919. ಕೌಬಾಯ್ ಕಳ್ಳ (1973)



ಕೌಬಾಯ್ ಕಳ್ಳ ಚಲನಚಿತ್ರದ ಹಾಡುಗಳು 
  1. ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯಾ
  2. ಚಿನ್ನ ನಿನ್ನ ಕಂಡೆನು ಕನಸಲ್ಲಿ
  3. ಭಂ ಭಂ ಭಂ ಭಜಿಸು ಭಂ ಭಂ ಭಂ 
  4. ಒಂದೆನ್ನು ಒಂಟಿ ಹೆಣ್ಣು 
ಕೌಬಾಯ್ ಕಳ್ಳ  (1973) - ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯಾ
ಸಂಗೀತ : ರಾಜನ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ.ಪಿ.ಬಿ, ಎಲ್.ಆರ್.ಈಶ್ವರಿ 

ಗಂಡು : ಯಾರಿಗೇ .. ಹೋಯ್  ಯಾರಿಗೇ ... ಅಹ್ಹ..  ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯಾ
           ಇಲ್ ಯಾರಿಗೆ ಲಕ್ಕಮ್ಮ ಜೋಡಿ ಆಗ್ತೀಯಾ
           ಹಾಯ್ ಚಿನ್ನ ಹಾಯ್ ರನ್ನ ಈ ದಾಡಿಗಿಂತ ಬೇರೆ ಜೋಡಿ ಇಲ್ಲ ಯಾರಿಗೇ ... 
ಹೆಣ್ಣು : ಓಓಓಓಓ .. ಹೋಯ್.. ಯಾರಿಗೇ  ಕುಳ್ಳಪ್ಪ ಮೋಡಿ ಮಾಡ್ತೀಯಾ
          ಇಲ್ ಯಾರಿಗೆ ಡೊಳ್ಳಪ್ಪ ಜೋಡಿ ಆಗ್ತೀಯಾ
         ಪುರ್ ಬಾಬಾ ಪುರ್ ಬಾಬಾ ನಿನ್ನ ಮಾಯಾ ಮಂತ್ರ ಇಲ್ಲಿ ಸಿಕ್ಕೋದಿಲ್ಲ 
ಗಂಡು : ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯಾ ಇಲ್ ಯಾರಿಗೆ ಲಕ್ಕಮ್ಮ ಜೋಡಿ ಆಗ್ತೀಯಾ
            ಅರೇ ಲಕ್ಕಮ್ಮಾ ರುಕ್ಕಮ್ಮ ಲಕ್ಕಮ್ಮಾ ರುಕ್ಕಮ್ಮ ಲಕ್ಕಮ್ಮಾ ರುಕ್ಕಮ್ಮಾ....  
 
ಗಂಡು : ಅಂದಗಾತಿ ಎಂದು ಸೊಕ್ಕಿ ಜೋರ್ ಮಾಡ್ತಿಯಾ 
ಈ ಮಂತ್ರಗಾರ ಬಾಬನಿಗೆ ಸವಾಲ್ ಹಾಕ್ತಿಯಾ 
ಹೆಣ್ಣ ಕಂಡು ಆಸೆಯಿಂದ ಕಣ್ ಕಣ್ ಬಿಡ್ತೀಯಾ 
ಬಾ ಇಂದ್ರಜಾಲದಲ್ಲಿ ಇಂದು ನನ್ನ ಗೆಲ್ಲತೀಯ
ಅಹ್ಹ ಬಾ.. ಇಲ್ಲಿ ನಿಲ್ಲು ಅಲ್ಲಿ ನನ್ನ ಎದುರಲ್ಲಿ 
ಛೂ ಮಾಯಾ ಮಾಡಿ ಬಿಡುವೆ ನೋಡು ಒಂದೇ ಕ್ಷಣದಲಿ 
ಪುರ್ ಬಾಬಾ ಪುರ್ ಬಾಬಾ ನಿನ್ನ
ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯಾ
ಇಲ್ ಯಾರಿಗೆ ಲಕ್ಕಮ್ಮ ಜೋಡಿ ಆಗ್ತೀಯಾ 

ಜಾದೂಗಾರ ಎಂದು ಸೊಕ್ಕಿ ಜೋರು ಮಾಡ್ತಿಯಾ 
ಈ ಮಂತ್ರಗಾತಿ ಮುಂದೆ ನಿನ್ನ ಬಾಲ ಬಿಚ್ತಿಯಾ 
ಗೆದ್ದೇ ಎಂದು ಜಂಭ ಕೊಚ್ಚಿ ಆಟ ಆಡ್ತಿಯಾ 
ಹೆಣ್ಣೇ ಹದ್ದು ಮೀರಿ ನಡೆದು ನನಗೆ ಕೋಪ ತರತಿಯಾ 
ಈ ಕೋಪಕೆ ಈ ತಾಪಕೆ ಬೆದರುವಳಲ್ಲ 
ನೀ ಆಕಾಶಕೆ ಹಾರಿದರು ನಿನ್ನ ಬಿಡೋಲ್ಲ 
ಪುರ್ ಬಾಬಾ ಪುರ್ ಬಾಬಾ ನಿನ್ನ
ಯಾರಿಗೆ ರುಕ್ಕಮ್ಮ ಮೋಡಿ ಮಾಡ್ತಿಯಾ
ಇಲ್ ಯಾರಿಗೆ ಲಕ್ಕಮ್ಮ ಜೋಡಿ ಆಗ್ತೀಯಾ 
--------------------------------------------------------------------------------------------------------------------------

ಕೌಬಾಯ್ ಕಳ್ಳ  (1973) - ಚಿನ್ನ ನಿನ್ನ ಕಂಡೆನು ಕನಸಲ್ಲಿ
ಸಂಗೀತ : ರಾಜನ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : 

ಚಿನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೇ ನನ್ನೇ ಕೊಡುವೆನು ಬಾ ಇಲ್ಲಿ
ನೋಟದಿ ಸುಮ್ಮನೆ ಏತಕೆ ಕೊಲ್ಲುವೇ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ
ಚಿನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೇ ನನ್ನೇ ಕೊಡುವೆನು ಬಾ ಇಲ್ಲಿ
ನೋಟದಿ ಸುಮ್ಮನೆ ಏತಕೆ ಕೊಲ್ಲುವೇ
ಮುತ್ತಿನ ಕಾಣಿಕೆ ತಂದರೆ ಗೆಲ್ಲುವೆ

ಈ ಗುಲಾಬಿ ಬೇಕೇ ಶರಾಬು ಬೇಕೇ
ಆ ವಿನೋದ ಬೇಕೇ ನಿಧಾನವೇಕೆ
ಜಾಣೆ ಜಾಣೆ ನಿನ್ನಂಥ ಜಾಣೆ
ಕಾಣೆ ಕಾಣೆ ಆ ದೇವರ ಆಣೆ

ಮಾತಲಿ ಸ್ನೇಹ ಮನಸಲಿ ದ್ರೋಹ
ಬಲ್ಲೆ ಬಲ್ಲೆ ನಿನ್ನ ಆಟವ ಬಲ್ಲೆ
ಪ್ರೇಮ ತುಂಬಿದ ಕಂಗಳೇ ಅಂದ
ರಾಗ ಭಾವ ಬೆರೆತಾಗ ಚೆಂದ
ತಾಳ ಮೇಳಕೆ ನಾಟ್ಯವು ಚೆನ್ನ
ಚುಂಚುಂ ಚ ನನನ ಚುಂಚುಂ
ಚನನನನ ಚುಂ ನನನನನನ
ಜಾಣೆ ಜಾಣೆ ನಿನ್ನಂಥ ಜಾಣೆ
ಕಾಣೆ ಕಾಣೆ ಆ ದೇವರ ಆಣೆ
ಚಿನ್ನ ನಿನ್ನ ಕಂಡೆನು ಕನಸಲ್ಲಿ
ನನ್ನೇ ನನ್ನೇ ಕೊಡುವೆನು ಬಾ ಇಲ್ಲಿ 

ಈ ಸಿಂಗಾರಿ ಬೇಕೇ ಹ್ ವೈಯ್ಯಾರಿ ಬೇಕೇ 
ಆ ಮೈ ಸೋಕಬೇಕೆ ಹ್ ಮತ್ತೇರಬೇಕೇ 
ಒಲವು ತುಂಬಿದ ಹೂವಿರುವಲ್ಲಿ 
ಛಲದ ಮುಳ್ಳಿಗೆ ತಾಣವೆಲ್ಲಿ 
ಆ ಹೂವಂತೂ ನೀನಲ್ಲ ಮುಳ್ಳಂತು ನಾನಲ್ಲ 
ಇವನೆಂದು ನನ್ನವನೇ 
--------------------------------------------------------------------------------------------------------------------------

ಕೌಬಾಯ್ ಕಳ್ಳ  (1973) - ಭಂ ಭಂ ಭಂ ಭಜಿಸು ಭಂ ಭಂ ಭಂ 
ಸಂಗೀತ : ರಾಜನ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ. ಕೋರಸ್ 

ಕೋರಸ್ : ಹೇ... ಹೇ... 
ಗಂಡು : ಭಂ ಭಂ ಭಂ ಭಜಿಸು ಭಂ ಭಂ ಭಂ ಓಂ ನಮಃ ಶಿವಾಯ... ಎಂದು ಜಪಿಸಿದರೇ ಇಲ್ಲಾ ಅಪಾಯ 
ಕೋರಸ್ : ಭಂ ಭಂ ಭಂ ಭಜಿಸು ಭಂ ಭಂ ಭಂ ಓಂ ನಮಃ ಶಿವಾಯ... ಎಂದು ಜಪಿಸಿದರೇ ಇಲ್ಲಾ ಅಪಾಯ 
ಗಂಡು : ನಂಬೂ ಶಿವನ.. ಪುಣ್ಯ ಚರಣ... ಪಡೆಯೋ ಜ್ಞಾನ..  ಮಾಡಿ ಧ್ಯಾನ 
ಕೋರಸ್ : ನಮಃ ಶಿವಾಯಃ (ಓಂ) ನಮಃ ಶಿವಾಯಃ (ಓಂ) ನಮಃ ಶಿವಾಯಃ (ಓಂ) ನಮಃ ಶಿವಾಯಃ 
                ನಮಃ ಶಿವಾಯಃ ನಮಃ ಶಿವಾಯಃ ನಮಃ ಶಿವಾಯಃ ನಮಃ ಶಿವಾಯಃ 
ಎಲ್ಲರು : ಭಜಿಸು ಭಂ ಭಂ ಭಂ ಓಂ ನಮಃ ಶಿವಾಯ... ಎಂದು ಜಪಿಸಿದರೇ ಇಲ್ಲಾ ಅಪಾಯ 

ಗಂಡು : ಮಣ್ಣೇನು ಹಣ್ಣೇನು ಸಾಕುವಿಗೆ ಉಂಟೇ .. ಹಣ್ಣನೇ ತಿನ್ನವೇನು ನಿಮಗಾಗೇ ಇಂದೇ.. 
            ಹೆಣ್ಣೇನು ಕಂಡೆನೋ ಸನ್ಯಾಸಿದೊಂದೇ... ಭಂ.. ಓಂ ಭಕುತ ಭಂ.. ಓಂ ಭಕುತ     
            ಹೆಣ್ಣೇನು ಕಂಡೆನೋ ಸನ್ಯಾಸಿದೊಂದೇ... ಹೆಣ್ಣನೇ ಬಯಸುವೆನು ಆನಂದದಿಂದೇ 
            ಹೆಣ್ಣನೇ ಬಯಸುವೆನು ಆನಂದದಿಂದೇ 
            ಭಂ ಭಂ ಭಂ  ಭಂ ಭಂ ಭಂ 
ಎಲ್ಲರು : ಭಜಿಸು ಭಂ ಭಂ ಭಂ ಓಂ ನಮಃ ಶಿವಾಯ... ಎಂದು ಜಪಿಸಿದರೇ ಇಲ್ಲಾ ಅಪಾಯ 

ಗಂಡು : ಕಲಿಗಾಲ ಮಹಿಮೆಯನು ನಾನೆಲ್ಲ ಬಲ್ಲೇ .. ಏಏಏಏಏ ಅಹ್ಹಹ್ಹಹ್ಹ..ಹೇ 
            ಕಲಿಗಾಲ ಮಹಿಮೆಯನು ನಾನೆಲ್ಲ ಬಲ್ಲೇ ಆಗೋದು ಹೋಗೋದು ನಾ ಅರಿವೇ ಇಲ್ಲೇ 
            ಹ್ಹಾ... ಹೌದೂ .. ಭೂತ ಪ್ರೇತಗಳನ್ನೂ ಬಲಿ ಹಾಕಬಲ್ಲೇ .. ಡಾಂ ಡೂಮ್ ಬೂಸ್ಸ್ ಬೂಸ್ಸ್ ಹೈಸಾ 
            ಭೂತ ಪ್ರೇತಗಳನ್ನೂ ಬಲಿ ಹಾಕಬಲ್ಲೇ ದುಷ್ಟರನು ಅಟ್ಟಿಸವೇ ಶಿಷ್ಟರನು ಭಕ್ಷಿಸುವೇ.. ಅ.. ಅಹ್ಹಹ್ಹ..  
            ದುಷ್ಟರನು ಭಕ್ಷಿಸುವೇ. ಶಿಷ್ಟರನು ರಕ್ಷಿಸುವೇ ಬಭಂಭಂ 
ಎಲ್ಲರು : ಭಜಿಸು ಭಂ ಭಂ ಭಂ ಓಂ ನಮಃ ಶಿವಾಯ... ಎಂದು ಜಪಿಸಿದರೇ ಇಲ್ಲಾ ಅಪಾಯ 
            ನಂಬೂ ಶಿವನ.. ಪುಣ್ಯ ಚರಣ... ಪಡೆಯೋ ಜ್ಞಾನ..  ಮಾಡಿ ಧ್ಯಾನ 
            ಓಂ ನಮಃ ಶಿವಾಯಃ (ಓಂ) ನಮಃ ಶಿವಾಯಃ (ಓಂ) ನಮಃ ಶಿವಾಯಃ (ಓಂ) ನಮಃ ಶಿವಾಯಃ 
            ನಮಃ ಶಿವಾಯಃ ನಮಃ ಶಿವಾಯಃ ನಮಃ ಶಿವಾಯಃ ನಮಃ ಶಿವಾಯಃ 
-------------------------------------------------------------------------------------------------------------------------

ಕೌಬಾಯ್ ಕಳ್ಳ  (1973) - ಒಂದೆನ್ನು ಒಂಟಿ ಹೆಣ್ಣು 
ಸಂಗೀತ : ರಾಜನ ನಾಗೇಂದ್ರ ಸಾಹಿತ್ಯ : ಚಿ.ಉದಯಶಂಕರ ಗಾಯನ : ಪಿ.ಸುಶೀಲಾ. ಕೋರಸ್ 

ಕೋರಸ್ : ಹ್ಹಹ್ಹಹ್ಹಹ್ಹ..ಹ್ಹಾ ಹ್ಹಹ್ಹಹ್ಹಹ್ಹ..ಹ್ಹಾ ಹ್ಹೀಹ್ಹೀಹ್ಹೀಹ್ಹೀ ಹ್ಹಹ್ಹಹ್ಹಹ್ಹ..ಹ್ಹಾ ಹ್ಹಹ್ಹಹ್ಹಹ್ಹ..ಹ್ಹಾ ಹ್ಹೀಹ್ಹೀಹ್ಹೀಹ್ಹೀ 
ಹೆಣ್ಣು : ಒಂದೇನ್ನು ಒಂಟಿ ಹೆಣ್ಣು ಬಲ್ಲೆಯಾ ನೀನೂ ... 
          ಎರಡೇನ್ನು ಎರಡು ಕಣ್ಣು ಕಂಡಿಹೇ ಏನೂ .. ಮೂರೇನ್ನು ಹೇಳೇನೋ    
          ಮೂರೇನ್ನು ಹೇಳೇನೋ ತೋರೇನೋ.. ಅಹ್ಹ.. ಅಹ್ಹ..ಅಹ್ಹ..ಅಹ್ಹ..ಅಹ್ಹ..ಅಹ್ಹ..ಅಹ್ಹ..ಅಹ್ಹ..
ಕೋರಸ್ : ಅಹ್ಹ.. ಜೂಬುಜುಬು     
ಹೆಣ್ಣು : ಒಂದೇನ್ನು ಒಂಟಿ ಹೆಣ್ಣು ಬಲ್ಲೆಯಾ ನೀನೂ ... ಎರಡೇನ್ನು ಎರಡು ಕಣ್ಣು ಕಂಡಿಹೇ ಏನೂ .. 

ಕೋರಸ್ : ಹೂ..ಆ ಹೂ..ಆ 
ಹೆಣ್ಣು : ನಾಲ್ಕ ಎಂದರೇ ನಾಲ್ವರೂ ಇಹರೂ ನನ್ನನ್ನೂ ಬಳಸೀ .. (ಹೇ...)
          ಐದನೇಯವ ನಿನ್ನನ್ನೇ ನೆನೆಸಿ ಬಂದೆನು ಬಯಸೀ ...  
ಕೋರಸ್ : ಲಾಲಲಲಾಲಾ ರರ ರೂಬಾಬಾಬಬಬಬ ರೂಬಾಬಾಬಬಬಬ ಹ್ಹಾ 
ಹೆಣ್ಣು : ಕಾಣಿಸದ ಅಂದವ ಕಾಣೋ ಇನಿಯನ ಕರೆಸೀ ...  
          ಮೊಜಿಸುವ ಮೋಜನೇಲ್ಲಾ  ನೀ ಅನುಭವಿಸೀ .. 
          ಓಯ್ ಮನಸ್ಸಿಲಿಡು (ಆ) ಕಣ್ಣಲಿಡು (ಆ) ಹೊನ್ನದ ನಡು ಬಳುಕಿಸಿ ನೀ ನೋಡು     
         ಒಂದೇನ್ನು ಒಂಟಿ ಹೆಣ್ಣು ಬಲ್ಲೆಯಾ ನೀನೂ ... ಎರಡೇನ್ನು ಎರಡು ಕಣ್ಣು ಕಂಡಿಹೇ ಏನೂ .. 

ಹೆಣ್ಣು : ಉಕ್ಕಿನ ಈ ತೋಳಿನಿಂದ.. ಅಮುದೆಡೆಯೆನ್ನ... ಹಣ್ಣಂತೆ ಹರೆಯದ ಹೆಣ್ಣು ಕೇಳೋ ಚೆನ್ನ   
ಕೋರಸ್ : ರ ರಬಾಬಾಬಬಬಬ ರೂಬಾಬಾಬಬಬಬ ಹ್ಹಾ 
ಹೆಣ್ಣು : ಹಾಯ್... ಮೃದುವಾಗಿ ಮೈಯ್ಯನೂ ಬಳಸು ಕಾಣುವೆ ಕನಸೂ .. 
          ತುಟಿ ಮೇಲೆ ತುಟಿಯನು ಇರಿಸು ಆಗಲೇ ಸೊಗಸೂ .. 
          ಹೋಯ್ .. ಮಸಯಲೇ ಭುಜ (ಓ) ಮನಸ್ಸಿಗೇ ಮಜಾ (ಹ್ಹ) 
          ಎಂಬುದೇ ನಿಜ ತಿಳಿಯಲೂ ಬಾರಾ ರಾಜ
         ಒಂದೇನ್ನು ಒಂಟಿ ಹೆಣ್ಣು ಬಲ್ಲೆಯಾ ನೀನೂ ... (ಆಹ್ಹಾ...) 
--------------------------------------------------------------------------------------------------------------------------

No comments:

Post a Comment