956. ನಾಡಿನ ಭಾಗ್ಯ (೧೯೭೦)


ನಾಡಿನ ಭಾಗ್ಯ ಚಿತ್ರದ ಹಾಡುಗಳು 
  1. ಶ್ರೀರಾಮ ದೂತ 
  2. ಹನಿ ಹನಿ ಗೂಡಿದರೇ ಹಳ್ಳ 
  3. ಕಂಡೇಯಾ ಮನಗನದೆಯ
  4. ನಾಡಿನ ಭಾಗ್ಯವೇ 
  5. ಒಂದು ಒಂದು ಒಂದು 
ಹಿನ್ನಲೆ ಗಾಯಕರು : ಪಿ.ಬಿ.ಎಸ್, ಎಸ್.ಪಿ.ಬಿ, ಪಿ.ನಾಗೇಶ್ವರಾವ್, ಆರ್.ಶಂಕರ, ಬಿ.ವಸಂತ, ಕಮಲ, ಕೌಸಲ್ಯ 

ನಾಡಿನ ಭಾಗ್ಯ (೧೯೭೦) - ಶ್ರೀರಾಮದೂತ ಪರಮಪುನೀತ ಕರುನಾಡ ಪೀಠ ಶ್ರೀ ಹನುಮಂತ
ಸಂಗೀತ : ಆರ್.ರತ್ನಂ ಸಾಹಿತ್ಯ : ಕುರಾಸೀ ಗಾಯನ : ಪಿ.ಬಿ.ಶ್ರೀನಿವಾಸ 

ವಾಯುಸುತಂ ವಾನರ ಶ್ರೇಷ್ಠಮ್ ಘನ ವಜ್ರ ಶರೀರಂ
ಭೀಮಾಗ್ರಜಂ ನವ ವ್ಯಾಕರಣ ಪಂಡಿತಂ ಚಿರಂಜೀವಿಂ
ಶ್ರೀ ವೀರಾಂಜನೇಯಂ ಶಿರಸಾ ನಮಾಮಿ

ಶ್ರೀರಾಮದೂತ ಪರಮಪುನೀತ ಕರುನಾಡ ಪೀಠ ಶ್ರೀ ಹನುಮಂತ
ಶ್ರೀರಾಮದೂತ ಪರಮಪುನೀತ ಕರುನಾಡ ಪೀಠ ಶ್ರೀ ಹನುಮಂತ
ಶ್ರೀರಾಮದೂತ ಪರಮಪುನೀತ

ಅಂಜನಾದೇವಿಯ ಗರ್ಭದಿ ಜನಿಸಿ 
ಅಂಜನಾದೇವಿಯ ಗರ್ಭದಿ ಜನಿಸಿ
ಅಂಬರ ಹಾರಿದೇ ರವಿಯನ ಪಿಡಿಯಲ್
ಅಂತಕನಾದೆ ಅಸುರರ ಪಾಲಿಗೇ
ಅಂತಕನಾದೆ ಅಸುರರ ಪಾಲಿಗೇ
ಚಿಂತೆಯ ನೀಗಿಸಿ ಸೀತಾಮಾತೆಗೇ  
ಲಂಕಿಸಿ ಸಾಗರ ಲಂಕೆಯ ಸೇರಿ ಲಂಕಿಣಿಯನು ಕೊಂದೇ 
ಲಕ್ಷ್ಯವಿಲ್ಲದೇ ಅಕ್ಷಯ ಕುವರನ ವೃಕ್ಷವನೇ ಸೀಗಿದೇ  
ರಾಮ ರಾಮ ಶ್ರೀರಾಮ ಎನ್ನುತಾ
ರಾಮ ರಾಮ ಶ್ರೀರಾಮ ಎನ್ನುತಾ
ಅಶೋಕವನಕೆ ಧಾವಿಸಿದೇ 
ರಾಮ ಮುದ್ರಿಕೇ ಜಾನಕಿಗೆ ಇತ್ತು  ರಾವಣ ಗರ್ವವ ಭಂಗಿಸಿದೇ  
ಲಂಕೆಯ ಸುಟ್ಟ ಧೀಮಂತ ಸಂಜೀವಿನಿ ತಂದ ಬಲವಂತ 
ಶ್ರೀರಾಮದೂತ ಪರಮಪುನೀತ ಕರುನಾಡ ಪೀಠ ಶ್ರೀ ಹನುಮಂತ  
-----------------------------------------------------------------------------------------------------------------------

ನಾಡಿನ ಭಾಗ್ಯ (೧೯೭೦) - ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ಸಂಗೀತ : ಆರ್.ರತ್ನಂ ಸಾಹಿತ್ಯ : ಕುರಾಸೀ ಗಾಯನ : ಎಸ್.ಪಿ.ಬಿ.

ಹಾಯಿಲೋ ಹಾಯಿಲೋ ಹಾಯಿಲೋ ಹಾಯಿಲೋ
ಲೇ ಲಾಲಿ ಲೇಲಾ  ಲೇ ಲಾಲಿ ಲೇಲಾ
ತಾನಿ ತಂದಾನ ತಂದನಿ ತಂದಾನ
ತಾನಿ ತಂದಾನ ತಂದನಿ ತಂದಾನ
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ಹುಯ್ಯಲೋ ಡಂಗುರವಾ ಹಾಹಾ...
ಹುಯ್ಯಲೋ ಡಂಗುರವಾ
ರಾಮಣ್ಣ ಭೀಮಣ್ಣಾ ...  ರಾಮಣ್ಣ ಭೀಮಣ್ಣಾ
ಹಬ್ಬದ ಸಡಗರ ಸುಗ್ಗಿಯ ಸಿಂಗಾರ
ಭೂಮಿತಾಯಿ ಬೆಳೆದವಳೇ ಬಂಗಾರವ
ಭೂಮಿತಾಯಿ ಬೆಳೆದವಳೇ ಬಂಗಾರವ ಹೊಯ್...
ರಾಮಣ್ಣ ಭೀಮಣ್ಣಾ ...  ರಾಮಣ್ಣ ಭೀಮಣ್ಣಾ 

ಕಾವೇರಿ ಕಪಿಲೇ ನಮ್ಮವ್ವ ಭೀರು  
ತುಂಗವ್ವ ಭಧ್ರವ್ವಾ ಅಕ್ಕ ತಂಗೇರು.. ಅಕ್ಕ ತಂಗೇರು
ಶರವಾತಿ ನೇತ್ರಾಮ್ಮ ಹರಿವಂತ ತವರೂ 
ಬೆವರು ಹರಿಸಿ ದುಡಿದರೇ ಭಾಗ್ಯದ ಹೇರು 
ಹಾಯಿಲೋ ಹಾಯಿಲೋ ಹಾಯಿಲೋ ಹಾಯಿಲೋ

ಕಣದಲ್ಲಿ ರಾಶಿಯ ಹಾಕೋಣ ಚಿನ್ನ 
ಬೆನಕನ ಪೂಜಿಸಿ ನಮಿಸುವ ಮುನ್ನ... ನಮಿಸುವ ಮುನ್ನ
ದಾನವ ಧರ್ಮವ ಮಾಡೋಣ ಅಣ್ಣ 
ನಾಡಿನ ಸೇವೆಯ ಮಾಡೋದೇ ಚೆನ್ನಾ 
ರಾಮಣ್ಣ ಭೀಮಣ್ಣಾ ...  ರಾಮಣ್ಣ ಭೀಮಣ್ಣಾ 

ಎತ್ತೆತ್ತ ನೋಡಿದರೂ ರಾಗಿಯ ರಾಶಿ 
ಕತ್ತೆತ್ತಿ ನೋಡೋ ಭತ್ತದ ರಾಶಿ.... ಭತ್ತದ ರಾಶಿ 
ಮುತ್ತಿನಂಥ ಜೋಳದ ಮುಕ್ಕೋಟಿ ರಾಶಿ 
ಮುಗಿಲ ಮುಟ್ಟಿ ನಿಂತೈತಿ ಎದೆಯನ್ನು ಚಾಟಿ  
ಹಾಯಿಲೋ ಹಾಯಿಲೋ ಹಾಯಿಲೋ ಹಾಯಿಲೋ 
ನಾಡಿನ ಭಾಗ್ಯವೇ ಹಳ್ಳಿಯ ಮಕ್ಕಳು
ಹುಯ್ಯಲೋ ಡಂಗುರವಾ ಹಾಹಾ...
ಹುಯ್ಯಲೋ ಡಂಗುರವಾ
ರಾಮಣ್ಣ ಭೀಮಣ್ಣಾ ...  ರಾಮಣ್ಣ ಭೀಮಣ್ಣಾ... ಆಆಆ... ಆಆಆ....  
-----------------------------------------------------------------------------------------------------------------------

ನಾಡಿನ ಭಾಗ್ಯ (೧೯೭೦) - ಹನಿ ಹನಿಗುಡಿದರೆ ಹಳ್ಳ ಎನ್ನುವ ಗಾದೆ ಸುಳ್ಳಲ್ಲಾ
ಸಂಗೀತ : ಆರ್.ರತ್ನಂ ಸಾಹಿತ್ಯ : ಕುರಾಸೀ ಗಾಯನ : ಆರ್.ಶಂಕರ


ಓಹೋಹೋ ಓಓಓ .... ಓಹೋಹೋ ಓಓಓ... ಓಹೋಹೋ
ಗಂಡು : ಹನಿ ಹನಿಗುಡಿದರೆ ಹಳ್ಳ ಎನ್ನುವ ಗಾದೆ ಸುಳ್ಳಲ್ಲಾ
ಕೋರಸ್ : ಹನಿ ಹನಿಗುಡಿದರೆ ಹಳ್ಳ ಎನ್ನುವ ಗಾದೆ ಸುಳ್ಳಲ್ಲಾ
                ಸುಳ್ಳಲ್ಲಾ... ಸುಳ್ಳಲ್ಲಾ... ಸುಳ್ಳಲ್ಲಾ   

ಗಂಡು : ಅನ್ನದ ಪ್ರಶ್ನೆ ದೇಶದಲಿ ನಿಂತಿದೆ ದೈತ್ಯ ಆಕಾರಲಿ.. ಆ... ಓ...
ಕೊರಸ್  : ಅನ್ನದ ಪ್ರಶ್ನೆ ದೇಶದಲಿ ನಿಂತಿದೆ ದೈತ್ಯ ಆಕಾರಲಿ.. ಆ... ಓ...
 ಗಂಡು : ಹೊನ್ನನು ಬೆಳೆಸಲು  ಮಣ್ಣಲ್ಲಿ ಛಲವನು ಬೆಳೆಸುವ ನಮ್ಮಲ್ಲಿ ರೈತ....ಆಆಅ... ಓಓಓ
             ಹನಿ ಹನಿಗುಡಿದರೆ ಹಳ್ಳ ಎನ್ನುವ ಗಾದೆ ಸುಳ್ಳಲ್ಲಾ
ಕೋರಸ್ : ಹನಿ ಹನಿಗುಡಿದರೆ ಹಳ್ಳ ಎನ್ನುವ ಗಾದೆ ಸುಳ್ಳಲ್ಲಾ
                ಸುಳ್ಳಲ್ಲಾ... ಸುಳ್ಳಲ್ಲಾ... ಸುಳ್ಳಲ್ಲಾ   
         
ಗಂಡು ರೈತನೇ ದೇಶದ ಬೆನ್ನೆಲುಬು ರೈತನ ನಂಬಿದೇ ಭಾರತವು
ಕೋರಸ್ : ರೈತನೇ ದೇಶದ ಬೆನ್ನೆಲುಬು ರೈತನ ನಂಬಿದೇ ಭಾರತವು
ಗಂಡು : ನೇಗಿಲ ಯೋಗಿಯ ದುಡಿಮೆಯಲೇ ನಿಂತಿದೆ ನಾಡಿನ ಏಳಿಗೆಯೂ ರೈತ.... ಓಓಓ
ಕೋರಸ್ : ನಿಂತಿದೆ ನಾಡಿನ ಏಳಿಗೆಯೂ.....
                ಹನಿ ಹನಿಗುಡಿದರೆ ಹಳ್ಳ ಎನ್ನುವ ಗಾದೆ ಸುಳ್ಳಲ್ಲಾ... 
                ಹನಿ ಹನಿಗುಡಿದರೆ ಹಳ್ಳ ಎನ್ನುವ ಗಾದೆ ಸುಳ್ಳಲ್ಲಾ... 
                ಹನಿ ಹನಿಗುಡಿದರೆ ಹಳ್ಳ ಎನ್ನುವ ಗಾದೆ ಸುಳ್ಳಲ್ಲಾ... 
                ಸುಳ್ಳಲ್ಲಾ... ಸುಳ್ಳಲ್ಲಾ... ಸುಳ್ಳಲ್ಲಾ   
-------------------------------------------------------------------------------------------------------------------------

ನಾಡಿನ ಭಾಗ್ಯ (೧೯೭೦) - ಕಂಡೆಯಾ ಮನಗಂಡೆಯಾ ಹೃದಯ
ಸಂಗೀತ : ಆರ್.ರತ್ನಂ ಸಾಹಿತ್ಯ : ಕುರಾಸೀ ಗಾಯನ : ಬಿ.ವಸಂತ  

ಲಾ ಲಾ ಲಲಲಲಲಲಲ್ಲಲ ಅಹ್ಹಹಹ...
ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ ಮನಸೂರಿದ ಈ ಬಗೆಯ
ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ ಮನಸೂರಿದ ಈ  ಬಗೆಯ
ಕಂಡೆಯಾ ಮನಗಂಡೆಯಾ ಹೃದಯ

ಮರದಲಿ ಮಲಗಿಹ ಗಿಳಿಗಿಂಡು ಮುಂಜಾನೆಗೆ ಕರೆದಿರದಂತೆ
ಮರದಲಿ ಮಲಗಿಹ ಗಿಳಿಗಿಂಡು ಮುಂಜಾನೆಗೆ ಕರೆದಿರದಂತೆ
ಎದೆಯೊಳೆಡಗಿದಿಹ ಸವಿ ವಿಷಯ ಸಿಡಿದೇಳುವ ಸಡಗರ ಸಮಯ 
ಎದೆಯೊಳೆಡಗಿದಿಹ ಸವಿ ವಿಷಯ ಸಿಡಿದೇಳುವ ಸಡಗರ ಸಮಯ 
ಕಂಡೆಯಾ ಮನಗಂಡೆಯಾ ಹೃದಯ

ನದಿತೀರದ ಕೋಮಲವಾಗುವುದು  ಹೊಳೆನೀರನು  ಹೀರುವೆನೆಂದು 
ನದಿತೀರದ ಕೋಮಲವಾಗುವುದು  ಹೊಳೆನೀರನು  ಹೀರುವೆನೆಂದು 
ನವಯುವತಿಯ ಸಂಯಮ ಕದಡುವುದು ರಸ ಮಡುಗಿದೆ ಧುಮುಕುವನೆಂದು
ನವಯುವತಿಯ ಸಂಯಮ ಕದಡುವುದು ರಸ ಮಡುಗಿದೆ ಧುಮುಕುವನೆಂದು
ಕಂಡೆಯಾ ಮನಗಂಡೆಯಾ ಹೃದಯ

ದುಂಬಿಯ ಬರಲಿನ ಹಾರೈಕೆ ಹೊರಹೊಮ್ಮಲು ಅರಳಿತು ಮಲಯು
ದುಂಬಿಯ ಬರಲಿನ ಹಾರೈಕೆ  ಹೊರಹೊಮ್ಮಲು ಅರಳಿತು ಮಲಯು
ಮನಮಲ್ಲಿಗೆ ಅರಳಿದೆ ಏಕೆ ಹೊರಸೂಸಲು ಅರಿಯದ ಹೊನಲು 
ಮನಮಲ್ಲಿಗೆ ಅರಳಿದೆ ಏಕೆ ಹೊರಸೂಸಲು ಅರಿಯದ ಹೊನಲು
ಕಂಡೆಯಾ ಮನಗಂಡೆಯಾ ಹೃದಯ
ಹೊಸ ಆಸೆಯ ಅರುಣೋದಯ ಮನಸೂರಿದ ಈ ಬಗೆಯ
ಕಂಡೆಯಾ ಮನಗಂಡೆಯಾ ಹೃದಯ
--------------------------------------------------------------------------------------------------------------------------

ನಾಡಿನ ಭಾಗ್ಯ (೧೯೭೦) - ಒಂದು ಒಂದು ಒಂದು ಒಂದೇ ಒಂದು
ಸಂಗೀತ : ಆರ್.ರತ್ನಂ ಸಾಹಿತ್ಯ : ಕುರಾಸೀ ಗಾಯನ : ಆರ್.ಶಂಕರ, ಕೌಸಲ್ಯಾ  


ಹೆಣ್ಣು : ಒಂದು ಒಂದು ಒಂದು ಒಂದೇ ಒಂದು (ಯಾವುದು )
          ನಾನು ನೀನು ಒಂದು ಇಬ್ಬರ ಗುರಿಯು ಒಂದು (ನೋ...ನೋ... ನೋ...)
ಗಂಡು : ಎರಡು ಎರಡು ಎರಡು ಎರಡೇ ಎರಡು (ಯಾವುದು)
            ಈ ಮೈ ಆ ಮೈ ಎರಡು ಈ ಉಸಿರು ಆ ಉಸಿರು ಎರಡು
            ಎರಡು ಎರಡು ಎರಡು ಎರಡೇ ಎರಡು

ಹೆಣ್ಣು : ಮೈ ಎರಡೆ ಎಂಬುದು ಕಂಗಳಿಗೆ ಉಸಿರೆಡಿನಿಸುವುದು ಕಿವಿಗಳಿಗೆ
          ನಲಿದೂರಿನ ಪಂಜರದೊಳಗೆ ತಲೆಗಳೆಬಾಳಿನ ಪ್ರತಿ ಘಳಿಗೆ
          ಮೂಡುವ ಭಾವನೆ ಒಂದೇ  ತಾಗಿಪ ಸಂತಸ ಒಂದೇ
          ಒಂದು ಒಂದು ಒಂದು ಒಂದೇ ಒಂದು

ಗಂಡು : ರೂಪವ ನೋಡುವ ಕಣ್ಣೆರಡೂ ಮೆಲ್ಲುಸಿರ ಆಲಿವ ಕಿವಿಗಳೆರಡೂ
           ಬಳಸುವ ಕೈಕಾಲೆರಡು ಪ್ರೇಯಸಿ ಪ್ರಿಯತಮರೂ ಎರಡು
           ಆಗುವ ಅನುಭವ ಎರಡೂ ಅರಸುವ ಜೀವಿಗಳು ಎರಡು
           ಎರಡು ಎರಡು ಎರಡು ಎರಡೇ ಎರಡು

ಹೆಣ್ಣು : ಮೈ ಮೂಡಿದ ಛಲ (ಒಂದು) ಕೈಗೂಡುವ ಫಲ (ಒಂದೇ) ಅಹ್ಹಹ
          ಹಾರುವೇ ನಗೆ ಮುಖ (ಒಂದು) ತೋರುವ ಸಿರಿ ಸೋಗ (ಒಂದೇ.. ಒಂದು )
          ಎರಡದೆನ್ನುವ ಹುರುಳು ಮೂಡುವ ಭಾವವೂ ಕುರುಡೂ
ಇಬ್ಬರು :ಎರಡದೆನ್ನುವ ಹುರುಳು ಮೂಡುವ ಭಾವವೂ ಕುರುಡೂ        
           ಒಂದು ಒಂದು ಒಂದು ಒಂದೇ ಒಂದು
           ನಾನು ನೀನು ಒಂದು ಇಬ್ಬರ ಗುರಿಯು ಒಂದು
           ಒಂದು ಒಂದು ಒಂದು ಒಂದೇ ಒಂದು 
--------------------------------------------------------------------------------------------------------------------------

No comments:

Post a Comment