ಕುಂಕುಮ ಭಾಗ್ಯ ಚಲನಚಿತ್ರದ ಹಾಡುಗಳು
- ನನ್ನೆಯ ಮನಸೇಂಬ
- ಹೇಳೋರಿಲ್ಲ ಕೇಳೋರಿಲ್ಲಾ
- ತಾಳಿ ಕಟ್ಟೋಕ್ ಕೂಲಿ ನಾ
- ಸಂಸಾರದಲ್ಲಿ ಸಾರ
- ತಂಗಾಳಿಗೆ ತೂಗಾಡುವಾ
- ಈ ಲವ್ವಿಗೇ ಲೈಸನ್ಸಿದೇ
ಕುಂಕುಮ ಭಾಗ್ಯ (೧೯೯೩) - ನನ್ನೆಯ ಮನಸೇಂಬ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಚಿತ್ರಾ
ಹೆಣ್ಣು : ನನ್ನಯ ಮನಸೇಂಬ ಬಿಳಿ ಕಾಗದದಲ್ಲಿ.. ನಿನ್ನಯ ಕಣ್ಣೆಂಬ ಶುಭ ಲೇಖನಿಯಲ್ಲಿ
ಮೂಡಿಸಿದೇ... ಮೂಡಿಸಿದೇ .. ಒಲವಿನ ಹೆಸರೂ .. ಜೀವನದಿ ಈ ಹೆಸರು ಎಂದಿಗೂ ಹಸಿರೂ ...
ಗಂಡು : ನನ್ನಯ ಮನಸೇಂಬ ಬಿಳಿ ಕಾಗದದಲ್ಲಿ.. ನಿನ್ನಯ ಕಣ್ಣೆಂಬ ಶುಭ ಲೇಖನಿಯಲ್ಲಿ
ಮೂಡಿಸಿದೇ... ಮೂಡಿಸಿದೇ .. ಒಲವಿನ ಹೆಸರೂ .. ಜೀವನದಿ ಈ ಹೆಸರು ಎಂದಿಗೂ ಹಸಿರೂ ...
ಹೆಣ್ಣು : ಹೆಸರು ಬರೆದ ಮೇಲೆ ಮನಸೂ ಓಲೆಯ ಗರಿಯಾಯಿತು
ತಂದು ಲೇಖನಿ ಕಾವ್ಯ ರಚಿಸಿತು.. ಮಧುರಿನ ಮಸಿಯಲೀ...
ಗಂಡು : ಪ್ರೇಮ ಚಿಹ್ನೆ ಮುತ್ತು ಎಂದೂ ಮುನ್ನುಡಿಯಲೀ ತಿಳಿಸಿತು..
ನಿತ್ಯ ಸಂಗಮ.. ಇರಲೀ ಎಂದಿತು... ಪ್ರೇಮದ ಕಥೆಯಲೀ...
ಹೆಣ್ಣು : ಒಲವಿನ ನೆನಪು ಸುಖ... ಮರೆಯುವ ಮಾತು ಇನ್ನಿಲ್ಲ..
ಇಬ್ಬರು : ನಗುತ್ತಿದ್ದ ಈ ಜೊತೆಯಲ್ಲಿ ಅಳುತ್ತಿದ್ದರು ಜೊತೆಯಲ್ಲಿ ಈ ಪ್ರೇಮದ ನೆರಳೂ ..
ಗಂಡು : ನನ್ನಯ ಮನಸೇಂಬ ಬಿಳಿ ಕಾಗದದಲ್ಲಿ..
ಹೆಣ್ಣು : ನಿನ್ನಯ ಕಣ್ಣೆಂಬ ಶುಭ ಲೇಖನಿಯಲ್ಲಿ
ಗಂಡು : ಮೂಡಿಸಿದೇ... ಮೂಡಿಸಿದೇ .. ಒಲವಿನ ಹೆಸರೂ ..
ಹೆಣ್ಣು : ಜೀವನದಿ ಈ ಹೆಸರು ಎಂದಿಗೂ ಹಸಿರೂ ...
ಹೆಣ್ಣು : ಲಾಲಲಲ ಲಲಲಲಾ ಲಾಲಲಲ ಲಲಲಲಾ ಲಾಲಲಲ ಲಲಲಲಾ ಲಾಲಲಲ ಲಲಲಲಾ
ಗಂಡು : ಮೇರುಗಿರಿಯ ಮೇಲೆ ನಿಂತು ಗಗನದ ಮೈಸೋಕಲು...
ಸಾಧ್ಯವಾಗದು ಸಾಧ್ಯವಾಯಿತು.. ಒಲವಿನ ಬಲದಲಿ...
ಹೆಣ್ಣು : ಆರು ಋತುವು ಒಂದುಗೂಡೋ ಪ್ರಣಯದೇ ದಿನದೊಡಲೂ
ಸಾಧ್ಯವಾಗದು ಸಾಧ್ಯವಾಯಿತು.. ಒಲವಿನ ವರದಲಿ...
ಗಂಡು : ಒಲವಿಗೇ ನೂರೂ ಮುಖ... ನೋಡಲು ನೂರು ಕಣ್ಣಿಲ್ಲಾ ...
ಇಬ್ಬರು : ನಮ್ಮಿಬ್ಬರ ಕಣ್ಣಲ್ಲಿ, ಪ್ರತಿಬಿಂಬಿಸೋ ಮೊಗದಲ್ಲಿ, ಶತಪ್ರೇಮದ ರೂಪ..
ಹೆಣ್ಣು : ನನ್ನಯ ಮನಸೇಂಬ ಬಿಳಿ ಕಾಗದದಲ್ಲಿ.. ನಿನ್ನಯ ಕಣ್ಣೆಂಬ ಶುಭ ಲೇಖನಿಯಲ್ಲಿ
ಮೂಡಿಸಿದೇ... ಮೂಡಿಸಿದೇ .. ಒಲವಿನ ಹೆಸರೂ .. ಜೀವನದಿ ಈ ಹೆಸರು ಎಂದಿಗೂ ಹಸಿರೂ ...
ಗಂಡು : ನನ್ನಯ ಮನಸೇಂಬ ಬಿಳಿ ಕಾಗದದಲ್ಲಿ.. ನಿನ್ನಯ ಕಣ್ಣೆಂಬ ಶುಭ ಲೇಖನಿಯಲ್ಲಿ
ಮೂಡಿಸಿದೇ... ಮೂಡಿಸಿದೇ .. ಒಲವಿನ ಹೆಸರೂ .. ಜೀವನದಿ ಈ ಹೆಸರು ಎಂದಿಗೂ ಹಸಿರೂ ...
--------------------------------------------------------------------------------
ಕುಂಕುಮ ಭಾಗ್ಯ (೧೯೯೩) - ಹೇಳೋರಿಲ್ಲ ಕೇಳೋರಿಲ್ಲಾ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ
ಹೇಳೋರಿಲ್ಲಾ ಕೇಳೋರಿಲ್ಲಾ ನನ್ನೋರೆಂಬ ಪ್ರೀತಿಯಿಲ್ಲ
ಬಂಧು ಇಲ್ಲ ಬಳಗ ಇಲ್ಲ ಹಣದ ಮುಂದೇ .. ನೀತಿ ರೀತಿ ಒಂದು ಇಲ್ಲ ಹಣದ ಮುಂದೇ
ಹೇಳೋರಿಲ್ಲಾ ಕೇಳೋರಿಲ್ಲಾ ನನ್ನೋರೆಂಬ ಪ್ರೀತಿಯಿಲ್ಲ
ಬಂಧು ಇಲ್ಲ ಬಳಗ ಇಲ್ಲ ಹಣದ ಮುಂದೇ .. ನೀತಿ ರೀತಿ ಒಂದು ಇಲ್ಲ ಹಣದ ಮುಂದೇ
ಸತ್ತಿದೇ .. ಸತ್ಯ ... ಕದನವೇ ನಿತ್ಯ...
ಸತ್ತಿದೇ .. ಸತ್ಯ ... ಕದನವೇ ನಿತ್ಯ... ಪ್ರೀತಿಯಾ... ಮಾತದು ... ಮಿಥ್ಯವೋ.. ಮಿಥ್ಯ..
ಪ್ರೀತಿಯಾ... ಮಾತದು ... ಮಿಥ್ಯವೋ.. ಮಿಥ್ಯ..
ದುಡ್ಡೇ ತಂದೇ ದುಡ್ಡೇ ತಾಯೀ ದುಡ್ಡೇ ದೈವ ದುಡ್ಡೇ ಜೀವ
ಕಣ್ಣಿಗ್ಯಾರು ಕಾಣೋದಿಲ್ಲ ದುಡ್ಡಿನ ಮುಂದೇ .. ನ್ಯಾಯ ನೀತಿ ಬೇಕಾಗಿಲ್ಲ ದುಡ್ಡಿನ ಮುಂದೇ ..

ತಂದೆ ಮಾತ ಕೇಳಿ ಅಂದೂ ಕಾಡಿಗೇ ಹೋದ ರಾಮಚಂದ್ರ
ಹುಟ್ಟಿ ಬಂದ ನಾಡ ನೀವೂ ನೋಡಿ ಇಂದೂ ದೇಶ ಎಲ್ಲ ಪಾಪದಿಂದ ತುಂಬಿತಿಂದು..

---------------------------------------------------------------------------------
ಕುಂಕುಮ ಭಾಗ್ಯ (೧೯೯೩) - ತಾಳಿ ಕಟ್ಟೋಕ್ ಕೂಲಿನ್
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ
ಗಂಡು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಸಿಗ್ನಲ್ ಬಂತೂ, ಬಾರಿಸೀ .. ಗಟ್ಟಿಮೇಳ... ಗಟ್ಟಿಮೇಳ.. ಒನ್ಸ್ ಮೋರ್ .. ಹ್ಹಾ...
ಹೇಯ್.. ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಹೆಣ್ಣು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಗಂಡು : ಕಿತ್ತು ತಿನ್ನೋ ಮೇಳನಾ... ಹೆಣ್ಣು : ಮೈದು ಹೋಗೋ ಊಟಾನ
ಗಂಡು : ಹೆಣ್ಣು ಮಾರೋದಕ್ಕ ಹೆಸರೇ.. ಮದುವೇನಾ ..
ಹೆಣ್ಣು : ಇದು ಮದುವೇನಾ ...
ಗಂಡು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಹೆಣ್ಣು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಗಂಡು : ಮೈಯ್ಯಿಗೇ ಬಂಗಾರ.. ಮಂಚಕೂ ಸಿಂಗಾರ..
ಕೂಡಿಕೆ ಮಾಡಿಸೋ ಆಚಾರಾ... ಇದರಲಿ ಇರುವುದಮ್ಮಾ ವ್ಯಾಪಾರ.. ಅಹ್ಹಹಹಹ್
ಹೆಣ್ಣು : ಹಣವೆಲ್ಲ ಪಾವತೀ .. ನಾನು ನಿಮ್ಮ ಶ್ರೀಮತೀ ..
ಮಾವನಿಂದ ಪಡೆಯಬೇಕು ರಶೀತಿ... ಮುಂದೆ ಬರದಿರಲೀ ಸಾಯೋ ಫಜೀತಿ..
ಗಂಡು : ಲೆಕ್ಕದಲ್ಲಿ ನಾನು ಘಟ್ಟಿ.. ಇನ್ನೂ ನಿಮಗೆ ಮನೆಯು ಘಟ್ಟಿ..
ದುಡ್ಡನ್ನೆಲ್ಲಾ ಮೂಟೆ ಕಟ್ಟಿ.. ಕೊಟ್ರು ಯಾಕೇ ಮೂತಿ ಇಟ್ಟೀ ..
ನೋಡೋಕೇ .. ಹರಸಿ ಹೋಗೋಕೇ ... ಬಂಗಾರ ಹತ್ರ ಮಾಡೋಕೇ ...
ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಹೆಣ್ಣು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಗಂಡು : ಕಿತ್ತು ತಿನ್ನೋ ಮೇಳನಾ... ಹೆಣ್ಣು : ಮೈದು ಹೋಗೋ ಊಟಾನ
ಗಂಡು : ಹೆಣ್ಣು ಮಾರೋದಕ್ಕ ಹೆಸರೇ.. ಮದುವೇನಾ ..
ಹೆಣ್ಣು : ಇದು ಮದುವೇನಾ ...
ಗಂಡು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಹೆಣ್ಣು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಗಂಡು : ಭೂತವೀ ವರದಕ್ಷಿಣೆ ಹಾಕದೇ ಪ್ರದಕ್ಷಿಣೆ ಅಪ್ಪನು ಕಾಡಿ ಪಡೆದ ಹಣನಾ ....
ಹೆಂಡತಿಗೆ ತಿನ್ನಿಸಿ ತೀರಿಸಿ ಋಣಾನಾ .. ಆಹಾ... ಆ...
ಹೆಣ್ಣು : ಇವರೇ ಶ್ರೀರಾಮ ಇವರೇ ಶ್ರೀಕೃಷ್ಣ.. ಲೋಕದಲ್ಲಿ ಇಂತಹವರು ಇರ್ತಾರಾ...
ಎಲ್ಲರಿಗೂ ಇಂಥ ಗಂಡ ಸಿಕ್ತಾರಾ....
ಗಂಡು : ಅಪ್ಪನನು ಮುಳುಗಿಸಿದ ಕಲಿಯುಗ ಶ್ರೀರಾಮ
ದುಡ್ಡು ಕೇಳೋ ರಾವಣರಿಗೇ ಪಾಠ ಇದು ಪಂಗನಾಮ
ಹೋಯ್ತಲ್ಲೋ... ಓಓ .. ದುಡ್ಡು ಹೋಯ್ತಲ್ಲೋ...
ಹುಟ್ಸಿದ್ದೇ ... ನಷ್ಟ ಆಯ್ತಲ್ಲೋ...
ಗಂಡು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಹೆಣ್ಣು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಗಂಡು : ಕಿತ್ತು ತಿನ್ನೋ ಮೇಳನಾ... ಹೆಣ್ಣು : ಮೈದು ಹೋಗೋ ಊಟಾನ
ಗಂಡು : ಹೆಣ್ಣು ಮಾರೋದಕ್ಕ ಹೆಸರೇ.. ಮದುವೇನಾ ..
ಹೆಣ್ಣು : ಇದು ಮದುವೇನಾ ...
ಗಂಡು : ಅಹ್ಹಹ್ಹ ... ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
ಹೆಣ್ಣು : ತಾಳಿ ಕಟ್ಟೋಕ್ ಕೂಲೀನಾ.. ಪ್ರೀತಿ ಮಾಡೋ ಬೇಲಿನಾ..
---------------------------------------------------------------------------------
ಕುಂಕುಮ ಭಾಗ್ಯ (೧೯೯೩) - ಸಂಸಾರದಲ್ಲಿ ಸಾರ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ.
ಸಂಸಾರದಲ್ಲಿ ಸಾರ ಇಲ್ಲಾ.... ನೋಂದೋರು ತಾನೇ ನೋವಾ ಬಲ್ಲ...
ಹೆತ್ತಮಗ ಯೋಗ್ಯನಲ್ಲ.. ಮಾಂಗಲ್ಯಕ್ಕೇ ಸೂತ್ರವಿಲ್ಲ... ಕುಂಕುಮ ಭಾಗ್ಯವಿಲ್ಲ...
ಸಂಸಾರದಲ್ಲಿ ಸಾರ ಇಲ್ಲಾ.... ನೋಂದೋರು ತಾನೇ ನೋವಾ ಬಲ್ಲ...
ಮಗನ ಪಡೆಯಲೂ ನಾನಾದಿನ ನೂರು ವೃತವ ಮಾಡಿ..
ಒಡಲ ತುಂಬೀ .. ನೋವನೂ ನುಂಗಿ ಜನುಮವ ನೀಡಿ...
ಮೊಲೆಯನುಣಿಸುತಾ.. ಲಾಲಿಪದ ಹಾಡಿದಂತ ತಾಯೀ ...
ಮಗನಿಗಿಂತಾ ಕರುಣೆಗೆ ಮೇಲು ಬೀದಿಯ ನಾಯೀ ....
ಪತಿಯೂ ಇಲ್ಲೇ ಬದುಕಿರುವಾಗ ಕೊರಳ ತಾಳಿ ತೆಗೆಯದು... ಆ...
ಪತಿಯೂ ಇದ್ದೂ ವಿಧವೆಯ ಹಾಗೇ ವೇಷ ಹಾಕೂ ಎನುತಿರುವಾ...
ಮಕ್ಕಳಿಂದ.. ಮುಕ್ತಿಯಿಲ್ಲ... ಸೈರಿಸಲೂ ಶಕ್ತಿಯಿಲ್ಲ... . ಕುಂಕುಮ ಭಾಗ್ಯವಿಲ್ಲ...
ಸಂಸಾರದಲ್ಲಿ ಸಾರ ಇಲ್ಲಾ.... ನೋಂದೋರು ತಾನೇ ನೋವಾ ಬಲ್ಲ...
ಅಳಿಸೋ ಮಗನಿಗೂ ಕೈಯ್ಯಲಿದೇ ನಿತ್ಯ ಅಳುವ ಮಗುವೂ ..
ನಗಿಸೀ ನಗಿಸೀ ಬೆಳೆಸೋ ತಂದೆಯ ಅಳಿಸದೇ ನಾ...ಳೇ
ತವರುಮನೆಯಲೇ ಕೂಗಾಡುವ ಮದುವೆಯಾದ ಮಗಳೂ
ಮಗಳ ಮಗಳೂ ಸೊಸೆಯಾದಾಗ ಹಿಡಿಯದೇ ತಿರುಳೂ...
ಹಾಲನುಂಡೂ ಎದೆಯನು ಬಗೆವ ಮಕ್ಕಳು ಯಾರಿಗೂ ಬೇಡಂತೇ ...
ನೀಚ ಮಕ್ಕಳ ಕೈಯಲ್ಲಿ ಎಂದೂ ತಲೆಗೆ ಬೆಂಕಿ ಬೇಡಂತೇ ..
ಅಕ್ಕರೆಗೇ .. ಅರ್ಥವಿಲ್ಲ... ಕಂಬನಿಗೂ... ಅರ್ಥವಿಲ್ಲ... ಮಕ್ಕಳೇ ಮನೆ ಮಾರೀ ..
ಸಂಸಾರದಲ್ಲಿ ಸಾರ ಇಲ್ಲಾ.... ನೋಂದೋರು ತಾನೇ ನೋವಾ ಬಲ್ಲ...
---------------------------------------------------------------------------------
ಕುಂಕುಮ ಭಾಗ್ಯ (೧೯೯೩) - ತಂಗಾಳಿಗೆ ತೂಗಾಡುವಾ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರಾ
ತಂಗಾಳಿಗೆ ತೂಗಾಡುವಾ.... ಹೂವಾಗಿರೂ ಮನವೇ...
ಈ ಬಾಳಿಗೇ .. ಬೆಳದಿಂಗಳಾ.. ಮಳೆಯಾಗಿರು ಮನವೇ..
ಸಂಸಾರದ ಭೂಭಾರವ.. ಈ ಗೋಳಿನ ವ್ಯಾಪಾರವ
ನೋವೆಂದೂ ತಿಳಿವುದೇ ತರವೇ.... .
ತಂಗಾಳಿಗೆ ತೂಗಾಡುವಾ.... ಹೂವಾಗಿರೂ ಮನವೇ...
ಈ ಬಾಳಿಗೇ .. ಬೆಳದಿಂಗಳಾ.. ಮಳೆಯಾಗಿರು ಮನವೇ..
ಓಓಓ... ಓಓಓಓ... ಹೂಂಹೂಂಹೂಂ .... ಆಆಆ ಆಆಆ
---------------------------------------------------------------------------------
ಕುಂಕುಮ ಭಾಗ್ಯ (೧೯೯೩) - ಈ ಲವ್ವಿಗೇ ಲೈಸೆನ್ಸಿದೇ
ಸಂಗೀತ : ಹಂಸಲೇಖ, ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ. ಚಿತ್ರಾ
ಗಂಡು : ಹೇ... ಹೆಣ್ಣು : ಲಾ ಲಾ ಲಾಲಾಲ
ಗಂಡು : ಹೇ... ಹೆಣ್ಣು : ಲಾ ಲಾ ಲಾಲಾಲ
ಗಂಡು : ಹೇ... ಹೆಣ್ಣು : ಹೇ
ಗಂಡು : ಈ ಲವ್ವಿಗೇ ಲೈಸೆನ್ಸಿದೇ ... ಹೆಣ್ಣು : ಈ ಲೈಫಿಗೇ ಪೇಷನ್ಸ್ ಇದೇ ..
ಗಂಡು : ವಯಸ್ಸಿದೇ ... (ಹೇ.. ) ಸೊಗಸಿದೇ
ಹೆಣ್ಣು : ಹೇ.. ಧರಣಿಯ ಜನರನು ಕಾಡಿಸಿ ಪೀಡಿಸುತಿರುವಾ...
ಗಂಡು : ಮನಿಯೇ ನಮಗಿಲ್ಲಾ... ಆ ಧ್ವನಿಯೇ ನಮದಲ್ಲಾ ...
ಹೆಣ್ಣು : ಈ ಲವ್ವಿಗೇ ಲೈಸೆನ್ಸಿದೇ ... ಗಂಡು : ಈ ಲೈಫಿಗೇ ಪೇಷನ್ಸ್ ಇದೇ ..
ಹೆಣ್ಣು : ಸಾಲಕ್ಕೆ ಸಿಲುಕದೇ ... ಸಂಸಾರ ಮಾಡೀಯಾ ..
ಗಂಡು : ಜಂಭಕ್ಕೇ ಬೊಗಳದೇ... ಕಾಲಾನ ನೂಕುವಾ...
ಹೆಣ್ಣು : ಚಾಪೇಲೀ ಸರಸನಾ... ಗಂಡು : ಮಾಡುತ ಮಧುವನು ಹೀರೋನ
ಹೆಣ್ಣು : ಆಚೀಚೆ ಬಂಗಲೆಯಾ.. ಗಂಡು : ಅಹ್ಹಹ್ ನೋಡುತ ನಮ್ಮದೇ ಎನ್ನೋಣ...
ಹೆಣ್ಣು : ಬಾಳಾದ ಕೆಲಕಾಲ ಗಂಡು : ಮಕ್ಕಳ ಮಾಡುತ ನಲಿಯೋಣ
ಹೆಣ್ಣು : ಊಟಾನೇ ಇರದಿದ್ದರೇ .. ಗಂಡು : ಪ್ರಣಯದ ಹೊಟ್ಟೆಯ ತುಂಬೋಣ
ಹೆಣ್ಣು : ಲವ್ ಸೆನ್ಸ್ ಇದ್ದರೇ ಸಡಗರ.. ಗಂಡು : ನ್ಯೂಸೆನ್ಸ್ ಆದರೆ ಮುಜುಗರ..
ಹೆಣ್ಣು : ಸಡಗರ... (ಮುಜುಗರ.. )
ಇಬ್ಬರು : ನಡುವೆ ಸುತ್ತೋಣ ಗಿರಗಿರ ..
ಗಂಡು : ಟೈಮ್ ವೇಸ್ಟಾಗೀ ಕಳೆಯದೇ ಹೆಣ್ಣು : ಲವ್ ಟೀಚಿಂಗ್ ಸರಿಯದೇ ..
ಗಂಡು : ಕಳೆಯದೇ ... (ಸರಿಯದೇ ...)
ಇಬ್ಬರು : ಖುಷಿಯ ಬಿತ್ತೋಣ ಸರಸರ...
ಗಂಡು : ಈ ಲವ್ವಿಗೇ ಲೈಸೆನ್ಸಿದೇ ... ಹೆಣ್ಣು : ಈ ಲೈಫಿಗೇ ಪೇಷನ್ಸ್ ಇದೇ ..
ಗಂಡು : ಮಾತಿರುವ ಯೌವ್ವನ.. ದೇಹಕ್ಕೆ ಭಾರವೇ..
ಹೆಣ್ಣು : ಕಾದಿರುವ ಹೂಮನ ನೀನ್ ಲಜ್ಜೇ ದೂರವೇ
ಗಂಡು : ಕಾಲಲ್ಲಿ ಉಂಗುರವಾ ಹೆಣ್ಣು : ಸುತ್ತಲೂ ತಿಳಿವುದು ಹೆಣ್ಣಾಸೇ
ಗಂಡು : ಕಣ್ಣಲ್ಲೀ ಅಂಕುರವಾ... ಹೆಣ್ಣು : ಬಿತ್ತಲು ಬೆಳೆವುದು ಕಂಡಾಸೇ ..
ಗಂಡು : ಜೀವಕ್ಕೇ ... ಏರಿಳಿತ... ಹೆಣ್ಣು : ಬಂದರೇ ಕಾಮನ ಜ್ವರವುಂಟೇ ..
ಗಂಡು : ದೇಹಕ್ಕೇ ಕಂಪನವೂ ... ಹೆಣ್ಣು : ಬಂದರೇ ಪ್ರೇಮದ ಸ್ವರವಂತೇ...
ಗಂಡು : ಬೇಕಾದಾಗ ಅವಸರ ಹೆಣ್ಣು : ಬೇಡಾದಾಗ ಅಪಸ್ವರ
ಗಂಡು : ಅವಸರ.. (ಅಪಸ್ವರ...)
ಇಬ್ಬರು : ನಡುವೆ ಕುಣಿಸೋಣ ಶುಭಕರ...
ಹೆಣ್ಣು : ನಾಡಲ್ಲೊಂದು ಬಡತನ .. ಗಂಡು : ಮೇಡಲ್ಲೊಂಟೂ ಸಿರಿತನ..
ಹೆಣ್ಣು : ಬಡತನ (ಸಿರಿತನ)
ಇಬ್ಬರು : ನಡುವೆ ಹುಡುಕೋಣ ಹೊಸತನ
ಗಂಡು : ಈ ಲವ್ವಿಗೇ ಲೈಸೆನ್ಸಿದೇ ... ಹೆಣ್ಣು : ಈ ಲೈಫಿಗೇ ಪೇಷನ್ಸ್ ಇದೇ ..
ಗಂಡು : ವಯಸ್ಸಿದೇ ... (ಆ .. ) ಸೊಗಸಿದೇ (ಹೇ.. )
ಹೆಣ್ಣು : ಧರಣಿಯ ಜನರನು ಕಾಡಿಸಿ ಪೀಡಿಸುತಿರುವಾ...
ಗಂಡು : ಮನಿಯೇ ನಮಗಿಲ್ಲಾ... ಆ ಧ್ವನಿಯೇ ನಮಗಲ್ಲಾ ... ಡಡಡ ಡಡಾ
ಹೆಣ್ಣು : ಈ ಲವ್ವಿಗೇ ಲೈಸೆನ್ಸಿದೇ ... ಗಂಡು : ಈ ಲೈಫಿಗೇ ಪೇಷನ್ಸ್ ಇದೇ ..
--------------------------------------------------------------------------------
No comments:
Post a Comment