929. ಭಲೇ ಬಸವ (೧೯೬೯)


ಭಲೇ ಬಸವ ಚಲನಚಿತ್ರದ ಹಾಡುಗಳು 
  1. ಒಹೋ. ಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ
  2. ಕಂಡ್ಯಾ ಕಂಡ್ಯನೋ ಚೆಲುವಾ
  3. ಇವನೇ ನನ್ನ ನಲ್ಲ 
  4. ತೆರೆಯಲು ಕಣ್ಣು 
  5. ಮೈಯ್ಯಿಗೇ ಮೈಯ್ಯಿ ಸೋಕಿದೊಡನೇ 
  6. ಬಾ ಬಾ ಬಾ ಹತ್ತಿರ ಹತ್ತಿರ ಬಾ 
ಭಲೇ ಬಸವ (೧೯೬೯) - ಒಹೋ. ಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ
ಸಂಗೀತ : ರಾಜೇಶ್ವರಿರಾವ್,  ಸಾಹಿತ್ಯ : ಚಿ.ಉದಯಶಂಕರ, ಸದಾಶಿವಯ್ಯ ಗಾಯನ : ಎಸ್.ಜಾನಕೀ 

ಒಹೋ. ಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ
ಒಹೋ. ಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ
ಬಲ್ಲೆ ಕಣೋ ಕೋಲೆಬಸವಾ ನಿನ್ನ ಮನವಾ ನನ್ನ ಮನವಾ
ಒಹೋಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ
ಬಲ್ಲೆ ಕಣೋ ಕೋಲೆಬಸವಾ ನಿನ್ನ ಮನವಾ ನನ್ನ ಮನವಾ

ಮೂರು ಆನೆಯಂತೆ ಬಲವಾ ಹೊಂದಿರವಾ ಈ ಬಸವಾ
ಮೂರು ಆನೆಯಂತೆ ಬಲವಾ ಹೊಂದಿರವಾ ಈ ಬಸವಾ
ಚಿಗುರು ಮೀಸೆ ಜಿಗಿ ಜಿಗಿಸುತ್ತಾ ಠೀವಿಯಿಂದ ನಡೆದು ಬರುವಾ
ಓದಿಲ್ಲದ ಜಾಣನೀವ ಮನೆಯವರ ಪ್ರಾಣನೀವಾ
ಹೆಣ್ಣೆಂದರೆ ದೂರ ದೂರಾ ಏಕೆ ಓಡಿ ಹೋಗುವಾ
ಒಹೋಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ
ಬಲ್ಲೆ ಕಣೋ ಕೋಲೆಬಸವಾ ನಿನ್ನ ಮನವಾ ನನ್ನ ಮನವಾ

ಮರದಿಂದ ಮರಕ್ಕೆ ನೇಗವಾ ಹನುಮಂತನ ಶಿಷ್ಯನಿವಾ.. ಅಹ್ಹಹ್ಹಾ
ಮರದಿಂದ ಮರಕ್ಕೆ ನೇಗವಾ ಹನುಮಂತನ ಶಿಷ್ಯನಿವಾ
ಕಲ್ಲಿನಂಥ ಮೈಯಿನವಾ ಬೆಲ್ಲದಂತ ಮನಸಿನವಾ
ಏಕೆ ದೂರ ಜಾರುವಾ ಸಿಡುಕಿ ಸಿಡುಕಿ ನೋಡುವಾ
ಏಕೆ ದೂರ ಜಾರುವಾ ಸಿಡುಕಿ ಸಿಡುಕಿ ನೋಡುವಾ
ಈ ಬಸವಾ ಕದ್ದಿರುವಾ ನನ್ನ ಮನವಾ.. ನನ್ನ ಮನವಾ
ಒಹೋಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ
ಬಲ್ಲೆ ಕಣೋ ಕೋಲೆಬಸವಾ ನಿನ್ನ ಮನವಾ ನನ್ನ ಮನವಾ

ಭೂದೇವಿಯೇ ನನ್ನ ತಾಯಿ ಎಂದು ಮನದಿ ನಂಬಿರುವ
ಭೂದೇವಿಯೇ ನನ್ನ ತಾಯಿ ಎಂದು ಮನದಿ ನಂಬಿರುವ
ನೇಗಿಲೇ ದೇವರೆಂದು ಪೂಜೆಯನ್ನು ಮಾಡುವಾ
ಮಣ್ಣಿನಲೇ ಚಿನ್ನವಾ ಬೆಳೆದ ಆಸೆ ಹೊಂದಿಹಾ
ಮಣ್ಣಿನಲೇ ಚಿನ್ನವಾ ಬೆಳೆದ ಆಸೆ ಹೊಂದಿಹಾ
ಗಂಗೆ ಕೈಯ ಹಿಡಿದರೆ ತಾನೇ ಫಲವಾ ಬಸವಾ ಕಾಣುವಾ
ಒಹೋಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ
ಬಲ್ಲೆ ಕಣೋ ಕೋಲೆಬಸವಾ ನಿನ್ನ ಮನವಾ ನನ್ನ ಮನವಾ
ಒಹೋಹೋ ಭಲೇ ಬಸವಾ ಮಾತಾಡೋ ಬೀದಿ ಬಸವಾ.. ಅಹ್ಹಹ್ಹಹ್ಹಾ.. 
-------------------------------------------------------------------------------------------------------------------------

ಭಲೇ ಬಸವ (೧೯೬೯) - ಕಂಡ್ಯಾ ಕಂಡ್ಯನೋ ಚೆಲುವಾ
ಸಂಗೀತ : ರಾಜೇಶ್ವರಿರಾವ್,  ಸಾಹಿತ್ಯ : ಚಿ.ಉದಯಶಂಕರ, ಸದಾಶಿವಯ್ಯ ಗಾಯನ : ಎಸ್.ಜಾನಕೀ, ಮಾಧವಪೆದ್ದಿ  

ಹೆಣ್ಣು : ಕಂಡ್ಯಾ ಕಂಡ್ಯನೋ ಚೆಲುವಾ ನನ್ ಜಾಣತನವ 
            ಕೇಳೋ ಕೇಳಲ್ಲೋ ಬಸವಾ
             ಕಂಡ್ಯಾ ಕಂಡ್ಯನೋ ಚೆಲುವಾ ನನ್ ಜಾಣತನವ 
             ಕೇಳೋ ಕೇಳಲ್ಲೋ ಬಸವಾ

ಹೆಣ್ಣು : ಒಬ್ಬನ ಕಟ್ಟಿದ್ದೆ ಒಬ್ಬನ ಬಿಟ್ಟಿದ್ದೇ..
            ಒಬ್ಬನ ಕಟ್ಟಿದ್ದೆ ಒಬ್ಬನ ಬಿಟ್ಟಿದ್ದೇ ಒಬ್ಬನ ಕರಕೊಂಡು 
            ಒಳಗಹೋದೆ ಚೆಲುವಾ... ಆಆಆ.. 
            ಕೇಳೋ ಕೇಳಲ್ಲೋ ಬಸವಾ 
ಗಂಡು : ಒಹೋ ಓಹೋಹೋ .. ಯಾವೋನ್ನ ಕಟ್ಟಿದ್ದೆ 
             ಯಾವೋನ್ನ ಬಿಟ್ಟಿದ್ದೆ
           ಯಾವೋನ್ನ ಕರಕೊಂಡು ಒಳಗ ಹೋದೇ ಚೆಲುವೇ
ಹೆಣ್ಣು : ಅಹ್ಹಹ್ಹ.. ಅಹ್ಹಹ್ಹ .. ಹಸುವನ್ನ ಕಟ್ಟಿದ್ದೆ, ಕರುವನ್ನ ಬಿಟ್ಟಿದ್ದೇ
             ಹಸುವನ್ನ ಕಟ್ಟಿದ್ದೆ, ಕರುವನ್ನ ಬಿಟ್ಟಿದ್ದೇ ಹಾಲನ್ನ       
             ಕರಕೊಂಡು ಒಳಗ ಹೋದೆ ಚೆಲುವಾ.. ಅಹ್ಹಹ್ಹ.. ಅಹ್ಹಹ್ಹ
             ಕೇಳೋ ಕೇಳಲೋ ಬಸವಾ... ಬಸವಾ
             ಕಂಡ್ಯಾ ಕಂಡ್ಯನೋ ಚೆಲುವಾ ನನ್ ಜಾಣತನವ 
             ಕೇಳೋ ಕೇಳಲೋ ಬಸವಾ

ಹೆಣ್ಣು : ಒಬ್ಬನ ಹಾಸಿದ್ದೇ, ಒಬ್ಬನಾ ಹೊದ್ದಿದ್ದೇ 
            ಒಬ್ಬನ ಹಾಸಿದ್ದೇ, ಒಬ್ಬನಾ ಹೊದ್ದಿದ್ದೇ 
            ಒಬ್ಬನಾ ಎಳೆಕೊಂಡು ಮಲಗಿದ್ದೆ ಚೆಲುವಾ... ಆಆಆ...
ಗಂಡು : ಹೇ... ಯಾವೋನ್ನ ಹಾಸಿದ್ದೇ, ಯಾವೋನ್ನ ಹೊದ್ದಿದ್ದೇ
            ಯಾವೋನ್ನ ಎಳಕೊಂಡು ಮಲಗಿದ್ದೇ ಚೆಲುವೇ 
ಹೆಣ್ಣು : ಅಹ್ಹಹ್ಹ.. ಅಹ್ಹಹಹಹ್ .. ಹಾಸಿಗೆ ಹಾಸಿದ್ದೇ, 
            ಕಂಬಳಿಯ ಹೊದ್ದಿದ್ದೇ ತಲೆದಿಂಬು ಎಳಕೊಂಡು ಮಲಗಿದ್ದೆ 
            ಚೆಲುವಾ ಅಹ್ಹಹ್ಹಹ್ಹಾ.. ಕೇಳೋ ಕೇಳಲೋ ಬಸವಾ... 
            ಬಸವಾ ಕಂಡ್ಯಾ ಕಂಡ್ಯನೋ ಚೆಲುವಾ ನನ್ ಜಾಣತನವ 
            ಕೇಳೋ ಕೇಳಲೋ ಬಸವಾ.. ಅಹ್ಹಹ್ಹಹ್ಹ ..

ಹೆಣ್ಣು : ಒಬ್ಬಂಗೆ ಕಾಲಕೊಟ್ಟೆ, ಒಬ್ಬಂಗೆ ಕೈ ಕೊಟ್ಟೆ 
            ಒಬ್ಬಂಗೆ ಕಾಲಕೊಟ್ಟೆ, ಒಬ್ಬಂಗೆ ಕೈ ಕೊಟ್ಟೆ ಒಬ್ಬಂಗೆ 
            ಸೀರೆಯನ್ನು ಕೊಟ್ಟು ಬಿಟ್ಟೇ ಚೆಲುವಾ..
ಗಂಡು : ಛೀ..ಛೀ.. ಯಾರಿಗೆ ಕಾಲ್ಕೊಟ್ಟೆ, ಯಾರಿಗೆ ಕೈ ಕೊಟ್ಟೇ 
             ಯಾರೀಗೆ ಸೀರೆಯನ್ನು ಕೊಟ್ಟು ಬಿಟ್ಟೇ ಚೆಲುವೇ
ಹೆಣ್ಣು : ಅಹ್ಹಹ್ಹ.. ಕೆಂಚಗಾರ್ಗೆ ಕಾಲಕೊಟ್ಟೆ, ಬಳೆಗಾರ್ಗೆ ಕೈ ಕೊಟ್ಟೇ 
            ಮಡಿವಾಳ್ಗೆ ಸೀರೆಯನ್ನು ಕೊಟ್ಟು ಬಿಟ್ಟೇ ಚೆಲುವಾ 
             ಕೇಳೋ ಕೇಳಲೋ ಬಸವಾ... ಬಸವಾ
            ಕಂಡ್ಯಾ ಕಂಡ್ಯನೋ ಚೆಲುವಾ ನನ್ ಜಾಣತನವ 
            ಕೇಳೋ ಕೇಳಲೋ ಬಸವಾ.. ಅಹ್ಹಹ್ಹಹ್ಹ ..
             ಬಸವಾ.. ಬಸವಾ.. ಅಹ್ಹಹ್ಹ.. ಬಸವಾ.. ಬಸವಾ... 
             ಅಯ್ಯೋ.. ಬಸವ... ಅಹ್ಹಹ್ಹ..
-----------------------------------------------------------------------------------------------------------------------

ಭಲೇ ಬಸವ (೧೯೬೯) - ಇವನೇ ನನ್ನ ನಲ್ಲಾ
ಸಂಗೀತ : ರಾಜೇಶ್ವರಿರಾವ್, ಸಾಹಿತ್ಯ : ಚಿ. ಸದಾಶಿವಯ್ಯ ಗಾಯನ : ಪಿ.ಬಿ.ಎಸ್.ಎಲ್.ಆರ್.ಈಶ್ವರಿ


ಹೆಣ್ಣು : ಇವನೇ ನನ್ನ ನಲ್ಲಾ ಇವನೋ ಎಲ್ಲ ಬಲ್ಲ
          ಇವನೇ ನನ್ನ ನಲ್ಲಾ ಇವನೋ ಎಲ್ಲ ಬಲ್ಲ
          ಇವನಿಲ್ಲದೇ ನಾನಿಲ್ಲ ನಾನಿಲ್ಲದೇ ಇವನಿಲ್ಲಾ
          ಇವನೇ ನನ್ನ ನಲ್ಲಾ ಇವನೋ ಎಲ್ಲ ಬಲ್ಲ
ಗಂಡು : ಕನಸಲೂ ಕಾಣಲಿಲ್ಲ ಮನಸಲ್ಲೂ ಬಯಸಲಿಲ್ಲ 
           ಕನಸಲೂ ಕಾಣಲಿಲ್ಲ ಮನಸಲ್ಲೂ ಬಯಸಲಿಲ್ಲ
           ಹೊಸ ಆಟ ನನಗೆ ಎಲ್ಲಾ ಕಡೆಯಂತೋ ಶಿವನೇ ಬಲ್ಲ
           ಕನಸಲೂ ಕಾಣಲಿಲ್ಲ ಮನಸಲ್ಲೂ ಬಯಸಲಿಲ್ಲ

ಹೆಣ್ಣು : ಕಂಡ ಒಡನೇ  ಪರಮ ಮಿತ್ರ ಪ್ರಣಯರಾಜ ಈತನೂ 
          ಕಂಡ ಒಡನೇ  ಪರಮ ಮಿತ್ರ ಪ್ರಣಯರಾಜ ಈತನೂ
          ಕೇಳಿದೊಡನೇ ಕರುಣೆಯಿಂದ ಓಡಿ ಬಂದ ಧೀರನೂ 
ಗಂಡು : ಬ್ರಹ್ಮಚಾರಿಯಿವನು ನಡುಬೀದಿಗೆ ನೀ ಎಳೇ ತಂದಿರುವೇ ಹುಡುಗಾಟದಲಿ
           ಬೆಕ್ಕಿಗೆ ಏನೋ ಚೆಲ್ಲಾಟ ಬಡ ಇಲಿಗೆ ಪ್ರಾಣ ಸಂಕಟ 
ಹೆಣ್ಣು : ತಕೋ ..                 ಗಂಡು : ತಕೋ .. 
ಹೆಣ್ಣು : ತಕೋ ..                 ಗಂಡು : ಆಹಾ.. 
ಗಂಡು : ಕನಸಲ್ಲೂ ಕಾಣಲಿಲ್ಲ ಮನಸಲ್ಲೂ ಬಯಸಲಿಲ್ಲ

ಗಂಡು : ನೀನು ವೀಣೆ ನಾನೇ ಬುರುಡೇ ನೀನು ಜೇನು ದುಂಬಿ ನಾ 
            ನೀನೇ ಕಡಲು ನಾನೇ ಮೀನು ಗಾಳದಲ್ಲಿ ಬಿದ್ದೇ  ನಾನು  
           ಅರಿವಿಲ್ಲದೆಯೇ ಕಿರುನಾಟಕವಾ ನಾಯಕನಾಗಿ ನಟಿಸುತ್ತಿರುವೇ 
            ಬರಿಮಾತಿನಲ್ಲೇ ಈ ಬಡವನು ಲಕ್ಷಾಧಿಪತಿ ನೀ ಮಾಡಿರುವೇ 
ಹೆಣ್ಣು : ಆಹಾ....                 ಗಂಡು :  ಒಹೋ
ಹೆಣ್ಣು : ಆಹಾ....                 ಗಂಡು :  ಒಹೋ
ಗಂಡು : ಕನಸಲ್ಲೂ ಕಾಣಲಿಲ್ಲ ಮನಸಲ್ಲೂ ಬಯಸಲಿಲ್ಲ

ಹೆಣ್ಣು : ಓ.. ಮೈ ಡಾರ್ಲಿಂಗ್                      ಗಂಡು : ಓ ಮೈ ಸ್ವೀಟ್ ಹಾರ್ಟ್
ಹೆಣ್ಣು : ಹ್ಯಾವ್ ಐ ಲವ್ ಯೂ                     ಗಂಡು : ಕಮ್ ಟು  ಸೇಮ್ 
ಹೆಣ್ಣು : ಓ.. ಮೈ ಡಾರ್ಲಿಂಗ್ ಓ ಮೈ ಸ್ವೀಟ್ ಹಾರ್ಟ್ ಹ್ಯಾವ್ ಐ ಲವ್ ಯೂ  ಕಮ್ ಟು  ಸೇಮ್
         ನೀನೇ ನನ್ನ ಪ್ರಣಯ ಮೂರ್ತಿ ನೀನೇ ಬಾಳ ಸ್ಫೂರ್ತಿಯೂ 
         ಬ್ರಹ್ಮಚಾರ್ಯವನೂ ನೀ ಮರೆತು ಬಿಡು ಹೊಸ ಜೀವನದಾ ಬೆಳಕನು ನೋಡು 
         ನಿಜವಾಗಿಯೂ ನೀ ನನ್ನವನೇ ಕನಸೆಲ್ಲವೂ ಫಲಿಸಿತು ಚಿಂತೆ ಬಿಡು 
ಗಂಡು : ಒಹೋ..                         ಹೆಣ್ಣು  : ಆಹಾ.. 
ಗಂಡು : ಒಹೋ..                         ಹೆಣ್ಣು  : ಆಹಾ..


ಹೆಣ್ಣು : ಇವನೇ ನನ್ನ ನಲ್ಲಾ             ಗಂಡು : ನೀನೇ ನನ್ನ ಎಲ್ಲ 
ಹೆಣ್ಣು :  ಇವನಿಲ್ಲದೇ ನಾನಿಲ್ಲ           ಗಂಡು : ನಾನಿಲ್ಲದೇ ನೀನಿಲ್ಲಾ 
ಹೆಣ್ಣು : ನೀನೇ ನನ್ನ ನಲ್ಲಾ 
----------------------------------------------------------------------------------------------------------------------- 

ಭಲೇ ಬಸವ (೧೯೬೯) - ತೆರೆಯೆಲೇ ಕಣ್ಣು ನೋಡೆಯೇ ಇಂದೂ
ಸಂಗೀತ : ರಾಜೇಶ್ವರಿರಾವ್, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಜಾನಕೀ, 

ಹೊಯ್... ತೆರೆಯೆಲೇ ಕಣ್ಣು ನೋಡೆಯೇ ಇಂದೂ ಹರೆಯದ ಹೆಣ್ಣು ಮಾಗದ ಹಣ್ಣು
ಮಾರಲು ಬಂದಿದೆ ಕಾಣಣ್ಣಾ ಕೊಳ್ಳುವೇ ಇದ್ದರೇ ಬಾರಣ್ಣಾ
ಮಾರಲು ಬಂದಿದೆ ಕಾಣಣ್ಣಾ ಕೊಳ್ಳುವೇ ಇದ್ದರೇ ಬಾರಣ್ಣಾ

ಅಹ್ಹಹ್ಹಹ್ಹ ಹ್ಹಹ್ಹ ಆಆಆ ಓಓಓಓ .. ಓಹೋಹೊಹೋ ಓಓಓಓಓ ಹೊಯ್
ಹಣ್ಣಿಗಿಂತ ಊಟ ಎಲ್ಲಾ ಹೆಣ್ಣಿಗಿಂತ ನೋಟ ಇಲ್ಲಾ..
ಹಣ್ಣಿಗಿಂತ ಊಟ ಎಲ್ಲಾ  ಹೆಣ್ಣಿಗಿಂತ ನೋಟ ಇಲ್ಲಾ..
ಹಣೆ ಎತ್ತಿ ಸಮಯಯೇ ಇಲ್ಲಾ ಹ್ಹಾಂ .. ಅಂದಕ್ಕೆ ಕಣ್ಣೇ ಇಲ್ಲಾ
ಈ ಕಣ್ಣು ಹೆಣ್ಣು ಹಣ್ಣು ಈಗಲೇ ಬಾಚಿಕೊಳ್ಳೋ..  ಬಾಚಿಕೊಳ್ಳೋ..  ಗೆಣೆಯಾ... ಓಓಓಓಓ ಹೊಯ್
ತೆರೆಯೆಲೇ ಕಣ್ಣು ನೋಡೆಯೇ ಇಂದೂ ಹರೆಯದ ಹೆಣ್ಣು ಮಾಗದ ಹಣ್ಣು
ಮಾರಲು ಬಂದಿದೆ ಕಾಣಣ್ಣಾ ಕೊಳ್ಳುವೇ ಇದ್ದರೇ ಬಾರಣ್ಣಾ
ಓಹೋಹೊಹೋ ಓಓಓಓಓ ಆಆಆ..ಆಆಆ.. ಆಆಆ
----------------------------------------------------------------------------------------------------------------------- 

ಭಲೇ ಬಸವ (೧೯೬೯) - ಮೈಯ್ಯಿಗೇ ಮೈಯ್ಯನು ಸೋಕಿದೊಡನೇ 
ಸಂಗೀತ : ರಾಜೇಶ್ವರಿರಾವ್, ಸಾಹಿತ್ಯ : ಚಿ.ಉದಯಶಂಕರ,  ಗಾಯನ : ಎಲ್.ಆರ್.ಈಶ್ವರಿ 

ಹೂಂ ಹೂಂ ಹೂಂ ಲಲಲಾ ಲಾಲಾ
ಮೈಯ್ಯಿಗೇ ಮೈಯ್ಯನು ಸೋಕಿದೊಡನೇ ನನ್ನೆದೆಯಲಿ ಝೀಲ್ ಅದೇಕೋ ಅರಿಯೆನು ನಾನು
ಝಲ್ ಝಲ್ ಝಲ್ ಅರಿಯೆನು ನಾನು
ಮೈಯ್ಯಿಗೇ ಮೈಯ್ಯನು ಸೋಕಿದೊಡನೇ ನನ್ನೆದೆಯಲಿ ಝೀಲ್ ಅದೇಕೋ ಅರಿಯೆನು ನಾನು
ಝಲ್ ಝಲ್ ಝಲ್ ಅರಿಯೆನು ನಾನು

ತಣ್ಣನೆ ಗಾಳಿ ಸಂಗೀತ ಹಿತವಾಗಿದೆ ಹೂವಿನ ಗಂಧ ಉಲ್ಲಾಸದಿಂದ ಚೆಲ್ಲಾಡಿದೆ
ತಣ್ಣನೆ ಗಾಳಿ ಸಂಗೀತ ಹಿತವಾಗಿದೆ ಹೂವಿನ ಗಂಧ ಉಲ್ಲಾಸದಿಂದ ಚೆಲ್ಲಾಡಿದೆ
ಈ ಹಸಿರು ಬಾ ಎಂದು ಕೈ ಚಾಚಿದೇ
ಈ ಹಸಿರು ಬಾ ಎಂದು ಕೈ ಚಾಚಿದೇ  ನಮಗಾಗಿ ಏಕಾಂತ ಇಲ್ಲಿದೆ ನೋಡು
ಝೀಲ್ ಝೀಲ್ ಝೀಲ್ ಇಲ್ಲಿದೆ ನೋಡು
ಮೈಯ್ಯಿಗೇ ಮೈಯ್ಯನು ಸೋಕಿದೊಡನೇ ನನ್ನೆದೆಯಲಿ ಝೀಲ್ ಅದೇಕೋ ಅರಿಯೆನು ನಾನು
ಝಲ್ ಝಲ್ ಝಲ್ ಅರಿಯೆನು ನಾನು

ಉಯ್ಯಾಲೆಯಾಂತಾಗಿ ಮನ ತೂಗಿದೆ ನಿನ್ನಯ ತೋಳ ಸೆರೆಯಾಸೆ ನನಗಾಗಿದೆ
ಉಯ್ಯಾಲೆಯಾಂತಾಗಿ ಮನ ತೂಗಿದೆ ನಿನ್ನಯ ತೋಳ ಸೆರೆಯಾಸೆ ನನಗಾಗಿದೆ
ಬಾ ಬಾ ಎಂದು ನಿನ್ನ  ಕಣ್ಣು ಎನ್ನ ಕೂಗಿದೆ
ಬಾ ಬಾ ಎಂದು ನಿನ್ನ  ಕಣ್ಣು ಎನ್ನ ಕೂಗಿದೆ  ನನ್ನದೊಂದು ಹೊಸ ಬಯಕೆ ಹೇಳುವೇ ಕೇಳು
ಝೀಲ್ ಝೀಲ್ ಝೀಲ್ ಹೇಳುವೇ ಕೇಳು
ಮೈಯ್ಯಿಗೇ ಮೈಯ್ಯನು ಸೋಕಿದೊಡನೇ ನನ್ನೆದೆಯಲಿ ಝೀಲ್ ಅದೇಕೋ ಅರಿಯೆನು ನಾನು
ಝಲ್ ಝಲ್ ಝಲ್ ಅರಿಯೆನು ನಾನು

ಮಲ್ಲಿಗೆ ಬಳ್ಳಿ ಮರವನ್ನು ತಾ ಬಳಸಿದೆ ಮರಿದುಂಬಿ ಹೂವಲ್ಲಿ ಮನೆಮಾಡಿದೆ
ಮಲ್ಲಿಗೆ ಬಳ್ಳಿ ಮರವನ್ನು ತಾ ಬಳಸಿದೆ ಮರಿದುಂಬಿ ಹೂವಲ್ಲಿ ಮನೆಮಾಡಿದೆ
ಮುಸ್ಸಂಜೆ ಸೊಬಗೆನ್ನ ಮನಕಾಡಿದೆ ಚೆಂದುಟಿ ಸವಿಜೇನು ನೀಡುವೆ ನಿನಗೆ
ಝೀಲ್ ಝೀಲ್ ಝೀಲ್ ನೀಡುವೆ ನಿನಗೆ
ಮೈಯ್ಯಿಗೇ ಮೈಯ್ಯನು ಸೋಕಿದೊಡನೇ ನನ್ನೆದೆಯಲಿ ಝೀಲ್ ಅದೇಕೋ ಅರಿಯೆನು ನಾನು
ಝಲ್ ಝಲ್ ಝಲ್ ಅರಿಯೆನು ನಾನು
-----------------------------------------------------------------------------------------------------------------------

ಭಲೇ ಬಸವ (೧೯೬೯) - ಬಾ ಬಾ ಬಾ ಹತ್ತಿರ ಹತ್ತಿರ ಬಾ 
ಸಂಗೀತ : ರಾಜೇಶ್ವರಿರಾವ್, ಸಾಹಿತ್ಯ : ಚಿ.ಉದಯಶಂಕರ,  ಗಾಯನ : ಎಲ್.ಆರ್.ಈಶ್ವರಿ, ಪಿ.ಬಿ.ಎಸ್ 

ಹೆಣ್ಣು : ಬಾ ಬಾ ಬಾ ಹತ್ತಿರ ಹತ್ತಿರ ಬಾ  ಬಾ ಬಾ ಬಾ ನನ್ನ ಹತ್ತಿರ ಬಾ
          ತಾ ತಾ ತಾ ಮುತ್ತನು ಮೆತ್ತಗೇ ತಾ  ತಾ ತಾ ತಾ ಇಲ್ಲಿಗೇ ಮೆತ್ತಗೇ ತಾ
         ಸುತ್ತ ಮುತ್ತಲೂ ಕತ್ತಲಾಗಿದೇ
         ಸುತ್ತ ಮುತ್ತಲೂ ಕತ್ತಲಾಗಿದೇ ಎತ್ತ ನೋಡುವೇ..  ಏಯ್ 
         ಬಾ ಬಾ ಬಾ ಹತ್ತಿರ ಹತ್ತಿರ ಬಾ  ಬಾ ಬಾ ಬಾ ನನ್ನ ಹತ್ತಿರ ಬಾ

ಹೆಣ್ಣು : ಎಲ್ಲಾ ಇಲ್ಲಿದೇ ಇದೆಲ್ಲಾ ನಿನ್ನದೇ
           ಎಲ್ಲಾ ಇಲ್ಲಿದೇ ಇದೆಲ್ಲಾ ನಿನ್ನದೇ ಸುಖವು ಕಾದಿದೆ ದೂರ ನಿಲ್ಲದೆ ಓಡಿ ಹೋಗದೆ
           ಸುಖವು ಕಾದಿದೆ ದೂರ ನಿಲ್ಲದೆ ಓಡಿ ಹೋಗದೆ..  ಏಯ್..
           ಬಾ ಬಾ ಬಾ ಹತ್ತಿರ ಹತ್ತಿರ ಬಾ  ಬಾ ಬಾ ಬಾ ನನ್ನ ಹತ್ತಿರ ಬಾ

ಹೆಣ್ಣು : ಈ ಹೆಣ್ಣಾ ನೋಡು ಬಂದು ಕೂಡು ಜೊತೆಯಲಾಡು ಸೇರಿ ಹಾಡು
          ಈ ಕಣ್ಣ ನೋಡು ತುಟಿಯೂ ನೋಡು ಮಧುವ ನೋಡು ಸವಿದು ನೋಡು
          ಯೌವ್ವನವೂ ತುಂಬಿದೆ  ನಿನ್ನನೇ ಕಾದಿದೆ
          ಯೌವ್ವನವೂ ತುಂಬಿದೆ  ನಿನ್ನನೇ ಕಾದಿದೆ ಮೆಲ್ಲಗೇ ಅಹ್ಹಹ್ಹಹ್ಹ  ಇಲ್ಲಿಗೇ .. ಓಹೋಹೊಹೋ
          ಮೆಲ್ಲಗೇ ಓಹೋಹೋ ಮೆಲ್ಲಗೆ.. ಓಹೋಹೋ ಓಓಓಓಓ  ಓಕೇ ..
           ಬಾ ಬಾ ಬಾ ಹತ್ತಿರ ಹತ್ತಿರ ಬಾ  ಬಾ ಬಾ ಬಾ ನನ್ನ ಹತ್ತಿರ ಬಾ
----------------------------------------------------------------------------------------------------------------------- 

No comments:

Post a Comment