960. ಪಾಳೇಗಾರ (೧೯೯೬)

ಪಾಳೇಗಾರ ಚಲನಚಿತ್ರದ ಹಾಡುಗಳು 
  1. ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
  2. ಇದು ನನ್ನರೂ ಎಲ್ಲಾರೂ ನಮ್ಮೋರೂ 
  3. ರೋಮ ರೋಮ 
  4. ಕಾಮಣ್ಣ ಮಕ್ಕಳು 
  5. ಒಂದು ಹುಡುಗಿ 
ಪಾಳೇಗಾರ (೧೯೯೬) - ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಮನು, ಎಸ್.ಜಾನಕೀ  

ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ  ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ  ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಝೇಂಕಾರ ಇಂಪಾಗಿದೆ ಮೈಯೆಲ್ಲಾ ಜುಮ್ಮೆಂದಿದೆ
ಜೇನೆಲ್ಲಾ ಹೆಪ್ಪಾಗಿದೆ ಮನಸೇನೋ ತಪ್ಪೆಂದಿದೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ ನಾಚಿಕೊಂಡರೆ ಹೇಗೆಲೇ ಪ್ರೀತಿಗೆ

ರವಿ ಕಿರಣವು ಸುಳಿದಾಗ ಹೂಮನೆಗಳು ತೆರೆವಂತೆ
ಇನಿಯನ ಈ ಬಿಸಿಯ ಊರೂರಿಗೆ ತೆರೆಯದೆನ್ನ ಹೃದಯ ಮಾಳಿಗೆ
ಓ ಸುಮ ಬಾಲೆ ಆನಂದ ಆನಂದ ಈ ನನ್ನ ದುಂಬಿ ಮಾತೆಂದ
ಈ ಹೂವು ಅರಳೋದು ಈ ಹೊತ್ತು ಮುಳುಗೋ ಕ್ಷಣದಿಂದ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ ನಾಚಿಕೊಂಡರೆ ಹೇಗೆಲೇ ಪ್ರೀತಿಗೆ

ಗೆಳತಿಯ ಬರಬೇಕೆಂದು 
ಗೆಳತಿಯ ಬರಬೇಕೆಂದು ನವಿಲು ಗರೇ ತೆರೆದಾಗ
ಹೆಣ್ಣವಿಲು ಬಾಯಿ ತೆರೆಯುವ ಸುಂದರದ ನೋಟ ಮರೆಸುವ
ಬಾ ಸುಮ ಬಾಲೆ ನಾ ವಲ್ಲೆ ನಾ ವಲ್ಲೆ ಆ ನಾವಿಳಿನಾಟ ನಾ ವಲ್ಲೆ
ಈ ಆಸೆ ಅತಿ ಆಸೆ ತಾನಾಗಬಹುದು ನಾ ವಲ್ಲೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ಝೇಂಕಾರ ಇಂಪಾಗಿದೆ ಮೈಯೆಲ್ಲಾ ಜುಮ್ಮೆಂದಿದೆ
ಜೇನೆಲ್ಲಾ ಹೆಪ್ಪಾಗಿದೆ ಮನಸೇನೋ ತಪ್ಪೆಂದಿದೆ
ಅಂಜು ಮಲ್ಲಿಗೆ ಅರಳಲೇ ಮೆಲ್ಲಗೆ ನಾಚಿಕೊಂಡರೆ ಹೇಗೆಲೇ ಪ್ರೀತಿಗೆ
ರುತ್ತುತ್ತು ರುತ್ತು ತುತು  ರುತ್ತುತ್ತು ರುತ್ತು ತುತು ಮಮ್ಮಮ್ಮ ಮಮ್ಮ ಮಮ
ನನ್ನನ್ನ ನನ್ನ ನನ  ನನ್ನನ್ನ ನನ್ನ ನನ
------------------------------------------------------------------------------------

ಪಾಳೇಗಾರ (೧೯೯೬) - ಇದು ನನ್ನರೂ ಎಲ್ಲಾರೂ ನಮ್ಮೋರೂ 
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಮನು, ಎಸ್.ಜಾನಕೀ  

ಬಾನಿಗೊಬ್ಬ ಸೂರ್ಯ ಭೂಮಿಗೊಬ್ಬ ಚಂದ್ರ ಲೋಕಕ್ಕೊಬ್ಬ ದೇವನೂ 
ಮಾತಿಗೊಬ್ಬ ರಾಮ ಪ್ರೀತಿಗೊಬ್ಬ ಶ್ಯಾಮ ದಾನಕೊಬ್ಬ ಕರ್ಣನೂ 
ನೀತಿಗೊಬ್ಬ ಧೀರ ನಮ್ಮೂರ ಪಾಳೇಗಾರ 
ನ್ಯಾಯಕೊಬ್ಬ ಶೂರ ನಮ್ಮ ಪಾಳೇಗಾರ 
ಇದು ನನ್ನೂರೂ ಎಲ್ಲಾರೂ ನನ್ನೋರು 
ಇದು ನನ್ನೂರೂ ಎಲ್ಲಾರೂ ನನ್ನೋರು 
ಇರೋರು ಇರದೋರು ಎಲ್ಲಾರೂ ನನ್ನ ಬಂಧು ಬಾಂಧವರೂ 
ಇದು ನನ್ನೂರೂ ಎಲ್ಲಾರೂ ನನ್ನೋರು 
ಇದು ನನ್ನೂರೂ ಎಲ್ಲಾರೂ ನನ್ನೋರು 

ನ್ಯಾಯ ಯಾರನೂ ನಿಂದಿಸದೂ ಹುಲಿಯ ವೇಷದ ಗೋವೂ ಅದು 
ಸತ್ಯ ಯಾರನೂ ನೋವಿಸದು ಪಾಪ ತೊಳೆಯುವ ಗಂಗೆ ಅದು 
ನೀತಿಗೊಬ್ಬ ತಮ್ಮಾ ಸೇವೆಗೊಬ್ಬ ತಿಮ್ಮಾ ಕಂತೆಗೊಬ್ಬ ಬ್ರಹ್ಮ.. 
ವೇದಕೊಬ್ಬ ವ್ಯಾಸ ಕಾಡಿಗೊಬ್ಬ ದಾಸ ಕಾಸಿಗೊಬ್ಬ ಶ್ರೀನಿವಾಸ 
ಕೋಟಿಗೊಬ್ಬ ಶೂರ ನಮ್ಮೂರ ಪಾಳೇಗಾರ 
ನ್ಯಾಯಕೊಬ್ಬ ಧೀರ ನಮ್ಮೂರ ಪಾಳೇಗಾರ 
ಇದು ನನ್ನೂರೂ ಎಲ್ಲಾರೂ ನನ್ನೋರು 
ಇದು ನನ್ನೂರೂ ಎಲ್ಲಾರೂ ನನ್ನೋರು 
ನಗೋರು ನೊಂದವರು ಎಲ್ಲಾರೂ ನನ್ನ ಬಂಧು ಬಾಂಧವರೂ 
ಇದು ನನ್ನೂರೂ ಎಲ್ಲಾರೂ ನನ್ನೋರು 
ಇದು ನನ್ನೂರೂ ಎಲ್ಲಾರೂ ನನ್ನೋರು 

ನ್ಯಾಯ ಎಂದರೇ ಸಮಭಾವ ತೂಗೋ ತಕ್ಕಡಿ ನನ್ನ ಜೀವಾ ... 
ಸತ್ಯ ಎಂದರೇ .. ನಿಜರೂಪ ತೋರೋ ಕನ್ನಡಿ ನನ್ನ ರೂಪ 
ತಾಯಿ ಮಾತಿಗೊಬ್ಬ ತಾಯಿ ಬಾಷೆಗೊಬ್ಬ ತಾಯಿ ನಾಡಿಗೊಬ್ಬ 
ಭೀಮ ಸೇನೆಗೊಬ್ಬ ಪ್ರಾಣ ಗಂಗೆಗೊಬ್ಬ ಶಾಂತಿ ಮೂರ್ತಿಗೊಬ್ಬ 
ನೇರ ಮಾತುಗಾರ ನಮ್ಮೂರ ಪಾಳೇಗಾರ 
ನ್ಯಾಯ ಸೂತ್ರಧಾರ ನಮ್ಮೂರ ಪಾಳೇಗಾರ 
ಇದು ನನ್ನೂರೂ ಎಲ್ಲಾರೂ ನನ್ನೋರು 
ಇದು ನನ್ನೂರೂ ಎಲ್ಲಾರೂ ನನ್ನೋರು 
ಇರೋರು ಇರದೋರು ಎಲ್ಲಾರೂ ನನ್ನ ಬಂಧು ಬಾಂಧವರೂ 
ಇದು ನನ್ನೂರೂ ಎಲ್ಲಾರೂ ನನ್ನೋರು 
ಇದು ನನ್ನೂರೂ ಎಲ್ಲಾರೂ ನನ್ನೋರು 
ಬಾನಿಗೊಬ್ಬ ಸೂರ್ಯ ಭೂಮಿಗೊಬ್ಬ ಚಂದ್ರ ಲೋಕಕ್ಕೊಬ್ಬ ದೇವನೂ 
ಮಾತಿಗೊಬ್ಬ ರಾಮ ಪ್ರೀತಿಗೊಬ್ಬ ಶ್ಯಾಮ ದಾನಕೊಬ್ಬ ಕರ್ಣನೂ 
ನೀತಿಗೊಬ್ಬ ಧೀರ ನಮ್ಮೂರ ಪಾಳೇಗಾರ 
ನ್ಯಾಯಕೊಬ್ಬ ಶೂರ ನಮ್ಮ ಪಾಳೇಗಾರ 
------------------------------------------------------------------------------------

ಪಾಳೇಗಾರ (೧೯೯೬) - ರೋಮ ರೋಮ 
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಮನು, ಎಸ್.ಜಾನಕೀ  

------------------------------------------------------------------------------------

ಪಾಳೇಗಾರ (೧೯೯೬) - ಕಾಮಣ್ಣ ಮಕ್ಕಳು 
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಸುಮಾ ಶಾಸ್ತ್ರಿ 

------------------------------------------------------------------------------------

ಪಾಳೇಗಾರ (೧೯೯೬) - ಒಂದು ಹುಡುಗಿ 
ಸಂಗೀತ ಹಾಗು ಸಾಹಿತ್ಯ : ಹಂಸಲೇಖ, ಗಾಯನ : ಮನು, ಎಸ್.ಜಾನಕೀ  

------------------------------------------------------------------------------------

No comments:

Post a Comment