970. ಮುತ್ತೈದೆ ಭಾಗ್ಯ (೧೯೫೬)

    ಮುತ್ತೈದೆ ಭಾಗ್ಯ ಚಿತ್ರದ ಹಾಡುಗಳು
    ಪಿ.ಲೀಲಾ, ಗಾನ ಸರಸ್ವತಿ, ರಾಣಿ, ನಾಗೇಂದ್ರ

  1. ನಮ್ಮೂರೇ ಚೆಂದ ನಮ್ಮವರೇ ಅಂದ 
  2. ಹಿಮಗಿರಿ ಜಾತೇ ಜಗನ್ಮಾತೆ 
  3. ಮೊರೆಯ ಕೇಳಿ ಕಾಯೇ 
  4. ಒಲವಿನ ಚೆಲುವ ಓಡಿ ಬಾ 
  5. ನಾನೊಂದು ಮದುವೆಯ ಮಾಡಿಕೊಂಡೇ 
  6. ತಿಳಿ ಮಗಳೇ ನಿಜವಾ 
 ಮುತೈದೆ ಭಾಗ್ಯ (೧೯೫೬)
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಗೌತಮ, ಗಾಯನ : ನಾಗೇಂದ್ರ

ದೇಶ ದೇಶವ ತಿರುಗಿ ಪರದೇಶಿಯಾಗಿ ಪರಿತಪಿಸಿದೆನೋ ಪುರಂದರ ವಿಠ್ಠಲ
ಆಸೆ ಸಾವಿರ ಕಲಿತು ಪೂಸಿ ಹೊಡೆದರೂ ಕಾಸು ಕಾಣದೇ ಹೋದೆ ಕೂಡಲ ಸಂಗಮ ದೇವಾ
ಲೇಸಾದ ನಡೆನುಡಿಯ ಜನರ ಕಾಣದೇ ಬಲು ದೇಸಿ ಹಿಂದಿರುಗಿದೆನು ಹರಹರ ಶ್ರೀ ಚನ್ನ ಸೋಮೇಶ್ವರ
ಬೇಶವಾದ ಊರೇ ನಮ್ಮೂರು ಇದಕ್ಕಿಲ್ಲ ಸಾಟಿ ಕಾಣೇ ನೀ ನೊಲಿದು ಕಾಪಾಡು ಓ ಶ್ರೀ ಗುಮಟೇಶ್ವರ

ನಮ್ಮೂರೇ ಚೆಂದ... ನಮ್ಮವರೇ ಅಂದ ಕನ್ನಡ ಬಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ  ಕನ್ನಡ ನಾಡಿನ ಇತಿಹಾಸ ಚೆಂದ
ಕನ್ನಡ ನಾಡಿನ ಇತಿಹಾಸ ಚೆಂದ
ನಮ್ಮೂರೇ ಚೆಂದ... ನಮ್ಮವರೇ ಅಂದ ಕನ್ನಡ ಬಾಷೆ ಕರ್ಣಾನಂದ

ಮೈಸೂರು, ರಾಯಚೂರು.. ಬೆಂಗಳೂರು, ಮಂಗಳೂರು
ಧಾರವಾರ  ಕಾರವಾರ ಬಳ್ಳಾರಿ ಬೇಲೂರು
ಮೈಸೂರು, ರಾಯಚೂರು.. ಬೆಂಗಳೂರು, ಮಂಗಳೂರು
ಧಾರವಾರ  ಕಾರವಾರ ಬಳ್ಳಾರಿ ಬೇಲೂರು ಬಿಜಾಪುರ ಕಲಬುರಗಿ ಸಿದ್ದಾಪುರವೂ
ಬಿಜ್ಜಳ... ಹೊಯ್ಸಳ.. ಒಡೆಯರ ರಾಜ್ಯವು
ಎಲ್ಲಾ ಕನ್ನಡ ತಾಯಿಯ ಕುಲವು ಎಲ್ಲೆಲ್ಲೂ ಹಾರಲಿ ಕೀರ್ತಿಯ ಧ್ವಜವು 
ಎಲ್ಲಾ ಕನ್ನಡ ತಾಯಿಯ ಕುಲವು ಎಲ್ಲೆಲ್ಲೂ ಹಾರಲಿ ಕೀರ್ತಿಯ ಧ್ವಜವು 
ನಮ್ಮೂರೇ ಚೆಂದ... ನಮ್ಮವರೇ ಅಂದ ಕನ್ನಡ ಬಾಷೆ ಕರ್ಣಾನಂದ

ಶಂಕರ ಮಧವ ರಾಮಾನುಜರು
ಶಂಕರ ಮಧವ ರಾಮಾನುಜರು ಬಸವಣ್ಣ ಮತ್ತೇ ತೀರ್ಥಂಕರರು 
ಜಕಣಾಚಾರಿ.. ದುರ್ಗದ ಓಬವ್ವ ಸಂಚಿಕೆ  ಹೊನ್ನಮ್ಮ ಕಿತ್ತೂರ ಚೆನ್ನಮ್ಮ 
ಪಂಪ ರನ್ನ ಮೊದಲಾದವರೆಲ್ಲ ಮರೆದಂಥ ನಾಡಿದು ಸಾಮಾನ್ಯವಲ್ಲ 
ಪಂಪ ರನ್ನ ಮೊದಲಾದವರೆಲ್ಲ ಮರೆದಂಥ ನಾಡಿದು ಸಾಮಾನ್ಯವಲ್ಲ 
ನಮ್ಮೂರೇ ಚೆಂದ... ನಮ್ಮವರೇ ಅಂದ ಕನ್ನಡ ಬಾಷೆ ಕರ್ಣಾನಂದ

ಕನ್ನಡ ಸಾಹಿತ್ಯ ಸಂಗೀತ ಚೆಂದ ಕನ್ನಡ ಹೆಣ್ಣಿನ ನಡೆ ನುಡಿ ಚೆಂದ 
ಕನ್ನಡ ಸಾಹಿತ್ಯ ಸಂಗೀತ ಚೆಂದ ಕನ್ನಡ ಹೆಣ್ಣಿನ ನಡೆ ನುಡಿ ಚೆಂದ 
ಕನ್ನಡ ಎಂಬುವ ಮಾತೇ ಚೆಂದ ಕನ್ನಡಿಗರ ಕಲೆಯೇ ಪರಮಾನಂದ 
ಚೆಂದ ಚೆಂದ.. ಎಲ್ಲವು ಚೆಂದ ನೀ ಕೇಳೋ ಮುದ್ದಿನ.. ಕನ್ನಡ ಕಂದ 
ಚೆಂದ ಚೆಂದ.. ಎಲ್ಲವು ಚೆಂದ ನೀ ಕೇಳೋ ಮುದ್ದಿನ.. ಕನ್ನಡ ಕಂದ 
ನಮ್ಮೂರೇ ಚೆಂದ... ನಮ್ಮವರೇ ಅಂದ ಕನ್ನಡ ಬಾಷೆ ಕರ್ಣಾನಂದ
ಉನ್ನತ ಕೀರ್ತಿಗೆ ತೌರೂರಾದ  ಕನ್ನಡ ನಾಡಿನ ಇತಿಹಾಸ ಚೆಂದ
ಕನ್ನಡ ನಾಡಿನ ಇತಿಹಾಸ ಚೆಂದ
ನಮ್ಮೂರೇ ಚೆಂದ... ನಮ್ಮವರೇ ಅಂದ ಕನ್ನಡ ಬಾಷೆ ಕರ್ಣಾನಂದ
-------------------------------------------------------------------------------------------------------------------------

ಮುತೈದೆ ಭಾಗ್ಯ (೧೯೫೬)
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಗೌತಮ, ಗಾಯನ :ಪಿ.ಲೀಲಾ 

ಹೆಣ್ಣು : ದೇವಿ ಅಂಬಾ ಆಆಆ...
          ಹಿಮಗಿರಿ ಜಾತೇ ಹೇ ಜಗನ್ಮಾತೆ ಪಾಲಿಹ ಲಲಿತೇ ಪಾವನ ಚರಿತೇ
         ಹಿಮಗಿರಿ ಜಾತೇ ಹೇ ಜಗನ್ಮಾತೆ ಪಾಲಿಹ ಲಲಿತೇ ಪಾವನ ಚರಿತೇ
ಕೋರಸ್ :ಹಿಮಗಿರಿ ಜಾತೇ ಹೇ ಜಗನ್ಮಾತೆ ಪಾಲಿಹ ಲಲಿತೇ ಪಾವನ ಚರಿತೇ  

ಹೆಣ್ಣು : ಶಂಕರಿ ನೀನು ಸುಮಂಗಲಿಯರಿಗೆ ಕುಂಕುಮವೆನಿಸಿ ಹಣೆಯಲಿ ನೆಲೆಸಿ 
         ಶಂಕರಿ ನೀನು ಸುಮಂಗಲಿಯರಿಗೆ ಕುಂಕುಮವೆನಿಸಿ ಹಣೆಯಲಿ ನೆಲೆಸಿ 
         ಮುತೈದೆಯರ ಭಾಗ್ಯವ ಮರೆಸಿ ಆಆಆ... 
         ಮುತೈದೆಯರ ಭಾಗ್ಯವ ಮರೆಸಿ 
ಎಲ್ಲರು : ಉತ್ತಮ ಪದವಿಯ ನೀಡುವ ಧಾತೇ ... 
           ಹಿಮಗಿರಿ ಜಾತೇ ಹೇ ಜಗನ್ಮಾತೆ

ಹೆಣ್ಣು : ಕಣ್ಣಿನ ಕಾಂತಿಯ ಕಾಡಿಗೆಯೇ ನೀನೇ ಕೈಗಳ ಕಂಕಣ ಕಡಗವು ನೀನೇ
          ಕೊರಳಿನ ಕರಿಮಣಿ ಮಾಂಗಲ್ಯ ನೀನೇ
         ಶಿರದಳೋ ಮೆರೆಯುವ... ಮಲ್ಲಿಗೆ ನೀನೇ
ಎಲ್ಲರು : ದೀನರ ಕಾವಲಮಯಿ ನೀನೇ ನಾರಿಯರ ಹೃದಯದಿ ನಿವಾಸಿನಿ ನೀನೇ
ಹೆಣ್ಣು : ಮಂಗಳಾಂಗಿಯೇ ನಿನ್ನಯ ಪ್ರೀತಿ...            
          ಮಂಗಳಾಂಗಿಯೇ ನಿನ್ನಯ ಪ್ರೀತಿ ಅಂಗನೆಯರ ಭಾಗ್ಯದ ಜ್ಯೋತಿ .            
          ಅಂಗನೆಯರ ಭಾಗ್ಯದ ಜ್ಯೋತಿ ಹೇ ಜಗನ್ಮಾತೆ.. ಹೇ ಜಗನ್ಮಾತೆ .                 .            
          ಹೇ ಜಗನ್ಮಾತೆ.. ಹೇ ಜಗನ್ಮಾತೆ .
          ಹಿಮಗಿರಿ ಜಾತೇ ಹೇ ಜಗನ್ಮಾತೆ ಪಾಲಿಹ ಲಲಿತೇ ಪಾವನ ಚರಿತೇ
          ಪಾಲಿಹ ಲಲಿತೇ ಪಾವನ ಚರಿತೇ  ಹಿಮಗಿರಿ ಜಾತೇ ಹೇ ಜಗನ್ಮಾತೆ              .            
--------------------------------------------------------------------------------------------------------------------------

ಮುತೈದೆ ಭಾಗ್ಯ (೧೯೫೬)
ಸಂಗೀತ : ರಾಜನ್ ನಾಗೇಂದ್ರ ಸಾಹಿತ್ಯ : ಗೌತಮ, ಗಾಯನ :ನಾಗೇಂದ್ರ 

ನಾನೊಂದ ಮದುವೆಯ ಮಾಡಿಕೊಂಡೆ
ಮನದಾನಂದವನು ನಾ ಕಳೆದುಕೊಂಡೇ
ನಾನೊಂದ ಮದುವೆಯ ಮಾಡಿಕೊಂಡೆ
ಮನದಾನಂದವನು ನಾ ಕಳೆದುಕೊಂಡೇ
ಥಕಥೈ ಥಕಥೈ ಥಕಥೈ ಥಕಥೈ ಓಯ್ ಥಕಥೈ ಥಕಥೈ ಥಕಥೈ 
ಸರಿಗಮಪದನಿಸ ಸರಿಸ ನಿಸಸ ನಿದನಿಪ
ಪದನಿಸ ಸರಿಸ ನಿಸಸ ನಿದನಿಪ
ಚಂಡಿಯಾದ  ಹುಡಿಗಿಯ ಕಟ್ಟಿಕೊಂಡೇ ಹೇ.... 
ಚಂಡಿಯಾದ  ಹುಡಿಗಿಯ ಕಟ್ಟಿಕೊಂಡೇ  
ಇವಳ ಗಂಡನೆಂಬ ಹೆಸರಿಂದ ಕೆಟ್ಟು ಹೋದೇ 
ಚಂಡಿಯಾದ  ಹುಡಿಗಿಯ ಕಟ್ಟಿಕೊಂಡೇ  
ಇವಳ ಗಂಡನೆಂಬ ಹೆಸರಿಂದ ಕೆಟ್ಟು ಹೋದೇ ನಾ ಕೆಟ್ಟು ಹೋದೇ 
ಥಕಥೈ ಥಕಥೈ ಥಕಥೈ ಥಕಥೈ ಓಯ್ ಥಕಥೈ ಥಕಥೈ ಥಕಥೈ 

ಹೆಣ್ಣು : ಬಾಯಿ ಮುಚ್ಚರಿ ಕೋಡಂಗಿ ಹಂಗೆ ಆಡಬೇಡಿ 
ಗಂಡು : ಕಣ್ಣು ಮೂಗು ಮೂತಿಯೆಲ್ಲಾ ನಾರಿಯಂತೇ 
            ನಡೆ ನುಡಿ ಆಟವೆಲ್ಲಾ ಮಾರಿಯಂತೇ  
            ಕಣ್ಣು ಮೂಗು ಇವಳ ಕಣ್ಣು ಮೂಗು 
            ಆಹಾ ಕಣ್ಣು  ಮೂಗು ಮೂತಿಯೆಲ್ಲಾ ನಾರಿಯಂತೇ 
            ನಡೆ ನುಡಿ ಆಟವೆಲ್ಲಾ ಮಾರಿಯಂತೇ.. ಹೆಮ್ಮಾರಿಯಂತೇ 
            ದಿಮ್ಮರ ತಡ್ಕ ತಡ್ಕ ಧೀಮ್ಮ್ ದಿಮ್ಮರ ತಡ್ಕ ತಡ್ಕ 
            ದಿಮ್ಮರ ತಡ್ಕ ತಡ್ಕ ಧೀಮ್ಮ್ ದಿಮ್ಮರ ತಡ್ಕ ತಡ್ಕ ತಿಮ್ಮ.. ತಿಮ್ಮ ತೂರ್ರ್.. 

ಹೆಣ್ಣು : ನಿಲ್ಲಿಸಿರಿ.. ಕಿವಿ ಚಿಟ್ಟ ಹಿಡಿತಾಯಿದೇ 
ಗಂಡು : ಗಂಡನೆಂಬೋ  ಭಯವು ಇಲ್ಲವಂತೇ 
           ಮಂಡ ಹುಡುಗಿ ತಿಂದು ತಿರುಗೋ ಹೆಗ್ಗಣವಂತೇ 
           ಗಂಡನೆಂಬೋ ನಾ ಗಂಡನೆಂಬೋ ಭಯವು ಇಲ್ಲವಂತೇ 
          ಮಂಡ ಹುಡುಗಿ ತಿಂದು ತಿರುಗೋ ಹೆಗ್ಗಣವಂತೇ ಕಾಡ್ ಹೆಗ್ಗಣವಂತೇ 
          ಥಕಥೈ ಥಕಥೈ ಥಕಥೈ ಥಕಥೈ ಓಯ್ ಥಕಥೈ ಥಕಥೈ ಥಕಥೈ    
         ಲಾಲಲಲಲಿರ ಲಲಾಲ ಓಯ್ ಲಾಲಲಲಲಿರ ಲಲಾಲ 

ಹೆಣ್ಣು : ಸಾಕ್ ಸುಮ್ಮನಿರೀ..  ಕೇಳಾಕ್ ಆಗ್ತಾ ಇಲ್ಲ ಈ ಸುಡುಗಾಡ್ ರಾಗ್ 
ಗಂಡು : ಇವತ್ತು ಹಾಡ್ ಬೇಕಂತ ಸ್ಫೂರ್ತಿ ಬಂದಿದೆ 
           ಗಗನದಿಂದ ಹರಿದು ಬರುವ ಗಂಗೆ ಹಾಗೇ ಹೃದಯದಿಂದ ಉಕ್ಕಿ 
          ನಾಲಿಗೆಯಲ್ಲಿ ಹರಿತಿದೆ ತಡೆಯೋಕ್ಕೆ ಯಾರಿಂದ ಸಾಧ್ಯವಿಲ್ಲಾ 
          ಎಲೇ ಹೆಣ್ಣೆ ರೂಪಿನಿಂದಲೇ ಎಲೇ ಹೆಣ್ಣೇ ರೂಪಿನಿಂದಲೇ 
         ಹೆಣ್ಣಿಗೆ ಜಾತಿಗೆ  ಸೇರಿದೆನೆಂದು ಗರ್ವಿಸಬೇಡಾ... ಬೇಡ... ಬೇಡ..    
         ಬಲು ಮಯ್ಯಯು ನಿನ್ನಲ್ಲಿಯಹುದು ಗಂಡನ ಗೋಳು 
        ಹೊಯ್ಕಳುವುದುರೊಳಗಾಯಿತು ನಿನ್ನಯ ಶೌರ್ಯ .... ಆಆಆ... 
        ಹಕ್ಕಿ ಬಂದಿತ್ತು ಅಂಗಳದಲ್ಲಿ ಏ.. ರಾಮಾ..     
        ಹಕ್ಕಿ ಬಂದಿತ್ತು ಅಂಗಳದಲ್ಲಿ ಹಾರಿ ಹೋಯಿತು ಈ ಕ್ಷಣದಲ್ಲಿ 
        ಹಕ್ಕಿ ಬಂದಿತ್ತು ಅಂಗಳದಲ್ಲಿ ಹೀಗೆ ಬರೆದಿತ್ತು ಹಣೆಯಲ್ಲಿ ಬರಹ ಅಯ್ಯೋ 
        ಹೆಂಡತಿ ಜೊತೆಯಲ್ಲಿಗೂಡಬೇಕು ಕಲಹ.. ಗುಂಡೂರಾಯಾ.. ಗುಂಡೂರಾಯಾ..   
----------------------------------------------------------------------------------------------------------------------    
          
 


No comments:

Post a Comment