922. ಭಲೇ ರಾಜ(೧೯೬೯)



ಭಲೇ ರಾಜ ಚಿತ್ರದ ಹಾಡುಗಳು 
  1. ನಾನೇ ಬಾಳಿನ ಜೋಕರ್ 
  2. ಚಕುಮುಕಿ ಹುಡುಗಿ 
  3. ಹೇ ಮುಕ್ಕಾ ತಾ ರೊಕ್ಕಾ 
  4. ಕಣ್ಣು ಏನೇನೋ ಕತೆಯಲ್ಲಾ ಹೇಳಿತು 
  5. ಓ ಇನಿಯಾ ಓ ಗೆಳೆಯಾ 

ಭಲೇ ರಾಜ(೧೯೬೯)
ಸಂಗೀತ : ಸತ್ಯಂ ಸಾಹಿತ್ಯ : ಸೋರಟ್ ಅಶ್ವಥ, ಕ.ಪ್ರ.ಶಾಸ್ತ್ರೀ ಗಾಯನ : ಎಸ್.ಪಿ.ಬಿ

ಚಕುಮುಖಿ ಹೊಯ್ ಚಕುಮುಖಿ
ಚಕುಮುಖಿ ಹುಡುಗಿ  ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ ಹೊಯ್
ಓ ನಗುತ ಮಾತಾಡೇ
ಚಕುಮುಖಿ ಹುಡುಗಿ  ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ ಹೊಯ್
ಓ ನಗುತ ಮಾತಾಡೇ
ಆಹ್.. ಕೋಪದಲ್ಲೂ ಮುಖವೆಂಥ ಗೆಲುವು
ಬಳಿಗೋಡಿ ಬಾ ನವಿಲೇ.. (ಚ್ ಚ್ ಚ್ )
ಚಕುಮುಖಿ ಹುಡುಗಿ  ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ ಹೊಯ್
ಓ ನಗುತ ಮಾತಾಡೇ

ನೀ ಬೀರೇ ಓರೇ ನೋಟಾ ಎದೆಯು ಜುಮ್ಮೆದಿಂತಲ್ಲೇ (ಅಹ್ಹಹ್ಹಾ)
ನೀ ಬೀರೇ ಓರೇ ನೋಟಾ ಎದೆಯು ಜುಮ್ಮೆದಿಂತಲ್ಲೇ
ಬಳಕುತ್ತ ನಡೆವ ಮಾಟ ಮನಕೆ ಬಲೆಯೊಡ್ಡಿ  ತಲ್ಲೆ
ಚಿರ ನಂಟಿನಲೀ ಇರೇ ಒಂಟಿಯಲಿ ಕೈ ನೀಡೆ ಕೈಯಲ್ಲಿ  (ಚ್ ಚ್  )
ಚಕುಮುಖಿ  ಚಕುಮುಖಿ ಹುಡುಗಿ  ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ ಹೊಯ್
ಓ ನಗುತ ಮಾತಾಡೇ

ಸಂಗಾತಿ ಜಿಂಕೆಯಂತೆ ಬರದೆ ನೀ ದೂರ ನಿಂತೇ (ಅಹ್ಹಹ್ಹಾ)
ಸಂಗಾತಿ ಜಿಂಕೆಯಂತೆ ಬರದೆ ನೀ ದೂರ ನಿಂತೇ
ಸಿಂಗಾರ ರಾಗದಂತೆ ತಣಿಸೆ ನೀನೆನ್ನ ಚಿಂತೆ
ನಾವಾಗಿ ಜೊತೆ ಒಲವೆಂಬ ಕಥೆ ಬರೆಯೋಣ ಜಾಗ್ರತೆ..  (ಹಹ್ಹಹ್ಹಾ  )
ಚಕುಮುಖಿ  ಹೊಯ್..  ಚಕುಮುಖಿ ಹುಡುಗಿ  ಚೆಲುವಿನ ಬೆಡಗಿ
ನಡೆವೆ ನೀನೆಲ್ಲಿಗೆ ತಿರುಗಿ ನೀ ನೋಡೇ
------------------------------------------------------------------------------------------------------------------------

ಭಲೇ ರಾಜ(೧೯೬೯)
ಸಂಗೀತ : ಸತ್ಯಂ ಸಾಹಿತ್ಯ : ಸೋರಟ್ ಅಶ್ವಥ, ಕ.ಪ್ರ.ಶಾಸ್ತ್ರೀ ಗಾಯನ : ಪಿ.ಸುಶೀಲಾ 

ಓ.. ಇನಿಯಾ ಓ.. ಗೆಳೆಯಾ ಮನ ಮಿಡಿವಾ ಭಾವನೆಯಾ
ಹೇಗೆ ಹೇಳಲಿ ನಾ ಈ ಪ್ರೀತಿಯ ಮಾತನ್ನ
ಓ.. ಇನಿಯಾ ಓ.. ಗೆಳೆಯಾ ಮನ ಮಿಡಿವಾ ಭಾವನೆಯಾ
ಹೇಗೆ ಹೇಳಲಿ ನಾ ಈ ಪ್ರೀತಿಯ ಮಾತನ್ನ 

ಚೆಲುವಿಗೆ ಸೋಲದೆ ನೀನಿರೆ ದೂರಾ 
ಚೆಲುವಿಗೆ ಸೋಲದೆ ನೀನಿರೆ ದೂರಾ 
ನಗುವಿನ ಹೂವಿದೂ ಬಾಡದೆ ನೀರಾ 
ಬಾರೆಂದು ಕೂಗೋ ಕಂಗಳ ಮುಂದೆ 
ಬಾರೆಂದು ಕೂಗೋ ಕಂಗಳ ಮುಂದೆ 
ಅರಿಯದೆ ನೀ ನಿಂದೆ ರಾಜಾ ವಿರಹದೆ ನಾ ನೊಂದೆ 


ಓ.. ಇನಿಯಾ ಓ.. ಗೆಳೆಯಾ ಮನ ಮಿಡಿವಾ ಭಾವನೆಯಾ
ಹೇಗೆ ಹೇಳಲಿ ನಾ ಈ ಪ್ರೀತಿಯ ಮಾತನ್ನ ಆಆಆ... 

ಎದೆಯಲಿ ನಿಂತಿದೆ ಈ ನಿನ್ನ ರೂಪ 
ಎದೆಯಲಿ ನಿಂತಿದೆ ಈ ನಿನ್ನ ರೂಪ 
ತಿಳಿಯದೆ ಹೋದರೆ ಬಾರದೆ ಕೋಪ 
ನಿನಗಾಗಿ ಕಾಯೆ ಅಂದದ ರೋಜಾ 
ನಿನಗಾಗಿ ಕಾಯೆ ಅಂದದ ರೋಜಾ 
ಬಿಂಕ ಇನ್ನೇಕೆ ಎನ್ನ ಸೇರೋ ಓ ರಾಜಾ 
ಓ.. ಇನಿಯಾ ಓ.. ಗೆಳೆಯಾ ಮನ ಮಿಡಿವಾ ಭಾವನೆಯಾ
ಹೇಗೆ ಹೇಳಲಿ ನಾ..  
--------------------------------------------------------------------------------------------------------------------------

ಭಲೇ ರಾಜ(೧೯೬೯)
ಸಂಗೀತ : ಸತ್ಯಂ ಸಾಹಿತ್ಯ : ಸೋರಟ್ ಅಶ್ವಥ, ಕ.ಪ್ರ.ಶಾಸ್ತ್ರೀ ಗಾಯನ : ಪಿ.ಬಿ.ಶ್ರೀನಿವಾಸ 

ನಾನೇ ನಾನೇ ನಾನೇ ಬಾಳಿನ ಜೋಕರ
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ ...
ನಾಳೇ... ಹೂಂ  ಊಟಕೆ ಚಕ್ಕರ... ನಾಳೇ ಊಟಕೆ ಚಕ್ಕರ
ನಾನೇ ಬಾಳಿನ ಜೋಕರ ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ ... ಹೂಂ
ನಾಳೇ... ಹೂಂ ಊಟಕೆ ಚಕ್ಕರ... ನಾಳೇ ಊಟಕೆ ಚಕ್ಕರ

ಹಣದಾಸೆಯಲಿ ಗುಣ ಮಾರುತಲಿ
ಮೆರೆದಾಡುವ ಠೀವಿಯ ಜನರಲ್ಲಿ
ಹಿಡಿ ಕೂಳಿರದೇ  ಪರದಾಡುತಿಹ
ಈ ಬಡವರ ಗೋಳಿನ ಕೂಗಿಲ್ಲಿ
ಮೋಜಿನಾ ಆ ನಗು ಗೋಳಿನಾ ಈ ಅಳು
ಈ ಭೇದ ಭಾವವ ತುಂಬಿ ತೋರುವಾ
ಜನರಾ ದಾರಿಗೆ ಎದುರಾಳಿ
ನಾನೇ...  ನಾನೇ.... ನಾನೇ  ಬಾಳಿನ ಜೋಕರ
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ
ನಾಳೇ... ... ಹೂಂ  ಊಟಕೆ ಚಕ್ಕರ... ನಾಳೇ ಊಟಕೆ ಚಕ್ಕರ 

ದಿಟ ಹೇಳುವರ ದಯೆ ತೋರುವರ
ಮನೆ ಬಾಗಿಲ ಕಾಯುವ ನಾಯಂತೆ
ಸಟೇ ಆಡುವರಾ ಮನೆ ಮುರಿಯುವರಾ
ನಡು ಮುರಿಯೇ ನಡೆವೇ ಹುಲಿಯಂತೇ
ನ್ಯಾಯಕೆ ನಮಸ್ತೇ ಮೋಸಕೆ ಬೆಸ್ತೇ
ಈ ಕಾಲಚಕ್ರದ ಆಟನೋಡುತಾ ಬೀದಿ ಅಲೆವ ಈ ಮಾಸ್ಟರ್  
ನಾನೇ...  ನಾನೇ.... ನಾನೇ  ಬಾಳಿನ ಜೋಕರ
ನಾನೇ ಬಡವರ ಮೆಂಬರ್
ಕರೆಯೋ ಹೆಸರೋ... ಭಲೇ ರಾಜಾ
ನಾಳೇ... ಹೂಂ ಊಟಕೆ ಚಕ್ಕರ... ನಾಳೇ ಊಟಕೆ ಚಕ್ಕರ 
--------------------------------------------------------------------------------------------------------------------------

ಭಲೇ ರಾಜ(೧೯೬೯)
ಸಂಗೀತ : ಸತ್ಯಂ ಸಾಹಿತ್ಯ : ಸೋರಟ್ ಅಶ್ವಥ, ಕ.ಪ್ರ.ಶಾಸ್ತ್ರೀ ಗಾಯನ : ಪಿ.ಸುಶೀಲಾ 

ಕೃಷ್ಣ... ಆಆಆ... ಕಣ್ಣು ಏನೇನೋ ಕಥೆ ಎಲ್ಲ ಹೇಳಿತು
ಅಲ್ಲಿ ನಿನ್ನಂದ ತಾನಾಗಿ ತುಂಬಿತು
ಕಣ್ಣು ಏನೇನೋ ಕಥೆ ಎಲ್ಲ ಹೇಳಿತು
ಅಲ್ಲಿ ನಿನ್ನಂದ ತಾನಾಗಿ ತುಂಬಿತು
ಕೃಷ್ಣ ನಿನ್ನಂದ ತಾನಾಗಿ ತುಂಬಿತು
ಬೃಂದಾವನದ ಅಂಗಳದಲ್ಲಿ
ಮಧು ಚೈತ್ರ ಮಾಸದ ಸಂಜೆಯಲಿ
ಪುನ್ನಾಗ ಸಂಪಿಗೆ ಹೂ ಗಾಳಿಯಲ್ಲಿ
ಪುನ್ನಾಗ ಸಂಪಿಗೆ ಹೂ ಗಾಳಿಯಲ್ಲಿ
ಪನ್ನೀರ ಜಾಜಿ ಹೂ ಮಳೆಯಲ್ಲಿ
ಕಣ್ಣು ಏನೇನೋ ಕಥೆ ಎಲ್ಲ ಹೇಳಿತು
ಅಲ್ಲಿ ನಿನ್ನಂದ ತಾನಾಗಿ ತುಂಬಿತು
ಕಣ್ಣು ಏನೇನೋ ಕಥೆ ಎಲ್ಲ ಹೇಳಿತು
ಅಲ್ಲಿ ನಿನ್ನಂದ ತಾನಾಗಿ ತುಂಬಿತು

ಆಆಆ..... ಮುರಳಿ ಗಾನದ ಗುಂಗಿನಲ್ಲಿ
ಮೋಹನರಾಗದ ಅಮಲಿನಲ್ಲಿ
ಮುರಳಿ ಗಾನದ ಗುಂಗಿನಲ್ಲಿ
ಮೋಹನರಾಗದ ಅಮಲಿನಲ್ಲಿ
ರಸರತಿ ಲೀಲಾ ವಿಲಾಸದಲ್ಲಿ
ರಸರತಿ ಲೀಲಾ ವಿಲಾಸದಲ್ಲಿ
ಮೈ ಮರೆತು ಮಾತಾಡೋ ರಸ ಘಳಿಗೆಯಲ್ಲಿ
ಕಣ್ಣು ಏನೇನೋ ಕಥೆ ಎಲ್ಲ ಹೇಳಿತು
ಅಲ್ಲಿ ನಿನ್ನಂದ ತಾನಾಗಿ ತುಂಬಿತು
ಕಣ್ಣು ಏನೇನೋ ಕಥೆ ಎಲ್ಲ ಹೇಳಿತು
ಅಲ್ಲಿ ನಿನ್ನಂದ ತಾನಾಗಿ ತುಂಬಿತು
ಕೃಷ್ಣ ನಿನ್ನಂದ ತಾನಾಗಿ ತುಂಬಿತು
--------------------------------------------------------------------------------------------------------------------------

ಭಲೇ ರಾಜ(೧೯೬೯)
ಸಂಗೀತ : ಸತ್ಯಂ ಸಾಹಿತ್ಯ : ಸೋರಟ್ ಅಶ್ವಥ, ಕ.ಪ್ರ.ಶಾಸ್ತ್ರೀ ಗಾಯನ : ಪಿ.ಸುಶೀಲಾ

ಓ.. ಓ... ಓ... ಓ... ಓ.. ಓಓ... ಓಓ...
ಓಓಓ... ಹೊಯ್   ಓಓಓ... ಹೊಯ್
ಓ.. ಓ... ಓ... ಓ... ಓ.. ಓಓ... ಓಓ...
ಓಓಓ... ಹೊಯ್   ಓಓಓ... ಹೊಯ್
ಹೇ.. ಮುಕ್ಕಾ ಹೇ.. ಮುಕ್ಕಾ ತಾ ರೊಕ್ಕಾ ನೀ ಜೇಬಿನಿಂದಾ
ಹೇ.. ಮುಕ್ಕಾ ತಾ ರೊಕ್ಕಾ ನೀ ಜೇಬಿನಿಂದಾ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದಾ 
ಕಾಸಂದ್ರೆ ಕೈಲಾಸ ಕಾಣೋ ಗೋವಿಂದಾ 
ಓ.. ಈರಯ್ಯಾ ಓ.. ಬೋರಯ್ಯಾ ಬಾರಯ್ಯಾ 
ಓ.. ಈರಯ್ಯೋ  ಓ.. ಬೋರಯ್ಯೋ ಬಾರಯ್ಯಾ 

ಸೆರೈತೇ ಎಲ್ಲೆಲ್ಲೋ ಟೋಪಿ ಹಾಕೋ ಜಾತ್ರೀ 
ಸೆರೈತೇ ಎಲ್ಲೆಲ್ಲೋ ಟೋಪಿ ಹಾಕೋ ಜಾತ್ರೀ 
ಪಾತ್ರೆಯ ಕೊಳ್ಳೋಕೆ ಅಂಗಡಿ ಹೋದ್ರೇ ಲಾಟ್ರೀ
ಹಿಟ್ಟಿಗೂ ಲಾಟ್ರಿ ಬಟ್ಟೆಗೂ ಲಾಟ್ರಿ ಊರೆಲ್ಲಾ ಲಾಟ್ರಿ 
ಎಲ್ಲಾರು ಲಾಟ್ರಿ ನಮ್ಮ್ ಬಾಳು ಚಂದಾಗೆ ಎನೈತಣ್ಣಾ ಖಾತ್ರೀ   
ಕಾಸಂದ್ರೆ ಕೈಲಾಸ ಕಾಣೋ ಗೋವಿಂದಾ 
ಕಾಸಂದ್ರೆ ಕೈಲಾಸ ಕಾಣೋ ಗೋವಿಂದಾ 
ಓ.. ಈರಯ್ಯಾ ಓ.. ಬೋರಯ್ಯಾ ಬಾರಯ್ಯಾ 
ಓ.. ಈರಯ್ಯೋ  ಓ.. ಬೋರಯ್ಯೋ ಬಾರಯ್ಯಾ 

ದುಗ್ಗಾಣಿ ಕೈಯಲ್ಲಿದ್ರೆ ತೀರಿಹೋಗೋದಣ್ಣಾ 
ದುಗ್ಗಾಣಿ ಕೈಯಲ್ಲಿದ್ರೆ ತೀರಿಹೋಗೋದಣ್ಣಾ 
ದುಡ್ಡಿಲ್ಲದೇ ಕುಂತಿದ್ರೇ ನೀರು ಸಿಕ್ಕೋಲ್ಲಣ್ಣಾ 
ಸತ್ಯಕ್ಕೆ ಸುಣ್ಣ ಇಡುತಾರೋ ಅಣ್ಣಾ 
ಸುಳ್ಳಿನ ಬಣ್ಣಾ ಮೆರೆತೈತಿ ಅಣ್ಣಾ 
ಒಂದಿಲ್ಲ ಒಂದಿನ ತಿಂತಾರಣ್ಣ ಮಣ್ಣ 
ಕಾಸಂದ್ರೆ ಕೈಲಾಸ ಕಾಣೋ ಗೋವಿಂದಾ 
ಕಾಸಂದ್ರೆ ಕೈಲಾಸ ಕಾಣೋ ಗೋವಿಂದಾ 
ಹೇ.. ಮುಕ್ಕಾ ತಾ ರೊಕ್ಕಾ ನೀ ಜೇಬಿನಿಂದಾ
ಹೇ.. ಮುಕ್ಕಾ ತಾ ರೊಕ್ಕಾ ನೀ ಜೇಬಿನಿಂದಾ
ಕಾಸಂದ್ರೆ ಕೈಲಾಸ ಕಾಣೋ ಗೋವಿಂದಾ 
ಕಾಸಂದ್ರೆ ಕೈಲಾಸ ಕಾಣೋ ಗೋವಿಂದಾ 
ಓ.. ಈರಯ್ಯಾ ಓ.. ಬೋರಯ್ಯಾ ಬಾರಯ್ಯಾ 
ಓ.. ಈರಯ್ಯೋ  ಓ.. ಬೋರಯ್ಯೋ ಬಾರಯ್ಯಾ 
--------------------------------------------------------------------------------------------------------------------------

No comments:

Post a Comment