917. ಜೀವನ ಜೋಕಾಲಿ (೧೯೭೨)

ಜೀವನ ಜೋಕಾಲಿ ಚಲನ ಚಿತ್ರದ ಹಾಡುಗಳು 
  1. ಮಕ್ಕಳ ಮನವು ಪಾವನವಾದ ಗುಡಿಯಂತಿರಬೇಕು
  2. ಚೆಲುವ ಬರುತಾನೆ ಗೆಲುವ ತರುತಾನೆ 
  3. ಜ್ಯೋತಿಯೊಡನೆ ಬನ್ನಿ ಬರಿ ಅಶಾಂತಿಯ ಕವಿದ ಲೋಕದೆ
  4. ನೀಲ ಗಗನದ ಚಂದ್ರಮ 
  5. ನಿನ್ನ ಬಳಕು ನಡಿಗೆಯಲ್ಲಿ ತಾಳ ಸಿಕ್ಕಿತು 
ಜೀವನ ಜೋಕಾಲಿ (೧೯೭೨) - ಮಕ್ಕಳ ಮನವು ಪಾವನವಾದ ಗುಡಿಯಂತಿರಬೇಕು
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ :ಬಿ.ಕೆ.ಸುಮಿತ್ರಾ  

ಮಕ್ಕಳ ಮನವು ಪಾವನವಾದ ಗುಡಿಯಂತಿರಬೇಕು
ಮಕ್ಕಳ ಮನವು ಪಾವನವಾದ ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ ದೂರದಿ ಇಡಬೇಕು... ಅಣ್ಣಾ.. ದೂರದಿ ಇಡಬೇಕು
ಮಕ್ಕಳ ಮನವು ಪಾವನವಾದ ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ ದೂರದಿ ಇಡಬೇಕು...  ಅಣ್ಣಾ.. ದೂರದಿ ಇಡಬೇಕು

ಗಿಡದಲ್ಲಿಯೇ ತಾ ಬಾಗದೆ ಇರುವುದು ಮರವಾದಾಗ ಬಗ್ಗಿತೇ
ಗಿಡದಲ್ಲಿಯೇ ತಾ ಬಾಗದೆ ಇರುವುದು ಮರವಾದಾಗ ಬಗ್ಗಿತೇ
ಬೇವಿನ ಗಿಡವನು ನೆಟ್ಟರೆ ನಾವು ಅದರಲಿ ಮಾವು ಬಿಟ್ಟಿತೇ
ಹಾಗೆಯೇ ನಮಗೆ ಕೆಟ್ಟದರಿಂದ ಒಳ್ಳೆಯ ಫಲವು ಸಿಕ್ಕಿತೇ... ಅದಕ್ಕೆ
ಅನುಭವ ಪಡೆದ ಹಿರಿಯರ ಮಾತಿಗೆ ಬೆಲೆಯನು ಕೊಡಬೇಕು... ಅಣ್ಣಾ.. ಬೆಲೆಯನು ಕೊಡಬೇಕು
ಮಕ್ಕಳ ಮನವು ಪಾವನವಾದ ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ ದೂರದಿ ಇಡಬೇಕು.. ಅಣ್ಣಾ.. ದೂರದಿ ಇಡಬೇಕು

ಉಪ್ಪು ತಿಂದವರು ನೀರನು ಕುಡಿಯದೇ  ಬೇರೆ ವಿಧಿಯಿಲ್ಲಾ 
ಉಪ್ಪು ತಿಂದವರು ನೀರನು ಕುಡಿಯದೇ  ಬೇರೆ ವಿಧಿಯಿಲ್ಲಾ
ತಪ್ಪು ಮಾಡಿದರೆ ಶಿಕ್ಷೆಯು ಎಂದಿಗೂ ತಪ್ಪುವುದೇ ಇಲ್ಲ 
ಅಡ್ಡದಾರಿಯಲಿ ನಡೆದಂತವರ ಹೆಸರು ಉಳಿದಿಲ್ಲ... ಅದಕ್ಕೆ 
ಲೋಕವು ಮೆಚ್ಚುವ ತರದಲಿ ನಮ್ಮ ನಡೆನುಡಿಯಿರಬೇಕು... ಅಣ್ಣಾ.. ನಡೆನುಡಿಯಿರಬೇಕು 
ಮಕ್ಕಳ ಮನವು ಪಾವನವಾದ ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ ದೂರದಿ ಇಡಬೇಕು.. ಅಣ್ಣಾ.. ದೂರದಿ ಇಡಬೇಕು
ಮಕ್ಕಳ ಮನವು ಪಾವನವಾದ ಗುಡಿಯಂತಿರಬೇಕು
ಪುಟ್ಟ ವಯಸಿನಲೇ ಕೆಟ್ಟ ಗುಣಗಳ ದೂರದಿ ಇಡಬೇಕು... ಅಣ್ಣಾ.. ದೂರದಿ ಇಡಬೇಕು
-------------------------------------------------------------------------------------------------------------------------

ಜೀವನ ಜೋಕಾಲಿ (೧೯೭೨) - ಚೆಲುವ ಬರುತಾನೆ ಗೆಲುವ ತರುತಾನೆ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಸುಶೀಲಾ 

ಚೆಲುವ ಬರುತಾನೆ ಗೆಲುವ ತರುತಾನೆ ಇಣುಕಿ ಕಣ್ಣಿನಲೀ  ಇಲ್ಲಿಹೆ ಏನುತಾನೇ
ಚೆಲುವ ಬರುತಾನೆ...  

ಪಿಸು ಪಿಸು ಮಾತಿನಲಿ ಗುಸು ಗುಸು ಗುಟ್ಟುತಲಿ 
ಯಾವುದೋ ಯೋಚನೆಯ ಮೆಲ್ಲನೆ ಕೊಡುತಾನೆ 
ಪಿಸು ಪಿಸು ಮಾತಿನಲಿ ಗುಸು ಗುಸು ಗುಟ್ಟುತಲಿ 
ಯಾವುದೋ ಯೋಚನೆಯ ಮೆಲ್ಲನೆ ಕೊಡುತಾನೆ 
ನನ್ನಯ ಮನದಲ್ಲಿ  ತನ್ನಯ ಮನೆ ಮಾಡಿ ಚೆನ್ನಿಗ ನನ್ನವನು ಅಲ್ಲಿಯೇ ಇರುತಾನೆ 
ಚೆಲುವ ಬರುತಾನೆ ಗೆಲುವ ತರುತಾನೆ ಇಣುಕಿ ಕಣ್ಣಿನಲೀ  ಇಲ್ಲಿಹೆ ಏನುತಾನೇ 
ಚೆಲುವ ಬರುತಾನೆ...  

ಮೋಡಿಯ ಮಾಡಿರಲು ಆತನ ಕುಡಿಮೀಸೆ ಕಣ್ಣಲ್ಲಿ ಕಣ್ಣಿಟ್ಟು ನೋಡಲು ನನಗಾಸೆ
ಇದುವೇ ಆಸೆಯಲಿ ಎದುರಲೀ ನಿಲ್ಲುತ್ತಾನೆ ತನ್ನಯ ಕನ್ನಡಿಯು ನಿನ್ ಕಣ್ಣೇ ಏನುತಾನೇ
ಚೆಲುವ ಬರುತಾನೆ ಗೆಲುವ ತರುತಾನೆ ಇಣುಕಿ ಕಣ್ಣಿನಲೀ  ಇಲ್ಲಿಹೆ ಏನುತಾನೇ
ಚೆಲುವ ಬರುತಾನೆ...  

ಏನನೋ ನೆನೆಯುತಲಿ ನಾಚುತ ನಾನಿರಲು ನೆಲವನು ಕೆದುಕುತಿದೆ ಕಾಲಿನ ಹೆಬ್ಬೆರಳು 
ಏನನೋ ನೆನೆಯುತಲಿ ನಾಚುತ ನಾನಿರಲು ನೆಲವನು ಕೆದುಕುತಿದೆ ಕಾಲಿನ ಹೆಬ್ಬೆರಳು 
ಏತಕೋ ನನ್ ಕೆನ್ನೆ ಕೆಂಪಗೆ ಆಗಿರಲು ಗಲ್ಲವ ಗಿಲ್ಲುತಲಿ ಖಿಲ್ಲನೆ ನಗುತಾನೆ 
ಚೆಲುವ ಬರುತಾನೆ ಗೆಲುವ ತರುತಾನೆ ಇಣುಕಿ ಕಣ್ಣಿನಲೀ  ಇಲ್ಲಿಹೆ ಏನುತಾನೇ 
ಚೆಲುವ ಬರುತಾನೆ 
--------------------------------------------------------------------------------------------------------------------------

ಜೀವನ ಜೋಕಾಲಿ (೧೯೭೨) - ಜ್ಯೋತಿಯೊಡನೆ ಬನ್ನಿ ಬರಿ ಅಶಾಂತಿಯ ಕವಿದ ಲೋಕದೆ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಸುಶೀಲಾ

ಜ್ಯೋತಿಯೊಡನೆ ಬನ್ನಿ ಬರಿ ಅಶಾಂತಿಯ ಕವಿದ ಲೋಕದೆ
ವಿಶ್ವ ಶಾಂತಿಯ ದೀಪ ಉರಿಸ ಬನ್ನಿ
ಜ್ಯೋತಿಯೊಡನೆ ಬನ್ನಿ ಬರಿ ಅಶಾಂತಿಯ ಕವಿದ ಲೋಕದೆ
ವಿಶ್ವ ಶಾಂತಿಯ ದೀಪ ಉರಿಸ ಬನ್ನಿ

ಒಂದು ದೀಪವು ಲಕ್ಷದೀಪಗಳ ಉರಿಸುವಂತಹ ರೀತಿ ತಳೆದು ಬನ್ನಿ 
ನಮ್ಮ ನಮ್ಮಲೇ ಇರುವ ದ್ವೇಷದ ಅಂಧಕಾರವ ಇಂದೇ ಅಳಿಸಬನ್ನಿ 
ಮೇಲ ಮೇಲಕೆ ಏರುತಿರುವ ಜನ ಕೆಳಗೆ ಬಿದ್ದವರ ಮೇಲೆಕೆಳೆದು ತನ್ನಿ 
ಜ್ಯೋತಿಯೊಡನೆ ಬನ್ನಿ ಬರಿ ಅಶಾಂತಿಯ ಕವಿದ ಲೋಕದೆ
ವಿಶ್ವ ಶಾಂತಿಯ ದೀಪ ಉರಿಸ ಬನ್ನಿ 

ಬಡವ ಬಲ್ಲಿದ ಎಂಬ ಬೇಧವ ಅಳಿಸುವಂಥಹ ಬೆಳಕಿನೊಡನೆ ಬನ್ನಿ 
ಸ್ವಾರ್ಥವಿಲ್ಲದ ಕಲಹ ಕಾಣದ ನವಸಮಾಜದ ನಕ್ಷೆಯೊಡನೆ ಬನ್ನಿ 
ಭೀತಿ ಅಳಿಸುವ ನೀತಿ ಉಳಿಸುವ ಅಮರಪ್ರಿತಿಯ ನಕ್ಷೆಯೊಡನೆ ಬನ್ನಿ 
ಜ್ಯೋತಿಯೊಡನೆ ಬನ್ನಿ ಬರಿ ಅಶಾಂತಿಯ ಕವಿದ ಲೋಕದೆ
ವಿಶ್ವ ಶಾಂತಿಯ ದೀಪ ಉರಿಸ ಬನ್ನಿ 
--------------------------------------------------------------------------------------------------------------------------

ಜೀವನ ಜೋಕಾಲಿ (೧೯೭೨) - ನೀಲ ಗಗನದ ಚಂದ್ರಮ ಈ ದಿನ ಏಕೀ ಸಂಭ್ರಮ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ :ಬಿ.ಕೆ.ಸುಮಿತ್ರಾ

ಆಆಆಅ ... ಆಆಆಅ ... ಆಆಆಅಅ .. ಲಲಲಲಲ... ಉಂಉಂಉಂಉಂ
ನೀಲ ಗಗನದ ಚಂದ್ರಮ ಈ ದಿನ ಏಕೀ ಸಂಭ್ರಮ 

ಏತಕೋ ಇಂದೂ ನೀ ಹೊಸದಾಗಿ ನನ್ನಯ ಕಣ್ಣಿಗೇ ಕಾಣುತಿಹೇ .. 
ಏತಕೋ ಇಂದೂ ನೀ ಹೊಸದಾಗಿ ನನ್ನಯ ಕಣ್ಣಿಗೇ ಕಾಣುತಿಹೇ .. 
ಎಂದೂ ಇಲ್ಲದೇ ಇಂದೇನಗಾಗಿ.. ಪ್ರೀತಿ ಸಂದೇಶವ ತಾರುತಿಹೇ...  
ನೀಲ ಗಗನದ ಚಂದ್ರಮ ಈ ದಿನ ಏಕೀ ಸಂಭ್ರಮ 

ನನ್ನಯ ಬಾಳಿನ ಆಗಸದಲ್ಲಿ ಹುಣ್ಣಿಮೆಯನ್ನೂ ತೋರಿದೆಯಾ.. 
ಲಜ್ಜೆಯ ಮೂಡಿಸಿ ಈ ಮುಖದಲ್ಲಿ ನೀನೂ ನಗುವನು ಬೀರಿದೆಯಾ ..  
ನೀಲ ಗಗನದ ಚಂದ್ರಮ ಈ ದಿನ ಏಕೀ ಸಂಭ್ರಮ 

ಸುಂದರವಾದ ನಿನ್ನೀ ರೂಪ ಲೋಕಕೆ ಎಲ್ಲಾ ರಾತ್ರಿಯ ದೀಪ 
ಸುಂದರವಾದ ನಿನ್ನೀ ರೂಪ ಲೋಕಕೆ ಎಲ್ಲಾ ರಾತ್ರಿಯ ದೀಪ 
ಕೆರಳಿಸುವೇ ನೀ ಮನಗಳ ತಾಪ ಇದುವೇ ಹೇಳೂ ನಿನ್ನ ಪ್ರತಾಪ 
ನೀಲ ಗಗನದ ಚಂದ್ರಮ ಈ ದಿನ ಏಕೀ ಸಂಭ್ರಮ 
ನೀಲ ಗಗನದ ಚಂದ್ರಮ ಈ ದಿನ ಏಕೀ ಸಂಭ್ರಮ 
--------------------------------------------------------------------------------------------------------------------------

ಜೀವನ ಜೋಕಾಲಿ (೧೯೭೨) - ನಿನ್ನ ಬಳಕು ನಡಿಗೆಯಲ್ಲಿ ತಾಳ ಸಿಕ್ಕಿತು
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್, ಪಿ.ಸುಶೀಲ 

ಗಂಡು : ಹಲೋ ಗುಡ್ ಮಾರ್ನಿಂಗ್ 
            ನಿನ್ನ ಬಳುಕು ನಡಿಗೆಯಲ್ಲಿ ತಾಳ ಸಿಕ್ಕಿತು 
ಹೆಣ್ಣು : ಯಾರಿಗೇ ... 
ಗಂಡು : ನನ್ನ ಹಾಡಿಗೇ ... 
ಹೆಣ್ಣು : ನಿನ್ನ ಕಣ್ಣ ಜಾಡಿನಲ್ಲಿ ದಾರಿ ಕಂಡಿತು 
ಗಂಡು : ಎಲ್ಲಿಗೇ ... 
ಹೆಣ್ಣು : ಮನದ ಗೂಡಿಗೆ 
ಗಂಡು : ನಿನ್ನ ಬಳುಕು ನಡಿಗೆಯಲ್ಲಿ ತಾಳ ಸಿಕ್ಕಿತು ನನ್ನ ಹಾಡಿಗೇ ... 
ಹೆಣ್ಣು : ನಿನ್ನ ಕಣ್ಣ ಜಾಡಿನಲ್ಲಿ ದಾರಿ ಕಂಡಿತು... ಮನದ ಗೂಡಿಗೆ  

ಗಂಡು : ನಿನ್ನ ಓರೇ ನೋಟ ನನ್ನ ಕಂಗಳನ್ನು ಕೆಣಕಿತು... 
ಹೆಣ್ಣು : ಮನದ  ಬಲೆಗೆ ಸಿಕ್ಕಿ ಬೇರೆ ಮನದಿ ಕುಣಿಯಿತು... 
ಗಂಡು : ನಿನ್ನ ಓರೇ ನೋಟ ನನ್ನ ಕಂಗಳನ್ನು ಕೆಣಕಿತು... 
ಹೆಣ್ಣು : ಮನದ  ಬಲೆಗೆ ಸಿಕ್ಕಿ ಬೇರೆ ಮನದಿ ಕುಣಿಯಿತು... 
ಗಂಡು : ಚದರಿಗಿರುವ ಕುರುಳ ಕಂಡು ಮರುಳು ಮನವು ಕೆರಳಿತು.. 
            ಮಾಟವಾದ ಮೈಯ್ಯ ಕಂಡು ನೋಟ ಇಲ್ಲೇ ನಿಂತಿತು   
            ನಿನ್ನ ಬಳುಕು ನಡಿಗೆಯಲ್ಲಿ ತಾಳ ಸಿಕ್ಕಿತು ನನ್ನ ಹಾಡಿಗೇ ... 
ಹೆಣ್ಣು : ನಿನ್ನ ಕಣ್ಣ ಜಾಡಿನಲ್ಲಿ ದಾರಿ ಕಂಡಿತು... ಮನದ ಗೂಡಿಗೆ  

ಹೆಣ್ಣು : ತೋಟದಲ್ಲಿ ಹೂವ ಕಂಡು ದುಂಬಿ ಹಾರಿ ಬಂದಿತು.. 
ಗಂಡು : ಹೂವಲಿರುವ ಅಂದಚೆಂದ ದುಂಬಿಯನ್ನು ಸೆಳೆಯಿತು 
ಹೆಣ್ಣು : ತೋಟದಲ್ಲಿ ಹೂವ ಕಂಡು ದುಂಬಿ ಹಾರಿ ಬಂದಿತು.. 
ಗಂಡು : ಹೂವಲಿರುವ ಅಂದಚೆಂದ ದುಂಬಿಯನ್ನು ಸೆಳೆಯಿತು 
ಹೆಣ್ಣು : ಹೂವಿನಿಂದ ಜೇನು ಹೀರಿ ದುಂಬಿಯೇನೋ ಹಾಡಿತು 
          ಒಲವಿನಿಂದ ಗೆಲುವು ತಂದು ಪ್ರೀತಿ ಪಾಠ ಕಲಿಸಿತು 
ಗಂಡು : ನಿನ್ನ ಬಳುಕು ನಡಿಗೆಯಲ್ಲಿ ತಾಳ ಸಿಕ್ಕಿತು ನನ್ನ ಹಾಡಿಗೇ ... 
ಹೆಣ್ಣು : ನಿನ್ನ ಕಣ್ಣ ಜಾಡಿನಲ್ಲಿ ದಾರಿ ಕಂಡಿತು... ಮನದ ಗೂಡಿಗೆ  
ಗಂಡು : ನಿನ್ನ ಬಳುಕು ನಡಿಗೆಯಲ್ಲಿ ತಾಳ ಸಿಕ್ಕಿತು ನನ್ನ ಹಾಡಿಗೇ ... 
ಹೆಣ್ಣು : ನಿನ್ನ ಕಣ್ಣ ಜಾಡಿನಲ್ಲಿ ದಾರಿ ಕಂಡಿತು... ಮನದ ಗೂಡಿಗೆ  
--------------------------------------------------------------------------------------------------------------------------

No comments:

Post a Comment