918. ನಾರಿ ಮುನಿದರೆ ಮಾರಿ (೧೯೭೨)



ನಾರಿ ಮುನಿದರೆ ಮಾರಿ ಚಿತ್ರದ ಹಾಡುಗಳು 
  1. ಮಾತೆಯ ಮಮತೆಯ ರೂಪಗಳೇ 
  2. ನಮ್ಮೂರನಾಗೇ ನಾನೊಬ್ಬನೇ ಜಾಣ 
  3. ಗೋಪಿಲೋಲ ಹೇ ಗೋಪಾಲ 
ನಾರಿ ಮುನಿದರೆ ಮಾರಿ (೧೯೭೨)
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಗೀತಪ್ರಿಯಾ ಗಾಯನ : ಪಿ.ಸುಶೀಲಾ

ಆಆಆ... ಆ.. ಹೂಂ..ಹೂಂ
ಮಾತೆಯ ಮಮತೆಯ ರೂಪಗಳೇ ಎಲ್ಲರ ಮನೆಗಳ ದೀಪಗಳೇ
ಮಾತೆಯ ಮಮತೆಯ ರೂಪಗಳೇ ಎಲ್ಲರ ಮನೆಗಳ ದೀಪಗಳೇ
ಮಲಗಿ ಮಲಗಿ ಹಾಯಾಗಿ ನಾಳೆಯ ಆಸೆಯ ಕುಡಿಯಾಗಿ
ಉಳುಲುಲಾಯಿ ಉಳುಲುಲಾಯಿ

ಜೋ ಜೋ ಜೋ ಜೋ ಎನ್ನುತಲಿ ಜೋಗುಳ ಹಾಡುವ ಮಾತೆಯರಿಲ್ಲ
ತಮ್ಮಯ ಮಕ್ಕಳ ಮುದ್ದಾಡಿ ತೊಟ್ಟಿಲ ತೂಗುವ ಕೈಗಳೂ ಇಲ್ಲ
ನಾನರಿಯೇ ಇಂದು ತಾಯ್ತನವ ಆದರೂ ಬಲ್ಲೆ ಎಳೆಮನವ
ಅದಕ್ಕಾಗಿ ಬಂದಿಹೆ ನಿಮಗಾಗಿ ನಿಮ್ಮಯ ಸೇವೆಯ ಸಲುವಾಗಿ

ನಿಮಗಿಂದು ಲೋಕವು ನೀಡಿರುವ ಅಳುವೆಲ್ಲಾ ಇರಲಿ ನಮಗಾಗಿ
ನಾಳೆಯ ಬಾಳನ್ನು ರೂಪಿಸುವ ನಗುವೆಲ್ಲಾ ಇರಲಿ ನಿಮಗಾಗಿ
ರಾತ್ರಿಯ ನಾವು ಕಳೆಯಲೇಬೇಕು ಹಗಲನ್ನು ಕಾಣುವ ಸಲುವಾಗಿ
ಮಾತೆಯ ಮಮತೆಯ ರೂಪಗಳೇ ಎಲ್ಲರ ಮನೆಗಳ ದೀಪಗಳೇ
ಮಲಗಿ ಮಲಗಿ ಹಾಯಾಗಿ ನಾಳೆಯ ಆಸೆಯ ಕುಡಿಯಾಗಿ
ಉಳುಲುಲಾಯಿ ಉಳುಲುಲಾಯಿ
--------------------------------------------------------------------------------------------------------------------------

ನಾರಿ ಮುನಿದರೆ ಮಾರಿ (೧೯೭೨)
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಗೀತಪ್ರಿಯಾ ಗಾಯನ : ಪಿ.ಸುಶೀಲಾ

ಕೃಷ್ಣಾ .. ಗೋಪಿಲೋಲ... ಹೇ..ಹೇ. ಗೋಪಾಲ
ಗೋಪಿಲೋಲ ಹೇ ಗೋಪಾಲ
ಈ ಜಗವೆಲ್ಲಾ ನಿನ್ನದೇ ಜಾಲ ಏತಕೆ ಈ ಲೀಲಾ
ಗೋಪಾಲಕೃಷ್ಣ  ಏತಕೆ ಈ ಲೀಲಾ
ಗೋಪಿಲೋಲ ಹೇ ಗೋಪಾಲ

ನೀನೇ ತುಂಬಿದ ಆಸೆಗಳಲ್ಲಿ ನೀನೇ ನಿರಾಸೆಯ ತೊರುವೆಯಾ
ನೀನೇ ಉರಿಸಿದ ದೀಪಗಳನ್ನು ನೀನೇ ಆರಿಸಿ ನೋಡುವೆಯಾ
ನೀನೇ ನೀಡಿದ ಕಣ್ಣುಗಳಲ್ಲಿ ನೀನೇ ತುಂಬುವೆ ಕಂಬನಿಯಾ
ಗೋಪಾಲಕೃಷ್ಣ .. ತುಂಬುವೆ ಕಂಬನಿಯಾ
ಗೋಪಿಲೋಲ ಹೇ ಗೋಪಾಲ

ಸುಂದರ ಹೂಗಳ ಜೊತೆಯಲ್ಲಿಯೇ ನೀ ಮುಳ್ಳಗಳನ್ನು ಸೇರಿಸುವೆ 
ಬೆಳ್ಳನೆ ಬೆಳಕಿನ ಜೊತೆಯಲೇ ನೀನು ಕರಿ ನೆರಳನ್ನು ತೋರಿಸುವೆ
ಲೋಕದ ಎಲ್ಲ ಸೂತ್ರವ ಹಿಡಿದು ಎಲ್ಲಿಯೋ ಅಡಗಿ ಆಡಿಸುವೆ
ಗೋಪಾಲಕೃಷ್ಣ ..ಅಡಗಿ ಆಡಿಸುವೆ
ಗೋಪಿಲೋಲ ಹೇ ಗೋಪಾಲ ಈ ಜಗವೆಲ್ಲಾ ನಿನ್ನದೇ ಜಾಲ
ಏತಕೆ ಈ ಲೀಲಾ ಗೋಪಾಲಕೃಷ್ಣ  ಏತಕೆ ಈ ಲೀಲಾ
ಗೋಪಿಲೋಲ ಹೇ ಗೋಪಾಲ 
-------------------------------------------------------------------------------------------------------------------------

ನಾರಿ ಮುನಿದರೆ ಮಾರಿ (೧೯೭೨)
ಸಂಗೀತ : ರಾಜನ್ ನಾಗೇಂದ್ರ, ಸಾಹಿತ್ಯ: ಗೀತಪ್ರಿಯಾ ಗಾಯನ : ಎಸ್. ಪಿ.ಬಿ., ಎಲ್. ಆರ್.ಈಶ್ವರಿ
ಹೆಣ್ಣು : ಹಹ್ಹಾ..
ಗಂಡು : ಹಹ್ಹಾ.. ನಮ್ಮೂರನಾಗ ನಾನೊಬ್ಬನೇ ಜಾಣ
            ನಮ್ಮೂರನಾಗ ನಾನೊಬ್ಬನೇ ಜಾಣ
             ನನ್ ಹಾಡುಂದ್ರೆ  ಎಲ್ಲಾರಗೂ ಪ್ರಾಣ
            ನಾ ಹಾಡೋಕೆ ಬಾಯ್ ಬಿಟ್ರೇ....ಹ್ಹಾಂ..
            ಹ್ಯಾ..ಹ್ಯಾ..ಹ್ಯಾ.. ಏಯ್ ಬಾಯ್ ಮುಚ್ಚು ಕತ್ತೇ
            ಹಾಡೋಕೆ ಬಾಯ್ ಬಿಟ್ರೇ ಸರಸರನೆ ಹೋರಡುತ್ತೇ
            ಸಪ್ತ ಸ್ವರದ ಬಾಣ ನಮ್ಮೂರನಾಗ ನಾನೊಬ್ಬನೇ ಜಾಣ
ಹೆಣ್ಣು : ಓಹೋಹೋ.. ಇವೆಂದೆಲ್ಲಾ ಬುರುಡೆ ಪುರಾಣ
          ಇವನ್ ಹಾಡೆಂದರೇ ಹಾರುತ್ತೇ ಪ್ರಾಣ
          ಇವನು  ಹಾಡೋಕೆ ಬಾಯ್ ಬಿಟ್ರೇ... ಹ್ಹಾಂ...  
          ಹಾಡೋಕೆ ಬಾಯ್ ಬಿಟ್ರೇ. ಹೆದರಕೊಂಡು ಓಡುತ್ತೇ ನಮ್ಮೂರ ಕೋಣ 
          ಇವೆಂದೆಲ್ಲಾ ಬುರುಡೆ ಪುರಾಣ 
ಗಂಡು : ಹ್ಹಹ್ಹ..  ನಮ್ಮೂರನಾಗ ನಾನೊಬ್ಬನೇ ಜಾಣ

ಗಂಡು : ಹೋದ್ ವರ್ಷ ಒಂದ್ಸಾರೀ... 
ಹೆಣ್ಣು : ಒಂದ್ಸಾರೀ.. ಕಿವುಡುರನಲ್ಲಾಯಿತು ಇವನ ಕಚೇರಿ... 
ಗಂಡು : ದನಿಸ ಮದನಿಸ ಮಪದನಿಸ ಗಮಪದನಿಸ 
            ಈ ವರ್ಷ ಕೇಳೋಕೆ ನನ್ನ  ಕಚೇರಿ
            ಅಲ್ಲಿಂದ ಇಲ್ಲಿಂದ ಜನಗುಂಪು ಸೇರಿ 
ಹೆಣ್ಣು : ಅಹ್ಹಹ್ಹ.. ಅತ್ತಲಿಂದ ಇತ್ತಲಿಂದ ಹಿಂದಿಂದ ಮುಂದಿಂದ 
            ಮರುವಾದೆ ಮಾಡಿದ್ರು ಕಲ್ಲುಗಳ ಬೀರಿ 
            ಅಯ್ಯೋ ಆಮೇಲೆ ಮಾಮ 
            ಈ ಮಾಮ ಈ ಮಾಮ ಅಲ್ಲಿಂದ ಕೂಡ್ಲೇ ಪರಾರಿ 
 ಗಂಡು : ಹ್ಯಾ..ಹ್ಯಾ..ಹ್ಯಾ..ನಮ್ಮೂರನಾಗ ನಾನೊಬ್ಬನೇ ಜಾಣ
            ನನ್ ಹಾಡೆಂದರೇ ಎಲ್ಲರಿಗೂ ಪಂಚಪ್ರಾಣ 

ಹೆಣ್ಣು : ನನ್ನ ಕುಣಿತ ಅಂದ್ರೇ...
ಗಂಡು : ಅಂದ್ರೇ... ಅದು ನಡೆಯಬೇಕು ಕುರುಡೂರಿನಲ್ಲೇ
ಹೆಣ್ಣು : ನಾ ಗೆಜ್ಜೆ ಕಟ್ಟಕೊಂಡು ಹೆಜ್ಜೆ ಹಾಕಿದ್ರೇ 
          ಜನರೆಲ್ಲಾ ದಂಗಾಗಿ ಮೆಚ್ತಾರೆ ನೋಡಿ 
ಗಂಡು : ಆಹಾ ನಿನ್ನ ಸಣ್ಣ ನಡುವನ್ನ
           ಆಹಾ ನಿನ್ನ ಸಣ್ಣ ನಡುವನ್ನ ನೋಡದೇಟಿಗೆ ಅವರೆಲ್ಲ 
           ಎದ್ದೆದ್ದು ಬಿದ್ದಬಿದ್ದು ಹೋಗ್ತಾರೆ ಓಡಿ 
ಹೆಣ್ಣು : ಹೌದಾ ಮಾಮ? ಆಮೇಲೆ ?
ಗಂಡು : ಮಂಕಾಗಿ ... ಅಹ್ಹಹ  ಮಂಕಾಗಿ ಹರಿಸ್ತಾಳೆ ಕಣ್ಣೀರ ಕೋಡಿ 
            ಕಣ್ಣೀರ ಕೋಡಿ... ಊಹುಂ ಊಹುಂ ಊಹುಂ
ಇಬ್ಬರು : ಲಲ್ಲಲ್ಲಲ್ಲ ಲಲ್ಲ ಲಾಲಲ್ಲಲ್ಲ              
--------------------------------------------------------------------------------------------------------------------------



No comments:

Post a Comment