ಮುಕುಂದಚಂದ್ರ ಚಲನ ಚಿತ್ರದ ಹಾಡುಗಳು
- ಕಂದಾ ಕಂದಾ ಕಂದಾ ನೀ ಬಂದ ದಿನ ಈ ದಿನ
- ಕಂದಾ ಕಂದಾ ಕಂದಾ ನೀ ಬಂದ ದಿನ ಈ ದಿನ (ಎಸ್.ಜಾನಕೀ )
- ಯಾರು ಹೊಣೆ ಯಾರು ಹೊಣೆ ಯಾರು ಹೊಣೆ
- ಹಾಲು ಹೂವು ಜೊನ್ನ ಜೇನೂ
- ನಾ ನಿನಗೇ ನೀ ನನಗೇ
- ಓ.. ಮಧುವಂತೀ ..
- ಮಾಯಾ ಮೋಹದ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುವೆಂಪು, ಗಾಯನ : ಪಿ.ಬಿ.ಶ್ರೀನಿವಾಸ
ಕಂದಾ ಕಂದಾ ಕಂದಾ ನೀ ಬಂದ ದಿನ ಈ ದಿನ
ತುಂಬಿ ಬಂದ ಜೀವನ ಕಣ್ಣ ಪುಣ್ಯ ಮೆರೆವ ದಿನ
ನಗೆಯ ಹೊನಲು ಹರಿಯುತಿರಲಿ ಈ ದಿನ
ಕಂದಾ ಕಂದಾ ಕಂದಾ ನೀ ಬಂದ ದಿನ ಈ ದಿನ
ನಿನ್ನ ಕುದುರೆ ಆಡಿ ಓಡಿ ಬೆನ್ನು ಬಾಗಿ ಸಾಗಲಿ
ಕಣ್ಣ ಮುಚ್ಚೆ ಆಡೇ ನನಗೆ ಕಾಡೇ ಗೂಡಾಗಲಿ
ಹೆತ್ತ ಕುಲ ಹೊತ್ತ ನೆಲ ಭಲೇ ಭಲೇ ಎನ್ನಲಿ
ಚಿನ್ನ ನಿನ್ನ ಹೆಸರ ಹಣತೆ ಗುಡಿ ಗುಡಿಸಲ ಬೆಳಗಲಿ
ಕಂದಾ ಕಂದಾ ಕಂದಾ ನೀ ಬಂದ ದಿನ ಈ ದಿನ
-------------------------------------------------------------------------------------------------------------------------
ಮುಕುಂದ ಚಂದ್ರ (೧೯೬೯) - ಕಂದಾ ಕಂದಾ ಕಂದಾ ನೀ ಬಂದ ದಿನ ಈ ದಿನ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುವೆಂಪು, ಗಾಯನ : ಎಸ್.ಜಾನಕೀ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕುವೆಂಪು, ಗಾಯನ : ಎಸ್.ಜಾನಕೀ
ಕಂದಾ ಕಂದಾ ಕಂದಾ ನೀ ಬಂದ ದಿನ ಈ ದಿನ
ತುಂಬಿ ಬಂದ ಜೀವನ ಕಣ್ಣ ತುಂಬ ಮೆರೆವ ದಿನ
ತುಂಬಿ ಬಂದ ಜೀವನ ಕಣ್ಣ ತುಂಬ ಮೆರೆವ ದಿನ
ನಿನ್ನ ಕುದುರೆ ಆಡಿ ಓಡಿ ಬೆನ್ನು ಬಾಗಿ ಸಾಗಲಿ
ಕಣ್ಣ ಮುಚ್ಚೆ ಆಡೇ ನನಗೆ ಕಾಡೇ ಗೂಡಾಗಲಿ
ಹೆತ್ತ ಕುಲ ಹೊತ್ತ ನೆಲ ಭಲೇ ಭಲೇ ಎನ್ನಲಿ
ಚಿನ್ನ ನಿನ್ನ ಹೆಸರ ಹಣತೆ ಗುಡಿ ಗುಡಿಸಲ ಬೆಳಗಲಿ
ಕಂದಾ ಕಂದಾ ಕಂದಾ ನೀ ಬಂದ ದಿನ ಈ ದಿನ
-------------------------------------------------------------------------------------------------------------------------
ಮುಕುಂದ ಚಂದ್ರ (೧೯೬೯) - ಯಾರು ಹೊಣೆ ಯಾರು ಹೊಣೆ ಯಾರು ಹೊಣೆ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ :ಕಣಗಾಲ್ ಪ್ರಭಾಕರ ಶಾಸ್ತ್ರೀ, ಗಾಯನ : ಎಲ್.ಆರ್. ಈಶ್ವರಿ, ಜಯದೇವ
ಯಾರು ಹೊಣೆ ಯಾರು ಹೊಣೆ ಯಾರು ಹೊಣೆ
ದೇವರೋ ದೇಶವೋ ಕಾಲವೋ ಕರ್ಮವೋ
ಯಾರು ಹೊಣೆ ಯಾರು ಹೊಣೆ ಯಾರು ಹೊಣೆ
ದುಡಿಮೆ ನೀಡೋ ದಾತ ತಿರುಪೇ ಬೇಡೆಂದ
ತಿರುಪೇ ಹಾಕೋ ದಾನಿ ದುಡಿ ನಡೆ ಎಂದ
ದುಡಿಮೆ ಸಿಕ್ಕಲಿಲ್ಲ ತಿರುಪೆ ಹುಟ್ಟಲಿಲ್ಲ
ಅಲೆಮಾರಿ ಜಾತಿ ಎಂದು ಹೆಸರಿಟ್ಟರು ನಮಗೆಲ್ಲಾ
ದುಡಿಮೆ ಸಿಕ್ಕಲಿಲ್ಲ ತಿರುಪೆ ಹುಟ್ಟಲಿಲ್ಲ
ಅಲೆಮಾರಿ ಜಾತಿ ಎಂದು ಹೆಸರಿಟ್ಟರು ನಮಗೆಲ್ಲಾ
ಯಾರು ಹೊಣೆ ಯಾರು ಹೊಣೆ ಯಾರು ಹೊಣೆ
ದೇವರೋ ದೇಶವೋ ಕಾಲವೋ ಕರ್ಮವೋ
ಹಗಲು ವೇಷ ಹಾಕೋ ಮಹಾ ನಟರು ನಾವು
ನಾನಾ ಭಾಷೆ ಕಲಿತೆವು ನಾಡೋಡಿಯಾದೆವು
ರಹದಾರಿ ಪತ್ರವಿಲ್ಲ ಆದಾಯ ತೆರಿಗೆ ಇಲ್ಲ
ಲಂಚಕೋರರ ಜನರೇ ನೆಂಟರೂ ಮನಗೆಲ್ಲ
ಕಳೆದ ಕಳೆದ ನೆನಪಿಲ್ಲ ಬರುವ ನಾಳೆ ಚಿಂತೆಯಿಲ್ಲ
ಜಾತಿ ಮತ ಭೇಧದಾ ಜಾಡ್ಯವೇ ನಮಗಿಲ್ಲಾ
ಸಮತಾವಾದಿಗಳು ಭಾವೈಕ್ಯ ಜೀವಿಗಳು
ನಾಡಲ್ಲಿ ನಮ್ಮ ಸಂಖ್ಯೆ ಹೆಚ್ಚಿದೆ ಸುಳ್ಳಲ್ಲ
-------------------------------------------------------------------------------------------------------------------------ಮುಕುಂದ ಚಂದ್ರ (೧೯೬೯) - ಹಾಲು ಹೂವೂ ಜೊನ್ನ ಜೇನೂ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರೀ, ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ
-------------------------------------------------------------------------------------------------------------------------
ಮುಕುಂದ ಚಂದ್ರ (೧೯೬೯) - ನಾ ನಿನಗೇ ನೀ ನನಗೇ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಸುಶೀಲಾ, ಪಿ.ಬಿ.ಎಸ್
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಸುಶೀಲಾ, ಪಿ.ಬಿ.ಎಸ್
ಗಂಡು : ಆಆಆ... ನಾ ನಿನಗೇ .. ನೀ ನನಗೇ ..
ನಾ ನಿನಗೇ ನೀ ನನಗೇ .. ಜೇನಾಗುವ..
ಹೆಣ್ಣು : ರಸದೇವ ಗಂಗೆಯಲಿ ಮೀನಾಗುವ..
ಗಂಡು : ಹೂವಾಗುವಾ.. ಹೆಣ್ಣು : ಹಣ್ಣಾಗುವಾ..
ಗಂಡು : ಪ್ರತಿರೂಪಿ ಭಗವತಿಗೇ ಮುಡಿಪಾಗುವಾ
ನಾ ನಿನಗೇ
ಇಬ್ಬರು : ನೀ ನನಗೇ ಜೇನಾಗುವಾ
ಗಂಡು : ಶಿವನೆನ್ನ ಸುಖಕೆ ಸುಖೀ .. ಶಿವನೆನ್ನ ಸುಖಕೆ ಸುಖೀ ..
ಹೆಣ್ಣು : ಸುಖೀ ಸುಖವಾ ಸವಿ ಅಖಿಲರೂಪ ಸುಖೀ ..
ಗಂಡು : ಬಾ ಬಾರಾ ಬಾರಾ ಸಖಿ
ಇಬ್ಬರು : ನಾ ನಿನಗೇ ನೀ ನನಗೇ .. ಜೇನಾಗುವ..
ಹೆಣ್ಣು : ರಾಮಚಂದ್ರನಾ ಮದನಾ ಮಾದೇವಿ ಸೀತೆ
ರಾಮಚಂದ್ರನಾ ಮದನಾ ಮಾದೇವಿ ಸೀತೆ
ಪುಂಡರೀಕನು ಪಡೆದ ಶ್ರೀ ಮಹಾಸತಿ ಸೀತೆ
ಗಂಡು : ತಮ್ಮ ಹರಕೆಯ ಒಸಗೆ ಮಂಚವ ಮಾಡಿ
ತಮ್ಮ ಹರಕೆಯ ಒಸಗೆ ಮಂಚವ ಮಾಡಿ
ವಿರಹದುರಿಯನೂ ಕುದಿಸಿ ಹಾಲು ಪುಣ್ಯವ ಹಾಸೀ
ಹೆಣ್ಣು : ಹೂವೂ ಸುಖವನೇ ಹೊದಿಸಿ
ಹೂವೂ ಸುಖವನೇ ಹೊದಿಸಿ ಮಿಲನ ಮಧುವನೂ ಸೂಸಿ
ಗಂಡು : ಕರುಣಿಸಲೀ.. ಕೃಪೆಮಾಡಿ... ಕರುಣಿಸಲೀ.. ಕೃಪೆಮಾಡಿ
ಹೆಣ್ಣು : ತಮ್ಮನೂ ಪ್ರಿಯಸುಧ ರಕ್ಷೇ ನೀಡಿ
ಗಂಡು : ಬಾ ಬಾರಾ ಬಾರಾ ಸಖಿ
ಹೆಣ್ಣು : ನಾ ನಿನಗೇ ನೀ ನನಗೇ .. ಜೇನಾಗುವ.. ರಸದೇವ ಗಂಗೆಯಲಿ ಮೀನಾಗುವ..
ಹೂವಾಗುವಾ.. ಹಣ್ಣಾಗುವಾ.. ಪ್ರತಿರೂಪಿ ಭಗವತಿಗೇ ಮುಡಿಪಾಗುವಾ
ಇಬ್ಬರು : ನಾ ನಿನಗೇ ನೀ ನನಗೇ ಜೇನಾಗುವಾ
ಹೆಣ್ಣು : ಆಆಆ... ಆಆಆ..
ಇಬ್ಬರು : ಆಆಆ... ಆಆಆ..
-------------------------------------------------------------------------------------------------------------------------
ಮುಕುಂದ ಚಂದ್ರ (೧೯೬೯) - ಓ... ಮಧುವಂತೀ ..
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ
-------------------------------------------------------------------------------------------------------------------------
ಮುಕುಂದ ಚಂದ್ರ (೧೯೬೯) - ಮಾಯಾ ಮೋಹದ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್, ಎಸ್.ಜಾನಕೀ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ವಿಜಯನಾರಸಿಂಹ ಗಾಯನ : ಪಿ.ಬಿ.ಎಸ್, ಎಸ್.ಜಾನಕೀ
ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲ
-------------------------------------------------------------------------------------------------------------------------
No comments:
Post a Comment