955. ಒಡಹುಟ್ಟಿದವರು (೧೯೬೯)



ಒಡಹುಟ್ಟಿದವರು ಚಲನಚಿತ್ರದ ಹಾಡುಗಳು 
  1. ಧಡಕ ಧಡಕ್ ಧಡಕ್ ಢಕ್  ಢಕ್    ಢಕ್   
  2. ಹಾಲು ಜೇನಿನಂತೆ ಬೇರೇವಾ ಹಾಲು ಜೇನಿನಂತೆ
ಒಡಹುಟ್ಟಿದವರು (೧೯೬೯) - ಧಡಕ ಧಡಕ್ ಧಡಕ್ ಢಕ್  ಢಕ್    ಢಕ್   
ಸಂಗೀತ : ಎಸ.ಹನುಮಂತರಾವ, ಸಾಹಿತ್ಯ : ಚಿ.ಸದಾಶಿವಯ್ಯ, ಗಾಯನ : ಪಿ.ಬಿ.ಎಸ್, ಎಲ್.ಆರ್.ಈಶ್ವರಿ

ಗಂಡು : ಧಡಕ ಧಡಕ್ ಧಡಕ್ ಢಕ್  ಢಕ್    ಢಕ್   
            ನಾನೇ ನಿನ್ನ ಡಾಕ್ಟರಾಗಿ ಬಂದೆ
            ಸ್ಪೆಷಲ್ ಔಷದಿ ಕಂಡು ಹಿಡಿದು ತಂದೆ
            ಬೇಕಾದಷ್ಟು ಸೇವಿಸಬಹುದು ಪತ್ಯವೇ ಇಲ್ಲ
ಹೆಣ್ಣು : ಅಷ್ಟೊಂದು ಒಳ್ಳೆಯ ಮೆಡಿಸಿನ್ ಬೇಗ ಹೇಳಿ ಡಾಕ್ಟರ್
           ನಿಮ್ಮನ್ನೇ ನೋಡುತ್ತಾ ನಗುತ ಕುಡಿದು ಬಿಡುವೆ
           ಹೇಗೋ ನಿಮ್ಮ ವೈದ್ಯದಿ ಹೃದಯ ನೆಟ್ಟಗಾದ್ರೆ ಸಾಕು

ಗಂಡು : ನನ್ನೆದೆಯಾ ನಿನೋರಾಗಿ ಹೀಗೆ ಕೂಡಬೇಕು
           ಮನಸೆಲ್ಲಾ ನಾನಾಗಿ ಮೈಯ ಮರೆಯಬೇಕು
           ಬಾಯನು ತೆರೆದು ಔಷದಿ ಕುಡಿದು ಮತ್ತಳಾಗಬೇಕು
ಆಶಾ : ಓಹೋಹೋ ಹಾಗೇನು ಈಗ ತಿಳಿದೇ ನಾನು
          ಚಂದಿರನು ನಗಬೇಕು ತಂಗಾಳಿ ಬೀಸಬೇಕು
          ನೀವಂತೂ ನನ್ನ ಪಕ್ಕದಿ ಕುಳಿತು ವೈದ್ಯೆ ಮಾಡಬೇಕು
ಗಂಡು : ಆಹಾಹಾ ಬೇರೊಂದು ಮೂಲಿಕೆಯನ್ನು ಕೊಡುವೆ
            ನೀನೊಮ್ಮೆ ರುಚಿ ನೋಡೇ ಮತ್ತೆ ಹಾಡಲೇ ಬಾ ನನ್ನ ಡಿಯರ್
ಹೆಣ್ಣು : ಬಾ ನನ್ನ ಡಾರ್ಲಿಂಗ್
------------------------------------------------------------------------------------------------------------------------

ಒಡಹುಟ್ಟಿದವರು (೧೯೬೯) - ಹಾಲು ಜೇನಿನಂತೆ ಬೇರೇವಾ ಹಾಲು ಜೇನಿನಂತೆ
ಸಂಗೀತ : ಎಸ.ಹನುಮಂತರಾವ, ಸಾಹಿತ್ಯ : ಚಿ.ಸದಾಶಿವಯ್ಯ, ಗಾಯನ : ಪಿ.ಬಿ.ಎಸ್, ಎಲ್.ಆರ್.ಈಶ್ವರಿ

ಇಬ್ಬರು : ಹಾಲು ಜೇನಿನಂತೆ ಬೇರೇವಾ ಹಾಲು ಜೇನಿನಂತೆ
            ತಾಯ್ ಪ್ರೇಮದಿ ಬೆಳೆದವನಾ ಸುಂದರ ರೂಪವ ತಳೆದವನಾ
ಒಬ್ಬಳ ಮನವನು ಕದ್ದವನಾ ಉಸಿರಾಗುಸಿರಲಿ ಬೆರೆತೆನುನಾ

ಲೋಕದ ಗುಟ್ಟನು ತಿಳಿದವನಾ ಮನಸಿನ ಕತೆಗಳ ಅರಿತವನಾ
ನೀತಿಯ ರೀತಿಯ ಬಲ್ಲವನಾ ನೋಟಕೆ ಸೆರೆಯಾಳಾದೆನು ನಾ

ತರುಣಿಯ ಮುಖವನು ಕಂಡವನಾ ಅವಳಿಗೆ ಹೃದಯವ ಸೋತವನಾ
ತೆಕ್ಕೆಯಲುಪ್ಪುತ್ತಾ ನಲಿದವನಾ ತುಂಬಿದ ಹೃದಯದಿ ಒಲಿದೇನುನಾ

ಶಾಸ್ತ್ರವ ಸೂತ್ರವ ಕಲಿತವನಾ ತಪ್ಪುವ ದುಷ್ಟರ ಹಿಡಿದವನು
ಹಗಲು ಇರುಳು ಅಲೆದವನಾ   ಸಿ.ಐ.ಡಿ. ಯಾ ವರಿಸಿದೆ ನಾ
------------------------------------------------------------------------------------------------------------------------

No comments:

Post a Comment