942. ಅಣ್ಣ ತಮ್ಮ (೧೯೬೮)

ಅಣ್ಣತಮ್ಮ ಚಲನಚಿತ್ರದ ಹಾಡುಗಳು 
  1. ನುಡಿಯ ಹಗರಣವೇತಕೆ
  2. ಕಂಡೇ ಕಂಡುಕೊಂಡೇ 
  3. ಇನಿಯ ಕೋಗಿಲೆಯ
ಅಣ್ಣ ತಮ್ಮ (೧೯೬೮) - ನುಡಿಯ ಹಗರಣವೇತಕೆ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಕುರಾಸೀ ಗಾಯನ : ಪಿ.ಸುಶೀಲ

ನುಡಿಯ ಹಗರಣವೇತಕೇ .....  ನುಡಿಯ ಹಗರಣವೇತಕೇ  
ಮನದಿ ಮೂಡಿದ ಭಾವವೆಲ್ಲ ಬಿಡಿಸಿ ಹೇಳುವ ಕಣ್ಣೀರೇ
ನುಡಿಯ ಹಗರಣವೇತಕೇ .....  ನುಡಿಯ ಹಗರಣವೇತಕೇ  
ಮನದಿ ಮೂಡಿದ ಭಾವವೆಲ್ಲ ಬಿಡಿಸಿ ಹೇಳುವ ಕಣ್ಣೀರೇ
ನುಡಿಯ ಹಗರಣವೇತಕೇ .....  

ಹಸಿಯ ಹರೆಯದ ಪರಿವೆಯಿಲ್ಲದ ಇನಿಯ ಹೃದಯದ ಚೆಲುವಿಗೆ 
ಬಿಸಿಯ ಹುರುಪಿನ ತಾಪವಿಲ್ಲದ ದಣಿವು ಕಾಣದ ಒಲವಿಗೇ
ವಯಸು ಕಳೆದರೂ ಎನಿತು ಮಾಡದ ಬಳಲಿ ಬಾಡದ ಚೆಲುವಿಗೆ 
ಬಯಸಿದಷ್ಟು ಜೇನ ಸೋನೆಯ ಹಣಿಸಿ ತಣಿಸುವ ಒಲವಿದೆ
ನುಡಿಯ ಹಗರಣವೇತಕೇ...  

ಅಂತರಂಗದ ಅಂತರಾಳವ ತೋರಗೊಡದ ನಿಲುವಿದೆ
ನೋವಿಗಳುಕದೀ ನಲಿವಿಗರಳದೀ ಬಾಳೀ ಬದುಕುವ ಛಲವಿದೆ
ಶಾಂತಿ ಸಂಯಮ ತುಂಬಿ ತುಳುಕುವ ಸೌಮ್ಯ ಭಂಗಿಯ ಬೆಡಗಿದೆ
ಹೃದಯ ಕದಡಿದ ಭಾವ ಬಂಧುರ ಮೌನದಲ್ಲೇ ಅಡಗಿದೆ 
ನುಡಿಯ ಹಗರಣವೇತಕೆ...  ನುಡಿಯ ಹಗರಣವೇತಕೆ
ಮನದಿ ಮೂಡಿದ ಭಾವವೆಲ್ಲ ಬಿಡಿಸಿ ಹೇಳುವ ಕಣ್ಣೀರೇ
ನುಡಿಯ ಹಗರಣವೇತಕೇ .....  
-------------------------------------------------------------------------------------------------------------------------

ಅಣ್ಣ ತಮ್ಮ (೧೯೬೮) - ಕಂಡೇ ಕಂಡುಕೊಂಡೇ 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಕುರಾಸೀ ಗಾಯನ : ಪಿ.ಸುಶೀಲ

ಕಂಡೆ ಕಂಡುಕೊಂಡೇ ಏನೋ ಕಳೆದುಕೊಂಡೇ ಹೇಗೋ ಉಳಿದುಕೊಂಡೇ
ಕಂಡೆ ಕಂಡುಕೊಂಡೇ ಏನೋ ಕಳೆದುಕೊಂಡೇ ಹೇಗೋ ಉಳಿದುಕೊಂಡೇ 

ಎಂದು ಕಾಣುದ ನಿಧಿಯ ಕಂಡೇ ಮುಂದಿನಾಸೆಯ ಕಂಡುಕೊಂಡೇ 
ಒಂಟಿ ಜೀವನ ಕಳೆದುಕೊಂಡಿದೆ ಯಾವ ಪುಣ್ಯವೋ ಉಳಿದುಕೊಂಡೇ  
ಕಂಡೆ ಕಂಡುಕೊಂಡೇ ಏನೋ ಕಳೆದುಕೊಂಡೇ ಹೇಗೋ ಉಳಿದುಕೊಂಡೇ 

ಸೋಲಿನಲ್ಲೂ ಶಬರಿ ಕಂಡ ಸೊಗದ ಮೂಲವ ಕಂಡುಕೊಂಡೇ  
ಒಂಟಿಜೀವನ ಕಳೆದುಕೊಂಡೇ ಜೋಡಿ ದೊರೆಯಲು ಉಳಿದುಕೊಂಡೇ  
ಕಂಡೆ ಕಂಡುಕೊಂಡೇ ಏನೋ ಕಳೆದುಕೊಂಡೇ ಹೇಗೋ ಉಳಿದುಕೊಂಡೇ 

ವರವ ನೀಡುವ ಕಾಮಯನು ಆತ್ಮ ಬಲವೇ ಅಲ್ಲವೇನು 
ಹೆಣ್ಣಿನೊಲವಿನ ಹರಕೆಗೆಂದು ಯಾವ ತಡೆಯೂ ಬಾರದೆಂದು
ಕಂಡೆ ಕಂಡುಕೊಂಡೇ ಏನೋ ಕಳೆದುಕೊಂಡೇ ಹೇಗೋ ಉಳಿದುಕೊಂಡೇ 
-------------------------------------------------------------------------------------------------------------------------

ಅಣ್ಣ ತಮ್ಮ (೧೯೬೮) - ಇನಿಯ ಕೋಗಿಲೆಯ ಪಂಚಮದಿಂಚರ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ : ಕುರಾಸೀ, ಗಾಯನ : ಪಿ.ಸುಶೀಲ, ರೇಣುಕಾ, ಬೆಂಗಳೂರು ಲತ

ಸುಶೀಲ: ಇನಿಯ ಕೋಗಿಲೆಯ ಪಂಚಮದಿಂಚರ
               ಇನಿಯ ಕೋಗಿಲೆಯ ಪಂಚಮದಿಂಚರ
                ಮೊಳಗಿತು ಮರಳಿತು ಮಧುಮಾಸ..

ಇನಿಯ ಕೋಗಿಲೆಯ ಪಂಚಮದಿಂಚರ
ಮೊಳಗಿತು ಮರಳಿತು ಮಧುಮಾಸ
ಮನಸಿನ ಮಾವಿನ ಮಧುಬನ ಚಿಗುರಿತು
ಮನಸಿನ ಮಾವಿನ ಮಧುಬನ ಚಿಗುರಿತು
ಹೊಮ್ಮಿತು ಹೊಸಬಗೆ ಉಲ್ಲಾಸ
ಮರೆಯಾದ ಕೋಗಿಲೆ ಮರಳೀತು ನೋಡೆಲೆ
ಇನ್ನಿಲ್ಲ ಕಣ್ಣಾಮುಚ್ಚಾಲೆ

ಲತಾ: ಬಂದಾಗ ಕೋಗಿಲೆ ಬಂಗಾರ ಚಿಗುರೆಲೆ
ಹೂವಾಗಿ ಕಾಯಾಗಿ ಹಣ್ಣಾಗದೆ
ಬಂದಾಗ ಕೋಗಿಲೆ ಬಂಗಾರ ಚಿಗುರೆಲೆ
ಹೂವಾಗಿ ಕಾಯಾಗಿ ಹಣ್ಣಾಗದೆ
ಹಾರೈಕೆಯೆಲ್ಲ ಪೂರೈಸಿಕೊಂಬ
ಅನುರಾಗ ರಸಯೋಗ ಕೈಗೂಡದೆ...
ಮರೆಯಾದ ಕೋಗಿಲೆ ಮರಳಿತು ನೋಡೆಲೆ
ಇನ್ನೇಲ್ಲಿ ಕಣ್ಣಾಮುಚ್ಚಾಲೆ

ರೇಣುಕಾ: ಯಾರಿಗೆ ಯಾರೋ ದೊರೆಯುವರಂತೆ
ಯಾರನ್ನು ಯಾರೋ ವರಿಸುವರಂತೆ
ಯಾರಿಗೆ ಯಾರೋ ದೊರೆಯುವರಂತೆ
ಯಾರನ್ನು ಯಾರೋ ವರಿಸುವರಂತೆ
ನನ್ನ ನಿನ್ನ ಅರಿಯದ ಚಿಂತೆ
ಒಂದೇ ಬಾರಿಗೆ ತೀರುವುದಂತೆ
ನನ್ನ ನಿನ್ನ ಅರಿಯದ ಚಿಂತೆ
ಒಂದೇ ಬಾರಿಗೆ ತೀರುವುದಂತೆ
ಬಾರೆನ್ನ ಕೋಗಿಲೆ.. ಮನದನ್ನ ಕೋಗಿಲೆ‌..
ಇನ್ನೇಕೆ ಕಣ್ಣಾಮುಚ್ಚಾಲೆ
---------------------------------------------------------------------------------------------------------------------

No comments:

Post a Comment