ಗೃಹಿಣಿ ಚಲನಚಿತ್ರದ ಹಾಡುಗಳು
- ಸುಪ್ರಭಾತವು ನಿನಗೆ ದೇವಿ ತುಳಸಿ
- ಭಲೇ ಮೋಜಿದು ಸಖಾ ಇದೋ ಈ ವಧು
- ಸರಿಗಮ ಎನುತಿದೆ ವೀಣೆ
- ವಿಶ್ವವಿದೆ ವಿಶಾಲವಾಗಿ ತಾಳು ಹೆಣ್ಣೇ
- ಒಲಿದು ಬಾ ಶಿವನೇ ನಲಿದು ಬಾ
ಸಂಗೀತ : ಎಂ.ರಂಗರಾವ ಸಾಹಿತ್ಯ :ಚಿ.ಉದಯಶಂಕರ ಗಾಯನ : ಪಿ.ಸುಶೀಲಾ
ಸುಪ್ರಭಾತವು ನಿನಗೆ ದೇವಿ ತುಳಸಿ ಎಂದಿಹನು ಬಾ ರವಿ ಶುಭವ ಹಾರೈಸಿ
ಸುಪ್ರಭಾತವು ನಿನಗೆ ದೇವಿ ತುಳಸಿ ಎಂದಿಹುದು ಈ ಜಗವ ಹೂವಾಗಿ ನಮಿಸಿ
ಕರುಣಾಮಯಿ ಶ್ರೀ ತುಳಸೀಮಾತೆ ಭಾಗ್ಯವಿಧಾತೆ
ಮಂಗಳಧಾತೇ ದಯೆತೋರೇ ಮಹಿಮಾನ್ವಿತೆ
ಅರುಣನ ಕುಂಕುಮದ ಪೂಜೆಯಿಂದ
ಪುಷ್ಪರಾಗದ ಅರಿಷಿಣದಿಂದ ನಿನ್ನ ಮರುಕದ ಮಾಂಗಲ್ಯದಿಂದ
ನಿತ್ಯವಾಗಲಿ ಜಗದ ನಿರ್ಮಲಾನಂದ
ಕರುಣಾಮಯಿ ಶ್ರೀ ತುಳಸೀಮಾತೆ ಭಾಗ್ಯವಿಧಾತೆ
ಮಂಗಳಧಾತೇ ದಯೆತೋರೇ ಮಹಿಮಾನ್ವಿತೆ
ಮನೆಮನೆಯ ಮಹಿಳೆಯ ಸೌಭಾಗ್ಯದಾತೆ
ಮಂಗಳಸೂತ್ರದ ಕಾಪಾಡು ಮಾತೆ
ಸಂಸಾರ ಸುಖಶಾಂತಿ ನೌಕೆಯನ್ನು ನಡೆಸುತೆ
ಸಲಹು ನೀ ಶ್ರೀ ತುಳಸಿ ಶಕ್ತಿದಾತೆ
ಕರುಣಾಮಯಿ ಶ್ರೀ ತುಳಸೀಮಾತೆ ಭಾಗ್ಯವಿಧಾತೆ
ಮಂಗಳಧಾತೇ ದಯೆತೋರೇ ಮಹಿಮಾನ್ವಿತೆ
--------------------------------------------------------------------------------------------------------------------------
ಗೃಹಿಣಿ (೧೯೭೪) - ಭಲೇ ಮೋಜಿದು ಸಖಾ ಇದೋ ಈ ವಧು
ಸಂಗೀತ : ಎಂ.ರಂಗರಾವ ಸಾಹಿತ್ಯ :ಚಿ.ಉದಯಶಂಕರ ಗಾಯನ : ವಾಣಿಜಯರಾಂ

ಆ..ಆ...ಆ..ಲಾ..ಲಲಲಲ...ಲಾ..ಲಾ
ಆಹಾ.. ಭಲೇ ಮೋಜಿದು ಸಖಾ ಇದೋ ಈ ವಧು
ಬಳಿಗೆ ಬಾ ಸಲಿಗೆ ತಾ
ಆಹಾ.. ಭಲೇ ಮೋಜಿದು ಸಖಾ ಇದೋ ಈ ವಧು
ಒಂದೊಂದೇ ಸಲ ಇನ್ನೊಮ್ಮೆ ಇಲ್ಲ ಈ ಮೋಜು ಔತಣ
ಮೈತುಂಬಿ ಮರೇ ನೀ ನನ್ನ ದೊರೆ
ಎಂದೆಂದೂ ನೀ ನನ್ನಾ ಆಸರೆ ಸುಖಾ ತಾ ನಿಲ್ಲದೇ
ಅದೇ ಕೈ ಮೇಲಿದೆ ಇದೇ ಜೀವನ ಹಾಯ್
ಆಹಾ.. ಭಲೇ ಮೋಜಿದು ಸಖಾ ಇದೋ ಈ ವಧು
ಹೆಣ್ಣಾಸೆ ಎಲ್ಲಾ ಹಣ್ಣಾದ ದಿನ ಹೂ ಬಾಣ ಹೂಡುವಾ
ಸಂಕೋಚ ಬಿಡು ಸಂತೋಷ ಪಾಡು ಒಂದಾಗಿ ಸಾಗುವಾ
ಮಧು ತಾನಿಲ್ಲಿದೆ ಸುಖ ಮತ್ತೇರಿದೆ ಜೊತೆಗೂಡಿ ಬಾ ಹಾಯ್ ಹಾಯ್
ಆಹಾ.. ಭಲೇ ಮೋಜಿದು ಸಖಾ ಇದೋ ಈ ವಧು
ಬಳಿಗೆ ಬಾ ಸಲಿಗೆ ತಾ ಏನಾನಂದಾ
ಗೃಹಿಣಿ (೧೯೭೪) - ಸರಿಗಮ ಎನುತಿದೆ ವೀಣೆಯು
ಸಂಗೀತ : ಎಂ.ರಂಗರಾವ ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಶ್ರೀನಿವಾಸ, ವಾಣಿಜಯರಾಂ
ಹೆಣ್ಣು : ಆಆಆ... ಆಆಆಆಆಆ ಆಆಆ ಗಂಡು : ಗಮಪದನಿ ನಿದದಪಮಗಮ
ಹೆಣ್ಣು : ಸ ರಿ ಗ ಮ ಎನುತಿದೆ ವೀಣೆ ...
ಸ ರಿ ಗ ಮ ಎನುತಿದೆ ವೀಣೆ ಸ್ವರ ನುಡಿಸಿದ ವೈಣಿಕ ನೀನೇ
ಗಂಡು : ಘಲಿರು ಘಲಿರು ಘಲು ಘಲಿರು ಘಲಿರು ಘಲು ನಾಟ್ಯ ಮಯೂರಿ

ಮಧುವನದಲ್ಲಿ ನಲಿವ ವಯ್ಯಾರಿ
ಗಂಡು : ವಸಂತ ಸುಂದರಿ ವಾಸವದತ್ತ ಒಲವಿನ ವಶವೀ ಉದಯನ ಚಿತ್ತ
ವಸಂತ ಸುಂದರಿ ವಾಸವದತ್ತ ಒಲವಿನ ವಶವೀ ಉದಯನ ಚಿತ್ತ
ಹೆಣ್ಣು : ಆ ಆ ಆ ಆ ಆ ಆ ಅನಂತಕಾಲವು ಪ್ರೇಮದ ಪಾತ್ರ ಅನುಪಮ ರೂಪದ ಉದಯನ ಮಾತ್ರ

ಅನಂತಕಾಲವು ಪ್ರೇಮದ ಪಾತ್ರ ಅನುಪಮ ರೂಪದ ಉದಯನ ಮಾತ್ರ
ಗಂಡು : ಸರಸದ ಜಾಣೆ ಸರಿಸಮ ಕಾಣೆ
ಗಂಡು : ಸರಸದ ಜಾಣೆ ಸರಿಸಮ ಕಾಣೆ
ಸರಸದ ಜಾಣೆ ಸರಿಸಮ ಕಾಣೆ ಒಲಿಯೇ ನಲಿಯೇ
ಘಲಿರು ಘಲಿರು ಘಲು ಸನಿದಪ ಮಗರಿಸ
ಹೆಣ್ಣು : ಸ ರಿ ಗ ಮ ಎನುತಿದೆ ವೀಣೆ ಸ್ವರ ನುಡಿಸಿದ ವೈಣಿಕ ನೀನೇ
ಗಂಡು : ಮನೋಜ ಲೋಕದ ಮೋಹಿನಿ ಬಾರೇ ನೀಡುವೇ ರಾಜ್ಯದ ವೈಭವ ಧಾರೇ

ಮನೋಜ ಲೋಕದ ಮೋಹಿನಿ ಬಾರೇ ನೀಡುವೇ ರಾಜ್ಯದ ವೈಭವ ಧಾರೇ
ಹೆಣ್ಣು : ಆ ಆ ಆ ಅ ಆ ಆ ಆ ಪ್ರಸನ್ನ ಪ್ರಭುವಿಗೇ ದಾಸಿಯು ನಾನೇ ಪ್ರೇಮಕೆ ಹೋಲುವ ಸಾಟಿಯ ಕಾಣೆ

ಪ್ರಸನ್ನ ಪ್ರಭುವಿಗೇ ದಾಸಿಯು ನಾನೇ ಪ್ರೇಮಕೆ ಹೋಲುವ ಸಾಟಿಯ ಕಾಣೆ
ಗಂಡು : ರಸಮಯಭಾವ ರಸಿಕನ ಜೀವ
ರಸಮಯಭಾವ ರಸಿಕನ ಜೀವ ಒಲಿಯೇ.. ನಲಿಯೇ...
ಘಲಿರು ಘಲಿರು ಘಲು ಸನಿದಪ ಮಗರಿಸ
ಹೆಣ್ಣು : ಸ ರಿ ಗ ಮ ಎನುತಿದೆ ವೀಣೆ ಸ್ವರ ನುಡಿಸಿದ ವೈಣಿಕ ನೀನೇ
ಗಂಡು : ಮಧು ಚೈತ್ರ ಚೆಲುವೆ ಮನದಾಸೆ ಒಡವೇ ಮಧು ಮತ್ತ ಚಿತ್ತ ಚೋರಿ
ಮುದದಿಂದ ಬಾರೆ ಮುದ್ದಾಡಿ ನಲಿವೆ ಮುಖ ನಳಿನ ಭೃಂಗವಾಗಿ
ಲಲಿತಲಾಸ್ಯಯ ಲೀನ ಲತೆ ಹಸಿತವದನೇ ರಸಭಾವಯತೆ
ಲಲಿತೆ ವನಿತೆ ನಲಿಯುವ ಕವಿತೆ
ಘಲಿರು ಘಲಿರು ಘಲು ಘಲಿರು ಘಲಿರು ಘಲು ನಾಟ್ಯ ಮಯೂರಿ
ಗೃಹಿಣಿ (೧೯೭೪) - ವಿಶ್ವವಿದೆ ವಿಶಾಲವಾಗಿ ತಾಳು ಹೆಣ್ಣೇ
ಸಂಗೀತ : ಎಂ.ರಂಗರಾವ ಸಾಹಿತ್ಯ :ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ
ವಿಶ್ವವಿದೆ ವಿಶಾಲವಾಗಿ ತಾಳು ಹೆಣ್ಣೇ ವಿಧಿಯನು ನೀ ಎದುರಿಸುತಾ ಬಾಳು ಹೆಣ್ಣೇ

ಏನೇ ಬಂದರು ಹೆದರಲೇ ಬೇಡ ದೈವರಕ್ಷೆಯು ಸತಿಗಿದೆಯಮ್ಮ

ಕಾವುದೂ ನಿನ್ನ ಮಾಡಿದ ಧರ್ಮ
ಕಾವುದೂ ನಿನ್ನ ಮಾಡಿದ ಧರ್ಮ ಗುರಿಯನು ಬಿಡದೇ ಸಾಧಿಸಮ್ಮ

ಚಂಡಮಾರುತ ಬೀಸುತ ಬರಲೀ ಭಂಡ ಜನತೆಯು ನಿಂದಿಸಿ ನಗಲಿ

ಗುಂಡಿಗೆ ಕೆಡದೇ ಮುನ್ನಡೆಯಮ್ಮ
ಗುಂಡಿಗೆ ಕೆಡದೇ ಮುನ್ನಡೆಯಮ್ಮ ಖಂಡಿತ ನಿನ್ನ ಗೆಲುವಮ್ಮಾ

ಆಆಆ... ಆಆಆ... ಓಓಓಓಓ.. ಆಆಆ..
ಬಾಳಸುಳಿಯಲಿ ಬಗೆ ಬಗೆ ತಾಪ ಕೆಂಡಕಾರಲಿ ಕೋಪ ಪ್ರತಾಪ

ಆಸೆಯ ಶಿಶುವಾ ನೀಡಿದೆ ದೈವ
ಆಸೆಯ ಶಿಶುವಾ ನೀಡಿದೆ ದೈವ ಹಾದಿಗೆ ಹೂವ ಹಾಸಿದೆಯಮ್ಮಾ

-----------------------------------------------------------------------------------------------------------------------

ಗೃಹಿಣಿ (೧೯೭೪) - ಒಲಿದು ಬಾ ಶಿವನೇ ನಲಿದು ಬಾ
ಸಂಗೀತ : ಎಂ.ರಂಗರಾವ ಸಾಹಿತ್ಯ :ಚಿ.ಉದಯಶಂಕರ ಗಾಯನ : ಪಿ.ಸುಶೀಲಾ
ಒಲಿದು ಬಾ ಶಿವನೇ ನಲಿದು ಬಾ ಮರೆಯಲ್ಲಿ ನೀನಿದ್ದು ಅನ್ಯಾಯ ಮೇಲೆದ್ದು
ಅಲ್ಲೋಲ ಕಲ್ಲೋಲ ಮಾಡುತ್ತಿದ್ದು ಕಲ್ಲಾಗಿ ನೀ ಕುಳಿತು ಕಣ್ಮುಚ್ಚಿ ಏಕಿರುವೇ

ಶಿವಶಂಕರ ಅಭಯಕಂಕರ ಸರ್ವೇಶ್ವರಾ ...
ಕಾಲಾಗ್ನಿ ನೀ ಹಿಡಿದು ಕಾಲಕೂಟವ ಕುಡಿದು ನೀಲಕಂಠನೇ ನೀನು ಕುಣಿದೆಯಂತೆ

ಇಂದೇಕೇ ನೀ ನಿಂತು ಸಂದೇಹ ತಂದಿರುವೇ ಬಂದೀಗ ಕೈ ಹಿಡಿದು ನಡೆಸು ತಂದೆ
ಶಿವಶಂಕರ ಅಭಯಕಂಕರ ಸರ್ವೇಶ್ವರಾ ...
ಕಣ್ಣನ್ನೇ ಕಾಣಿಕೆಯ ಕಣ್ಣಪ್ಪ ಕೊಟ್ಟಾಗ ಕರುಣಾಂತರಂಗದ ಸುಧೆಯ ನಿತ್ತೆ
ನಿನ್ನನ್ನೇ ನಂಬಿರುವೇ ನನ್ನನ್ನೇ ಅರ್ಪಿಸುವೇ ನನ್ನಿನಿಯ ನಾ ಕಣ್ಣ ನೀಡು ತಂದೇ
ಶಿವಶಂಕರ ಅಭಯಕಂಕರ ಸರ್ವೇಶ್ವರಾ ...
ಒಲಿದು ಬಾ ಶಿವನೇ ನಲಿದು ಬಾ ಮರೆಯಲ್ಲಿ ನೀನಿದ್ದು ಅನ್ಯಾಯ ಮೇಲೆದ್ದು
ಅಲ್ಲೋಲ ಕಲ್ಲೋಲ ಮಾಡುತ್ತಿದ್ದು ಕಲ್ಲಾಗಿ ನೀ ಕುಳಿತು ಕಣ್ಮುಚ್ಚಿ ಏಕಿರುವೇ
ಒಲಿದು ಬಾ ಶಿವನೇ ನಲಿದು ಬಾ ಮರೆಯಲ್ಲಿ ನೀನಿದ್ದು ಅನ್ಯಾಯ ಮೇಲೆದ್ದು
ನಿನ್ನನ್ನೇ ನಂಬಿರುವೇ ನನ್ನನ್ನೇ ಅರ್ಪಿಸುವೇ ನನ್ನಿನಿಯ ನಾ ಕಣ್ಣ ನೀಡು ತಂದೇ
ಶಿವಶಂಕರ ಅಭಯಕಂಕರ ಸರ್ವೇಶ್ವರಾ ...
ಒಲಿದು ಬಾ ಶಿವನೇ ನಲಿದು ಬಾ ಮರೆಯಲ್ಲಿ ನೀನಿದ್ದು ಅನ್ಯಾಯ ಮೇಲೆದ್ದು
ಅಲ್ಲೋಲ ಕಲ್ಲೋಲ ಮಾಡುತ್ತಿದ್ದು ಕಲ್ಲಾಗಿ ನೀ ಕುಳಿತು ಕಣ್ಮುಚ್ಚಿ ಏಕಿರುವೇ
ಒಲಿದು ಬಾ ಶಿವನೇ ನಲಿದು ಬಾ ಮರೆಯಲ್ಲಿ ನೀನಿದ್ದು ಅನ್ಯಾಯ ಮೇಲೆದ್ದು
ಶಿವಶಂಕರ ಅಭಯಕಂಕರ ಸರ್ವೇಶ್ವರಾ ...
--------------------------------------------------------------------------------------------------------------------------
No comments:
Post a Comment