ಮನೆ ಬೆಳಕು ಚಲನಚಿತ್ರದ ಹಾಡುಗಳು
- ಮಲ್ಲೆ ಹೂವು ನಾಚಿದೆ ನಿನ್ನ ಸೊಗಸು ಕಂಡು
- ದಂತದ ಬೊಂಬೆ ಈ ನಮ್ಮ ಹೆಣ್ಣು
- ಮಾವಿನಲ್ಲಿ ಸಿಹಿ ಇದೆ ಬೇವಿನಲ್ಲಿ ಕಹಿ ಇದೆ
- ಹರಿಕಥೆ - ಕೀಚಕನ ಕಥೆ
- ಇಂದೂ ನನ್ನ ಮುದ್ದಿನ ಕಂದ ಅಮ್ಮ ಎಂದು ಅಳುವಾ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ
ಗಂಡು : ಮಲ್ಲೆ ಹೂವು ನಾಚಿದೇ .. ತಂಪು ಗಾಳಿ ಬೀಸಿದೇ..ಏಕೆ.. ಏಕೆ... ಏಕೆ...
ಮಲ್ಲೆ ಹೂವು ನಾಚಿದೆ ನಿನ್ನ ಸೊಗಸು ಕಂಡು
ತಂಪು ಗಾಳಿ ಬೀಸಿದೇ ತನುವ ಸೋಕಲೆಂದು
ಹೆಣ್ಣು : ತಾರೆ ನೂರು ಮೂಡಿದೆ ಶಶಿಯ ಮೊಗವು ಬಾಡಿದೆ ಏಕೆ.. ಏಕೆ... ಏಕೆ...
ತಾರೆ ನೂರು ಮೂಡಿದೆ ನಿನ್ನ ಕಾಣಲೆಂದು
ಶಶಿಯ ಮೊಗವು ಬಾಡಿದೆ ನಿನ್ನ ಸೊಗಸು ಕಂಡು
ಗಂಡು : ಆಸೆಯೊಂದು ಮೂಡುತಿದೆ ನನಗಿಂದು
ಆಸೆಯೊಂದು ಮೂಡುತಿದೆ ನನಗಿಂದು
ಹೆಣ್ಣು : ಏನೆಂದು
ಗಂಡು : ಎಂದೂ ಹೀಗೆ ನಿನ್ನೊಡನೆ ಇರಬೇಕು ನಾನೆಂದು
ಎಂದೂ ಹೀಗೆ ನಿನ್ನೊಡನೆ ಇರಬೇಕು ನಾನೆಂದು
ಹೆಣ್ಣು : ನಾ ಹೇಳಬೇಕೀಗ.. (ಹೂಂ ಹುಂ) ನಾ ಹೇಳಬೇಕೀಗ ಮಾತೊಂದು
ಗಂಡು : ಏನೆಂದು
ಹೆಣ್ಣು : ನೀ ದೂರವಾದಾಗ ಈ ಸೀತೆ ಇರಳಲೆಂದು
ಗಂಡು : ಮಲ್ಲೆ ಹೂವು ನಾಚಿದೆ ನಿನ್ನ ಸೊಗಸು ಕಂಡು
ಹೆಣ್ಣು : ಶಶಿಯ ಮೊಗವು ಬಾಡಿದೆ ನಿನ್ನ ಸೊಗಸು ಕಂಡು
ಗಂಡು : ತನುವೆನು ಹೇಳುತಿದೆ
ಹೆಣ್ಣು : ಒಲವಿನ ಗುಡಿಯೇ ತಾನೆಂದಿದೆ
ಮನವೇನು ಹೇಳುತಿದೆ
ಗಂಡು : ಆ ಗುಡಿಗೆ.. ಕಳಶವು ತಾನೆಂದಿದೆ
ಹೆಣ್ಣು : ಆಆಆ.. ತನುವೆನು ಹೇಳುತಿದೆ
ಗಂಡು : ಒಲವಿನ ಗುಡಿಯೇ ತಾನೆಂದಿದೆ
ಮನವೇನು ಹೇಳುತಿದೆ
ಹೆಣ್ಣು : ಆ... ಗುಡಿಗೆ.. ಕಳಶವು ತಾನೆಂದಿದೆ
ಗಂಡು : ಆ... ಕಣ್ಣೇನು ಹೇಳುತಿದೆ
ಹೆಣ್ಣು : ಅಲ್ಲಿ ಬೆಳಗುವ ದೀಪವೇ ತಾನೆಂದಿದೇ
ಎದೆಯಾಸೆ ಏನಿದೆಗಂಡು : ಆ.. ಬೆಳಕೇ ನೀನಾಗಬೇಕೆಂದಿದೆ
ಹೆಣ್ಣು : ಆ.. ಬೆಳಕೇ ನೀನಾಗಬೇಕೆಂದಿದೆ
ಗಂಡು : ಮಲ್ಲೆ ಹೂವು ನಾಚಿದೆ
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ
ಹೆಣ್ಣು : ತಂಪು ಗಾಳಿ ಬೀಸಿದೇ
ಗಂಡು : ಹೂಂ ಹೂಂ ಹೂಂ ಹೂಂ ಹೂಂ
ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ
ಹೆಣ್ಣು : ತಂಪು ಗಾಳಿ ಬೀಸಿದೇ
ಗಂಡು : ಹೂಂ ಹೂಂ ಹೂಂ ಹೂಂ ಹೂಂ
--------------------------------------------------------------------------------------------------------------------------
ಮನೆ ಬೆಳಕು (೧೯೭೫) - ಮಾವಿನಲ್ಲಿ ಸಿಹಿ ಇದೆ ಬೇವಿನಲ್ಲಿ ಕಹಿ ಇದೆ ಎಂದೂ ಕೂಡ ಅರಿಯದೀ ಪುಟ್ಟ ಮೀನು
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ಮಾವಿನಲ್ಲಿ ಸಿಹಿ ಇದೆ ಬೇವಿನಲ್ಲಿ ಕಹಿ ಇದೆ ಎಂದೂ ಕೂಡ ಅರಿಯದೀ ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ ತಿಳಿಯದೇನೋ ಆಡಿ ಹಾಡಿ ಬೆಳೆಯುತ್ತಿರುವ ಹೆಣ್ಣು ಮೀನು
ಮಾವಿನಲ್ಲಿ ಸಿಹಿ ಇದೆ ಬೇವಿನಲ್ಲಿ ಕಹಿ ಇದೆ ಎಂದೂ ಕೂಡ ಅರಿಯದೀ ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ ತಿಳಿಯದೇನೋ ಆಡಿ ಹಾಡಿ ಬೆಳೆಯುತ್ತಿರುವ ಹೆಣ್ಣು ಮೀನು
ದಡದ ಮೇಲೆ ಕೊಕ್ಕರೆ ಕಂಡು ಮರದ ಮೇಲೆ ಹದ್ದನ್ನು ಕಂಡು
ದಡದ ಮೇಲೆ ಕೊಕ್ಕರೆ ಕಂಡು ಮರದ ಮೇಲೆ ಹದ್ದನ್ನು ಕಂಡು
ನೆಂಟರೆಂದು ಭ್ರಮಿಸಿತು ಮುದ್ದು ಮೀನು... ಪಾಪ ಮುದ್ದು ಮೀನು
ದಡದ ಮೇಲೆ ಕೊಕ್ಕರೆ ಕಂಡು ಮರದ ಮೇಲೆ ಹದ್ದನ್ನು ಕಂಡು
ನೆಂಟರೆಂದು ಭ್ರಮಿಸಿತು ಮುದ್ದು ಮೀನು... ಪಾಪ ಮುದ್ದು ಮೀನು
ಒಲವಿನಿಂದ ಕೂಗಿತು ಹುಚ್ಚು ಮೀನು.. ಆಹ್ಹಹ್ಹಹ್ಹ ...
ಮಾವಿನಲ್ಲಿ ಸಿಹಿ ಇದೆ ಬೇವಿನಲ್ಲಿ ಕಹಿ ಇದೆ ಎಂದೂ ಕೂಡ ಅರಿಯದೀ ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ ತಿಳಿಯದೇನೋ ಆಡಿ ಹಾಡಿ ಬೆಳೆಯುತ್ತಿರುವ ಹೆಣ್ಣು ಮೀನು
ಮಾವಿನಲ್ಲಿ ಸಿಹಿ ಇದೆ ಬೇವಿನಲ್ಲಿ ಕಹಿ ಇದೆ ಎಂದೂ ಕೂಡ ಅರಿಯದೀ ಪುಟ್ಟ ಮೀನು
ವೈರಿ ಯಾರೋ ಗೆಳೆಯನಾರೋ ತಿಳಿಯದೇನೋ ಆಡಿ ಹಾಡಿ ಬೆಳೆಯುತ್ತಿರುವ ಹೆಣ್ಣು ಮೀನು
ಗಾಳ ಎಸೆದ ತುಂಟ ಹುಡುಗ ಯಾರು ಅರಿಯದೆ ಹಾರಿ ಬಂದು ಬಿದ್ದಿತು ನೀರಿನ ಹೊರಗೆ
ಚಿಮ್ಮಿ ಚಿಮ್ಮಿ ಆಡಿ..... ನೋವಿನಿಂದ ಬಾಡಿ ಮೋಸದಿಂದ ತಾಯಾಗಿ ಹೆಣ್ಣು ಮೀನು
ತಾಳಿಯಿಲ್ಲ ಕೊರಳಲಿ ನಗುವ ಜನರ ಎದುರಲಿ ಹೇಗೆ ಬಾಳಿ ಬದುಕುವುದೀ ಒಂಟಿ ಮೀನು
ಸಾವಿನಲ್ಲಿ ತಾನೇ ಸುಖವೇ ಹೇಳು ನೀನು.. ಹೇಳು ನೀನೂ ....
-------------------------------------------------------------------------------------------------------------------------
ಮನೆ ಬೆಳಕು (೧೯೭೫) - ದಂತದ ಬೊಂಬೆ ಈ ನಮ್ಮ ಹೆಣ್ಣು ನೈದಿಲೆಯಂತೇ ಈ ಎರಡು ಕಣ್ಣೂ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಪಿ.ಸುಶೀಲಾ
ಹೆಣ್ಣು : ದಂತದ ಬೊಂಬೆ ಈ ನಮ್ಮ ಹೆಣ್ಣು ನೈದಿಲೆಯಂತೇ ಈ ಎರಡು ಕಣ್ಣೂ
ದಂತದ ಬೊಂಬೆ ಈ ನಮ್ಮ ಹೆಣ್ಣು ನೈದಿಲೆ ಹೂವಂತೇ ಈ ಎರಡು ಕಣ್ಣೂ
ಈ ಗೊಂಬೆಗೆ ಇರುವ ಆಭರಣ.. ಬಂಗಾರದಂತ ಒಳ್ಳೆಗುಣ.. ಬಂಗಾರದಂತ ಒಳ್ಳೆಗುಣ..
ಗಂಡು : ಬಲು ಅಂದಗಾರ ಈ ನಮ್ಮ ಗಂಡು ಗೆಳೆಯರ ಕೂಟದಿ ಮಾಟದ ಗುಂಡೂ
ಬಲು ಅಂದಗಾರ ಈ ನಮ್ಮ ಗಂಡು ಗೆಳೆಯರ ಕೂಟದಿ ಮಾಟದ ಗುಂಡೂ
ಎಂದೆಂದೂ ನಮ್ಮಿ ಬಾಲಕನೂ ತಾನಾಡಿಂದಂತೆ ನಡೆವನೂ.. ತಾನಾಡಿಂದಂತೆ ನಡೆವನೂ..
ಹೆಣ್ಣು : ದಂತದ ಬೊಂಬೆ ಈ ನಮ್ಮ ಹೆಣ್ಣು ನೈದಿಲೆಯಂತೇ ಈ ಎರಡು ಕಣ್ಣೂ
ಹೆಣ್ಣು : ಕೊರಳಲ್ಲಿ ಕಾಣೇ ನಾ ಮುತ್ತಿನ ಸರವನೋ
ಗಂಡು :ಇದೇಯಲ್ಲಾ ಹರಿನಾಮ ಇನ್ನೆನ್ನೋ
ಹೆಣ್ಣು : ಕರದಲ್ಲಿ ಕಾಣೇ ನಾ ಬಂಗಾರದ ಬಳೆಯೂ
ಗಂಡು : ಇದೆಯೆಲ್ಲಾ ಶಿವಪೂರ್ಣ ಮಾಲೇ
ಹೆಣ್ಣು : ಮನದಲಿ ಎಲ್ಲಾ ಐಸಿರಿಯ ಮೇಲೆ ಮೋಹವೂ
ಮನದಲಿ ಎಲ್ಲಾ ಐಸಿರಿಯ ಮೇಲೆ ಮೋಹವೂ
ಗಂಡು : ಇದೆಯಲ್ಲಾ ಪತಿಸೇವಾ ಆಕಾಂಕ್ಷೆಯೂ
ಮನೆ ಬೆಳಕು (೧೯೭೫) - ಹರಿಕಥೆ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಲೀಲಾ
ಆ ಪ್ರಕಾರವಾಗಿ ಪರಮಸೌಂದರ್ಯವತಿಯೂ ಪತಿವೃತಾ ಶಿರೋಮಣಿಯು ಆದ ದ್ರೌಪದಿ ದಿಂ...
ಏಕಾಂತದಲ್ಲಿ ಇರುವಲ್ಲಿ ಆಕೆಯನ್ನು ಬಲಾತ್ಕರಿಸಲೂ ಬಯಸಿ ಆ ನೀಚ ಕೀಚಕನೂ
ಪನ್ನೀರ ಜಲದಲ್ಲಿ ಮಿಂದೂ ಹಣೆಯಲಿ ತಿಲಕವನಿಟ್ಟು ನಿಲುವಗನ್ನಡಿಯಲ್ಲಿ ತನ್ನ ಅಂದ ನೋಡಿ
ತಲೆಯಾಡಿ ದ್ರೌಪತಿಯನ್ನೂ ವರಿಸಿಕೊಳ್ಳಲೂ ಆಹಾ.. ಒಲವನ್ನು ತೋರುತಾ ಮರೆಯಲೂ
ಕುಡಿನೋಟ ತೂರಿ ಬಂಧನವೂ ಮೀರಿ ನಡೆನಡೆಯ ತೂಗಿ ತಾ ಮೊಳೆಯುತಾ
ಹತ್ತಿರ ಬರ ಆ ಪರಮ ಪಾತಕಿಯೂ ಪರನಾರಿಯ ಆಶಿಸಿದ ಕೀಚಕನೂ
ಮದನ ತಾಪ ಪೀಡಿತ ದುರ್ಮತಿ ನಲಿದು ಬಂದನು ಕಾಮುಕನೂ
ಸಮಯ ನೋಡಿ ಆ ನರ್ತನ ಶಾಲೆಯ ಮಧು ಸೇವಿಸುತ ಮದನೋತ್ಮನು
ಛಲನು ತುಂಬಾ ಬಲನು ಈ ಸುರನೂ ಕಠಿಣ ಸಿಟ್ಟನು
ಛಲನು ತುಂಬಾ ಬಲನು ಈ ಸುರನೂ ಕಠಿಣ ಸಿಟ್ಟನು
ಹೆಣ್ಣನು ಹಿಡಿಯಲು ಹೊರಟನು ಮೊದಲೇ ಮದೋನ್ಮತ್ತನೂ
ಹೆಣ್ಣನು ಹಿಡಿಯಲು ಹೊರಟನು ಮೊದಲೇ ಮದೋನ್ಮತ್ತನೂ...
ಒಡನೆ ಬರುವರೂ ನನ್ನ ಪತಿಗಂಧರ್ವರ ಐದು ಜನ
ಕುಡಿದು ಬಂದಿಹ ನಿನ್ನ ಶಿರವಿದು ಸಿಡಿದು ಹಾರುವುದನ್ನ ತೊಡುವಡೇ
ಒಡೆಯ ದುರ್ಮದಿ ದುಷ್ಟ ದುರ್ಮದ ಹೋಗೂ ಕೀಚಕನೇ...
--------------------------------------------------------------------------------------------------------------------------
ಮನೆ ಬೆಳಕು (೧೯೭೫) - ಇಂದು ನನ್ನ ಮುದ್ದಿನ ಕಂದ ಅಮ್ಮಾ ಎಂದೂ ಅಳುವಾ
ಸಂಗೀತ : ಎಂ.ರಂಗರಾವ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಲೀಲಾ, ಬೆಂಗಳೂರು ಲತಾ
ಲೀಲಾ : ಇಂದು ನನ್ನ ಮುದ್ದಿನ ಕಂದ ಅಮ್ಮಾ ಎಂದೇ ಅಳುವಾ
ನನ್ನ ಚಿನ್ನ ಎಂದು ಮುದ್ದಿಸಿ ಅಳುವಾ ಮರೆತು ನಗುವಾ
ಲತಾ : ನಾಳೆ ಇವನು ಮಾತನು ಕಲಿತು ಪುಟ್ಟ ಹೆಜ್ಜೆಯ ಇಡುವಾ
ಅಪ್ಪಾ ಏಕೆ ದೂರದಲಿ ಇರುವಾ ಎಂದು ಕೇಳೇ ಬೀಡುವಾ
ಲೀಲಾ : ಎಲ್ಲರ ಹಾಗೇ ತಂದೆಯ ಪ್ರೇಮ ಹೊಂದುವ ಭಾಗ್ಯ ಇಲ್ಲಾ
ಎಲ್ಲರ ಹಾಗೇ ತಂದೆಯ ಪ್ರೇಮ ಹೊಂದುವ ಭಾಗ್ಯ ಇಲ್ಲಾ
ಅಲ್ಲೋ ಏನೋ ಅವರ ಮನಸೂ ಕರುಣೆಯ ಮಾತೇ ಇಲ್ಲ... ಕರುಣೆಯ ಮಾತೇ ಇಲ್ಲ
ಲತಾ : ಅವನು ಕಣ್ಣು ತೆರೆಯುವ ಕಾಲ ಇನ್ನೂ ದೂರ ಇಲ್ಲ
ಅವನು ಕಣ್ಣು ತೆರೆಯುವ ಕಾಲ ಇನ್ನೂ ದೂರ ಇಲ್ಲ
ಹೆಣ್ಣಿನ ಕಣ್ಣಿನ ನೀರೂ ಅವನ ಕಾಡದೇ ಹೋಗುವುದಿಲ್ಲಾ...
ಲೀಲಾ : ನೋಡು ಓಡದೇ .. ಲತಾ : ಧೈರ್ಯ ಸಾಲದೇ
ಲೀಲಾ : ಇಂದು ನನ್ನ ಮುದ್ದಿನ ಕಂದ ಅಮ್ಮಾ ಎಂದೇ ಅಳುವಾ
ಲತಾ : ನಾಳೆ ಇವನು ಮಾತನು ಕಲಿತು ಪುಟ್ಟ ಹೆಜ್ಜೆಯ ಇಡುವಾ
--------------------------------------------------------------------------------------------------------------------------
No comments:
Post a Comment