944. ಅರುಣೋದಯ (೧೯೬೮)



ಅರುಣೋದಯ ಚಲನಚಿತ್ರದ ಹಾಡುಗಳು 
  1. ಜೀವನ ಚಿತ್ರ ಇದು ಸೃಷ್ಟಿ ವಿಚಿತ್ರ
ಅರುಣೋದಯ (೧೯೬೮)
ಸಂಗೀತ : ಆರ್.ಸುದರ್ಶನಂ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಬಿ.ಶ್ರೀನಿವಾಸ 
 
ಜೀವನ ಚಿತ್ರ ಇದು ಸೃಷ್ಟಿ ವಿಚಿತ್ರ
ಜೀವನ ಚಿತ್ರ ಇದು ಸೃಷ್ಟಿ ವಿಚಿತ್ರ
ರಾತ್ರಿ ಹಗಲು ಕಾಲ ಪುರುಷನ ಎರಡು ಮುಖವಣ್ಣಾ
ಮನುಜನಿಗಿರುವ ಎರಡು ಮುಖಗಳ ಕಥೆಯೇ ಇದುವಣ್ಣಾ
ಜೀವನ ಚಿತ್ರ ಇದು ಸೃಷ್ಟಿ ವಿಚಿತ್ರ

ಹಾಲಾಹಲವು ಅಮೃತವೆರೆಡು ಒಂದೇ ಕಡಲಿನಲಿ 
ಹೂವು ಮುಳ್ಳು ಇರುವುದು ಜೊತೆಗೆ ಒಂದೇ ಬಳ್ಳಿಯಲಿ 
ಕಳೆಯಾ ಬೆಳೆಯಾ ಬೆಳೆದಿಹುದಣ್ಣ ಒಂದೇ ಭೂಮಿಯಲಿ 
ಹಗೆಯು ಒಲವೂ ನೆಲೆಸಿಹುದಣ್ಣ ಒಂದೇ ಹೃದಯದಲಿ 
ಜೀವನ ಚಿತ್ರ ಇದು ಸೃಷ್ಟಿ ವಿಚಿತ್ರ 

ದೇವನು ಮನುಜನ ಸೃಷ್ಟಿಯ ಮಾಡಿದ ಎಲ್ಲರೂ ಸಮವೆಂದು 
ಬೆಳೆಸಿದ ಬಗೆಯಲಿ ಕಳ್ಳನೋ ಕವಿಯೋ ಆಗುವ  ತಾ ಮುಂದು 
ಎಲ್ಲರ ಹೃದಯದೆ ತುಂಬಿಹುದಣ್ಣ ಪ್ರೀತಿಯ ಅಮೃತ ಬಿಂದು 
ದಾನವ ಕೂಡ ದೇವನಾಗುವ ಪ್ರೇಮದ ಶಕ್ತಿಯ ಮುಂದು 
ಜೀವನ ಚಿತ್ರ ಇದು ಸೃಷ್ಟಿ ವಿಚಿತ್ರ
ಜೀವನ ಚಿತ್ರ ಇದು ಸೃಷ್ಟಿ ವಿಚಿತ್ರ
ರಾತ್ರಿ ಹಗಲು ಕಾಲ ಪುರುಷನ ಎರಡು ಮುಖವಣ್ಣಾ
ಮನುಜನಿಗಿರುವ ಎರಡು ಮುಖಗಳ ಕಥೆಯೇ ಇದುವಣ್ಣಾ
ಜೀವನ ಚಿತ್ರ ಇದು ಸೃಷ್ಟಿ ವಿಚಿತ್ರ
--------------------------------------------------------------------------------------------------------------------------

ಅರುಣೋದಯ (೧೯೬೮)
ಸಂಗೀತ : ಆರ್.ಸುದರ್ಶನಂ 

ಚಿನ್ನ ಚೆಲುವ ಪಾಪ ಚಿರಾನಂದ ರೂಪ
ನನ್ನೆದೆಯ ಮಂದಿರದ ನಂದಾದೀಪ

ಕಾಡಿಗೆಯ ಕಣ್ಣೆರಡು ಸಂಜೆಯ ತಾರೆ
ಕಂದ ನಿನ್ನ ತೊದಲು ಮಾತೆ ಅಮೃತಧಾರೆ
ತೋರಣ ತಳಿರೆ ಹಸಿ ಹಸಿರಿನ ಚಿಗುರೆ
ದೇವರಂತೆ ಒಲಿದು ಬಂದ ಜೀವನದುಸಿರೇ

ತಾಯಿಯವಳ ಆಸೆಗಳ ನೌಕೆಯು ನೀನು
ನಿನ್ನ ಪ್ರೇಮ ಕಡಲಲಿ ತೇಲುವೆ
ನಾನು ಕಿರುನಗೆ ಹೊನಲೇ ನವರತ್ನ ನವಮಾಲೆ
ನಿನ್ನ ಆಟಪಾಠ ಮನದ ತೂಗುಯ್ಯಾಲೆ
-----------------------------------------------------------------------------------------------------------------------







No comments:

Post a Comment