931. ಎಲ್ಲೆಲ್ಲೂ ನಾನೇ (೧೯೬೯)


ಎಲ್ಲೆಲ್ಲೂ ನಾನೇ  ಚಲನಚಿತ್ರದ ಹಾಡುಗಳು 
  1. ನಾನೊಬ್ಬ ಆಟೋ ರಿಕ್ಷಾವಾಲ
  2. ಉರಿಸಿಂಗಿ ಬಾ ಮರಿಸಿಂಗಿ ಬಾ
ಎಲ್ಲೆಲ್ಲೂ ನಾನೇ  (೧೯೬೯) - ನಾನೊಬ್ಬ ಆಟೋ ರಿಕ್ಷಾವಾಲ,
ಸಂಗೀತ : ಸತ್ಯಂ

ನಾನೊಬ್ಬ ಆಟೋ ರಿಕ್ಷಾವಾಲ, ಕಾಲೇಜು ಬಿ.ಎ. ಡಿಗ್ರೀ ವಾಲ
ಬೇರೆ ಕೆಲಸ ಬೇಕಿಲ್ಲ ಇಂಥ ಕೆಲಸ ಇನ್ನಿಲ್ಲ
ಯಾರ ಹಂಗಿಲ್ಲ ಯಾರ ಹಂಗಿಲ್ಲ
ಈ ಜೂಜಿನ ಈ ಮೋಜಿನ ಈ ಗಾಜಿನ ಬಾಳು
ಎಂದಾದರೂ ಚೂರಾಗಲು ಆ ಜೀವನವೇ ಗೋಳು

ನಿನ್ನ ದಾರಿ ನೋಡಯ್ಯ ನನ್ನ ರೀತಿ ಬಾಳಯ್ಯ
ನಾನೇ ರಾಜ ನೋಡಯ್ಯ ಮಾತು ಕೇಳಯ್ಯಾ
ಕೈ ಮುಗಿಯುತ ಕೆಲಸ ಬೇಡುತ ದಿನವೂ ಅಲೆಯುವ ಧೀರ
ಸೈ ಎನ್ನುತ ಕೈಯ ನಂಬುತ ನುಡಿದು ತಿನ್ನುವಾ ಬಾರಾ
ಸುಳ್ಳು ಮೋಸ ಏನಿಲ್ಲ ಕಳ್ಳ ಕಪಟ ಇಲ್ಲಿಲ್ಲ
ನ್ಯಾಯದೇ ಬಾಳುವ ನಾವೆಲ್ಲಾ ಬನ್ನಿ ನೀವೆಲ್ಲ

ನೀ ಉತ್ತಮ ಅವನು ಮಧ್ಯಮ ಇವನು ಅಧಮ ಎನಬೇಡ
ಮೈ ಬಾಗಿಸಿ ತಾ ದುಡಿವನೇ ನಿಜದೇ ಉತ್ತಮನು ನೋಡಾ
ದೇಶದ್ರೋಹಿ ಸೋಮಾರಿ ಬೇಡುವ ಹೀನ ಅಪಕಾರಿ
ದುಡಿಯುವನು ಜಾಣ ಉಪಕಾರ ಅವನಿಗೆ ಜಯಭೇರಿ
------------------------------------------------------------------------------------------------------------------------

ಎಲ್ಲೆಲ್ಲೂ ನಾನೇ  (೧೯೬೯) - ಉರಿಸಿಂಗಿ ಬಾ ಮರಿಸಿಂಗಿ ಬಾ
ಸಂಗೀತ : ಸತ್ಯಂ

ಉರಿಸಿಂಗಿ ಬಾ ಮರಿಸಿಂಗಿ ಬಾ ಊರ ಮಾತಂಗಿ ಬಾ
ಊರ ಮಾತಂಗಿ ಮರನಿಂದ ಬಾ
ಉರಿಸಿಂಗಿ ಬಾ ಮರಿಸಿಂಗಿ ಬಾ ಊರ ಮಾತಂಗಿ ಬಾ
ಊರ ಮಾತಂಗಿ ಮರನಿಂದ ಬಾ
ಕಾಳಿ ಕಲ್ಲವ್ವ ಎಲ್ಲವ್ವ ಬಾ ಕಾಲ ಭೈರವ ಕರೆದಾಗ ಬಾ 

ಯಾರು ನಾನು ಗೊತ್ತೇನೆ ದೆವ್ವ ದೇವಾ ಹೌದೇನೇ 
ಬಿಟ್ಟನೇ ಕುಣಿಸದೆ ಸಿರಿಗುಪ್ಪಿ ಶಿವಮಗ್ಗಿ ಶಾಕಿನಿ ಬಾ 
ಸಿರ್ಸಿ ಶಿದ್ದಾಪುರದ ಡಾಕಿನಿ ಬಾ 
ಕಲ್ಲೂರು ಕಾಳವ್ವ ಮಾರವ್ವ ಬಾ 
ಬೆಟ್ಟದ ಚಾಮುಂಡಿ ನೀ ನೋಡಿ ಬಾ 
ಕಟ್ಟಿಡುವೆ ನಿಮ್ಮನೆಲ್ಲ ಕೈಯಲ್ಲೇ ನಿಮ್ಮ ಕೈಯಲ್ಲೇ 

ಈ ಭೂಪತಿ ಕೊಮ್ಮನ ಭೂತದ ಆಟವ ನೋಡಿಲ್ಲೇ ನೋಡಿಲ್ಲೇ 
ಚಾಂಚವು ವಂಚಾವು ಇಲ್ಲೇ ನಿಲ್ಲ ಮಾಯವು ಮಾಟವು ನಂದೇನಲ್ಲ 
ಮಾತಾಯಿ ಮಾರವ್ವ ಮಾತಾಂಗಿ ಉತ್ತಂಗಿ 
ಈ ಶಕ್ತಿ ಒಲವಿಂದ ನೀಡೋ  ಉರೆಲ್ಲಾ 
ಬಾರೇ ಉರಿಸಿಂಗಿ ಬಾ ಮರಿಸಿಂಗಿ ಬಾ ಊರ ಮಾತಂಗಿ ಬಾ
ಊರ ಮಾತಂಗಿ ಮರದಿಂದೆ ಬಾ
ಕಾಳಿ ಕಲ್ಲವ್ವ ಎಲ್ಲವ್ವ ಬಾ ಕಾಲ ಭೈರವ ಕರೆದಾಗ ಬಾ 
--------------------------------------------------------------------------------------------------------------------------

No comments:

Post a Comment