ನಾನು ಬಾಳಬೇಕೂ ಚಿತ್ರದ ಹಾಡುಗಳು
- ದೇವರಿಗೆ ಹೆಸರಿಟ್ಟ ತಾನೊಬ್ಬನು
- ಕವಿಯಿತು ಕತ್ತಲು ಹಿಂದೂ ಮುಂದೂ
- ಬಾಲರ ದೇವಾ ವಿನಾಯಕ
- ಹೇಳೇ ಪ್ಯಾರಿ ಬುಲ್ ಬುಲ್
- ತುಂಬಿಹುದು ಯೌವ್ವನ ನನ್ನಲ್ಲಿ
- ಶತಕೋಟಿ ತಾರೆಗಳೂ ಗಗನದಿ
ಸಂಗೀತ : ಆರ್.ರತ್ನ, ಸಾಹಿತ್ಯ : ಕೆ.ಸತ್ಯನಾರಾಯಣ ಗಾಯನ ಪಿ.ಬಿ.ಶ್ರೀನಿವಾಸ
ದೇವರಿಗೆ ಹೆಸರಿಟ್ಟ ತಾನೊಬ್ಬನು ದೇವರೇ ಇಲ್ಲವೆಂದ ಇನ್ನೊಬ್ಬನು
ದೇವರಿಗೆ ಹೆಸರಿಟ್ಟ ತಾನೊಬ್ಬನು ದೇವರೇ ಇಲ್ಲವೆಂದ ಇನ್ನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ಕಣ್ಣಿಗೆ ಕಾಣದ ದೇವನಿಹನೋ ಇಲ್ಲವೋ ಮುತ್ತಿನಂಥ ಮಕ್ಕಳೇ ದೇವರಲ್ಲವೇ
ದೇವರಿಗೆ ಹೆಸರಿಟ್ಟ ತಾನೊಬ್ಬನು ದೇವರೇ ಇಲ್ಲವೆಂದ ಇನ್ನೊಬ್ಬನು
ನೆನೆವರು ಎಲ್ಲರು ದೇವರನು ಹರಿಸಲು ಕಾಡುವ ಚಿಂತೆಯನು
ನೆನೆವರು ಎಲ್ಲರು ದೇವರನು ಹರಿಸಲು ಕಾಡುವ ಚಿಂತೆಯನು
ಕಂಡರೆ ಮಕ್ಕಳ ನಗುವನ್ನು
ಕಂಡರೆ ಮಕ್ಕಳ ನಗುವನ್ನು ಮರೆಯವೇ ಸಾವಿರ ಚಿಂತೆಯನು
ಮರೆಯವೇ ಸಾವಿರ ಚಿಂತೆಯನು
ದೇವರಿಗೆ ಹೆಸರಿಟ್ಟ ತಾನೊಬ್ಬನು ದೇವರೇ ಇಲ್ಲವೆಂದ ಇನ್ನೊಬ್ಬನು
ದೇವರ ಒಲಿಸಲು ಮಾನವರು ವಿಧ ವಿಧ ಪೂಜೆಯ ಮಾಡುವರು
ದೇವರ ಒಲಿಸಲು ಮಾನವರು ವಿಧ ವಿಧ ಪೂಜೆಯ ಮಾಡುವರು
ಮಕ್ಕಳ ರಮಿಸಲು ಹೆತ್ತವರು....
ಮಕ್ಕಳ ರಮಿಸಲು ಹೆತ್ತವರು ಏನೇನೆಲ್ಲಾ ಮಾಡುವರು
ಮಕ್ಕಳ ರಮಿಸಲು ಹೆತ್ತವರು ಏನೇನೆಲ್ಲಾ ಮಾಡುವರು
ಮೂರ್ತಿಯೇ ಇಲ್ಲದ ಆಲಯವು ಗೋಪುರವಿದ್ದರೂ ಶೋಭಿಸದು
ಮೂರ್ತಿಯೇ ಇಲ್ಲದ ಆಲಯವು ಗೋಪುರವಿದ್ದರೂ ಶೋಭಿಸದು
ಮಕ್ಕಳೇ ಇಲ್ಲದ ಆ ಮನೆಯು ...
ಮಕ್ಕಳೇ ಇಲ್ಲದ ಆ ಮನೆಯೂ ವೈಭವವಿದ್ದರೂ ಶೋಭಿಸದು
ದೇವರಿಗೆ ಹೆಸರಿಟ್ಟ ತಾನೊಬ್ಬನು ದೇವರೇ ಇಲ್ಲವೆಂದ ಇನ್ನೊಬ್ಬನು
ದೇವರೇ ಇಲ್ಲವೆಂದ ಇನ್ನೊಬ್ಬನು
ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ
ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ ಹೂಂ
--------------------------------------------------------------------------------------------------------------------------
ನಾನು ಬಾಳಬೇಕು (೧೯೭೪)
ಸಂಗೀತ : ಆರ್.ರತ್ನ, ಸಾಹಿತ್ಯ : ಕೆ.ಸತ್ಯನಾರಾಯಣ ಗಾಯನ ಎಸ್. ಪಿ.ಬಿ.
ಕವಿಯಿತು ಕತ್ತಲು ಹಿಂದೂ ಮುಂದು
ಹೊರಟಿತು ಬೆಳಕನು ಅರುಸುತ ಇಂದು
ಕವಿಯಿತು ಕತ್ತಲು ಹಿಂದೂ ಮುಂದು
ಹೊರಟಿತು ಬೆಳಕನು ಅರುಸುತ ಇಂದು
ಜಗವನು ಅರಿಯದ ಹಸುಳೆಯು ಒಂದು
ನಾನು ಬಾಳಬೇಕೆಂದೂ ನಾನು... ಬಾಳಬೇಕೆಂದೂ
ಜೀವನ ಒಂದು ಕಷ್ಟದ ಸಂತೆ ಮನದಲ್ಲೇಕೆ ಅವುಗಳ ಚಿಂತೆ

ಮುಳ್ಳುಗಳಿರಲೀ ಕಲ್ಲುಗಳಿರಲೀ ನೋವನು ಸಹಿಸುತಾ ನಡೇ ನೀ ಮುಂದೆ
ನಾನು ಬಾಳಬೇಕೆಂದೂ ನಾನು... ಬಾಳಬೇಕೆಂದೂ
ತರಗೆಲೆ ಸಿಲುಕಿ ಬಿರುಗಾಳಿಯಲಿ ನೆಲೆಯದು ತಪ್ಪಿರೆ ಕ್ಷಣವೊಂದು
ತರಗೆಲೆ ಸಿಲುಕಿ ಬಿರುಗಾಳಿಯಲಿ ನೆಲೆಯದು ತಪ್ಪಿರೆ ಕ್ಷಣವೊಂದು
ನೆಲವನು ಸೇರದೆ ತಾ ಮುಂದೂ ಗಾಳಿಯೇ ಬೀಸಲಿ ಪ್ರವಾಹ ಉಕ್ಕಲಿ
ನೆಲವನು ಸೇರದೆ ತಾ ಮುಂದೂ ಗಾಳಿಯೇ ಬೀಸಲಿ ಪ್ರವಾಹ ಉಕ್ಕಲಿ
ಬಲವೇ ಇಲ್ಲದ ತೀರದ ಜೊಂಡು ಬೆಳೆಯದೆ ಹೆದರದೆ ತಾ ಎಂದೂ
ನಾನು ಬಾಳಬೇಕೆಂದೂ ನಾನು... ಬಾಳಬೇಕೆಂದೂ
ಏನೇ ಬರಲಿ ಬಾಳಲೇಬೇಕು ಎಂಬುವ ಛಲವೂ ಮನದಲಿ ಧೈರ್ಯವು
ಏನೇ ಬರಲಿ ಬಾಳಲೇಬೇಕು ಎಂಬುವ ಛಲವೂ ಮನದಲಿ ಧೈರ್ಯವು
ತುಂಬಿರೆ ಏತಕೆ ಇನ್ನೂ ಅಳಲು
ತುಂಬಿರೆ ಏತಕೆ ಇನ್ನೂ ಅಳಲು ಗುರಿಯನು ಸಾಧಿಸೆ ನೀ ಹೊರಡು
ನಾನು ಬಾಳಬೇಕೆಂದೂ ನಾನು... ಬಾಳಬೇಕೆಂದೂ
ಕವಿಯಿತು ಕತ್ತಲು ಹಿಂದೂ ಮುಂದು ಹೊರಟಿತು ಬೆಳಕನು ಅರುಸುತ ಇಂದು
ಜಗವನು ಅರಿಯದ ಹಸುಳೆಯು ಒಂದು
ನಾನು ಬಾಳಬೇಕೆಂದೂ ನಾನು... ಬಾಳಬೇಕೆಂದೂ
-------------------------------------------------------------------------------------------------------------------------
ನಾನು ಬಾಳಬೇಕು (೧೯೭೪) - ಬಾಲರ ದೇವಾ ವಿನಾಯಕ
ಸಂಗೀತ : ಆರ್.ರತ್ನ, ಸಾಹಿತ್ಯ : ಕೆ.ಸತ್ಯನಾರಾಯಣ ಗಾಯನ ಪಿ.ಸುಶೀಲಾ
ಬಾಲರ ದೇವ ವಿನಾಯಕ

ಬಾಲರ ದೇವ ವಿನಾಯಕ ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ
ಮಕ್ಕಳು ಕರೆದರೇ ನೀ ಓಡಿ ಬರುವೇ
ಅಕ್ಕರೆಯಿಂದ ಅವರನು ಹರಸುವೇ
ಮಕ್ಕಳು ಕರೆದರೇ ನೀ ಓಡಿ ಬರುವೇ
ಅಕ್ಕರೆಯಿಂದ ಅವರನು ಹರಸುವೇ
ಭಕ್ತರ ಅಳಲನು ಅರಿತೊಡನೇ ನೀ
ಭಕ್ತರ ಅಳಲನು ಅರಿತೊಡನೇ ನೀ
ಧಾವಿಸಿ ಬರುವೇ ವರ ರಾಸರದೇ
ಬಾಲರ ದೇವ ವಿನಾಯಕ ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ
ನೀನೇ ತೋರುವೇ ದಾರಿಯ ನಮಗೇ
ನಿನ್ನನೇ ನಂಬಿ ಮುಂದಡಿ ಇಡುವೇ
ನೀನೇ ತೋರುವೇ ದಾರಿಯ ನಮಗೇ
ನಿನ್ನನೇ ನಂಬಿ ಮುಂದಡಿ ಇಡುವೇ
ನೀನೇ ಬರುವೇ...
ನೀನೇ ಬರುವೇ ಹಸುಳೆಯ ನೆರಳಿಗೇ
ನಮ್ಮಯ ಚಿಂತೇ ನಿನಗೇ ಬಿಡುವೇ
ನಮ್ಮಯ ಚಿಂತೇ ನಿನಗೇ ಬಿಡುವೇ
ಬಾಲರ ದೇವ ವಿನಾಯಕ ಪಾರ್ವತಿ ತನಯ ಗಣನಾಯಕ
ಬಾಲರ ದೇವ ವಿನಾಯಕ
-------------------------------------------------------------------------------------------------------------------------
ನಾನು ಬಾಳಬೇಕು (೧೯೭೪) - ಕೇಳೇ ಪ್ಯಾರಿ ಬುಲ್ ಬುಲ್
ಸಂಗೀತ : ಆರ್.ರತ್ನ, ಸಾಹಿತ್ಯ : ಕೆ.ಸತ್ಯನಾರಾಯಣ ಗಾಯನ: ಮಹೇಶ
ಕೇಳೇ ಪ್ಯಾರೀ ಬುಲ್ ಬುಲ್ ಈ ಒಡವೇ ನೀನಗ್ಯಾಕೆ
ಸಂಗೀತ : ಆರ್.ರತ್ನ, ಸಾಹಿತ್ಯ : ಕೆ.ಸತ್ಯನಾರಾಯಣ ಗಾಯನ: ಮಹೇಶ
ಕೇಳೇ ಪ್ಯಾರೀ ಬುಲ್ ಬುಲ್ ಈ ಒಡವೇ ನೀನಗ್ಯಾಕೆ
ಕೇಳೇ ಪ್ಯಾರೀ ಬುಲ್ ಬುಲ್ ಈ ಒಡವೇ ನೀನಗ್ಯಾಕೆ
ಕೇಳೇ ಪ್ಯಾರೀ ಬುಲ್ ಬುಲ್
ಗುಟ್ಟು ನಾನು ಹೇಳುವಾಗ ಕದ್ದು ಕೇಳೋ ಒಲೆಯೋ
ಮುತ್ತನೊಂದು ನಾನು ಇಡಲು ಚುಚ್ಚಿ ಕಾಡೋ ಮೂಗುತಿ
ಬುಲ್ ಬುಲ್ ನಿನಗೇತಕೆ ಬೇಗ ಕಳಚಿ ಹಾಕಲೇ
ಬುಲ್ ಬುಲ್ ನಿನಗೇತಕೆ
ದಂತದಂಥ ನಿನ್ನ ಮೈಯೆಗೇ ಒಡವೆ ವಸ್ತ್ರ ಚೆಂದಲ್ಲಾ
ಹೊಯ್ ದಂತದಂಥ ನಿನ್ನ ಮೈಯೆಗೇ ಒಡವೆ ವಸ್ತ್ರ ಚೆಂದಲ್ಲಾ
ಅಪ್ಪಿ ಹಿಡಿಯಲು ನಾನೂ ಬಂದರೇ ತಡೆದು ಕಾಡೋ ಡಾಬನು
ಬೇಗ ತೆಗೆದುಹಾಕೂ ಬುಲ್ ಬುಲ್ ತೆಗೆದುಹಾಕೂ
ಡಿಂಗ್ ಡಿಂಗ್ ಡಿಂಗ್ ಡಿಂಗ್ ಡಿಂಗ್ ಡಿಂಗ್ ಡಿಂಗರೇ ಡಿಂಗಾಲೇ
ಡಿಂಗ್ ಡಿಂಗ್ ಡಿಂಗ್ ಡಿಂಗ್ ಡಿಂಗ್ ಡಿಂಗ್ ಡಿಂಗರೇ ಡಿಂಗಾಲೇ ಹೊಯ್
ಕತ್ತು ಜೋಲು ಬೀಳಿಸಿ ಬೋನು ಬೆನ್ನೂ ಮಾಡುವಾ ಹೊಯ್
ಕತ್ತು ಜೋಲು ಬೀಳಿಸಿ ಬೋನು ಬೆನ್ನೂ ಮಾಡುವಾ
ಕಾಸ ಮಾಲೆ ಬಿಸುಡು ನೀ ಕಾಸಮಾಲೇ ಬಿಸುಡು ನೀ
ತಾಳಿ ನಾನು ಕಟ್ಟದಿರಲೂ ತಾಳಿಯಂಥ ಡಾಲರು ಹೊಯ್
ತಾಳಿ ನಾನು ಕಟ್ಟದಿರಲೂ ತಾಳಿಯಂಥ ಡಾಲರು
ನಿನ್ನ ಕೊರಳಲಿ ಏತಕೆ
ಪ್ಯಾರೀ ಬುಲ್ ಬುಲ್ ಕೇಳೇ ಈ ಒಡವೇ ನೀನಗ್ಯಾಕೆ
ಪ್ಯಾರೀ ಬುಲ್ ಬುಲ್ ಕೇಳೇ
ಆಆಆ... ಆಆಆ... ಹೊಯ್
ಈ ಲಂಗ ನಿನಗೇತಕೇ ಸೊಂಟದ ಸೊಬಗನ್ನೇ ಮರೆಸುವಾ
ಈ ಲಂಗ ನಿನಗೇತಕೇ ಸೊಂಟದ ಸೊಬಗನ್ನೇ ಮರೆಸುವಾ
ಈ ಲಂಗ ನಿನಗೇತಕೇ
--------------------------------------------------------------------------------------------------------------------------
ನಾನು ಬಾಳಬೇಕು (೧೯೭೪) - ತುಂಬಿಹುದು ಯೌವ್ವನ ನನ್ನಲ್ಲಿ
ಸಂಗೀತ : ಆರ್.ರತ್ನ, ಸಾಹಿತ್ಯ : ಕೆ.ಸತ್ಯನಾರಾಯಣ ಗಾಯನ : ಎಲ್.ಆರ್.ಈಶ್ವರೀ
ಉಹ್ಹ... ತುಂಬಿಹುದೂ... ಯೌವ್ವನ ನನ್ನಲ್ಲಿ
ಸಂಗೀತ : ಆರ್.ರತ್ನ, ಸಾಹಿತ್ಯ : ಕೆ.ಸತ್ಯನಾರಾಯಣ ಗಾಯನ : ಎಲ್.ಆರ್.ಈಶ್ವರೀ
ಉಹ್ಹ... ತುಂಬಿಹುದೂ... ಯೌವ್ವನ ನನ್ನಲ್ಲಿ
ನಿಂತಿಹುದೂ... ಮನಸು ನಿನ್ನಲ್ಲೀ ಈ ಅಂದ ಈ ಚೆಂದ
ಈ ಅಂದ ಈ ಚೆಂದ ನಿನಗೇ ಸ್ವಂತ ಬಾ.. ನೀಡುವೇ ಆನಂದ
ತುಂಬಿಹುದೂ...
ಹಾಯ್ ನಿನ್ನೇ ಎಂಬೂದು ಸತ್ತು ಹೋಯಿತು ನಾಳೆ ಎಂಬುದೂ ಹುಟ್ಟಿಲ್ಲಾ
ಹಾಯ್ ನಿನ್ನೇ ಎಂಬೂದು ಸತ್ತು ಹೋಯಿತು ನಾಳೆ ಎಂಬುದೂ ಹುಟ್ಟಿಲ್ಲಾ
ಇಂದೇ... ಅನುಭವಿಸು ನೀ ಸುಖವನ್ನೆಲ್ಲಾ ನಿನ್ನೇ ನಾಳೆಗಳ ಚಿಂತೇ ಬೇಕಿಲ್ಲ ಬೇಕಿಲ್ಲ
ಇರುಳಲಿ ಕನಸಲಿ ಕಾಡುವೇ ಏತಕೋ ಬಳಿ ನಾ ಬಂದರೇ ಓಡುವೇ ಏತಕೋ
ಕಾಣದೇ ವಿರಹವ ಬಂದನು ಬಯಸಿ ತಾಪವ ತಣಿಸೋ ಬೇಗನೆ ರಮಿಸಿ ರಂಗಾ.... ಆಆಆ
ತುಂಬಿಹುದೂ... ಯೌವ್ವನ ನನ್ನಲ್ಲಿ
ಹಾಯ್ ಮಧುವಿನ ಮಾದಕ ಗುಣವಲ್ಲಾ ತುಂಬಿದ ಹೆಣ್ಣಿನ ಕಣ್ಣಲ್ಲೇ
ಮಧುವಿನ ಮಾದಕ ಗುಣವಲ್ಲಾ ತುಂಬಿದ ಹೆಣ್ಣಿನ ಕಣ್ಣಲ್ಲೇ
ತಂದೇ .... ನಿನಗೆಂದೇ ಈ ಗೆಲುವೆನೆಲ್ಲಾ ನಿನ್ನೊಲಿದು ನಾ ಬಂದೇ ಬಾ ನಲ್ಲ ಬಾ ನಲ್ಲ
ತುಂಬಿಹುದೂ... ಯೌವ್ವನ ನನ್ನಲ್ಲಿ ನಿಂತಿಹುದೂ... ಮನಸು ನಿನ್ನಲ್ಲೀ
--------------------------------------------------------------------------------------------------------------------------
ನಾನು ಬಾಳಬೇಕು (೧೯೭೪) - ಶತಕೋಟಿ ತಾರೆಗಳು ಗಗನದಲಿ
ಸಂಗೀತ : ಆರ್.ರತ್ನ, ಸಾಹಿತ್ಯ : ಕೆ.ಸತ್ಯನಾರಾಯಣ ಗಾಯನ ಪಿ.ಸುಶೀಲಾ
ಹೂಂಹೂಂಹೂಂಹೂಂಹೂಂಹೂಂ
ಶತಕೋಟಿ ತಾರೆಗಳೂ ಗಗನದಿ ತಾವಿರಲೂ
ಶುಕ್ಲಪಕ್ಷದಿ ಬೆಳೆದು ಜಗವೆಲ್ಲ ಬೆಳಗುವನೂ
ಕುಮುದ ಬಾಂಧವನು ಶಶಿಯೊಬ್ಬನೇ
ಶತಕೋಟಿ ತಾರೆಗಳೂ ಗಗನದಿ ತಾವಿರಲೂ
ಶುಕ್ಲಪಕ್ಷದಿ ಬೆಳೆದು ಜಗವೆಲ್ಲ ಬೆಳಗುವನೂ
ಕುಮುದ ಬಾಂಧವನು ಶಶಿಯೊಬ್ಬನೇ
ಶುಕ್ಲಪಕ್ಷದ ಶಶಿಯಂತೇ ನೀ ಬೆಳೆದು
ನಾಡ ಕೀರ್ತಿಯ ಬೆಳಗೂ
ಹತ್ತು ಮಕ್ಕಳೂ ಬೇಡಾ ಸಾಕನಮಗೆ ನೀನೊಬ್ಬನೇ
ನೂರು ಜನರು ಕೌರವರೂ ಐದು ಜನ ಪಾಂಡವರೂ
ಅಮರವಾಯಿತು ಹಸುಳೆ ಅಭಿಮನ್ಯುವಿನ ಹೆಸರೂ
ಅಭಿಮನ್ಯುವಿನ ಹೆಸರೂ
ಸೀತಾಮಾತೆಯ ಅರಸುತ ಹೊರಟಿತು ಸಾವಿರ ಕಪಿಸೇನೆ
ಸೀತಾಮಾತೆಯ ಅರಸುತ ಹೊರಟಿತು ಸಾವಿರ ಕಪಿಸೇನೆ
ಚೂಡಾಮಣಿಯನೂ ತಂದನು ಹನುಮನೋ
ಚೂಡಾಮಣಿಯನೂ ತಂದನು ಹನುಮನೋ
ಅಂಜನಾದೇವಿ ವರಪುತ್ರ ತಾನೊಬ್ಬನೇ
ವರಪುತ್ರ ತಾನೊಬ್ಬನೇಶತಕೋಟಿ ತಾರೆಗಳೂ ಗಗನದಿ ತಾವಿರಲೂ
ಶುಕ್ಲಪಕ್ಷದಿ ಬೆಳೆದು ಜಗವೆಲ್ಲ ಬೆಳಗುವನೂ
ಕುಮುದ ಬಾಂಧವನು ಶಶಿಯೊಬ್ಬನೇ
-------------------------------------------------------------------------------------------------------------------------
No comments:
Post a Comment