ನಗುವ ಹೂವು ಚಿತ್ರದ ಹಾಡುಗಳು
- ಒಂದೇ ಒಂದು ಹೂವೂ
- ಈ ಶುಭ ದಿನದೇ ನನ್ನ
- ಗುಲಾಬಿ ಓ ಗುಲಾಬಿ
- ಇರಬೇಕು ಇರಬೇಕು ಅರಿಯದ
ನಗುವ ಹೂವು (1971)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ
ಹೂಂ ಹೂಂ ಆ..ಆ..ಆ
ಒಂದೇ ಒಂದು ಹೂವು
ಒಂದೇ ಒಂದು ಹೂವು ನನ್ನ ಹೂದೋಟದಲಿ
ಆ ಹೂವ ಅಂದ ಚಂದ ಏನೆಂದು ಹೇಳಲಿ ಹೇಗೆ ಹಾಡಲಿ
ಒಂದೇ ಒಂದು ಹೂವು ನನ್ನ ಹೂದೋಟದಲಿ
ಆ ಹೂವ ಅಂದ ಚಂದ ಏನೆಂದು ಹೇಳಲಿ ಹೇಗೆ ಹಾಡಲಿ
ಮನದಾ ಗುಡಿಯಾ ಅಂಗಳದೇ ನಗೆಯ ಪನ್ನೀರ ಚೆಲ್ಲಿ
ಒಲವಾ ಸೌಗಂಧ ಸೂಸಿ ತಲೆದೂಗಿ ಉಯ್ಯಾಲೆ ಆಡುತಿದೆ
ಆ ಹೂವ ಕೀಳಲೇ ಕಣ್ಣಿಂದ ನೋಡಲೇ
ಮನದಾ ಗುಡಿಯಾ ಅಂಗಳದೇ ನಗೆಯ ಪನ್ನೀರ ಚೆಲ್ಲಿ
ಒಲವಾ ಸೌಗಂಧ ಸೂಸಿ ತಲೆದೂಗಿ ಉಯ್ಯಾಲೆ ಆಡುತಿದೆ
ಆ ಹೂವ ಕೀಳಲೇ ಕಣ್ಣಿಂದ ನೋಡಲೇ
ಆಸೆ ಎನಿತೋ ಕಂಗಳಲಿ ಹೂವ ಮುದ್ದಾಡ ಬಯಸಿ
ಆಸೆ ಎನಿತೋ ಕಂಗಳಲಿ ಹೂವ ಮುದ್ದಾಡ ಬಯಸಿ
ಅದನು ಕಣ್ಣಲೇ ಇರಿಸಿ
ಅದನು ಕಣ್ಣಲೇ ಇರಿಸಿ ಮುದದಿಂದ ಒಲವೆಂಬ ನೀರೆರೆವೇ
ಎನ್ನಾಸೆ ತೀರದೆ ಎನ್ನಲ್ಲಿ ಸೇರದೇ
ಒಂದೇ ಒಂದು ಹೂವು ನನ್ನ ಹೂದೋಟದಲಿ
--------------------------------------------------------------------------------------------------------------------------
ನಗುವ ಹೂವು (1971)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ
ಈ ಶುಭ ದಿನದೇ ನನ್ನ ಹಾರೈಕೆ ಆ ದೇವಗೆ
ನೂರೊಂದು ವರುಷ ಜೇನಂಥ ಹರುಷ
ಕೊಡಲೆಂದು ಈ ಬಾಳಿಗೆ
ಈ ಶುಭ ದಿನದೇ ನನ್ನ ಹಾರೈಕೆ ಆ ದೇವಗೆ
ನಿಮ್ಮ ಬಾಳ ಬನದಲಿ ಚಿರ ವಸಂತ ನಲಿಯಲಿ
ನಿಮ್ಮ ಬಾಳ ಬನದಲಿ ಚಿರ ವಸಂತ ನಲಿಯಲಿ
ನಾಳೆ ಎಂಬ ಪುಟದಲಿ ಹೊಸತು ಕಾವ್ಯ ಬರೆಯಲಿ

ಬೆರೆತು ಹೋದ ಹೃದಯವು ಮರೆಯಲಾರದು
ಬೆರೆತು ಹೋದ ಹೃದಯವು ಮರೆಯಲಾರದು
ಬೆಳೆದು ಬಂದ ಗೆಳೆತನ ಅಳಿಸಲಾಗದು
ಲಾಲಾಲ.... ಈ ಶುಭ ದಿನದೇ ನನ್ನ ಹಾರೈಕೆ ಆ ದೇವಗೆ
ನಗುವ ಹೂವು ಬಾಡಬಹುದು ನನ್ನ ಹಾಡು ಬಾಡದು
ನಗುವ ಹೂವು ಬಾಡಬಹುದು ನನ್ನ ಹಾಡು ಬಾಡದು
ಕಣ್ಣು ಒಮ್ಮೆ ಮುಚ್ಚಬಹುದು ಕಂಡ ನೋಟ ಮರೆಯದು
ಈ ಶುಭ ದಿನದೇ ನನ್ನ ಹಾರೈಕೆ ಆ ದೇವಗೆ
ನೂರೊಂದು ವರುಷ ಜೇನಂಥ ಹರುಷ
ನೂರೊಂದು ವರುಷ ಜೇನಂಥ ಹರುಷ
ಕೊಡಲೆಂದು ಈ ಬಾಳಿಗೆ
--------------------------------------------------------------------------------------------------------------------------
ನಗುವ ಹೂವು (1971)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ
ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲೀ ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ

ರವಿಯ ಕಿರಣ ಸೋಕಿ ಅರಳಿದೆ ನೀನೂ
ಇನಿಯನ ಕೈ ಸೋಕಿ ನಾಚಿದೆ ನಾನೂ
ರವಿಯ ಕಿರಣ ಸೋಕಿ ಅರಳಿದೆ ನೀನೂ
ಇನಿಯನ ಕೈ ಸೋಕಿ ನಾಚಿದೆ ನಾನೂ
ಪೂಜೆಗೇ ನೀವೂ ಸೇವೆಗೆ ನಾನೂ
ಮುಡಿಪು ನಮ್ಮ ಈ ಜೀವನ.. ಜೀವನ
ಗುಲಾಬಿ ಓ ಗುಲಾಬಿಮಂಜು ಹನಿ ನಿನ್ನಲ್ಲೀ ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ
ಪೂಜಿಸಿದ ಆ ದೈವ ನನ್ನಲ್ಲಿ ಒಲಿದಿಹುದಮ್ಮಾ
ಪೂಜಿಸಿದ ಆ ದೈವ ನನ್ನಲ್ಲಿ ಒಲಿದಿಹುದಮ್ಮಾ
ಹೊಸತಿ ಸದಾ ಬಾಗಿಲನೋ ಕಣ್ಣೆದಿರೋ ಕರೆದಿಹುದಮ್ಮಾ
ಇದನ್ನು ನಂಬಲೋ ಕನಸು ಎನ್ನಲೋ
ಮರೆಯಲಾರೆಯಾ ಈ ದಿನ ಈ ದಿನ
ಗುಲಾಬಿ ಓ ಗುಲಾಬಿ
ಮಂಜು ಹನಿ ನಿನ್ನಲ್ಲೀ ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ
ಮಂಜು ಹನಿ ನಿನ್ನಲ್ಲೀ ಬೆವರು ಹನಿ ನನ್ನಲ್ಲಿ
ಎಕೋ ನೀ ಬಲ್ಲೆಯಾ ಬಲ್ಲೆಯಾ
--------------------------------------------------------------------------------------------------------------------------
ನಗುವ ಹೂವು (1971)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ :ಸುದರ್ಶನ
ಇರಬೇಕು ಇರಬೇಕು ಅರಿಯದ ಕಂದನ ತರಹ
ಇರಬೇಕು ಇರಬೇಕು ಅರಿಯದ ಕಂದನ ತರಹ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ :ಸುದರ್ಶನ
ಇರಬೇಕು ಇರಬೇಕು ಅರಿಯದ ಕಂದನ ತರಹ
ಇರಬೇಕು ಇರಬೇಕು ಅರಿಯದ ಕಂದನ ತರಹ
ನಗಬೇಕು ಅಳಬೇಕು ಇರುವಂತೇ ಹಣೆ ಬರಹ
ನಗಬೇಕು ಅಳಬೇಕು ಇರುವಂತೇ ಹಣೆ ಬರಹ
ಇರಬೇಕು ಇರಬೇಕು ಅರಿಯದ ಕಂದನ ತರಹ
ಇರಬೇಕು ಇರಬೇಕು ತಾವರೇ ಎಲೆಯ ತರಹ
ಇರಬೇಕು ಇರಬೇಕು ತಾವರೇ ಎಲೆಯ ತರಹ
ಕಣ್ಣೀರೋ ಪನ್ನಿರೋ ಯಾರಲಿ ಮಾಡಲಿ ಕಲಹ
ಯಾರಲಿ ಮಾಡಲಿ ಕಲಹ
ಇರಬೇಕು ಇರಬೇಕು ಅರಿಯದ ಕಂದನ ತರಹ
ಇರಬೇಕು ಇರಬೇಕು ಭರವಸೆ ಬಾಳಲಿ ಮುಂದೇ
ಇರಬೇಕು ಇರಬೇಕು ಭರವಸೆ ಬಾಳಲಿ ಮುಂದೇ
ನೋವಿರಲೀ ನಲಿವಿರಲೀ ಮೂಡಲಿ ಬಾರದು ಹಿಂದೇ
ಮೂಡಲಿ ಬಾರದು ಹಿಂದೇ
ಇರಬೇಕು ಇರಬೇಕು ಅರಿಯದ ಕಂದನ ತರಹ
ಇರಬೇಕು ಇರಬೇಕು ಅರಿಯದ ಕಂದನ ತರಹ
ಅರಿಯದ ಕಂದನ ತರಹ
--------------------------------------------------------------------------------------------------------------------------
No comments:
Post a Comment