ್ತಿ, ಗಾಯನ : ಪಿ.ಬಿ.ಶ್ರೀನಿವಾಸ. ಕೋರಸ್   

ಗಂಡು : ಆಆಆಆ.... ಆಆಆ ಆಆಆಆ.... ಆಆಆ 
           ಧರ್ಮ ಮಂದಿರ ಇದು ದೇವ ಮಂದಿರ 
           ನ್ಯಾಯ ಮಂದಿರ ಇದು ಜ್ಞಾನ ಮಂದಿರ 
ಕೋರಸ್ : ಧರ್ಮ ಮಂದಿರ ಇದು ದೇವ ಮಂದಿರ 

ಗಂಡು : ಧರ್ಮವೆಂಬು ದೇಗುಲ ಜ್ಞಾನವಿಲ್ಲಿ ದೇವರೂ .. 
            ಭಕ್ತಿಯಿಂದ ಸೇವೆಯೂ ಶೃದ್ಧೆಯೆಂಬ ಪೂಜೆಯೂ  
           ಧರ್ಮ ಮಂದಿರ ಇದು ದೇವ ಮಂದಿರ 

ಗಂಡು : ಸತ್ಯವೆಂಬು ಹಣತೆಯಲ್ಲಿ ನ್ಯಾಯ ಎಂಬೋ ಜ್ಯೋತಿ ಬೆಳಗಿ               
           ಸುಟ್ಟ ಹೆಣೆವ ಬೇಧ ಭಾವ ಕತ್ತಲಂತೇ ದೂರ ಸರಿವ 
ಕೋರಸ್ : ಧರ್ಮ ಮಂದಿರ ಇದು ದೇವ ಮಂದಿರ 

ಗಂಡು :  ಶಾಂತಿ ಸಹನೆ ಪುಷ್ಪವೂ ದಯಾ ಗುಣವೇ ಧೂಪವೂ 
             ಸ್ನೇಹ ಸೌಹಾರ್ಧವೂ ಮಂತ್ರವು ನೈವ್ಯದ್ಯೆವೂ 
ಕೋರಸ್ : ಧರ್ಮ ಮಂದಿರ ಇದು ದೇವ ಮಂದಿರ 
--------------------------------------------------------------------------------------------------------------

೧೦. ಧರ್ಮಮಂದಿರ - ಸೃಷ್ಟಿಗೋಡೆಯ 
ಸಂಗೀತ : ನಾದಪ್ರಿಯ. ಸಾಹಿತ್ಯ : ವೆಂಕಟೇಶ ಮೂರ್ತಿ, ಗಾಯನ : ಪಿ.ಬಿ.ಎಸ್. ಎಸ್.ಜಾನಕೀ 

ಗಂಡು : ಸೃಷ್ಟಿಗೊಡೆಯ ಈತನೇ..  ಜಗದೀಶನೇ...  ಪರಮೇಶನೇ.. ಪರಮೇಶನೇ.. 
            ಹಲವು ನಾಮರೂಪ ಧರಿಸಿ ವಿಶ್ವವಂದ್ಯನಾಗಿಹೇ.. ಪರಮೇಶನೇ 
           ಸೃಷ್ಟಿಗೊಡೆಯ ಈತನೇ..  ಜಗದೀಶನೇ...  ಪರಮೇಶನೇ.. ಪರಮೇಶನೇ.. 

ಹೆಣ್ಣು : ಧರ್ಮವ ರಕ್ಷಿಸಿ ಮಾಡುವೇ ನೀನೂ ಯುಗಯುಗದಲಿ ಅವತಾರ... 
          ದುಷ್ಟರ ಶಿಕ್ಷಿಸಿ ಶಿಷ್ಟರ ರಕ್ಷಿಸಿ ಮಾಡುವೇ ಲೋಕೋದ್ಧಾರ...   
          ಮಾಡುವೇ ಲೋಕೋದ್ಧಾರ...   
ಇಬ್ಬರು : ಸೃಷ್ಟಿಗೊಡೆಯ ಈತನೇ..  ಜಗದೀಶನೇ...  ಪರಮೇಶನೇ.. ಪರಮೇಶನೇ.. 

ಗಂಡು : ತೇತ್ರಾಯುಗದಲಿ ಶ್ರೀರಾಮಚಂದ್ರ ಪಿತೃವಾಕ್ಯ ಪರಿಪಾಲಕ 
            ದ್ವಾಪರಯುಗದಲಿ ಶ್ರೀಕೃಷ್ಣ ಭಗವದ್ಗೀತಾ ಬೋಧಕ.. ಶ್ರೀಕೃಷ್ಣ ನೀ  
ಇಬ್ಬರು : ಸೃಷ್ಟಿಗೊಡೆಯ ಈತನೇ..  ಜಗದೀಶನೇ...  ಪರಮೇಶನೇ.. ಪರಮೇಶನೇ.. 

ಹೆಣ್ಣು : ಈ ಕಲಿಯುಗದಲೀ ಗುರುಸಾರ್ವಭೌಮ ಸತ್ಯ ಧರ್ಮ ಸಂರಕ್ಷಕ 
          ಭಕ್ತಿಭಾವದಲಿ ಬೇಡುತಿಹೆವು ದರುಶನ ನೀಡು ದಯಾನಿಧಿ.. ಜಗದೀಶನೇ 
------------------------------------------------------------------------------------------------------

೧೧. ಪ್ರತಿಜ್ಞೆ (೧೯೮೧) - ಇದು ಪ್ರಾಯದ ಮಾಯಾಜಾಲವೋ 
ಸಂಗೀತ : ಎಂ.ರಂಗರಾವ, ಸಾಹಿತ್ಯ : ಗಾಯನ : ಬೆಂಗಳೂರುಲತ 

ಇದು ಪ್ರಾಯದ ಮಾಯಾಜಾಲವೋ ಆ ಕಾಣದ ಕೈಗಳ ಆಟವೋ 
ಕಣ್ಣಸನ್ನೆಯಾ....   ತುಂಟಾಟವೂ 
ಕಣ್ಣಸನ್ನೆಯಾ....   ತುಂಟಾಟವೂ ನಾ ನಿನ್ನನ್ನೂ ಪಾಡೀ .. ಆದೇನೋ ... 
ಇದು ಪ್ರಾಯದ ಮಾಯಾಜಾಲವೋ ಆ ಕಾಣದ ಕೈಗಳ ಆಟವೋ 

ಕನಸಲಿ ನಿನ್ನ ರೂಪ.. ನಿದ್ದೆ ಕೆಡಿಸಿದೇ ... 
ನನಸಲಿ ನಿನ್ನ ಜೊತೆಯಾ.. ಮನಸ್ಸು ಬೇಡಿದೆ... 
ಹರೆಯದ.. ಮಧುಮಾಸ ಅರಸನ ಕುಹೂ ವಾಸ    
ಕೋರುತ ಜೀವನ ಜೇನಾಗಿದೇ... 
ಇದು ಪ್ರಾಯದ ಮಾಯಾಜಾಲವೋ ಆ ಕಾಣದ ಕೈಗಳ ಆಟವೋ 

ಬಾಳಸೇ ಆಗಸದಲ್ಲಿ ಬಾನಾಡಿ ಆಡಿದೇ .... 
ಬಾಳಸೇ ಆಗಸದಲ್ಲಿ ಬಾನಾಡಿ ಆಡಿದೇ .... 
ಪುಂಡಾಟ ಹೃದಯದಲ್ಲಿ ಪ್ರೇಮ ಸೌಧ ದೂಡಿದೆ 
ಕೆಂಗಣ ಸಂಗೀತ... ಸಂತಸ ಸಂಕೇತ... ಸ್ವಾಗತ ಪ್ರೇಮಕೇ .. ತಾ ನೀಡಿದೇ 
ಇದು ಪ್ರಾಯದ ಮಾಯಾಜಾಲವೋ ಆ ಕಾಣದ ಕೈಗಳ ಆಟವೋ 
ಕಣ್ಣಸನ್ನೆಯಾ....   ತುಂಟಾಟವೂ 
ಕಣ್ಣಸನ್ನೆಯಾ....   ತುಂಟಾಟವೂ ನಾ ಇಂದೂ ಬಂದೇ ..ಆಆಆ..   ಆದೇನೋ ... 
------------------------------------------------------------------------------------------------------

12. ಗಂಡುಗಲಿ (೧೯೭೧ - ಬಿಡುಗಡೆಯಾಗಿಲ್ಲ) - ಮೈಸೂರು ಮಲ್ಲೆ ನಾ ಮೈ ಭಾರ ಯೌವ್ವನ
      ಸಂಗೀತ : ಸತ್ಯಂ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ 

ಮೈಸೂರು ಮಲ್ಲೇ ನಾ.. ಅಹ್   ಮೈ ಭಾರ ಯೌವ್ವನ.. ಆಹ್ 
ಮೈ ಸೋಕಿಲ್ಲ..  ಮೈ ತಾಕಿಲ್ಲ.. ನನ್ನಂಥ ರೂಪ.. ಇನ್ನಿಲ್ಲ..   
ಮೈಸೂರು ಮಲ್ಲೇ ನಾ.. ಮೈ ಭಾರ ಯೌವ್ವನ..
ಮೈ ಸೋಕಿಲ್ಲ..  ಮೈ ತಾಕಿಲ್ಲ.. ನನ್ನಂಥ ರೂಪ.. ಇನ್ನಿಲ್ಲ..   
ಮೈಸೂರು ಮಲ್ಲೇ ನಾ..ಓಓಓ 

ಮುಟ್ಟಿದರೇ ಒಡೆವ ನಾಜೂಕ ಸೊಂಟ.. ಅಮ್ಮೋ.. 
ಗಟ್ಟಿಯಾಗಿ ನೀನು ಹಿಡಿಬೇಡ ತುಂಟ..  ಅಂಬೋ.... 
ದೂರದಿಂದ ನನ್ನ ನೋಡಿದರೆ ಚೆನ್ನ ಕೇಳೋ ದಿಲ್ದಾರ... ಅಹಹಹ್ಹ್ಹ.. 
ಮೈಸೂರು ಮಲ್ಲೇ ನಾ.. ಮೈ ಭಾರ ಯೌವ್ವನ..
ಮೈ ಸೋಕಿಲ್ಲ..  ಮೈ ತಾಕಿಲ್ಲ.. ನನ್ನಂಥ ರೂಪ.. ಇನ್ನಿಲ್ಲ..   
ಮೈಸೂರು ಮಲ್ಲೇ ನಾ..ಓಓಓ 

ಗಾಳಿಯಲ್ಲಿ ಸೆರಗು ಹಾರಿ ಹೋಯಿತ್ತಲ್ಲ.. ಅಂಬೋ... 
ಗೇಲಿ ಮಾಡೋ ನಿನ್ನ ಕೈಯ್ಯ ಸೇರಿ ಕೊಳ್ಳ.. ಅಮ್ಮೋ... 
ಗೇಣುವುದು ಕಣ್ಣು ತಾಳಲಾರೆ ಹೆಣ್ಣು ನೀಡ ಸೆರಗನ್ನ... 
ಮೈಸೂರು ಮಲ್ಲೇ ನಾ.. ಮೈ ಭಾರ ಯೌವ್ವನ..
ಮೈ ಸೋಕಿಲ್ಲ..  ಮೈ ತಾಕಿಲ್ಲ.. ನನ್ನಂಥ ರೂಪ.. ಇನ್ನಿಲ್ಲ..   
ಮೈಸೂರು ಮಲ್ಲೇ ನಾ..ಓಓಓ 
------------------------------------------------------------------------------------------------------

No comments:

Post a Comment