913. ಸೀತೆಯಲ್ಲ ಸಾವಿತ್ರಿ (೧೯೭೩)

ಸೀತೆಯಲ್ಲ ಸಾವಿತ್ರಿ ಚಿತ್ರದ ಹಾಡುಗಳು 
  1. ಸಮಾಗಮ ಮನೋರಮಾ ಮಧುರ ಮಿಲನ ಇದೆ ಪ್ರೇಮ
  2. ಬಲ್ಲೆಯಾ ಇನಿಯಾ ಬಲ್ಲೆಯಾ
  3. ಡುಂ ಡುಂ ಬಾರಿಸೂ ನಗಾರಿ 
  4. ತಾರುಣ್ಯ ತಂದಿದೇ ಭಾರ 
  5. ದೇವಿ ಆಟಗಾತಿಯೂ ನೀನೂ 
ಅಂಜಲಿ, ಕೌಸಲ್ಯ, ರುಕ್ಮಿಣಿ, ಸಿ.ಎಂ.ಗಿರಿ    
ಸೀತೆಯಲ್ಲ ಸಾವಿತ್ರಿ (೧೯೭೩) - ಸಮಾಗಮ ಮನೋರಮಾ ಮಧುರ ಮಿಲನ ಇದೆ ಪ್ರೇಮ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ

ಸಮಾಗಮ ಮನೋರಮಾ ಮಧುರ ಮಿಲನ ಇದೇ ಪ್ರೇಮ
ಸಮಾಗಮ ಮನೋರಮಾ ಮಧುರ ಮಿಲನ ಇದೇ ಪ್ರೇಮ

ಪ್ರೇಮಗಗನದ ಆಶಾ ತಾರೆ ಭೂಮಿಗಿಳಿದು ಕೈಸೆರೆ
ಪ್ರೇಮಗಗನದ ಆಶಾ ತಾರೆ ಭೂಮಿಗಿಳಿದು ಕೈಸೆರೆ
ಒಲವಿನಾ ಸವಿಯಾ ಮನಸಾರೆ.. ಹೀರಿ ನಲಿವಾ ಬಾ ಬಾರೆ..
ಸಮಾಗಮ ಮನೋರಮಾ ಮಧುರ ಮಿಲನ ಇದೆ ಪ್ರೇಮ

ಮಂಗಳ ಸೂತ್ರದ ಮೋಹಿನಿ ಬಾರೇ  ಮಾಡಿದೆ ನೀನೇ ಮನಸಿನ ಸೂರೆ 
ಮಂಗಳ ಸೂತ್ರದ ಮೋಹಿನಿ ಬಾರೇ ಮಾಡಿದೆ ನೀನೇ ಮನಸಿನ ಸೂರೆ 
ಚಂದಿರ ತಂದಿಹ ಅಮೃತಧಾರೆ...  ತಿಂಗಳ ಬೆಳಕೇ ನೀ ನೀರೇ 
ಸಮಾಗಮ ಮನೋರಮಾ ಮಧುರ ಮಿಲನ ಇದೆ ಪ್ರೇಮ 

ಬಂಧನ ತಂದಿಹ ಅನುಬಂಧ ಮಾಲೆ ಬಾಳಿನ ಸಮರಸ ನೀಡಿದ ಮೇಲೆ 
ಬಂಧನ ತಂದಿಹ ಅನುಬಂಧ ಮಾಲೆ ಬಾಳಿನ ಸಮರಸ ನೀಡಿದ ಮೇಲೆ 
ಮೋಜಿನ ಮೋಹದ ತೂಗುಯ್ಯಾಲೆ... ಸಾಗುತ ತಂದಿದೆ ರಾಸಲೀಲೆ 
ಸಮಾಗಮ ಮನೋರಮಾ ಮಧುರ ಮಿಲನ ಇದೆ ಪ್ರೇಮ 
(ಹೆಣ್ಣು : ಹೂಂ ಹೂಂ ಹೂಂ ಹೂಂ ಹೂಂ )
-------------------------------------------------------------------------------------------------------------------------

ಸೀತೆಯಿಲ್ಲದ ಸಾವಿತ್ರಿ (೧೯೭೩) - ಬಲ್ಲೆಯಾ ಇನಿಯಾ ಬಲ್ಲೆಯಾ
ಸಂಗೀತ : ವಿಜಯಭಾಸ್ಕರ ಸಾಹಿತ್ಯ :ವಿಜಯನಾರಸಿಂಹ ಗಾಯನ : ಎಸ್.ಜಾನಕೀ 

ಬಲ್ಲೆಯಾ ಇನಿಯಾ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ.. ಬಲ್ಲೆಯಾ ಇನಿಯಾ ಬಲ್ಲೆಯಾ 

ಅಹ್ಹಹ್ಹ .. ಚಿಗುರು ಮೀಸೆ ಅಂಚಿನಲ್ಲಿ ನಗುನಗುತಾ ತುಂಟ ಕಣ್ಣಿನಲ್ಲಿ ಸನ್ನೇ ತೋರಿಸುತಾ .. 
ಚಿಗುರು ಮೀಸೆ ಅಂಚಿನಲ್ಲಿ ನಗುನಗುತಾ ತುಂಟ ಕಣ್ಣಿನಲ್ಲಿ ಸನ್ನೇ ತೋರಿಸುತಾ ..
ಸೆಳೆಯದಿರೂ ಹತ್ತಿರ ಸರಸದಿಂದ ಥರ
ಸೆಳೆಯದಿರೂ ಹತ್ತಿರ ಸರಸದಿಂದ ಥರ ದೂರು ಹೇಳ ಬಳೆಗಳಿವೇ ಎಚ್ಚರಾ ..
ಬಲ್ಲೆಯಾ ಇನಿಯಾ ಬಲ್ಲೆಯಾ ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತಿದೇ ಬಲ್ಲೆಯಾ
ಬಲ್ಲೆಯಾ ಇನಿಯಾ ಬಲ್ಲೆಯಾ 

ಸೀರೆಯನ್ನು ನೆನಸದಿರು ಜಾಣಮರಿ  ನೀರಿನಲ್ಲಿ ಆಡಿದರೇ ಕೋಣ ಮರಿ 
ಸೀರೆಯನ್ನು ನೆನಸದಿರು ಜಾಣಮರಿ  ನೀರಿನಲ್ಲಿ ಆಡಿದರೇ ಕೋಣ ಮರಿ 
ಗೋಪಿಯಲ್ಲ ನಾನು ಕೃಷ್ಣ ನಲ್ಲ ನೀನು 
ಗೋಪಿಯಲ್ಲ ನಾನು ಕೃಷ್ಣ ನಲ್ಲ ನೀನು ಗೋಡೆಗಳಿಗೂ ಕಿವಿಗಳಿವೆ ಜಾಗ್ರತೆ 
ಬಲ್ಲೆಯಾ ಇನಿಯಾ ಬಲ್ಲೆಯಾ ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ.. ಬಲ್ಲೆಯಾ ಇನಿಯಾ ಬಲ್ಲೆಯಾ 

ನನ್ನ ಮುಗ್ದತನವ ನೀನು ಸೆರೆ ಹಿಡಿದೇ ನಿನ್ನ ಪ್ರೀತಿ ಬತ್ತಳಲಿ ನಾ ಹೂಡಿದೇ ..
ನನ್ನ ಮುಗ್ದತನವ ನೀನು ಸೆರೆ ಹಿಡಿದೇ ನಿನ್ನ ಪ್ರೀತಿ ಬತ್ತಳಲಿ ನಾ ಹೂಡಿದೇ ..
ಭೃಮರದಂತೇ ಆಗದೇ ಹೂವಿಂದ ಹೂವಿಗೇ ಹಾರದೇ ..   
ಭೃಮರದಂತೇ ಆಗದೇ ಹೂವಿಂದ ಹೂವಿಗೇ ಹಾರದೇ .. ಸಲಹೆನ್ನ ಕೊನೆತನಕ ಕೈಯ್ಯ ಬಿಡದೇ
ಬಲ್ಲೆಯಾ ಇನಿಯಾ ಬಲ್ಲೆಯಾ ಬಳೆಗಳ ತುಂಟತನ ಬಲ್ಲೆಯಾ
ನಿನ್ನ ಗುಟ್ಟನೆಲ್ಲ ಸಾರುತ್ತಿದೆ ಬಲ್ಲೆಯಾ.. ಬಲ್ಲೆಯಾ ಇನಿಯಾ ಬಲ್ಲೆಯಾ 
-------------------------------------------------------------------------------------------------------------------------

ಸೀತೆಯಲ್ಲ ಸಾವಿತ್ರಿ (೧೯೭೩) - ಡುಂ ಡುಂ ಬಾರಿಸು ನಗಾರಿ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಅಂಜಲಿ, ಕೌಸಲ್ಯ, ರುಕ್ಮಿಣಿ, ಸಿ.ಎಂ.ಗಿರಿ    

ಹೆಣ್ಣು : ಡುಂ ಡುಂ ಬಾರಿಸೋಣ ನಗಾರಿ ತ್ತೂತ್ತುತ್ತು  ಊದು ತುತ್ತೂರಿ
           ಹನುಮಣ್ಣ ಕರೆದಾನೇ ಮೆರೆವಣಿಗೇ ನಮ್ಮ ಬಸವಣ್ಣ ಹೋರಟಾನೇ ಮೆರೆವಣಿಗೆ
ಕೋರಸ್ : ಡುಂ ಡುಂ ಬಾರಿಸೋಣ ನಗಾರಿ ತ್ತೂತ್ತುತ್ತು  ಊದು ತುತ್ತೂರಿ
                ಹನುಮಣ್ಣ ಹೋರಟಾನೇ ಕರೆದಾನೇ ಮೆರೆವಣಿಗೇ ನಮ್ಮ ಬಸವಣ್ಣ ಹೋರಟಾನೇ ಮೆರೆವಣಿಗೆ

ಹೆಣ್ಣು : ಅಂತಿಂತ ಬಸವ ಅಲ್ಲಾ.. ಇವನೂ ದೇವಿಯ ಕೈಯಲ್ಲೇ ಹೆಸರ ಪಡೆದವನೂ
ಕೋರಸ್ : ಮನೆಗೇ ಬಂದಾನೇ...   ಕಾಲಡಿ ನಿಂದಾನೇ..  ಆರುತಿ ಬೆಳಗಿರಿ ಹಾಡಿರಿ ಸೋಬಾನೆ       
ಹೆಣ್ಣು : ಸೋಬಾನೆ ಹನಮಂಗೇ .. ಸೊಬಾನೇ ಬಸವಂಗೇ.. ಸೋಬಾನೆ ನಮ್ಮ ಗೌರಿ ಮುತ್ತಿನ ಚೆಲುವಂಗೇ..
          ಹೊಯ್....  
ಕೋರಸ್ : ಡುಂ ಡುಂ ಬಾರಿಸೋಣ ನಗಾರಿ ತ್ತೂತ್ತುತ್ತು  ಊದು ತುತ್ತೂರಿ
                ಹನುಮಣ್ಣ ಹೋರಟಾನೇ ಕರೆದಾನೇ ಮೆರೆವಣಿಗೇ ನಮ್ಮ ಬಸವಣ್ಣ ಹೋರಟಾನೇ ಮೆರೆವಣಿಗೆ

ಹೆಣ್ಣು : ಚಕ್ಕರು ಕಣ್ಣಿನ ಅಂಗಡಿ ಪಾಪಣ್ಣ ಬಾಳೆಯ ಹಣ್ಣಿನ ಚಿಪ್ಪನೂ ಮಡಗಣ್ಣ...
           ಚಕ್ಕರು ಕಣ್ಣಿನ ಅಂಗಡಿ ಪಾಪಣ್ಣ ಬಾಳೆಯ ಹಣ್ಣಿನ ಚಿಪ್ಪನೂ ಮಡಗಣ್ಣ...
ಕೋರಸ್ : ಹೋಗಲೋ ಎನಬೇಡಾ.. ಹೊಡೆಯಲೂ ಬರಬೇಡಾ ..
                ಕೈ ತುತ್ತೂ ಕಾವಣ್ಣ ಪಟ್ಟಾವ ಬಡಿಬೇಡ...
                ಬಸವಂಗೇ ಹಣ್ಣೂ.. ನಿನ್ನ ಬಾಯಿಗೇ ಮಣ್ಣು
               ಬಾಯ್ ಬಡಕೊಂಡು ಅಯ್ಯೋ ಅಂತಾ ಬಿಡಬ್ಯಾಡ್ ಕಣ್ಣೂ ..
ಹೆಣ್ಣು : ಹೈ ...
ಕೋರಸ್ : ಡುಂ ಡುಂ ಬಾರಿಸೋಣ ನಗಾರಿ ತ್ತೂತ್ತುತ್ತು  ಊದು ತುತ್ತೂರಿ
                ಹನುಮಣ್ಣ ಹೋರಟಾನೇ ಕರೆದಾನೇ ಮೆರೆವಣಿಗೇ ನಮ್ಮ ಬಸವಣ್ಣ ಹೋರಟಾನೇ ಮೆರೆವಣಿಗೆ
-------------------------------------------------------------------------------------------------------------------------

ಸೀತೆಯಲ್ಲ ಸಾವಿತ್ರಿ (೧೯೭೩) - ತಾರುಣ್ಯ ತಂದಿದೇ ಭಾರ 
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ವಿಜಯನಾರಸಿಂಹ ಗಾಯನ : ಎಸ್.ಜಾನಕೀ

ಕಾಲ್ಗಜ್ಜೇ ನಾಳಿಗೆ ತಡೆದೂ..  ಮಾತುನಾಡುತೀರೇ .. ಕೈಯ್ಯ ಬಳೆ ಮೌನ ನೀಗೀ ತಾಳ ಹಾಕುತಿದೇ ...
ಕಣ್ಣ ಕಾಡಿಗೇ ... ಹೊಸದೊಂದು ಕಥೆಯ.. ಏ..ಶಮಿಯ ಸೆರಗೂ ಕರೆಯೋಲೆ ನೀಡುತಿದೇ .. ಆಆಆ.. ಆಆಆ... ಆಆಆ..
ತಾರುಣ್ಯ ತಂದಿದೇ ಭಾರ ಅದ ನೀಗಲು ಬಾರಾ ತೋಳಿನ ಆಸರೇ ತಾರಾ  ಓ....ದಿಲದಾರ ..
ತಾರುಣ್ಯ ತಂದಿದೇ ಭಾರ ಅದ ನೀಗಲು ಬಾರಾ ತೋಳಿನ ಆಸರೇ ತಾರಾ

ಆಸೆಯ ಬೆರಳಿಗೇ ಕನಸಿನ ಉಂಗರ ಇರಿಸೀ ... ಒಲವಿನ ಕೊರಳಿಗೇ ಮುತ್ತಿನ ಮಾಲೆಯ ತೋಡಿಸೀ..
ಒಣಗಿದ ತುಟಿಗಳಿಗೇ ತಣಿಸುವ ಮಧು ಕುಡಿಸೀ .. ಹಣತೆಯ ಬೆಳಕಿನಲಿ ಕಣ್ಣಲೀ ಕಣ್ಣಿರಿಸಿ
ನಲಿಸುವೆ.. ಮೆರೆಸುವೇ..  ಮರೆಸುವೇ.. ಬೇಗ ನೀ ಬಾರಾ ...
ತಾರುಣ್ಯ ತಂದಿದೇ ಭಾರ ಅದ ನೀಗಲು ಬಾರಾ ತೋಳಿನ ಆಸರೇ ತಾರಾ  ಓ....ದಿಲದಾರ ..
ತಾರುಣ್ಯ ತಂದಿದೇ ಭಾರ ಅದ ನೀಗಲು ಬಾರಾ ತೋಳಿನ ಆಸರೇ ತಾರಾ

ತಾರುಣ್ಯ ತಂದಿದೇ ಭಾರ ಅದ ನೀಗಲು ಬಾರಾ ತೋಳಿನ ಆಸರೇ ತಾರಾ  ಓ....ದಿಲದಾರ ..
ತಾರುಣ್ಯ ತಂದಿದೇ ಭಾರ ಅದ ನೀಗಲು ಬಾರಾ ತೋಳಿನ ಆಸರೇ ತಾರಾ....
-------------------------------------------------------------------------------------------------------------------------

ಸೀತೆಯಲ್ಲ ಸಾವಿತ್ರಿ (೧೯೭೩) - ದೇವೀ ಆಟಗಾತಿಯೂ ನೀನೂ
ಸಂಗೀತ : ವಿಜಯಭಾಸ್ಕರ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ

ಹೆಣ್ಣು : ದೇವೀ ... ಆಟಗಾತಿಯೂ ನೀನೂ ... ಕೈಯ್ಯ ಬೊಂಬೆಯೂ ನಾನೂ ಆಡಿಸಿ ನಗುತಿಹೆ ಏನೂ .. ಆಆಆ...
ಗಂಡು : ದೇವೀ ... ಆಟಗಾತಿಯೂ ನೀನೂ ... ಕೈಯ್ಯ ಬೊಂಬೆಯೂ ನಾನೂ ಆಡಿಸಿ ನಗುತಿಹೆ ಏನೂ .. ಓಓಓ ..

ಹೆಣ್ಣು : ಅಹ್ಹಹ್ಹಹ್ಹ... ಬಲ್ಲೇ ನೀನೂ ನನ್ನಯ ಚಿಂತೇ ಆದರೂ ಮೌನದೀ ಏತಕೆ ನಿಂತೇ.. ಅಹಾ..ಅಹಾ..ಅಹಾ..ಆಆಆ..
ಗಂಡು : ಬಲ್ಲೇ ನೀನೂ ನನ್ನಯ ಚಿಂತೇ (ಆ) ಆದರೂ ಮೌನದೇ ಏತಕೆ ನಿಂತೇ .. (ಆಆ ) 
            ನನ್ನ ಮನದ ತಾಪ ತೀರು ಒಲವ ನೀ ಕೋರೂ.. ಓಓಓಓಓ...
            ದೇವೀ .. (ಆಆ ) ಆಟಗಾತಿಯೂ ನೀನೂ ... ಕೈಯ್ಯ ಬೊಂಬೆಯೂ ನಾನೂ ಆಡಿಸಿ ನಗುತಿಹೆ ಏನೂ .. ಹ್ಹ...
ಹೆಣ್ಣು : ಆಆಆ... ಆಆಆ... ಆಆಆ...

ಹೆಣ್ಣು : ಸ್ವರ್ಗ ನಿನ್ನ ಸನ್ನಿಧಿಯಲ್ಲಿ ಮುಕ್ತಿ ನಿನ್ನ ಕಾಲಡಿಯಲ್ಲಿ ಅಹಾ..ಅಹಾ..ಅಹಾ..ಆಆಆ.. ಆಆಆ..
ಗಂಡು :  ಸ್ವರ್ಗ ನಿನ್ನ ಸನ್ನಿಧಿಯಲ್ಲಿ (ಆ) ಮುಕ್ತಿ ನಿನ್ನ ಕಾಲಡಿಯಲ್ಲಿ (ಅಹ್ಹಹ್ಹಹ್ಹಹ್ಹ )
             ಕಾಲವೆಲ್ಲಾ.. ಕಳೆಯುವಾಸೇ.. ನಿನ್ನ ಮಡಿಲಲ್ಲಿ.. ಹೂಂಹೂಂಹೂಂಹೂಂ...
            ದೇವೀ .. (ಆಆ ) ಆಟಗಾತಿಯೂ ನೀನೂ ... (ಆಆ ) ಕೈಯ್ಯ ಬೊಂಬೆಯೂ ನಾನೂ (ಆಅ )
           ಆಡಿಸಿ ನಗುತಿಹೆ ಏನೂ .. ಓಓಓಓಓ.. ದೇವಿ.. (ಹೂಹೂಂ)
-------------------------------------------------------------------------------------------------------------------------

No comments:

Post a Comment