ಭಲೇ ಕಿಲಾಡಿ ಚಿತ್ರದ ಹಾಡುಗಳು
- ಹರಾಜು ಹಾಕಕೇ ಬಂದೆ ಇಲ್ಲಿ
- ಯಾರವನು ಯಾರವನು
- ನಾರಿ ವೈಯ್ಯಾರಿ ಸುರಸುಂದರಿ
- ಏನೋ ನಾಟಕ ಹೂಡಿ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಬಿ.ಶ್ರೀನಿವಾಸ
ಹರಾಜ್... ಹರಾಜ್..
ಹರಾಜ್.. ಹಾಕಕೆ ಬಂದೆ ಇಲ್ಲಿ ಮದುವೇ ಗಂಡೊಂದ
ಸಮ್ಮತಿಯಿದ್ರೇ ಸವಾಲ್ ಏರಿಸಿ ಬೆಳಸೋ ಸಂಬಂಧ
ಹರಾಜ್.. ಹಾಕಕೆ ಬಂದೆ ಇಲ್ಲಿ ಮದುವೇ ಗಂಡೊಂದ
ಸಮ್ಮತಿಯಿದ್ರೇ ಸವಾಲ್ ಏರಿಸಿ ಬೆಳಸೋ ಸಂಬಂಧ
ಹರಾಜ್... ಹರಾಜ್..
ವಂಶಕೋಬ್ಬನೇ ಮಗನಂಥಯ್ಯ.. ಒಳ್ಳೆ ಭಾರಿ ಕುಳವಂತಯ್ಯ
ತಂದೆಗೆ ತುಂಬಾ ಸಂಪತ್ತಯ್ಯ ತಿನ್ನೋದು ಮಾತ್ರ ಒಪ್ಪತ್ತಯ್ಯ
ಹುಡುಗನ ಹೆಸರು... ಹನುಮಂತಯ್ಯ ಕಲಿಸಲು ಬಿದ್ದ.... ತಕಧಿಥ ಥಯ್ಯ
ಹುಣ್ಣಿಮೆ ಬಂದ್ರೆ ಹೆಚ್ಚುತ್ತಯ್ಯಾ ಹುಚ್ಚು ನೆತ್ತಿಗೇ ಏರುತಯ್ಯಾ
ಥಯ್ಯ.... ಥಯ್ಯ
ಹೇಯ್ ಹರಾಜ್.. ಹಾಕಕೆ ಬಂದೆ ಇಲ್ಲಿ ಮದುವೇ ಗಂಡೊಂದ
ಸಮ್ಮತಿಯಿದ್ರೇ ಸವಾಲ್ ಏರಿಸಿ ಬೆಳಸೋ ಸಂಬಂಧ
ಸಮ್ಮತಿಯಿದ್ರೇ ಸವಾಲ್ ಏರಿಸಿ ಬೆಳಸೋ ಸಂಬಂಧ
ಹರಾಜ್... ಹರಾಜ್.. ಓಓಓಓಓ ...
ಓಯ್ ಹೆಣ್ಣಿಗೆ ಕಣ್ಣೂ ಮುಗು ಮೂತಿ ಸೊಟ್ಟಗೇಯಿದ್ರೂ ಚಿಂತಿಲ್ಲ
ಆಹ್ ಲಕ್ಷ ಕೊಟ್ಟರೇ ಸಾಕು ಗಂಡಿಗೆ ಬೇರೆ ಏನೂ ಬೇಕಿಲ್ಲ
ಬೆಪ್ಪು ತಕ್ಕಡಿ ಸುಬ್ಬಿ ಆದರೂ ಒಲ್ಲೇ ಅಂತ ಹೇಳೊಲ್ಲ
ಅಪ್ಪನ ಓಕೇ ಒಂದೇ ಸಾಕು ಮಗನ ಮಾತಿಗೆ ಬೆಲೆಯೇ ಇಲ್ಲ ಇಲ್ಲಾ...ಇಲ್ಲಾ .... ಆಆಆಅ
ಏನ್ ಮಾಡದ ಅಂದರೇ ...
ಸೇರಿಗೆ ಸೇರು ಸವ್ವಾಸೇರು ಅಪ್ಪಾ ಮಗನ ತಕರಾರು
ಸೇರಿಗೆ ಸೇರು ಸವ್ವಾಸೇರು ಅಪ್ಪಾ ಮಗನ ತಕರಾರು
ಸೇರಿಗೆ ಸೇರು ಸವ್ವಾಸೇರು ಅಪ್ಪಾ ಮಗನ ತಕರಾರು
ಲಕ್ಷ ಆದರೂ ಮಾವನಿಗೆ ವರದಕ್ಷಿಣೆ ಬೇರೆ ಬೇಕಂತೆ
ಬಿಕ್ಷುಕಿಯಾದರೂ ವರನಿಗೆ ಹುಡುಗಿ ಲಕ್ಷಣವಾಗಿರಬೇಕಂತೆ
ಶ್ರೀಮದ್ ರಮಾರಮಣ ಗೋವಿಂದೋ ಸಾರೀ ...
-------------------------------------------------------------------------------------------------------------------------
ಭಲೇ ಕಿಲಾಡಿ (1970) - ಹೆಣ್ಣಿಗೆ ಕಣ್ಣು ಮೂಗು ಮೂತಿ ಸೊಟ್ಟಿಗೆಯಿದ್ರು ಚಿಂತಿಲ್ಲ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಗಂಡು : ಆಹಾ.. ಹೆಣ್ಣು : ಆಹಾ..
ಭಲೇ ಕಿಲಾಡಿ (1970) - ಹೆಣ್ಣಿಗೆ ಕಣ್ಣು ಮೂಗು ಮೂತಿ ಸೊಟ್ಟಿಗೆಯಿದ್ರು ಚಿಂತಿಲ್ಲ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ
ಗಂಡು : ಆಹಾ.. ಹೆಣ್ಣು : ಆಹಾ..
ಗಂಡು : ಆಹಾ ಹಾಹಾಹಾಹಾ ... ಹೆಣ್ಣು : ಆಹಾಆಹ್ಹಹ್ಹ .. ಓಹೋಹೋ ಆಆಆ.. ಆಆಆ...
ಗಂಡು : ಯಾರವನೂ... ಯಾರವನೂ ಯಾರೋ ಕಾಣೇ ಆ ಸೂತ್ರಧಾರನೂ ..
ಹೆಣ್ಣು : ಎಲ್ಲೋ ಹುಟ್ಟಿದ ಹೆಣ್ಣಿಗೇ ಎಲ್ಲೋ ಬೆಳೆದ ಗಂಡನೂ ಎಲ್ಲೋ ತೋರಿಸಿ ಜೀವ ಬೆಸೆಯೋನು
ಯಾರವನೂ... ಯಾರವನೂ ಯಾರೋ ಕಾಣೇ ಆ ಸೂತ್ರಧಾರನೂ ..
ಗಂಡು : ಎಲ್ಲೋ ಹುಟ್ಟಿದ ಹೆಣ್ಣಿಗೇ ಎಲ್ಲೋ ಬೆಳೆದ ಗಂಡನೂ ಎಲ್ಲೋ ತೋರಿಸಿ ಜೀವ ಬೆಸೆಯೋನು
ಯಾರವನೂ... ಹೆಣ್ಣು : ಯಾರವನೂ
ಇಬ್ಬರು : ಯಾರೋ ಕಾಣೇ ಆ ಸೂತ್ರಧಾರನೂ ..
ಹೆಣ್ಣು : ಯೌವ್ವನ ಕಾಲದ ಕಾಮನೇ ತಣಿಸಿ ಜೀವನವೆಂಬುದಾ ಸುಂದರಗೊಳಿಸಿ
ಯೌವ್ವನ ಕಾಲದ ಕಾಮನೇ ತಣಿಸಿ ಜೀವನವೆಂಬುದಾ ಸುಂದರಗೊಳಿಸಿ
ದೇಹಗಳೆರಡೂ ಜೀವವೊಂದೂ ಎಣಿಸೋ ಆ ಬಂಧು ಯಾರೋ....
ಗಂಡು : ಜನುಮ ಜನುಮದ ಬಂಧನದಂತೇ ಬಾಳುವ ಬದುಕೇ ಚಿನ್ಮಯವಂತೇ
ಜನುಮ ಜನುಮದ ಬಂಧನದಂತೇ ಬಾಳುವ ಬದುಕೇ ಚಿನ್ಮಯವಂತೇ
ಎಂದನವರತ ಪ್ರೇರೇಪಿಸುತಾ ಕುಣಿಸೋ ಆ ಧಾತಾ ಯಾರೋ
ಯೌವ್ವನ ಕಾಲದ ಕಾಮನೇ ತಣಿಸಿ ಜೀವನವೆಂಬುದಾ ಸುಂದರಗೊಳಿಸಿ
ದೇಹಗಳೆರಡೂ ಜೀವವೊಂದೂ ಎಣಿಸೋ ಆ ಬಂಧು ಯಾರೋ....
ಯಾರವನೂ... ಗಂಡು : ಯಾರವನೂ
ಇಬ್ಬರು : ಯಾರೋ ಕಾಣೇ ಆ ಸೂತ್ರಧಾರನೂ ..
ಜನುಮ ಜನುಮದ ಬಂಧನದಂತೇ ಬಾಳುವ ಬದುಕೇ ಚಿನ್ಮಯವಂತೇ
ಎಂದನವರತ ಪ್ರೇರೇಪಿಸುತಾ ಕುಣಿಸೋ ಆ ಧಾತಾ ಯಾರೋ
ಗಂಡು : ಯಾರವನೂ... ಯಾರವನೂ
ಹೆಣ್ಣು : ಯಾರೋ ಕಾಣೇ ಆ ಸೂತ್ರಧಾರನೂ ..
ಗಂಡು : ಎಲ್ಲೋ ಹುಟ್ಟಿದ ಹೆಣ್ಣಿಗೇ
ಹೆಣ್ಣು : ಎಲ್ಲೋ ಬೆಳೆದ ಗಂಡನೂ
ಇಬ್ಬರು : ಎಲ್ಲೋ ತೋರಿಸಿ ಜೀವ ಬೆಸೆಯೋನು
ಹೆಣ್ಣು : ಎಲ್ಲೋ ಬೆಳೆದ ಗಂಡನೂ
ಇಬ್ಬರು : ಎಲ್ಲೋ ತೋರಿಸಿ ಜೀವ ಬೆಸೆಯೋನು
ಗಂಡು : ಯಾರವನೂ... ಹೆಣ್ಣು : ಯಾರವನೂ
ಇಬ್ಬರು : ಯಾರೋ ಕಾಣೇ ಆ ಸೂತ್ರಧಾರನೂ ..
--------------------------------------------------------------------------------------------------------------------------
ಭಲೇ ಕಿಲಾಡಿ (1970) - ನಾರೀ ವೈಯ್ಯಾರಿ ಸುರಸುಂದರಿ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಎಲ್.ಆರ್.ಈಶ್ವರಿ
ಹೆಣ್ಣು : ನಾರಿ ವೈಯಾರಿ ಸುರಸುಂದರೀ ನಾನೇ ಸುಕಮಾರಿ
ಕಿನ್ನರರ ಕಮಲೆಯರ ಮೀರಿಸೋ ಮಾಲಾ ಮನೋಹರೀ ..
ನಾರಿ ವೈಯಾರಿ ಸುರಸುಂದರೀ ನಾನೇ ಸುಕಮಾರಿ
ಗಂಡು : ರಮಣಿ....ಇಇಇಇಇಇ ರಮಣಿ ಓ ಬ್ರಹ್ಮಚಾರಿಣಿ ರಸಿಕನ ಜೋಡಿ ಇಲ್ಲದ ತರುಣಿ
ರಮಣಿ ಓ ಬ್ರಹ್ಮಚಾರಿಣಿ ರಸಿಕನ ಜೋಡಿ ಇಲ್ಲದ ತರುಣಿ
ಏನು ಉಪಯೋಗ ಈ ರೂಪ ಸಿಂಗಾರ ಯಾರಿಗೇ ಸುಖವೇ ನವ ಬಂಗಾರ
ಗಂಡು : ನಾರಿ (ಓಹೋಹೋ) ವೈಯಾರಿ (ಹೂಂ ಹೂಂ ) ಸುರಸುಂದರೀ ನೀನೇ ಸುಕಮಾರಿ
ಕಿನ್ನರರ ಕಮಲೆಯರ ಮೀರಿಸೋ ಮಾಲಾ ಮನೋಹರೀ ..
ನಾರಿ (ಆ) ವೈಯಾರಿ (ಹೂಂ ಹೂಂ ) ಸುರಸುಂದರೀ ನೀನೇ ಸುಕಮಾರಿ
ಕಿನ್ನರರ ಕಮಲೆಯರ ಮೀರಿಸೋ ಮಾಲಾ ಮನೋಹರೀ ..
ನಾರಿ (ಆ) ವೈಯಾರಿ (ಹೂಂ ಹೂಂ ) ಸುರಸುಂದರೀ ನೀನೇ ಸುಕಮಾರಿ
ಹೆಣ್ಣು : ಸುಂದರ... ಆಆಆಅ... ಆಆಆ ಸುಂದರ .. ಓ ಪೂರ್ಣ ಚಂದಿರ ಮುಂದಿನ ವಿಷಯ ಹೇಳೆಲೋ ಬಾರಾ
ಸುಂದರ .. ಓ ಪೂರ್ಣ ಚಂದಿರ ಮುಂದಿನ ವಿಷಯ ಹೇಳೆಲೋ ಬಾರಾ
ಏನನು ಮಾಡಲೋ ಈ ಲಾವಣ್ಯ ಯಾರಿಗೇ ನೀಡಲೋ ನನ್ನ ತಾರುಣ್ಯ
ಗಂಡು : ತಿಳಿಸಲೇ... ಹೆಣ್ಣು : ತಿಳಿಸೋ
ಗಂಡು : ತಿಳಿಸಲೇ... ಹೆಣ್ಣು : ತಿಳಿಸೋ
ಗಂಡು : ನಿನ್ನ ಅಂದ ಇಳಿಸೋ ಹೆಣ್ಣು : ಆಮೇಲೆ
ಗಂಡು : ಆಲಂಗಿಸೂ ...
-------------------------------------------------------------------------------------------------------------------------ಭಲೇ ಕಿಲಾಡಿ (1970) - ಏನೋ ನಾಟಕ ಹೂಡಿ
ಸಂಗೀತ : ಸತ್ಯಂ, ಸಾಹಿತ್ಯ : ಹುಣುಸೂರ ಕೃಷ್ಣಮೂರ್ತಿ, ಗಾಯನ : ಎಸ್.ಜಾನಕೀ,
ಹೆಣ್ಣು : ಏನೇನೋ ನಾಟಕ ಹೂಡಿ ಏನೇನೋ ಮಾತುಗಳ ಆಡಿ
ಏನೇನೋ ತಂತ್ರವ ಮಾಡಿ ನನ್ನ ಮನಸನು ಗೆದ್ದು ಮರುಳೂ ಮಾಡಿದೇ
ನೀನೇ ... ಭಲೇ ಕಿಲಾಡಿ ಆಹಾ.. ನೀನೇ ... ಭಲೇ ಕಿಲಾಡಿ
ಗಂಡು : ನೀ ಎನ್ನ ಜೀವದ ನಾಡಿ ನೀ ಎನ್ನ ಪ್ರಾಣದ ಜೋಡಿ
ಎಂದೆಲ್ಲ ಪಲ್ಲವಿ ಹಾಡಿ ನನ್ನ ತಕಮಕ ಕುಣಿಸಿದ ಗಾರುಡಿ ನೀನೂ
ನಾನೂ ಭಲೇ ಕಿಲಾಡಿ... ಆಹ್ಹಾ.. ನೀನೂ ಭಲೇ ಕಿಲಾಡಿ
ಹೆಣ್ಣು : ಇರುಳೆಲ್ಲ ಕನಸನು ಕಂಡೂ ಹೊರಳಾಡಿ ಬೇಸರಗೊಂಡು
ಇರುಳೆಲ್ಲ ಕನಸನು ಕಂಡೂ ಹೊರಳಾಡಿ ಬೇಸರಗೊಂಡು
ಹಗಲೆಲ್ಲ ನಿನ್ನನೋಡನಾಡಿ ನಾ ನಿನ್ನ ಸಂಗಿಣಿಯಾದೆ
ಹಗಲೆಲ್ಲ ನಿನ್ನನೋಡನಾಡಿ ನಾ ನಿನ್ನ ಸಂಗಿಣಿಯಾದೆ ಓಓಓಓಓ..
ಏನೇನೋ ನಾಟಕ ಹೂಡಿ ಏನೇನೋ ಮಾತುಗಳ ಆಡಿ
ಏನೇನೋ ತಂತ್ರವ ಮಾಡಿ ನನ್ನ ಮನಸನು ಗೆದ್ದು ಮರುಳೂ ಮಾಡಿದೇ
ನೀನೇ ... ಭಲೇ ಕಿಲಾಡಿ ಒಹೋ... ನೀನೇ ... ಭಲೇ ಕಿಲಾಡಿ
ಗಂಡು : ಕುಡಿಗಣ್ಣ ನೋಟದ ಥಳಕೂ ಆ ನೋಟದಲ್ಲಿನ ಬೆಳಕೂ
ಕುಡಿಗಣ್ಣ ನೋಟದ ಥಳಕೂ ಆ ನೋಟದಲ್ಲಿನ ಬೆಳಕೂ
ಅನುರಾಗ ತುಂಬಿದ ಕುಲುಕೂ ತೊರೆನ್ನ ತಾಳ್ಮೆ ಕೆಡಿಸಿದೇ
ಅನುರಾಗ ತುಂಬಿದ ಕುಲುಕೂ ತೊರೆನ್ನ ತಾಳ್ಮೆ ಕೆಡಿಸಿದೇ.. ಓಹೋಹೊಹೋ ..
ನೀ ಎನ್ನ ಜೀವದ ನಾಡಿ ನೀ ಎನ್ನ ಪ್ರಾಣದ ಜೋಡಿ
ಎಂದೆಲ್ಲ ಪಲ್ಲವಿ ಹಾಡಿ ನನ್ನ ತಕಮಕ ಕುಣಿಸಿದ ಗಾರುಡಿ ನೀನೂ
ನಾನೂ ಭಲೇ ಕಿಲಾಡಿ... ಆಹ್ಹಾ.. ನೀನೂ ಭಲೇ ಕಿಲಾಡಿ
ಹೆಣ್ಣು : ಆಹ್ಹಾ.. ನೀನೇ ... ಭಲೇ ಕಿಲಾಡಿ ಗಂಡು : ಆಹಾ.. ನೀನೇ ... ಭಲೇ ಕಿಲಾಡಿ
ಹೆಣ್ಣು : ಹೂಂ ಹೂಂ . ನೀನೇ ... ಭಲೇ ಕಿಲಾಡಿ
--------------------------------------------------------------------------------------------------------------------------
No comments:
Post a Comment