930. ಕಾಣಿಕೆ (೧೯೬೯)



ಕಾಣಿಕೆ ಚಲನಚಿತ್ರದ ಹಾಡುಗಳು 
  1. ಮಾನವನಾಗಿ ಮನಸಿರಬೇಕು ಮನಸಿರಲಾಗೆ ಪ್ರೇಮಿಸಬೇಕು
  2. ಈ ಓರೆನೋಟದಾ ಮಿಂಚು ನಗೆ ಆಟ ಮಾಡಿದ ಸಂಚು 
  3. ಮಾನವರನ್ನೇ ಪ್ರೇಮಿಸಬೇಡ
ಕಾಣಿಕೆ (೧೯೬೯) - ಮಾನವನಾಗಿ ಮನಸಿರಬೇಕು ಮನಸಿರಲಾಗೆ ಪ್ರೇಮಿಸಬೇಕು
ಸಂಗೀತ : ಸತ್ಯಂ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : 

ಮಾನವನಾಗಿ ಮನಸಿರಬೇಕು ಮನಸಿರಲಾಗೆ ಪ್ರೇಮಿಸಬೇಕು
ಎಂದೆನ್ನೋ ಈ ಮಾತಾ ತಂಗಾಳಿ ತಾ ಹೇಳಿತು
ಕೋಗಿಲೆ ರಾಗ ತಾ ಏಳುವಾಗ ಜವ್ವನ ತಾನು ಝಂಮೆಂದೀತಿಗ
ತನ್ನಾಸೆ ಎಲ್ಲ ನಿಂತು ಕಣ್ಣಾಲೆ ತೋರಿ ನಿಂತು ಏನೇನೋ ಭಾವನೆ ತುಂಬಿದಾ

ಹಿರಿತನ ತೋರುವ ಬಾಳೇ ಮಾವು
ಹಸುರಿನ ಭೂಮಿಯ ನೋಟ ತಣಿವು
ಸುಮರಾಶಿ ನೋಡಲೆಂತ ನವಜೀವನ ಮೂಡುವಂತ
ಏನೇನೋ ಭಾವನೆ ತುಂಬಿದಾ
ಮಾನವನಾಗಿ ಮನಸಿರಬೇಕು ಮನಸಿರಲಾಗೆ ಪ್ರೇಮಿಸಬೇಕು
ಇಂತಾಗೆ ತನಕ ಆನಂದ ಈ ಲೋಕ 

-------------------------------------------------------------------------------------------------------------------------

ಕಾಣಿಕೆ (೧೯೬೯) - ಈ ಓರೆನೋಟದಾ ಮಿಂಚು ನಗೆ ಆಟ ಮಾಡಿದ ಸಂಚು 
ಸಂಗೀತ : ಸತ್ಯಂ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ 

ಗಂಡು :  ಈ ಓರೆನೋಟದಾ ಮಿಂಚು ನಗೆ ಆಟ ಮಾಡಿದ ಸಂಚು 
             ಚೆಲುವೆಂಬ ಜಾಲದಿ ಗಾಳ ತಾ ಬೀಸಿ 
             ಮನವ ಸೆಳೆದೆಯೇ ನಲ್ಲೇ ಗೆಲುವ ತಂದೆಯೇ  
ಹೆಣ್ಣು : ನಾ ನಿನ್ನ ಸಂಗಕೆ ಬಂದೆ ಆನಂದ ಕಾಣಲು ನಿಂದೆ
          ಬಾಳೆಂಬ ಮನೆಯಲ್ಲಿ ಪ್ರೇಮದಾ ಹಣ್ಣ
           ಹೀಗೆ ಕೂಗಿದೆ ನೀ ಮೋಡಿ ಮಾಡಿದೆ

ಗಂಡು : ಪ್ರೇಮದ ಕಾಣಿಕೆ ನೀಡದೆ ಈ ಪ್ರೇಮಿಯ ದಾಹವು ತೀರದೆ
            ಪ್ರೇಮದ ಕಾಣಿಕೆ ನೀಡದೆ ಈ ಪ್ರೇಮಿಯ ದಾಹವು ತೀರದೆ
            ಕಾಲವು ಓಡುತ ಸಾಗಿದೆ ಆದ ಕೂಗಲು ನಾಳೆಗೆ ಬಾರದೆ
           ಬಾರೆ ಸನಿಹಕೆ ನಲ್ಲೆ ಬಿಂಕವೇತಕೆ
           ಈ ಓರೆನೋಟದಾ ಮಿಂಚು ನಗೆ ಆಟ ಮಾಡಿದ ಸಂಚು 
ಹೆಣ್ಣು : ಬಾಳೆಂಬ ಮನೆಯಲ್ಲಿ ಪ್ರೇಮದಾ ಹಣ್ಣ ಹೀಗೆ ಕೂಗಿದೆ ನೀ ಮೋಡಿ ಮಾಡಿದೆ
 
ಹೆಣ್ಣು : ಕೇಳಲು ಆಸೆಯೂ ನೂರಿದೆ ಹೇಳಲು ನಾಚಿಕೆ ಕಾಡಿದೆ
          ಕೇಳಲು ಆಸೆಯೂ ನೂರಿದೆ ಹೇಳಲು ನಾಚಿಕೆ ಕಾಡಿದೆ
          ಎದೆಯಲ್ಲಿ ಒಲವಿನ ಗಂಟಿದೆ ಅದ ಬಿಡಿಸೋ ರಸಿಕತೆ ನಿನ್ನದೇ
          ಸುಖದ ದಾರಿಗೆ ನನ್ನ ಚೆಲುವು ಕೂಗಿದೆ
          ನಾ ನಿನ್ನ ಸಂಗಕೆ ಬಂದೆ ಆನಂದ ಕಾಣಲು ನಿಂದೆ
ಗಂಡು : ಚೆಲುವೆಂಬ ಜಾಲದಿ ಗಾಳ ತಾ ಬೀಸಿ 
             ಮನವ ಸೆಳೆದೆಯೇ ನಲ್ಲೇ ಗೆಲುವ ತಂದೆಯೇ  
--------------------------------------------------------------------------------------------------------------------------


ಕಾಣಿಕೆ (೧೯೬೯) - ಮಾನವರನ್ನೇ ಪ್ರೇಮಿಸಬೇಡ
ಸಂಗೀತ : ಸತ್ಯಂ, ಸಾಹಿತ್ಯ : ಸೋರಟ್ ಅಶ್ವಥ, ಗಾಯನ : ಪಿ.ಸುಶೀಲಾ 

ಮಾನವರನ್ನೇ ಪ್ರೇಮಿಸಬೇಡ ಯಾರನು ನೀನು ನಂಬಲೇಬೇಡ
ಎಂದೆನ್ನೋ ಈ ಮಾತ ನೊಂದೆನ್ನ ಮನ ಹೇಳಿತು

ಮಂಗಳವಾದ್ಯ ಹಾಡಲು ರಾಗ ಮೂಡಿತು ಮನದೇ ಪ್ರೇಮಪರಾಗ
ಮಂಗಳವಾದ್ಯ ಹಾಡಲು ರಾಗ ಮೂಡಿತು ಮನದೇ ಪ್ರೇಮಪರಾಗ
ಕಣ್ಣೆರೆದು ನೋಡಿದಾಗ ಕನಸೆಂದು ಕಂಡೆನಾಗ ನನ್ನಾಸೆ ಗಾಳಿಗೆ ತೂರಿತೇ... ಅಹ್ಹಹ್ಹಹಹ 
ಮಾನವರನ್ನೇ ಪ್ರೇಮಿಸಬೇಡ ಯಾರನು ನೀನು ನಂಬಲೇಬೇಡ
ಎಂದೆನ್ನೋ ಈ ಮಾತ ನೊಂದೆನ್ನ ಮನ ಹೇಳಿತು

ಪ್ರೇಮದ ಅಂಗಡಿ ನೋಡಲು ಮನಸು ಓಡಿತು ಕೊಳ್ಳಲು ಪ್ರೀತಿಯ ದಿನಸು 
ಪ್ರೇಮದ ಅಂಗಡಿ ನೋಡಲು ಮನಸು ಓಡಿತು ಕೊಳ್ಳಲು ಪ್ರೀತಿಯ ದಿನಸು 
ವಿಧಿರಾಯ ತೂಗವಾಗ ತಡವಾಗಿ ಹೋದೆನಾಗ  ನನಗಾಗಿ ಕಾದುದು ಕಣ್ಣೀರೇ.. ಅಹ್ಹಹ್ಹಹ್ಹಹ್  
ಮಾನವರನ್ನೇ ಪ್ರೇಮಿಸಬೇಡ ಯಾರನು ನೀನು ನಂಬಲೇಬೇಡ
ಎಂದೆನ್ನೋ ಈ ಮಾತ ನೊಂದೆನ್ನ ಮನ ಹೇಳಿತು
--------------------------------------------------------------------------------------------------------------

No comments:

Post a Comment