965. ಕರುಣೆಯೇ ಕುಟುಂಬದ ಕಣ್ಣು (೧೯೬೨)

ಕರುಣೆಯೇ ಕುಟುಂಬದ ಕಣ್ಣು ಚಿತ್ರದ ಹಾಡುಗಳು
  1. ಬಾರಮ್ಮ ಗುರುಸೇವೆ ಮಾಡುವ 
  2. ಕರುಣೆಯೇ ಕುಟುಂಬದ ಕಣ್ಣು
  3. ನಿಜವೋ ಸುಳ್ಳೋ ನಿರ್ಧರಿಸಿ 
  4. ನಾಗರಿಕನೆ ನಿನ್ನ 
  5. ಆಶಾಗಾನ  ಮೋಹನ 
  6. ಪ್ರೇಮಗಾನ ತಂದ 
  7. ಝಣ ಝಣ ಕಾಲ್ಗೆಜ್ಜೆ 
ಕರುಣೆಯೇ ಕುಟುಂಬದ ಕಣ್ಣು (೧೯೬೨) - ಬಾರಮ್ಮ ಗುರುಸೇವೆ ಮಾಡುವ ನಿತ್ಯ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಎಸ್.ಜಾನಕಿ

ಹೆಣ್ಣು : ಬಾರಮ್ಮ ಗುರುಸೇವೆ ಮಾಡುವ
          ಬಾರಮ್ಮ ಗುರುಸೇವೆ ಮಾಡುವ ನಿತ್ಯ ಭೂರಿ ಬ್ರಹ್ಮಾನಂದ ಹೊಂದುವ
ಕೋರಸ್ : ಬಾರಮ್ಮ ಗುರುದೇವಿ ಹಾಡುವ ನಿತ್ಯಗೂಡಿ ಬ್ರಹ್ಮಾನಂದ ಹೊಂದುವ
                ಬಾರಮ್ಮ ಗುರುದೇವಿ ಹಾಡುವ

ಹೆಣ್ಣು : ಎಂದಿಗಾದರೂ ಸಾವು ತಪ್ಪದು 
ಕೋರಸ್ : ಹೆಣ್ಣಿಗಾದರೂ  ಸಾವು ತಪ್ಪದು 
ಹೆಣ್ಣು : ಗುರು ಹೊಂದದೆ ನಿಜ ಮುಕ್ತಿ ದಕ್ಕದು
ಕೋರಸ್ : ಗುರು ಹೊಂದದೆ ನಿಜ ಮುಕ್ತಿ ದಕ್ಕದು
ಹೆಣ್ಣು :  ಸುಂದರ ತನುವಿದು ನಿಲ್ಲದು 
ಕೋರಸ್ : ಸುಂದರ ತನುವಿದು ನಿಲ್ಲದು 
ಹೆಣ್ಣು : ಮೋಹ ಬಂದನದಿಂ ಸುಖ ಸಲ್ಲದು
ಕೋರಸ್ : ಬಾರಮ್ಮ ಗುರುಸೇವೆ ಮಾಡುವ ನಿತ್ಯಗೂಡಿ ಬ್ರಹ್ಮಾನಂದ ಹೊಂದುವ
                ಬಾರಮ್ಮ ಗುರುಸೇವೆ ಮಾಡುವ 

ಹೆಣ್ಣು : ಪೂಜ್ಯ ಗುರುರಂಗನ ಸೇರುವ.. 
ಕೋರಸ್ : ಪೂಜ್ಯ ಗುರುರಂಗನ ಸೇರುವ..
ಹೆಣ್ಣು : ಪೂಜ್ಯ ಗುರುರಂಗನ ಸೇರುವ  ಚಿತ್ತ ವೃತ್ತಿಗಳೆಲ್ಲವ ಅಳಿಯುವ
ಕೋರಸ್ : ಚಿತ್ತ ವೃತ್ತಿಗಳೆಲ್ಲವ ಅಳಿಯುವ 
ಹೆಣ್ಣು : ಸಚ್ಚಿದಾನಂದ ಪರವಸ್ತುವ..  
ಕೋರಸ್ : ಸಚ್ಚಿದಾನಂದ ಪರವಸ್ತುವ..  
ಹೆಣ್ಣು :  ಸೇರಿ ಮುಕ್ತಿರಾಕ್ಷೀಸಿ ಮನೆ ಮಾಡುವ
ಕೋರಸ್ : ಬಾರಮ್ಮ ಗುರುಸೇವೆ ಮಾಡುವ 
ಹೆಣ್ಣು : ನಿತ್ಯಗೂಡಿ ಬ್ರಹ್ಮಾನಂದ ಹೊಂದುವ.. ಆಆಆಅ 
ಕೋರಸ್ : ಬಾರಮ್ಮ ಗುರುಸೇವೆ ಮಾಡುವ 
-------------------------------------------------------------------------------------------------------------------------

ಕರುಣೆಯೇ ಕುಟುಂಬದ ಕಣ್ಣು (೧೯೬೨) - ಕರುಣೆಯೇ ಕುಟುಂಬದ ಕಣ್ಣು ದೈವಸಾಕ್ಷಿ
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಎಸ್.ಜಾನಕಿ

ಕರುಣೆಯೇ ಕುಟುಂಬದ ಕಣ್ಣು ದೈವಸಾಕ್ಷಿ 
ಈ ಮಾತು ಸುಳ್ಳೆಂಬ ಮೂರ್ಖರಿಗೆ ನಾನೇ ಪ್ರತ್ಯಕ್ಷ ಸಾಕ್ಷಿ.. ಓಓಓಓಓ 
ಕಣ್ಣೆರಡೂ ಕಾಣೋಲ್ಲ ಕಣ್ಣೀರೇ ಬಾಳೆಲ್ಲಾ 
ಸಂಜೆ ಹಗಲೇ ತಿಳಿಯೋಲ್ಲ ಬಂಜೆ ಒಡಲೇ ಬದುಕೆಲ್ಲ 
ಕಣ್ಣೆರಡೂ ಕಾಣೋಲ್ಲ ಕಣ್ಣೀರೇ ಬಾಳೆಲ್ಲಾ 
ಸಂಜೆ ಹಗಲೇ ತಿಳಿಯೋಲ್ಲ ಬಂಜೆ ಒಡಲೇ ಬದುಕೆಲ್ಲ ಈ ಬದುಕೆಲ್ಲ...  
 
ಮಾತಿನಲೋ ಮಾರ್ಧುರ್ಯ ಮನದೊಳಗೋ ಮಾತ್ಸರ್ಯ
ಮಾತಿನಲೋ ಮಾರ್ಧುರ್ಯ ಮನದೊಳಗೋ ಮಾತ್ಸರ್ಯ
ಮರುಳಾಗೋ ಸೌಂದರ್ಯ 
ಮರುಳಾಗೋ ಸೌಂದರ್ಯ ಮನ್ನಿಸಿದಾ ಔದಾರ್ಯ ಮರೆತೆನೆ ಏನಾಶ್ಚರ್ಯ
ಕಣ್ಣೆರಡೂ ಕಾಣೋಲ್ಲ ಕಣ್ಣೀರೇ ಬಾಳೆಲ್ಲಾ 
ಸಂಜೆ ಹಗಲೇ ತಿಳಿಯೋಲ್ಲ ಬಂಜೆ ಒಡಲೇ ಬದುಕೆಲ್ಲ ಈ ಬದುಕೆಲ್ಲ...  

ಕರುಳಿರಿದ ಆ ಕೌರ್ಯ ಕೊರಳುಲಿದಾ ಆ ಸ್ಥೈರ್ಯ 
ಕರುಳಿರಿದ ಆ ಕೌರ್ಯ ಕೊರಳುಲಿದಾ ಆ ಸ್ಥೈರ್ಯ 
ನೆನೆದೊಡನೇ ಅಪಕಾರ್ಯ 
ನೆನೆದೊಡನೇ ಅಪಕಾರ್ಯ ಪತಿತನು ನಾ ಮರೆಯೋಲ್ಲ ಮರೆಯಲಿದು ಕನಸಲ್ಲ 
ಕಣ್ಣೆರಡೂ ಕಾಣೋಲ್ಲ ಕಣ್ಣೀರೇ ಬಾಳೆಲ್ಲಾ 
ಸಂಜೆ ಹಗಲೇ ತಿಳಿಯೋಲ್ಲ ಬಂಜೆ ಒಡಲೇ ಬದುಕೆಲ್ಲ ಈ ಬದುಕೆಲ್ಲ...  
-------------------------------------------------------------------------------------------------------------------------

ಕರುಣೆಯೇ ಕುಟುಂಬದ ಕಣ್ಣು (೧೯೬೨) - ನಿಜವೋ ಸುಳ್ಳೋ ನಿರ್ಧರಿಸಿ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ :ಪಿ.ಬಿ.ಶ್ರೀ, ಎಸ್.ಜಾನಕಿ

ಗಂಡು : ಆಆಆ.. ಆಆಆ..ಆಆಆ.. ಆಆಆ..
            ನಿಜವೋ ಸುಳ್ಳೋ ನಿರ್ಧರಿಸಿ
            ನಿಜವೋ ಸುಳ್ಳೋ ನಿರ್ಧರಿಸಿ ಇದು ಒಲವೋ ಒಗಟೋ ಉತ್ತರಿಸಿ
            ಜಗ ಜಾಣರ ಜೈಸೋ ಹೂಬಾಣ ಅದು ಛೂಬಾಣ ಈ ಹೆಣ್ಣಾಟ ಕಣ್ಣೋಟ ಜೋಪಾನ 
            ಮುಖವು ಚೆಲುವಿನ ಬೀಡು ಮನವು ಮಿಂಚಿನ ಗೂಡು 
            ಅದ ಮೆಚ್ಚಿ ನೆಚ್ಚಿದಾ ಗಂಡಿನಾ ಪಾಡು ಕಡೆಗಾಗುವುದೇ ಎಲುಬಿನ ಗೂಡು.. ಎಲುಬಿನ ಗೂಡು.. 
            ಆಆಆಅ ಆಆಆಅ ಆಆಆಅ ಹೋಯ್ 
ಹೆಣ್ಣು : ಆಆಆ.. ಆಆಆ.. ಆಆಆಅ
          ಮಾತು ಜೇನಿನ ಜಾಡಿ ಮನವೆಲ್ಲ ಬಲು ಮೋಡಿ
          ಈ ಗಂಡುಗಳ ನಂಬಿ ನೋಡಿ ಹೆಣ್ಣಿನ ಬಾಳೇ ಕಣ್ಣೀರ ಕೊಡಿ .. ಆಆಆಅ ಆಆಆ 
           ನಿಜವೋ ಸುಳ್ಳೋ ನಿರ್ಧರಿಸಿ
           ನಿಜವೋ ಸುಳ್ಳೋ ನಿರ್ಧರಿಸಿ ಇದು ಒಲವೋ ಒಗಟೋ ಉತ್ತರಿಸಿ
           ಒಣ ಜಂಭದ ಜಾಲಾ ಮಾರ್ಜಾಲ ಇದು ಕಲಿಗಾಲ
           ಈ ಗಂಡಾಟ ಮೊಂಡಾಟ ಜೋಪಾನ
           ನಿಜವೋ ಸುಳ್ಳೋ ನಿರ್ಧರಿಸಿ ಇದು ಒಲವೋ ಒಗಟೋ ಉತ್ತರಿಸಿ
          
ಗಂಡು : ಆಆಆಆ... ಓಓಓಓಓಯ್ ಕಾಣದಿದ್ದರೆ ವಿರಹ ಹೋಯ್ ಹೋಯ್ ಓಯ್ 
            ಕಂಡೊಡನೆ ಕಲಹ ಹೂಹ್ಹೂಹ್ಹೂಹ್ಹೂ ತಾವರೆ ಹೂವಿನ ತರಹ ಏನಿದೀ ಹೆಣ್ಣಿನ ಹಣೆ ಬರಹ ಹೂಂಹೂಂ  
ಹೆಣ್ಣು : ಆಆಆಆ.. ಕಾಣದಿದ್ದರೆ ವೇದಾಂತ ಕಂಡೊಡನೆ ಹ್ಹಿಹೀಹ್ಹಿಂತ ತೋರುವುರು ಹದಿನಾರು ದಂತ 
           ಇದೇನೇ ವೀರ ಪುರುಷರ ಪಂಥ .. ಆಆಆ 
           ನಿಜವೋ ಸುಳ್ಳೋ ನಿರ್ಧರಿಸಿ ಇದು ಒಲವೋ ಒಗಟೋ ಉತ್ತರಿಸಿ
           ಒಣ ಜಂಭದ ಜಾಲಾ ಮಾರ್ಜಾಲ ಇದು ಕಲಿಗಾಲ
           ಈ ಗಂಡಾಟ ಮೊಂಡಾಟ ಜೋಪಾನ
ಗಂಡು : ನಿಜವೋ ಸುಳ್ಳೋ ನಿರ್ಧರಿಸಿ ಇದು ಒಲವೋ ಒಗಟೋ ಉತ್ತರಿಸಿ
            ಜಗ ಜಾಣರ ಜೈಸೋ ಹೂಬಾಣ ಅದು ಛೂಬಾಣ ಈ ಹೆಣ್ಣಾಟ ಕಣ್ಣೋಟ ಜೋಪಾನ  
ಹೆಣ್ಣು : ನಿಜವೋ      ಗಂಡು : ನಿಜವೋ      ಹೆಣ್ಣು : ನಿಜವೋ 
ಇಬ್ಬರು : ನಿಜವೋ ಸುಳ್ಳೋ ನಿರ್ಧರಿಸಿ ಇದು ಒಲವೋ ಒಗಟೋ ಉತ್ತರಿಸಿ
-------------------------------------------------------------------------------------------------------------------------

ಕರುಣೆಯೇ ಕುಟುಂಬದ ಕಣ್ಣು (೧೯೬೨) - ನಾಗರಿಕನೇ ನಿನ್ನ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ :ಎಸ್.ಜಾನಕಿ
-------------------------------------------------------------------------------------------------------------------------

ಕರುಣೆಯೇ ಕುಟುಂಬದ ಕಣ್ಣು (೧೯೬೨) - ಆಶಾಗಾನ  ಮೋಹನ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ :ಎಸ್.ಜಾನಕಿ

-------------------------------------------------------------------------------------------------------------------------

ಕರುಣೆಯೇ ಕುಟುಂಬದ ಕಣ್ಣು (೧೯೬೨) - ಪ್ರೇಮಗಾನ ತಂದ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ : ಎಸ್.ಜಾನಕಿ

-------------------------------------------------------------------------------------------------------------------------

ಕರುಣೆಯೇ ಕುಟುಂಬದ ಕಣ್ಣು (೧೯೬೨) - ಝಣ ಝಣ ಕಾಲ್ಗೆಜ್ಜೆ 
ಸಂಗೀತ : ಜಿ.ಕೆ.ವೆಂಕಟೇಶ, ಸಾಹಿತ್ಯ : ಕಣಗಾಲ ಪ್ರಭಾಕರ ಶಾಸ್ತ್ರಿ, ಗಾಯನ :ಎಸ್.ಜಾನಕಿ

-------------------------------------------------------------------------------------------------------------------------

No comments:

Post a Comment