939. ಮನಸ್ಸಿದ್ದರೆ ಮಾರ್ಗ (೧೯೬೭)



ಮನಸ್ಸಿದ್ದರೆ ಮಾರ್ಗ ಚಿತ್ರದ ಹಾಡುಗಳು 
  1. ನಂಬೆ ನಲ್ಲೆ ನನ್ನಮ್ಮ 
  2. ಈ ಜೀವನ ಬೇವು ಬೆಲ್ಲ (ಪಿ.ಬಿ.ಎಸ್.)
  3. ಈ ಜೀವನ ಬೇವು ಬೆಲ್ಲ 
  4. ಮಧುರ ಮೋಜಿನ ಖಜನೆಯಾ 
  5. ಅದೋ ಗುರಿ ಅದೇ ಸರಿ 
  6. ಓ ಚಂದಮಾಮ 
  7. ಅದೇ ಜನ ಅದೇ ಮನ 
ಮನಸ್ಸಿದ್ದರೆ ಮಾರ್ಗ (೧೯೬೭)
ಸಂಗೀತ : ಎಂ.ರಂಗರಾವ ಸಾಹಿತ್ಯ :ವಿಜಯನಾರಸಿಂಹ, ನರೇಂದ್ರ ಬಾಬು,  ಗಾಯನ : ಪಿ.ಬಿ.ಎಸ್, ಎಲ್.ಆರ್.ಈಶ್ವರಿ 

ಗಂಡು : ನಂಬೆ ನಲ್ಲೆ ನನ್ನನ್ನ ಅದೇ ಚೆನ್ನ ಬಿಟ್ಟೇಕೆ ನನ್ನ ಚಿನ್ನ
ಹೆಣ್ಣು : ಭಲ್ಲೆ ಹೋಗು ಇನ್ನಿಲ್ಲ ಸಮಾಧಾನ ಹಲ್ಲೆಲ್ಲಾ ಜೋಪಾನ
ಗಂಡು : ಹೊಯ್ ನಂಬೆ ನಲ್ಲೆ ನನ್ನನ್ನ ಅದೇ ಚೆನ್ನ ಬಿಟ್ಟೇಕೆ ನನ್ನ ಚಿನ್ನ
ಹೆಣ್ಣು : ಭಲ್ಲೆ ಹೋಗು ಇನ್ನಿಲ್ಲ ಸಮಾಧಾನ ಹಲ್ಲೆಲ್ಲಾ ಜೋಪಾನ

ಗಂಡು : ಹ್ಹಿಹ್ಹಿಹ್ಹಿ... (ಹ್ಹಹ್ಹಾ  ಹಹಹ್ಹೋ ಹ್ಹಹ್ಹಾ  ಹಹಹ್ಹೋ ಹ್ಹಾಂ )   
           ಸಣ್ಣ ಪಣ್ಣ ಚೋರಿ ನನ್ನ ಸೇವೆ  ಹಾಗೆಂದು ಇಂಥಾ ನೋವೇ 
          ಒಂದಾಗೋಣ ಬಾ ನಾವೇ ಬಾಳೆಲ್ಲ ತುಂಬಾ ಆನಂದವೇ  
ಹೆಣ್ಣು : ಹೇಡಿಗೊಂದು ಹೆಣ್ಣೆ ಅಯ್ಯೋ ಕೆಚ್ಛೆ ಮರಿಯಾದೆ ಮಾನ ಮುಂಚೆ 
          ಎಂದೆಂದೂ ನಿನ್ನ ನೇಚ್ಛೇ ಗಂಡೇನು ನೀನು ಛೇ..ಛೇ.ಛೇ.    
ಗಂಡು : ನ್ಯಾಯವೇ (ಅಲ್ಲವೇ) ಏತಕೆ ಕೊಲ್ಲುವೇ 
ಗಂಡು : ನಂಬೆ ನಲ್ಲೆ ನನ್ನನ್ನ ಅದೇ ಚೆನ್ನ ಬಿಟ್ಟೇಕೆ ನನ್ನ ಚಿನ್ನ
ಹೆಣ್ಣು : ಹ್ಹೇ ಹ್ಹೇ .. ಭಲ್ಲೆ ಹೋಗು ಇನ್ನಿಲ್ಲ ಸಮಾಧಾನ ಹಲ್ಲೆಲ್ಲಾ ಜೋಪಾನ 

ಗಂಡು :  ಹ್ಹಿಹ್ಹಿಹ್ಹಿ... ಹ್ಹುಹ್ಹುಹ್ಹು.. ಹ್ಹಹ್ಹಹ್ಹ   (ಹ್ಹಹ್ಹಹ್ಹ ಹ್ಹಾಹ್ಹಾಹ್ಹಾ ಹ್ಹೋ.. ಹ್ಹೋ.. ಹ್ಹಾಂ )
           ನೀರೇ ನಿನ್ನ ಮಾತ ನೀಡು ಸ್ನೇಹ ನಿಂದೇ ಈ ಜೀವ ದೇಹ 
           ಕಣ್ಣಲ್ಲಿ ತೋರೆ ಮೋಹ  ಹಣ್ಣಲ್ಲಿ ಜೇನು ಆಹ್ಹಾ ಆಹ್ಹಾ ಆಹ್ಹಾ ಆಹ್ಹಾ 
ಹೆಣ್ಣು : ಕಣ್ಣ ಹಾಕಿ ಕಾಣೋದೆಕೆ ಜೇನ ವೇಷಾಗಿ ಬಾಳೋ ಕಾಲ 
         ದಮ್ಮೇನದು ಹಾಕೋ ತಾಳ ಹಾಡೋಣ ಸೇರಿ ಲಾ..ಲಾ.ಲಾ..ಲಾ 
ಗಂಡು : ಎಂದರೇ (ಓ ದೊರೆ ) ಬಾರೆ ಬಾ ಸಕ್ಕರೇ 
ಇಬ್ಬರು : ನಾನು ನೀನು ಇನ್ನೆಲ್ಲಾ ಸಮಾಧಾನ ಹಾಯಾಗಿ ಸಾಗೋಣ 
             ನಾನು ನೀನು ಇನ್ನೆಲ್ಲಾ ಸಮಾಧಾನ ಹಾಯಾಗಿ ಸಾಗೋಣ 
            ಲ ಲಲ್ಲ ಲಲ್ಲ ಹ್ಹಿ ಹ್ಹಿ ಟಿಟಿಟಿ ತಿತಿತಿ 
  ------------------------------------------------------------------------------------------------------------------------

ಮನಸ್ಸಿದ್ದರೆ ಮಾರ್ಗ (೧೯೬೭)
ಸಂಗೀತ : ಎಂ.ರಂಗರಾವ ಸಾಹಿತ್ಯ :ವಿಜಯನಾರಸಿಂಹ, ನರೇಂದ್ರ ಬಾಬು,  ಗಾಯನ : ಪಿ.ಬಿ.ಎಸ್

ಅದೋ ಗುರಿ ಅದೇ ಸರಿ ಸಾಗು ಮುಂದಕೆ
ಗೆಲುವೆಲ್ಲಿದೆಯಾ  ಆ ಸ್ವರ್ಗ ಮನಸ್ಸಿದ್ದರೇ ಮಾರ್ಗ
ಬೇಕು ಛಲ ಏಕೆ ಭಯ ನಿನ್ನದೇ ಜಯ.. ನಿನ್ನದೇ ಜಯ
ಅದೋ ಗುರಿ ಅದೇ ಸರಿ ಸಾಗು ಮುಂದಕೆ
ಗೆಲುವೆಲ್ಲಿದೆಯಾ  ಆ ಸ್ವರ್ಗ ಮನಸ್ಸಿದ್ದರೇ ಮಾರ್ಗ
ಬೇಕು ಛಲ ಏಕೆ ಭಯ ನಿನ್ನದೇ ಜಯ... ನಿನ್ನದೇ ಜಯ

ಪ್ರಪಂಚವೊಂದು ಪ್ರೇಮಶಕ್ತಿಯೆಂದು ಭಾವಿಸೋ
ಪ್ರಪಂಚವೊಂದು ಪ್ರೇಮಶಕ್ತಿಯೆಂದು ಭಾವಿಸೋ
ಅಸಾಧ್ಯವೆಂಬುದಿಲ್ಲವೆಂದು ಸಾರಿ ತೋರಿಸೋ.. ಸಾರಿ ತೋರಿಸೋ
ಪವಿತ್ರ ಕರ್ಮಯೋಗಿಯೆಂಬ ಕೀರ್ತಿ ಸಾಧಿಸೋ.. ಕೀರ್ತಿ ಸಾಧಿಸೋ
ಅದೋ ಗುರಿ ಅದೇ ಸರಿ ಸಾಗು ಮುಂದಕೆ
ಗೆಲುವೆಲ್ಲಿದೆಯಾ  ಆ ಸ್ವರ್ಗ ಮನಸ್ಸಿದ್ದರೇ ಮಾರ್ಗ
ಬೇಕು ಛಲ ಏಕೆ ಭಯ ನಿನ್ನದೇ ಜಯ... ನಿನ್ನದೇ ಜಯ

ನಿಸ್ವಾರ್ಥಿಗೆಲ್ಲ ಫಲವು ಸತ್ಯ ಶಂಕೆ ಏತಕೋ
ನಿರಾಸೆ ನಿನ್ನ ಸೋಕದಂತೆ ಧೀರ ನೋಡಿಕೋ.. ಧೀರ ನೋಡಿಕೋ
ವಿಚಾರ ಬೇಡ ನಾಳೆಗಿಂದು ನೋವ ತಾಳಿಕೋ.. ನೋವ ತಾಳಿಕೋ
ಅದೋ ಗುರಿ ಅದೇ ಸರಿ ಸಾಗು ಸಾಗು ಮುಂದಕೆ
ಗೆಲುವೆಲ್ಲಿದೆ ಆ ಸ್ವರ್ಗ ಮನಸ್ಸಿದ್ದರೇ ಮಾರ್ಗ
ಬೇಕು ಫಲ ಏಕೆ ಭಯ ನಿನ್ನದೇ ಜಯ.. ನಿನ್ನದೇ ಜಯ
ನಿನ್ನದೇ ಜಯ... ನಿನ್ನದೇ ಜಯ... ನಿನ್ನದೇ ಜಯ
------------------------------------------------------------------------------------------------------------------------

ಮನಸ್ಸಿದ್ದರೆ ಮಾರ್ಗ (೧೯೬೭)
ಸಂಗೀತ : ಎಂ.ರಂಗರಾವ ಸಾಹಿತ್ಯ :ವಿಜಯನಾರಸಿಂಹ,  ಗಾಯನ : ಪಿ.ಬಿ.ಎಸ್

ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ 

ನಿಂತಿಯೇ ಜೋಕೆ ಹಿಂದೆ ಸಾಗೋಣ ಸಾರಿ ಮುಂದೆ 
ಅಲ್ಲೇ ನಿನ್ನ ಸಂತೋಷ ಕಾಯಕವೇ ಕೈಲಾಸ 
ನಿಂತಿಯೇ ಜೋಕೆ ಹಿಂದೆ ಸಾಗೋಣ ಸಾರಿ ಮುಂದೆ 
ಅಲ್ಲೇ ನಿನ್ನ ಸಂತೋಷ ಕಾಯಕವೇ ಕೈಲಾಸ 
ಅಳಲೇ ಇರಲಿ ಗೆಲುವೇ ಬರಲಿ ನಿಜವೇ ಬಾಳಲ್ಲಿ ಹೊನ್ನಾಗಲಿ 
ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ 
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲೇ ಭಯ
ಈ ಜೀವನ ಬೇವು ಬೆಲ್ಲಾ 

ಇಂದೇನೋ ಏಕೋ ಭೀತಿ ಬೇರೊಂದು ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ ಪಾಲಿಸಬೇಕಯ್ಯಾ ನ್ಯಾಯ
ಇಂದೇನೋ ಏಕೋ ಭೀತಿ ಬೇರೊಂದು ನಾಳೆ ರೀತಿ
ಕೈಗೊಳ್ಳೋ ಒಂದೇ ಧ್ಯೇಯ ಪಾಲಿಸಬೇಕಯ್ಯಾ ನ್ಯಾಯ
ಜಗವೇ ನಗಲಿ ಯಮನೇ ಬರಲಿ ಬಲವೇ ನಿನ್ನಲ್ಲಿ ಬೇರೂರಲಿ
ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ 
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲೇ ಭಯ
ಈ ಜೀವನ ಬೇವು ಬೆಲ್ಲಾ .... ಆಆಆ.... 
--------------------------------------------------------------------------------------------------------------------------

ಮನಸ್ಸಿದ್ದರೆ ಮಾರ್ಗ (೧೯೬೭)
ಸಂಗೀತ : ಎಂ.ರಂಗರಾವ ಸಾಹಿತ್ಯ :ವಿಜಯನಾರಸಿಂಹ,  ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ 

ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ 

ನಿಂತಿಯೇ ಜೋಕೆ ಹಿಂದೆ ಸಾಗೋಣ ಸಾರಿ ಮುಂದೆ 
ಅಲ್ಲೇ ನಿನ್ನ ಸಂತೋಷ ಕಾಯಕವೇ ಕೈಲಾಸ 
ನಿಂತಿಯೇ ಜೋಕೆ ಹಿಂದೆ ಸಾಗೋಣ ಸಾರಿ ಮುಂದೆ 
ಅಲ್ಲೇ ನಿನ್ನ ಸಂತೋಷ ಕಾಯಕವೇ ಕೈಲಾಸ 
ಅಳಲೇ ಇರಲಿ ಗೆಲುವೇ ಬರಲಿ ನಿಜವೇ ಬಾಳಲ್ಲಿ ಹೊನ್ನಾಗಲಿ 
ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ 
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲೇ ಭಯ
ಈ ಜೀವನ ಬೇವು ಬೆಲ್ಲಾ 

ಅದೇ ಜನ ಅದೇ ಮನ ನಲ್ಮೆ ಬಂದಿದೆ
ಜಯ ಸಾಧಿಸುವಾ ವೇಳೆ ಭಯವಿಲ್ಲ ಇನ್ನೂ ಮೇಲೆ
ಎಲ್ಲರಿಗೂ ಎಲ್ಲರಲ್ಲೂ ಪ್ರೀತಿ ತುಂಬಿದೆ... ಪ್ರೀತಿ ತುಂಬಿದೆ...
ಅದೇ ಜನ ಅದೇ ಮನ ನಲ್ಮೆ ಬಂದಿದೆ
ಜಯ ಸಾಧಿಸುವಾ ವೇಳೆ ಭಯವಿಲ್ಲ ಇನ್ನೂ ಮೇಲೆ
ಎಲ್ಲರಿಗೂ ಎಲ್ಲರಲ್ಲೂ ಪ್ರೀತಿ ತುಂಬಿದೆ... ಪ್ರೀತಿ ತುಂಬಿದೆ...

ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ 
--------------------------------------------------------------------------------------------------------------------------

ಮನಸ್ಸಿದ್ದರೆ ಮಾರ್ಗ (೧೯೬೭)
ಸಂಗೀತ : ಎಂ.ರಂಗರಾವ ಸಾಹಿತ್ಯ :ವಿಜಯನಾರಸಿಂಹ, ಗಾಯನ : ಎಲ್.ಆರ್.ಈಶ್ವರಿ

ಮಧುರ ಮೋಜಿನ ಖಜಾನೆಯ ಸೂರೆ ಮಾಡಲು ನೀ ಬಲ್ಲೆಯಾಹೆಣ್ಣು ಗಂಡಿನ ಈ ಬಾಷೆಯ ಮಧು ಇಲ್ಲೆನೆ ತುಂಬಿದೆ ನನ್ನಾಸೆಯ
ರಂಗು ರಂಗಿನ ಈ ರಮ್ಯ ವೇಳೆಯ ಹಾಯ್...  ಭಲೇ ರೋಮಾಂಚನ
ಮಧುರ ಮೋಜಿನ ಖಜಾನೆಯ ಸೂರೆ ಮಾಡಲು ನೀ ಬಲ್ಲೆಯಾ
ಹೆಣ್ಣು ಗಂಡಿನ ಈ ಬಾಷೆಯ ಮಧು ಇಲ್ಲೆನೆ ತುಂಬಿದೆ ನನ್ನಾಸೆಯ
ರಂಗು ರಂಗಿನ ಈ ರಮ್ಯ ವೇಳೆಯ ಹಾಯ್...  ಭಲೇ ರೋಮಾಂಚನ 

ಒಮ್ಮೆ ತಾನೇ ಈ ಸುಮ ಅರಳಿ ನಗಲು ಮನೋರಮ.. ಹಹ್ಹಹ್ಹ
ಓ ಪ್ರಿಯತಮ ಬಾಳೇ ಸರಿಗಮ ಈ ಒಲವು ಗೀತೆಗೆ ಇಲ್ಲಾ ಸಮ
ಮಧುರ ಮೋಜಿನ ಖಜಾನೆಯ ಸೂರೆ ಮಾಡಲು ನೀ ಬಲ್ಲೆಯಾ
ಹೆಣ್ಣು ಗಂಡಿನ ಈ ಬಾಷೆಯ ಮಧು ಇಲ್ಲೆನೆ ತುಂಬಿದೆ ನನ್ನಾಸೆಯ
ರಂಗು ರಂಗಿನ ಈ ರಮ್ಯ ವೇಳೆಯ ಹಾಯ್...  ಭಲೇ ರೋಮಾಂಚನ 

ಕಣ್ಣು ಕಣ್ಣು ಕೂಡಲು ಎದೆಯ ದಿಲರುಬಾ ಮೀಟಲು
ಕಣ್ಣು ಕಣ್ಣು ಕೂಡಲು ಎದೆಯ ದಿಲರುಬಾ ಮೀಟಲು
ಓ.. ಓ.. ಓ.. ರಸಿಕಾ ಎಂಥಾ ಸುಖ ಇದೇ ಇರಲಿ ಕೊನೆ ತನಕ
ಇದೇ ಇರಲಿ ಕೊನೆ ತನಕ ಇದೇ ಇರಲಿ ಕೊನೆ ತನಕ
ಮಧುರ ಮೋಜಿನ ಖಜಾನೆಯ ಸೂರೆ ಮಾಡಲು ನೀ ಬಲ್ಲೆಯಾ
ಹೆಣ್ಣು ಗಂಡಿನ ಈ ಬಾಷೆಯ ಮಧು ಇಲ್ಲೆನೆ ತುಂಬಿದೆ ನನ್ನಾಸೆಯ
ರಂಗು ರಂಗಿನ ಈ ರಮ್ಯ ವೇಳೆಯ ಹಾಯ್ ಭಲೇ ರೋಮಾಂಚನ
--------------------------------------------------------------------------------------------------------------------------

ಮನಸ್ಸಿದ್ದರೆ ಮಾರ್ಗ (೧೯೬೭)
ಸಂಗೀತ : ಎಂ.ರಂಗರಾವ ಸಾಹಿತ್ಯ :ಎಂ.ನರೇಂದ್ರಬಾಬು, ಗಾಯನ : ಎಲ್.ಆರ್.ಈಶ್ವರಿ

ಓ.. ಓ..ಓ.. ಓ..ಓ.. ಓ..ಓ.. ಓ..
ಓ.. ಓ.. ಚಂದಮಾಮ ಮುಖತೊರೆಯಾ ಮಾತಾಡೆಯಾ
ನೀ ಮನ್ನಿಸಯ್ಯಾ ನಿನ ಒಲವಿನ ಬಾಲೆಯ.. ಓಓಓ

ಹುಣ್ಣಿಮೆಯಲ್ಲಿ (ಹ್ಹಹ್ಹಹ್ಹ ) ಹೂನಗೆ ಚೆಲ್ಲಿ (ಹ್ಹಹ್ಹಹ್ಹ ) ನೀಲ ನಳಿನ ಕಣ್ಣು ಸನ್ನೇ ಗೈವಲಿ
ಆಡಿ ಓಡಿ  ಆ ದೂರ ಬಾನಲಿ
ಆಡಿ ಓಡಿ  ಆ ದೂರ ಬಾನಲಿ ಕಾಡದಿರೋ ನೀ ಕಳ್ಳ ನೋಟದಲಿ
ಓ.. ಓ.. ಚಂದಮಾಮ ಮುಖತೊರೆಯಾ ಮಾತಾಡೆಯಾ
ನೀ ಮನ್ನಿಸಯ್ಯಾ ನಿನ ಒಲವಿನ ಬಾಲೆಯ.. ಓಓಓ

ಚುಕ್ಕೆಗಳನ್ನೇ (ಹ್ಹಹ್ಹಹ್ಹ )ಮೆಚ್ಚುವ ನೀನು (ಹ್ಹಹ್ಹಹ್ಹ )
ಚುಕ್ಕೆಗಳನ್ನೇ ಮೆಚ್ಚುವ ನೀನು ದಕ್ಕದೇ ಹೋದರು ನೀ ನನ್ನವನು
ಚಂದಮಾಮ ನಾನಲ್ಲ ಪ್ರೇಯಸಿ
ಚಂದಮಾಮ ನಾನಲ್ಲ ಪ್ರೇಯಸಿ ಸಾಕು ಸಾಕು ಹೋಗೋ ಕಣ್ಮರೆಸಿ
ಓ.. ಓ.. ಚಂದಮಾಮ ಮುಖತೊರೆಯಾ ಮಾತಾಡೆಯಾ
ನೀ ಮನ್ನಿಸಯ್ಯಾ ನಿನ ಒಲವಿನ ಬಾಲೆಯ.. ಓಓಓ

ಆಆಆ... ಆಆಆ... ಆಆಆ...
ನೋಡೆಲೋ ಅದು ನೋಡೆಲೊ ಮಾತಾಡಲಾರೆ ಅದು ನೋಡೆಲೊ
ನೋಡೆಲೋ ಅದು ನೋಡೆಲೊ ಮಾತಾಡಲಾರೆ ಅದು ನೋಡೆಲೊ
ಕಾರುಮೋಡಗಳ ಹಸಿವು ಬಯಕೆ ಬಳಸಿ ಬರುತಿವೆ ನೆರೆನುಂಗಲಿಕೆ
ಕಾರುಮೋಡಗಳ ಹಸಿವು ಬಯಕೆ ಬಳಸಿ ಬರುತಿವೆ ನೆರೆನುಂಗಲಿಕೆ
ರಾಹು ಬಂದ ಕೊಲೆಗಾಗಿ ಓಡಲೋ
ರಾಹು ಬಂದ ಕೊಲೆಗಾಗಿ ಓಡಲೋ ಅಪಾಯ ನಿಧಾನ ಅಪಾಯವೋ
ನೋಡೆಲೋ ಅದು ನೋಡೆಲೊ ಮಾತಾಡಲಾರೆ ಅದು ನೋಡೆಲೊ
ನೋಡೆಲೋ ಅದು ನೋಡೆಲೊ ಮಾತಾಡಲಾರೆ ಅದು ನೋಡೆಲೊ
--------------------------------------------------------------------------------------------------------------------------

ಮನಸ್ಸಿದ್ದರೆ ಮಾರ್ಗ (೧೯೬೭)
ಸಂಗೀತ : ಎಂ.ರಂಗರಾವ ಸಾಹಿತ್ಯ :ಎಂ.ನರೇಂದ್ರಬಾಬು, ಗಾಯನ : ಪಿ.ಸುಶೀಲಾ ಎಲ್.ಆರ್.ಈಶ್ವರಿ 


ಅದೇ ಜನ ಅದೇ ಮನ ಶೋಕ ಬಂದಿದೆ
ಭಯ ಕಾಡಿಸುವಾ ವೇಳೆ ಜಯವೆಲ್ಲಿ ಇನ್ನೂ ಮೇಲೆ
ಎಲ್ಲರಿಗೂ ಎಲ್ಲರಲ್ಲೂ ಕೋಪ ತುಂಬಿದೆ
ಅದೇ ಜನ ಅದೇ ಮನ ಶೋಕ ಬಂದಿದೆ
ಭಯ ಕಾಡಿಸುವಾ ವೇಳೆ ಜಯವೆಲ್ಲಿ ಇನ್ನೂ ಮೇಲೆ
ಎಲ್ಲರಿಗೂ ಎಲ್ಲರಲ್ಲೂ ಕೋಪ ತುಂಬಿದೆ... ಕೋಪ ತುಂಬಿದೆ

ಹಾಲಂಥ ಸಂಸಾರ ಹಾಳಾಯಿತೇ ಕೈಯಾರ
ಎಂಥಾ ವಿಧಿಯು ಕಾಣೆ ಏನೋ ವೇದನೆ ಆಆಆ..
ಹಾಲಂಥ ಸಂಸಾರ ಹಾಳಾಯಿತೇ ಕೈಯಾರ
ಎಂಥಾ ವಿಧಿಯು ಕಾಣೆ ಏನೋ ವೇದನೆ ಆಆಆ..
ಸುಖ ಸಂಭ್ರಮದಿ ಕಾಮ ಬರಿದಾಯಿತೇ ಶ್ರೀರಾಮ
ನಿನಗಿಂದು ಎನಗೆ ಕಣ್ಣೀರಿಗೆ
ಈ ಜೀವನ ಬೇವು ಬೆಲ್ಲಾ ಬಲ್ಲಾಟಕೆ ನೋವೇ ಇಲ್ಲಾ
ಬಾ ಧೀರರಿಗೆ ಈ ಕಾಲ ನಿನಗುಂಟು ಜಯ
ತೆರೆದಾ ಹೃದಯ ಬಳಿಯಲ್ಲಿ ಭಯ
ಈ ಜೀವನ ಬೇವು ಬೆಲ್ಲಾ 
-------------------------------------------------------------------------------------------------------------------------

No comments:

Post a Comment