950. ಹೂವು ಮುಳ್ಳು (೧೯೬೮)

ಹೂವು ಮುಳ್ಳು ಚಲನಚಿತ್ರದ ಹಾಡುಗಳು 
  1. ಓಯ್ ಲೊಟ್ಟ ಪಟ್ಟಿ ಗಂಡಾಗುಂಡಿ 
  2. ಓ.. ನನ್ನ ಗೆಣೆಯಾ ಬಾಳಿನ ದಾರ್ಯಾಗೆ 
  3. ಹಬ್ಬ.. ಈ ದಿನ ಹಬ್ಬ.. ಅಬ್ಬಾ.. 
  4. ಬಿಸಿ ಬಿಸಿ ಬಿಸಿ ಮೈಯಿಗೇ ಏರಿದೆ 
  5. ದೇವಾ... ಇದುವೇ ನಿನ್ನ ಪ್ರಪಂಚ
  6. ಪುಟ್ನಂಜಿ ನೀರಿಗೆ ಹೊಂಟಾಗ
  7. ಮಾನವ ದ್ವೇಷ ಲೋಕಕೆ ದೋಷ
ಹೂವು ಮುಳ್ಳು (೧೯೬೮) -  ಓಯ್ ಲೊಟ್ಟ ಪಟ್ಟಿ ಗಂಡಾಗುಂಡಿ 
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ ಗಾಯನ : ಪಿ.ಬಿ.ಎಸ್ 

ಹೋಯ್ ಲೋಟ್ಟಾ ಪಟ್ಟಿ ಗುಂಡಾ ಗುಂಡಿ ತುಂಬಾ ಐತೆ ಲೋಕದಾಗೇ 
ಪಾಪ ಅಪಾಯ ತಾನ್ ತುಂಬಿ ಒಂದ್ರಾಗೇ .. ಓ..  
ಹೋಯ್ ಲಟ್ಟಾ ಪಟ್ಟಿ ಗುಂಡಾ ಗುಂಡಿ
ಹೋಯ್ ಲಟ್ಟಾ ಪಟ್ಟಿ ಗುಂಡಾ ಗುಂಡಿ ತುಂಬಾ ಐತೆ ಲೋಕದಾಗೇ 
ಪಾಪ ಅಪಾಯ ತಾನ್ ತುಂಬಿ ಒಂದ್ರಾಗೇ..ಓ..   
ಹೋಯ್ ಲೋಟ್ಟಾ ಪಟ್ಟಿ ಗುಂಡಾ ಗುಂಡಿ

ಹಂಗ್ಯಾಕೇ ನೋಡ್ತೀ  ನೀ ಹಿಂಗ್ಯಾಕೆ ಆಡ್ತಿ ಈ ಕೆನ್ಯಾಗಿನ ಕೆಂಪನ್ನ ಕಣ್ಣಾಗ್ಯಾಗ್ ತೋರ್ತಿ.. 
ಹಂಗ್ಯಾಕೇ ನೋಡ್ತೀ  ನೀ ಹಿಂಗ್ಯಾಕೆ ಆಡ್ತಿ ಈ ಕೆನ್ಯಾಗಿನ ಕೆಂಪನ್ನ ಕಣ್ಣಾಗ್ಯಾಗ್ ತೋರ್ತಿ.. 
ಆಹಹ್ ನಮ್ಮಿಬ್ಬರ ನಂಟು ಓಹೋಹೋ ಕಟ್ಟತೈತೆ ಗಂಟೂ ನೀ ಕ್ವಾಪ ನೀ ತಾಪ್ ಹೀಗ್ಯಾಕೆ ಪ್ರೇಮದಾಗೇ   
ಆಅಹ್ ಲಟ್ಟಾ ಪಟ್ಟಿ ಗುಂಡಾ ಗುಂಡಿ ತುಂಬಾ ಐತೆ ಲೋಕದಾಗೇ 
ಪಾಪ ಅಪಾಯ ತಾನ್  ತುಂಬಿ ಒಂದ್ರಾಗೇ..ಓ..   
ಲಟ್ಟಾ ಪಟ್ಟಿ ಗುಂಡಾ ಗುಂಡಿ... 

ತುಂಬ್ಕೊಂಡು ಯುಕ್ತಿ ತಾವ್ ತೋರ್ತಾರೇ ಭಕ್ತಿ.. ಹಂಗೆನೇ ಮಸೀತಾರೇ ಒಳ ಒಳಳೊಳಗೇ ಕತ್ತಿ   
ತುಂಬ್ಕೊಂಡು ಯುಕ್ತಿ ತಾವ್ ತೋರ್ತಾರೇ ಭಕ್ತಿ.. ಹಂಗೆನೇ ಮಸೀತಾರೇ ಒಳ ಒಳಳೊಳಗೇ ಕತ್ತಿ   
ಆಹಾ ಮಾಡೋಕೆ ಮೋಸ ಹಿಂಗ್ ಕಟ್ಟತಾರೇ ಯ್ಯಾಸ್ 
ಇಂಥೋರನ್ ಭಗವಂತ್ ತಾ ಸುಮ್ಕೆ ಬಿಟ್ಟತಾನೇ .. 
ಆಅಹ್ ಲಟ್ಟಾ ಪಟ್ಟಿ ಗುಂಡಾ ಗುಂಡಿ ತುಂಬಾ ಐತೆ ಲೋಕದಾಗೇ 
ಪಾಪ ಅಪಾಯ ತಾನ್  ತುಂಬಿ ಒಂದ್ರಾಗೇ..ಓ..   
ಲಟ್ಟಾ ಪಟ್ಟಿ ಗುಂಡಾ ಗುಂಡಿ... 

ಒಬ್ಬಂಗೇ ಕೆಸರೂ .. ಇನ್ನೊಬ್ಬಂಗೇ ಮೊಸರೂ .. ಮಾಡೋಣು ಒಬ್ಬನಾದರೇ ಇನ್ನೊಬ್ಬಂಗೆ ಹೆಸರೋ... 
ಒಬ್ಬಂಗೇ ಕೆಸರೂ .. ಇನ್ನೊಬ್ಬಂಗೇ ಮೊಸರೂ .. ಮಾಡೋಣು ಒಬ್ಬನಾದರೇ ಇನ್ನೊಬ್ಬಂಗೆ ಹೆಸರೋ... 
ದೊಡ್ಡಣ್ಣ ಬಿದ್ದ ಹೋಯ್ ದಡ್ಡಣ್ಣ ಎದ್ದ ಹಿಂಗೆಲ್ಲಾ ಅನ್ಯಾಯ ಅದ್ಯಾಕೋ ಭೂಮ್ಯಾಗೇ .. 
ಆಅಹ್ ಲಟ್ಟಾ ಪಟ್ಟಿ ಗುಂಡಾ ಗುಂಡಿ ತುಂಬಾ ಐತೆ ಲೋಕದಾಗೇ 
ಪಾಪ ಅಪಾಯ ತಾನ್  ತುಂಬಿ ಒಂದ್ರಾಗೇ..ಓ..   
ಲಟ್ಟಾ ಪಟ್ಟಿ ಗುಂಡಾ ಗುಂಡಿ... 
-------------------------------------------------------------------------------------------------

ಹೂವು ಮುಳ್ಳು (೧೯೬೮) -  ಓ.. ನನ್ನ ಗೆಣೆಯಾ ಬಾಳಿನ ದಾರ್ಯಾಗೆ 
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ 

--------------------------------------------------------------------------------------------------

ಹೂವು ಮುಳ್ಳು (೧೯೬೮) - ಹಬ್ಬ.. ಈ ದಿನ ಹಬ್ಬ.. ಅಬ್ಬಾ.. 
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ ಗಾಯನ : ಎಲ್.ಆರ್.ಈಶ್ವರಿ 

--------------------------------------------------------------------------------------------------

ಅಮ್ಮಯ್ಯೋ.. ಹೋಯ್ ಬಿಸಿ ಬಿಸಿ ಬಿಸಿ ಮೈಯಿಗೇ ಏರಿದೆ 
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ ಗಾಯನ : ಎಲ್.ಆರ್.ಈಶ್ವರಿ 

--------------------------------------------------------------------------------------------------

ಹೂವು ಮುಳ್ಳು (೧೯೬೮) - ದೇವಾ... ಇದುವೇ ನಿನ್ನ ಪ್ರಪಂಚ
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್ಪಿ.ಬಿ.

ಇದುವೇ ನಿನ್ನ ಪ್ರಪಂಚ ದೇವಾ.. ಇದುವೇ ನಿನ್ನ ಪ್ರಪಂಚ
ಇದುವೇ ನಿನ್ನ ಪ್ರಪಂಚ ದೇವಾ.. ಇದುವೇ ನಿನ್ನ ಪ್ರಪಂಚ
ಹೂವಿನ ಜೊತೆಗೆ ಮುಳ್ಳಿರುವ ಹಸುವಿನ ರೂಪದಿ ಹುಲಿಯಿರುವ
ಎತ್ತಲ್ಲೂ ಸ್ವಾರ್ಥಕೇ ತುಂಬಿರುವಾ .... 
ಇದುವೇ ನಿನ್ನ ಪ್ರಪಂಚ ದೇವಾ ಇದುವೇ ನಿನ್ನ ಪ್ರಪಂಚ

ಎಲ್ಲರು ನೆಂಟರೆ ಎಲ್ಲರು ಮಿತ್ರರೇ ಸಂತಸದಿಂದ ನಗುವಾಗ
ಹತ್ತಿರ ಯಾರು ಕರೆಯುವರಿಲ್ಲ ತಳಮಳಿಸುತಲಿ ಅಳುವಾಗ
ಎದ್ದವರನ್ನು ಬೀಳಿಸುತಾ ಬಿದ್ದವರನ್ನು ತುಳಿಯವರು
ನೆಂಟರು ಮಿತ್ರರು ಶತ್ರುಗಳಾಗಿ ಮುಳ್ಳಿನ ಮಾರ್ಗಕೆ ತಳ್ಳುವುರು... 
ಇದುವೇ ನಿನ್ನ ಪ್ರಪಂಚ ದೇವಾ.. ಇದುವೇ ನಿನ್ನ ಪ್ರಪಂಚ
 
ಒಬ್ಬನು ಬೆಳೆಸಲು ತನ್ನಯ ಆಸ್ತಿ ಕಸಿಯುವನು ಹಲವರ ರೊಟ್ಟಿ
ಒಬ್ಬನು ತಾನೇ ದೊಡ್ಡವನಾಗಲು ನಿಲ್ಲುವನು ಹಲವರ ಮೆಟ್ಟಿ
ಇಂತಹ ಮನುಜರ ಗುಣದಿಂದ ಅಮೃತವು ವಿಷವಾಗುತಿದೆ
ಧರ್ಮವು ದೂರಕೆ ಓಡುತಿದೆ ಹೂವು ಮುಳ್ಳಾಗುತಿದೇ... 
-------------------------------------------------------------------------------------------------------------------------

ಹೂವು ಮುಳ್ಳು (೧೯೬೮) - ಪುಟ್ನಂಜಿ ನೀರಿಗೆ ಹೊಂಟಾಗ
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ್.ಜಾನಕೀ 

ಓ... ಚೆಲುವಯ್ಯೋ ... ನೀ.. ಕೇಳಯ್ಯೋ
ಪುಟ್ನಂಜಿ ನೀರಿಗೆ ಹೊಂಟಾಗ
ಕರಿಯಂಗೆ ದಾರಿಯಾಗೇ ಕಾಯ್ತಿದ್ದ
ಮಲ್ಲಿಗೆ ಮುಡಿದು ಎಲ್ಲಿಗೆ ಹೊರಟೆ ಎಂದು
ಆವಾ ಮೆಲ್ಲನೆ ಏನೋ ಪಿಸು ಪಿಸುಗುಟ್ಟುತ ನಿಂದಾ
ಮೂಗುತಿ ಮುಂಭಾರವೇನೆ ಜಡೆಗಂಟು  ಹಿಂಬಾರವೇನೇ
ದಿಟ್ಟಿಯು ನಿನಗೆ ತಟ್ಟಿತು ಏನಲು ಸಂಕೋಚ ಏಕೋ ಕಾಣೆ... ಓಓಓಓ
ಕೆಂಚಣ್ಣ ಅವರನ್ನು ನೋಡಿ ಹೇಳಬಿಟ್ಟ ಊರನೋರ್ಗೆ ಚಾಡಿ ಕೆಂಚಣ್ಣ
ಏನೇನೋ ಕಥೆಯು ಇಬ್ಬರ ಮೇಲೂ ಹುಟ್ಟಿತು ಉರಿನಾ ಓಓಓಓಓ
ಚೆಲುವಯ್ಯೋ ನೀ ಕೇಳಯ್ಯೋ
ಪುಟ್ನಂಜಿ ನೀರಿಗೆ ಹೊಂಟಾಗ
--------------------------------------------------------------------------------------------------------------------------

ಹೂವು ಮುಳ್ಳು (೧೯೬೮) - ಮಾನವ ದ್ವೇಷ ಲೋಕಕೆ ದೋಷ
ಸಂಗೀತ : ಸತ್ಯಂ, ಸಾಹಿತ್ಯ : ಗೀತಪ್ರಿಯ ಗಾಯನ : ಎಸ.ಜಾನಕಿ 

ಮಾನವ ದ್ವೇಷ ಲೋಕಕೆ ದೋಷ
ಅವರದೇ ಪಾಪ ಅವರಿಗೆ ಶಾಪ
ಸೇಡಿನ ದಾರಿ ಅನ್ಯಾಯವೂ ತಿಳಿ
ಸ್ನೇಹದಿಂದಾ ಸಾಧ್ಯವಂತೆ
ಈ ಲೋಕವ ಗೆಲ್ಲೋಕೆ
ಓ.. ನನ್ನ ಗೆಣೆಯಾ ಓ.. ನನ್ನ ಗೆಣೆಯಾ
ಬಾಳಿನ ದಾರಿಯಾಗೆ ಜೋಕೆ ... ಓ.. ನನ್ನ ಗೆಣೆಯಾ
-------------------------------------------------------------------------------------------------------------------------

No comments:

Post a Comment