953. ಕಾಡಿನ ರಹಸ್ಯ (1969)


ಕಾಡಿನ ರಹಸ್ಯ ಚಲನಚಿತ್ರದ ಹಾಡುಗಳು 
  1. ಇದೇ ಇದೇ ಸುಖ ಸಖಾ ಆಡೇ ಮೈ ಮನ
  2. ಅಯ್ಯಮ್ಮ ಅಯ್ಯಮ್ಮ ಅಯ್ಯಮ್ಮ ಏನಮ್ಮಾ ಏನಾಯ್ತು ಹೇಳಮ್ಮಾ
  3. ಓ ಬಳುಕಿ ಕುಲುಕುವಾ ಗೊಂಬೆ 
  4. ಏಕೋ ಕಾಣೇನೂ ನಾ 
  5. ಗಗನದಲ್ಲಿ ಹಾರುತಿರೇ 
ಕಾಡಿನ ರಹಸ್ಯ (1969) - ಇದೇ ಇದೇ ಸುಖ ಸಖಾ ಆಡೇ ಮೈ ಮನ
ಸಂಗೀತ : ಸತ್ಯಂ,  ಸಾಹಿತ್ಯ :ಗೀತಪ್ರಿಯಾ ಗಾಯನ : ಎಸ್.ಜಾನಕಿ 

ಹ್ಹಾ.. ಆಹ್ಹಾ .. ಆಹ್ಹಾ .. ಆಹ್ಹಾ .. ಆಹಾಹಾಹಾ.. ಆಆಆ ..
ಇದೇ ಇದೇ ಸುಖ ಸಖಾ ಆಡೇ ಮೈ ಮನ
ಮೈಯೊಳೇಕೊ ಮಿಂಚಿನಂಥ ಮಧುರ ಮಧುರ ಕಂಪನ
ಇದೇ ಇದೇ ಸುಖ ಸಖಾ .. ಆಹಾಹಾಹಾ.. ಆಆಆ .. ಲಾಲಲಲ.. ಲಾಲಲಾಲ್ಲಲ್ಲಲಾಲ
ಲಾಲಲಲ.. ಲಾಲಲಾಲ್ಲಲ್ಲಲಾಲ

ಇಂದು ಗಜದ ಮೇಲೆ ಎರೆಡು ಹೃದಯ ಸಂಗಮ
ಮಂದ ಮಂದ ತಾಳದೆ ಒಂದು ಬಗೆಯ ಸಂಭ್ರಮ
ಈ ದಿನ ತೋರಿರೆ ಹೊಸ ಹೊಸ ಅನುಭವ...
ಇದೇ ಇದೇ ಸುಖ ಸಖಾ ಆಡೇ ಮೈ ಮನ ಆಹಾಹಾಹಾ.. ಆಆಆ ..

ಇಂದೇಕೋ ಎಲ್ಲೇ ಮೀರಿದ ಆಸೆಯ ಶ್ರುತಿ ಸೇರಿಸಿ
ಹಿಂದೆಂದೂ ಕಾಣದಂತಹ ಮತ್ತನು ನಮ್ಮಳೇರಿಸಿ
ಯೋಚನೆ ನೀಡಿರೇ ಏಕೋ ಏನೋ ಮುಂದಿನಾ....
ಇದೇ ಇದೇ ಸುಖ ಸಖಾ ಆಡೇ ಮೈ ಮನ
ಮೈಯೊಳೇಕೊ ಮಿಂಚಿನಂಥ ಮಧುರ ಮಧುರ ಕಂಪನ
ಆಹಾಹಾಹಾ.. ಆಆಆ .. ಆಹಾಹಾಹಾ.. ಆಆಆ .. ಆಹಾಹಾಹಾ.. ಆಆಆ ..
--------------------------------------------------------------------------------------------------------------------------

ಕಾಡಿನ ರಹಸ್ಯ (1969)
ಸಂಗೀತ : ಸತ್ಯಂ,  ಸಾಹಿತ್ಯ :ಗೀತಪ್ರಿಯಾ ಗಾಯನ : ಎಸ್.ಜಾನಕಿ, ಎಲ್.ಆರ್.ಈಶ್ವರಿ  

ಜಾನಕೀ : ಅಯ್ಯಮ್ಮ ಅಯ್ಯಮ್ಮ ಅಯ್ಯಮ್ಮ
ಈಶ್ವರಿ : ಏನಮ್ಮಾ ಏನಾಯ್ತು ಹೇಳಮ್ಮಾ
ಜಾನಕೀ : ಏಕೋ ಕಾಣೇನೋ ನಾ ಏನೋ ತಲ್ಲಣ ಮೂಡುತಿದೇ ..
              ಏಕೋ ಕಾಣೇನೋ ನಾ ಏನೋ ತಲ್ಲಣ ಮೂಡುತಿದೇ ..
ಈಶ್ವರಿ : ಹೌದಮ್ಮ ಹೌದಮ್ಮ ಹೌದಮ್ಮ
ಜಾನಕೀ : ಅಯ್ಯಯ್ಯೋ ಏನಾಯ್ತು ಹೇಳಮ್ಮಾ
ಈಶ್ವರಿ : ನೆನೆಯಲು ಏನೇನೋ ನಾ ಮನವು ಎಲ್ಲಿಗೋ ಓಡುತಿದೆ
            ನೆನೆಯಲು ಏನೇನೋ ನಾ ಮನವು ಎಲ್ಲಿಗೋ ಓಡುತಿದೆ
ಜಾನಕೀ : ಒಹೋ...         ಈಶ್ವರಿ : ಹ್ಹಾ... ಹ್ಹಾ... ಹ್ಹಾ...
ಜಾನಕೀ : ಒಹೋ...         ಈಶ್ವರಿ : ಹ್ಹಾ... ಹ್ಹಾ... ಹ್ಹಾ...
ಜಾನಕೀ : ಒಹೋ...         ಈಶ್ವರಿ : ಆಹ್ಹಾ... ಹ್ಹಾ...
ಜಾನಕೀ : ಒಹೋ...         ಈಶ್ವರಿ : ಆಹ್ಹಾ... ಹ್ಹಾ... ...

ಜಾನಕೀ : ಸಿಲುಕಿ ಒಂದು ಸೆರೆಯಲ್ಲಿ ಆಡೇ ಮನವು ಮರೆಯಲ್ಲಿ
              ತೆರೆಯ ಸರಸಿ ಜೇನು ಸುರಿಸಿ ಮರೆಯೇತಿರುವಾಗ ಕೆಂಪು  ಕೆನ್ನೆಗೆ ಏರುತಿದೇ
ಈಶ್ವರಿ : ಓ..  ಒಹೋ.. ನಿನಗೆ ಏಕೆ ಈ ಚಿಂತೆ ಮೋಹದಾಟ ಇದುವಂತೆ
            ಬಿಸಿಲು ನೆರಳು ಎರಡು ಒಂದೇ ಎನ್ನುತಿರುವಾಗ ಕಣ್ಣು  ಏನೇನು ತೋರುತಿದೆ
ಜಾನಕೀ : ಅಹ್ ಅಯ್ಯಮ್ಮ ಅಯ್ಯಮ್ಮ ಅಯ್ಯಮ್ಮ
ಈಶ್ವರಿ : ಏನಮ್ಮಾ ಏನಾಯ್ತು ಹೇಳಮ್ಮಾ
ಜಾನಕೀ : ಏಕೋ ಕಾಣೇನೋ ನಾ ಏನೋ ತಲ್ಲಣ ಮೂಡುತಿದೇ ..
ಈಶ್ವರಿ : ನೆನೆಯಲು ಏನೇನೋ ನಾ ಮನವು ಎಲ್ಲಿಗೋ ಓಡುತಿದೆ
ಜಾನಕೀ : ಆಹಾ ...         ಈಶ್ವರಿ : ಹ್ಹಾ... ಹ್ಹಾ... ಹ್ಹಾ...
ಜಾನಕೀ : ಆಹಾ ...         ಈಶ್ವರಿ : ಹ್ಹಾ... ಹ್ಹಾ... ಹ್ಹಾ...
ಜಾನಕೀ : ಆಹಾ ...         ಈಶ್ವರಿ : ಓಹೋ
ಜಾನಕೀ : ಆಹಾ ..          ಈಶ್ವರಿ : ಒಹೋ

ಜಾನಕೀ : ನೀರ ಅಲೆಯೂ  ಜಲ್ಲೆಂದು ಚಿಮ್ಮುತಿರಲು ಝಂಮೆಂದು
               ನೆಲೆಯ ಅರಿತ ಅಲೆಯ ಸೆಳೆತ ಸೆಳೆಯುತಿರುವಾಗ ಏನೋ ಆಸೆಯೂ ಚಿಮ್ಮುತಿದೆ
ಈಶ್ವರಿ : ಆ.. ಅಹ್ಹ ..  ನಕ್ಕು ನಗಿಸಿ ಕಿಲ ಕಿಲನೆ ಜಲವು ಹಾಡೇ ಕಲಕಲನೆ
            ನೀರಿನಲ್ಲೂ ಮೈಯ ಬೆವತು ಮಿಂಚುತಿರುವಾಗ ಏಕೋ ಬಿಂಕವು ಹೊಮ್ಮುತಿದೆ
ಜಾನಕೀ : ಅಹ್ ಅಯ್ಯಮ್ಮ ಅಯ್ಯಮ್ಮ ಅಯ್ಯಮ್ಮ
ಈಶ್ವರಿ : ಏನಮ್ಮಾ ಏನಾಯ್ತು ಹೇಳಮ್ಮಾ
ಜಾನಕೀ : ಏಕೋ ಕಾಣೇನೋ ನಾ ಏನೋ ತಲ್ಲಣ ಮೂಡುತಿದೇ ..
ಈಶ್ವರಿ : ನೆನೆಯಲು ಏನೇನೋ ನಾ ಮನವು ಎಲ್ಲಿಗೋ ಓಡುತಿದೆ
-----------------------------------------------------------------------------------------------------------------------

ಕಾಡಿನ ರಹಸ್ಯ (1969) - ಓ ಬಳುಕಿ ಕುಲುಕುವಾ ಗೊಂಬೆ
ಸಂಗೀತ : ಸತ್ಯಂ, ಸಾಹಿತ್ಯ :ಗೀತಪ್ರಿಯಾ ಗಾಯನ : ಎಸ್.ಪಿ.ಬಿ., ಜಯದೇವ 


ಎಸ್ಪಿಬಿ : ಓಓ .. ಓ ಓಹೋ ಬಳುಕಿ ಕುಲುಕುವಾ ಗೊಂಬೆ 
ಜಯ : ಹೇ..ಒಹೋ ನೀನೇ ಭೂಮಿಗಿಳಿದಿಹ ರಂಭೇ .. 
ಎಸ್ಪಿ : ಮನಸಿನ ಗಿಣಿಯೂ ಇಣಕಿ ಇಣಕಿ ಇಣಕಿ 
ಜಯ : ನನ್ನ ನಿನ್ನ ಮನವನೂ ಕೆಣಕಿ ಕೆಣಕಿ 
ಎಸ್ಪಿ : ವಯ್ಯಾರೀ ಈಗ ಹಾಡುವಾ.. ಸಾ.. ಗಾ.. ಮಾಪ ಮಾಪ..ಮಗಸ 
ಜಯ : ಆಹ್ಹಾ.. ಸಿಂಗಾರೀ ಆಡಿ ಕುಣಿಯುವಾ ಥಾ.. ಥೈಯ್ಯ .. ತಕಥೈ.. ತಕಥೈ..  
ಎಸ್ಪಿ : ತಾಂ ಧೀತ್ ತಾಂತತ್ತಥೈ ಥೈ ಥೈ  ತಾಂ ಧೀತ್ ತಾಂತತ್ತಥೈ ಥೈ ಥೈ  
         ತಾಂ ಧೀತ್ ತಾಂತತ್ತಥೈ ಥೈ ಥೈ... ಥೈ ...  
ಜಯ : ತಕಜನು ತಕಜನು ತಕಧಿಮಿ ತಕಜನು ತಾಂಗಿರಟಕ ತರಿಕಿಟತಕ ತಾಂಗಿರಟಕ ತರಿಕಿಟತಕ  ತಾ 

ಎಸ್ಪಿ : ಆಹಾ... ಬಣ್ಣದ ಚಿಟ್ಟೇ ಕಣ್ಣನ್ನೂ ನೆಟ್ಟೇ ಈಗಲೇ.. 
ಜಯ : ಆಹಾ.. ಮುದ್ದಿನ ಮುತ್ತೇ ಮನವನೂ ಕದ್ದೇ ಆಗಲೇ.. 
ಎಸ್ಪಿ : ತೋರಿ ಬಿನ್ನಾಣ..              ಜಯ : ತೂರಿ ತಂದಾನ  
ಇಬ್ಬರು : ಏತಕೆ ಕೊರೆಯುವ ಕನ್ನ ಮಾತಿಗೇ ಇನ್ನ.. ಬಾ ... ಓ.. 
ಎಸ್ಪಿ : ವಯ್ಯಾರೀ  ಈಗ ಹಾಡುವಾ.. ಸಾ.. ಗಾ.. ಮಾಪ ಮಾಪ..ಮಗಸ 
ಜಯ : ಆಹ್ಹಾ.. ಸಿಂಗಾರೀ ಆಡಿ ಕುಣಿಯುವಾ ಥಾ.. ಥೈಯ್ಯ .. ತಕಥೈ.. ತಕಥೈ..  
ಎಸ್ಪಿಬಿ : ಓಓ .. ಓ ಓಹೋ ಬಳುಕಿ ಕುಲುಕುವಾ ಗೊಂಬೆ 
ಜಯ : ಹೇ..ಒಹೋ ನೀನೇ ಭೂಮಿಗಿಳಿದಿಹ ರಂಭೇ .. 

ಎಸ್ಪಿ : ನಿನ್ನನೂ ನೋಡಿ ಆಸೆಗೇ ಕೋಡಿ ಬಿದ್ದಿದೇ ..
ಜಯ: ಆಹಾ.. ನಿನ್ನಯ ನೋಟ ಮನಸಿಗೇ ಮಾಟ ಮಾಡಿದೇ ..
ಎಸ್ಪಿ : ಏಕೇ ಸಂಕೋಚ...               ಜಯ : ಬೇಕೇ ಸಂತೋಷ
ಇಬ್ಬರು : ಕೋಮಲೇ ಮೋಹದ ಮಲ್ಲೇ ಕಬ್ಬಿನ ಜಲ್ಲೇ  ಬಾ...
ಎಸ್ಪಿ :ಆಹಾ..  ವಯ್ಯಾರೀ  ಈಗ ಹಾಡುವಾ.. ಸಾ.. ಗಾ.. ಮಾಪ ಮಾಪ..ಮಗಸ 
ಜಯ : ಆಹ್ಹಾ.. ಸಿಂಗಾರೀ ಆಡಿ ಕುಣಿಯುವಾ ಥಾ.. ಥೈಯ್ಯ .. ತಕಥೈ.. ತಕಥೈ..  
ಎಸ್ಪಿಬಿ : ಓಓ .. ಓ ಓಹೋ ಬಳುಕಿ ಕುಲುಕುವಾ ಗೊಂಬೆ 
ಜಯ : ನೀನೇ ಭೂಮಿಗಿಳಿದಿಹ ರಂಭೇ ..
ಎಸ್ಪಿ : ಗೊಂಬೇ .. ಜಯ : ರಂಭೇ ..
ಎಸ್ಪಿ :ಅಹ್ ಗೊಂಬೇ .. ಜಯ :ಒಹ್ ರಂಭೇ ..
-----------------------------------------------------------------------------------------------------------------------

ಕಾಡಿನ ರಹಸ್ಯ (1969) - ಗಗನದಲ್ಲಿ ಹಾರುತಿರೇ
ಸಂಗೀತ : ಸತ್ಯಂ, ಸಾಹಿತ್ಯ :ಗೀತಪ್ರಿಯಾ ಗಾಯನ : ಎಸ್.ಜಾನಕೀ., ಪಿ.ಬಿ.ಶ್ರೀ

ಹೆಣ್ಣು : ಗಗನದಲೀ...  ಗಗನದಲಿ ಹಾರುತಿರೇ ಹಕ್ಕಿಗಳ ಜೋಡಿ
          ಭೂಮಿಯಲಿ ಆಡುತಿದೇ ಈ ನಮ್ಮ ಜೋಡಿ...
ಗಂಡು : ಕಾಡಿನಲೀ ...   ಕಾಡಿನಲಿ ಓಡುತಿರೇ ಜಿಂಕೆಗಳ ಜೋಡಿ
            ನಮ್ಮ ಮನ ಕುಣಿಯುತಿದೇ ಅದನ ನೋಡಿ ನೋಡಿ ...
ಹೆಣ್ಣು : ಗಗನದಲೀ...  ಗಗನದಲಿ ಹಾರುತಿರೇ ಹಕ್ಕಿಗಳ ಜೋಡಿ
ಗಂಡು : ಭೂಮಿಯಲಿ ಆಡುತಿದೇ ಈ ನಮ್ಮ ಜೋಡಿ...

ಹೆಣ್ಣು : ಆಆಆ... ಆಆಆ ಆಆಆ... ಆಆಆ ಓಓಓಓಓಓ .. ( ಆಆಆ..ಆಆಆ  ).
          ಕಣ್ಣಿನಿಂದ ಬಿಟ್ಟೇ ನಾನೂ ಬಾಣ ನೀ ಹೃದಯದಲೀ ಕೊಟ್ಟೇ ನನಗೇ ಜಾಣ
          ಇಲ್ಲಿ ಇಹುದು ನಮ್ಮ ಸುಖದ ತಾಣ 
  ಗಂಡು : ಒಲಿದು ಬಂದು ನೀನೂ ನೆಟ್ಟ ನೋಟ ಅದು ಗೆಲುವ ತೋರಿ ಕಲಿಸಿ ಕೊಟ್ಟ ಪಾಠ
              ಮಾಡುತಿಹೆ ಇಬ್ಬರಿಗೂ ಮಾಟ .. ಮಾಡುತಿಹೆ (ಆಹಾ ) ಇಬ್ಬರಿಗೂ(ಆಹಾ)  ಮಾಟ ..
             ಗಗನದಲೀ...  ಗಗನದಲಿ ಹಾರುತಿರೇ ಹಕ್ಕಿಗಳ ಜೋಡಿ
ಹೆಣ್ಣು : ಭೂಮಿಯಲಿ ಆಡುತಿದೇ ಈ ನಮ್ಮ ಜೋಡಿ...

ಗಂಡು : ಆಹಾ... ಹ್ಹಹ್ಹಾ.. ಆಆಆ... (ಆಆಆಹ್ಹಾ ) 
ಹೆಣ್ಣು : ಹೂವಿನಲ್ಲಿ ಮಕರಂದ ತುಂಬಿ ಗುಯ್ ಗುಟ್ಟತಲೀ ಸುತ್ತುತಿದೇ ದುಂಬಿ 
          ಆಡುತಿದೇ ಅದನೂ ಇದು ನಂಬೀ .. 
ಗಂಡು : ಕಾಡಿನಲಿ ನಡುವೇ ಕಂಡ ಜಾಡಿ  .. ಆ ಜಾಡಿನಲೇ ಗುರಿಯ ನಾವೂ ಸೇರಿ  
            ಆಡೋಣ ಉಲ್ಲಾಸ ಕೋರಿ.. ಆಡೋಣ (ಆಹಾ) ಉಲ್ಲಾಸ (ಆಹಾ) ಕೋರಿ.. ಆಆಆ.. 
            ಗಗನದಲೀ...  ಗಗನದಲಿ ಹಾರುತಿರೇ ಹಕ್ಕಿಗಳ ಜೋಡಿ
          ಭೂಮಿಯಲಿ ಆಡುತಿದೇ ಈ ನಮ್ಮ ಜೋಡಿ...
ಹೆಣ್ಣು  : ಕಾಡಿನಲೀ ...   ಕಾಡಿನಲಿ ಓಡುತಿರೇ ಜಿಂಕೆಗಳ ಜೋಡಿ
            ನಮ್ಮ ಮನ ಕುಣಿಯುತಿದೇ ಅದನ ನೋಡಿ ನೋಡಿ ...
ಗಂಡು : ಹೂಂಹೂಂಹೂಂ .. (ಆಆಆ) ಹೂಂಹೂಂಹೂಂ .. (ಆಆಆ) ಹೂಂಹೂಂಹೂಂ .. (ಆಆಆ) 
 -----------------------------------------------------------------------------------------------------------------------

No comments:

Post a Comment