911. ಮಣ್ಣಿನ ಮಗಳು (೧೯೭೪)


ಮಣ್ಣಿನ ಮಗಳು ಚಲನ ಚಿತ್ರದ ಹಾಡುಗಳು 
  1. ಹುಣ್ಣಿಮೆ ಬಂದಿದೆ ನಮಗಾಗಿ 
  2. ಈ ಅಂದ ಚೆಂದದ ಹುಡುಗಿ ನವ ಯೌವ್ವನ ತುಂಬಿದ ಬೆಡಗಿ

ಮಣ್ಣಿನ ಮಗಳು (೧೯೭೪) - ಹುಣ್ಣಿಮೆ ಬಂದಿದೆ ನಮಗಾಗಿ 
ಸಂಗೀತ : ಎಸ.ರಾಜೇಶ್ವರರಾವ್ ಸಾಹಿತ್ಯ: ಚಿ.ಉದಯಶಂಕರ ಗಾಯನ : ಪಿ.ಸುಶೀಲಾ

ಹುಣ್ಣಿಮೆ ಬಂದಿದೆ ನಮಗಾಗಿ ಈ ತಣ್ಣನೆ ಗಾಳಿಯು ನಮಗಾಗಿ.. ಆಆಆ..
ಹುಣ್ಣಿಮೆ ಬಂದಿದೆ ನಮಗಾಗಿ ಈ ತಣ್ಣನೆ ಗಾಳಿಯು ನಮಗಾಗಿ
ನನ್ನನ್ನು ಮರೆತಿನ್ನೆಲ್ಲಿಗೆ ಹೋದೆ
ನನ್ನನ್ನು ಮರೆತಿನ್ನೆಲ್ಲಿಗೆ ಹೋದೆ ಕಾದಿಹೇ ಕೃಷ್ಣ ನೀನಗಾಗಿ
ಹುಣ್ಣಿಮೆ ಬಂದಿದೆ ನಮಗಾಗಿ

ಯಮುನೆಯ ತಿರದಿ ಇರುಳಲಿ ಪ್ರೇಮದಿ....  
ಯಮುನೆಯ ತಿರದಿ ಇರುಳಲಿ ಪ್ರೇಮದಿ ಬಿಗಿದಪ್ಪಿದೆ ನಿನ್ನ ಎದೆಯೊತ್ತಿದೆ
ನಾಚಿಕೆ ತಂದಾ ಆ ಆನಂದ 
ನಾಚಿಕೆ ತಂದಾ ಆ ಆನಂದ ಮರೆಯದೆ ಹೃದಯ ಕೂಗುತಿದೆ..  ಬಾ 
ಹುಣ್ಣಿಮೆ ಬಂದಿದೆ ನಮಗಾಗಿ

ಮುರಳಿಯ ನಾದದಿ ಕುಣಿಸಿದೆ ಮೋದದಿ ಕಣ್ಣಮುಚ್ಚಿಸಿ ನನ್ನ ಮನ ಮೆಚ್ಚಿಸಿ 
ಮುರಳಿಯ ನಾದದಿ ಕುಣಿಸಿದೆ ಮೋದದಿ ಕಣ್ಣಮುಚ್ಚಿಸಿ ನನ್ನ ಮನ ಮೆಚ್ಚಿಸಿ 
ಸ್ನೇಹದಿ ಕೂಡಿ ಕಾಣಿಕೆ ನೀಡಿ ಬಳಿಯಿರದೇಕೆ ಮರೆಯಾದೆ...  ಬಾ 
ಹುಣ್ಣಿಮೆ ಬಂದಿದೆ ನಮಗಾಗಿ 

ಗೋಪಿಯರೆದುರಲೀ  ಸರಸದ ನೆಪದಲಿ ಜಡೇ  ಬಿಚ್ಚಿದೆ ಆಗ ನಾ ಬೆಚ್ಚಿದೆ 
ಬೇಡಲು ಬಿಡದೆ ಕೈ ಹಿಡಿದೇಳದೇ ಕೆರಳಿಸಿ ಮನವಾ ಓಡುವುದೇ...  ಬಾ 
ಹುಣ್ಣಿಮೆ ಬಂದಿದೆ ನಮಗಾಗಿ ಈ ತಣ್ಣನೆ ಗಾಳಿಯು ನಮಗಾಗಿ
ನನ್ನನ್ನು ಮರೆತಿನ್ನೆಲ್ಲಿಗೆ ಹೋದೆ ಕಾದಿದೆ ಕೃಷ್ಣ ನೀನಗಾಗಿ
ಹುಣ್ಣಿಮೆ ಬಂದಿದೆ ನಮಗಾಗಿ
------------------------------------------------------------------------------------------------------------------------

ಮಣ್ಣಿನ ಮಗಳು (೧೯೭೪) - ಈ ಅಂದ ಚೆಂದದ ಹುಡುಗಿ ನವ ಯೌವ್ವನ ತುಂಬಿದ ಬೆಡಗಿ
ಸಂಗೀತ : ಎಸ.ರಾಜೇಶ್ವರರಾವ್ ಸಾಹಿತ್ಯ: ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ 

ಈ ಅಂದ ಚೆಂದದ ಹುಡುಗಿ ನವ ಯೌವ್ವನ ತುಂಬಿದ ಬೆಡಗಿ
ಈ ಸೌಂದರ್ಯೋಪಾಸನೆಯೇ ಅಮಿತ ಸುಖದಾಯಕವೂ
ಈ ಅಂದ ಚೆಂದದ ಹುಡುಗಿ
ನವ ಯೌವ್ವನ ತುಂಬಿದ ಬೆಡಗಿ

ಬಂಗಾರದ ಮೈಯಿನ ಬಾಲೇ ಶೃಂಗಾರ ಸೊಬಗಿನ ಲೋಲೆ 
ಬಳುಕುತಿರುವ ಈ ಕೋಮಲೆ ಮನಕಾನಂದವ ತರುತಿಹಳೋ 
ಈ ಅಂದ ಚೆಂದದ ಹುಡುಗಿ
ನವ ಯೌವ್ವನ ತುಂಬಿದ ಬೆಡಗಿ 

ನಲಿವಂಥ ಈ ಕಂಗಳು ಕುಣಿವಂಥ ಮುಂಗುರುಳು 
ಚೆಂದುಟಿಯ ಈ ಚೆಲುವು ಕೆಂದಾವರೆ ಮುಖದೊಲವು 
ಸಾರುತ ಹೊಗಳುತಿವೆ ಆ ದೇವನ ಜಾಣ್ಮೆಯನೂ 
ಈ ಅಂದ ಚೆಂದದ ಹುಡುಗಿ
ನವ ಯೌವ್ವನ ತುಂಬಿದ ಬೆಡಗಿ
ಈ ಸೌಂದರ್ಯೋಪಾಸನೆಯೇ ಅಮಿತ ಸುಖದಾಯಕವೂ 
--------------------------------------------------------------------------------------------------------------------------



No comments:

Post a Comment