924. ಸೋತು ಗೆದ್ದವಳು (೧೯೭೧)


ಸೋತು ಗೆದ್ದವಳು ಚಿತ್ರದ ಹಾಡುಗಳು 
  1. ಹಾರಲೇ ಹಾರಲೇ.. ನಾ ಹಾಡಲೇ 
  2. ನಿನ್ನ ಸನಿಹ ಸೇರಲೆಂದೇ 
  3. ಕೆಂಪು ಗುಲಾಬಿಯ ಚೆಂದುಟಿ ಚೆಲುವೇ 
  4. ಕೆಂಪು ಗುಲಾಬಿಯ ಚೆಂದುಟಿ ಚೆಲುವೇ (ಹೆಣ್ಣು)
  5. ಆರತಿ ಆರತಿ ಓ ರತಿ 
ಸೋತು ಗೆದ್ದವಳು (೧೯೭೧)
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ.ಜಾನಕಿ

ಹಾರಲೇ...  ಹಾರಲೇ... ಹಾರಲೇ....ಹಾರಲೇ..
ನಾ ಹಾರಲೇ... ಹಾರಲೇ....ಹಾರಲೇ..
ಮುಗಿಲೇ ನಿನ್ನ ಎತ್ತರಕೆ...  ಎತ್ತರಕೇ... ಎತ್ತರಕೇ
ಹಾಡಿದೆ ಹೃದಯವು ಇನಿಯ ತಂದ ಉತ್ತರಕೆ
ಹಾರಲೇ...  ನಾ ಹಾರಲೇ.

ಆಹ್ಹಹಹ್ಹಹ್ಹ ಆಹ್ಹಹಹ್ಹಹ್ಹ ಆಹ್ಹಹಹ್ಹಹ್ಹ
ಇನಿಯನಾ ಸನಿಹದಿಂ ಬಂದೆನಾ ಇಲ್ಲಿಗೆ
ಅವ್...  ಮನದಲ್ಲೇ ನಿಂತಿಹ ನಗುತಲಿ ಮೆಲ್ಲಗೆ ಕಾರಣವೇನು
ಒಲವು....  ಒಲವು... ಒಲವು...
ಒಲವಿನ ಮುನ್ನಡಿ ತರುವೆಯಾ ಬಾಳಿನ ಕಾವ್ಯದ ಮೊದಲ ಅಧ್ಯಾಯ
ಒಲವಿನ ಮುನ್ನಡಿ ತರುವೆಯಾ ಬಾಳಿನ ಕಾವ್ಯದ  ಮೊದಲ ಅಧ್ಯಾಯ
ಪ್ರೇಮದ ಸುಧೆ  ರಸಪಾನ ಸುಖ ಶಿಖರಕೆ ಸೋಪಾನ
ಪ್ರೇಮದ ಸುಧೆ  ರಸಪಾನ ಸುಖ ಶಿಖರಕೆ ಸೋಪಾನ
ಸಾರ್ಥಕ ಆ ದಿನ ಜೀವನ...ಆಆಆ...
ಹಾರಲೇ...  ನಾ ಹಾರಲೇ.

ನೆನೆದರೆ ಬರುತಿಹ ಹರುಷವು ಇನಿತು
ಅನುಭವ ತರುವಾ ಸವಿ ಇನ್ನೇನಿತು ಅಹ್ಹಹ.... ಅಹ್ಹಹ
ಹೊಸತು...  ಹೊಸತು....  ಹೊಸತು
ಹೊಸ ಋತು ಚೆಲ್ಲಿದ ಹೂಗಳ ಮೇಲೆ ಬಳಸಿರಿ ನಲ್ಲನ ತೋಳಗಳ ಮಾಲೆ
ಹೊಸ ಋತು ಚೆಲ್ಲಿದ ಹೂಗಳ ಮೇಲೆ ಬಳಸಿರಿ ನಲ್ಲನ ತೋಳಗಳ ಮಾಲೆ
ಜೀವ ಜೀವದ ಬೆಸುಗೆ ಪ್ರಣಯವು ನೀಡಿದ ಕೊಡುಗೆ
ಜೀವ ಜೀವದ ಬೆಸುಗೆ ಪ್ರಣಯವು ನೀಡಿದ ಕೊಡುಗೆ
ನೂತನ ಚೇತನ ಅನುದಿನಾ
ಹಾರಲೇ...  ನಾ ಹಾರಲೇ. ಮುಗಿಲೇ ನಿನ್ನ ಎತ್ತರಕೆ.
ಹಾಡಿದೆ ಹೃದಯವು ಇನಿಯ ತಂದ ಉತ್ತರಕೆ
ಹಾರಲೇ...  ನಾ ಹಾರಲೇ.
ಲಲಾಲಾಲ  ಲಲಾಲಾಲ ಲಲಾಲಾಲ 
--------------------------------------------------------------------------------------------------------------------------

ಸೋತು ಗೆದ್ದವಳು (೧೯೭೧)
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ, ಬಿ.ವಸಂತ  

ಹೆಣ್ಣು : ಆಹಾ..ಹಹಹ..  ಆಹಾ..ಹಹಹ ಆಹಾ..ಹಹಹ
          ಹಹಹ ಹಹಹ ಹೂಂ ಹೂಂ ಹೂಂ
ಗಂಡು : ನಿನ್ನ ಸನಿಹ ಸೇರಲೆಂದು ಮನಕೆ ಕಾತರ
            ಬಾಹುಗಳಿಗೆ ನಿನ್ನ ಮೈಯ್ಯ ಬಳಸುವ ಆತುರ
            ಬೆಳೆಯುತಿರುವಬಳ್ಳಿ ಮರವ ಬಳಸಲೆಂದು ಅರಸುವಂತೆ
            ಬೆಳೆಯುತಿರುವಬಳ್ಳಿ ಮರವ ಬಳಸಲೆಂದು ಅರಸುವಂತೆ
            ಬಾಯಾರಿದ ಭೃಂಗ ಹೂವಿನಂಗ ಸಂಗ ಕೆಲಸುವಂತೆ
            ನಿನ್ನ ಸನಿಹ ಸೇರಲೆಂದು ಮನಕೆ ಕಾತರ
            ಬಾಹುಗಳಿಗೆ ನಿನ್ನ ಮೈಯ್ಯ ಬಳಸುವ ಆತುರ 

ಗಂಡು : ಹಸಿದ ಹಸುಳೆ ತಾಯ ಎದೆಯ ಸುಧೆಯ ಸವಿಯ ಬೇಡುವಂತೆ  
           ಹಸಿದ ಹಸುಳೆ ತಾಯ ಎದೆಯ ಸುಧೆಯ ಸವಿಯ ಬೇಡುವಂತೆ  
           ಮುತ್ತೊಂದನೂ ಕೊಡಲು ಸಿಂಪಿ  ಸ್ವಾತಿ ಹನಿಯ ಬಯಸುವಂತೆ 
           ನಿನ್ನ ಸನಿಹ ಸೇರಲೆಂದು ಮನಕೆ ಕಾತರಾ
           ಬಾಹುಗಳಿಗೆ ನಿನ್ನ ಮೈಯ್ಯ ಬಳಸುವ ಆತುರ

ಹೆಣ್ಣು : ಅಹ್ಹಹ್ಹಾ ಅಹ್ಹಹಾಹ್ಹಾ ಅಹ್ಹಹ್ಹಾಹ್ಹಹ್ಹ  ಹಿಹಿಹಿಹಿಹೀ 
ಗಂಡು : ಕಡಲ ಒಡಲ ಸೇರೇ ನದಿಯು  ತವಕದಿಂದ ಓಡುವಂತೆ 
           ಕಡಲ ಒಡಲ ಸೇರೇ ನದಿಯು ತವಕದಿಂದ ಓಡುವಂತೆ 
           ತುಟಿಗೆ ತುಟಿಯ, ಎದೆಗೆ ಎದೆಯ,  
           ತುಟಿಗೆ ತುಟಿಯ, ಎದೆಗೆ ಎದೆಯ, ಬೆಸೆಯುವಾಸೆ ಹೊಮ್ಮಿದಂತೆ 
           ನಿನ್ನ ಸನಿಹ ಸೇರಲೆಂದು ಮನಕೆ ಕಾತರಾ
           ಬಾಹುಗಳಿಗೆ ನಿನ್ನ ಮೈಯ್ಯ ಬಳಸುವ ಆತುರ
ಇಬ್ಬರು :ಆಹ್ಹಾಹ ಓಹೋಹೋ ಹೂಂ ಹೂಂ ಆಹ್ಹಾಹ ಓಹೋಹೋ ಹೂಂ ಹೂಂ 
---------------------------------------------------------------------------------------------------------------------

ಸೋತು ಗೆದ್ದವಳು (೧೯೭೧)
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಎಸ್ 

ಕೆಂಪು ಗುಲಾಬಿಯ ಚೆಂದುಟಿ ಚೆಲುವೇ ಎಂತು ನಿನ್ನನ್ನು ಹೇಳು ಗೆಲುವೇ ...
ಸುಗ್ಗಿಯ ಹೊಸ ಸಿರಿ ಹೂಗಳ ಕೊಯ್ದು ತರಲಲೇನು ನೊಂದಿನಿ ಮಾಲೆಯನೇ ಹೂ
ಕೆಂಪು ಗುಲಾಬಿಯ ಚೆಂದುಟಿ ಚೆಲುವೇ...

ಕಾಜಾಣವೂ  ಕೋಗಿಲೆಗಳ ಬೇಡಿ...
ಕಾಜಾಣವೂ  ಕೋಗಿಲೆಗಳ ಬೇಡಿ ಕಲಿತಿಂ ಚರದಿಂ ನಿನ್ನನೇ ನೋಡಿ
ಕಲಿತಿಂ ಚರದಿಂ ನಿನ್ನನೇ ನೋಡಿ  ತುಟಿಯಂ..
ತುಟಿಯಂ ಸೋರುತಲಿರೇ ಸವಿಜೇನು
ತುಟಿಯಂ ಸೋರುತಲಿರೇ ಸವಿಜೇನು
ಮುದ್ದಿನ ಹೆಸರನು ಕರೆಯಲೇ ಏನು... ಶಾರದಾ
ಕೆಂಪು ಗುಲಾಬಿಯ ಚೆಂದುಟಿ ಚೆಲುವೇ

ಸೊಬಗಿನ ಕದನದಿ ಮದನನ ಕೊಂದು ಸುರಲೋಕದ ವರಗಂಗೆಯು ನೀನು
ಸೊಬಗಿನ ಕದನದಿ ಮದನನ ಕೊಂದು ಸುರಲೋಕದ ವರಗಂಗೆಯು ನೀನು
ನಂದನ ಅಮೃತದ ಫಲವನೇ  ತಿಂದು
ನಂದನ ಅಮೃತದ ಫಲವನೇ  ತಿಂದು ನಿನ್ನೆಡೆ ನಿಂತಿದೆ ರತಿ ಬಾ.. ಎಂದು
ಕೆಂಪು ಗುಲಾಬಿಯ ಚೆಂದುಟಿ ಚೆಲುವೇ

ದಾನವೋ ಮಾನವೋ ಪ್ರಾಣವೋ ಏನೋ ಶಾರದಾ... ಶಾರದಾ.. ಶಾರದಾ
ದಾನವೋ ಮಾನವೋ ಪ್ರಾಣವೋ ಏನೋ
ದಾನವೋ ಮಾನವೋ ಪ್ರಾಣವೋ ಏನೋ ಯಾವೂದರಿಂದೆನ್ನಗ ಒಲಿಯುವೇ ನೀನು  
ಕೆಂಪು ಗುಲಾಬಿಯ ಚೆಂದುಟಿ ಚೆಲುವೇ ಎಂತು ನಿನ್ನನ್ನು ಹೇಳು ಗೆಲುವೇ ...  
ಆಆಆಆ...  ಆಆಆಆ... 
--------------------------------------------------------------------------------------------------------------------------

ಸೋತು ಗೆದ್ದವಳು (೧೯೭೧)
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ  

ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ಏಕೆ ಒಲಿದಳು ಬಾ ನುಡಿವೇ
ಸರಸದ ಸವಿನುಡಿ ಮಾಲೆಯ ನೇಯ್ದು ಒಲವಿಂದಲೀ ನಾ ಕಾಣಿಕೆ ಕೊಡುವೇ
ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...

ಈ ಅಂದಕೆ ಸೆರೆಯಾಗಲು ನಾನಂದೇ
ಈ ಅಂದಕೆ ಸೆರೆಯಾಗಲು ನಾನಂದೇ ಬಾಳಲಿ ಏನೂ ಹೊಸತನ ಕಂಡೇ
ನಿನ್ನೀ ಕಂಗಳ ಬೆಳದಿಂಗಳಿಗೇ ಅರಳಿದೆ ನನ್ನೀ ಹೃದಯದ ನಳಿನಿ
ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...

ಕಂಗಳ ಹೂವಲೀ ಮಿಂಚಾಗಿರುವಾ ಅರಳಿದ ತುಟಿಗಳ ನಗೆಯಾಗಿರುವಾ
ಕಂಗಳ ಹೂವಲೀ ಮಿಂಚಾಗಿರುವಾ ಅರಳಿದ ತುಟಿಗಳ ನಗೆಯಾಗಿರುವಾ
ಹಂಬಲ ಮೂಡಲೂ ಬಳಿ ಬಂದಿರುವೇ ನನ್ನವನಾದರೇ ನನ್ನೀ ಕೊಡುವೇ
ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ...

ಪ್ರಣಯದ ಗಂಗೆಯಲಿ ಈಜಲೂ ಕರೆಯೇ ಮೌನವಿದೆನೋ ಬಾರೆಯ ದೊರೆಯೇ
ಪ್ರಣಯದ ಗಂಗೆಯಲಿ ಈಜಲೂ ಕರೆಯೇ ಮೌನವಿದೆನೋ ಬಾರೆಯ ದೊರೆಯೇ
ಮಿಲನದ ಹರುಷವ ಸವಿಯಲು ಬರದೇ ತಾಮಸ ತೋರುವೇ ತರವೇ ಅರಿಯೇ 
ಕೆಂಪು ಗುಲಾಬಿಯ ಕೆನ್ನೆಯ ಚೆಲುವೇ ಏಕೆ ಒಲಿದಳು ಬಾ ನುಡಿವೇ 
ಆಆಆ... ಆಆಆಆ... ಲಾಲಾಲಾಲಾ .......  ಲಾಲಾಲಾಲಾ .......
--------------------------------------------------------------------------------------------------------------------------

ಸೋತು ಗೆದ್ದವಳು (೧೯೭೧) - ಆರತಿ ಆರತಿ ಓ ರತಿ
ಸಂಗೀತ : ಎಂ.ರಂಗರಾವ ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪುಷ್ಪಲತಾ, ವಸಂತ 


ಹೆಣ್ಣು : ಆರತಿ ಆರತಿ ಓ ರತಿ ಚೆಂದದಾರುತಿ 
ಕೋರಸ್ : ಆರತಿ ಆರತಿ ಓ ರತಿ ಚೆಂದದಾರುತಿ 
ಹೆಣ್ಣು : ಬಾಳಲ್ಲಿ ಹೊಸ ಹೆಜ್ಜೆ ಇಡುತಿರುವೇ ಶ್ರೀಮತಿ 
         ಇಂದಿನ ಈ ನಗೆಯು ಇಂತೆಯೇ ಇರಲಿ 
         ಈ ಒಲವು ಈ ಗೆಲುವೂ ಎಂದಿಗೂ ಇರಲಿ  
         ಪೂರ್ಣತೆಯೂ ಕೈಗೂಡಲಿ 
ಕೋರಸ್ : ಆರತಿ ಆರತಿ ಓ ರತಿ ಚೆಂದದಾರುತಿ 

ಕೋರಸ್ : ಆಆಆ... ಆಆಆ.. ಆಆಆ... ಆಆಆ.. 
ಹೆಣ್ಣು : ನಗೆ ಮಲ್ಲಿಗೆ ಮಳಿ ನವನಿಧಿಗಳ ಬೆಳೆ 
         ನಡೆನಡೆಗೆ ಅಡಿಗಡಿಗೆ ಬರಲೀ  
ಕೋರಸ್ : ಬರಲೀ.. ಬರಲೀ  
                ಅಡಿ ಮುಂದಿಡ ಗಡಿ ಗುಡಿಸಲೂ ಹೊಂಗಳ ಸೆರೆಗುಳಿ  
ಹೆಣ್ಣು : ಒಹೋ.. ಒಹೋ.. ಏಳಅಡಿಗಳೇ ಏಕೇ ಎಳೆಯೇ 
          ಏಳು ಜನ್ಮ ಮೇಲ್ಮೇ ತರಲೀ 
ಕೋರಸ್ : ಆರತಿ ಆರತಿ ಓ ರತಿ ಚೆಂದದಾರುತಿ 

ಹೆಣ್ಣು : ಸೂಯ್ಯಂದೂ ಮುಗಿಲೇರೋ ಸುಮದಿ ಉಯ್ಯಾಲೆ     
          ನೆಲಸೇರಿ ನೆಲಸೇರಿ ಸಾಗಿದೆ ಮೇಲೇ 
         ಸೂಯ್ಯಂದೂ ಮುಗಿಲೇರೋ ಸುಮದಿ ಉಯ್ಯಾಲೆ   
          ನೆಲಸೇರಿ ನೆಲಸೇರಿ ಸಾಗಿದೆ ಮೇಲೇ 
ಕೋರಸ್ : ಬಾಳಚ್ಚು ಕಾಲಿಗೇ ಆಸೆಯ ಆಸರೇ ಕೇಳೇ ಸಿಂಗಾರಿ 
               ತಾಳಿ ತಂದ ತಾಯಿ ಬುತ್ತಿ ತಂದಿದೇ ಶುಭಕೋರಿ 
               ಬಾಳ ಜೋಕಾಲಿಗೇ ಆಸೆಯ ಆಸರೇ ಕೇಳೇ ಸಿಂಗಾರಿ 
               ತಾಳಿ ತಂದ ತಾಯಿ ಬುತ್ತಿ ತಂದಿದೇ ಶುಭಕೋರಿ 
ಹೆಣ್ಣು : ರಜತಾದ್ರಿ ಬೈರಾಗಿ ಮುಕ್ಕಣ್ಣ ಯಾರೇ.. ಯಾರೇ..ಹೇಳೇ 
          ರಜತಾದ್ರಿ ಬೈರಾಗಿ ಮುಕ್ಕಣ್ಣ ಯಾರೇ ಆ ದೇವ ನಾ ಬಲ್ಲೇ ಶಂಕರ ತಾನೇ.. 
ಕೋರಸ್ : ಅಹ್ಹಹ್ಹ...  ಅಹ್ಹಹ್ಹ... ಅಹ್ಹಹ್ಹ... 
ಹೆಣ್ಣು : ಜಗಕೆಲ್ಲ ಅರಿವೇವ ಆ ಜಾಣೆ ಯಾರೋ.. ಯಾರೂ .. ಹೇಳ್ರೀ 
          ಜಗಕೆಲ್ಲ ಅರಿವೇವ ಆ ಜಾಣೆ ಯಾರೋ.. 
ಗಂಡು : ಆ ದೇವಿ ನಾ ಬಲ್ಲೇ ಶಾರದೇ ತಾನೇ 
ಕೋರಸ್ : ಅಹ್ಹಹ್ಹ...  ಅಹ್ಹಹ್ಹ... ಅಹ್ಹಹ್ಹ... 
               ಈ ಜೋಡಿ ಮೇಲೆಗೆ ತೇಪೆಯ ಹಾಕೋಣ ಹಾಡಿ ಸೋಬಾನೆ 
               ನಲ್ಲ ನಲ್ಲೇ ನಲ್ಮೆ ಎಲ್ಲ ಮೀಸಲು ನಿಮಗೇನೇ 
               ಈ  ಜೋಡಿ ಮೇಲೆಗೆ ತೇಪೆಯ ಹಾಕೋಣ ಹಾಡಿ ಸೋಬಾನೆ 
               ನಲ್ಲ ನಲ್ಲೇ ನಲ್ಮೆ ಎಲ್ಲ ಮೀಸಲು ನಿಮಗೇನೇ 
ಕೋರಸ್ : ಆರತಿ ಆರತಿ ಓ ರತಿ ಚೆಂದದಾರುತಿ 
               ಬಾಳಲ್ಲಿ ಹೊಸ ಹೆಜ್ಜೆ ಇಡುತಿರುವೇ ಶ್ರೀಮತಿ 
              ಇಂದಿನ ಈ ನಗೆಯು ಇಂತೆಯೇ ಇರಲಿ 
              ಈ ಒಲವು ಈ ಗೆಲುವೂ ಎಂದಿಗೂ ಇರಲಿ  
             ಪೂರ್ಣತೆಯೂ ಕೈಗೂಡಲಿ 
             ಆರತಿ ಆರತಿ ಓ ರತಿ ಚೆಂದದಾರುತಿ 
             ಓ ರತಿ ಚೆಂದದಾರುತಿ   
--------------------------------------------------------------------------------------------------------------------------


No comments:

Post a Comment