ದೇವರ ಮಕ್ಕಳು ಚಿತ್ರದ ಹಾಡುಗಳು
- ದೇವರು ಮಕ್ಕಳು ನಾವೆಲ್ಲಾ
- ಈ ದಿನ ಮಜಾ ಕಂಡೇನು ನಿಜ
- ಬೇಕೇನು ಸಾಮಾನು ನೋಡು
- ಹಾದಿ ಹೂವು ನೀ ಮಗುವೇ
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ.ಜಾನಕಿ
ದೇವರ ಮಕ್ಕಳು ನಾವೆಲ್ಲಾ... ತಿರುಕ..ಧನಿಕ.. ಬೇರಲ್ಲಾ..
ದೇವರ ಮಕ್ಕಳು ನಾವೆಲ್ಲಾ... ತಿರುಕ..ಧನಿಕ.. ಬೇರಲ್ಲಾ..
ಓ.. ಅಯ್ಯಾ.. ಅಮ್ಮಯ್ಯಾ.. ಧರ್ಮಾನೇ ತಾಯಿ ತಂದೆ
ಕಾಸೋಂದ ನೀಡು ಶಿವನೇ...
ಓ.. ಅಯ್ಯಾ.. ಅಮ್ಮಯ್ಯಾ.. ಧರ್ಮಾನೇ ತಾಯಿ ತಂದೆ
ಕಾಸೋಂದ ನೀಡು ಶಿವನೇ...
ನಾ ಕಳ್ಳನಾಗಲಾರೆ.. ಸುಳ್ಳೋ ಒಂದು ಹೇಳಲಾರೇ
ಕೈ ನೀಡಿ ಬೇಡಿದರೆ ಕಾಸಿಲ್ಲ ಎನ್ನುವರೇಕಾಸಿಲ್ಲ ಎನ್ನುವರೇ... ಕಾಸಿಲ್ಲ ಎನ್ನುವರೇ...
ನಿಮ್ಮಂಥಾ ಧಾತರೇ ನಮಗೆಲ್ಲ ಆಸರೇ
ನೀವೇ ದೂರಾದರೇ ಗತಿಯಿಲ್ಲ ಬೇರೆ...
ಓ.. ಅಯ್ಯಾ.. ಅಮ್ಮಯ್ಯಾ.. ಧರ್ಮಾನೇ ತಾಯಿ ತಂದೆ
ಕಾಸೋಂದ ನೀಡು ಶಿವನೇ...
ಈ ನಮ್ಮ ನಾಡಿನಲ್ಲಿ ಚಾಮುಂಡಿ ಊರಿನಲ್ಲಿ
ಬಂಗಾರ ಬೆಳೆವಲ್ಲಿ ಹೇಗೆಂದು ಬೇಡಲಿ
ಕೊಡುವಾತ ಬಾಳಲಿ ಕೈ ತುಂಬ ನೀಡಲಿ
ಆಸೆ ಈಡೇರಲೀ ಸುಖವಾಗಿರಲೀ
ಓ.. ಅಯ್ಯಾ.. ಅಮ್ಮಯ್ಯಾ.. ಧರ್ಮಾನೇ ತಾಯಿ ತಂದೆ
ಕಾಸೋಂದ ನೀಡು ಶಿವನೇ...
-------------------------------------------------------------------------------------------------------------------------
ದೇವರ ಮಕ್ಕಳು (೧೯೭೦)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ.ಜಾನಕಿ
ಈ ದಿನ ಮಜಾ, ಕಂಡೆನು ನಿಜಾ
ಈ ದಿನ ಮಜಾ ಕಂಡೆನು ನಿಜಾ ಆದೇನು ರಾಜಾ
ಇಲ್ಲಾ ಆ ಸಜಾ ನೋವೇ ನೀ ವಜಾ,,
ಈ ದಿನ ಮಜಾ ಕಂಡೆನು ನಿಜಾ ಆದೇನು ರಾಜಾ
ಇಲ್ಲಾ ಆ ಸಜಾ ನೋವೇ ನೀ ವಜಾ,,
ಎಂಥಾ ತಾಯಿ ನಾಡು ಸ್ವರ್ಗಾ ಇಲ್ಲಿ ನೋಡು
ಎಂಥಾ ತಾಯಿ ನಾಡು ಸ್ವರ್ಗಾ ಇಲ್ಲಿ ನೋಡು
ಇಲ್ಲಿ ಜನ್ಮದ ಬೇಡು ಸದಾ ಸುಖ ನೀ ಪಡು
ಈ ದಿನ ಮಜಾ ಕಂಡೆನು ನಿಜಾ ಆದೇನು ರಾಜಾಇಲ್ಲಾ ಆ ಸಜಾ ನೋವೇ ನೀ ವಜಾ,,
ನನ್ನೀ ಪ್ರಾಣದಾಣೆ ಇಂಥಾ ನೆಲವ ಕಾಣೆ
ನನ್ನೀ ಪ್ರಾಣದಾಣೆ ಇಂಥಾ ನೆಲವ ಕಾಣೆನನ್ನ ಕನ್ನಡ ಸೇವೆ ಅದೇ ಗುರಿ ಎನ್ನವೇ
ಈ ದಿನ ಮಜಾ ಕಂಡೆನು ನಿಜಾ ಆದೇನು ರಾಜಾ
ಇಲ್ಲಾ ಆ ಸಜಾ ನೋವೇ ನೀ ವಜಾ,,
ಈ ದಿನ ಮಜಾ ಕಂಡೆನು ನಿಜಾ ಆದೇನು ರಾಜಾ
-----------------------------------------------------------------------------------------------------------------------
ದೇವರ ಮಕ್ಕಳು (೧೯೭೦)
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ.ಜಾನಕಿ
ಹೊಸತರದ ಬೋಂಬೆಯಾ ಒಮ್ಮೆ ಕೊಂಡು ನೋಡು
ಬೇಕೇನು... ಬೇಕೇನು.... ಬೇಕೇನು ಸಾಮಾನು ನೋಡು ನೋಡು
ಹೊಸತರದ ಬೋಂಬೆಯಾ ಒಮ್ಮೆ ಕೊಂಡು ನೋಡು
ಒಡೆಯೋದಿಲ್ಲಾ... ಮುರಿಯೋದಿಲ್ಲಾ...
ಒಡೆಯೋದಿಲ್ಲಾ... ಘಟ್ಟಿ ಮಾಲು ಕೈಲಿ ಮುಟ್ಟಿ ನೋಡು
ಬೇಕೇನು ಸಾಮಾನು ನೋಡು ನೋಡು
ಹೊಸತರದ ಬೋಂಬೆಯಾ ಒಮ್ಮೆ ಕೊಂಡು ನೋಡು
ಆಆಆ... ಆಆಆ...
ನಾಳೆ ಸಿಗದು ನಿನಗೆ ಇಂದೇ ಬೇಕಾದ ಒಂದನ್ನು ಆರಿಸಿಕೋ
ಈ ಹೆಣ್ಣು ಬೇಕೇ ಈ ಗಂಡು ಸಾಕೇ ಈ ಜೋಡಿ ಚೆನ್ನಾಗಿದೆ...
ಈ ಆನೆ ಜೋರಾಗಿದೆ ಹೊಯ್...
ಬೇಕೇನು ಸಾಮಾನು ನೋಡು ನೋಡು
ಹೊಸತರದ ಬೋಂಬೆಯಾ ಒಮ್ಮೆ ಕೊಂಡು ನೋಡು
ಆಆಆ... ಆಆಆ...
ಏನೋ ಕಣ್ಣಿಗೇನೋ ನಿನ್ನ ಮನಸಲ್ಲಿ ಏನೆಂದು ನಾ ಬಲ್ಲೇನೂ
ಏನೋ ಕಣ್ಣಿಗೇನೋ ನಿನ್ನ ಮನಸಲ್ಲಿ ಏನೆಂದು ನಾ ಬಲ್ಲೇನೂ
ಈ ಆಟವೇಕೋ ಈ ನೋಟವೇಕೋ ಕೈಕಾಲು ಜೋಪಾನ
ಪುಂಡಾಟ ಸರಿಯಲ್ಲವೋ ಹೊಯ್...
ಬೇಕೇನು ಸಾಮಾನು ನೋಡು ನೋಡು
ಹೊಸತರದ ಬೋಂಬೆಯಾ ಒಮ್ಮೆ ಕೊಂಡು ನೋಡು
ಒಡೆಯೋದಿಲ್ಲಾ... ಮುರಿಯೋದಿಲ್ಲಾ...
ಒಡೆಯೋದಿಲ್ಲಾ... ಘಟ್ಟಿ ಮಾಲು ಕೈಲಿ ಮುಟ್ಟಿ ನೋಡು... ಓಯ್
ಬೇಕೇನು ಸಾಮಾನು ನೋಡು ನೋಡು
ಹೊಸತರದ ಬೋಂಬೆಯಾ ಒಮ್ಮೆ ಕೊಂಡು ನೋಡು
--------------------------------------------------------------------------------------------------------------------------
ಸಂಗೀತ : ಜಿ.ಕೆ.ವೆಂಕಟೇಶ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ.ಜಾನಕಿ, ಪಿ.ಬಿ.ಎಸ್.
ಹಾದಿ ಹೂವೂ ನೀ ಮಗುವೇ ನಿನ್ನ ನನ್ನ ಕಥೆ ಒಂದೇ...
ಹಾದಿ ಹೂವೂ ನೀ ಮಗುವೇ ನಿನ್ನ ನನ್ನ ಕಥೆ ಒಂದೇ...
ಏಕ ಅಳುವೇ...... (ಅಳು)
ಹಾದಿ ಹೂವೂ ನೀ ಮಗುವೇ ನಿನ್ನ ನನ್ನ ಕಥೆ ಒಂದೇ...
ಏಕ ಅಳುವೇ......
ಗಂಡು : ಏನೋ ಏಕೋ ನೀ ಬಂದೇ ನನ್ನ ಒಲವೇ ನೀನಾದೆ
ಏನೋ ಏಕೋ ನೀ ಬಂದೇ ನನ್ನ ಒಲವೇ ನೀನಾದೆ
ಗತಿ ಹೀನ ಸಂಸಾರ ನೀ ತಂದೇ ನಿನಗಾಗಿ ಏಕೋ ನಾ ನೊಂದೆ
ಏಕ ಅಳುವೇ...... ಹಾದಿ ಹೂವೂ ನೀ ಮಗುವೇ
ಹೆಣ್ಣು : ಚಿನ್ನಾರಿ ಕಂದನ್ನ ತೂಗೋ ತನಕ
ಮಾತಲ್ಲಾ ತಿಳಿಬೇಕು ಮಗುವಿನ ಮನಸ
ಮಾತಲ್ಲಾ ತಿಳಿಬೇಕು ಮಗುವಿನ ಮನಸ
ತಾಳಿ ಕಟ್ಟಿ ಆಳೋ ಪುರುಷ ಲಾಲಿ ಹಾಡೇ ಬರಿ ವೇಷ
ತಾಳಿ ಕಟ್ಟಿ ಆಳೋ ಪುರುಷ ಲಾಲಿ ಹಾಡೇ ಬರಿ ವೇಷ
ಏಕ ಅಳುವೇ...... ಹಾದಿ ಹೂವೂ ನೀ ಮಗುವೇ...ಆಆಆ....
ಗಂಡು : ಹಾದಿ ಹೂವೂ ನೀ ಮಗುವೇ ನಿನ್ನ ನನ್ನ ಕಥೆ ಒಂದೇ...
ಏಕ ಅಳುವೇ......ಆಆಆ... (ಆಆಆ...) ಹೂಂ ಹೂಂ ಹೂಂ ಹೂಂ... (ಆಆಆ)
ಹೂಂ ಹೂಂ ಹೂಂ (ಆಆಆ)
--------------------------------------------------------------------------------------------------------------------------
ಹೂಂ ಹೂಂ ಹೂಂ (ಆಆಆ)
--------------------------------------------------------------------------------------------------------------------------
No comments:
Post a Comment