940. ಭಾಗ್ಯ ದೇವತೆ (೧೯೬೮)

ಭಾಗ್ಯ ದೇವತೆ ಚಲನಚಿತ್ರದ ಹಾಡುಗಳು 
  1. ನಯನದೇ ನಯನಾ ತಾ ಸೇರೇ
  2. ನಗೆ ನಿಧಿ ನೀನೇ ಒಲವಿನ ಜೇನೇ
  3. ನಮಿಸಿ ಸ್ತುತಿವೇನೋ ಹೇ ಶೂಲಧಾರಿ
  4. ಕರುಣಾಮಯ ಶಂಕರ 
  5. ಎನ್ನ ಮಾಯದ ಮಾಧವ 
  6. ಓಹೋಹೋ ತಂದಾನಿ ತಾನ..  
  7. ಝಣ ಝಣ ಜನ 
  8. ಹೇ ದಯಾ ಸಿಂಧು 
ಭಾಗ್ಯ ದೇವತೆ (೧೯೬೮) - ನಯನದೇ ನಯನಾ ತಾ ಸೇರೇ
ಸಂಗೀತ : ಜ್ಞಾನಮನಿ ಸಾಹಿತ್ಯ : ಸೋರಟ್ ಅಶ್ವಥ ಗಾಯನ :ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ

ಹೆಣ್ಣು : ನಯನದೇ ನಯನಾ ತಾ ಸೇರೇ...
          ನಯನದೇ ನಯನಾ ತಾ ಸೇರೇ ಬೆಸೆಯಿತು ನೇಹ ನಗೇ ತೋರೆ
ಗಂಡು :  ನಯನದೇ ನಯನಾ ತಾ ಸೇರೇ (ಆಆಆ) ಬೆಸೆಯಿತು ನೇಹ ನಗೇ ತೋರೆ
ಹೆಣ್ಣು : ನಯನದೇ ನಯನಾ ತಾ ಸೇರೇ...

ಗಂಡು : ದೇವ ನೀಡಿದ ಈ ಅಂದಾ... ದೇವ ನೀಡಿದ ಈ ಅಂದಾ
ಹೆಣ್ಣು : ದೇವರ್ಗಪಿಸಿ ನಾ ಧನ್ಯ ಇಂದೇ.. ದೇವರ್ಗಪಿಸಿ ನಾ ಧನ್ಯ ಇಂದೇ
ಗಂಡು : ಹಾಲು ಹುಣ್ಣಿಮೆ ಮಧುಚಂದ್ರ .. ಹಾಲು ಹುಣ್ಣಿಮೆ ಮಧುಚಂದ್ರ
ಹೆಣ್ಣು : ಹರುಷದ ಒಸಗೆಯ ತಾ ತಂದ.. ನಯನದೇ ನಯನಾ ತಾ ಸೇರೇ...

ಗಂಡು : ಆಆಆಅ... ಆಆಆ...
          ಅತುಳಿತ ಸಂತಸವಿಂದೇ ಮನಕೆ ತೀರೇ ಬಾಳಿನ ಆಶಾ ಬಯಕೆ
          ಅತುಳಿತ ಸಂತಸವಿಂದೇ ಮನಕೆ ತೀರೇ ಬಾಳಿನ ಆಶಾ ಬಯಕೆ
ಹೆಣ್ಣು : ಜತೆಯಾದನುತಾ ವಸಂತನಿದಕೆ...
          ಜತೆಯಾದನುತಾ ವಸಂತನಿದಕೆ  ಕಾಲವು ಕಾದಿದೆ ಸವಿ ಸುಖಕೆ...
ಗಂಡು : ನಯನದೇ ನಯನಾ ತಾ ಸೇರೇ...

ಹೆಣ್ಣು : ಮೂಡಿತು ಪ್ರೀತಿಯ ಹೊಂಗಿರಣ...
          ಮೂಡಿತು ಪ್ರೀತಿಯ ಹೊಂಗಿರಣ ದೊರಕಿತು ಪಾವನ ಪತಿಚರಣ
ಗಂಡು : ಮಿಡಿಯಿತು ರಾಗವ ಮನ ವೀಣಾ
            ಮಿಡಿಯಿತು ರಾಗವ ಮನ ವೀಣಾ.. ಒಲವೇ ನಮ್ಮ ಆಭರಣ
ಇಬ್ಬರು : ಒಲವೇ ನಮ್ಮ ಆಭರಣ
ಹೆಣ್ಣು : ನಯನದೇ ನಯನಾ ತಾ ಸೇರೇ
ಗಂಡು:  ಬೆಸೆಯಿತು ನೇಹ ನಗೇ ತೋರೆ
ಇಬ್ಬರು  : ನಯನದೇ ನಯನಾ ತಾ ಸೇರೇ
------------------------------------------------------------------------------------------------------------------------

ಭಾಗ್ಯ ದೇವತೆ (೧೯೬೮) - ನಗೆ ನಿಧಿ ನೀನೇ ಒಲವಿನ ಜೇನೇ
ಸಂಗೀತ : ಜ್ಞಾನಮನಿ ಸಾಹಿತ್ಯ : ಸೋರಟ್ ಅಶ್ವಥ ಗಾಯನ : ಎಸ್.ಜಾನಕೀ

ನಗೆ ನಿಧಿ ನೀನೇ ಒಲವಿನ ಜೇನೇ...
ನಗೆ ನಿಧಿ ನೀನೇ ಒಲವಿನ ಜೇನೇ ನಯನದೇ ನೀ ಕಾಣು ನಾಳೆ ಬರುವ ದಿನವನೂ...ಆಆಆ...
ನಗೆ ನಿಧಿ ನೀನೇ ಒಲವಿನ ಜೇನೇ...

ಸತ್ಯದ ಬೆಳಕಾಗು ಧರ್ಮವ ನೆರಳಾಗು
ಸತ್ಯದ ಬೆಳಕಾಗು ಧರ್ಮವ ನೆರಳಾಗು ಜನತಾ ಸೇವೆಯೇ ನಿನ್ನ ಗುರಿಯೆಂದು ಸಾಗು
ಸುಜನರ ಎಡೆಯಲ್ಲಿ ಹೂವಂತ ಆಗು
ಸುಜನರ ಎಡೆಯಲ್ಲಿ ಹೂವಂತ ಆಗು ನೀತಿಯ ಮಡಿಲಲ್ಲಿ ನೀ ಕಂದನಾಗು..
ಜೋ..ಜೋ  ...ಜೋ..ಜೋ
ನಗೆ ನಿಧಿ ನೀನೇ ಒಲವಿನ ಜೇನೇ...

ಅರಿವಲಿ ಹಿರಿಯಾಗು ಸಿರಿಯಲಿ ದೊರೆಯಾಗು
ಅರಿವಲಿ ಹಿರಿಯಾಗು ಸಿರಿಯಲಿ ದೊರೆಯಾಗು ಕರುಣಾಭರಣವ ನಿನ್ನ ಒಡಲಲ್ಲಿ ತೊಡಗು
ಹರನಲೀ  ಮನಸಾರ.... ಆಆಆ... ಆಆಆ...
ಹರನಲೀ ಮನಸಾರ ನೀ ಶರಣಾಗು ಹರಸುವ ಹರ ನಿನ್ನ ಧೀರ್ಘಾಯುವಾಗು
ಜೋ..ಜೋ  ...ಜೋ..ಜೋ       ಜೋ..ಜೋ  ...ಜೋ..ಜೋ
ನಗೆ ನಿಧಿ ನೀನೇ ಒಲವಿನ ಜೇನೇ... ನಯನದೇ ನೀ ಕಾಣು ನಾಳೆ ಬರುವ ದಿನವನೂ...ಓಓಓಓಓ ...
ನಗೆ ನಿಧಿ ನೀನೇ ಒಲವಿನ ಜೇನೇ.
ಆಆಆ... ಆಆಆ... ಹೂಂಹೂಂಹೂಂಹೂಂ...  
------------------------------------------------------------------------------------------------------------------------

ಭಾಗ್ಯ ದೇವತೆ (೧೯೬೮) - ನಮಿಸಿ ಸ್ತುತಿವೇನೋ ಹೇ ಶೂಲಧಾರಿ
ಸಂಗೀತ : ಜ್ಞಾನಮನಿ ಸಾಹಿತ್ಯ : ಸೋರಟ್ ಅಶ್ವಥ ಗಾಯನ :ಪಿ.ಬಿ.ಶ್ರೀನಿವಾಸ, 

ನಮಿಸಿ ಸ್ತುತಿವೇನೋ ಹೇ ಶೂಲಧಾರಿ
ನುಡಿಸು ನಡೆದುದ ಏನ್ ನಾಲಿಗೆಯಲಿ ದಿನ ದಾರಿ
ಕೇಳು ದೊರೆ ಹೇಳುವೆನಾ ನಡೆದಾ ಕಥೆಯ
ಹೆಣ್ಣ ಕಣ್ಣೀರೇ  ಈ ಗತಿಗೆ ಕಾರಣವಯ್ಯಾ ಸತ್ಯವಿದಯ್ಯಾ
ಮಕ್ಕಳ್ನು ಪಡೆಯಲು ನೀ ಸತಿಯರೇ ಕೂಡಿ
ಮುಕ್ಕಣನ ಸೇವಿಸಲು ಭಕ್ತಿಲಿ ಹೊರಡೆ ನೀ ಅಸಲಿ ಹೊರಡೆ

ಮತ್ಸರದ ರಾಣಿಯರು ಕಾಲಿಡೆ ಬಂದು
ಮಿನುಗುವ ದೀಪವು ಅರಿತು ದೇಗುಲದಂದು
ಬಾಳಲಿ ನೊಂದೆ ಕಾಡಿಗೆ ನಡೆದೇ
ಹರ ಕರುಣಾ ತೋರಿದ ಸತಿಯ ನೀಡಿದಾ
ಎತ್ತಿ ಆಡಿಸಲು ಕಂದನ ನೀನು ಆ ಸೆಲಿಕಾದಿದೆ
ಹೆತ್ತಮಕ್ಕಳನ್ನು ಕಸಿದುಕೊಂಡು ಸಿದ್ದಮ್ಮನ ಮಡಿಲಿಂದ
ನಾರಿರೂಪದಿಂದ ಮಾರಿಯರಿವರು ನೋಡು ನಿನ್ನ
ರಾಣಿಯರು ಸತ್ಯಕೆ ಸುಳ್ಳಿನ ಮೆರಗನಿತ್ತು
ನಿನ್ನ ವಂಚಿಸಿ ಹುಸಿಯಿಂದಾ
ಕುರಡನಾಗಿ ತಲೆ ಕಡಿಯೇ ಕಳುಹಿದೆ ಸತಿಯ ಕೋಪದಿಂದ
ಆ ನಾರಿಯ ತಾಪ ದೈವದ ಕೋಪ ನಾಡಿಗೆ ಈ ಶಾಖ
ಕಾರಣ ಕೇಳಯ್ಯಾ
------------------------------------------------------------------------------------------------------------------------

ಭಾಗ್ಯ ದೇವತೆ (೧೯೬೮) - ಕರುಣಾಮಯ ಶಂಕರ
ಸಂಗೀತ : ಜ್ಞಾನಮನಿ ಸಾಹಿತ್ಯ : ಸೋರಟ್ ಅಶ್ವಥ ಗಾಯನ :ಎಸ್.ಜಾನಕೀ

ಕರುಣಾಮಯ ಶಂಕರಾ ... ದೇವಾ ನೇರ ನಂಬಿದ ದೀನರಾ.. ಆಆಆ..
ಕಾಯೋ ದಯಾ ಸಾಗರ.. ಆಆಆ.. ಕಾಯೋ ದಯಾ ಸಾಗರ.
ಕರುಣಾಮಯ ಶಂಕರಾ ದೇವಾ ನೇರ ನಂಬಿದ ದೀನರಾ.. ಆಆಆ..
ಕಾಯೋ ದಯಾ ಸಾಗರ.. ಆಆಆ.. ಕಾಯೋ ದಯಾ ಸಾಗರ.

ನಗೆಯಾಟ ಸಾಕೈ ಅಂತರಯಾಮೀ  ಕರೆಯಾ ನಿಧಿ ನೀ ಓ.. ಕೊಡು ಸ್ವಾಮೀ ..
ನಗೆಯಾಟ ಸಾಕೈ ಅಂತರಯಾಮೀ  ಕರೆಯಾ ನಿಧಿ ನೀ ಓ.. ಕೊಡು ಸ್ವಾಮೀ ..
ಕಾರಿರುಳಂತೆ ಕವಿದಿದೇ ಚಿಂತೇ ಬೆಳಕಿಲ್ಲದಂತಾ ಮುನಿಸೇನೋ ತಂದೇ ..
ಕಾರಿರುಳಂತೆ ಕವಿದಿದೇ ಚಿಂತೇ ಬೆಳಕಿಲ್ಲದಂತಾ ಮುನಿಸೇನೋ ತಂದೇ ..
ದೊರೆಯೋ ದಯಾ ಸಾಗರ
ದೊರೆಯೋ ದಯಾ ಸಾಗರ ಕರುಣಾಮಯ ಶಂಕರಾ

ಸಲಹುವ ಹರನೇ ನೀನಿರಲೇಕೆ ಶರಣೆಂದವಗೇ ಭವಣೆಗಳೇಕೆ..
ಸಲಹುವ ಹರನೇ ನೀನಿರಲೇಕೆ ಶರಣೆಂದವಗೇ ಭವಣೆಗಳೇಕೆ..
ಭಯದಲಿ ನಿಂದೇ.. ಬಾಳಲಿ ನೊಂದೇ .. ಭವಭಯ ದೂರ ಪಥ ತೋರೋ ಮುಂದೇ ..
ಭಯದಲಿ ನಿಂದೇ.. ಬಾಳಲಿ ನೊಂದೇ .. ಭವಭಯ ದೂರ ಪಥ ತೋರೋ ಮುಂದೇ ..
ದೊರೆಯೋ ದಯಾ ಸಾಗರ
ದೊರೆಯೋ ದಯಾ ಸಾಗರ ಕರುಣಾಮಯ ಶಂಕರಾ
------------------------------------------------------------------------------------------------------------------------

ಭಾಗ್ಯ ದೇವತೆ (೧೯೬೮) - ಎನ್ನ ಮಾಯದ ಮದವಾ ನುಡಿಯಯ್ಯಾ
ಸಂಗೀತ : ಜ್ಞಾನಮನಿ ಸಾಹಿತ್ಯ : ಸೋರಟ್ ಅಶ್ವಥ ಗಾಯನ :ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ,

ಹೆಣ್ಣು : ಎನ್ನ ಮಾಯದ ಮದವ ಮುರಿಯಯ್ಯಾ.. ಎನ್ನ ಕಾಯದ ತಳಮಳವ ಎಣಿಸಯ್ಯ
           ಬಿಡಿಸಯ್ಯ ಜೀವದ ಜಂಜಡವ ಬಿಡಿಸಯ್ಯ.....  ಎನ್ನ ದೇವಾ ಮಲ್ಲಿಕಾರ್ಜುನಯ್ಯಾ..
           ನಿಮ್ಮ ಧರ್ಮ ಚೆನ್ನ ಮಲ್ಲಿಕಾರ್ಜುನಯ್ಯಾ.. ಅಯ್ಯಾ..
ಗಂಡು : ಗಂಗಾ ತರಂಗ ರಮಣೀಯ ಜಟಾಕಲಾಪಂ.. ಗೌರಿ ನಿರಂತರ ವಿಭೂಷಿತ ವಾಮಭಾಗಂ 
            ನಾರಾಯಾಣ ಪ್ರಿಯಂ ಅನಂಗ ಮಾದಾಪಹಾರಂ ವಾರಾಣಸಿ ಪುರಪತಿಂ ಭಜೇ ವಿಶ್ವನಾಥಮ್
            ಭಜೇ ವಿಶ್ವನಾಥಮ್...... ಭಜೇ ವಿಶ್ವನಾಥಮ್....    ವಿಶ್ವನಾಥಮ್....  
 ------------------------------------------------------------------------------------------------------------------------

ಭಾಗ್ಯ ದೇವತೆ (೧೯೬೮) - ಓಹೋಹೋ ತಂದಾನಿ ತಾನ..  
ಸಂಗೀತ : ಜ್ಞಾನಮನಿ ಸಾಹಿತ್ಯ : ಸೋರಟ್ ಅಶ್ವಥ ಗಾಯನ :ಎಲ್.ಆರ್.ಈಶ್ವರೀ

ಜಿಯಾಲೋ ... ಹೋಹೊಹೋಯ್...  ಓಓಓಓಓಯ್...
ಲಲ್ಲಲಾಲೇ ಲಲ್ಲಲಾಲೇ ಲಲ್ಲಲಾಲೇ  ಲಲ್ಲಲಾಲೇ  ಲಲ್ಲಲಾಲೇ ಲಲ್ಲಲಾಲೇ  ಲಾಲಾಲಾ ಲಾಲೀಲಾಲಾ
ಆಹಾ... ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ ಭಲ್ಲೇ ..
ಓಹೋಹೋ ತಂದಾನಿ ತಾನ..  ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ.. ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..

ಮುಕ್ಕಣನ ತೊಡೆಮೇಲೆ ನಲಿದಾಡು ಈ ಹಕ್ಕಿ
ಮೂರನೇ ಜಾವದೇ ಹೇಳಿದ ಶಕುನದ ಮಾತನ್ನ. ..
ಅಣ್ಣ ನೀ ಬಯಸೀ  ಮನಸೋತ ಹೆಣ್ಣನ್ನ
ಅಣ್ಣ ನೀ ಬಯಸೀ  ಮನಸೋತ ಹೆಣ್ಣನ್ನ ಪಡೆಯೇ ನೀ ನಡೆಯೇ ತಿಂತೀಯೋ ಮಣ್ಣನ್ನ..
ಪಡೆಯೇ ನೀ ನಡೆಯೇ ತಿಂತೀಯೋ ಮಣ್ಣನ್ನ.. ಇದಕೇ ಪರಿಹಾರ ಕೇಳಣ್ಣ.. ಯಂತ್ರ ಕಟ್ಟಣ್ಣ..
ನಾಳೇ ಅವಳ ನಿನ್ನ ಕರೆವುದನ್ನ ನೋಡಣ್ಣ..   ನೀ ನೋಡಣ್ಣ ..
ಓಹೋಹೋ ತಂದಾನಿ ತಾನ..  ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ.. ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..

ನನ್ನ ಕೈಚಳಕ ನೇನೇಬೇಕು ಕಡೆತನಕ ಮಾಟ ಮಂತ್ರ ತಂತ್ರ ಎದುರಾಳಿ ಎದೆನಡುಕ
ಸವತಿ ಹೆಣ್ಣಿನ ಕಾಟ ಭೂತದ ಕಾಟ...
ಸವತಿ ಹೆಣ್ಣಿನ ಕಾಟ ಭೂತದ ಕಾಟ ನಾ ನೋಡೇ ಓಡುವುದೋ ಭಯದಿಂದ ಊರಬಿಟ್ಟೂ ..
ನಾ ನೋಡೇ ಓಡುವುದೋ ಭಯದಿಂದ ಊರಬಿಟ್ಟೂ ..
ಮನೆಯ ಮುರಿಯುವೇನಾ ಕಪ್ಪಿಟ್ಟೂ ಕೇಳೂ ಕಿವಿಗೊಟ್ಟು
ಬೂದಿ ಹಣೆಯಲಿಟ್ಟು ಹೋರಡೇ ನಿನ್ನ ಹಗೆಚಟ್ಟೂ... ನಿನ್ನ ಹಗೆಚಟ್ಟೂ
ಓಹೋಹೋ ತಂದಾನಿ ತಾನ..  ಓಹೋಹೋ ತಾನಿ ತಂದಾನ..
ಓಡೋಡಿ  ಛಂಗೆಂದು ಚೆಂದದೇ ಹಾಡುತ್ತ ಬಂತು ಈ ಹಕ್ಕಿ
ಇದರ ಚಿನ್ನಾಟ ನೋಡಯ್ಯ ಕಣ್ಣಿಕ್ಕಿ.. ಚಿನ್ನಾಟ ನೋಡಯ್ಯ ಕಣ್ಣಿಕ್ಕಿ..
------------------------------------------------------------------------------------------------------------------------

ಭಾಗ್ಯ ದೇವತೆ (೧೯೬೮) - ಝಣ ಝಣ ಜನ
ಸಂಗೀತ : ಜ್ಞಾನಮನಿ ಸಾಹಿತ್ಯ : ಸೋರಟ್ ಅಶ್ವಥ ಗಾಯನ :ಸುಮಿತ್ರಾ,  ಬೆಂ.ಲತಾ 

ಇಬ್ಬರು : ಝಣ ಝಣ ಝಣ... ಝಣ ಝಣ ಝಣ ....  ಝಣ ಝಣ ಝಣ.. ಝಣ ಝಣ ಝಣ
             ಝಣ ಝಣ ಝಣ... ಝಣ ಝಣ ಝಣ ....  ಝಣ ಝಣ ಝಣ.. ಝಣ ಝಣ ಝಣ
             ಗೆಜ್ಜೇ ..  ಝಣ ಝಣ ಝಣ... ಝಣ ಝಣ ಝಣ ....  ಝಣ ಝಣ ಝಣ.. ಝಣ ಝಣ ಝಣ
             
ಸುಮಿತ್ರಾ : ಚಿಂತೆ ತುಂಬಿದ ಈ ದಿಂಬಕೆ ಶಾಂತಿ ಕಾಣುವ ಹೊಂಬಯಕೇ .. 
                ಚಿಂತೆ ತುಂಬಿದ ಈ ದಿಂಬಕೆ ಶಾಂತಿ ಕಾಣುವ ಹೊಂಬಯಕೇ ಶೃಂಗಾರಿ ನಾನಿರುವೇ ಸಂತಸಕೇ .. 
ಲತಾ : ಮಧು ಅಂಕದಿ 
ಸುಮಿತ್ರಾ : ಸುಖ ಸಂಗದಿ 
ಇಬ್ಬರು : ಈ ಭಾವೊಂದು ಕಾಣಿಕೇ .. 
             ಝಣ ಝಣ ಝಣ... ಝಣ ಝಣ ಝಣ ....  ಝಣ ಝಣ ಝಣ.. ಝಣ ಝಣ ಝಣ

ಲತಾ : ನನ್ನ ಕಣ್ಣ ಸಂಚಲೀ ನಿನ್ನ ನಗೇ ಮಿಂಚಲೀ              
ಸುಮಿತ್ರಾ : ನನ್ನ ಕಣ್ಣ ಸಂಚಲೀ ನಿನ್ನ ನಗೇ ಮಿಂಚಲೀ              
ಲತಾ : ಆಗೋ ರಸ ಕೇಳಿ ಆನಂದ ಏನನ್ನಲೀ ..
ಸುಮಿತ್ರಾ : ಆಗೋ ರಸ ಕೇಳಿ ಆನಂದ ಏನನ್ನಲೀ ..
ಲತಾ : ಮೋಹನ ಸವಿ ಬಂಧನಾ..
ಸುಮಿತ್ರಾ : ರಸ ಯೋಗಿ ಆಗಿ ರಾಗ ಭೋಗ ಸಮ್ಮೇಳನ
ಲತಾ  : ಬಿಡು ದುಮ್ಮಾನ ಪಡೆಸು ಸುಮ್ಮನ ಇದು ಮನೋಲ್ಲಾಸ ದಿನ
ಸುಮಿತ್ರಾ : ಬಾಳೇ .. ಜೇನು ಬಳಿಯಿರೇ ನೀನೂ ..
ಲತಾ : ಮಧು ಅಂಕದಿ 
ಸುಮಿತ್ರಾ : ಸುಖ ಸಂಗದಿ 
ಇಬ್ಬರು : ಈ ಭಾವೊಂದು ಕಾಣಿಕೇ .. 
             ಝಣ ಝಣ ಝಣ... ಝಣ ಝಣ ಝಣ ....  ಝಣ ಝಣ ಝಣ.. ಝಣ ಝಣ ಝಣ
            ಗೆಜ್ಜೇ ನಾದಕೆ ಹೆಜ್ಜೆ ಮೋದಕೆ ಗಮನ ನೀಡೆ ಏಕೇ .. ಸೊಗವೂ ಸೇರಿಸಿ ಏಕೇ 
            ಝಣ ಝಣ ಝಣ... ಝಣ ಝಣ ಝಣ ....  ಝಣ ಝಣ ಝಣ.. ಝಣ ಝಣ ಝಣ
------------------------------------------------------------------------------------------------------------------------

ಭಾಗ್ಯ ದೇವತೆ (೧೯೬೮) - ಓ ದಯಾ ಸಿಂಧೂ
ಸಂಗೀತ : ಜ್ಞಾನಮನಿ ಸಾಹಿತ್ಯ : ಸೋರಟ್ ಅಶ್ವಥ ಗಾಯನ :ಜ್ಯೋತಿ ಕಲಾ, ಸ್ವರ್ಣಕಲಾ  

ಜ್ಯೋತಿ  : ಹೇ.. ದಯಾ ಸಿಂಧೂ
ಸ್ವರ್ಣ : ಹೇ.. ದೀನ ಬಂಧೂ .. ಆಆಆ..
ಇಬ್ಬರು : ಹೊರನಾನೀ ಈ ಪೋರರೆನ್ನೆಂದೂ..
             ಶರಣು ಹೇ.. ದಯಾ ಸಿಂಧೂ.. ಶರಣು ಹೇ.. ದೀನ ಸಿಂಧೂ ..
             ಒಲವ ನೀ ತೋರು ನೀನಿಂದೂ ..  ಒಲವ ನೀ ತೋರು ನೀನಿಂದೂ ..   

ಜ್ಯೋತಿ : ಕಂಡರಿಗೇ ತಾಯೀ ಸವಿ ಪ್ರೀತಿ ಇಲ್ಲೀ .. ಗೌರಿ ನೀ ಯಾಕೇ ನಮ್ಮಲ್ಲಿ ಈ ಕ್ವಾಪ ...
ಸ್ವರ್ಣ : ಕಂಡರಿಗೇ ತಾಯೀ ಸವಿ ಪ್ರೀತಿ ಇಲ್ಲೀ .. ಗೌರಿ ನೀ ಯಾಕೇ ನಮ್ಮಲ್ಲಿ ಈ ಕ್ವಾಪ ...
ಇಬ್ಬರು : ಕರುಣದಿ ನೀ ಓಡಿ ಕಾಪಾಡು ತಂದೇ .. ಕರುಣದಿ ನೀ ಓಡಿ ಕಾಪಾಡು ತಂದೇ ..
             ಕರೆಗೇ ಓಗೋಡು ಇಂದೇ
             ಶರಣು ಹೇ.. ದಯಾ ಸಿಂಧೂ.. ಶರಣು ಹೇ.. ದೀನ ಸಿಂಧೂ ..
             ಒಲವ ನೀ ತೋರು ನೀನಿಂದೂ ..  ಒಲವ ನೀ ತೋರು ನೀನಿಂದೂ ..   

ಜ್ಯೋತಿ : ಅಳಿಸಿ ಗೋಳಿಡಿಸಿ ನೀ ನಗುವೇ ಏನೋ ಶಿವನೇ  ನಿಮ್ಮ ಮನಸಿಂದು ಕಲ್ಲೇನೋ..
ಸ್ವರ್ಣ : ಅಳಿಸಿ ಗೋಳಿಡಿಸಿ ನೀ ನಗುವೇ ಏನೋ ಶಿವನೇ  ನಿಮ್ಮ ಮನಸಿಂದು ಕಲ್ಲೇನೋ..
ಇಬ್ಬರು : ನಟಭೂಷ ಫಲರಾಜ ದಯಾ ತೋರೋ ಪರಮೇಶ
             ನಟಭೂಷ ಫಲರಾಜ ದಯಾ ತೋರೋ ಪರಮೇಶ
ಜ್ಯೋತಿ : ನೊಂದಿಹ ಜನರ ಸಂಕಟ ನೀಗಿ ಸಂತಸ ನೀಡು ಗೌರೀಶ...
ಸ್ವರ್ಣ : ನಾಡಿಗೇ ತಂದ ಕ್ಷಾಮದ ಪೀಡೇಯ ಬೇಗನೇ ಹರಿಸು ಪರಮೇಶ. ....
ಜ್ಯೋತಿ : ಮೂಜಗದೋಡೆಯ ನೀ ಕೊಡು ಅಭಯ ಆತೃರ ಕಾಯೋ ವಿಶ್ವೇಶ..
ಸ್ವರ್ಣ : ಮಕ್ಕಳ ಹರಸಲು ಮಾತೇಯ ದೇಹಕೆ ಚೇತನ ನೀಡೋ ಸರ್ವೇಶ..
ಇಬ್ಬರು : ಶಿವ ಗಂಗಾ... ಶಿವ ಗಂಗಾ... ಶಿವ ಗಂಗಾ... ಶಿವ ಗಂಗಾ .. 
------------------------------------------------------------------------------------------------------------------------

No comments:

Post a Comment