958. ಎರಡು ಮುಖ (೧೯೬೯)

ಎರಡು ಮುಖ ಚಿತ್ರದ ಹಾಡುಗಳು 
  1. ಬಾಳಿಗೊಂದು ಬಯಕೆ ಆಸರೆ 
  2. ಏಕೇ ಬಂದೇ ನನ್ನರಸೀ 
  3. ಭಾವನೆಯು ಮನದಾಳದಲ್ಲಿ 
  4. ಹಾರುವ ಈಜುವ 
  5. ಈ ಸಣ್ಣನೇ ನಡುವಿನ ಹೆಣ್ಣು 
ಎರಡು ಮುಖ (೧೯೬೯)
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ

ಗಂಡು : ಬಾಳಿಗೊಂದು ಬಯಕೆ ಆಸರೆ
            ಬಯಕೆ ತುಂಬಲು ಮನವು ಆಸರೆ
            ಮನದ ಮನವು ನೀನೇ ಆಗಿರೆ
           ನೀನೇ ನನಗೆ ಆಸರೆ ಆಸರೇ
           ಬಾಳಿಗೊಂದು (ಹೂಂ) ಬಯಕೆ ಆಸರೆ (ಹೂಂ)
          ಬಯಕೆ ತುಂಬಲು (ಹೂಂ) ಮನವು ಆಸರೆ (ಹೂಂ)

ಗಂಡು : ಕಡಲಿನ ಆಸರೆ ಪಡೆಯಲು ಆಶಿಸಿ ಈ ನದಿ ಓಡುತಿದೆ
           ಕಡಲಿನ ಆಸರೆ ಪಡೆಯಲು ಆಶಿಸಿ ಈ ನದಿ ಓಡುತಿದೆ
ಹೆಣ್ಣು : ಇಳಿಜಾರಿನಲಿ ಹರಿಯಲು ಬಯಸಿ ವೇಗದಿ ಜಾರುತಿದೆ
          ಪಯಣದ ಹಾದಿಯ ಸೊಬಗನು ಕಾಣುವ ಯೋಗದ ಮರೆಯುತಿದೆ
         ಯೋಗದ ಮರೆಯುತಿದೆ
ಗಂಡು : ಬಾಳಿಗೊಂದು (ಹೂಂ) ಬಯಕೆ ಆಸರೆ (ಹೂಂ)
           ಬಯಕೆ ತುಂಬಲು (ಹೂಂ) ಮನವು ಆಸರೆ (ಹೂಂ)

ಗಂಡು : ಭುವಿಯನು ಪ್ರೀತಿಸಿ ಮುದ್ದಿಸಲಾಶಿಸಿ ಬಾಗುತಿದೆ ಬಾನು
ಗಂಡು : ಭುವಿಯನು ಪ್ರೀತಿಸಿ ಮುದ್ದಿಸಲಾಶಿಸಿ ಬಾಗುತಿದೆ ಬಾನು
ಹೆಣ್ಣು : ಆಗಸ ಭೂಮಿಯ ಅಂತರ ಅಳೆದ ಜಾಣನು ಎಲ್ಲಿಹನೂ
          ಎರಡು ಸೇರಿದೆ ಎನ್ನುವುದು ಭ್ರಮೆಯು ನಂಬದಿರೂ ಕಣ್ಣೂ
         ನಂಬದಿರೂ ಕಣ್ಣೂ
ಗಂಡು : ಬಾಳಿಗೊಂದು ಬಯಕೆ ಆಸರೆ
           ಬಯಕೆ ತುಂಬಲು ಮನವು ಆಸರೆ
           ಮನದ ಮನವು ನೀನೇ ಆಗಿರೆ
          ನೀನೇ ನನಗೆ ಆಸರೆ ಆಸರೇ
          ಬಾಳಿಗೊಂದು (ಹೂಂ) ಬಯಕೆ ಆಸರೆ (ಹೂಂ)
          ಬಯಕೆ ತುಂಬಲು (ಹೂಂ) ಮನವು ಆಸರೆ (ಹೂಂ)
-------------------------------------------------------------------------------------------------------------------------

ಎರಡು ಮುಖ (೧೯೬೯)
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಜಾನಕೀ

ಏಕೆ ಬಂದೆ ನನ್ನನರಸಿ ಬೆಳದಿಂಗಳ ಚೆಲುವೇ
ಏಕೆ ಬಂದೆ ನನ್ನನರಸಿ ಬೆಳದಿಂಗಳ ಚೆಲುವೇ
ನೊಂದ ಮನವ ಕೆಣಕಿ ನಗುವ ರೀತಿ ನ್ಯಾಯವೇ
ನೊಂದ ಮನವ ಕೆಣಕಿ ನಗುವ ರೀತಿ ನ್ಯಾಯವೇ
ಏಕೆ ಬಂದೆ ನನ್ನನರಸಿ ಬೆಳದಿಂಗಳ ಚೆಲುವೇ

ನನ್ನ ಎದೆಯ ಅರಸನೇಕೋ ಇನ್ನೂ ಬಾರದಿರವನು
ನನ್ನ ಎದೆಯ ಅರಸನೇಕೋ ಇನ್ನೂ ಬಾರದಿರವನು
ಹೃದಯ ವೀಣೆ ನುಡಿಸಿ ನನ್ನ ರಸಿಕ ನಗುತಲಿರುವನು ... ಆಆಆ...
ಕೇಳೇ ಇರದ ರಾಗದಲೆಯ ಮೇಲೆ ಮಲಗಿಸಿರುವನು
ಕೇಳೇ ಇರದ ರಾಗದಲೆಯ ಮೇಲೆ ಮಲಗಿಸಿರುವನು
ನೆನಪಿನಲ್ಲೇ ಮಧುರ ನೋವ ಸವಿಯ ನೀಡುತ್ತಿರುವನು
ಏಕೆ ಬಂದೆ ನನ್ನನರಸಿ ಬೆಳದಿಂಗಳ ಚೆಲುವೇ

ಇನಿಯನಿರದ ಸಮಯ ನೋಡಿ ಇಲ್ಲಿಗೇಕೆ ಬಂದಿಹೇ...
ಇನಿಯನಿರದ ಸಮಯ ನೋಡಿ ಇಲ್ಲಿಗೇಕೆ ಬಂದಿಹೇ
ಹಾಲ ಬೆಳಕ ಸುರಿದು ನನ್ನ ಮೈಯ್ಯನೇಕೆ ಸುಡುತಿಹೆ... ಆಆಆ
ತಂಪು ಗಾಳಿ ಚೆಲ್ಲಿ ಕೆಣಕಿ ಏಕೆ ಸರಸವಾಡುವೇ
ತಂಪು ಗಾಳಿ ಚೆಲ್ಲಿ ಕೆಣಕಿ ಏಕೆ ಸರಸವಾಡುವೇ
ನಿನ್ನ ಹಾಗೆ ಹೆಣ್ಣು ನಾನು ನನ್ನಲ್ಲಿ ಈ ಕೋಪವೇ
ಏಕೆ ಬಂದೆ ನನ್ನನರಸಿ ಬೆಳದಿಂಗಳ ಚೆಲುವೇ
ನೊಂದ ಮನವ ಕೆಣಕಿ ನಗುವ ರೀತಿ ನ್ಯಾಯವೇ
ಏಕೆ ಬಂದೆ ನನ್ನನರಸಿ ಬೆಳದಿಂಗಳ ಚೆಲುವೇ
------------------------------------------------------------------------------------------------------------------------

ಎರಡು ಮುಖ (೧೯೬೯) - ಭಾವನೆಯು ಮನದಾಳದಲ್ಲಿ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಬಿ.ಕೆ.ಸುಮಿತ್ರಾ

ಧೀಮ್ ಧೀಮ್ ತನನ ಉದನ ಧೀಮ್ ತಧೀರನ್
ನಾ ಧೀರರ್ ಧೀಮ್ ಧೀತಿಲಿನ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್
ನಾ ಧೀರರ್ ಧೀಮ್ ಧೀತಿಲಿನ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ 
ನಾ ಧೀರರ್ ಧೀಮ್ ಧೀತಿಲಿನ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ 
ನಾ ಧೀರರ್ ಧೀಮ್ ಧೀತಿಲಿನ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ 
ನಾದರದಾನಿ ತೊಂಬಿರದಾನಿ ತನೋಮ್ ತನ್ ತಧಿರನ್  
ತಕತಟ ಜೋಮ್ ತಧಗಿನತೋಮ್  
ನಾದರದಾನಿ ತೊಂಬಿರದಾನಿ ತನೋಮ್ ತನ್ ತಧಿರನ್  
ತಕತಟ ಜೋಮ್ ತಧಗಿನತೋಮ್  
ಭಾವನೆಯೂ ಮನದಾಳದಲ್ಲಿ ಮೂಡೆ ಅದೇ ತೋಡಿರಾಗದಲೀ 
ಭಾವನೆಯೂ ಮನದಾಳದಲ್ಲಿ ಮೂಡೆ ಅದೇ ತೋಡಿರಾಗದಲೀ 
ಕುಣಿಯುವ ಕುಣಿಸುವ ಚೆಲುವಿನ ಸ್ವರಗಳಲೀ 
ನುಡಿಯುವೇ ನಿನಗೆನ್ನ ಭಾವನೆಯೂ ಮನದಾಳದಲ್ಲಿ ಮೂಡೆ
(ತತ್ತಜಂ ಧಿತತ ಜಂ ತಜ್ಮ್ ತತ್ತಜಂ ತದಗಿತ್ತ ತಟಕಧಿನ ತಕಜಂ
ತದಿತ್ತ ತಕಟಧಿಮ್ ತತ್ತತಕಟಿಜಂ ತತ್ತಜಂ ತತ ತಕಟಿಜಂ
ತತ್ತದಂ ತತ್ತದಂ ತಕಧಿನ ತತ್ತಮ ತತ್ತದಂ ತತ್ತಜಂ ತತ ತಕಟಿಜಂ
ತಟಕಧಿನ ತಕಜಂ )
ಭಾವನೆಯೂ ಮನದಾಳದಲ್ಲಿ ಮೂಡೆ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
(ತತ್ತಜಂ ಧಿತತ ಜಂ ತಜ್ಮ್ ತತ್ತಜಂ ತದಗಿತ್ತ ತಟಕಧಿನ ತಕಜಂ
ತದಿತ್ತ ತಕಟಧಿಮ್ ತತ್ತತಕಟಿಜಂ ತತ್ತಜಂ ತತ ತಕಟಿಜಂ
ತತ್ತದಂ ತತ್ತದಂ ತಕಧಿನ ತತ್ತಮ ತತ್ತದಂ ತತ್ತಜಂ ತತ ತಕಟಿಜಂ
ತಟಕಧಿನ ತಕಜಂ )
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
ಧೀಮ್ ಧೀಮ್ ತನನ ಉದನ ಧೀಮ್ ತಧೀರನ್ ನಾದರದಾನಿ ನಾದಿ
-------------------------------------------------------------------------------------------------------------------------
ಎರಡು ಮುಖ (೧೯೬೯) - ಹಾರುವ ಈಜುವಾ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಸ್.ಜಾನಕೀ

ಹ್ಹಾ.. ಹ್ಹಾ.. ಹಾರುವಾ ಈ..ಈ.. ಈಜುವಾ
ಹ್ಹಾ.. ಹ್ಹಾ.. ಹಾರುವಾ ಈ..ಈ.. ಈಜುವಾ
ಬಾಳ ನೌಕೆ ಏರಿ ನಾವೂ ನಗುತಾ ನಗುತಾ ಸಾಗುವಾ..ಆಆಆ.. 
ಹಕ್ಕಿ ಹಾಗೇ ಹಾರುವಾ ಮೀನಿನಂತೇ ಈಜುವಾ ...  
ಹ್ಹಾ.. ಹ್ಹಾ.. ಹಾರುವಾ ಈ..ಈ.. ಈಜುವಾ

ಕಣ್ಣ ಅಂಚಿನಲಿ ನಗೆಯು ಮಿಂಚುತೀರೇ ನೋಟವೆಲ್ಲಾ ಅಂದವೇ 
ಕುಣಿವ ಮನಸಿನಲಿ ಒಲವ ತುಂಬಿರಲೂ ಎಲ್ಲರೆಲ್ಲೂ ಸ್ನೇಹವೇ 
ಕಣ್ಣ ಅಂಚಿನಲಿ ನಗೆಯು ಮಿಂಚುತೀರೇ ನೋಟವೆಲ್ಲಾ ಅಂದವೇ 
ಕುಣಿವ ಮನಸಿನಲಿ ಒಲವ ತುಂಬಿರಲೂ ಎಲ್ಲರೆಲ್ಲೂ ಸ್ನೇಹವೇ 
ಸ್ನೇಹ ತಂದ ಹರುಷದಿಂದ 
ಸ್ನೇಹ ತಂದ ಹರುಷದಿಂದ ಹಾ...ಯಾಗಿ ಬಾಳೋಣಾ...  
ಹ್ಹಾ.. ಹ್ಹಾ.. ಹಾರುವಾ ಈ..ಈ.. ಈಜುವಾ 

ಹೆಣ್ಣು ಗಂಡು ಜೊತೆ ಗಂಡು ಹೆಣ್ಣ ಜೊತೆ ಬೇಧವಿಲ್ಲದೇ ನಡೆದರೇ 
ಭಯದ ಸೆರೆಯಿಂದ ಬದುಕು ಹೋರಗಾಗಿ ಬಾಳ ತುಂಬಾ ಸಕ್ಕರೇ 
ಹೆಣ್ಣು ಗಂಡು ಜೊತೆ ಗಂಡು ಹೆಣ್ಣ ಜೊತೆ ಬೇಧವಿಲ್ಲದೇ ನಡೆದರೇ 
ಭಯದ ಸೆರೆಯಿಂದ ಬದುಕು ಹೋರಗಾಗಿ ಬಾಳ ತುಂಬಾ ಸಕ್ಕರೇ 
ಸಿಹಿಯು ಕೊಡುವ ಸುಖವು ನಾವೂ 
ಸಿಹಿಯು ಕೊಡುವ ಸುಖವು ನಾವೂ ಒಂದಾಗಿ ಸವಿಯೋಣ 
ಬಾಳ ನೌಕೆ ಏರಿ ನಾವೂ ನಗುತಾ ನಗುತಾ ಸಾಗುವಾ..ಆಆಆ.. 
ಹಕ್ಕಿ ಹಾಗೇ ಹಾರುವಾ ಮೀನಿನಂತೇ ಈಜುವಾ ...  
ಹ್ಹಾ.. ಹ್ಹಾ.. ಹಾರುವಾ ಈ..ಈ.. ಈಜುವಾ 
-------------------------------------------------------------------------------------------------------------------------

ಎರಡು ಮುಖ (೧೯೬೯) - ಈ ಸಣ್ಣನೇ ನಡುವಿನ ಹೆಣ್ಣು 
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ, ಗಾಯನ : ಎಲ್.ಆರ್.ಈಶ್ವರಿ 

ಈ ಸಣ್ಣನೆ ನಡುವಿನ ಹೆಣ್ಣು ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ ಒಹೋ ಕರೆದಿದೆ ಬಾ ಇಲ್ಲೀ
ಈ ಸಣ್ಣನೆ ನಡುವಿನ ಹೆಣ್ಣು

ಅಲ್ಲೇ ನಿಲ್ಲು ಎಲ್ಲಿ ಹೊರಡುವೇ ಅಕ್ಕ ಪಕ್ಕ ಎತ್ತ ತಿರುಗುವೇ
ಮತ್ತೇ ಮತ್ತೇ ಇಂಥಾ ಸಮಯ ದೊರಕದೇ
ಬಿಟ್ಟೇ ಕೆಟ್ಟೆ ಎನಲು ಬರುವುದೇ
ಬಾರೋ ಬೇಗನೇ ಸೇರೋ ನನ್ನನ್ನೇ
ಇದೇ ಲೋಕವೋ ಇದೇ ನಾಕವೋ ನೋಡಿ ಹೇಳು ನೀನೇ
ಈ ಸಣ್ಣನೆ ನಡುವಿನ ಹೆಣ್ಣು ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ ಒಹೋ ಕರೆದಿದೆ ಬಾ ಇಲ್ಲೀ
ಈ ಸಣ್ಣನೆ ನಡುವಿನ ಹೆಣ್ಣು

ಹೊತ್ತು ಗಿತ್ತು ಎಲ್ಲ ಮರೆಸುವೇ ಅತ್ತ ಇತ್ತ ಕುಣಿಸುವೇ
ಅಂತೂ ಇಂತೂ ಮತ್ತೆ ಬರಿಸುವೇ ಚಿಂತೆ ಗಿಂತೇ ಎಲ್ಲ ಬಿಡೀಸುವೆ
ಹಾಡಿ ಆಡುವೆ ಮೋಡಿ ಮಾಡುವೇ
ಹೊಸ ಭಾವನೆ ಹೊಸ ಕಲ್ಪನೇ ಇಗೋ ನೋಡು ನೀನೇ
ಈ ಸಣ್ಣನೆ ನಡುವಿನ ಹೆಣ್ಣು ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ ಒಹೋ ಕರೆದಿದೆ ಬಾ ಇಲ್ಲೀ
ಈ ಸಣ್ಣನೆ ನಡುವಿನ ಹೆಣ್ಣು

ಕಣ್ಣು ಕಣ್ಣು ಕದ್ದು ಕಲೆತಿದೆ ನಿನ್ನ  ನನ್ನ ಹೃದಯ ಅರಿತಿದೆ
ಹೆಣ್ಣು ನಿನ್ನೇ ಕಾದು ಕುಳಿತಿದೆ ಇನ್ನೂ ನಿನ್ನ ಮನಸು ಅರಿಯದೇ
ಹಣ್ಣು ಮಾಗಿದೇ ಬಣ್ಣ ಕೆಂಪಿದೇ
ಇಗೋ ಜಾಣನೇ ತಗೋ ರಸಿಕನೇ ಇದೂ ನಿನ್ನದೇನೇ
ಈ ಸಣ್ಣನೆ ನಡುವಿನ ಹೆಣ್ಣು ಆಹಾ ಕಾದಿದೇ ನೋಡಿಲ್ಲಿ
ತನ್ನ ಕಣ್ಣಲ್ಲೇ ಮಧುವನು ತುಂಬಿ ಒಹೋ ಕರೆದಿದೆ ಬಾ ಇಲ್ಲೀ
ಈ ಸಣ್ಣನೆ ನಡುವಿನ ಹೆಣ್ಣು
-------------------------------------------------------------------------------------------------------------------------

No comments:

Post a Comment