938. ರಾಜಶೇಖರ (1967)

ರಾಜಶೇಖರ ಚಿತ್ರದ ಹಾಡುಗಳು 
  1. ಚಿಟ್ಟೆಯಂತೆ ಹಾರಬೇಡ 
  2. ಸರಸರ  ನೀನು ಜಾರೀ ಹೋದರೆ 
  3. ಮಣ್ಣು ನೀರು ಗಾಳಿ ಬೆಳಕು 
  4. ಇನಿಯಾ ಬಾ ಬಾ 
  5. ಮನಸಿನ ಅಳಲು ನಗುವಿನ ಹೊನಲು 
  6. ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ 
ರಾಜಶೇಖರ (1967)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಲ್.ಆರ್.ಈಶ್ವರಿ

ಚಿಟ್ಟೆಯಂತೆ ಹಾರಬೇಡ ಓಡಿ  ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಚಿಟ್ಟೆಯಂತೆ ಹಾರಬೇಡ ಓಡಿ  ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಕರೆಯಿಲ್ಲದೇ ಬಂದು ಯೌವ್ವನವಿಂದೂ  ಸವಿ ಬಾ ಎಂದೂ
ನನ್ನ ನಿನ್ನ ಕೂಗಲೆಂದು ಬಳಿ ಬಾ ಎಂದು
ಚಿಟ್ಟೆಯಂತೆ ಹಾರಬೇಡ ಓಡಿ  ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ

ಆ ಅಂದ ಚಂದದ ಹೆಣ್ಣು ನಿನಗೆಲ್ಲಿ ಸಿಗಬೇಕಿನ್ನೂ
ಸವಿ ನೋಡಿ ನೀ ಬೇಡ ಎಂಬೆಯೇನೋ
ಆ ಅಂದ ಚಂದದ ಹೆಣ್ಣು ನಿನಗೆಲ್ಲಿ ಸಿಗಬೇಕಿನ್ನೂ
ಸವಿ ನೋಡಿ ನೀ ಬೇಡ ಎಂಬೆಯೇನೋ
ಇಂದೊಮ್ಮೆ ನೋಡಿದ ಮೇಲೆ ಮತ್ತೊಮ್ಮೆ ನೋಡುವ ನಾಳೆ
ಎನ್ನ ಬಿಟ್ಟು ಇರಲಾರೆ ಇನ್ನೂ ಮೇಲೆ... ಇನ್ನೂ ಮೇಲೆ
ಚಿಟ್ಟೆಯಂತೆ ಹಾರಬೇಡ ಓಡಿ  ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ

ಈ ಮುತ್ತು ಈ ಹವಳ ಕೆಂದಾವರೆ
ಮಿಂಚಂತ ಮೈ ಹೊತ್ತ ನಿಂಗೆ ದೊರೆ
ಈ ಮುತ್ತು ಈ ಹವಳ ಕೆಂದಾವರೆ
ಮಿಂಚಂತ ಮೈ ಹೊತ್ತ ನಿಂಗೆ ದೊರೆ
ಸರಿ ಜೋಡಿ ನಾನು ನೀನು 
ಇರೇ ಏಕೆ ಹಾಲು ಜೇನು 
ಎರಡೊಂದೇ ಆದಮೇಲೆ ಇಲ್ಲವೇನು....  ಇಲ್ಲವೇನು
ಚಿಟ್ಟೆಯಂತೆ ಹಾರಬೇಡ ಓಡಿ  ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
ಕರೆಯಿಲ್ಲದೇ ಬಂದು ಯೌವ್ವನವಿಂದೂ  ಸವಿ ಬಾ ಎಂದೂ
ನನ್ನ ನಿನ್ನ ಕೂಗಲೆಂದು ಬಳಿ ಬಾ ಎಂದು
ಚಿಟ್ಟೆಯಂತೆ ಹಾರಬೇಡ ಓಡಿ  ಓಡಿ
ಬೆಳ್ಳಿ ಹಕ್ಕಿ ಹೋಲುವಂಥ ಹೆಣ್ಣ ನೋಡಿ
-------------------------------------------------------------------------------------------------------------------------

ರಾಜಶೇಖರ (1967)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಸ್.ಜಾನಕೀ 

ಹೂಂ ಹೂಂ ಹೂಂ .... ಆಆಆ
ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ ನೀ ಬಾಳಲೋ ಕಂದಾ ನೀ ಬಾಳಲೋ
ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ ನೀ ಬಾಳಲೋ ಕಂದಾ ನೀ ಬಾಳಲೋ

ಭೂತಾಯೆ ಹಾಸಿಗೆ ಆಕಾಶ ಹೊದ್ದಿಕೆ
ನಾ ನಿನಗೆ ನೀಡುವ ತಾಯ್ ಕೊಡುಗೆ
ಭೂತಾಯೆ ಹಾಸಿಗೆ ಆಕಾಶ ಹೊದ್ದಿಕೆ
ನಾ ನಿನಗೆ ನೀಡುವ ತಾಯ್ ಕೊಡುಗೆ
ಸೂರ್ಯ ಚಂದ್ರರಂತೆ ನೀನಾಗು ಕಡೆಗೆ
ತಾಯ್ ಕಣ್ಣಾಸೆಯ ಪ್ರೇಮ ಗುಡಿಗೆ
ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ ನೀ ಬಾಳಲೋ ಕಂದಾ ನೀ ಬಾಳಲೋ

ತಾಯ್ ಮಾನ ಕಾಯಲು ನೀನಾಗು ವೀರ
ನೀ ಎನಗೆ ಆಧಾರ ಬಂಗಾರ
ತಾಯ್ ಮಾನ ಕಾಯಲು ನೀನಾಗು ವೀರ
ನೀ ಎನಗೆ ಆಧಾರ ಬಂಗಾರ
ಕಣ್ಣಾಸೆ ಆತುರ ಎನ್ನಾಸೆ ಗೋಪುರ
ಕಣ್ತುಂಬ ನೋಡುವೆ ದೊರೆ ಕುವರ
ನೀ ಬಾಳಲೋ ಕಂದ ನೀ ಬಾಳಲೋ
ಮುತ್ತಂಥ ಮಗನಾಗಿ ಹೆತ್ತವಳ ಸಿರಿಯಾಗಿ
ದೇವರಿತ್ತ ವರವಾಗಿ ನೀ ಬಾಳಲೋ ಕಂದಾ ನೀ ಬಾಳಲೋ
--------------------------------------------------------------------------------------------------------------------------

ರಾಜಶೇಖರ (1967)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಸ್.ಜಾನಕೀ 

ಇನಿಯಾ ಬಾ ಬಾ ಬಾ ಇಲ್ಲಿ ಮೆಲ್ಲ ಮೆಲ್ಲಗೆ
ಈ ಸೊಗಸಿನೊಂದಿಗೆ ಈ ಮನಸಿನೊಂದಿಗೆ
ಅಂದ ಚಂದ ಎರಡು ಬೆರೆತ ಕಣ್ಣಿನೊಂದಿಗೆ
ಇನಿಯಾ ಬಾ ಬಾ ಬಾ ಮೆಲ್ಲಗೆ

ಹಾಡುವ ಹಾಡೆಲ್ಲ ಆಡುವ ಮಾತೆಲ್ಲಾ
ಅಲ್ಲೇ ಅಲ್ಲೇ ನೀತಿತಲ್ಲ ಒಲ್ಲೆ ಒಲ್ಲೆ ಎಂದಿರಲ್ಲ
ಹಣೆಯ ಬೊಟ್ಟು ಮುಂಭಾರ ಮೂಡಿದ ಹೂವು ಹಿಂಭಾರ
ಮೂಗುತಿ ಮೊದಲೇ ಬಲು ಭಾರ
ಬಡವರ ಮಗಳಿಗೆ ಬಡನಡು ಬಳ್ಳಿಗೆ
ನಾಚಿಕೆಯೊಂದೇ ಆಧಾರ ಕೋಗಿಲೆ ನೀಡೆ ಸಹಕಾರ

ಮಡಿಯಲಿ ಬಣ್ಣದ ಸೀರೆಯನುಡಿಸಿ
ನಗುವಿನ ಗೆಜ್ಜೆಯು ಕಾಲಿಗೆ ತೊಡಿಸಿ
ಕಾಡಿನ ಹೂವಿಗೆ ಪರಿಮಳ ಬೆರಸಿ
ನಾಚಿಕೆ ಎನ್ನುವ ಒಡವೆಯನಿರಿಸಿ
ಅಂತರಂಗದ ಉಯ್ಯಾಲೆಯಾಗಿಸಿ
ಹಾಡೆಂದು ಹೇಳುವ ಏಕೆನ್ನ ಕರೆಸಿ
--------------------------------------------------------------------------------------------------------------------------

ರಾಜಶೇಖರ (1967)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಸ್.ಜಾನಕೀ 

ಸರಸರ ನೀನು ಜಾರಿ ಹೋದರೇ ಎಲ್ಲರ ಕಣ್ಣಿಂದಲೇ
ಎನ್ನ  ಕೆಂಪು ಕೆನ್ನೆಯ ಮೇಲೆ ಗುಂಗುರು ಮುಂಗುರುಳೇ
ನೀ ಬೀಳದೇ ಸುಮ್ಮನಿರೇ
ಸರಸರ ನೀನು ಜಾರಿ ಹೋದರೇ ಎಲ್ಲರ ಕಣ್ಣಿಂದಲೇ
ಎನ್ನ ಕೆಂಪು ಕೆನ್ನೆಯ ಮೇಲೆ ಗುಂಗುರು ಮುಂಗುರುಳೇ
ನೀ ಬೀಳದೇ ಸುಮ್ಮನಿರೇ.. ಸರಸರ ನೀನು ಜಾರಿ ಹೋದರೇ..

ಓಓಓಓಓ...
ರಂಗು ರಂಗಿನ ಹೂವುಗಳೇ ಬಂಗಾರ ಬಳ್ಳಿಗಳೇ
ಸಿಂಗಾರ ತೊಟ್ಟವಳೇ  ಹಂಗೇಕೆ ನೋಡುವಿರಿ
ನಾ ರೂಪವಂತೇ ಆದರೆ ಮೈ ಬೆರಗು ಬಿದ್ದರೇ
ನೀವೇಕೆ ನಾಚುವಿರಿ ನನ್ನೇಕೆ ಕಾಡುವಿರಿ... ನನ್ನೇಕೆ ಕಾಡುವಿರಿ
ಸರಸರ ನೀನು ಜಾರಿ ಹೋದರೇ ಎಲ್ಲರ ಕಣ್ಣಿಂದಲೇ
ಎನ್ನ ಕೆಂಪು ಕೆನ್ನೆಯ ಮೇಲೆ ಗುಂಗುರು ಮುಂಗುರುಳೇ
ನೀ ಬೀಳದೇ ಸುಮ್ಮನಿರೇ.. ಸರಸರ ನೀನು ಜಾರಿ ಹೋದರೇ..  

ಓಓಓಓಓ...
ಮೇಲೆ ಹಾರುವ ಹಕ್ಕಿಗಳೇ ಚುಕ್ಕಿ ಬಂಡಿನ ಶತ್ರುಗಳೇ 
ಕಾಳ ಆಸೆಗೆ ಬನ್ನಿ ಬನ್ನಿ ಕಲ್ಲೇಟನು ತಿನ್ನಿ ತಿನ್ನಿ... ಹೊಯ್  
ತೂಗಿ ಬಾಗಿದ ಪೈರು ತೆನೆ ಕಂಚು ಮೈಯಿನ ಬಾಳೆ ಗೋನೆ 
ನಿಮ್ಮಂತೆ ನಾನು ನನ್ನಂತೆ ನೀವೂ
ಸರಸರ ನೀನು ಜಾರಿ ಹೋದರೇ ಎಲ್ಲರ ಕಣ್ಣಿಂದಲೇ
ಎನ್ನ ಕೆಂಪು ಕೆನ್ನೆಯ ಮೇಲೆ ಗುಂಗುರು ಮುಂಗುರುಳೇ
ನೀ ಬೀಳದೇ ಸುಮ್ಮನಿರೇ.. ಸರಸರ ನೀನು ಜಾರಿ ಹೋದರೇ..  
------------------------------------------------------------------------------------------------------------------------

ರಾಜಶೇಖರ (1967)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ 

ಹೆಣ್ಣು : ಆಆಆಆಅ....ಆ       ಗಂಡು : ಆಆಆಆಅ....ಆ
ಇಬ್ಬರು : ಆಆಆಆಅ....ಆ
ಹೆಣ್ಣು : ಮಣ್ಣು ನೀರು ಗಾಳಿಯು ಬೆಳಕು ಒಂದನು ಒಂದು ಹೊಂದಿಕೊಂಡಿರುವುದು
          ಮಣ್ಣು ನೀರು ಗಾಳಿಯು  ಬೆಳಕು ಒಂದನು ಒಂದು ಹೊಂದಿಕೊಂಡಿರುವುದು
ಗಂಡು : ಹೆಣ್ಣು ಕಣ್ಣು ನಾಚಿಕೆ ನಗುವು ಒಂದನು ಒಂದು ಹೊಂದಿಕೊಂಡಿರುವುದು
            ಹೆಣ್ಣು ಕಣ್ಣು ನಾಚಿಕೆ ನಗುವು ಒಂದನು ಒಂದು ಹೊಂದಿಕೊಂಡಿರುವುದು

ಹೆಣ್ಣು : ಆಆಆಆಅ....ಆ   
         ಬಾ... ಎಂದು ಬಳಿಗೆ ಬಾ ಎಂದೂ ಕೂಗುವಂತೆ ಕಾಣುತಿದೆ ಬಾಗಿದ ತೆನೆ
         ಬಾ... ಎಂದು ಬಳಿಗೆ ಬಾ ಎಂದೂ ಕೂಗುವಂತೆ ಕಾಣುತಿದೆ ಬಾಗಿದ ತೆನೆ
         ನೋಡುವ ಕಣ್ಣಿಗೇ ಹಬ್ಬ ತಂದುದು ಒಂದನು ಒಂದು ಹೊಂದಿಕೊಂಡಿರುವುದು 
ಗಂಡು : ಈ ಹೆಣ್ಣಿಗೂ ಏನ್ ಕಣ್ಣಿಗೂ ಕಿತ್ತರೂ ಕೀಳದಂತ ಸ್ನೇಹವಾದುದೂ 
           ಈ ಹೆಣ್ಣಿಗೂ ಏನ್ ಕಣ್ಣಿಗೂ ಕಿತ್ತರೂ ಕೀಳದಂತ ಸ್ನೇಹವಾದುದೂ 
          ಯೌವ್ವನ ಮೋಹಕ ರೂಪವೆಂಬುದು ಒಂದನು ಒಂದು ಹೊಂದಿಕೊಂಡಿರುವುದು 

ಹೆಣ್ಣು : ಚೆಂದಾಯ್ತು ಇದು ಚೆಂದಾಯ್ತು ಒಂದು ಬಿತ್ತು ನೂರು ಕಾಳು ಬಂದಾಯ್ತು
          ಆಸೆಯ ಬಳ್ಳಿಲಿ ಹೂವ ಕಂಡಿತು ಒಂದನು ಒಂದು ಹೊಂದಿಕೊಂಡಾಯ್ತು
ಗಂಡು : ಆಆಆ..ನೀ ಬಂದಾಗ ಬಳಿ ನಿಂತಾಗ ನಾನು ತಾನು ಎನ್ನುತಿದೆ ಕಣ್ಣು ಕೈಗಳು
            ಮೌನವೇ ಪ್ರೇಮದ ಕಥೆಯ ಹೇಳಿತು ಒಂದು ಹೊಂದಿಕೊಂಡಾಯ್ತು
ಹೆಣ್ಣು : ಮಣ್ಣು ನೀರು ಗಾಳಿಯು ಬೆಳಕು ಒಂದನು ಒಂದು ಹೊಂದಿಕೊಂಡಿರುವುದು
ಗಂಡು : ಹೆಣ್ಣು ಕಣ್ಣು ನಾಚಿಕೆ ನಗುವು ಒಂದನು ಒಂದು ಹೊಂದಿಕೊಂಡಿರುವುದು
ಇಬ್ಬರು : ಆಆಆಅ....ಆಆಆ...ಆ
--------------------------------------------------------------------------------------------------------------------------

ರಾಜಶೇಖರ (1967)
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಜಿ.ವಿ.ಅಯ್ಯರ ಗಾಯನ : ಎಲ್.ಆರ್.ಈಶ್ವರಿ 

ಮನಸಿನ ಅಳಲು ನಗುವಿನ ಹೊನಲು (ಹಾಯ್)
ಹರೆಯದ ಹುಡುಗಿ (ಹಾಯ್ ಹಾಯ್ )ಎದುರಿಗೆ ಇರಲು 
ನಗುವಿನ ಹೊನಲು ಆಆಆ.. (ಭಲೇ ಭಲೇ ಭಲೇ )
ತಕಧಿಮಿ ತಾತಯ್ಯ ಆಸೆ ಏನಯ್ಯ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯ 

ಕೆಂಪಿನ ಹುಡುಗಿ ತಂಪಿನ ನೋಟ
ಕೆಂಪಿನ ಹುಡುಗಿ ತಂಪಿನ ನೋಟ
ಕರೆಯುವ ವರೆಗೂ ಆತುರವೇಕಯ್ಯಾ
ಕರೆಯುವ ವರೆಗೂ ಆತುರವೇಕಯ್ಯಾ
ಕುಣಿಯುವ ನಲ್ಲೆಯಾ ಸೆರಗನು ಹಿಡಿದು
ಕುಣಿಯುವ ನಲ್ಲೆಯಾ ಸೆರಗನು ಹಿಡಿದು
ಸಡಿಲದ ಮುಡಿಯೂ ಹಿಡಿದೆಳೆಯುವೆಯಾ
ತಕಧಿಮಿ ತಾತಯ್ಯ ಆಸೆ ಏನಯ್ಯ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯ 

ಆನಂದದೀ ನಾಟ್ಯ ನೀ ನೋಡೇ ಬಂದೆ
ಆನಂದದೀ ನಾಟ್ಯ ನೀ ನೋಡೇ ಬಂದೆ
ಮನ ಮೋಹನೇ ಎಂದು ನಿ ಎನ್ನ ಕರೆದೆ
ಮನ ಮೋಹನೇ ಎಂದು ನಿ ಎನ್ನ ಕರೆದೆ
ಕಣ್ಣಾಸೆಯೆಲ್ಲಾ  ತುಟಿಯಂಚಿನಲ್ಲೇ
ಕಣ್ಣಾಸೆಯೆಲ್ಲಾ  ತುಟಿಯಂಚಿನಲ್ಲೇ
ಮಾತೊಂದು ಆಡದೆ ಮಂಗಮಾಯವಾಯಿತಲ್ಲಾ
ತಕಧಿಮಿ ತಾತಯ್ಯ ಆಸೆ ಏನಯ್ಯ
ಚಿಕ್ಕ ಹೆಣ್ಣು ನಾನಯ್ಯ ಅವಸರ ಬೇಡಯ್ಯ
ತಕಧಿಮಿ ತಾತಯ್ಯ ಆಸೆ ಏನಯ್ಯ 
-------------------------------------------------------------------------------------------------------------------------

No comments:

Post a Comment