951. ಧೂಮಕೇತು (೧೯೬೮)

 ಧೂಮಕೇತು ಚಲನಚಿತ್ರದ ಹಾಡುಗಳು 
  1. ಒಂದು ತಾ ಇಂದು ತಾ 
  2. ಆಹಾ ಆಹಾ ಇದೇನೂ ನಡೇ (ಪಿ.ಸುಶೀಲಾ) 
  3. ಆಹಾ ಆಹಾ ಇದೇನೂ ನಡೇ 
  4. ರಂಗು ರಂಗು ರಂಗಿನಾಟ 
  5. ಅಂದಚೆಂದವೇತಕೆ ಅಂತರಂಗ ದೈವಕೇ 
  6. ಅಂದ ಚೆಂದ ತುಂಬೀ ಬಂದ ಆನಂದದಾ ಹೊಸ ಪ್ರಾಯವಿದೂ   
ಧೂಮಕೇತು (೧೯೬೮) - ಒಂದು ತಾ ಇಂದು ತಾ ಬಂದು ತಾ ನಿಂದು ತಾ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಎಲ್.ಆರ್.ಈಶ್ವರಿ

ಹೂಂಹೂಂಹೂಂ.. ಆಹಾಹಾಹಾ... ಆಹಾಹಾಹಾಹಾ ಲಾಲಲಲ ಲಾಲಲಲ
ಒಂದು ತಾ ಇಂದು ತಾ ಬಂದು ತಾ ನಿಂದು ತಾ
ಒಂದು ತಾ ಇಂದು ತಾ ಬಂದು ತಾ ನಿಂದು ತಾ
ಒಂದು ತಾತಾತಾ ಇಂದು ತಾತಾತಾ ಬಂದು ತಾತಾತಾ ನಿಂದು ತಾತಾತಾ
ಒಂದು ತಾ

ಇಂದು ಇಂದು ಮರೆಯದಂತ ಒಂದೇ ಒಂದು ತಾ
ಇಂದು ಇಂದು ಮರೆಯದಂತ ಒಂದೇ ಒಂದು ತಾ
ಹಿಂದೂ ಮುಂದು ನೋಡಲೇಕೆ ಇಂದೇ ಬಂದು ತಾ
ಒಂದು ತಾತಾ ಇಂದು ತಾತಾ ಬಂದು ತಾತಾ ನಿಂದು ತಾತಾ
ಒಂದು ತಾ

ಕಣ್ಣಿನ ಮಾತಿಗೆ ಬಗಲನ್ನು ತಾ  ಮೈಯಿನ ಬೆಂಕಿಗೆ ತಂಪನ್ನು ತಾ
ಕಣ್ಣಿನ ಮಾತಿಗೆ ಬಗಲನ್ನು ತಾ  ಮೈಯಿನ ಬೆಂಕಿಗೆ ತಂಪನ್ನು ತಾ
ತುಟಿಗಳು ಬಯಸಿದ ಕಾಣಿಕೆಯ ತಾ
ನನ್ನಲ್ಲಿ ನೀ ನಿನ್ನಲ್ಲಿ ನಾ ಒಂದಾದೆವೆನ್ನುತಾ...
ಒಂದು ತಾ ಇಂದು ತಾ ಬಂದು ತಾ ನಿಂದು ತಾ
ಒಂದು ತಾ

ನಿನ್ನೆ ಹಳಸು ನಾಳೆ ಕನಸು ನನಸು ಇಂದೇ ತಾ
ನಿನ್ನೆ ಹಳಸು ನಾಳೆ ಕನಸು ನನಸು ಇಂದೇ ತಾ
ಕೈಯ ಬಳಸು ಮೈಯ ಮರೆಸು ಸೊಗಸೂ ಅಲ್ಲೇ ತಾ 
ಒಂದು ತಾ ಇಂದು ತಾ ಬಂದು ತಾ ನಿಂದು ತಾ
ಒಂದು ತಾತಾತಾ ಇಂದು ತಾತಾತಾ ಬಂದು ತಾತಾತಾ ನಿಂದು ತಾತಾತಾ
ಒಂದು ತಾ
-------------------------------------------------------------------------------------------------------------------------

ಧೂಮಕೇತು (೧೯೬೮) - ಆಹಾ ಆಹಾ ಇದೇನು ನಡೆ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಸುಶೀಲಾ 

ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಶೋಕು ನಡೆ 
ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಶೋಕು ನಡೆ 
ಲೆಫ್ಟ್ ರೈಟ್ ಹೆಜ್ಜೆ ಕವಾತ ಮಾಡಿಕೋ ಕೊಕ್ಕರೆಯ ಕಂಡು ಸವಾಲು ಹಾಕಿಕೋ 
ಲೆಫ್ಟ್ ರೈಟ್ ಹೆಜ್ಜೆ ಕವಾತ ಮಾಡಿಕೋ ಕೊಕ್ಕರೆಯ ಕಂಡು ಸವಾಲು ಹಾಕಿಕೋ
ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಶೋಕು ನಡೆ 

ಮೇಲೆ ನೋಡೇ ಕಂಡುದೇನು ಬರೀ ಆಗಸ ಈ ಹೆಣ್ಣನ್ನು ಈ ಕಣ್ಣನ್ನು ನೀ ನೋಡೇ ಸಂತಸ 
ಮೇಲೆ ನೋಡೇ ಕಂಡುದೇನು ಬರೀ ಆಗಸ ಈ ಹೆಣ್ಣನ್ನು ಈ ಕಣ್ಣನ್ನು ನೀ ನೋಡೇ ಸಂತಸ 
ಪಪ್ಪರ ಪಪ್ಪಾಪಂ ಯಹ್ ಪಪ್ಪರ ಪಪ್ಪಾಪಂ ಪಪ್ಪರ ಪಪ್ಪಾಪಂ ಯಹ್ ಪಪ್ಪರ ಪಪ್ಪಾಪಂ 
ಈ ನಾಟಕ ಬೂಟಾಟಿಕೆ ನಾ ಕಾಣದುದೇನು 
ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಶೋಕು ನಡೆ 

ಮಾತನಾಡದಂತೆ ಬಾಯಿ ಬೀಗ ಹಾಕಿಕೋ ಆ ಬೀಗವ ನಾ ತೆಗೆಯುವೆ ತಾನೆಂದು ಮರೆಯಿತೋ 
ಮಾತನಾಡದಂತೆ ಬಾಯಿ ಬೀಗ ಹಾಕಿಕೋ ಆ ಬೀಗವ ನಾ ತೆಗೆಯುವೆ ತಾನೆಂದು ಮರೆಯಿತೋ 
ಪಪ್ಪರ ಪಪ್ಪಾಪಂ ಯಹ್ ಪಪ್ಪರ ಪಪ್ಪಾಪಂ ಪಪ್ಪರ ಪಪ್ಪಾಪಂ ಯಹ್ ಪಪ್ಪರ ಪಪ್ಪಾಪಂ 
ಹುಸಿ ಕೋಪಕೆ ಬಿಸಿ ತಾಪಕೆ ನಾ ಹೆದರುವೆನೇನು 
ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಶೋಕು ನಡೆ 
ಲಾಲಾ ಲಲ ಲಲಲಲ್ಲಲ್ಲಲಾಲಾ ಲಲಲ ಲಾಲಾ ಲಲ ಲಲಲಲ್ಲಲ್ಲಲಾಲಾ
-------------------------------------------------------------------------------------------------------------------------

ಧೂಮಕೇತು (೧೯೬೮) - ಆಹಾ ಆಹಾ ಇದೇನು ನಡೆ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಬಿ.ಶ್ರೀನಿವಾಸ  

ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಥಳಕು ನಡೆ
ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಥಳಕು ನಡೆ
ಬೇಗ ಬೇಗ ಹೋಗೆ ಬಿರುಗಾಳಿ ಎದ್ದಿತೋ ನೀನು ನಿಂತ ವೇಳೆ ಈ ಭೂಮಿ ನಿಂತಿತೋ
ಬೇಗ ಬೇಗ ಹೋಗೆ ಬಿರುಗಾಳಿ ಎದ್ದಿತೋ ನೀನು ನಿಂತ ವೇಳೆ ಈ ಭೂಮಿ ನಿಂತಿತೋ

ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಥಳಕು ನಡೆ

ನೋಟದಲ್ಲೇ ಕೊಲ್ಲಬಲ್ಲೆ ಎಂಬ ಜಂಭವೋ ಆ ಕೆಂಡದೇ ಈ ಗಂಡೆದೆ ನೀ ಸುಡುವ ಲೆಕ್ಕವೋ 
ನೋಟದಲ್ಲೇ ಕೊಲ್ಲಬಲ್ಲೆ ಎಂಬ ಜಂಭವೋ ಆ ಕೆಂಡದೇ ಈ ಗಂಡೆದೆ ನೀ ಸುಡುವ ಲೆಕ್ಕವೋ 
ಪಪ್ಪರ ಪಪ್ಪಾಪಂ ಯಹ್  ಪಪ್ಪರ ಪಪ್ಪಾಪಂ ಗುಯ್ ಪಪ್ಪರ ಪಪ್ಪಾಪಂ ಯಹ್  ಪಪ್ಪರ ಪಪ್ಪಾಪಂ
ಈ ಮಿಂಚಿಗೆ ಆ ಸಂಚಿಗೆ ನಾ ಸೋಲುವೇನೇನೂ 
ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಥಳಕು ನಡೆ

ಮಾತನಾಡೆ ಮುತ್ತು ಸುರಿವುದೆಂದು ತಿಳಿದೆಯೋ ಆ ಮುತ್ತಿಗೆ ನಾ ಸುತ್ತುವೆ ತಾನೆಂದು ನೆನೆದೆಯೋ 
ಮಾತನಾಡೆ ಮುತ್ತು ಸುರಿವುದೆಂದು ತಿಳಿದೆಯೋ ಆ ಮುತ್ತಿಗೆ ನಾ ಸುತ್ತುವೆ ತಾನೆಂದು ನೆನೆದೆಯೋ 
ಪಪ್ಪರ ಪಪ್ಪಾಪಂ ಯಹ್  ಪಪ್ಪರ ಪಪ್ಪಾಪಂ ಗುಯ್ ಪಪ್ಪರ ಪಪ್ಪಾಪಂ ಯಹ್  ಪಪ್ಪರ ಪಪ್ಪಾಪಂ
ಈ ಮೌನವು ದುಮ್ಮಾನವು ಬಿಗುಮಾನವಿದೆನು 
ಆಹಾ ಆಹಾ ಇದೇನು ನಡೆ ಒಹೋ ಒಹೋ ಈ ಥಳಕು ನಡೆ
ಟಡಂವ್ ಟಡಂವ್ ಡಡ ಡಡ  ಡಡಂವ್ ಡಡಂವ್ ಡಡ ಡಡಡ
-------------------------------------------------------------------------------------------------------------------------

ಧೂಮಕೇತು (೧೯೬೮) - ರಂಗು ರಂಗಿನಾಟ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಸುಶೀಲಾ, ಕೋರಸ್  

ಲಾಲಾ ಲಲಲ್ಲಲಲ್ಲಾ ಲಾಲಾ ಲಲಲ್ಲಲಲ್ಲಾ ಲಾಲಾ ಲಲಲ್ಲಲಲ್ಲಾ
(ಜೂಜೂಜೂಜೂ ಜೂಜೂಜೂಜೂಜೂ)
ರಂಗು ರಂಗಿನಾಟ ಈ ಬೆಳಕಿನ ಚೆಲ್ಲಾಟ ಬೆರಗು ಮಾಡೋ ನೋಟ ಇದು ಸಾವಿನೊಡನೇ ಆಟ
(ಹತ್ತೂಹತ್ತೂ ಬೆನ್ನತ್ತೂ ಹತ್ತೂ ಹತ್ತೂ... ಓಓಓಓಓಓ )
ರಂಗು ರಂಗಿನಾಟ ಈ ಬೆಳಕಿನ ಚೆಲ್ಲಾಟ ಬೆರಗು ಮಾಡೋ ನೋಟ ಇದು ಸಾವಿನೊಡನೇ ಆಟ
(ಓಓಓಓಓಓ...ಓಓಓಓಓಓ...  ಓಓಓಓಓಓ )
 
ಸಾವಿರ ಕಂಗಳ ಎದುರಲ್ಲೇ ಸಾಹಸ ಕಾರ್ಯಕೇ ಕರೆಯೋಲೇ ..
(ಜೂಜೂಜೂಜೂ ಜೂಜೂಜೂಜೂಜೂ)
ಸಾಧನೇ ಮಾಡಿದ ಕೈಗಳೀಗೇ ಆಗಸದಲ್ಲೇ ಉಯ್ಯಾಲೇ 
ಡಿಂಗ್ ಡಾಂಗ್  ಡಿಂಗ್ ಡಾಂಗ್ ಮೇಲೆ ಜೋಕಾಲೇ .. 
ಡಿಂಗ್ ಡಾಂಗ್  ಡಿಂಗ್ ಡಾಂಗ್ ಮೇಲೆ ಜೋಕಾಲೇ .. 
ವಿನೂತನ ವಿನೋದದ ನೋಟವೂ ನಿಮಗಿಲ್ಲಿ... ಹ್ಹೂ... 
ರಂಗು ರಂಗಿನಾಟ (ಲಲಲ) ಈ ಬೆಳಕಿನ ಚೆಲ್ಲಾಟ (ಲಲಲ)
ಬೆರಗು ಮಾಡೋ ನೋಟ (ಲಲಲ) ಇದು ಸಾವಿನೊಡನೇ ಆಟ
(ಓಓಓಓಓಓ...ಓಓಓಓಓಓ...  ಓಓಓಓಓಓ ) 

ಸಿಂಹದ ಬೋನಲಿ ನಿಂತಾಗ ಗುಂಡಿಗೆಯಲ್ಲಿ ಬಲ ಬೇಕೂ 
(ಜೂಜೂಜೂಜೂ ಜೂಜೂಜೂಜೂಜೂ)
ತಂತಿಯ ಮೇಲೆ ನಡೆವಾಗ ಮೈಯ್ಯಿನ ಮೇಲೆ ನೀಗಾ ಬೇಕೂ .. 
ಒನ್ ಟೂ  ಥ್ರೀ ಫೋರ್ ಅಲ್ಲೇ ಸ್ಟ್ಯಾಂಡ್ ಹಾಕೂ 
ಒನ್ ಟೂ  ಥ್ರೀ ಫೋರ್ ಅಲ್ಲೇ ಸ್ಟ್ಯಾಂಡ್ ಹಾಕೂ 
ಅಪಾಯವ ಉಪಾಯದೇ ಗೆಲ್ಲಲೂ ಬರಬೇಕು 
ರಂಗು ರಂಗಿನಾಟ (ಲಲಲ) ಈ ಬೆಳಕಿನ ಚೆಲ್ಲಾಟ (ಲಲಲ)
ಬೆರಗು ಮಾಡೋ ನೋಟ (ಲಲಲ) ಇದು ಸಾವಿನೊಡನೇ ಆಟ
(ಹಚ್ಚು ಹಚ್ಚು ರಾಣಿ ಹಚ್ಚು ಹಚ್ಚು ರಾಣಿ ) 
-------------------------------------------------------------------------------------------------------------------------

ಧೂಮಕೇತು (೧೯೬೮) - ಅಂದಚೆಂದವೇತಕೆ ಅಂತರಂಗ ದೈವಕೆ
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಸುಶೀಲಾ,

ಅಂದಚೆಂದವೇತಕೆ ಅಂತರಂಗ ದೈವಕೇ 
ಋಣ ಜೇನಿನಂತೇ ಮನಸೂ ಮಾಗಿದೆ ಮಾವಂತೇ ಇನಿಸೂ ತುಂಬಿದೇ 
ಅಂದಚೆಂದವೇತಕೇ... 
 
ಓಓಓಓಓ ಓಓಓ ... ಇದೇ  ಬಾಳ್ವೆಯಲ್ಲಾ ಚೆಲುವಿನಾಟವಲ್ಲಾ.. ಒಂದುಗೂಡಿರೇ... ಒಲವೂ ಮೂಡಿರೇ..     
ಇದೇ  ಬಾಳ್ವೆಯಲ್ಲಾ ಚೆಲುವಿನಾಟವಲ್ಲಾ.. ಒಂದುಗೂಡಿರೇ... ಒಲವೂ ಮೂಡಿರೇ..     
ಅದೇ ಪುಣ್ಯ ಲೋಕ ಅದೇ ನನ್ನ ನಾಕ 
ಅಂದಚೆಂದವೇತಕೆ ಅಂತರಂಗ ದೈವಕೇ 
ಋಣ ಜೇನಿನಂತೇ ಮನಸೂ ಮಾಗಿದೆ ಮಾವಂತೇ ಇನಿಸೂ ತುಂಬಿದೇ 
ಅಂದಚೆಂದವೇತಕೇ... 

ಓಓಓಓಓ ಓಓಓ ನೆಲೆ ಇಲ್ಲದೆನ್ನ ಒಲಿಸಿಕೊಂಡ ಚೆನ್ನ ನಿನ್ನ ಬಾಳಿನ.. ನೆರಳಿನಾಳದ 
ನೆಲೆ ಇಲ್ಲದೆನ್ನ ಒಲಿಸಿಕೊಂಡ ಚೆನ್ನ ನಿನ್ನ ಬಾಳಿನ.. ನೆರಳಿನಾಳದ 
ಧಣಿ ನಿನ್ನ ಸೇವೇ ಸದಾದೈದೂ ಬಾಳ್ವೆ 
ಅಂದಚೆಂದವೇತಕೆ ಅಂತರಂಗ ದೈವಕೇ 
ಋಣ ಜೇನಿನಂತೇ ಮನಸೂ ಮಾಗಿದೆ ಮಾವಂತೇ ಇನಿಸೂ ತುಂಬಿದೇ 
ಅಂದಚೆಂದವೇತಕೇ... 
-------------------------------------------------------------------------------------------------------------------------

ಧೂಮಕೇತು (೧೯೬೮) - ಅಂದ ಚೆಂದ ತುಂಬೀ ಬಂದ ಆನಂದದಾ ಹೊಸ ಪ್ರಾಯವಿದೂ 
ಸಂಗೀತ : ಟಿ.ಜಿ.ಲಿಂಗಪ್ಪ, ಸಾಹಿತ್ಯ : ಆರ್.ಏನ್.ಜಯಗೋಪಾಲ್, ಗಾಯನ : ಪಿ.ಬಿ.ಶ್ರೀನಿವಾಸ, ಪಿ.ಸುಶೀಲಾ,

ಗಂಡು : ಹೂಂ ..  (ಹ್ಹಾಂ) ಅಂದ (ಚೆಂದ) ತುಂಬೀ (ಬಂದ) ಆನಂದದಾ ಹೊಸ ಪ್ರಾಯವಿದೂ 
ಹೆಣ್ಣು : ಇಂದೂ (ಇಂತೂ) ನಾಳೇ (ಇರದೂ) ಕಳೆದೂ ಹೋದರೇ ಮರಳಿ ಬಾರದೂ 

ಹೆಣ್ಣು : ಒಳ್ಳೇ ವಯಸ್ಸೂ ವಯಸ್ಸೇ ಸೊಗಸೂ ಒಲ್ಲೇ ಅನ್ನದೇ ಒಲಿಯೋ ಮನಸ್ಸೂ 
           ಒಳ್ಳೇ ವಯಸ್ಸೂ ವಯಸ್ಸೇ ಸೊಗಸೂ ಒಲ್ಲೇ ಅನ್ನದೇ ಒಲಿಯೋ ಮನಸ್ಸೂ   
ಗಂಡು : ಸರಸ ಬಯಸೀ ಸೈಯನ್ನೂವಾಗ ಸವಿಯಬೇಕೂ ಅದರ ಸೊಬಗ 
ಹೆಣ್ಣು : ಅಂದ ಚೆಂದ ತುಂಬೀ ಬಂದ ಆನಂದದಾ ಹೊಸ ಪ್ರಾಯವಿದೂ 
           
ಗಂಡು : ಮೈಯ್ಯ ಬಲವೂ ಮನದ ಅಮಲೂ ಮಾಗೀ ಮುದಿತನ ಮುಸುಕಿ ಬರಲೂ 
            ಮೈಯ್ಯ ಬಲವೂ ಮನದ ಅಮಲೂ ಮಾಗೀ ಮುದಿತನ ಮುಸುಕಿ ಬರಲೂ 
ಹೆಣ್ಣು : ನೆನಸೀ ಬಯಸೀ ಬೇಕೇನುವಾಗ ಚಿಗುರುದೇಲ್ಲಾ ಸುಖದ ಭಾವಾ 
ಗಂಡು : ಇಂದೂ ಇಂತೂ ನಾಳೇ ಇರದೂ ಕಳೆದೂ ಹೋದರೇ ಮರಳಿ ಬಾರದೂ 

ಹೆಣ್ಣು : ಕೈಯ್ಯ ಹಿಡಿದ ಇನಿಯನೊಡನೇ ಕೂಡಿ ಬಾಳುತ ನಲಿದು ಲಲನೇ  
          ಕೈಯ್ಯ ಹಿಡಿದ ಇನಿಯನೊಡನೇ ಕೂಡಿ ಬಾಳುತ ನಲಿದು ಲಲನೇ  
ಗಂಡು : ನಡೆಸೋ ಬದುಕೇ ತಂದಾರವಮ್ಮಾ ಪತಿಗೆ ಇದುವೇ ನೀತಿ ನಿಯಮ.. 
ಇಬ್ಬರು : ಹ್ಹಾ.. ಅಂದ ಚೆಂದ ತುಂಬೀ ಬಂದ ಆನಂದದಾ ಹೊಸ ಪ್ರಾಯವಿದೂ 
ಗಂಡು : ಅಂದ (ಚೆಂದ) ತುಂಬೀ (ಬಂದ) ಆನಂದದಾ ಹೊಸ ಪ್ರಾಯವಿದೂ 
-------------------------------------------------------------------------------------------------------------------------

No comments:

Post a Comment