959. ಚದುರಂಗ (೧೯೬೯)

ಚದುರಂಗ ಚಲನಚಿತ್ರದ ಹಾಡುಗಳು 
  1. ಮಮತೆಯ ತೋಟದ ಮಲ್ಲಿಗೆಯೇ
  2. ಬನ್ನಿ ಬನ್ನಿ ಚೆಲುವ ಮಕ್ಕಳೇ 
ಚದುರಂಗ (೧೯೬೯)  - ಮಮತೆಯ ತೋಟದ ಮಲ್ಲಿಗೆಯೇ
ಸಂಗೀತ : ಆರ್.ರತ್ನಂ, ಸಾಹಿತ್ಯ : ಆರ್.ಏನ್.ಜಯಗೋಪಾಲ. ಗಾಯನ : ಎಸ್.ಜಾನಕೀ, ಪಿ.ಸುಶೀಲ

ಮಮತೆಯ ತೋಟದ ಮಲ್ಲಿಗೆಯೇ ಮರುಗುವೆ ಏತಕೆ ನೀ ನುಡಿಯೇ
ಮಮತೆಯ ತೋಟದ ಮಲ್ಲಿಗೆಯೇ ಮರುಗುವೆ ಏತಕೆ ನೀ ನುಡಿಯೇ
ದೇವರ ಹೂವಿದು ಬಾಡಿಹುದು  ಪೂಜೆಗೆ ಹೊಸ ಹೂವು ಬೇಕಿಹುದು
ದೇವರ ಹೂವಿದು ಬಾಡಿಹುದು  ಪೂಜೆಗೆ ಹೊಸ ಹೂವು ಬೇಕಿಹುದು
ಮಮತೆಯ ತೋಟದ ಮಲ್ಲಿಗೆಯೇ 

ವೀಣೆ ಹಳತು ಆದರೇನು ಹೊಮ್ಮುವ ನಾದ ಹಳತೇನು
ಆಆಆ... ತಂತಿ ಕಡಿದ ವೀಣೆಯೊಳಗೆ ಮಂಜುಳ ನಾದ ಬಹುದೇನು
ತಂತಿ ಕಡಿದ ವೀಣೆಯೊಳಗೆ ಮಂಜುಳ ನಾದ ಬಹುದೇನು
ಮಮತೆಯ ತೋಟದ ಮಲ್ಲಿಗೆಯೇ 

ಮಲ್ಲನೆ ಗಾಳಿ ಬೀಸಿದರೇನು ತೇಲುವ  ನೌಕೆ ಮುಳುಗುವುದೇ
ಸಾವಿರ ಹರಕೆ ಹೊತ್ತರೇನು 
ಸಾವಿರ ಹರಕೆ ಹೊತ್ತರೇನು ಮುಳುಗಿದ ನೌಕೆ ತೇಲುವುದೇ
ಮಮತೆಯ ತೋಟದ ಮಲ್ಲಿಗೆಯೇ 

ದೇವನು ಒಲಿದು ನೆಲಸಲು ಬಂದ ಮಂದಿರವಲ್ಲವೇ ನೀ ಮುನ್ನ
ಆ...  ದೇವನ ಗುಡಿಯ ಮಂಗಳ ಬೆಳಕೇ ಆರಲು ಬಿಡೇನು ನಾ ನಿನ್ನ
ದೇವನ ಗುಡಿಯ ಮಂಗಳ ಬೆಳಕೇ ಆರಲು ಬಿಡೇನು ನಾ ನಿನ್ನ
ಮಮತೆಯ ತೋಟದ ಮಲ್ಲಿಗೆಯೇ ಮರುಗುವೆ ಏತಕೆ ನೀ ನುಡಿಯೇ
ದೇವರ ಹೂವಿದು ಬಾಡಿಹುದು  ಪೂಜೆಗೆ ಹೊಸ ಹೂವು ಬೇಕಿಹುದು
ಮಮತೆಯ ತೋಟದ ಮಲ್ಲಿಗೆಯೇ 
--------------------------------------------------------------------------------------------------------------------------

ಚದುರಂಗ (೧೯೬೯) - ಬನ್ನಿ ಬನ್ನಿ ಚೆಲುವ ಮಕ್ಕಳೇ
ಸಂಗೀತ : ಆರ್.ರತ್ನಂ, ಸಾಹಿತ್ಯ : ಆರ್.ಏನ್.ಜಯಗೋಪಾಲ. ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ, ಕೋರಸ್ 

ಗಂಡು : ಬನ್ನಿ ಬನ್ನಿ ಚೆಲುವ ಮಕ್ಕಳೇ ಕನ್ನಡಮ್ಮನ ಮಡಿಲ ಮಕ್ಕಳೇ 
           ಕಣ್ಣು ತೆರೆದು ನೋಡೇ ನಾವು ಸುತ್ತಲೂ ನಮ್ಮ ತಾಯೇ ಚೆಲುವೀ ಕಾಂಬೂ ಎತ್ತಲೂ 
ಎಲ್ಲರು :  ಬನ್ನಿ ಬನ್ನಿ ಚೆಲುವ ಮಕ್ಕಳೇ ಕನ್ನಡಮ್ಮನ ಮಡಿಲ ಮಕ್ಕಳೇ 
             ಕಣ್ಣು ತೆರೆದು ನೋಡೇ ನಾವು ಸುತ್ತಲೂ ನಮ್ಮ ತಾಯೇ ಚೆಲುವೀ ಕಾಂಬೂ ಎತ್ತಲೂ 
             ಬನ್ನಿ ಬನ್ನಿ ಬನ್ನಿ ಬನ್ನಿ 

ಗಂಡು : ತನ್ನ ಕೊಡುವ ಕಾವೇರಿ ನಕ್ಕರೇ .. ನಮ್ಮ ಬಾಳು ಹಾಲುಜೇನು ಸಕ್ಕರೇ .. 
ಎಲ್ಲರು : ತನ್ನ ಕೊಡುವ ಕಾವೇರಿ ನಕ್ಕರೇ .. ನಮ್ಮ ಬಾಳು ಹಾಲುಜೇನು ಸಕ್ಕರೇ .. 
ಗಂಡು : ಅವಳನಿಲ್ಲಿ ಹಿಡಿದು ಇಡಲೂ ಈ ಧರೇ ... 
            ಅವಳನಿಲ್ಲಿ ಹಿಡಿದು ಇಡಲೂ ಈ ಧರೇ  ಆಗುವಳು ಅವಳೇ ನಮಗೆ ಆಸರೇ ... 
ಎಲ್ಲರು  : ಆಗುವಳು ಅವಳೇ ನಮಗೆ ಆಸರೇ ...   ಬನ್ನಿ ಬನ್ನಿ ಬನ್ನಿ ಬನ್ನಿ 

ಗಂಡು : ಸ್ವರ್ಗವನ್ನು ನಿರ್ಮಿಸಿದ ವಿಶ್ವಕರ್ಮ.. ವಿಶ್ವೇಶ್ವರ ಇಲ್ಲಿ ತಂದ ಅದರ ಮರ್ಮ 
            ಸ್ವರ್ಗವನ್ನು ನಿರ್ಮಿಸಿದ ವಿಶ್ವಕರ್ಮ.. ವಿಶ್ವೇಶ್ವರ ಇಲ್ಲಿ ತಂದ ಅದರ ಮರ್ಮ 
ಹೆಣ್ಣು : ಅವರಂತೇ ನಾವು ಕೂಡ ಆಗಬೇಕು 
ಮಕ್ಕಳು : ಅವರಂತೇ ನಾವು ಕೂಡ ಆಗಬೇಕು 
ಹೆಣ್ಣು : ನಮ್ಮ ನಾಡ ಕೀರುತಿಯ ಹಾಡಬೇಕು 
ಮಕ್ಕಳು : ನಮ್ಮ ನಾಡ ಕೀರುತಿಯ ಹಾಡಬೇಕು 
ಎಲ್ಲರು :  ಬನ್ನಿ ಬನ್ನಿ ಚೆಲುವ ಮಕ್ಕಳೇ ಕನ್ನಡಮ್ಮನ ಮಡಿಲ ಮಕ್ಕಳೇ 
             ಕಣ್ಣು ತೆರೆದು ನೋಡೇ ನಾವು ಸುತ್ತಲೂ ನಮ್ಮ ತಾಯೇ ಚೆಲುವೀ ಕಾಂಬೂ ಎತ್ತಲೂ 
             ಬನ್ನಿ ಬನ್ನಿ ಬನ್ನಿ ಬನ್ನಿ ಲಾಲಾಲಾಲಾಲ ಬನ್ನಿ ಬನ್ನಿ 
-------------------------------------------------------------------------------------------------------------------------

No comments:

Post a Comment