907. ಕೂಡಿ ಬಾಳೋಣ (೧೯೭೫)


ಕೂಡಿ ಬಾಳೋಣ ಕನ್ನಡ ಚಲನಚಿತ್ರದ ಹಾಡುಗಳು 
  1. ಸಖಿ ಎಲ್ಲಿ ನನ್ನ ಮೀರಾ.. ಮನಸೂರೆಗೈದ ಚೋರ 
  2. ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ
  3. ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ
  4. ಬೆನಕಾಗೆ ಶರಣೆಂದು ಕರೆತನ್ನಿ ಎಲ್ಲಾರು 
ಕೂಡಿ ಬಾಳೋಣ (೧೯೭೫) - ಸಖಿ ಎಲ್ಲಿ ನನ್ನ ಮೀರಾ ಮನಸೂರೆಗೈದ ಚೋರ 
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ ಗಾಯನ : ವಾಣಿಜಯರಾಂ, ಸುಲೋಚನಾ  

ಹೆಣ್ಣು : ಆಆಆಅ... ಆಆಆಅ...
ವಾಣಿ : ಸಖಿ ಎಲ್ಲಿ ನನ್ನ ಮೀರಾ ಮನಸೂರೆಗೈದ ಚೋರ ನಾ ತಾಳಲಾರೇ ನೋವ ಅವನೆಲ್ಲಿ ನನ್ನ ಧೀರ ..
           ಸಖಿ ಎಲ್ಲಿ ನನ್ನ ಮೀರಾ

ಹೆಣ್ಣು : ಸಾ... ಮಪಮ ಮಪ ಮಗ ಗಮಗ ಮಗರಿಸ ನಿಸ ದನಿದ ದನಿದ ಮಗ ನಿದ ಸನಿದಪ ಮಗಮಪ .. ಪ .. ಪ
ವಾಣಿ : ಕನಸಲ್ಲಿ ಬಂದು ನನ್ನ ಮನಸಲ್ಲಿ ನಿಂದ ಚೆನ್ನ
           ಕನಸಲ್ಲಿ ಬಂದು ನನ್ನ ಮನಸಲ್ಲಿ ನಿಂದ ಚೆನ್ನ ಹೊಸ ಆಸೆಯೇನೋ ತೋರಿ ಮನಕಲಕಿ ಕೆಣಕಿ ಕಾಡಿದ
           ಹೊಸ ಆಸೆಯೇನೋ ತೋರಿ ಮನಕಲಕಿ ಕೆಣಕಿ ಕಾಡಿದ         
ಇಬ್ಬರು : ಇದಾವ ನಿಧಾನ
ವಾಣಿ : ಇದಾವ ನಿಧಾನ ಕಾಣೇ .. ನಾ.. ಆಆಆ..
           ಸಖಿ ಎಲ್ಲಿ ನನ್ನ ಮೀರಾ ಮನಸೂರೆಗೈದ ಚೋರ  ಸಖಿ ಎಲ್ಲಿ ನನ್ನ ಮೀರಾ

ಹೆಣ್ಣು : ಗಾ.... ಗಮನಿದ ದನಿರೇಸ.. ನಿದಪ ದನಿಪ ಪದಮ ಮಮಗ ಗಗಮಪ ಪಮರಸ ನಿದ ದನಿಸ ದಪದಪ ಮಗರಿಸ
ವಾಣಿ : ಈ ನನ್ನ ಅಂದ ಚಂದ ಇನ್ನೆಲ್ಲೂ ಕಾಣೆನೆಂದಾ..
           ಈ ನನ್ನ ಅಂದ ಚಂದ ಇನ್ನೆಲ್ಲೂ ಕಾಣೆನೆಂದಾ ಹೀತಮಾತ ಏನೋ ಹೇಳಿ ನಸುನಾಚಿ ಹೇಗೋ ನೋಡಿದಾ
           ಹೀತಮಾತ ಏನೋ ಹೇಳಿ ನಸುನಾಚಿ ಹೇಗೋ ನೋಡಿದಾ
ಇಬ್ಬರು : ಇದೇನೇ .. ನಿಧಾನ
ವಾಣಿ : ಇದೇನೇ ನಿಧಾನ ಓ.. ಪಾಲನಾ.. ಆಆಆ..
ಇಬ್ಬರು : ಸಖಿ ಎಲ್ಲಿ ನನ್ನ ಮೀರಾ ಮನಸೂರೆಗೈದ ಚೋರ ನಾ ತಾಳಲಾರೇ ನೋವ ಅವನೆಲ್ಲಿ ನನ್ನ ಧೀರ ..
           ಸಖಿ ಎಲ್ಲಿ ನನ್ನ ಮೀರಾ

-----------------------------------------------------------------------------------------------------------------------

ಕೂಡಿ ಬಾಳೋಣ (೧೯೭೫) - ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ ಗಾಯನ : ಪಿ.ಬಿ.ಶ್ರೀನಿವಾಸ, ವಾಣಿಜಯರಾಂ 

ಗಂಡು : ನಾಡಿನ ಬಡವಾ...   ಏಳಿಗೆ ಪಡೆವಾ.... ಜಾಡನು ಹಿಡಿಯೋಣ .... ಎಲ್ಲರೂ ಕೂಡಿ ಬಾಳೋಣ
            ನಾಡಿನ ಬಡವ ಏಳಿಗೆ ಪಡೆವ... ಟ್ರೂರ್ ರ್ ಟ್ರೂರ್ ರ್ ಹೋಯ್  ಹೋಯ್
            ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ
            ಎಲ್ಲರೂ ಕೂಡಿ ಬಾಳೋಣ ಹಿಗ್ಗಿನ ಸೀಮೆ ಆಳೋಣ
            ಎಲ್ಲರೂ ಕೂಡಿ ಬಾಳೋಣ ಹಿಗ್ಗಿನ ಸೀಮೆ ಆಳೋಣ
            ಕೂಡಿ ಬಾಳೋಣ
ಎಲ್ಲರು : ಎಲ್ಲರೂ ಕೂಡಿ ಬಾಳೋಣ
ಹೆಣ್ಣು : ಕುಗ್ಗಿದ ಬಾಳನು ನಲಿಸೋಣಾ.... ಆಆಆ  
          ಕುಗ್ಗಿದ ಬಾಳನು ನಲಿಸೋಣಾ ಹುಗ್ಗಿಯ ತುಪ್ಪ ಕಾಣೋನಾ ....  
          ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
ಎಲ್ಲರು : ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ

ಗಂಡು : ಹಲವರ ದುಡಿಮೆ ಒಬ್ಬನಿಗಲ್ಲ, (ಹೊಯ್ ಹೊಯ್ ) ಒಬ್ಬನ ಹೀರಿಮೆ ಅಬ್ಬರಕಲ್ಲ  (ಹೊಯ್ ಹೊಯ್ )
            ಹಲವರ ದುಡಿಮೆ ಒಬ್ಬನಿಗಲ್ಲ, ಒಬ್ಬನ ಹೀರಿಮೆ ಅಬ್ಬರಕಲ್ಲ
            ಸಮೂಹಕ್ಕಾಗಿ ಎಲ್ಲರೂ ದುಡಿದು
            ಸಮೂಹಕ್ಕಾಗಿ ಎಲ್ಲರೂ ದುಡಿದು ಸಮಾಜ ಹಿತವ ಗಳಿಸೋಣ
            ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
ಎಲ್ಲರು : ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ

ಹೆಣ್ಣು : ಕೂಡಿದ ಬಾಳೇ ಹೊಂಬಾಳೆ...ಏಏಏಏಏ ಹೊಯ್
           ಕೂಡಿದ  ಬಾಳೇ ಹೊಂಬಾಳೆ ಕಾಣಿದರಲ್ಲಿ ತರತ್ತಾಳೆ
           ಕಾಡುವ ಜನರ ಬಡಿದಡಿಯೋನ....
           ಕಾಡುವ ಜನರ ಬಡಿದಡಿಯೋನ ಕೂಡಿಯೇ ಬಾಳಲು ಹಠ ಹಿಡಿಯೋಣ
           ಮೇಲು ಕೀಳು ಎಂಬುದ ಮರೆತು ಕೂಡಿ ಬಾಳೋಣ
ಎಲ್ಲರು : ಎಲ್ಲರೂ ಕೂಡಿ ಬಾಳೋಣ ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ

ಗಂಡು : ಉಳ್ಳವ ನೀಡುವ ಕಿರುದಾನ...(ಹೊಯ್ ಹೊಯ್)
           ಇಲ್ಲದ ಜನರಿಗೆ ಪರಮಾನ್ನ... (ಹೊಯ್ ಹೊಯ್)
           ಉಳ್ಳವ ನೀಡುವ ಕಿರುದಾನ ಇಲ್ಲದ ಜನರಿಗೆ ಪರಮಾನ್ನ
ಹೆಣ್ಣು : ಕೈಹಿಡಿದೆತ್ತಿರಿ ಇಲ್ಲದ ಜನರ...  
ಇಬ್ಬರು : ಕೈಹಿಡಿದೆತ್ತಿರಿ ಇಲ್ಲದ ಜನರ ನಾಡಲಿ ಹೂಡಿ ಭ್ರಷ್ಟಾಚಾರ
            ಮಲೀನ ಸಮಾನ ಸಮಾಜ ರಚಿಸಿ
           ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
ಎಲ್ಲರು : ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ
            ಎಲ್ಲರೂ ಕೂಡಿ ಬಾಳೋಣ ಹಿಗ್ಗಿನ ಸೀಮೆ ಆಳೋಣ
            ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ  (ಓಹೋಹೋ.......)
            ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ            
           ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
-----------------------------------------------------------------------------------------------------------------------

ಕೂಡಿ ಬಾಳೋಣ (೧೯೭೫) - ನಾಡಿನ ಬಡವ ಏಳಿಗೆ ಪಡೆವ ಜಾಡನು ಹಿಡಿಯೋಣ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ ಗಾಯನ : ಪಿ.ಬಿ.ಶ್ರೀನಿವಾಸ, ವಾಣಿಜಯರಾಂ 

ಗಂಡು : ನಾಡಿನ ಬಡವ ಏಳಿಗೆ ಪಡೆವ...
ಇಬ್ಬರು : ನಾಡಿನ ಬಡವ ಏಳಿಗೆ ಪಡೆವ ಜಾಡನು ಹಿಡಿಯೋಣ
ಗಂಡು : ಎಲ್ಲರೂ ಕೂಡಿ ಬಾಳೋಣ
ಹೆಣ್ಣು : ಹಿಗ್ಗಿನ ಸೀಮೆ ಆಳೋಣ
ಇಬ್ಬರು : ಎಲ್ಲರೂ ಕೂಡಿ ಬಾಳೋಣ ಹಿಗ್ಗಿನ ಸೀಮೆ ಆಳೋಣ
             ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ

ಗಂಡು : ಬಿತ್ತನೆ ಉಳುಮೆ ನಡೆದಿರುವಲ್ಲಿ ಹೆಗಲಿಗೆ ಹೆಗಲು ನೀಡುತ ನಿಲ್ಲಿ
            ಬಿತ್ತನೆ ಉಳುಮೆ ನಡೆದಿರುವಲ್ಲಿ ಹೆಗಲಿಗೆ ಹೆಗಲು ನೀಡುತ ನಿಲ್ಲಿ
             ಕಷ್ಟಕು ಸುಖಕೂ ಅಂಟಿದ ನಂಟು
             ಕಷ್ಟಕು ಸುಖಕೂ ಅಂಟಿದ ನಂಟು ಅಷ್ಟೊ ಇಷ್ಟೋ ಎಲ್ಲರಿಗುಂಟು
             ಇದೇ ಸಹಕಾರ ಬಿಡಿ ಮಮಕಾರ ಕೂಡಿ ಬಾಳೋಣ
ಎಲ್ಲರು : ಎಲ್ಲರೂ ಕೂಡಿ ಬಾಳೋಣ ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ

ಹೆಣ್ಣು : ಬಾಳದೆ ಹೋದರೆ ಹಿಡಿಯಾಗಿ ಹಾಳಾಗುವೆವು ಹುಡಿಯಾಗಿ
          ಬಾಳದೆ ಹೋದರೆ ಹಿಡಿಯಾಗಿ ಹಾಳಾಗುವೆವು ಹುಡಿಯಾಗಿ
          ನೇಯಿರಿ ನೂಲಿರಿ ಒಂದಿಗೆ ಸೇರಿ
          ನೇಯಿರಿ ನೂಲಿರಿ ಒಂದಿಗೆ ಸೇರಿ ಮರೆಯಿರಿ ಸಾಂಘಿಕ ಶಕ್ತಿಯ ಬೆಳೆಸಿ
          ಹಿರಿಯ ಕಿರಿಯ ಎಲ್ಲರು ಕಲೆತು ಕೂಡಿ ಬಾಳೋಣ 
ಎಲ್ಲರು : ಎಲ್ಲರೂ ಕೂಡಿ ಬಾಳೋಣ ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ

ಹೆಣ್ಣು : ಬಳುಸುತ ಈ ಸಹಕಾರದ ತಂತ್ರ ನುಡಿಯಿರಿ ಶುಭ ಸರ್ವೋದಯ ಮಂತ್ರ
ಎಲ್ಲರು : ಬಳುಸುತ ಈ ಸಹಕಾರದ ತಂತ್ರ ನುಡಿಯಿರಿ ಶುಭ ಸರ್ವೋದಯ ಮಂತ್ರ
ಗಂಡು : ಈ ನಾಡಾಗಲಿ ಸುಖ ಸಾಮ್ರಾಜ್ಯ
ಹೆಣ್ಣು : ಗಾಂಧಿ ತಾತನ ರಾಮರಾಜ್ಯ
ಎಲ್ಲರು : ಈ ನಾಡಾಗಲಿ ಸುಖ ಸಾಮ್ರಾಜ್ಯ  ಗಾಂಧಿ ತಾತನ ರಾಮರಾಜ್ಯ
             ಇಂದು ಮುಂದೂ ಕಲ್ಪತಾಂರಕ್ಕೂ ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
             ನಾಡಿನ ಬಡವ ಏಳಿಗೆ ಪಡೆವ  ಜಾಡನು ಹಿಡಿಯೋಣ
             ಎಲ್ಲರೂ ಕೂಡಿ ಬಾಳೋಣ ಹಿಗ್ಗಿನ ಸೀಮೆ ಆಳೋಣ           
             ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
             ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
             ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
             ಕೂಡಿ ಬಾಳೋಣ ಎಲ್ಲರೂ ಕೂಡಿ ಬಾಳೋಣ
--------------------------------------------------------------------------------------------------------------------------

ಕೂಡಿ ಬಾಳೋಣ (೧೯೭೫)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಕುರಾಸೀ ಗಾಯನ :

ಬೆನಕಾಗೆ ಶರಣೆಂದು ಕರೆತನ್ನಿ ಎಲ್ಲಾರು 
ನಮ್ಮೂರ ತಾಯಿ ಮಾರವ್ವಗೆ 
ನಮ್ಮೂರ ತಾಯಿ ಮಾರವ್ವನ 
ನಮ್ಮೂರ ತಾಯ್ ಮಾರವ್ವಗೆ ಎತ್ತಿ ಹೆಂಗಳೆಯರೆಲ್ಲ ಆರತಿಯ 
ಹೆಂಗಳೆಯರೆಲ್ಲ ಆರತಿಯ

ಮುತ್ತಿನ ಆರುತಿ ಹವಳದ ಆರುತಿ ಎತ್ತಿರೆ ನಮ್ಮವ್ವ ಮಾರವ್ವಗೆ
ಎತ್ತಿರೆ ನಮ್ಮವ್ವ ಮಾರವ್ವಗೆ ಎತ್ತಿರೆ ನಮ್ಮವ್ವ ಮಾರವ್ವಗೆ ಎಲ್ಲಾ
ಗರತಿರು ಒಂದಾಗಿ ನೆರೆದಿಲ್ಲಿ ಎಲ್ಲಾ ಗರತಿರು ಒಂದಾಗಿ ನೆರೆದಿಲ್ಲಿ
ಗರತಿರು ಒಂದಾಗಿ ನೆರೆದಿಲ್ಲಿ ನಮ್ಮೋರ ಕೂಗಿಗೆ ಓಗೊಟ್ಟು
ಬಂದಾಳೋ ಹೈಕಾಳ ಪೂಜೆಗೆ
ಒಲಿದಾಳೋ ಹೈಕಾಳ ಪೂಜೆಗೆ ಒಲಿದಾಳೋ ಹೈಕಾಳ ಪೂಜೆಗೆ
ಒಲಿದಾಳೋ ಹೈಕಾಳ ಪೂಜೆಗೆ ಒಲಿದಂತ ನಮ್ಮವ್ವ ಗರತೀರ ತಾಳಿಯ ಕಾಯವ್ವ
ಊರ ಗರತಿರ ತಾಳಿಯ ಕಾಯವ್ವಾ
-------------------------------------------------------------------------------------------------------------------------






No comments:

Post a Comment