906. ಮಗ ಮೊಮ್ಮಗ (೧೯೭೪)

ಮಗ ಮೊಮ್ಮಗ  ಚಿತ್ರದ ಹಾಡುಗಳು 
  1. ಹಾಡುವೆ ಕಂದಾ ನಾ ಹಾಡುವೆ ಕಂದಾ 
  2. ಈ ಮೋಸ ಈ ದ್ರೋಹ 
  3. ಈ ಮೋಸ ಈ ದ್ರೋಹ 
  4. ಇರುಳಲಿ ಕನಸಾಗಲು ಇನಿಯನೂ ಬಳಿ ಕೂಗಲೂ 
  5. ಇರುಳೆಲ್ಲಾ ಊರು ಸುತ್ತಿ 
  6. ಚಾಮುಂಡೇಶ್ವರಿ ನಾನೇ ರಣಚೆಂಡಿಯ  ಸೋದರಿ ನಾನೇ 
ಮಗ ಮೊಮ್ಮಗ  (೧೯೭೪) - ಹಾಡುವೆ ಕಂದಾ ನಾ ಹಾಡುವೆ ಕಂದಾ
ಸಂಗೀತ : ಎಂ. ರಂಗರಾವ, ಚಿ.ಉದಯಶಂಕರ,  ಗಾಯನ : ವಾಣಿಜಯರಾಮ 

ಹಾಡುವೆ ಕಂದಾ ನಾ ಹಾಡುವೆ ಕಂದಾ
ಹಾಡುವೆ ಕಂದಾ ನಾ ಹಾಡುವೆ ಕಂದಾ ನೂರು ವರುಷ ಬಾಳೆಂದು ನಾ...  ಹರಿಸಿ ನಿನ್ನ
ಹಾಡುವೆ ಕಂದಾ ನಾ ಹಾಡುವೆ ಕಂದಾ

ಬಾಳಲ್ಲಿ ಎಂದೆಂದೂ ಸಂತೋಷವಿರಲಿ ಆನಂದ ನಿನ್ನಿಂದ ನಮಗೆಲ್ಲಾ ಸಿಗಲಿ 
ಬಾಳಲ್ಲಿ ಎಂದೆಂದೂ ಸಂತೋಷವಿರಲಿ ಆನಂದ ನಿನ್ನಿಂದ ನಮಗೆಲ್ಲಾ ಸಿಗಲಿ 
ಮನೆ ದೇವರಾಗಿ ಮನೆಯನ್ನು ಬೆಳಗಿ ಅನುಗಾಲ ಸುಖವಾಗಿ ಹಾಯಾಗಿ ಬಾಳೆಂದು 
ಹಾಡುವೆ ಕಂದಾ ನಾ ಹಾಡುವೆ ಕಂದಾ  ಆಆಆ....ಆಆಆ ...

ತಾಯಿಗಿಂತ ದೇವರು ಬೇರೆಲ್ಲೂ ಇಲ್ಲ ತಾಯಿಲ್ಲವೆಂದಾಗ ಈ ಜನ್ಮವಿಲ್ಲ 
ತಾಯಿಗಿಂತ ದೇವರು ಬೇರೆಲ್ಲೂ ಇಲ್ಲ ತಾಯಿಲ್ಲವೆಂದಾಗ ಈ ಜನ್ಮವಿಲ್ಲ 
ತಾಯಿತಂದೆಯೆರಡು ಕಣ್ಣೆಂದು ತಿಳಿದು ಒಲವಿಂದ ಕಾಪಾಡೋ ಮಗನಾಗು ನೀ ಎಂದು 
ಹಾಡುವೆ ಕಂದಾ ನಾ ಹಾಡುವೆ ಕಂದಾ ನೂರು ವರುಷ ಬಾಳೆಂದು ನಾ ಹರಿಸಿ ನಿನ್ನ 
ಹಾಡುವೆ ಕಂದಾ ನಾ ಹಾಡುವೆ ಕಂದಾ 

ನಾನಾರೋ ನೀನಾರೋ ಅನುಬಂಧವೇನೋ ನನ್ನಲ್ಲಿ ಈ ರೀತಿ ವಾತ್ಸಲ್ಯವೇನು 
ನಾನಾರೋ ನೀನಾರೋ ಅನುಬಂಧವೇನೋ ನನ್ನಲ್ಲಿ ಈ ರೀತಿ ವಾತ್ಸಲ್ಯವೇನು 
ಅರಿತಿಲ್ಲವೇನೋ ಕರುಳಲ್ಲವೇನೋ
ಅರಿತಿಲ್ಲವೇನೋ ಕರುಳಲ್ಲವೇನೋ ನಾ ಸಾಕಿದ ಕಂದಾ ನಿನಗಾಗಿ ಎಂದೆಂದೂ 
ಹಾಡುವೆ ಕಂದಾ ನಾ ಹಾಡುವೆ ಕಂದಾ ನೂರು ವರುಷ ಬಾಳೆಂದು ನಾ ಹರಿಸಿ ನಿನ್ನ
ಹಾಡುವೆ ಕಂದಾ ನಾ ಹಾಡುವೆ ಕಂದಾ ಆಆಆ....ಆಆಆ.... 
--------------------------------------------------------------------------------------------------------------------------

ಮಗ ಮೊಮ್ಮಗ  (೧೯೭೪) - ಈ ಮೋಸ ಈ ದ್ರೋಹ ನೀ ಸಹಿಸದೇ
ಸಂಗೀತ : ಎಂ. ರಂಗರಾವ, ಚಿ.ಉದಯಶಂಕರ,  ಗಾಯನ : ಕೆ.ಜೆ.ಏಸುದಾಸ್ 

ಯುಗಯುಗದಿ ಅವತಾರ ,ಮಾಡಿರುವೇ ಎಂತೇ  ಭಕುತರ ಕಂಬನಿಯ ತೊಡೆದಿರುವೆಯಂತೇ
ಕಲಿಯುಗದಿ ಕುರುಡಾಗೀ ಎಲ್ಲೇ ಅಡಗಿ ನಿಂತೇ ಈ ಜಗದ ಸಂಬಂಧ ನಿನಗೂ ಸಾಕಾಯಿತೇ..

ಈ ಮೋಸ ಈ ದ್ರೋಹ ನೀ ಸಹಿಸದೇ ದೂರಾದೆಯಾ ಇಂದು ನೀ ಕಾಣದೆ...
ಸುಖ ಶಾಂತಿಯಾ  ತರಲಾರದೇ

ತಂದೆಯ ನುಡಿಗಾಗಿ ನಾಡಿಗೇ ದೂರಾಗಿ ಕಾಡಿಗೇ ನಡೆದ.. ರಾಮನ ನಾಡಲ್ಲಿ
ಜನಿಸಿದ ಈ ಕಂದ ತಂದೆಯ ಮನೆಯಿಂದ ದೂರಕೆ ತಳ್ಳಿದ ವಂಚನೆಯಿಂದಾ ..
ಕಂಬನಿ ತಂದೆಗೇ ... ಸಂತಸ ಕಟುಕಗೇ ..
 ಈ ಮೋಸ ಈ ದ್ರೋಹ ನೀ ಸಹಿಸದೇ ದೂರಾದೆಯಾ ಇಂದು ನೀ ಕಾಣದೆ...
ಸುಖ ಶಾಂತಿಯಾ  ತರಲಾರದೇ

ಮಾತಿಗೇ ಮರುಳಾಗಿ ಮೋಹಕೆ ಬಲಿಯಾಗಿ ಜಾರಿದ ಮೇಲಿನ್ನೂ ಸೌಖ್ಯವ ಉಂಟೇನೂ
ಮಾತಿಗೇ ಮರುಳಾಗಿ ಮೋಹಕೆ ಬಲಿಯಾಗಿ ಜಾರಿದ ಮೇಲಿನ್ನೂ ಸೌಖ್ಯವ ಉಂಟೇನೂ
ಶಾಂತಿಯೂ ಸಾವಲೀ...  ನೆಮ್ಮದೀ .. ಮಣ್ಣಲೀ ..

ಮುಳ್ಳಲಿ ಹೂವೊಂದೂ ಬಳ್ಳಿಲಿ ಹೂವೊಂದೂ ಏತಕೋ ಈ ಬೇಧ ಕಾಣೇನೂ ಇಂದೂ
ಮುಳ್ಳಲಿ ಹೂವೊಂದೂ ಬಳ್ಳಿಲಿ ಹೂವೊಂದೂ ಏತಕೋ ಈ ಬೇಧ ಕಾಣೇನೂ ಇಂದೂ
ನ್ಯಾಯವೇ .. ತೋರದು .. ಮುಗಿಯದ ಕಥೆಯಿದು ..
ಈ ಮೋಸ ಈ ದ್ರೋಹ ನೀ ಸಹಿಸದೇ ದೂರಾದೆಯಾ ಇಂದು ನೀ ಕಾಣದೆ...
ಸುಖ ಶಾಂತಿಯಾ  ತರಲಾರದೇ
--------------------------------------------------------------------------------------------------------------------------

ಮಗ ಮೊಮ್ಮಗ  (೧೯೭೪) - ಈ ಮೋಸ ಈ ದ್ರೋಹ ನೀ ಸಹಿಸದೇ
ಸಂಗೀತ : ಎಂ. ರಂಗರಾವ, ಚಿ.ಉದಯಶಂಕರ,  ಗಾಯನ : ಕೆ.ಜೆ.ಏಸುದಾಸ್ 

ಈ ಮೋಸ ಈ ದ್ರೋಹ ನೀ ಸಹಿಸದೇ ದೂರಾದೆಯಾ ಇಂದು ನೀ ಕಾಣದೆ...
ಸುಖ ಶಾಂತಿಯಾ  ತರಲಾರದೇ

ಕಲ್ಲಲ್ಲಿ ಮೆದುವುಂಟೇ ಬೆಂಕಿಲೀ ತಂಪುಂಟೇ  ದಾನವನ ಎದೆಯಲ್ಲಿ ಮಮತೆಯ ಮಾತುಂಟೆ
ತಂದೆಯು ನೆನಪಿಲ್ಲ ತಾಯಿಯು ಬೇಕಿಲ್ಲಾ ಮಡದಿಗೆ ಮಿಗಿಲಾದ ದೇವರು ಬೇರಿಲ್ಲಾ
ತಾಯಿಯ ಮರೆತವ ನಾಯಿಗೂ ಕಡೆಯಿವ
ಈ ಮೋಸ ಈ ದ್ರೋಹ ನೀ ಸಹಿಸದೇ ದೂರಾದೆಯಾ ಇಂದು ನೀ ಕಾಣದೆ
ಸುಖ ಶಾಂತಿಯಾ  ತರಲಾರದೇ

ಯಾರಿಲ್ಲ ಯಾರಿಲ್ಲ ಬಾಳಲಿ ಸುಖವಿಲ್ಲ ಸಾವಲಿ ಜೊತೆಯಾಗಿ ಬರುವರು ಯಾರಿಲ್ಲ
ಕಂಬನಿ ಇಲ್ಲಿಲ್ಲಾ ಕಷ್ಟವು ಅಲ್ಲಿಲ್ಲಾ ಬೆಂಕಿಯು ಮಡಿಲಲ್ಲಿ ಮುಗಿಯುವುದೆಲ್ಲಾ
ಆಸೆಯೂ ಅಳಿಯಿತು ಸಾವಲಿ ಬೆರೆಯಿತು
ಈ ಮೋಸ ಈ ದ್ರೋಹ ನೀ ಸಹಿಸದೇ ದೂರಾದೆಯಾ ಇಂದು ನೀ ಕಾಣದೆ
ಸುಖ ಶಾಂತಿಯಾ  ತರಲಾರದೇ
------------------------------------------------------------------------------------------------------------------------`

ಮಗ ಮೊಮ್ಮಗ (೧೯೭೪) - ಇರುಳಲಿ ಕನಸಾಗಲು ಇನಿಯನೂ ಬಳಿ ಕೂಗಲೂ 
ಸಂಗೀತ : ಎಂ. ರಂಗರಾವ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಪಿ.ಸುಶೀಲಾ, ಮಹೇಶ

ಹೆಣ್ಣು : ಹೂಂಹೂಂ .. ಲಲಲಲಾ ಲಲಲಲಾ ಲಲಲಲಾ ಹೂಂಹೂಂ ..
          ಇರುಳಲಿ ಕನಸಾಗಲು ಇನಿಯನೂ ಬಳಿ ಕೂಗಲೂ
          ಇರುಳಲಿ ಕನಸಾಗಲು ಹೊಯ್  ಇನಿಯನೂ ಬಳಿ ಕೂಗಲೂ
          ನಾಚಿದೇ .. ನೋಡಿದೇ ತನು ಅರಳಿತು  ಮನ ಕೆರಳಿತು
          ಎದೆಯಾಸೆ ಹೂವಾಯಿತು ಮೈ ಒಮ್ಮೇ ಜುಮ್ಮೆ ಎಂದಿತು
          ಲಲಲಾಲಾ (ಹೇಹೇಹೇಹೇ ) ಲಲಲಲಾಲಾ (ಲಲಲಲಾಲಾ ) ಲಲಲಲಾಲಾ

ಹೆಣ್ಣು : ಬೀಸುವಾ (ಹ್ಹೂ.. ) ಗಾಳಿಯೂ .. (ಹ್ಹೂ.(ಹ್ಹೂ.. ) ಈ ನಿನ್ನ ಮೈಮಾಟ ಕಂಡೂ ಹ್ಹಾಹ್ಹಾ..
          ಮೋಹಿಸಿ ಭಾವಿಸೀ ಸೆರಗಲ್ಲಿ ಮನೆಮಾಡಿಕೊಂಡು
         ಬೀಸುವಾ ಗಾಳಿಯೂ ಈ ನಿನ್ನ ಮೈಮಾಟ ಕಂಡೂ ಮೋಹಿಸಿ ಭಾವಿಸೀ ಸೆರಗಲ್ಲಿ ಮನೆಮಾಡಿಕೊಂಡು
         ಮುದ್ದಾಡಿದೇ ನೋಡೆಂದಿದೆ ನಾ ತಾಳಲಾರೇ ಎಂದನು ..
          ಇರುಳಲಿ ಕನಸಾಗಲು ಹೊಯ್  ಇನಿಯನೂ ಬಳಿ ಕೂಗಲೂ
          ನಾಚಿದೇ .. ನೋಡಿದೇ ತನು ಅರಳಿತು  ಮನ ಕೆರಳಿತು
          ಎದೆಯಾಸೆ ಹೂವಾಯಿತು ಮೈ ಒಮ್ಮೇ ಜುಮ್ಮೆ ಎಂದಿತು

 ಹೆಣ್ಣು : ಈ ಚಳಿ (ಹೂಂ ) ತಾಳೇನೂ (ಹೂಂ ಹೂಂ ) ನೀನೀಗ ಸ್ನೇಹದಿ ಬಂದೂ
           ಸೇರಲೂ ಕಾಣಿಕೆ ನಾ ನಿಲ್ಲೇ ನೀಡುವೇ ಎಂದೂ ..
           ಈ ಚಳಿ ತಾಳೇನೂ ನೀನೀಗ ಸ್ನೇಹದಿ ಬಂದೂ ಸೇರಲೂ ಕಾಣಿಕೆ ನಾ ನಿಲ್ಲೇ ನೀಡುವೇ ಎಂದೂ ..
           ಕೈ ಚಾಚಿದ   ಮೈ ಬಳಸಿದ ತುಂಟಿಗೊಂದು ನೀಡಿ ಓಡಿದ ...
          ಇರುಳಲಿ ಕನಸಾಗಲು ಹೊಯ್  ಇನಿಯನೂ ಬಳಿ ಕೂಗಲೂ
          ನಾಚಿದೇ .. ನೋಡಿದೇ ತನು ಅರಳಿತು  ಮನ ಕೆರಳಿತು
          ಎದೆಯಾಸೆ ಹೂವಾಯಿತು ಮೈ ಒಮ್ಮೇ ಜುಮ್ಮೆ ಎಂದಿತು
          ಲಲಲಾಲಾ ಲಲಲಲಾಲಾ (ಲಲಲಲಾಲಾ ) ಲಲಲಲಾಲಾ
------------------------------------------------------------------------------------------------------------------------`

ಮಗ ಮೊಮ್ಮಗ (೧೯೭೪) - ಇರುಳೆಲ್ಲಾ ಊರು ಸುತ್ತೀ
ಸಂಗೀತ : ಎಂ. ರಂಗರಾವ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ

ಹೆಣ್ಣು : ಇರುಳೆಲ್ಲಾ ಊರು ಸುತ್ತಿ ಮನೆ ಹೊತ್ತಿ ಇರಭಧ್ರ ಬರ್ತಾನೇ ನನ್ನ ಗಂಡ.. ಹ್ಹೂ..ಹ್ಹೂ..
          ಗಂಟೆ ಹನ್ನೊಂದಾಯ್ತು ಕಾದು ಸುಸ್ತಗೀವ್ನಿ ಬರ್ತ್ವಾನೇ ಬಾಗಿಲನಾಗೇ .. ಬರ್ತ್ವಾನೇ ಬಾಗಿಲನಾಗೇ ..
ಗಂಡು : ಬಾಗಿಲ ತೇಗಿಯೇ .. ಹಬ್ಬೀ .. ಬಾಗಿಲ ತೇಗಿಯೇ ಸ್ವಲ್ಪ ಬಾಗಿಲ ತೇಗಿಯೇ
           ಬಾಗಿಲ ತೇಗಿಯೇ ಬಂಗಾರ ನನ್ನ ಮುದ್ದು ಸಿಂಗಾರ ಚಳಿಯಾಗೇ ನಡಗತ್ವಿನಿ
           ಅಹ್ಹಹ್ಹ... ಚಳಿಯಾಗೇ ನಡಗತ್ವಿನಿ ಹ್ಹಹ್ಹಹ್ಹಹ್ಹ.. ಹ್ಹೂಹ್ಹೂಹ್ಹೂಹ್ಹೂ.. ಹೇಹೇಹೇಹೇ ...          
ಹೆಣ್ಣು : ಅಯ್ಯೋ ಅಯ್ಯೋಯ್ಯೋಯ್ಯೋ ನಿನ್ನ ಮನೆ ಕಾಯೋಗ..
          ಈ ಹೊತ್ತು ಎಲ್ಲಿದ್ದೇ ..  ಏನೇನೂ ಮಾಡ್ತಿದ್ದೇ .. ನಂಗೊತ್ತು ನಿನ್ನ ಬುದ್ದೀ
          ಹಟ್ಟಿಯಾಗೇ ನನ್ನ ಬುಟ್ಟು ಸೊಟ್ಟಮೋರೆ ಅವಳ ಜೊತೆ ಹಲ್ಲು ಹಲ್ಲು  ಕಿರಿಕೊಂಡು ಇಲ್ಲಿಗೇ ಬಂದೇ
ಗಂಡು : ಸಿಟ್ಯಾಗಿ ನನ್ನ ಮೇಲೆ ಕೆಟ್ಟ ಮಾತ್ವ ಆಡಬ್ಯಾಡ್ವೇ ಕಟ್ಟಾಣಿ ಮುತ್ತೇ ನನ್ನ ಚಿನ್ನಾ
            ಮೆಟ್ಟು ಕಳಕೊಂಡು ಬಂದೇ ಮುಳ್ಳು ಚುಚ್ಚುಕೊಂಡೈತೆ ಅದಕ್ಕಾಗಿ ಹೊತ್ತಾಯ್ತು ನನ್ನ ರನ್ನಾ
            ಅದಕ್ಕಾಗಿ ಹೊತ್ತಾಯ್ತು ನನ್ನ ರನ್ನಾ
ಹೆಣ್ಣು: ಬಟ್ಟೇ ಯಾಕೇ ಕೆಟ್ಟಹೋಯ್ತು ಜುಟ್ಟು ಯಾಕೇ ಕೆರದ ಹೋಯ್ತು ಗುಟ್ಟು ಹೇಳು ಗುಟ್ಟು ಹೇಳು ನನ್ನ ಮಲ್ಲ
          ಗುಟ್ಟು ಹೇಳು ಗುಟ್ಟು ಹೇಳು ನನ್ನ ಮಲ್ಲ
ಗಂಡು : ಬರ್ತಾ ದಾರೀಲಿ ನಂಗೇ ಬಸವಾಕೀ ಯೋಗ ಬಂತು ಬಿದ್ದೋಕಿ ಮಣ್ಣಾಗಿ ಬಲುವಾಯಿತು
           ಬಿದ್ದೋಕಿ ಮಣ್ಣಾಗಿ ಬಲುವಾಯಿತು
ಹೆಣ್ಣು : ಹಾಂಗ್.. (ಹ್ಹಾ)  ಬಿದ್ರೆ ಮಣ್ಣಾಗ 
 
------------------------------------------------------------------------------------------------------------------------`

ಮಗ ಮೊಮ್ಮಗ (೧೯೭೪) - ಚಾಮುಂಡೇಶ್ವರಿ ನಾನೇ ರಣಚೆಂಡಿಯ  ಸೋದರಿ ನಾನೇ 
ಸಂಗೀತ : ಎಂ. ರಂಗರಾವ, ಚಿ.ಉದಯಶಂಕರ, ಗಾಯನ : ಎಲ್.ಆರ್.ಈಶ್ವರಿ

ಹೂಂಹೂಂಹೂಂ.....
ಚಾಮುಂಡೇಶ್ವರಿ ನಾನೇ ರಣಚೆಂಡಿಯ  ಸೋದರಿ ನಾನೇ
ಚಾಮುಂಡೇಶ್ವರಿ ನಾನೇ ರಣಚೆಂಡಿಯ ಸೋದರಿ ನಾನೇ
ಚಂಡ ಮುಂಡರ ರುಂಡಗಳನ್ನೂ ಚೆಂಡಾಡಿದವಳೂ ನಾನೇ ...ನಾನೇ ... ನಾನೇ ... ನಾನೇ ...
ಚಾಮುಂಡೇಶ್ವರಿ ನಾನೇ ರಣಚೆಂಡಿಯ ಸೋದರಿ ನಾನೇ... ಹಹ್ಹಹ್ಹಾಹ್ಹಹ್ಹಾಹ್ಹೂಹ್ಹೂ

ದುರುಳರ ಸೊಕ್ಕನ್ನೂ ಕಂಡೇ ಬಲು ರೋಷ ಉಕ್ಕಿ ನಾ ಬಂದೇ
ದುರುಳರ ಸೊಕ್ಕನ್ನೂ ಕಂಡೇ ಬಲು ರೋಷ ಉಕ್ಕಿ ನಾ ಬಂದೇ
ಓಡಲೂ ಬಡಿವೇ ... ಜಾಡಿಸಿ ಒದೇವೆ
ಓಡಲೂ ಬಡಿವೇ ... ಜಾಡಿಸಿ ಒದೇವೆ ಹುರಿದು ಮುಕ್ಕುವೇ ಇಂದೇ.. ಅಹ್ಹಹ್ಹ .. ಅಹ್ಹಹ್ಹ .. ಅಹ್ಹಹ್ಹ
ಚಾಮುಂಡೇಶ್ವರಿ ನಾನೇ ರಣಚೆಂಡಿಯ ಸೋದರಿ ನಾನೇ

ಮಾಡಿದ್ದುಣ್ಣಲೇ ಬೇಕೂ ನಿನ್ನ ಪಾಪದ ಫಲ ತಿನ್ನಲೇಬೇಕೂ (ಹೆಹೆಹೆಹೆ )
ಮಾಡಿದ್ದುಣ್ಣಲೇ ಬೇಕೂ ನಿನ್ನ ಪಾಪದ ಫಲ ತಿನ್ನಲೇಬೇಕೂ
ತಾಟಕಿ ಹೆಣ್ಣೇ .. ಚಾಮರ ತಂದೇ
ತಾಟಕಿ ಹೆಣ್ಣೇ .. ಚಾಮರ ತಂದೇ  ಸೇವೆಯ ಸ್ವೀಕರಿಸಬೇಕೂ
ಒಂದೂ .. ಎರಡೂ .. ಮೂರೂ ... ನಾಲ್ಕೂ ..
ಚಾಮುಂಡೇಶ್ವರಿ ನಾನೇ ರಣಚೆಂಡಿಯ ಸೋದರಿ ನಾನೇ

ದುಡಿಯದ ಜನರ ಇಂದೇ ನಾ ಕಡಿದು ಹಾಕಲೂ ಬಂದೇ ..
ದುಡಿಯದ ಜನರ ಇಂದೇ ನಾ ಕಡಿದು ಹಾಕಲೂ ಬಂದೇ ..
ಮದ್ದನು ಕೊಡುವೇ .. ಬುದ್ದಿ ಕಲಿಸುವೇ..
ಮದ್ದನು ಕೊಡುವೇ .. ಬುದ್ದಿ ಕಲಿಸುವೇ.. ಸದ್ದೂ ಮಾಡಿದರೇ ಕೊಲ್ಲುವೇ ...ಕೊಲ್ಲುವೇ ..ಕೊಲ್ಲುವೇ ...ಕೊಲ್ಲುವೇ ...
ಚಾಮುಂಡೇಶ್ವರಿ ನಾನೇ ರಣಚೆಂಡಿಯ ಸೋದರಿ ನಾನೇ
ಚಂಡ ಮುಂಡರ ರುಂಡಗಳನ್ನೂ ಚೆಂಡಾಡಿದವಳೂ ನಾನೇ ...ನಾನೇ ... ನಾನೇ ... ನಾನೇ ...
ಚಾಮುಂಡೇಶ್ವರಿ ನಾನೇ ರಣಚೆಂಡಿಯ ಸೋದರಿ ನಾನೇ... ಹಹ್ಹಹ್ಹಾಹ್ಹಹ್ಹಾಹ್ಹೂಹ್ಹೂ
ಆಆಆಅ... ಹ್ಹೂ..ಹ್ಹೂ.. ಹ್ಹೂ.. ಹ್ಹೂ.. ಆಆಆಆಅ...
------------------------------------------------------------------------------------------------------------------------`

No comments:

Post a Comment